ದೆಹಲಿಯಲ್ಲಿ (Delhi) ಇಂದು ನಡೆದ ನೂತನ ಸಂಸತ್ ಭವನ (Parliament House) ಉದ್ಘಾಟನಾ ಸಮಾರಂಭದಲ್ಲಿ ನಟಿ, ಸಂಸದೆ ಸುಮಲತಾ ಅಂಬರೀಶ್ (Sumalatha Ambarish) ಭಾಗಿಯಾಗಿದ್ದಾರೆ. ನೂತನ ಕಟ್ಟಡ ಲೋಕಾರ್ಪಣೆಯ ನಂತರ ಸಂಸದರು ಕಟ್ಟಡ ಒಳಗೆ ಪ್ರವೇಶ ಮಾಡಿ, ಕೆಲವರು ಮಾತು ಕೂಡ ಆಡಿದ್ದಾರೆ. ಈ ಎಲ್ಲ ಅನುಭವನ್ನು ಸುಮಲತಾ ಅಂಬರೀಶ್ ತಮ್ಮ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.
‘ಲೋಕಸಭಾ ಸದಸ್ಯಳಾಗಿ ಇಂದು ನೂತನ ಸಂಸತ್ ಭವನದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವ ಸೌಭಾಗ್ಯ ನನ್ನದಾಗಿತ್ತು. ಇದು ನಮ್ಮ ದೇಶಕ್ಕೆ ಐತಿಹಾಸಿಕ ದಿನವಾಗಿದೆ ಹಾಗೂ ನಾನು ಅದರ ಭಾಗವಾಗಿರುವುದಕ್ಕೆ ಹೆಮ್ಮೆಪಡುತ್ತೇನೆ’ ಎಂದು ಅವರು ಫೇಸ್ ಬುಕ್ ಪೇಜ್ ನಲ್ಲಿ ಸುಮಲತಾ ಬರೆದುಕೊಂಡಿದ್ದಾರೆ. ಇದನ್ನೂ ಓದಿ:‘RRR’ ರೈಟರ್ ವಿಜೇಂದ್ರ ಪ್ರಸಾದ್ ಜೊತೆ ಕೇದರನಾಥ್‌ಗೆ ಕಂಗನಾ ಭೇಟಿ
ಅಲ್ಲದೇ, ‘ಹೊಸ ಸಂಸತ್ ಕಟ್ಟಡವು ನಮ್ಮ ರಾಷ್ಟ್ರದ ಪ್ರಗತಿ ಮತ್ತು ಸಮೃದ್ಧಿಯ ಸಂಕೇತವಾಗಿದೆ. ಸಂಸತ್ ಭವನವು ಅತ್ಯಾಧುನಿಕ ಸೌಲಭ್ಯದಿಂದ ಕೂಡಿದ್ದು ಅದು ದೇಶದ ಜನರಿಗೆ ಉತ್ತಮ ಸೇವೆ ಸಲ್ಲಿಸಲು ಅನುವು ಮಾಡಿಕೊಡುತ್ತದೆ ಎನ್ನುವ ವಿಶ್ವಾಸ ನನ್ನದು’ ಎಂದು ವಿಶ್ವಾಸವನ್ನೂ ವ್ಯಕ್ತ ಪಡಿಸಿದ್ದಾರೆ ಸುಮಲತಾ ಅಂಬರೀಶ್.
ಇದೇ ಸಂದರ್ಭದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ (HD Deve Gowda) ಅವರನ್ನೂ ಭೇಟಿ ಮಾಡಿರುವ ಸಂಸದೆ, ಹಿರಿಯರ ಆರೋಗ್ಯವನ್ನು ವಿಚಾರಿಸಿದೆ ಎಂದು ತಿಳಿಸಿದ್ದಾರೆ. ಅದೊಂದು ನೆನಪಿನಲ್ಲಿ ಇಡುವಂತಹ ಭೇಟಿ ಕೂಡ ಆಗಿತ್ತು ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಎನ್‌ಡಿಎಯೇತರ ಪಕ್ಷಗಳಾದ ಜೆಡಿಎಸ್, ಬಿಎಸ್‌ಪಿ, ಶಿರೋಮಣಿ ಅಕಾಲಿದಳ, ಬಿಜೆಡಿ, ವೈಎಸ್‌ಆರ್‌ಸಿಪಿ, ಟಿಡಿಪಿ ಪಕ್ಷಗಳು ಸಂಸತ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ಸ್ಪಷ್ಟಪಡಿಸಿವೆ. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು (HD Devegowda) ಕೂಡ ದೆಹಲಿಗೆ ತೆರಳಲಿದ್ದಾರೆ. ಇನ್ನೂ ವಿಪಕ್ಷಗಳ ಬಹಿಷ್ಕಾರ ನಡೆಗೆ ಪ್ರಧಾನಿ ಮೋದಿ (Narendra Modi) ಕೌಂಟರ್ ನೀಡಿದ್ದಾರೆ. ಇದನ್ನೂ ಓದಿ: ಸಂಸತ್ ಕಟ್ಟಡವನ್ನು ರಾಷ್ಟ್ರಪತಿ ಉದ್ಘಾಟಿಸಲಿ: ಸುಪ್ರೀಂನಲ್ಲಿ ಪಿಐಎಲ್ ಸಲ್ಲಿಕೆ
ಭಾರತದ ವಿಪಕ್ಷಗಳನ್ನು ಆಸ್ಟ್ರೇಲಿಯಾದ ವಿಪಕ್ಷಗಳ ಜೊತೆ ಹೋಲಿಸಿ ತಿರುಗೇಟು ನೀಡಿದ್ದಾರೆ. 6 ದಿನಗಳ ಪ್ರವಾಸ ಮುಗಿಸಿ ಇಂದು ಭಾರತಕ್ಕೆ ಮರಳಿದ ಪ್ರಧಾನಿ ಮೋದಿ, ಆಸ್ಟ್ರೇಲಿಯಾದ ಆಡಳಿತ ಮತ್ತು ವಿರೋಧ ಪಕ್ಷಗಳೆಲ್ಲಾ ತಮ್ಮ ದೇಶಕ್ಕೆ ಮೊದಲ ಆದ್ಯತೆ ನೀಡುತ್ತವೆ ಎಂದಿದ್ದಾರೆ. ಮೊನ್ನೆ ಬ್ರಿಸ್ಬೆನ್‌ನಲ್ಲಿ ಅನಿವಾಸಿ ಭಾರತೀಯರ ಸಭೆಯ ಬಗ್ಗೆ ಉಲ್ಲೇಖಿಸಿದ ಪ್ರಧಾನಿ ಮೋದಿ, ಒಂದು ಕಮ್ಯುನಿಟಿ ಇವೆಂಟ್‌ನಲ್ಲಿ ಆಡಳಿತ ಮತ್ತು ವಿಪಕ್ಷಗಳೆಲ್ಲಾ ಒಟ್ಟಾಗಿ ಪಾಲ್ಗೊಂಡಿದ್ವು. ಈ ಮೂಲಕ ಪ್ರಜಾಪ್ರಭುತ್ವದ ಸ್ಪೂರ್ತಿಯನ್ನು ಪ್ರದರ್ಶಿಸಿದ್ರು ಎಂದು ಹೇಳಿಕೊಂಡರು. ಈ ಮೂಲಕ ಪರೋಕ್ಷವಾಗಿ, ಇಲ್ಲಿನ ವಿಪಕ್ಷಗಳ ನಡೆ ಸರಿಯಿಲ್ಲ ಅಂತ ಟೀಕಿಸಿದ್ರು.
ಇನ್ನು, ಈ ಪ್ರಕರಣವೀಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಮೋದಿ ಕೈಯಲ್ಲಿ ಉದ್ಘಾಟನೆ ಆಗೋದನ್ನು ತಡೀಬೇಕು ಎಂದು ವಕೀಲರೊಬ್ಬರು ಅರ್ಜಿ ಸಲ್ಲಿಸಿದ್ದಾರೆ. ನೂತನ ಸಂಸತ್ ಭವನದಲ್ಲಿ ಭಾನುವಾರ ಬೆಳಗ್ಗೆ 7.30ರಿಂದ ಪೂಜಾ ಕಾರ್ಯಕ್ರಮಗಳು ಶುರುವಾಗಲಿವೆ. ಸಮಾರಂಭದಲ್ಲಿ ರಾಷ್ಟ್ರಪತಿ ಹಾಗೂ ಉಪ ರಾಷ್ಟ್ರಪತಿ ಭಾಷಣವನ್ನು ಓದಲಾಗುತ್ತದೆ. ಸಂಜೆ ಕಾರ್ಯಕ್ರಮದ ಅಂತ್ಯದಲ್ಲಿ ಪ್ರಧಾನಮಂತ್ರಿಗಳು ಭಾಷಣ ಮಾಡಲಿದ್ದಾರೆ.
ಬಾಲಿವುಡ್ ನಟಿ ಕಂಗನಾ ರಣಾವತ್ ಸದ್ಯ ಎಮರ್ಜನ್ಸಿ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾವನ್ನು ಅವರೇ ನಿರ್ದೇಶಿಸಿ, ನಟಿಸುತ್ತಿರುವುದರಿಂದ ಸಾಕಷ್ಟು ಜವಾಬ್ದಾರಿಗಳನ್ನೂ ಅವರು ತಗೆದುಕೊಂಡಿದ್ದಾರೆ. ಇದು ಇಂದಿರಾ ಗಾಂಧಿ ಅವರ ಹೇರಿದ್ದ ತುರ್ತುಪರಿಸ್ಥಿತಿಯ ಕುರಿತಾಗಿ ಮಾಡುತ್ತಿರುವ ಸಿನಿಮಾವಾಗಿದ್ದರಿಂದ ಸಂಸತ್ ಭವನ್ನು ಶೂಟಿಂಗ್ ಗೆ ಕೊಡುವಂತೆ ಅವರು ಕೇಳಿಕೊಂಡಿದ್ದಾರೆ.
ಸಿನಿಮಾ ಆದಷ್ಟು ನೈಜವಾಗಿಯೇ ಮೂಡಿ ಬರುಬೇಕು ಎನ್ನುವುದು ಅವರ ಕನಸು. ಇಂದಿರಾ ಗಾಂಧಿ ಕಾಲದಲ್ಲಿ ಸಂಸತ್ ನಲ್ಲಿ ನಡೆದ ಘಟನೆಗಳನ್ನು ದೃಶ್ಯವಾಗಿಸುವ ಆಸೆ ಅವರದ್ದು ಹಾಗಾಗಿಯೇ ಸಂಸತ್ ಭವನವನ್ನು ಅವರು ಶೂಟಿಂಗ್ ಮಾಡಲು ಕೇಳಿದ್ದಾರೆ. ಮತ್ತು ತಾವು ಯಾವೆಲ್ಲ ಭಾಗದಲ್ಲಿ ಚಿತ್ರೀಕರಣ ಮಾಡುವ ಪ್ಲ್ಯಾನ್ ಹೊಂದಲಾಗಿದೆ ಎನ್ನುವ ವಿವರವನ್ನೂ ಅವರು ಕೇಳುಹಿಸಿದ್ದಾರಂತೆ.ಇದನ್ನೂ ಓದಿ: ಗುರೂಜಿನ ಕಳಪೆ ಎಂದ ಅಮೂಲ್ಯಗೆ ಕಿಚ್ಚನ ಖಡಕ್ ಕ್ಲಾಸ್
ನಿಯಮಗಳ ಪ್ರಕಾರ ಸರಕಾರಿ ಸ್ವಾಮ್ಯದ ಟಿವಿಗಳ ಕ್ಯಾಮೆರಾಗಳನ್ನು ಮಾತ್ರ ಒಳಗೆ ಬಿಡಲಾಗುತ್ತದೆ. ಅಲ್ಲದೇ, ಶೂಟಿಂಗ್ ಮಾಡುವುದನ್ನು ನಿಷೇಧಿಸಲಾಗಿದೆ. ಈ ವೇಳೆಯಲ್ಲಿ ಕಂಗನಾ ಬೇಡಿಕೆಯನ್ನು ಸರಕಾರ ನಿರಾಕರಿಸುವ ಸಾಧ್ಯತೆಯೇ ಹೆಚ್ಚಿದೆ. ಬಿಜೆಪಿ ಪರ ಮತ್ತು ಮೋದಿ ಪರ ಕಂಗನಾ ಹಲವಾರು ಬಾರಿ ಮಾತನಾಡಿದ್ದಾರೆ. ಹಾಗಾಗಿ ಕಂಗನಾಗಾಗಿ ನಿಯಮ ಬದಲಿಸಿ, ಅನುಮತಿ ಕೊಡಲಾಗುತ್ತಾ ಎನ್ನುವ ಚರ್ಚೆ ಕೂಡ ನಡೆದಿದೆ. ಈವರೆಗೂ ಸಂಸತ್ ಒಳಗೆ ಸಿನಿಮಾಗಾಗಿ ಶೂಟಿಂಗ್ ಮಾಡಲು ಅನುಮತಿ ಕೊಟ್ಟಿಲ್ಲವಾದ್ದರಿಂದ ಕಂಗನಾ ಆಸೆ ನಿರಾಸೆ ಆಗುವ ಸಾಧ್ಯತೆಯೇ ಹೆಚ್ಚಾಗಿದೆ.
Live Tv
[brid partner=56869869 player=32851 video=960834 autoplay=true]
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೂತನ ಸಂಸತ್ ಭವನಕ್ಕೆ ಇಂದು ಶಂಕು ಸ್ಥಾಪನೆ ನೆರವೇರಿಸಿದರು. ಈ ವೇಳೆ ನೂತನ ಸಂಸತ್ ಭವನದ ಮಾದರಿಯನ್ನು ಸಹ ಬಿಡುಗಡೆಗೊಳಿಸಿದರು. ಕೇಂದ್ರ ಸಚಿವರು, ಧಾರ್ಮಿಕ ಪ್ರಮುಖರು ಸೇರಿದಂತೆ ವಿವಿಧ ಗಣ್ಯರು ಭಾಗಿಯಾಗಿದ್ದರು. ಇದೇ ವೇಳೆ ಬಸವಣ್ಣನವರ ಅನುಭವ ಮಂಟಪ ನೆನೆದು ಕನ್ನಡದಲ್ಲಿ ಮಾತನಾಡಿದರು.
Delhi: Prime Minister Narendra Modi at the foundation stone laying ceremony of the new Parliament building. pic.twitter.com/nGgfyhzk4U
ನವದೆಹಲಿಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯವಾದ ಸಂಸತ್ ಭವನದ ಭೂಮಿ ಪೂಜೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ 200 ಗಣ್ಯರು ಭಾಗವಹಿಸಿದ್ದರು. ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಶಿ, ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪೂರಿ ಹಾಗೂ ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ನಾರಾಯಣ್ ಸಿಂಗ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಈ ಅನುಭವ ಮಂಟಪ ಜನಸಭೆ ನಾಡಿನ ಒಟ್ಟು ರಾಷ್ಟ್ರದ ಉನ್ನತಿ ಹಾಗೂ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತದೆ. ಈ ಅನುಭವ ಮಂಟಪ ರಾಜ್ಯ, ರಾಷ್ಟ್ರದ ಉನ್ನತಿಗಾಗಿ ಕೆಲಸ ಮಾಡಲು ಪ್ರೇರಣೆ ನೀಡುತ್ತದೆ. ಅನುಭವ ಮಂಟಪ ರಾಷ್ಟ್ರದ ಹಿತಕ್ಕಾಗಿ ಕೆಲಸ ಮಾಡುತ್ತದೆ ಎಂದು ಕನ್ನಡದಲ್ಲೇ ಮಾತನಾಡಿದರು.
Delhi: Union Home Minister Amit Shah, Defence Minister Rajnath Singh, Union Minister Ravi Shankar Prasad, foreign Envoys and Lok Sabha Speaker Om Birla also present at the foundation stone laying ceremony of the new Parliament building. pic.twitter.com/DnkranVSuY
ಇಂದು ಐತಿಹಾಸಿಕ ದಿನವಾಗಿದ್ದು, ಹೊಸ ಸಂಸತ್ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಈ ಹೊಸ ಸಂಸತ್ ಭವನವನ್ನು ಭಾರತೀಯರೆಲ್ಲರೂ ಸೇರಿ ನಿರ್ಮಿಸೋಣ. ಇದು 130 ಕೋಟಿ ಭಾರತೀಯರು ಹೆಮ್ಮೆಪಡುವ ದಿನವಾಗಿದೆ. ಈ ಐತಿಹಾಸಿಕ ಕ್ಷಣಕ್ಕೆ ನಾವು ಸಾಕ್ಷಿಯಾಗುತ್ತಿದ್ದೇವೆ. ಹೊಸ ಸಂಸತ್ ಭವನವು ಹೊಸ ಮತ್ತು ಹಳೆಯ ಸಹಬಾಳ್ವೆಯ ಉದಾಹರಣೆಯಾಗಿದೆ. ಸಮಯ ಮತ್ತು ಅಗತ್ಯತೆಗಳಿಗೆ ಅನುಗುಣವಾಗಿ ನಮ್ಮೊಳಗೇ ಬದಲಾವಣೆ ಮಾಡಿಕೊಳ್ಳುವ ಪ್ರಯತ್ನವಿದು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
Delhi: The various religious leaders at the foundation stone laying ceremony of the new Parliament building perform ‘Sarva Dharma Prarthana’. pic.twitter.com/YsdS3n9JID
ಪ್ರಸ್ತುತ ಇರುವ ಸಂಸತ್ ಭವನವು 100 ವರ್ಷ ಹಳೆಯದಾಗಿದ್ದು, ಹಲವು ಬಾರಿ ಉನ್ನತೀಕರಿಸಲಾಗಿದೆ. ಈಗ ಅದಕ್ಕೆ ವಿಶ್ರಾಂತಿ ಅವಶ್ಯವಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಭಾರತ 75ನೇ ಸ್ವಾತಂತ್ರೋತ್ಸವ ಆಚರಿಸುವ ಸುಸಂದರ್ಭದಲ್ಲಿ ಹೊಸ ಸಂಸತ್ ಭವನ ಹೊಂದುವುದಕ್ಕಿಂತ ಸುಂದರ, ಪವಿತ್ರ ದಿನ ಮತ್ಯಾವುದಿದೆ? ಹೊಸ ಸಂಸತ್ ಭವನವು ‘ಆತ್ಮನಿರ್ಭರ ಭಾರತ’ದ ಗುರಿಯನ್ನು ಸಾಧಿಸಲು ಹಾಗೂ 21ನೇ ಶತಮಾನದ ಮಹತ್ವಾಕಾಂಕ್ಷೆಯನ್ನು ಪೂರೈಸಲು ಸಹಾಯವಾಗಲಿದೆ. ಸ್ವಾತಂತ್ರ್ಯದ ಬಳಿಕ ಹಳೆಯ ಸಂಸತ್ ಕಟ್ಟಡ ಹೊಸ ದಿಕ್ಕು ನೀಡಿತು. ಆದರೆ ಹೊಸ ಕಟ್ಟಡ ಆತ್ಮನಿರ್ಭರ ಭಾರತಕ್ಕೆ ಸಾಕ್ಷಿಯಾಗಲಿದೆ ಎಂದರು.
2014ರಲ್ಲಿ ಮೊದಲ ಭಾರಿಗೆ ಪ್ರಧಾನ ಮಂತ್ರಿಯಾಗಿ ಕಾಲಿಟ್ಟ ಸಂದರ್ಭವನ್ನು ಜೀವನದಲ್ಲಿ ನಾನೆಂದೂ ಮರೆಯುವುದಿಲ್ಲ. ಪ್ರಜಾಪ್ರಭುತ್ವದ ಈ ದೇವಸ್ಥಾನಕ್ಕೆ ಕಾಲಿಡುವ ಮುನ್ನ ಹಣೆ ಹಚ್ಚಿ ನಮಸ್ಕರಿಸಿ ಬಂದಿದ್ದೇನೆ. ಎಲ್ಲ ಚುನಾಯಿತ ಪ್ರತಿನಿಧಿಗಳು ಸಾರ್ವಜನಿಕರಿಗೆ ಉತ್ತರದಾಯಿಗಳು ಎಂಬುದುನ್ನು ಮರೆಯಬಾರದು ಎಂದು ತಿಳಿಸಿದರು.
ಮಾಜಿ ಪ್ರಧಾನಿಗಳು, ಮಾಜಿ ಲೋಕಸಭಾ ಸ್ಪೀಕರ್‍ಗಳು, ಸರ್ವಪಕ್ಷಗಳ ನಾಯಕರು ಭಾಗಿಯಾಗಿದ್ದರು. ಇನ್ನೂ ವಿಶೇಷ ಎಂಬಂತೆ 12 ಧಾರ್ಮಿಕ ಪ್ರಮುಖರು ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿದರು. ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಹರಿವಂಶ್ ನಾರಾಯಣ್ ಸಿಂಗ್ ಅವರಿಗೆ ಸಂದೇಶ ಬೋಧಿಸಿದರು.
हम भारत के लोग, ये प्रण करें- हमारे लिए देशहित से बड़ा और कोई हित कभी नहीं होगा।
हम भारत के लोग, ये प्रण करें- हमारे लिए देश की चिंता, अपनी खुद की चिंता से बढ़कर होगी।
हम भारत के लोग, ये प्रण करें- हमारे लिए देश की एकता, अखंडता से बढ़कर कुछ नहीं होगा: PM
ಹೊಸ ಕಟ್ಟಡವು ‘ಆತ್ಮನಿರ್ಭರ ಭಾರತ’ದ ದೂರ ದೃಷ್ಟಿಯ ಒಂದು ಭಾಗವಾಗಿದೆ. ಅಲ್ಲದೆ ಸ್ವಾತಂತ್ರ್ಯದ ಬಳಿಕ ಮೊದಲ ಬಾರಿಗೆ ಜನರ ಸಂಸತ್‍ನ್ನು ನಿರ್ಮಿಸುವ ಒಂದು ಹೆಗ್ಗುರುತಾಗಿದೆ. ಹೊಸ ಭಾರತದ ಅಗತ್ಯತೆಗಳು ಹಾಗೂ ಆಕಾಂಕ್ಷೆಗಳಿಗೆ ಹೊಂದಿಕೆಯಾಗುವ ರೀತಿಯಲ್ಲಿ ಸಂಸತ್ ಭವನ ನಿರ್ಮಿಸಲಾಗುತ್ತಿದೆ. 75ನೇ ಸ್ವಾತಂತ್ರ್ಯೋತ್ಸವ ಅಂದರೆ 2022ಕ್ಕೆ ಲೋಕಾರ್ಪಣೆಯಾಗಲಿದೆ ಎಂದು ಪ್ರಧಾನಿ ಕಾರ್ಯಾಲಯ ಮಾಹಿತಿ ನೀಡಿದೆ.
ಸ್ಪೀಕರ್ ಓಂ ಬಿರ್ಲಾ ಟವರು ಈ ಕುರಿತು ಮಾತನಾಡಿ, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷ ಪೂರೈಸುತ್ತದೆ. ಅಂದೇ ಸರ್ಕಾರದ ಎರಡೂ ಮನೆಯ ಕಲಾಪಗಳು ಹೊಸ ಸಂಸತ್ ಭವನದಲ್ಲಿ ನಡೆಯಲಿವೆ. ಆಗಸ್ಟ್ 15, 2021ರಂದು 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಗುತ್ತದೆ ಎಂದರು.
ನವದೆಹಲಿ: ಹೊಸ ಸಂಸತ್ ಭವನ ನಿರ್ಮಾಣದ ಯೋಜನೆಯ ಬಿಡ್‍ಅನ್ನು ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್ ಸಂಸ್ಥೆ ಪಡೆದುಕೊಂಡಿದೆ. 861.90 ಕೋಟಿ ವೆಚ್ಚದಲ್ಲಿ ಸಂಸತ್ ಕಟ್ಟಡ ನಿರ್ಮಿಸಲು ಸಂಸ್ಥೆ ಬಿಡ್ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ನಿರ್ಮಾಣವಾಗಲಿರುವ ಹೊಸ ಸಂಸತ್ ಭವನ ಮುಂದಿನ 21 ತಿಂಗಳಿನಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದ್ದು, ಸೆಂಟ್ರಲ್ ವಿಸ್ಟಾ ಪುನರಾಭಿವೃದ್ಧಿ ಯೋಜನೆಯಡಿ ಹೊಸ ಸಂಸತ್ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. ಕೇಂದ್ರ ಲೋಕೋಪಯೋಗಿ ಇಲಾಖೆ ಕರೆದಿದ್ದ ಬಿಡ್‍ನಲ್ಲಿ ಲಾರ್ಸೆನ್ ಮತ್ತು ಟರ್ಬೋ ಕಂಪನಿಗಳು ಭಾಗಿಯಾದ್ದವು. ಆದರೆ 861.90 ಕೋಟಿ ರೂ.ಗೆ ಬಿಡ್ ಮಾಡಿದ್ದ ಟಾಟಾ ಪ್ರಾಜೆಕ್ಟ್ಸ್ ಬಿಡ್ ತನ್ನದಾಗಿಸಿಕೊಂಡಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೇಂದ್ರ ಸರ್ಕಾರದ ನಾಗರೀಕ ಸಂಸ್ಥೆ ಯೋಜನೆಯ ವೆಚ್ಚವನ್ನು ಸುಮಾರು 940 ಕೋಟಿ ರೂ. ಎಂದು ಅಂದಾಜು ಮಾಡಿತ್ತು. ಕೇಂದ್ರ ಲೋಕೋಪಯೋಗಿ ಇಲಾಖೆ (ಸಿಪಿಡಬ್ಲ್ಯುಡಿ) ಅನ್ವಯ, ಹೊಸ ಸಂಸತ್ ಕಟ್ಟಡ ಈಗಿನ ಸಂಸತ್ತಿನ ಪಕ್ಕದಲ್ಲೇ ಇರಲಿದೆ. ತ್ರಿಕೋನದಂತೆ ಕಟ್ಟಡವನ್ನು ವಿನ್ಯಾಸಗೊಳಿಸಲಾಗಿದೆ. ಸಾರ್ವಜನಿಕರು, ಸಂಸದರು ಮತ್ತು ವಿಐಪಿಗಳಿಗೆ ಆರು ಪ್ರತ್ಯೇಕ ಪ್ರವೇಶದ್ವಾರಗಳೊಂದಿಗೆ 120 ಕಚೇರಿಗಳನ್ನು ಒಳಗೊಂಡು ಕಟ್ಟಡವನ್ನು ವಿನ್ಯಾಸಗೊಳಿಸಲಾಗಿದೆ. ರಾಜ್ಯಸಭೆ ಮತ್ತು ಲೋಕಸಭೆ ಒಳಗೊಂಡದಂತೆ, ಜಂಟಿ ಅಧಿವೇಶನದ ಸಂದರ್ಭದಲ್ಲಿ 1,350 ಸಂಸದರಿಗೆ ಅವಕಾಶ ಕಲ್ಪಿಸುವಂತೆ ವಿನ್ಯಾಸ ಮಾಡಲಾಗಿದೆ. 336ಕ್ಕೂ ಹೆಚ್ಚು ಜನರು ಕುಳಿತುಕೊಳ್ಳುವ ಸಾರ್ವಜನಿಕರ ವೀಕ್ಷಣಾ ಗ್ಯಾಲರಿ ಹೊಂದಿರಲಿದೆ.
ವರ್ಷದ ಆರಂಭದಲ್ಲಿ ಕೇಂದ್ರ ಸರ್ಕಾರ ಹೊಸ ಸಂಸತ್ ಭವನ ನಿರ್ಮಾಣ ಮಾಡುವ ನಿರ್ಧಾರವನ್ನು ಮಾಡಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ ಇದಾಗಿದೆ. ಹೊಸ ಕಟ್ಟಡದ ನಿರ್ಮಾಣಕ್ಕಾಗಿ ಹಳೆ ಕಟ್ಟಡಗಳನ್ನು ಧ್ವಂಸಗೊಳಿಸದೇ ಅವುಗಳನ್ನು ವಸ್ತು ಸಂಗ್ರಹಾಲಯಗಳನ್ನಾಗಿ ಪರಿವರ್ತಿಸಲು ತೀರ್ಮಾನಿಸಲಾಗಿದೆ.
ಪ್ರಸ್ತುತ ಇರುವ ಸಂಸತ್ ಕಟ್ಟಡವೂ 90 ವರ್ಷಗಳಿಗಿಂತ ಹಳೆಯದಾಗಿದ್ದು, 1931ರಲ್ಲಿ ಸಂಸತ್ ಭವನವನ್ನು ನಿರ್ಮಿಸಲಾಗಿತ್ತು. 1911ರಲ್ಲಿ ಬ್ರಿಟಿಷರು ಭಾರತದ ರಾಜಧಾನಿಯನ್ನು ಕೋಲ್ಕತ್ತಾದಿಂದ ದೆಹಲಿಗೆ ಸ್ಥಳಾಂತರಿಸುವ ಘೋಷಣೆ ಮಾಡಿದ 20 ವರ್ಷಗಳ ಬಳಿಕ ದೆಹಲಿಯಲ್ಲಿ ಸಂಸತ್ ಭವನ ಸೇರಿದಂತೆ ರಾಷ್ಟ್ರಪತಿ ಭವನವನ್ನು ನಿರ್ಮಿಸಲಾಗಿತ್ತು.
ಬೆಂಗಳೂರು: ಮಂಡ್ಯ ಲೋಕಸಭಾ ಅಖಾಡದಲ್ಲಿ ಗೆದ್ದು ಇಂದು ಮೊದಲ ಬಾರಿಗೆ ಸಂಸತ್ ಭವನ ಪ್ರವೇಶಿಸಿದ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಭವನದ ಮುಂದೆ ನಿಂತು ಫೋಟೋ ತೆಗೆದು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಸಂಸತ್ ಭವನದ ಮುಂದೆ ನಿಂತಿರುವ ಫೋಟೋವನ್ನು ತಮ್ಮ ಅಭಿಮಾನಿಗಳಿಗಾಗಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಈ ಮೂಲಕ ಮಂಡ್ಯದಿಂದ ಸಂಸತ್ ಪ್ರವೇಶಿಸಿದ ಮೊದಲ ಪಕ್ಷೇತರ ಮಹಿಳಾ ಅಭ್ಯರ್ಥಿಯಾಗಿದ್ದಾರೆ.
ಸಂಸತ್ ಭವನದ ಎದುರು ನಿಂತಿರುವ ಫೋಟೋ ಹಾಕಿರುವ ಸುಮಲತಾ ಅವರು, ದೀರ್ಘ ಪ್ರಯಾಣದ ಬಳಿಕ ಪ್ರಜಾಪ್ರಭುತ್ವದ ಪವಿತ್ರ ದೇವಸ್ಥಾನಕ್ಕೆ ಪ್ರವೇಶ, ಜೈ ಹಿಂದ್ ಜೈ ಕರ್ನಾಟಕ ಎಂದು ಬರೆದು ಕೊನೆಯಲ್ಲಿ ನನಗೆ ಗೌರವ ಮತ್ತು ಹೆಮ್ಮೆಯಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.
ನವದೆಹಲಿ: ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೂ ಅನುಕೂಲ ಇದ್ದು, ಎರಡೂ ರಾಜ್ಯಗಳ ಸಿಎಂಗಳ ಸಭೆ ನಡೆಸಿ ಸಂಧಾನ ಮಾಡುತ್ತೇನೆ ಎಂದು ಸಿಎಂ ಕುಮಾರಸ್ವಾಮಿಗೆ ಕೇಂದ್ರ ಜಲ ಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದ್ದಾರೆ.
ಮೇಕೆದಾಟು ಯೋಜನೆಗೆ ತಮಿಳುನಾಡು ವಿರೋಧಿಸುತ್ತಿರುವುದನ್ನು ಖಂಡಿಸಿ ನಾಳೆ ಸಂಸತ್ ಭವನದ ಎದುರು ರಾಜ್ಯದ ಎಲ್ಲಾ ಸಂಸದರು ಪ್ರತಿಭಟನೆ ನಡೆಸಲಿದ್ದಾರೆ. ನಾಳೆ ಬೆಳಗ್ಗೆ 10 ಗಂಟೆಗೆ ಸಂಸತ್ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಸಾಂಕೇತಿಕ ಪ್ರತಿಭಟನೆ ನಡೆಸಲಿದ್ದಾರೆ. ಪ್ರತಿಭಟನೆಯಲ್ಲಿ ರಾಜ್ಯದ ಲೋಕಸಭೆ ಹಾಗೂ ರಾಜ್ಯಸಭೆಯ ಎಲ್ಲ ಸಂಸದರು ಭಾಗಿಯಾಗಲಿದ್ದಾರೆ. ಕಳೆದ ಗುರುವಾರ ನಡೆದ ಸರ್ವಪಕ್ಷ ಸಂಸದರ ಸಭೆಯಲ್ಲಿ ತಮಿಳುನಾಡು ನಡೆ ಖಂಡಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿತ್ತು. ಅದರಂತೆ ರಾಜ್ಯದ ಎಲ್ಲಾ ಸಂಸದರು ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡುವಂತೆ ಸಾಂಕೇತಿಕ ಪ್ರತಿಭಟನೆ ನಡೆಸಲಿದ್ದಾರೆ.
ಸಿಎಂ ಹೆಚ್.ಡಿ. ಕುಮಾರಸ್ವಾಮಿ ಇಂದು ನವದೆಹಲಿಯಲ್ಲಿ ಕೇಂದ್ರ ಭೂಹೆದ್ದಾರಿ ಮತ್ತು ಜಲ ಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ರಾಜ್ಯದ ವಿವಿಧ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಕುರಿತು ಚರ್ಚಿಸಿದರು.
ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಉಪಸ್ಥಿತರಿದ್ದರು. pic.twitter.com/yztIuRC6o6
ಚಳಿಗಾಲದ ಸಂಸತ್ ಅಧಿವೇಶನ ಆರಂಭದಿಂದಲೂ ತಮಿಳುನಾಡಿನ ಸಂಸದರು ಸಂಸತ್‍ನ ಒಳಗೂ ಮತ್ತು ಹೊರಗೂ ನಿರಂತರ ಪ್ರತಿಭಟನೆ ನಡೆಸುತ್ತಿದ್ದರು. ಮೇಕೆದಾಟು ಯೋಜನೆ ತಮಿಳುನಾಡಿಗೆ ಮಾರಕವಾಗಲಿದ್ದು. ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಬಾರದು ಹಾಗೂ ಜಲ ಆಯೋಗ ನೀಡಿರುವ ಆರಂಭಿಕ ಒಪ್ಪಿಗೆಯನ್ನು ರದ್ದುಪಡಿಸುವಂತೆ ಒತ್ತಾಯಿಸಿದ್ದರು. ತಮಿಳುನಾಡಿನ ಈ ಹೋರಾಟಕ್ಕೆ ಪ್ರತಿ ಹೋರಾಟ ರೂಪಿಸಲು ರಾಜ್ಯ ಜಲ ಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಸಂಸದರ ಸಭೆ ನಡೆಸಿ ಸಂಸತ್ ನಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿತ್ತು. ಇದನ್ನು ಓದಿ: ದೆಹಲಿಯಲ್ಲಿ ಮೇಕೆದಾಟು ಸರ್ವಪಕ್ಷ ಸಭೆ: ಏನೇನು ಚರ್ಚೆಯಾಗಿದೆ?