Tag: Parliament Attack

  • ಮುಂಬೈ ದಾಳಿಯ ರುವಾರಿ, ಸಂಸತ್‌ ಮೇಲಿನ ದಾಳಿಯ ಸಂಚುಕೋರ ಲಷ್ಕರ್ ಉಗ್ರ ಪಾಕಿಸ್ತಾನದ ಆಸ್ಪತ್ರೆಯಲ್ಲಿ ಸಾವು

    ಮುಂಬೈ ದಾಳಿಯ ರುವಾರಿ, ಸಂಸತ್‌ ಮೇಲಿನ ದಾಳಿಯ ಸಂಚುಕೋರ ಲಷ್ಕರ್ ಉಗ್ರ ಪಾಕಿಸ್ತಾನದ ಆಸ್ಪತ್ರೆಯಲ್ಲಿ ಸಾವು

    – ಆಪರೇಷನ್ ಸಿಂಧೂರ ದಾಳಿಯಲ್ಲಿ ಗಾಯಗೊಂಡಿದ್ದ ಅಬ್ದುಲ್ ಅಜೀಜ್

    ಇಸ್ಲಾಮಾಬಾದ್: 2001ರ ಭಾರತೀಯ ಸಂಸತ್‌ ಭವನದ ಮೇಲಿನ ದಾಳಿಯ ಸಂಚುಕೋರ ಹಾಗೂ 26/11ರ ಮುಂಬೈ ಉಗ್ರರ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಲಷ್ಕರ್-ಎ-ತೈಬಾದ ಪ್ರಮುಖ ಉಗ್ರ ಅಬ್ದುಲ್ ಅಜೀಜ್ (Lashkar Terrorist Abdul Aziz) ಪಾಕಿಸ್ತಾನದ ಬಹಾವಲ್ಪುರದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

    ಅಬ್ದುಲ್ ಅಜೀಜ್ ಪಾಕಿಸ್ತಾನ (Pakistan) ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾದ ಪ್ರಮುಖ ಹಣಕಾಸು ಕಾರ್ಯಾಚರಣಾ ಮತ್ತು ಕಾರ್ಯತಂತ್ರದ ಮಾಡ್ಯೂಲ್ ಸಂಯೋಜಕರಾಗಿದ್ದ. ಕಳೆದ ಮೇ 7 ರಂದು ಭಾರತದ ಆಪರೇಷನ್‌ ಸಿಂಧೂರ (Operation Sindoor) ಕಾರ್ಯಾಚರಣೆ ವೇಳೆ ಕ್ಷಿಪಣಿ ದಾಳಿಗೆ ತುತ್ತಾಗಿ ಗಾಯಗೊಂಡಿದ್ದ ಎನ್ನಲಾಗಿದೆ. ಇದನ್ನೂ ಓದಿ: ಸಂಸತ್‌ ಭವನ ಪಕ್ಕದ ಮಸೀದಿಯಲ್ಲಿ ಎಸ್ಪಿ ಸಂಸದರೊಟ್ಟಿಗೆ ಅಖಿಲೇಶ್‌ ಯಾದವ್‌ ಸಭೆ – ಕೆರಳಿದ ಬಿಜೆಪಿ

    ಲಷ್ಕರ್-ಇ-ತೈಬಾದ (Lashkar-e-Taiba) ಉಪ ಮುಖ್ಯಸ್ಥ ಸೈಫುಲ್ಲಾ ಕಸೂರಿಯೊಂದಿಗೆ ಅಜೀಜ್ ನಿಕಟ ಸಂಬಂಧ ಹೊಂದಿದ್ದ. ಅಬ್ದುಲ್ ಅಜೀಜ್ ಅಂತ್ಯಕ್ರಿಯೆಯಲ್ಲಿ ಸೈಫುಲ್ಲಾ ಕಸೂರಿ ಮತ್ತು ಅಬ್ದುರ್ ರೌಫ್ ಅವರಂತಹ ಹಿರಿಯ ಲಷ್ಕರ್ ನಾಯಕರು ಭಾಗಿಯಾಗಿದ್ದಾರೆ.

    ಲಷ್ಕರ್‌ ಸಂಘಟನೆಯ ಮುಖ್ಯ ಕೊಂಡಿ
    ಅಜೀಜ್ ಲಷ್ಕರ್ ಸಂಘಟನೆಗೆ ಪ್ರಮುಖ ಆರ್ಥಿಕ ಕೊಂಡಿಯಾಗಿದ್ದ. ಗಲ್ಫ್ ರಾಷ್ಟ್ರಗಳು, ಬ್ರಿಟನ್ ಮತ್ತು ಅಮೆರಿಕದಲ್ಲಿರುವ ಪಾಕಿಸ್ತಾನಿ ಸಮುದಾಯಗಳು ಮತ್ತು ಮೂಲಭೂತ ಇಸ್ಲಾಮಿಸ್ಟ್ ಗುಂಪುಗಳಿಂದ ಹಣ ಸಂಗ್ರಹಿಸುತ್ತಿದ್ದ. ಹಣಕಾಸಿನ ಹೊರತಾಗಿ, ಅಜೀಜ್ ಲಾಜಿಸ್ಟಿಕ್ಸ್, ಶಸ್ತ್ರಾಸ್ತ್ರ ಪೂರೈಕೆ ಮತ್ತು ವಿವಿಧ ಭಯೋತ್ಪಾದಕ ಚಟುವಟಿಕೆಗಳಿಗೆ ನೇಮಕಾತಿಯನ್ನೂ ನಿರ್ವಹಿಸುತ್ತಿದ್ದ. ಇದನ್ನೂ ಓದಿ: ದೆಹಲಿಯಲ್ಲಿ ಮಳೆ ಆರ್ಭಟ; ಪ್ರಮುಖ ರಸ್ತೆಗಳು ಜಲಾವೃತ – ಸಂಚಾರ ಅಸ್ತವ್ಯಸ್ತ

    ಭಾರತದಲ್ಲಿ ನಡೆದ ಉಗ್ರ ಕೃತ್ಯಗಳಲ್ಲಿ ಭಾಗಿ
    ಅಬ್ದುಲ್ ಅಜೀಜ್ ಭಾರತದಲ್ಲಿ ನಡೆದ ಹಲವಾರು ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾಗಿದ್ದ. ನೇರವಾಗಿ ಕಾರ್ಯಾಚರಣೆ ಯೋಜಿಸದಿದ್ದರೂ, ನಿಧಿ ಮತ್ತು ಸಂಪನ್ಮೂಲ ಸುಗಮಗೊಳಿಸುವ ಮೂಲಕ ನಿರ್ಣಾಯಕ ಪಾತ್ರ ವಹಿಸಿದ್ದ. 2001ರಲ್ಲಿ ಸಂಸತ್‌ ಭವನದ ಮೇಲಿನ ದಾಳಿಗೆ ಪಾಕಿಸ್ತಾನದಿಂದ ಹಣ ಮತ್ತು ಉಪಕರಣಗಳನ್ನು ಸಾಗಿಸಲು ಸಹಾಯ ಮಾಡಿದ್ದಾ ಎಂದು ಗುಪ್ತಚರ ವರದಿಗಳು ಸೂಚಿಸುತ್ತವೆ.

    2006ರ ಮುಂಬೈ ಸ್ಥಳೀಯ ರೈಲು ಸ್ಫೋಟಗಳಿಗೂ ಅವರು ಹಣಕಾಸು ಒದಗಿಸಿದ್ದ ಎಂದು ನಂಬಲಾಗಿದೆ. 2008ರ ಮುಂಬೈ ದಾಳಿಯ ಸಮಯದಲ್ಲಿ, ಅಜೀಜ್ ಸಮುದ್ರ ಮಾರ್ಗಗಳ ಮೂಲಕ ಶಸ್ತ್ರಾಸ್ತ್ರಗಳು ಮತ್ತು ಉಪಗ್ರಹ ಫೋನ್‌ಗಳ (ಸ್ಯಾಟಲೈಟ್‌ ಫೋನ್‌) ವಿತರಣೆ ಮಾಡಿದ್ದ. ಜೊತೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಥಳೀಯ ಭಯೋತ್ಪಾದಕ ಮಾಡ್ಯೂಲ್‌ಗಳಿಗೆ ಸಹ ಹಣಕಾಸು ಒದಗಿಸಿಸುವ ಜೊತೆಗೆ ಯುವಕರನ್ನು ಭಯೋತ್ಪಾದನಾ ಸಂಘಟನೆಗಳಿಗೆ ಸೇರಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಸೈಬರ್‌ ದಾಳಿಗೆ 158 ವರ್ಷದ ಹಳೆಯ ಕಂಪನಿ ಬಂದ್‌ – 700 ಮಂದಿ ಮನೆಗೆ

  • ಸಂಸತ್‌ ಭವನ ಮೇಲಿನ ದಾಳಿಗೆ 23 ವರ್ಷ – ಹುತಾತ್ಮಕರಿಗೆ ಮೋದಿ ಸೇರಿ ಗಣ್ಯರಿಂದ ನಮನ

    ಸಂಸತ್‌ ಭವನ ಮೇಲಿನ ದಾಳಿಗೆ 23 ವರ್ಷ – ಹುತಾತ್ಮಕರಿಗೆ ಮೋದಿ ಸೇರಿ ಗಣ್ಯರಿಂದ ನಮನ

    ನವದೆಹಲಿ: ಸಂಸತ್‌ ಮೇಲಿನ (Parliament Attack) ದಾಳಿಗೆ ಇಂದಿಗೆ 23 ವರ್ಷಗಳು ತುಂಬಿವೆ. ದಾಳಿಯಲ್ಲಿ ಹುತಾತ್ಮರಾದ ಗಣ್ಯರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಸೇರಿದಂತೆ ಅನೇಕ ನಾಯಕರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

    2001 ರಲ್ಲಿ ಸಂಸತ್ತಿನ ದಾಳಿಯಲ್ಲಿ ಹುತಾತ್ಮರಾದವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದೇವೆ. ಅವರ ತ್ಯಾಗವು ನಮ್ಮ ರಾಷ್ಟ್ರವನ್ನು ಸದಾ ಪ್ರೇರೇಪಿಸುತ್ತದೆ. ಅವರ ಧೈರ್ಯ ಮತ್ತು ಸಮರ್ಪಣೆಗಾಗಿ ನಾವು ಕೃತಜ್ಞರಾಗಿರುತ್ತೇವೆ” ಎಂದು ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ರಷ್ಯನ್ ಭಾಷೆಯಲ್ಲಿ ಆರ್‌ಬಿಐಗೆ ಬಾಂಬ್ ಬೆದರಿಕೆ

    ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಭಯೋತ್ಪಾದನೆ ವಿರುದ್ಧ ಇಡೀ ದೇಶ ನಿಂತಿದೆ. ರಾಷ್ಟ್ರಕ್ಕಾಗಿ ಅಮರರಾದ ಹುತಾತ್ಮರಿಗೆ ಗೌರವಪೂರ್ವಕ ಶ್ರದ್ಧಾಂಜಲಿ. ಸಂಸತ್ ಭವನದ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಭಾರತ ಮಾತೆಯ ಹೆಮ್ಮೆಯ ಪುತ್ರರನ್ನು ಇಂದು ನಾವು ಸ್ಮರಿಸುತ್ತೇವೆ. ಇಡೀ ದೇಶವೇ ಭಯೋತ್ಪಾದನೆ ವಿರುದ್ಧ ಒಗ್ಗಟ್ಟಾಗಿದೆ ಎಂದು ತಿಳಿಸಿದ್ದಾರೆ.

    ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಕೂಡ ಹುತಾತ್ಮರಿಗೆ ನಮನ ಸಲ್ಲಿಸಿದ್ದಾರೆ. ಇಂದಿನ ದಿನವು ಸಂಸತ್ ಭವನದ ಮೇಲಿನ ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ದೇಶ ಮತ್ತು ನಮ್ಮ ಪ್ರಜಾಪ್ರಭುತ್ವದ ದೇವಾಲಯವನ್ನು ರಕ್ಷಿಸಲು ತಮ್ಮ ಪ್ರಾಣವನ್ನು ತ್ಯಾಗ ಮಾಡಿದವರನ್ನು ನೆನಪಿಸುತ್ತದೆ. ಅಮರ ಹುತಾತ್ಮರಿಗೆ ಕೋಟಿ ನಮನಗಳು ಎಂದಿದ್ದಾರೆ. ಇದನ್ನೂ ಓದಿ: ವಾಯುಭಾರ ಕುಸಿತದ ಎಫೆಕ್ಟ್; ತಮಿಳುನಾಡಿನಾದ್ಯಂತ ಭಾರೀ ಮಳೆ, ಪ್ರವಾಹ ಮುನ್ಸೂಚನೆ!

    2021ರ ಡಿ.13 ರಂದು ನಡೆದ ಸಂಸತ್‌ ಭವನದ ಮೇಲಿನ ದಾಳಿಗೆ ಜಗದೀಶ್, ಮತ್ಬರ್, ಕಮಲೇಶ್ ಕುಮಾರಿ; ನಾನಕ್ ಚಂದ್ ಮತ್ತು ರಾಂಪಾಲ್, ಓಂ ಪ್ರಕಾಶ್, ಬಿಜೇಂದರ್ ಸಿಂಗ್ ಮತ್ತು ಘನಶ್ಯಾಮ್, ದೇಶರಾಜ್, ತೋಟಗಾರ ಹುತಾತ್ಮರಾಗಿದ್ದರು.

  • ಸ್ವಂತ ಮನೆಯಲ್ಲಿ ಪಿಜಿ ಮಾದರಿ ವಾಸ ಮಾಡ್ತಿದ್ದ ಮನೋರಂಜನ್

    ಸ್ವಂತ ಮನೆಯಲ್ಲಿ ಪಿಜಿ ಮಾದರಿ ವಾಸ ಮಾಡ್ತಿದ್ದ ಮನೋರಂಜನ್

    ಮೈಸೂರು: ಲೋಕಸಭೆಯಲ್ಲಿ ಸ್ಮೋಕ್‌ ಬಾಂಬ್‌ (Parliament Attack) ಸಿಡಿಸಿದ್ದ ಮನೋರಂಜನ್ (Manoranjan) ಸ್ವಂತ ಮನೆಯಲ್ಲಿ ಪಿಜಿ ಮಾದರಿ ವಾಸ ಮಾಡುತ್ತಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.

    ಮನೆಯ ಎರಡನೇ ಮಹಡಿಯ ಕೊಠಡಿಯಲ್ಲಿ ಮನೋರಂಜನ್ ಇರುತ್ತಿದ್ದ. ತಿಂಡಿ, ಊಟ, ನಿತ್ಯಕರ್ಮಗಳಿಗೆ ಮಾತ್ರ ಮನೆ ಒಳಗೆ ಬರುತ್ತಿದ್ದ ಮನೋರಂಜನ್‌ ಬೆಳಗ್ಗೆ ಎದ್ದು ಹೊರಗಡೆ ಪಾರ್ಕ್ ಸುತ್ತಿ ಬರುತ್ತಿದ್ದ.  ಇದನ್ನೂ ಓದಿ: ಮನೋರಂಜನ್ ಹಣದ ಮೂಲದ ಬಗ್ಗೆ ತನಿಖೆ ಆರಂಭ – ಪೋಷಕರಿಂದ ಪ್ರತ್ಯೇಕ ವಿಚಾರಣೆ

     

    ಬೆಳಗ್ಗೆ ಸ್ನಾನ, ತಿಂಡಿ ಮುಗಿಸಿ ರೂಂ ಸೇರಿದ್ದರೆ ಮಧ್ಯಾಹ್ನವೇ ಹೊರ ಬರುತ್ತಿದ್ದ. ಊಟ ಮಾಡಿದ ನಂತರ ಮತ್ತೆ ರೂಂ ಸೇರುತ್ತಿದ್ದ. ರಾತ್ರಿ ಊಟಕ್ಕೆ ಕೆಳಗೆ ಬಂದು ಹೋಗುತ್ತಿದ್ದ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಮಗನ ರೂಂಗೆ ತಾಯಿ ಮಾತ್ರ ಹೆಚ್ಚು ಹೋಗುತ್ತಿದ್ದರು. ಮಗನ ಜೊತೆ ತಂದೆ ದೇವರಾಜೇಗೌಡ ಹೆಚ್ಚು ಮಾತನಾಡಿಸುತ್ತಿರಲಿಲ್ಲ. ಮಗನನ್ನು ಮುದ್ದಿನಿಂದ ಬೆಳೆಸಿದ್ದ ವಿಚಾರವನ್ನು ಪೋಷಕರು ಪೊಲೀಸರ ಮುಂದೆ ಹೇಳಿದ್ದಾರೆ. ವಿಚಾರಣೆ ವೇಳೆ ಮಗನ ಕೃತ್ಯದ ಬಗ್ಗೆ ದೇವರಾಜೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ.

     

    ದೆಹಲಿಯ ಸ್ಪೆಷಲ್ ಸೆಲ್ ಪೊಲೀಸರು (Delhi Special Cell Police) ತಂದೆ ದೇವರಾಜೇಗೌಡ, ತಾಯಿ ಶೈಲಜಾ ಪ್ರತ್ಯೇಕ ವಿಚಾರಣೆ ಮಾಡಿದ್ದಾರೆ. ಈ ವೇಳೆ ನಾವು ಆಗಾಗ 1 ಸಾವಿರ ರೂ. 2 ಸಾವಿರ ರೂ. ನೀಡುತ್ತಿದ್ದೆವು ಅಷ್ಟೇ. ಮನೋರಂಜನ್‌ ಕೂಡ ನಮ್ಮ ಬಳಿ ಹೆಚ್ಚಿನ ಹಣ ಯಾವತ್ತು ಕೇಳಿಲ್ಲ. ನಮಗೆ ಅವನ ಬ್ಯಾಂಕ್ ಖಾತೆಗಳ ಬಗ್ಗೆ ಮಾಹಿತಿ‌ ಇಲ್ಲ ಎಂದಿರುವ ವಿಚಾರ ಮೂಲಗಳಿಂದ ಪಬ್ಲಿಕ್‌ ಟಿವಿಗೆ ತಿಳಿದು ಬಂದಿದೆ.

     

  • ಮನೋರಂಜನ್ ಹಣದ ಮೂಲದ ಬಗ್ಗೆ ತನಿಖೆ ಆರಂಭ – ಪೋಷಕರಿಂದ ಪ್ರತ್ಯೇಕ ವಿಚಾರಣೆ

    ಮನೋರಂಜನ್ ಹಣದ ಮೂಲದ ಬಗ್ಗೆ ತನಿಖೆ ಆರಂಭ – ಪೋಷಕರಿಂದ ಪ್ರತ್ಯೇಕ ವಿಚಾರಣೆ

    ಮೈಸೂರು: ಸಂಸತ್‌ ಮೇಲೆ ದಾಳಿ (Parliament Attack) ನಡೆಸಿದ್ದ ಮೈಸೂರು (Mysuru) ಮೂಲದ 35 ವರ್ಷದ ಮನೋರಂಜನ್‌ (Manoranjan) ಹಣದ ಮೂಲದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು ಪೋಷಕರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ.

    ದೆಹಲಿಯ ಸ್ಪೆಷಲ್ ಸೆಲ್ ಪೊಲೀಸರು (Delhi Special Cell Police) ತಂದೆ ದೇವರಾಜೇಗೌಡ, ತಾಯಿ ಶೈಲಜಾ ಪ್ರತ್ಯೇಕ ವಿಚಾರಣೆ ಮಾಡಿದ್ದಾರೆ. ಈ ವೇಳೆ ನಾವು ಆಗಾಗ 1 ಸಾವಿರ ರೂ. 2 ಸಾವಿರ ರೂ. ನೀಡುತ್ತಿದ್ದೆವು ಅಷ್ಟೇ. ಮನೋರಂಜನ್‌ ಕೂಡ ನಮ್ಮ ಬಳಿ ಹೆಚ್ಚಿನ ಹಣ ಯಾವತ್ತು ಕೇಳಿಲ್ಲ. ನಮಗೆ ಅವನ ಬ್ಯಾಂಕ್ ಖಾತೆಗಳ ಬಗ್ಗೆ ಮಾಹಿತಿ‌ ಇಲ್ಲ ಎಂದಿರುವ ವಿಚಾರ ಮೂಲಗಳಿಂದ ಪಬ್ಲಿಕ್‌ ಟಿವಿಗೆ ತಿಳಿದು ಬಂದಿದೆ.  ಇದನ್ನೂ ಓದಿ: ನನ್ನ ಮಗ ಕ್ರಾಂತಿಕಾರಿ ಪುಸ್ತಕಗಳಿಂದ ಪ್ರಭಾವಿತನಾಗಿದ್ದ, ಸಮಾಜ ಸೇವೆ ಮಾಡುವ ಹಂಬಲವಿತ್ತು – ಮನೋರಂಜನ್‌ ತಂದೆ ಬೇಸರ

    ನಾವು ನಗದು ರೂಪದಲ್ಲಿ ಅವನ ಕೈಗೆ ಆಗಾಗ ದುಡ್ಡು ಕೊಟ್ಟಿದ್ದೇವೆ. ನಾವು ಕೊಟ್ಟಿರುವ ಹಣದಲ್ಲಿ ಪುಸ್ತಕ ಖರೀದಿ ಮಾಡುತ್ತಾನೆ ಎಂದುಕೊಂಡಿದ್ದೆವು. ಅವನಿಗೆ ಬೇರೆ ಯಾವ ದುಶ್ಚಟಗಳು ಇರಲಿಲ್ಲ. ಹೀಗಾಗಿ ಅವನಿಗೆ ಹೆಚ್ಚಿನ ಖರ್ಚಿನ ಅಗತ್ಯ ಇಲ್ಲ ಎಂದುಕೊಂಡಿದ್ದೆವು. ಅವನು ಯಾವಾಗಲು ನಮ್ಮ ಬಳಿ ಯಾವ ಹಣವನ್ನು ಕೊಟ್ಟಿಲ್ಲ. ಹೆಚ್ಚಿನ ಹಣಕ್ಕೆ ನಮ್ಮ ಬಳಿ ಯಾವತ್ತು ಬೇಡಿಕೆ ಇಟ್ಟಿರಲಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಾಂಬ್ ಸ್ಫೋಟಕ್ಕೆ ಮುಂದಾಗಿದ್ದ ಬಳ್ಳಾರಿ ಐಸಿಸ್‌ ಟೀಂ – ದಾಳಿಯಲ್ಲಿ ಏನು ಸಿಕ್ಕಿದೆ?

    ನಾವು ಅವನಿಗೆ ಕೆಲಸಕ್ಕೆ ಸೇರು ಎಂದು ಅವನಿಗೆ ಯಾವತ್ತು ಒತ್ತಡ ಹೇರಿರಲಿಲ್ಲ. ಅವನು ಬೆಂಗಳೂರಿಗೆ ಹೋಗುತ್ತಾನೆಂದು ಹೇಳುತ್ತಿದ್ದ ಅಷ್ಟೇ. ಮನೋರಂಜನ್‌ ಜೊತೆ ಯಾವತ್ತೂ ವೈಯಕ್ತಿಕ ವಿಚಾರ ಚರ್ಚೆ ಮಾಡಿರಲಿಲ್ಲ ಎಂದಿದ್ದಾರೆ.

    ಮನೋರಂಜನ್‍ನ ಮೈಸೂರಿನ ನಿವಾಸಕ್ಕೆ ಸೋಮವಾರ ದೆಹಲಿಯ ಪೊಲೀಸರು ಆಗಮಿಸಿ ತಪಾಸಣೆ ಮಾಡಿದ್ದಾರೆ. ಒಂದಷ್ಟು ಮಹತ್ವದ ಮಾಹಿತಿಯನ್ನು ಸಂಗ್ರಹಿಸಿರುವ ಪೊಲೀಸರು ಮನೋರಂಜನ್ ರೂಂ ನಲ್ಲಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಳಗ್ಗೆ 11:30ರಿಂದ ಆರಂಭಗೊಂಡ ವಿಚಾರಣೆ ಸಂಜೆ 6:30ರವರೆಗೆ ನಡೆದಿದೆ.

    ಬೆಂಗಳೂರಿನ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಪದವಿಯನ್ನು ಅರ್ಧಕ್ಕೆ ಕೈಬಿಟ್ಟ ಮನೋರಂಜನ್‌ ಕೆಲಸದ ನೆಪದಲ್ಲಿ ಬೆಂಗಳೂರಿನಿಂದ ಮುಂಬೈ, ಬೆಂಗಳೂರಿನಿಂದ ದೆಹಲಿ ಎಂದು ಓಡಾಡಿಕೊಂಡಿದ್ದ ಎಂದು ತಂದೆ ಈ ಹಿಂದೆ ಪ್ರತಿಕ್ರಿಯಿಸಿದ್ದರು. ಯಾವುದೇ ಉದ್ಯೋಗ ಇಲ್ಲದೇ ಇದ್ದರೂ ವಿಮಾನ ಸೇರಿದಂತೆ ಪ್ರಯಾಣದ ಖರ್ಚನ್ನು ಭರಿಸುತ್ತಿದ್ದವರು ಯಾರು ಎಂಬ ಗಂಭೀರ ಪ್ರಶ್ನೆ ಬಂದಿದೆ.

     

  • ಸಂಸತ್ತಿನಲ್ಲಿ ಭದ್ರತಾ ಲೋಪ – ಲೋಕಸಭಾ ಕಲಾಪ ನಡೆಯುವಾಗಲೇ ಮೇಲಿನಿಂದ ಜಿಗಿದ ಅನಾಮಿಕರು

    ಸಂಸತ್ತಿನಲ್ಲಿ ಭದ್ರತಾ ಲೋಪ – ಲೋಕಸಭಾ ಕಲಾಪ ನಡೆಯುವಾಗಲೇ ಮೇಲಿನಿಂದ ಜಿಗಿದ ಅನಾಮಿಕರು

    ನವದೆಹಲಿ: ಅಧಿವೇಶನ (Session) ನಡೆಯುತ್ತಿರುವಾಗಲೇ ಸಂಸತ್‌ನಲ್ಲಿ ಭದ್ರತಾ ಲೋಪ (Security Breach) ನಡೆದಿದೆ.

    ಲೋಕಸಭಾ ವೀಕ್ಷಕರ  ಗ್ಯಾಲರಿಯಿಂದ (Lok Sabha Visitors Gallery) ಇಬ್ಬರು ವ್ಯಕ್ತಿ ಮೇಲಿನಿಂದ ಜಿಗಿದಿದ್ದಾರೆ. ಕೂಡಲೇ ಭದ್ರತಾ ಸಿಬ್ಬಂದಿ ಇಬ್ಬರನ್ನು  ಹಿಡಿದಿದ್ದಾರೆ.

    ಸಂಸತ್‌ ಮೇಲೆ ದಾಳಿ ನಡೆದು 22 ವರ್ಷವಾದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಹುತಾತ್ಮ ಭದ್ರತಾ ಸಿಬ್ಬಂದಿಗೆ ಗೌರವ ಸಲ್ಲಿಸಲಾಗಿತ್ತು.

     

    ಈಗ ಬಂದಿರುವ ಮಾಹಿತಿ ಪ್ರಕಾರ  ಒಟ್ಟು ಎರಡು ಘಟನೆ ನಡೆದಿದೆ. ಇಬ್ಬರು ಅನಾಮಿಕ ವ್ಯಕ್ತಿಗಳು ಲೋಕಸಭೆ ಗ್ಯಾಲರಿಯಿಂದ ಜಿಗಿದು ಕಲರ್‌ ಬಾಂಬ್‌ ಸಿಡಿಸಿದರೆ, ಇಬ್ಬರು ಹೊರಗಡೆ ಪ್ರತಿಭಟನೆ ನಡೆಸಿದ್ದಾರೆ.  ಈಗ ನಾಲ್ವರನ್ನು ವಶಕ್ಕೆ ಪಡೆದ ಭದ್ರತಾ ಸಿಬ್ಬಂದಿ ವಿಚಾರಣೆ ನಡೆಸುತ್ತಿದ್ದಾರೆ.

    ಸಂಸತ್‌ ಒಳ ಪ್ರವೇಶಕ್ಕೆ ಪಾಸ್‌ ಇಲ್ಲದೇ ಯಾರನ್ನು ಬಿಡಲ್ಲ. ಹೀಗಿರುವಾಗ ಇಷ್ಟೊಂದು ದೊಡ್ಡ ಮಟ್ಟದ ಭದ್ರತಾ ಲೋಪ ನಡೆದಿದ್ದು ಹೇಗೆ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ.