– ಚೆನ್ಮಮ್ಮ ಸಮಾಧಿಯನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಿ: ಸೋಮಣ್ಣ
ನವದೆಹಲಿ: ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮನವರ (Kittur Rani Chennamma) 201ನೇ ವಿಜಯೋತ್ಸವ ಹಾಗೂ ಜನ್ಮದಿನೋತ್ಸವವನ್ನು ಸಂಸತ್ ಆವರಣದಲ್ಲಿ ಆಚರಿಸಲಾಯಿತು. ಸಂಸತ್ (Parliament) ಆವರಣದ ಪ್ರೇರಣಾ ಸ್ಥಳದಲ್ಲಿರುವ ಚೆನ್ನಮ್ಮ ಪ್ರತಿಮೆಗೆ ತುಮಕೂರು ಲೋಕಸಭಾ ಸದಸ್ಯ ಹಾಗೂ ಕೇಂದ್ರ ಸಚಿವ ವಿ. ಸೋಮಣ್ಣ (V Somanna) ಪುಷ್ಪನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸೋಮಣ್ಣ, ರಾಣಿ ಚೆನ್ನಮ್ಮನವರ ಪುತ್ಥಳಿಯನ್ನು ಸಂಸತ್ತಿನ ಆವರಣದಲ್ಲಿ 2007ರಲ್ಲಿ ಸ್ಥಾಪಿಸಲಾಗಿದೆ. ಕಳೆದ ವರ್ಷ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬೆಂಬಲ ಮತ್ತು ಲೋಕಸಭಾ ಅಧ್ಯಕ್ಷ ಓಂ ಬಿರ್ಲಾ ಅವರ ಸಹಕಾರದಿಂದ 200ನೇ ರಾಣಿ ಚೆನ್ನಮ್ಮನವರ ವಿಜಯೋತ್ಸವ ಮತ್ತು ಜನ್ಮದಿನೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗಿತ್ತು. ಅದೇ ರೀತಿ ಈ ವರ್ಷವೂ ಸಹ ರಾಣಿ ಚೆನ್ಮಮ್ಮನವರ 201ನೇ ವಿಜಯೋತ್ಸವ ಮತ್ತು ಜನ್ಮದಿನೋತ್ಸವ ಆಚರಣೆಯನ್ನು ಸಂಸತ್ತಿನ ಅವರಣದ ಪ್ರೇರಣಾ ಸ್ಥಳದಲ್ಲಿ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: 17 ವರ್ಷಗಳ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಕೆಟ್ಟ ಸಾಧನೆ ಬರೆದ ಕೊಹ್ಲಿ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಕರ್ನಾಟಕದ ಸಂಸ್ಕೃತಿ, ಈ ದೇಶಕ್ಕೆ ಕೊಡುಗೆ ನೀಡಿದ ಕನ್ನಡದ ಮಹನೀಯರನ್ನು, ಸ್ವಾತಂತ್ರ‍್ಯ ಹೋರಾಟಗಾರರನ್ನು, ವೀರವನಿತೆಯರನ್ನು ನೆನಪಿಸುವ ಮತ್ತು ಅವರನ್ನು ಗೌರವಿಸುವ ಕೆಲಸ ಮಾಡುವಲ್ಲಿ ಸದಾ ಸನ್ನದ್ಧವಾಗಿದೆ. ಇದಕ್ಕೆ ಪೂರಕವಾಗಿಯೇ ನಾಳೆ ಸಿರಿಪೋರ್ಟ ಆಡಿಟೋರಿಯಂನಲ್ಲಿ ನಡೆಯಲಿರುವ ಕಿತ್ತೂರು ರಾಣಿ ಚೆನ್ನಮ್ಮನವರ 201ನೇ ವಿಜಯೋತ್ಸವ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ವೀರರಾಣಿ ಚೆನ್ಮಮ್ಮನವರ ವಿಶೇಷ ಅಂಚೆ ಚೀಟಿ ಬಿಡುಗಡೆ ಮಾಡಲಿದ್ದಾರೆ ಎಂದರು. ಇದನ್ನೂ ಓದಿ: ಸಾಲುಸಾಲು ರಜೆ ಮುಗಿಸಿ ಬೆಂಗಳೂರಿಗೆ ವಾಪಸ್ – ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ
ಸ್ವಾತಂತ್ರ‍್ಯ ಹೋರಾಟಗಾರ್ತಿ ರಾಣಿ ಚೆನ್ನಮ್ಮನವರ ಸಾಧನೆ ಮತ್ತು ಕಿತ್ತೂರಿನ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವನ್ನು ಕರ್ನಾಟಕ ರಾಜ್ಯ ಸರ್ಕಾರ ಹೆಚ್ಚಿನ ಮುತುವರ್ಜಿಯಿಂದ ನಿರ್ವಹಿಸಬೇಕಾದ ಅವಶ್ಯಕತೆ ಇದೆ. ಇದಕ್ಕೆ ಪೂರಕವಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಕಿತ್ತೂರು ಸಂಸ್ಥಾನದ ಕೋಟೆ ಕೊತ್ತಲೆಗಳಲ್ಲಿ ಸಮರ್ಪಕ ನಿರ್ವಹಣೆ ಇಲ್ಲದಿರುವುದನ್ನು ಸಾರ್ವಜನಿಕರು ಮನಗಂಡಿದ್ದು, ಈ ಬಗ್ಗೆ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚಿನ ಅಧಿಕಾರ ನೀಡಬೇಕಾಗಿದೆ. ಬೈಲಹೊಂಗಲದಲ್ಲಿರುವ ರಾಣಿ ಚೆನ್ಮಮ್ಮನವರ ಸಮಾಧಿಯನ್ನು ಅಭಿವೃದ್ಧಿಗೊಳಿಸಿ, ಅದನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಬೇಕು. ವೀರ ರಾಣಿ ಚೆನ್ಮಮ್ಮನವರ ಜೀವನ ಮತ್ತು ಸಾಧನೆ ಕುರಿತು ಭಾರತೀಯ ಎಲ್ಲಾ ಭಾಷೆಗಳಲ್ಲೂ ಪುಸ್ತಕವನ್ನು ಹೊರತರಬೇಕೆಂದು ಮನವಿ ಮಾಡಿದೆ ಎಂದು ನುಡಿದರು. ಇದನ್ನೂ ಓದಿ: ಕಾವೇರಿ ಜಲಾನಯನ ಪ್ರದೇಶದಲ್ಲಿ ಹಿಂಗಾರು ಚುರುಕು – ನದಿ ಪಾತ್ರದ ಜನರಿಗೆ ಅಲರ್ಟ್
ಈ ಸಂದರ್ಭದಲ್ಲಿ ಬೆಳಗಾವಿ ಸಂಸದರು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ರಾಜ್ಯ ಸಭಾ ಸದಸ್ಯೆ ಡಾ. ಸುಧಾಮೂರ್ತಿಯವರು, ಜಯಮೃತ್ಯುಂಜಯ ಸ್ವಾಮಿಜೀ, ಶ್ರೀ ವಚನಾನಂದ ಸ್ವಾಮಿಗಳು, ಜನಪ್ರತಿನಿಧಿಗಳು, ದೆಹಲಿ ಕನ್ನಡ ಸಂಘದ ಅಧ್ಯಕ್ಷ ಸಿಎಂ ನಾಗರಾಜ್ ಹಾಗೂ ದೆಹಲಿ ಕನ್ನಡಿಗರು ಉಪಸ್ಥಿತರಿದ್ದರು. ಇದನ್ನೂ ಓದಿ: ನಮ್ದೇನಿದ್ದರೂ 2028ಕ್ಕೆ ಸಿಎಂ ಕ್ಲೈಮ್, ಯತೀಂದ್ರ ಹೇಳಿಕೆ ಅದು ವೈಯಕ್ತಿಕ: ಸತೀಶ್ ಜಾರಕಿಹೊಳಿ
ಈಗಿನ ತಂತ್ರಜ್ಞಾನ ಯುಗದಲ್ಲಿ ಜನರು ಕಷ್ಟಪಟ್ಟು ದುಡಿದು ಹಣ ಗಳಿಸುವುದಕ್ಕಿಂತ ಹೆಚ್ಚಾಗಿ ಆನ್ಲೈನ್ ಮೂಲಕ ಹಣ ಗಳಿಸುವಲ್ಲಿ ತೊಡಗಿದ್ದಾರೆ. ಅದರಲ್ಲಿ ಎಷ್ಟೋ ಜನ ಹಣದಾಸೆಗೆ ಬಿದ್ದು ಕೋಟ್ಯಂತರ ರೂಪಾಯಿ ನಷ್ಟ ಮಾಡಿಕೊಂಡವರು ಇದ್ದಾರೆ. ಜೊತೆಗೆ ಹಣ ಗಳಿಸುವ ಆಮೀಷವನ್ನು ತೋರಿಸಿ ಅಥವಾ ಹಣವನ್ನು ಹೂಡಿಕೆ ಮಾಡುವಂತೆ ಕೆಲವು ಆನ್ಲೈನ್ ಗೇಮ್ಗಳು ಜನರನ್ನ ಪ್ರಚೋದನೆ ಮಾಡುತ್ತವೆ. ಹೀಗಾಗಿ ಈ ಸಂಬಂಧ ಕೇಂದ್ರ ಸರ್ಕಾರ ಆನ್ಲೈನ್ ಗೇಮ್ ಗಳನ್ನು ನಿಷೇಧಿಸುವ ಕಾಯಿದೆಯೊಂದನ್ನು ಜಾರಿ ಮಾಡಿದೆ.
ಹೌದು, ಈ ಬಾರಿಯ ಲೋಕಸಭೆಯ ಅಧಿವೇಶನದಲ್ಲಿ ಹಣ ಕಟ್ಟಿ ಆಡಲಾಗುವ ಆನ್ಲೈನ್ ಗೇಮ್ ಗಳನ್ನು ನಿಷೇಧಿಸುವ ಮಸೂದೆಯು ಅಂಗೀಕಾರಗೊಂಡಿತ್ತು. 2025ರ ಆಗಸ್ಟ್ 20ರಂದು ಲೋಕಸಭೆಯಲ್ಲಿ ಈ ಮಸೂದೆ ಅಂಗೀಕಾರವಾಗಿ, ಆಗಸ್ಟ್ 21ರಂದು ರಾಜ್ಯಸಭೆಯಲ್ಲಿ ಅಂಗೀಕಾರವಾಗಿ ಕೊನೆಗೆ ಆಗಸ್ಟ್ 22ರಂದು ಈ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೂಡ ಅಂಕಿತ ಹಾಕಿದ್ದಾರೆ. ಈ ಮೂಲಕ ಈ ಕಾನೂನು ಹಣ ಕಟ್ಟಿ ಆಡಲಾಗುವ ಎಲ್ಲಾ ಆನ್ಲೈನ್ ಗೇಮ್ ಗಳನ್ನು ನಿಷೇಧಿಸುತ್ತದೆ.
ಇದರ ಹಿಂದಿನ ಕಾರಣವೇನು?
ಆನ್ಲೈನ್ ಗೇಮ್ ಒಂದು ವ್ಯಸನ ವಾಗಿ ಮಾರ್ಪಟ್ಟಿದೆ. ಇದಕ್ಕೆ ಮಾರುಹೋಗುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಅದಲ್ಲದೆ ಗೇಮಿಂಗ್ ಆಪ್ ಗಳ ಮೂಲಕ ಹಣ ಅಕ್ರಮ ವರ್ಗಾವಣೆ ಆಗುತ್ತಿದೆ. ಜೊತೆಗೆ ಹಣಕಾಸು ವಂಚನೆ ಪ್ರಕರಣಗಳು ಕೂಡ ಹೆಚ್ಚುತ್ತಿವೆ. ಹೀಗಾಗಿ ಇವುಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಮಸೂದೆಯನ್ನು ರೂಪಿಸಿದೆ.
ಈ ಕಾನೂನಿನಲ್ಲಿ ಏನಿದೆ?
* ಆನ್ಲೈನ್ ಗೇಮ್ ಗಳಂತಹ ಚಟುವಟಿಕೆಗಳನ್ನ ಇದು ನಿಷೇಧಿಸುತ್ತದೆ. ಜೊತೆಗೆ ಈ ಗೇಮ್ ಗಳನ್ನು ಉತ್ತೇಜಿಸುವ ಹಾಗೂ ಜಾಹೀರಾತುಗಳನ್ನ ಪ್ರಕಟಿಸುವುದನ್ನು ಇದು ನಿಷೇಧಿಸುತ್ತದೆ.
* ಆನ್ಲೈನ್ ಗೇಮ್ ಗಳಲ್ಲಿ ಕೆಲವು ಆಟಗಳು ಮನರಂಜನೆ ನೀಡುತ್ತವೆ. ಇವುಗಳನ್ನು ಸೇರಿಸಿ ಆನ್ಲೈನ್ ಜೂಜಾಟ ಹಾಗೂ ಲಾಟರಿಗಳಂತಹ ಆಟಗಳನ್ನು ಕೂಡ ಇದು ನಿಷೇಧಿಸುತ್ತದೆ
* ಈ ಕಾನೂನಿನಡಿಯಲ್ಲಿ ಆನ್ಲೈನ್ ಗೇಮ್ ಆಡುವುದಕ್ಕೆ ಅವಕಾಶ ಹಾಗೂ ಪ್ರೋತ್ಸಾಹ ನೀಡುವವರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಒಂದು ಕೋಟಿ ರೂ. ದಂಡ ವಿಧಿಸಲಾಗುವುದು.
* ಜೊತೆಗೆ ಇಂತಹ ಆಟಗಳ ಕುರಿತು ಜಾಹೀರಾತು ಪ್ರಕಟಿಸಿದರೆ ಎರಡು ವರ್ಷಗಳವರೆಗೆ ಶಿಕ್ಷೆ ಮತ್ತು ಐವತ್ತು ಲಕ್ಷ ರೂ. ದಂಡ ವಿಧಿಸಲಾಗುವುದು.
* ಇನ್ನು ಅಪರಾಧಗಳ ಪುನರಾವರ್ತನೆಯ ಆದರೆ ಮೂರರಿಂದ ಐದು ವರ್ಷ ಜೈಲು ಹಾಗೂ ಎರಡು ಕೋಟಿ ರೂ. ವರೆಗೆ ದಂಡ ವಿಧಿಸಲಾಗುವುದು
* ಮೂಲಗಳ ಪ್ರಕಾರ, ಆನ್ಲೈನ್ ಗೇಮ್ಗಳಿಂದಾಗಿ ಭಾರತೀಯರು ಪ್ರತಿ ವರ್ಷ 15,000 ಕೋಟಿ ರೂ. ಯನ್ನು ಕಳೆದುಕೊಳ್ಳುತ್ತಿದ್ದಾರೆ. ಇನ್ನು ಕಳೆದ 31 ತಿಂಗಳಲ್ಲಿ ಈ ಆನ್ಲೈನ್ ಗೇಮ್ ವ್ಯಸನದಿಂದಾಗಿ ಕರ್ನಾಟಕದಲ್ಲಿ 32 ಜನರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಈ ಆನ್ಲೈನ್ ಗೇಮ್ ನಿಷೇಧದಿಂದಾಗಿ 400ಕ್ಕೂ ಅಧಿಕ ಕಂಪನಿಗಳಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಜನರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಆನ್ಲೈನ್ ಗೇಮ್ ಗಳಲ್ಲಿ ಮೂರು ವಿಭಾಗಗಳಿವೆ:
– ರಿಯಲ್ ಮನಿ ಗೇಮ್ಸ್
– ಇ ಸ್ಪೋರ್ಟ್ಸ್
– ಸೋಶಿಯಲ್ ಗೇಮಿಂಗ್
ಈ ಆಟಗಳ ಪೈಕಿ ನಿಜವಾದ ಹಣ ಹೂಡಿಕೆ ಮಾಡಿ ಆಡುವ ಆಟಗಳನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ನಿಷೇಧಿಸಿದೆ. ಇನ್ನು ಇ-ಸ್ಪೋರ್ಟ್ಸ್ ಗಳಂತಹ ಆಟಗಳನ್ನು ಅನುಮತಿ ಪಡೆದು ಆಡಲು ಅವಕಾಶ ನೀಡಲಾಗಿದೆ. ಇದರ ಹೊರತಾಗಿ ಸೋಶಿಯಲ್ ಗೇಮ್ಸ್ ಗಳು ಹಣವಿಲ್ಲದೆ ಆಡುವ ಆಟಗಳಿಗೆ ಅನುಮತಿ ನೀಡಲಾಗಿದೆ. ಜೊತೆಗೆ ಈ ಆಟಗಳನ್ನು ಆಡುವಾಗ ಬ್ಯಾಂಕ್ ಅಥವಾ ಪೇಮೆಂಟ್ ಆಪ್ ಮೂಲಕ ಹಣ ಕಳಿಸುವುದನ್ನು ನಿಷೇಧಿಸಲಾಗಿದೆ. ಗೂಗಲ್ ಜಾಹೀರಾತುಗಳು, ಮೆಟಾ ಜಾಹೀರಾತುಗಳ ಮೂಲಕ ಇಂತಹ ಗೇಮ್ ಗಳನ್ನ ಪ್ರಚಾರ ಮಾಡುವುದಕ್ಕೆ ನಿಷೇಧಿಸಲಾಗಿದೆ.
ಇನ್ನು ಈ ಕಾಯ್ದೆಯು ಕೇಂದ್ರ ಸರ್ಕಾರಕ್ಕೆ ಆನ್ಲೈನ್ ಗೇಮ್ ಗಳನ್ನು ಗುರುತಿಸಲು, ವರ್ಗಿಕರಿಸಲು ಸಹಾಯಮಾಡುತ್ತದೆ. ಇದರಿಂದ ಸರ್ಕಾರವು ಅನಧಿಕೃತ ಆಪ್ ಗಳನ್ನು ಬ್ಲಾಕ್ ಮಾಡುವ ಹಾಗೂ ಸರ್ವರ್ ಗಳನ್ನು ಬ್ಲಾಕ್ ಮಾಡುವ ಅಧಿಕಾರವಿರುತ್ತದೆ. ಒಂದು ವೇಳೆ ಅಗತ್ಯವಿದ್ದರೆ ವಾರೆಂಟ್ ಇಲ್ಲದೆಯೂ ಕೂಡ ಬಂಧಿಸುವ ಅಧಿಕಾರವಿರುತ್ತದೆ.
ಇನ್ನುಳಿದಂತೆ ಗೇಮಿಂಗ್ ಕಂಪನಿಗಳು ಕೆಲವು ಕಡ್ಡಾಯ ನಿಯಮಗಳನ್ನು ಜಾರಿಗೆ ತರುವಂತೆ ಸೂಚನೆ ನೀಡಲಾಗಿದೆ. ಈ ಪೈಕಿ 18 ವರ್ಷಕ್ಕಿಂತ ಕಡಿಮೆ ಕಡಿಮೆ ಇರುವವರು ಈ ಗೇಮ್ ಗಳನ್ನು ಆಡುವುದಕ್ಕೆ ಪೋಷಕರ ಅನುಮತಿ ಪಡೆಯಬೇಕು. ದೀರ್ಘಕಾಲ ಆಡುವುದಕ್ಕೆ ತಡೆ ಹಿಡಿಯಲಾಗಿದೆ ಮತ್ತು ಬಳಕೆದಾರರು ದೂರು ಸಲ್ಲಿಸಲು ಅವಕಾಶ ನೀಡುವಂತೆ ಸೂಚಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಗೇಮಿಂಗ್ ಉದ್ಯಮ ತೀವ್ರವಾಗಿ ಬೆಳೆಯುತ್ತಿದ್ದು, 2025ರ ಹೊತ್ತಿಗೆ ಎಂಟು ಬಿಲಿಯನ್ ಡಾಲರ್ ನಷ್ಟು ಆಗುವ ಸಾಧ್ಯತೆ ಇದೆ. ಹೀಗಾಗಿ ಇವುಗಳಿಂದ ಜನರಲ್ಲಿ ಆರ್ಥಿಕ ಸಮಸ್ಯೆ, ಸಾಲ, ಆತ್ಮಹತ್ಯೆ, ಮೋಸ, ಕ್ರಮ ಹಣ ಹೂಡಿಕೆಯಂತಹ ತೊಂದರೆಗಳನ್ನು ತಂದು ಹಾಕುತ್ತದೆ. ಇಂತಹ ಸಮಸ್ಯೆಗಳಿಂದ ಜನರನ್ನ ರಕ್ಷಿಸಲು, ಯುವಕರನ್ನ ಸರಿದಾರಿಯತ್ತ ಕರೆದುಕೊಂಡು ಹೋಗುವುದು ಹಾಗೂ ಇಂತಹ ಆಟಗಳಲ್ಲಿ ಸ್ಪಷ್ಟ ನಿಯಮಗಳನ್ನ ರೂಪಿಸುವ ಮೂಲ ಉದ್ದೇಶವನ್ನು ಈ ಕಾನೂನು ಹೊಂದಿದೆ.
ಈ ಕಾನೂನು ಜಾರಿ ಬಳಿಕ ಕೆಲವು ವಿಷಯಗಳು ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಈ ಗೇಮ್ಗಳ ನಿಷೇಧದಿಂದಾಗಿ ಸಾವಿರಾರು ಜನರು ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಇದೆ. ಅದಲ್ಲದೆ ಸದ್ಯಕ್ಕೆ ಆನ್ಲೈನ್ ಗೇಮ್ ಗಳನ್ನು ನಿಷೇಧದಿಂದಾಗಿ ಕೆಲವರು ಕೋರ್ಟಿಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ.
ರಾಜಕಾರಣದಲ್ಲಿ ಶುದ್ಧೀಕರಣ ತರಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಅದಕ್ಕಾಗಿ ಪ್ರಧಾನ ಮಂತ್ರಿಗಳನ್ನು ಹುದ್ದೆಯಿಂದ ಕೆಳಗಿಳಿಸುವ ಮಸೂದೆಯನ್ನು ಕೇಂದ್ರ ಸರ್ಕಾರ ಮಂಡಿಸಿದೆ. ಇದು ರಾಷ್ಟ್ರ ರಾಜಕಾರಣದಲ್ಲಿ ಒಂದು ಕ್ರಾಂತಿಕಾರಿ ಬೆಳವಣಿಗೆಯಾಗಿದೆ. ಇಂದು ವೇಳೆ ಇದು ಕಾನೂನಾಗಿ ಜಾರಿಯಾದ್ರೆ, ರಾಷ್ಟ್ರ ರಾಜಕಾರಣವಾಗಲಿದೆ ಇನ್ನಷ್ಟು ಶುದ್ಧೀಕರಣ…
ಆದರೆ ವಿಪಕ್ಷಗಳು ಕೆಲ ಕಾನೂನು ತಜ್ಞರು ಈ ಮಸೂದೆಯನ್ನ ಟೀಕಿಸಿದ್ದಾರೆ. ಕೇಂದ್ರ ಸರ್ಕಾರ ಮಂಡಿಸಿರುವ ಸಂವಿಧಾನದ 130ನೇ ತಿದ್ದುಪಡಿ ಮಸೂದೆ ಹಾಗೂ ಅದಕ್ಕೆ ಸಂಬಂಧಿಸಿದ ಇತರ ಮಸೂದೆಗಳು ಸಂವಿಧಾನದ ಮೂಲ ಸ್ವರೂಪವನ್ನು ಉಲ್ಲಂಘಿಸುತ್ತಿವೆ. ಅಲ್ಲದೆ, ಪ್ರಜಾತಾಂತ್ರಿಕ ರಾಜಕೀಯ ವ್ಯವಸ್ಥೆಯನ್ನು ರೂಪಿಸಿರುವ ಮೂಲ ಪರಿಕಲ್ಪನೆಗಳಿಗೆ ಕೂಡ ಇವು ವಿರುದ್ಧವಾಗಿವೆ. ಈ ಮಸೂದೆಗಳನ್ನು ಬಹಳ ತಪ್ಪು ಗ್ರಹಿಕೆಯಿಂದ ರೂಪಿಸಲಾಗಿದೆ. ಮಸೂದೆಗಳ ಹಿಂದಿನ ಆಶಯವು ತಪ್ಪಾಗಿದೆ ಹಾಗೂ ಇವು ಕಾನೂನಿನ ರೂಪ ಪಡೆದು ಜಾರಿಗೆ ಬಂದಲ್ಲಿ ಅನುಷ್ಠಾನದಲ್ಲಿ ಅನ್ಯಾಯ ಆಗುವ ಸಾಧ್ಯತೆ ಇದೆ ಎನ್ನುತ್ತಿದ್ದಾರೆ ವಿಪಕ್ಷ ನಾಯಕರು. ಅತ್ತ ಪ್ರಧಾನಿ, ಮುಖ್ಯಮಂತ್ರಿ ಹಾಗೂ ಸಚಿವರು ಕನಿಷ್ಠ ಐದು ವರ್ಷಗಳ ಜೈಲುಶಿಕ್ಷೆಗೆ ಗುರಿಯಾಗುವ ಅಪರಾಧ ಎಸಗಿದ ಆರೋಪದ ಅಡಿಯಲ್ಲಿ ಬಂಧಿತರಾಗಿ, ಸತತ 30 ದಿನಗಳವರೆಗೆ ಜೈಲಿನಲ್ಲಿ ಇದ್ದರೆ ಅವರು ತಮ್ಮ ಹುದ್ದೆಯನ್ನು ಕಳೆದುಕೊಳ್ಳುತ್ತಾರೆ ಎಂದು ಹೇಳುವ ಈ ಮಸೂದೆಗಳು, ಅವರ ವಿರುದ್ಧದ ಆರೋಪಗಳು ಸಾಬೀತಾಗುವ ಮುನ್ನವೇ ಅವರನ್ನು ಶಿಕ್ಷೆಗೆ ಗುರಿಪಡಿಸಲು ಅವಕಾಶ ಮಾಡಿಕೊಡುತ್ತವೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ. ಸದ್ಯ ಮಸೂದೆಗಳನ್ನು ಈಗ ಸಂಸತ್ತಿನ ಜಂಟಿ ಸಮಿತಿಯ ಪರಾಮರ್ಶೆಗೆ ರವಾನಿಸಲಾಗಿದೆ. ಮಸೂದೆಗಳನ್ನು ಆದಷ್ಟು ಬೇಗ ಕಾನೂನಿನ ರೂಪದಲ್ಲಿ ಜಾರಿಗೆ ತರುವ ಉದ್ದೇಶದಿಂದ, ಸಂಸತ್ತಿನ ಮುಂದಿನ ಅಧಿವೇಶನಕ್ಕೆ ಮೊದಲು ಮಸೂದೆಯ ಬಗ್ಗೆ ಅಭಿಪ್ರಾಯ ನೀಡಬೇಕು ಎಂದು ಸಮಿತಿಗೆ ತಿಳಿಸಲಾಗಿದೆ.
ಇದು ಕಾನೂನಾಗಿ ಪರಿವರ್ತನೆಯಾದ ಬಳಿಕ ಬಂಧನಕ್ಕೊಳಗಾದ 30 ದಿನಗಳೊಳಗೆ ಪ್ರಧಾನಿ, ಮುಖ್ಯಮಂತ್ರಿ, ಸಚಿವರು ತಮ್ಮ ಹುದ್ದೆಯನ್ನು ಕಳೆದುಕೊಳ್ಳುವ ಸಾಧ್ಯತೆಗಳಿರುತ್ತವೆ. ಹಾಗಾದ್ರೆ ಏನಿದು ಪಿಎಂ, ಸಿಎಂ, ಸಚಿವರ ಪದಚ್ಯುತಿ ಮಸೂದೆ? ಇದು ಯಾವ ರೀತಿ ಬದಲಾವಣೆಯನ್ನು ತರುತ್ತದೆ? ಇದರ ಹಿಂದಿನ ಉದ್ದೇಶ ಏನು? ಈ ಮಸೂದೆಯಿಂದ ಉಂಟಾಗುವ ಸವಾಲುಗಳೇನು? ಎಂಬುದನ್ನು ತಿಳಿಯೋಣ… ಅದಕ್ಕೂ ಮುನ್ನ ಈ ಮಸೂದೆ ರಚಿಸಲು ಮೂಲ ಕಾರಣ ಏನು ಎಂಬುದನ್ನು ತಿಳಿಯೋಣ.
ಹೊಸ ಮಸೂದೆ ತರಲು ಕಾರಣ ಏನು?
ಈ ಹಿಂದೆ ದೆಹಲಿಯ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ತಮಿಳುನಾಡಿನ ಸಚಿವ ವಿ. ಸೆಂಥಿಲ್ ಬಾಲಾಜಿ ಅವರಂತವರು ಗಂಭೀರ ಆರೋಪಗಳಲ್ಲಿ ಅರೆಸ್ಟ್ ಆಗಿ ಜೈಲಿನಲ್ಲಿದ್ದರು. ಈ ವೇಳೆ ವಿಕ್ಷಗಳು ರಾಜೀನಾಮೆ ನೀಡುವಂತೆ ಪಟ್ಟು ಹಿಡಿದಿದ್ದವು. ಆದ್ರೆ ತಿಂಗಳಾನುಗಟ್ಟಲೆ ಜೈಲು ಸೇರಿದ್ದ ಹೊರತಾಗಿಯೂ ಹುದ್ದೆಗೆ ರಾಜೀನಾಮೆ ನೀಡದೇ ಹುದ್ದೆಯಲ್ಲಿ ಮುಂದುವರಿದಿದ್ದರು. ಮದ್ಯನೀತಿ ಹಗರಣದಲ್ಲಿ ಜೈಲು ಸೇರಿದ್ದ ಕೇಜ್ರಿವಾಲ್ 6 ತಿಂಗಳ ಕಾಲ ಜೈಲಿನಿಂದಲೇ ಅಧಿಕಾರ ನಡೆಸಿದ್ದರು, ಆದೇಶಗಳನ್ನ ಪಾಸ್ ಮಾಡಿದ್ದರು. ಇಂತಹ ಪ್ರಕರಣಗಳು ಮತ್ತೆ ಮರುಕಳಿಸುವುದನ್ನು ತಡೆಯಲು ಹಾಗೂ ಜನರ ಆಯ್ಕೆಯ ವಿಶ್ವಾಸ ಉಳಿಸಿಕೊಳ್ಳುವ ಉದ್ದೇಶದಿಂದ ಈ ಮಸೂದೆಯನ್ನ ಪರಿಚಯಿಸಲಾಗಿದೆ.
ರಾಹುಲ್ ಗಾಂಧಿ ಪ್ರಕರಣದಲ್ಲಿ ಏನಾಗಿತ್ತು?
2019ರ ಲೋಕಸಭಾ ಚುನಾವಣೆ ವೇಳೆ ಮೋದಿ ಉಪನಾಮಕ್ಕೆ ಸಂಬಂಧಿಸಿದ ಮಾನಹಾನಿ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸೂರತ್ ನ್ಯಾಯಾಲಯ 2 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಜನಪ್ರತಿನಿಧಿ ಕ್ರಿಮಿನಲ್ ಪ್ರಕರಣ ಪ್ರಕಾರ ಸಂಸತ್ ಸದಸ್ಯತ್ವವನ್ನೂ ರದ್ದುಗೊಳಿಸಲಾಗಿತ್ತು. ಇನ್ನೇನು ಜೈಲು ಸೇರುತ್ತಾರೆ ಎಂದೇ ಭಾವಿಸಲಾಗಿತ್ತು. ಅಷ್ಟರಲ್ಲಿ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯತ್ವ ಪೀಠ ತಡೆ ನೀಡಿತ್ತು. ಲೋಕಸಭೆ ಸದಸ್ಯತ್ವ ಮರುಸ್ಥಾಪನೆಗೊಂಡಿತು. ಆದ್ರೆ ಪರಿಚಯಿಸಲಾದ ಪದಚ್ಯುತಿ ಮಸೂದೆಯಲ್ಲಿ 5 ವರ್ಷ ಶಿಕ್ಷೆಗೆ ಗುರಿಯಾಗುವ ಅಪರಾಧದಲ್ಲಿ 30 ದಿನಗಳ ಕಾಲ ಜೈಲಿನಲ್ಲಿದ್ದರೆ ಕುರ್ಚಿ ಕಳೆದುಕೊಳ್ಳಲಿದ್ದಾರೆ.
ಆ ಮೂರು ಮಸೂದೆಗಳು ಯಾವುವು?
* ಸಂವಿಧಾನ (130ನೇ ತಿದ್ದುಪಡಿ) ಮಸೂದೆ 2025
* ಕೇಂದ್ರಾಡಳಿತ ಸರ್ಕಾರ (ತಿದ್ದುಪಡಿ) ಮಸೂದೆ
* ಜಮ್ಮು ಮತ್ತು ಕಾಶ್ಮೀರ ಪುನರ್‌ರಚನೆ (ತಿದ್ದುಪಡಿ) ಮಸೂದೆ- 2025
ಯಾರ‍್ಯಾರಿಗೆ ಅನ್ವಯ?
* ಭಾರತದ ಪ್ರಧಾನ ಮಂತ್ರಿ
* ರಾಜ್ಯಗಳ & ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು
* ಕೇಂದ್ರ ಸಚಿವರು
* ರಾಜ್ಯ & ಕೇಂದ್ರಾಡಳಿತ ಪ್ರದೇಶಗಳ ಸಚಿವರು
ಪದಚ್ಯುತಿಗೆ ಕಾರಣ ಏನು?
* ಕನಿಷ್ಠ 5 ವರ್ಷ, ಅದಕ್ಕಿಂತ ಹೆಚ್ಚು ಜೈಲು ಶಿಕ್ಷೆಗೆ ಅರ್ಹವಾದ ಗಂಭೀರ ಅಪರಾಧದ ಆರೋಪದ ಮೇಲೆ ಬಂಧನ.
* ಸತತವಾಗಿ 30 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿ ಇರುವುದು.
ಮಸೂದೆಯಲ್ಲಿ ಏನಿದೆ?
* ಗಂಭೀರ ಸ್ವರೂಪದ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾದ ಆರೋಪದ ಮೇಲೆ ಪ್ರಧಾನಿ, ಮುಖ್ಯಮಂತ್ರಿ, ಕೇಂದ್ರ ಅಥವಾ ರಾಜ್ಯಗಳ ಸಚಿವರನ್ನು ಬಂಧಿಸಿ, ನ್ಯಾಯಾಂಗ ಬಂಧನದಲ್ಲಿ ಇರಿಸಿದಾಗ ಅಂಥಹವರನ್ನು ಹುದ್ದೆಗಳಿಂದ ಪದಚ್ಯುತಿಗೊಳಿಸುವ ಪ್ರಕ್ರಿಯೆಗೆ ಕಾನೂನು ಚೌಕಟ್ಟು ವಿಧಿಸಲು ಈ ಮಸೂದೆಗಳನ್ನು ರೂಪಿಸಲಾಗಿದೆ.
* 30 ದಿನಗಳ ಕಾಲ ನಿರಂತರ ಬಂಧನದಲ್ಲಿದ್ದವರನ್ನ 31ನೇ ದಿನ ಪದಚ್ಯುತಿಗೊಳಿಸಲು ಅವಕಾಶ ಕಲ್ಪಿಸಲಾಗುತ್ತದೆ.
* ಬಂಧನದಿಂದ ಬಿಡುಗಡೆ ಆದವರನ್ನ ಪ್ರಧಾನಮಂತ್ರಿ, ಮುಖ್ಯಮಂತ್ರಿ ಅಥವಾ ಸಚಿವರನ್ನಾಗಿ ನೇಮಿಸಲು ಯಾವುದೇ ನಿರ್ಬಂಧ ಇರುವುದಿಲ್ಲ.
* ಇದಕ್ಕಾಗಿ ಸಂವಿಧಾನದ 75ನೇ ವಿಧಿಗೆ ಸೆಕ್ಷನ್ 5(ಎ) ಅನ್ನು ಸೇರ್ಪಡೆ ಮಾಡಲಾಗುತ್ತಿದೆ.
* ಪ್ರಧಾನಿಯು, ಶಿಫಾರಸು ಮಾಡದಿದ್ದರೂ ಅಂಥಹ ಸಚಿವರು 31ನೇ ದಿನದಂದು ಅಧಿಕಾರ ಕಳೆದುಕೊಳ್ಳುತ್ತಾರೆ.
* ಇದೇ ನಿಯಮ ರಾಜ್ಯಗಳಲ್ಲಿ ಮುಖ್ಯಮಂತ್ರಿ ಹಾಗೂ ಸಚಿವರಿಗೆ ಅನ್ವಯಿಸಲಿದೆ.
* ರಾಜ್ಯಗಳಲ್ಲಿ ರಾಜ್ಯಪಾಲರು ಪದಚ್ಯುತಗೊಳಿಸುವ ಅಧಿಕಾರ ಹೊಂದಿರುತ್ತಾರೆ.
* ದೆಹಲಿ ಮತ್ತು ಇತರ ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದಂತೆ ರಾಷ್ಟ್ರಪತಿಯವರು ಹಾಗೂ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಅಲ್ಲಿನ ಲೆಫ್ಟಿನೆಂಟ್ ಗವರ್ನರ್ ಅವರು ಸಕ್ಷಮ ಪ್ರಾಧಿಕಾರಿಗಳಾಗಿರುತ್ತಾರೆ.
* ಹಾಲಿ ಇರುವ ನಿಯಮಗಳ ಅನ್ವಯ, ಯಾವುದೇ ಜನಪ್ರತಿನಿಧಿ ಕ್ರಿಮಿನಲ್ ಪ್ರಕರಣಗಳಲ್ಲಿ 2 ವರ್ಷಕ್ಕಿಂತ ಹೆಚ್ಚಿನ ಶಿಕ್ಷೆಗೆ ಗುರಿಯಾದರೆ ಮಾತ್ರವೇ ತಮ್ಮ ಜನಪ್ರತಿನಿಧಿ ಸ್ಥಾನಮಾನ ಕಳೆದುಕೊಳ್ಳುತ್ತಾರೆ. ಜೊತೆಗೆ ಶಿಕ್ಷೆ ಮುಗಿದ ಬಳಿಕ ಮತ್ತೆ 5 ವರ್ಷ ಕಾಲ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಇಲ್ಲ.
ಪಿಎಂ, ಸಿಎಂಗಳನ್ನ ಕೆಳಗಿಳಿಸೋದು ಹೇಗೆ?
ಈ ಮಸೂದೆಯ ಅನ್ವಯ ನೋಡಿದ್ರೆ, ಪ್ರಧಾನ ಮಂತ್ರಿಯವರೇ ಸತತ 30 ದಿನಗಳ ಕಾಲ ಬಂಧನದಲ್ಲಿದ್ದರೆ, ಅವರು 31ನೇ ದಿನದೊಳಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಒಂದು ವೇಳೆ ರಾಜೀನಾಮೆ ನೀಡದಿದ್ದರೆ, 31ನೇ ದಿನದ ನಂತರ ಅವರ ಹುದ್ದೆಯು ಸ್ವಯಂಚಾಲಿತವಾಗಿ ರದ್ದಾಗುತ್ತದೆ.
ಅದೇ ರೀತಿ, ರಾಜ್ಯದ ಮುಖ್ಯಮಂತ್ರಿಯೊಬ್ಬರು ಸತತ 30 ದಿನ ಜೈಲಿನಲ್ಲಿದ್ದರೆ, 31ನೇ ದಿನದೊಳಗೆ ರಾಜೀನಾಮೆ ನೀಡಲೇಬೇಕು. ಇಲ್ಲದಿದ್ದರೆ, ಅವರ ಪದವಿಯೂ ಸ್ವಯಂಚಾಲಿತವಾಗಿ ಕೊನೆಗೊಳ್ಳುತ್ತದೆ. ಅದೇ ರೀತಿ, ರಾಜ್ಯದ ಮುಖ್ಯಮಂತ್ರಿಯೊಬ್ಬರು ಸತತ 30 ದಿನ ಜೈಲಿನಲ್ಲಿದ್ದರೆ, 31ನೇ ದಿನದೊಳಗೆ ರಾಜೀನಾಮೆ ನೀಡಲೇಬೇಕು. ಇಲ್ಲದಿದ್ದರೆ, ಅವರ ಪದವಿಯೂ ಸ್ವಯಂಚಾಲಿತವಾಗಿ ಕೊನೆಗೊಳ್ಳುತ್ತದೆ.
ಸಚಿವರ ವಿಷಯದಲ್ಲಿ ಪ್ರಕ್ರಿಯೆ ಹೇಗೆ?
ಸಚಿವರ ವಿಷಯದಲ್ಲಿ ಕೇಂದ್ರ ಸಚಿವರಾಗಿದ್ದರೆ, ಪ್ರಧಾನ ಮಂತ್ರಿಯವರ ಸಲಹೆಯ ಮೇರೆಗೆ ರಾಷ್ಟ್ರಪತಿಗಳು ಅವರನ್ನು ಪದಚ್ಯುತಿಗೊಳಿಸುತ್ತಾರೆ. ಒಂದು ವೇಳೆ, 30 ದಿನ ಕಳೆದರೂ ಪ್ರಧಾನ ಮಂತ್ರಿಯವರು ಸಲಹೆ ನೀಡದಿದ್ದರೆ, 31ನೇ ದಿನದಂದು ಆ ಸಚಿವರ ಹುದ್ದೆಯು ಸ್ವಯಂಚಾಲಿತವಾಗಿ ರದ್ದಾಗುತ್ತದೆ. ರಾಜ್ಯದಲ್ಲಿ ಸಿಎಂ ಸಲಹೆ ಮೇರೆಗೆ ರಾಜ್ಯಪಾಲರು ಅವರನ್ನು ಪದಚ್ಯುತಗೊಳಿಸುತ್ತಾರೆ. ಸಿಎಂ ಸಲಹೆ ನೀಡದಿದ್ದರೆ, 31ನೇ ದಿನ ಆಟೋಮ್ಯಾಟಿಕ್ ಆಗಿ ಅವರ ಪದವಿ ರದ್ದಾಗುತ್ತದೆ.
ಒಟ್ಟಿನಲ್ಲಿ ಹೊಸ ಮಸೂದೆಗಳನ್ನು ಕೇಂದ್ರ ಸರ್ಕಾರವು ಸಮರ್ಥಿಸಿಕೊಂಡಿದೆ. ಈ ಮಸೂದೆಗಳಲ್ಲಿ ಸಾರ್ವಜನಿಕ ಹಿತ ಅಡಗಿದೆ, ಚುನಾಯಿತ ಪ್ರತಿನಿಧಿಗಳು ಪ್ರಾಮಾಣಿಕರಾಗಿ ಹಾಗೂ ಅನುಮಾನಗಳಿಗೆ ಅತೀತರಾಗಿ ಇರಬೇಕಾದ್ದರ ಅಗತ್ಯ ಇದೆ ಎಂದು ಹೇಳಿದೆ. ಆದ್ರೆ, ನರೇಂದ್ರ ಮೋದಿ ನೇತೃತ್ವದ ಸರ್ಕಾರದ ನಡೆಗಳನ್ನು ಗಮನಿಸಿ ಹೇಳುವುದಾದ್ರೆ, ನೈತಿಕ ನೆಲೆಗಟ್ಟಿನ ಈ ವಾದಗಳು ರಾಜಕೀಯ ವಿರೋಧಿಗಳ ವಿರುದ್ಧ ಕ್ರಮ ಜರುಗಿಸುವುದಕ್ಕೆ ಒಂದು ನೆಪವಾಗಿ ಬರುತ್ತವೆ. ಅಷ್ಟೇ. ಕಾನೂನು ಪ್ರಕ್ರಿಯೆಗಳ ನಿಧಾನಗತಿ ಹಾಗೂ ಶಿಕ್ಷೆಯ ಪ್ರಮಾಣ ಕಡಿಮೆ ಇರುವುದನ್ನು ಗಮನಿಸಿ ಕೇಂದ್ರ ಸರ್ಕಾರವು ತನ್ನ ವಿರೋಧಿಗಳ ವಿರುದ್ಧ ತ್ವರಿತವಾಗಿ ಕ್ರಮ ಜರುಗಿಸುವುದಕ್ಕೆ ಈ ಹೆಜ್ಜೆ ಇರಿಸಿರಬಹುದು. ಈ ಮಸೂದೆಗಳು ಭ್ರಷ್ಟಾಚಾರವನ್ನು ಕೊನೆಗೊಳಿಸುವುದಿಲ್ಲ, ಇವು ವಿರೋಧ ಪಕ್ಷಗಳನ್ನು ದುರ್ಬಲಗೊಳಿಸುತ್ತವೆ ಅನ್ನೋದು ಕಾನೂನು ತಜ್ಞರು ಹಾಗೂ ವಿಪಕ್ಷಗಳ ವಾದ.
ನವದೆಹಲಿ: ಹೊಸ ಸಂಸತ್ ಭವನದ (Parliament) ಆರು ದ್ವಾರಗಳಲ್ಲಿ ಒಂದಾದ ಮತ್ತು ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಹೆಚ್ಚಾಗಿ ಬಳಸುವ ಗಜ ದ್ವಾರದ (Gaj Dwar) ಬಳಿ ಇರುವ ಟ್ಯಾಬೆಬುಯಾ ಅರ್ಜೆಂಟಿಯಾ ಮರವೊಂದು ಭದ್ರತೆಗೆ ಭಾರೀ ಸವಾಲಾಗಿದೆ. ಭದ್ರತೆಗೆ ಸಮಸ್ಯೆಯಾದ ಈ ಮರವನ್ನು ವಿಶೇಷ ರಕ್ಷಣಾ ತಂಡ (ಎಸ್‌ಪಿಜಿ) ಗುರುತಿಸಿದ್ದು, ಮರವನ್ನು ಬೇರೆಡೆಗೆ ಸ್ಥಳಾಂತರಿಸಲು ಸೂಚಿಸಿದೆ.
ಅಧಿಕೃತ ಮಾಹಿತಿ ಪ್ರಕಾರ, ನಂಬರ್ 01 ಎಂದು ಗುರುತಿಸಲಾದ ಮರವು ವಿವಿಐಪಿ ಮಾರ್ಗದಲ್ಲಿ ಸಂಭಾವ್ಯ ಭದ್ರತಾ ಅಡಚಣೆಯನ್ನು ಉಂಟುಮಾಡುತ್ತಿದೆ ಎಂದು ಎಸ್‌ಪಿಜಿ ಹೇಳಿದೆ. ಇದಕ್ಕಾಗಿ ಮರವನ್ನು ಬೇರೆಡೆಗೆ ಸ್ಥಳಾಂತರಿಸಲು ಕೇಂದ್ರ ಲೋಕೋಪಯೋಗಿ ಇಲಾಖೆ (ಸಿಪಿಡಬ್ಲ್ಯೂಡಿ) ಅರಣ್ಯ ಇಲಾಖೆಯಿಂದ (Forest Department) ಅನುಮೋದನೆ ಕೋರಿದೆ. ಇನ್ನೂ ಅಧಿವೇಶನ ಮುಗಿದ ನಂತರ ಮರದ ಸ್ಥಳಾಂತರ ನಡೆಯುವ ಸಾಧ್ಯತೆಯಿದೆ. ಇದನ್ನೂ ಓದಿ: ಸಂಸತ್ ಭವನದಲ್ಲಿ ಮತ್ತೆ ಭದ್ರತಾ ವೈಫಲ್ಯ – ಗೋಡೆ ಹಾರಿ ಆವರಣಕ್ಕೆ ಎಂಟ್ರಿ
ಸ್ಥಳಾಂತರ ಮಾಡಲಾಗುವ ಮರವನ್ನು ರಾಷ್ಟ್ರೀಯ ನಾಯಕರು ಮತ್ತು ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆಗಳಿರುವ (ಪ್ರೇರಣಾ ಸ್ಥಳ) ಸಂಸತ್ತಿನ ಸಂಕೀರ್ಣದೊಳಗೆ ನೆಡಲಾಗುತ್ತದೆ. ಸರಿಸುಮಾರು ಏಳು ವರ್ಷ ಹಳೆಯದಾದ ಈ ಮರ, ಕನಿಷ್ಠ ಆರೈಕೆ ಮತ್ತು ಸೂರ್ಯನ ಬೆಳಕು ಬೀಳುವ ಪ್ರದೇಶದಲ್ಲೂ ಚೆನ್ನಾಗಿ ಬೆಳೆಯಬಲ್ಲದು.
ಮರ ಸ್ಥಳಾಂತರ ನಿಯಮಗಳ ಅನುಸಾರವಾಗಿ, ಈ ಮರವನ್ನು ಸ್ಥಳಾಂತರಿಸಿದ ಸುತ್ತ-ಮುತ್ತ ಬೇವು, ಅಮಲ್ತಾಸ್, ಪೀಪಲ್, ಬರ್ಗಡ್, ಶೀಶಮ್ ಮತ್ತು ಅರ್ಜುನ್‌ನಂತಹ ಸ್ಥಳೀಯ ಜಾತಿಗಳ 10 ಸಸಿಗಳನ್ನು ನೆಡಲು ಸಿಪಿಡಬ್ಲ್ಯೂಡಿ ಸಿದ್ಧವಿದೆ.
ಸಿಪಿಡಬ್ಲ್ಯೂಡಿ ಈಗಾಗಲೇ ಅರಣ್ಯ ಇಲಾಖೆಗೆ 57,000 ರೂ. ಮರುಪಾವತಿಸಬಹುದಾದ ಭದ್ರತಾ ಠೇವಣಿಯನ್ನೂ ಪಾವತಿಸಿದೆ. ಇನ್ನೂ ನೆಟ್ಟ ಸಸಿಗಳ ಜಿಯೋ-ಟ್ಯಾಗಿಂಗ್, ಏಳು ವರ್ಷಗಳವರೆಗೆ ಅವುಗಳ ನಿರ್ವಹಣೆ ಮತ್ತು ವಾರ್ಷಿಕ ಪ್ರಗತಿ ವರದಿಗಳನ್ನು ಸಲ್ಲಿಸುವುದು ಸಹ ಮರ ಸ್ಥಳಾಂತರದ ನಿಯಮದ ಅಡಿ ಬರುತ್ತದೆ. ಇದನ್ನೂ ಓದಿ: ಸಂಸತ್‌ನಲ್ಲಿ ಭದ್ರತಾ ಲೋಪ- 6ನೇ ಆರೋಪಿ ಅರೆಸ್ಟ್
ನವದೆಹಲಿ: ದೆಹಲಿಯಲ್ಲಿರುವ ಸಂಸತ್ ಭವನದಲ್ಲಿ (Parliament) ಮತ್ತೊಮ್ಮೆ ಭದ್ರತಾ ಉಲ್ಲಂಘನೆಯಾಗಿದೆ. ಶುಕ್ರವಾರ ಬೆಳಗ್ಗೆ ವ್ಯಕ್ತಿಯೊಬ್ಬ ಮರವನ್ನು ಹತ್ತಿ ಗೋಡೆ ಏರುವ ಮೂಲಕ ಸಂಸತ್ತಿನ ಭವನದ ಆವರಣವನ್ನು (Security Breach) ಪ್ರವೇಶಿಸಿದ್ದಾನೆ.
ಈ ಘಟನೆ ಬೆಳಿಗ್ಗೆ 6:30 ರ ಸುಮಾರಿಗೆ ನಡೆದಿದೆ. ರೈಲ್ ಭವನದ ಕಡೆಯಿಂದ ಗೋಡೆ ಮೇಲೆ ಹಾರಿದ್ದ ವ್ಯಕ್ತಿ ಹೊಸ ಸಂಸತ್ತಿನ ಕಟ್ಟಡದ ಗರುಡ ಗೇಟ್ ಅನ್ನು ತಲುಪಿದ್ದ.
ಕಳೆದ ವರ್ಷ 20 ರ ಹರೆಯದ ವ್ಯಕ್ತಿಯೊಬ್ಬ ಸಂಸತ್ತಿನ ಗೋಡೆಯನ್ನು ಹತ್ತಿ ಅನೆಕ್ಸ್ ಕಟ್ಟಡದ ಆವರಣದೊಳಗೆ ಹಾರಿದಾಗ ಇದೇ ರೀತಿಯ ಭದ್ರತಾ ಉಲ್ಲಂಘನೆಯ ಘಟನೆ ಸಂಭವಿಸಿತ್ತು.
2023 ರಲ್ಲಿ ಲೋಕಸಭೆಯಲ್ಲಿ ಕಲಾಪ ನಡೆಯುತ್ತಿದ್ದಾಗಲೇ ಸಾಗರ್ ಶರ್ಮಾ ಮತ್ತು ಮನೋರಂಜನ್ ಡಿ ಸಾರ್ವಜನಿಕ ಗ್ಯಾಲರಿಯಿಂದ ಕೆಳಗೆ ಧುಮುಕಿದ್ದರು. ಇನ್ನಿಬ್ಬರು ಸಂಸತಿನ ಹೊರಗಿನ ಆವರಣದಲ್ಲಿ ಸ್ಮೋಕ್ ಬಾಂಬ್ ಸಿಡಿಸಿದ್ದರು. ಈ ನಾಲ್ವರನ್ನೂ ನಂತರ ಭದ್ರತಾ ಸಿಬ್ಬಂದಿ ಬಂಧಿಸಿದ್ದರು.
– ಶುಭಾಂಶು ಶುಕ್ಲಾ ಬಾಹ್ಯಾಕಾಶ ಯಾನ ಚರ್ಚೆ ಬಹಿಷ್ಕಾರಕ್ಕೂ ನಿರ್ಧಾರ
ನವದೆಹಲಿ: ಮತ ಕಳ್ಳತನ ಆರೋಪದ ಮೇಲೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ (Gyanesh Kumar) ವಿರುದ್ಧ ಸಂಸತ್ತಿನಲ್ಲಿ ಮಹಾಭಿಯೋಗ (Impeachment) ಪ್ರಸ್ತಾವನೆ ಮಂಡಿಸಲು ವಿರೋಧ ಪಕ್ಷಗಳ ಇಂಡಿಯಾ (INDIA) ಮೈತ್ರಿಕೂಟ ಸಿದ್ಧತೆ ಮಾಡಿಕೊಳ್ಳುತ್ತಿವೆ.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಮತ್ತು ಮತ ಕಳ್ಳತನದ (Vote Theft) ವಿರುದ್ಧ ವಿರೋಧ ಪಕ್ಷಗಳು ಪ್ರತಿಭಟನೆಯನ್ನು ತೀವ್ರಗೊಳಿಸುತ್ತಿದೆ. ಈ ಮಧ್ಯೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ದೋಷಾರೋಪಣೆ ಮಾಡಲು ಇಂಡಿಯಾ ಮೈತ್ರಿಕೂಟ ನಿರ್ಧರಿಸಿದೆ. ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ನಡೆದ ಇಂಡಿಯಾ ಮೈತ್ರಿಕೂಟದ ನಾಯಕರ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಸಿಎಂ ವಿರುದ್ಧ 24 ಕೊಲೆಗಳ ಆರೋಪ – ಯಾವುದೇ ಕ್ಷಣದಲ್ಲಿ ತಿಮರೋಡಿ ಬಂಧನ ಸಾಧ್ಯತೆ
ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿರೋಧ ಪಕ್ಷದ ನಾಯಕರೊಬ್ಬರು, ಇಂಡಿಯಾ ಮೈತ್ರಿಕೂಟದ ಎಲ್ಲಾ ಸದಸ್ಯರು ಈ ಪ್ರಸ್ತಾಪವನೆಗೆ ಒಪ್ಪಿಗೆ ಸೂಚಿಸಿದ್ದಾರೆ. ಕಾನೂನು ವಿಧಾನಗಳ ಕುರಿತು ಶೀಘ್ರದಲ್ಲೇ ಚರ್ಚೆ ನಡೆಯಲಿದೆ. ಈ ಪ್ರಕ್ರಿಯೆಯು ನ್ಯಾಯಾಧೀಶರ ಮಹಾಭಿಯೋಗದಂತೆಯೇ ಇರಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರೈಲು ಪ್ರಯಾಣಿಕರ ಗಮನಕ್ಕೆ; ಆ.24ರಂದು ಈ ರೈಲುಗಳ ಸಂಚಾರ ರದ್ದು
ಈ ನಡುವೆ ಗಗನಯಾತ್ರಿ ಶುಭಾಂಶು ಶುಕ್ಲಾ ಅವರ ಬಾಹ್ಯಾಕಾಶ ಯಾನ, ಪರಿಣಾಮದ ಕುರಿತು ಲೋಕಸಭೆಯಲ್ಲಿ 2 ದಿನಗಳ ಕಾಲ ವಿಶೇಷ ಚರ್ಚೆ ನಡೆಯಲಿದ್ದು, ಈ ವಿಶೇಷ ಚರ್ಚೆಯಲ್ಲಿ ಸರ್ಕಾರದೊಂದಿಗೆ ಸಹಕರಿಸದಿರಲು ವಿರೋಧ ಪಕ್ಷಗಳು ನಿರ್ಧರಿಸಿವೆ. ವಿಶೇಷ ಚರ್ಚೆಯಲ್ಲಿ ಭಾಗವಹಿಸದಿರಲು ಮತ್ತು ಪ್ರತಿಭಟನೆಗಳನ್ನು ಮುಂದುವರಿಸಲು ನಿರ್ಧರಿಸಿದ್ದೇವೆಂದು ವಿಪಕ್ಷಗಳ ನಾಯಕರು ತಿಳಿಸಿದ್ದಾರೆ. ಇದನ್ನೂ ಓದಿ: ಯೆಲ್ಲೋ ಮೆಟ್ರೋ ಸವಾರರಿಗೆ ಗುಡ್‌ನ್ಯೂಸ್ – ಶೀಘ್ರವೇ 15 ನಿಮಿಷಕ್ಕೊಂದು ರೈಲು ಸಂಚಾರ
ನವದೆಹಲಿ: ʻಆಪರೇಷನ್ ಸಿಂಧೂರʼ ಕಾರ್ಯಾಚರಣೆ ಬಳಿಕ ಬಿಜೆಪಿ ನೇತೃತ್ವದ ಎನ್‌ಡಿಎ ನಿಯೋಗ ನಡೆಸಿದ ಮೊದಲ ಸಂಸದೀಯ ಸಭೆಯಲ್ಲಿ (NDA Meeting) ಪ್ರಧಾನಿ ನರೇಂದ್ರ ಮೋದಿ (PM Modi) ಅವರನ್ನು ಸನ್ಮಾನಿಸಲಾಯಿತು.
ಸಂಸತ್ ಭವನದಲ್ಲಿ ಇಂದು ನಡೆದ ಸಂಸದೀಯ ಸಭೆಯಲ್ಲಿ, ಆಪರೇಷನ್ ಸಿಂಧೂರ (Operation Sindoor) ಯಶಸ್ಸಿಗಾಗಿ ʻಜೈ ಶ್ರೀರಾಮ್, ಹರಹರ ಮಹದೇವ್ (Operation Mahadev), ಭಾರತ್ ಮಾತಾಕಿ ಜೈʼ ಎಂಬಿತ್ಯಾದಿ ಘೋಷಣೆಗಳ ನಡುವೆ ಪ್ರಧಾನಿ ಮೋದಿ ಅವರನ್ನ ಸನ್ಮಾನಿಸಲಾಯಿತು. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಪ್ರಧಾನಿಗಳಿಗೆ ಹಾರ ಹಾಕಿ ಗೌರವಿಸಿದರು. ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ (JP Nadda) ಸೇರಿದಂತೆ ಎನ್‌ಡಿಎ ಸಂಸದರು ಈ ಸಂತಸದ ಕ್ಷಣಕ್ಕೆ ಸಾಕ್ಷಿಯಾದರು. ಇದನ್ನೂ ಓದಿ: ಪಾಕ್ ಪರ ಬೇಹುಗಾರಿಕೆ – ಮತ್ತೊಬ್ಬ ಶಂಕಿತನ ಬಂಧನ
ಇನ್ನೂ ಸಭೆಯನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಲಿದ್ದು, ಆಗಸ್ಟ್ 15ರಂದು ನಡೆಯಲಿರುವ ತಿರಂಗಾ ಯಾತ್ರೆ, ವಿಪಕ್ಷಗಳ ವಿರುದ್ಧದ ಕಾರ್ಯತಂತ್ರದ ಬಗ್ಗೆಯೂ ಚರ್ಚಿಸುವ ಸಾಧ್ಯತೆಗಳಿವೆ. ಅಲ್ಲದೇ ಆಗಸ್ಟ್ 7ರಿಂದಲೇ ಉಪರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಶುರುವಾಗಲಿದ್ದು, ಎನ್‌ಡಿಎ ಅಭ್ಯರ್ಥಿ ಆಯ್ಕೆ ಬಗ್ಗೆಯೂ ಮಾತನಾಡಲಿದ್ದಾರೆ ಎಂದು ತಿಳಿದುಬಂದಿದೆ.
ನವದೆಹಲಿ: ವಿಪಕ್ಷಗಳ ಪಟ್ಟಿನಂತೆ ಲೋಕಸಭೆಯಲ್ಲಿ (Lok Sabha) ಆಪರೇಷನ್ ಸಿಂಧೂರ, ಟ್ರಂಪ್ ಮಧ್ಯಸ್ಥಿಕೆ ಬಗ್ಗೆ ಚರ್ಚೆ ನಡೆಯುತ್ತಿದೆ. ಸುಮಾರು 16 ಗಂಟೆಗಳ ಈ ಮೆಗಾ ಡಿಬೇಟ್‌ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಮೊದಲು ಸ್ಪಷ್ಟನೆ ಕೊಟ್ಟಿದ್ದಾರೆ. ಇದಕ್ಕೆ ವಿಪಕ್ಷಗಳಿಂದ ಟೀಕೆಯೂ ಕೇಳಿಬಂದಿತು. ಸಂಸತ್‌ನಲ್ಲಿ ಆಡಳಿತ-ವಿಪಕ್ಷಗಳ ನಡುವೆ ಕೋಲಾಹಲವೇ ಎದ್ದಿತ್ತು. ಆಪರೇಷನ್ ಸಿಂಧೂರ ಚರ್ಚೆಯಲ್ಲಿ ಪ್ರಧಾನಿ ಮೋದಿ (Narendra Modi) ಭಾಗಿಯಾಗಲಿದ್ದು, ವಿಪಕ್ಷಗಳಿಗೆ ಉತ್ತರ ಕೊಡುವ ಸಾಧ್ಯತೆಯಿದೆ.
ಆಪರೇಷನ್ ಸಿಂಧೂರ (Operation Sindoor) ವಿಚಾರದಲ್ಲಿ ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ವಿವರಣೆ ನೀಡುವ ಸಾಧ್ಯತೆಯಿದೆ. ಈಗಾಗಲೇ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಜೈ ಶಂಕರ್, ಅಮಿತ್ ಶಾ ಸೇರಿದಂತೆ ಹಲವರು ಆಪರೇಷನ್ ಸಿಂಧೂರದ ಬಗ್ಗೆ ವಿವರಣೆ ನೀಡಿದ್ದಾರೆ. ಇಂದು ಪ್ರಧಾನಿ ಮೋದಿ ಈ ಬಗ್ಗೆ ವಿವರ ಕೊಡಲಿದ್ದಾರೆ ಎಂದು ಸಂಸತ್ ಮೂಲಗಳು ತಿಳಿಸಿವೆ. ಇಂದು ಮಧ್ಯಾಹ್ನ 12 ಗಂಟೆಯಿಂದ ಚರ್ಚೆ ಶುರುವಾಗಲಿದ್ದು, ಅಮಿತ್ ಶಾ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಕೂಡ ಮಾತನಾಡಲಿದ್ದಾರೆ. ಆ ಬಳಿಕ ಸಂಜೆ 5 ಗಂಟೆಗೆ ಮೋದಿ ಉತ್ತರ ಕೊಡಲಿದ್ದಾರೆ. ಇದನ್ನೂ ಓದಿ: ನಾವೆಷ್ಟು ಪಾಕಿಸ್ತಾನಿ ವಿಮಾನಗಳನ್ನ ಹೊಡೆದಿದ್ದೇವೆ ಅಂತ ಯಾರೊಬ್ಬರೂ ಕೇಳಲಿಲ್ಲ – ಸಂಸತ್‌ನಲ್ಲಿ ರಾಜನಾಥ್ ಸಿಂಗ್ ಬೇಸರ
ಸಿಂಧೂರ ಸಮರ – ಸದನ ಕೋಲಾಹಲ
ಪಹಲ್ಗಾಮ್ ಮತ್ತು ಆಪರೇಷನ್ ಸಿಂಧೂರ ಚರ್ಚೆಗೆ ನಾಂದಿ ಹಾಡಿದ ರಾಜನಾಥ್ ಸಿಂಗ್ ಸಂಪೂರ್ಣ ಕಾರ್ಯಾಚರಣೆಯ ವಿಚರಣೆ ನೀಡಿದ್ದರು. ಪಹಲ್ಗಾಮ್ ಉಗ್ರದಾಳಿಗೆ ಪ್ರತೀಕಾರವಾಗಿ ಭಯೋತ್ಪಾದಕ ನೆಲೆಗಳನ್ನು ಧ್ವಂಸ ಮಾಡುವುದು ನಮ್ಮ ಉದ್ದೇಶವಾಗಿತ್ತು. ಪಾಕಿಸ್ಥಾನದ 9 ಉಗ್ರ ನೆಲೆಗಳ ಮೇಲೆ ನಿಖರ ದಾಳಿ ಮಾಡಿ, 100ಕ್ಕೂ ಹೆಚ್ಚು ಉಗ್ರರನ್ನು ಕೊಂದಿದ್ದೇವೆ. ಪಾಕಿಸ್ಥಾನದ ದಾಳಿ ವೇಳೆ ಭಾರತದ ಆತ್ಮರಕ್ಷಣೆಯ ಪ್ರತಿದಾಳಿಯಾಗಿತ್ತು. ನಮ್ಮ ದಾಳಿಗೆ ಹೆದರಿದ ಪಾಕಿಸ್ಥಾನ ದಾಳಿಯನ್ನು ನಿಲ್ಲಿಸುವಂತೆ ಗೋಗರೆಯಿತು. ಪರೀಕ್ಷೆಯಲ್ಲಿ ಫಲಿತಾಂಶ ಮುಖ್ಯ, ಪರೀಕ್ಷೆಯ ಸಮಯದಲ್ಲಿ ಪೆನ್ನು ಪೆನ್ಸಿಲ್ ಮುರಿದು ಹೋಯ್ತಾ ಎನ್ನುವುದು ಪ್ರಶ್ನೆಯಲ್ಲ. ಪರೀಕ್ಷೆಯಲ್ಲಿ ಎಷ್ಟು ಮಾರ್ಕ್ಸ್ ಬಂತು ಅನ್ನೋದು ಬಹಳ ಮುಖ್ಯ ಅಂದರು. ಇದನ್ನೂ ಓದಿ: ಉಗ್ರರು ಬಂದಿದ್ದು ಹೇಗೆ ಅಂತ ರಾಜನಾಥ್ ಸಿಂಗ್ ಮಾಹಿತಿಯೇ ನೀಡಲಿಲ್ಲ: ಕಾಂಗ್ರೆಸ್ ಮುಖಂಡ ಗೌರವ್ ಗೊಗೊಯ್
ಕಾಂಗ್ರೆಸ್‌ನ ಗೌರವ್ ಗೊಗೊಯ್ ಮಾತಾಡಿ, ಪಹಲ್ಗಾಮ್‌ಗೆ ಉಗ್ರರು ಹೇಗೆ ಬಂದರು ಎಂಬುದರ ಬಗ್ಗೆ ರಕ್ಷಣಾ ಸಚಿವರು ಏನನ್ನೂ ಹೇಳುತ್ತಿಲ್ಲ. ಇದಕ್ಕಿದ್ದಂತೆ ಕದನ ವಿರಾಮ ಜಾರಿ ಬಗ್ಗೆ ನಾವು ತಿಳಿದುಕೊಳ್ಳಬೇಕಾಗಿದೆ. ಪಾಕಿಸ್ತಾನ ಮಂಡಿಯೂರಲು ಸಿದ್ಧ ಆಗಿದ್ರೆ ಸೇನಾ ಕಾರ್ಯಾಚರಣೆ ಯಾಕೆ ನಿಲ್ಲಿಸಿದ್ದೀರಿ, ಯಾರಿಗೆ ಶರಣಾಗಿದ್ದೀರಿ..? ಟ್ರಂಪ್ 5-6 ವಿಮಾನಗಳು ನಷ್ಟವಾಗಿವೆ ಅಂದಿದ್ದಾರೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಿಸಬೇಕಾಗಿದೆ ಅಂತ ಆಗ್ರಹಿಸಿದರು. ಇದನ್ನೂ ಓದಿ: ಅಸಾಮಾನ್ಯ ಶಕ್ತಿಯ ʻನಾಗʼತಾಣಗಳ ಬಗ್ಗೆ ನಿಮಗೆ ಗೊತ್ತೇ? ಇಲ್ಲಿ ನಂಬಿಕೆ ಸುಳ್ಳಾಗಿಲ್ಲ ಅಂತಾರೆ ಭಕ್ತರು!
ವಿದೇಶಾಂಗ ಸಚಿವ ಜೈಶಂಕರ್ ಮಾತಾಡಿ, ವಿಶ್ವಸಂಸ್ಥೆಯ 193 ಸದಸ್ಯ ದೇಶಗಳ ಪೈಕಿ ಪಾಕಿಸ್ಥಾನ ಬಿಟ್ಟು ಕೇವಲ 3 ದೇಶಗಳು ಮಾತ್ರ ಆಪರೇಷನ್ ಸಿಂಧೂರವನ್ನು ಆಕ್ಷೇಪಿಸಿವೆ. ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ ಟಿಆರ್‌ಎಫ್ ಹೆಸರು ತೆಗೆಸಲು ಯತ್ನಿಸಿತ್ತು. ಆದರೆ, ಟಿಆರ್‌ಎಫ್ ಸಂಘಟನೆಯನ್ನ ಜಾಗತಿಕ ಉಗ್ರ ಸಂಘಟನೆ ಅಂತ ಅಮೆರಿಕ ಘೋಷಿಸಿದೆ. ಭಯೋತ್ಪಾದನೆ ವಿರುದ್ಧ ಕ್ರಮ ತೆಗೆದುಕೊಳ್ಳುವವರೆಗೂ ಪಾಕಿಸ್ತಾನದ ಜೊತೆ ಸಿಂಧೂ ನದಿ ಕುರಿತು ಯಾವುದೇ ಚರ್ಚೆ ಇಲ್ಲ. ಮಧ್ಯಸ್ಥಿಕೆ ಆಗಿಲ್ಲ ಅಂತ ಸ್ಪಷ್ಟ ಪಡಿಸಿದರು.
ಉಗ್ರರು ಯಾರು ಅನ್ನೋದೇ ಗೊತ್ತಿಲ್ಲ
ಕಾಶ್ಮೀರದ ಆರ್ಥಿಕತೆ ಹಾಳು ಮಾಡುವುದು ಅವರ ಉದ್ದೇಶವಾಗಿತ್ತು. ಬೈಸರನ್‌ನಲ್ಲಿ ಕಾಶ್ಮೀರಿ ಜನರು ಪ್ರವಾಸಿಗರು ಹೇಗೆ ಜೀವ ಉಳಿಸಿಕೊಂಡ್ರು ಅಂತ ಎಲ್ಲರೂ ನೋಡಿದ್ದಾರೆ. ವಿಪಕ್ಷಗಳು ಸರ್ಕಾರಕ್ಕೆ ಪೂರ್ಣ ಬೆಂಬಲ ನೀಡಿತ್ತು. ಆದ್ರೆ ಈವರೆಗೂ ಈ ಭಯೋತ್ಪಾದಕರನ್ನ ಬಂಧಿಸಲು ಸಾಧ್ಯವಾಗಿಲ್ಲ. ಘಟನೆ ನಡೆದು ನೂರು ದಿನಗಳ ಕಳೆದರೂ ಅವರು ನುಸುಳಿದ್ದು ಹೇಗೆ ಅನ್ನೋದೇ ಗೊತ್ತಿಲ್ಲ. ಅವರು ಯಾರೂ ಅಂತಾನೂ ಗೊತ್ತಿಲ್ಲ, ಅವರನ್ನು ಬಂಧಿಸಲು ಸಾಧ್ಯವಾಗಿಲ್ಲ. ಇದು ಯಾವ ರೀತಿಯ ಭದ್ರತೆ? ಕಾಶ್ಮೀರಕ್ಕೆ ಜನರು ಬನ್ನಿ ಎಂದು ಸರ್ಕಾರ ಹೇಳುತ್ತದೆ. ಆದ್ರೆ ಬೈಸರನ್‌ನಲ್ಲಿ ಏನಾಯಿತು, ಒಂದು ಅಂಬುಲೆನ್ಸ್ ಬರೋದಕ್ಕೆ ಗಂಟೆಯಾಯ್ತು ಎಂದು ಕೇಂದ್ರದ ವಿರುದ್ಧ ಆಕ್ರೋಶ ಹೊರಹಾಕಿದರು.
ಬೈಸರನ್‌ಗೆ ಹೋಗಿದ್ದು ರಾಹುಲ್ ಗಾಂಧಿ ಮಾತ್ರ
ಈ ಸರ್ಕಾರಕ್ಕೆ ದುರಹಂಕಾರ ಬಂದಿದೆ, ಇಲ್ಲಿ ಯಾರು ಪ್ರಶ್ನೆ ಮಾಡಲ್ಲ ಎನ್ನುವ ಅಹಂಕಾರ ಇದೆ. ನಾವು ವಿರೋಧ ಪಕ್ಷಗಳು ಪ್ರಶ್ನೆ ಕೇಳುತ್ತೇವೆ. ಪ್ರಧಾನಿ ಮೋದಿ ಬೈಸರನ್‌ಗೆ ಹೋಗಲಿಲ್ಲ, ಬಿಹಾರಕ್ಕೆ ಚುನಾವಣೆ ಪ್ರಚಾರಕ್ಕೆ ಹೊದರು. ಬೈಸರನ್‌ಗೆ ಹೊಗಿದ್ದು ರಾಹುಲ್ ಗಾಂಧಿ ಮಾತ್ರ ಎಂದು ಕುಟುಕಿದರು. ಇದನ್ನೂ ಓದಿ: ಪಹಲ್ಗಾಮ್ ದಾಳಿ ಬಳಿಕ ಆಫ್ ಆಗಿದ್ದ ಸ್ಯಾಟಲೈಟ್ ಫೋನ್ ದಿಢೀರ್ ಆನ್ – ಇದೇ ಸುಳಿವಿಂದ ಉಗ್ರರ ಬೇಟೆ!
ವಿದೇಶಿ ನೀತಿ ಸಫಲ ಅಂತ ಯಾವ ಬಾಯಲ್ಲಿ ಹೇಳ್ತಿರಿ?
ನಮ್ಮ ವಿದೇಶಿ ನೀತಿ ಸಫಲವಾಗಿದೆ ಎಂದು ಯಾವ ಬಾಯಲ್ಲಿ ಹೇಳ್ತಿರಿ? ನಮ್ಮ ಪಾರಂಪರಿಕ ಸ್ನೇಹಿತ ರಾಷ್ಟ್ರ ಕೂಡಾ ನಮ್ಮ ಜೊತೆಗೆ ನಿಲ್ಲಲಿಲ್ಲ. ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ನೆರವು ಸಿಗುತ್ತಿದೆ. ಇದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಏನು ಹೇಳ್ತಾರೆ. ನಾವು ವಿರೋಧ ಪಕ್ಷವಲ್ಲ, ದೇಶದ ಸೈನಿಕರ ಪರ. ದಯವಿಟ್ಟು ನಮ್ಮಗೆ ಸತ್ಯವಾದ ಮಾತು ಹೇಳಬೇಕು ಅಂತ ಮನವಿ ಮಾಡಿದರು.
ನವದೆಹಲಿ: ವಿಪಕ್ಷಗಳು ನಮ್ಮ ದೇಶದ ಎಷ್ಟು ವಿಮಾನಗಳು ಬಿದ್ದಿವೆ ಅಂತಲೇ ಕೇಳುತ್ತಿವೆ. ಆದ್ರೆ ನಾವು ಎಷ್ಟು ಪಾಕಿಸ್ತಾನಿ ವಿಮಾನಗಳನ್ನ ಹೊಡೆದುರುಳಿಸಿದ್ದೇವೆ ಅಂತ ಯಾರೊಬ್ಬರೂ ಕೇಳಲಿಲ್ಲ. ವಿಪಕ್ಷಗಳ ಪ್ರಶ್ನೆಗಳು ಜನರ ಪ್ರಶ್ನೆ ಎಂದು ಅನ್ನಿಸುತ್ತಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಆಪರೇಷನ್ ಸಿಂಧೂರ Operation Sindoor) ಚರ್ಚೆ ವೇಳೆ ಬೇರ ಹೊರಹಾಕಿದರು.
#WATCH | Delhi | Defence Minister Rajnath Singh says, “…’शठे शाठ्यं समाचरेत्’ (Deal with a knave in his own way)… We have learnt from Lord Krishna that in the end, one needs to pick the Sudarshan Chakra to protect ‘dharma’. We saw the 2006 Parliament attack, 2008 Mumbai… pic.twitter.com/TPsAauspHZ
ಲೋಕಸಭೆಯಲ್ಲಿ (Lok Sabha) ಈ ಚರ್ಚೆಗೆ ನಾಂದಿ ಹಾಡಿದ ಸಚಿವರು ವಿಪಕ್ಷಗಳ ವಿರುದ್ಧ ಹರಿಹಾಯ್ದರು. ಸಂಸತ್‌ನಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಸಂಬಂಧಿಸಿದ ಮುಖ್ಯ ಪ್ರಶ್ನೆಗಳನ್ನು ಸರ್ಕಾರಕ್ಕೆ ಕೇಳುವುದು ವಿರೋಧ ಪಕ್ಷಗಳ ಕೆಲಸ. ವಿಪಕ್ಷಗಳು ನಮ್ಮ ದೇಶದ ಎಷ್ಟು ವಿಮಾನಗಳು ಬಿದ್ದಿವೆ ಅಂತಲೇ ಕೇಳುತ್ತಿವೆ. ನಾವು ಎಷ್ಟು ಪಾಕಿಸ್ತಾನಿ ವಿಮಾನಗಳನ್ನ (Pakistani Planes) ಹೊಡೆದುರುಳಿಸಿದ್ದೇವೆ ಅಂತ ಯಾರೊಬ್ಬರೂ ಕೇಳಲಿಲ್ಲ. ವಿಪಕ್ಷಗಳ ಪ್ರಶ್ನೆಗಳು ಜನರ ಪ್ರಶ್ನೆ ಎಂದು ಅನ್ನಿಸುತ್ತಿಲ್ಲ ಎಂದು ಹರಿಹಾಯ್ದರು.
ವಿಪಕ್ಷಗಳು ನಮ್ಮ ಸೈನಿಕರಲ್ಲಿ ಯಾರಿಗಾದರೂ ಹಾನಿಯಾಗಿದೆಯೇ ಅಂತ ಕೇಳಿ ಅದಕ್ಕೆ ಉತ್ತರ ಇಲ್ಲ. ಆಪರೇಷನ್ ಸಿಂಧೂರ್ ಕಾರ್ಯಚರಣೆ ಯಶಸ್ವಿಯಾಗಿದೆ ಎಂದು ಕೇಳಿ.. ಅದಕ್ಕೆ ಉತ್ತರ ಹೌದು. ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಸಿಂಧೂರ ಅಳಿಸಿದ ಉಗ್ರರನ್ನು ನಮ್ಮ ಸಶಸ್ತ್ರ ಪಡೆಗಳು ನಿರ್ಮೂಲನೆ ಮಾಡಿದೆಯೇ? ಉತ್ತರ: ಹೌದು ಎದೇ ಆಗಿದೆ. ನೀವು ಪ್ರಶ್ನೆ ಕೇಳಲು ಬಯಸಿದ್ರೆ ಇದನ್ನ ಕೇಳಿ ಎಂದು ಕುಟುಕಿದರು.
#WATCH | Delhi | Defence Minister Rajnath Singh says, “… War should be taken up against those who are on the same level as us… Goswami Tulsidas says that love and enmity should be on the same level… If a lion kills a frog, it does not give a very good message. Our armed… pic.twitter.com/HQQuF2EHsF
ನಮ್ಮದು ಪ್ರತೀಕಾರದ ಪ್ರವಾಹ
ಲೋಕಸಭೆಯಲ್ಲಿ ಆಪರೇಷನ್ ಸಿಂಧೂರ ಕುರಿತು ಭಾಷಣ ಮಾಡಿದ ರಾಜನಾಥ್ ಸಿಂಗ್, ಈ ಸೇನಾ ಕಾರ್ಯಾಚರಣೆ ಭಾರತದ ಸೇನಾ ಸಾಮರ್ಥ್ಯಕ್ಕೆ ಉದಾಹರಣೆ ಮಾತ್ರವಲ್ಲದೇ, ಭಯೋತ್ಪಾದನೆ ವಿರುದ್ಧ ಭಾರತದ ಶೂನ್ಯ ಸಹಿಷ್ಣುತೆಯ ಪ್ರತೀಕ ಎಂದು ಬಣ್ಣಿಸಿದರು. ಪಾಕಿಸ್ತಾನದ ದಾಳಿ ವೇಳೆ ಭಾರತದ್ದು ಆತ್ಮರಕ್ಷಣೆಯ ಪ್ರತಿದಾಳಿಯಾಗಿತ್ತು. ಭಾರತ ಯಾರನ್ನೂ ಉದ್ದೇಶ ಪೂರ್ವಕವಾಗಿ ಟಾರ್ಗೆಟ್ ಮಾಡಿಲ್ಲ. ಆದ್ರೆ ಪಾಕಿಸ್ತಾನ ನಮ್ಮ ವಿಮಾನ ನಿಲ್ದಾಣ, ಸೇನಾ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿತ್ತು. ಈ ಎಲ್ಲ ದಾಳಿಗಳನ್ನು ನಮ್ಮ ಸೇನೆ ವಿಫಲಗೊಳಿಸಿದೆ. ಒಂದೇ ಒಂದು ನಿಗದಿತ ಸ್ಥಳದಲ್ಲಿ ಪಾಕಿಸ್ತಾನಕ್ಕೆ ದಾಳಿ ಮಾಡಲು ಸಾಧ್ಯವಾಗಿಲ್ಲ ಎಂದು ಸಂಸತ್‌ಗೆ ತಿಳಿಸಿದರು.
ಪಾಕ್ ಏರ್‌ಬೇಸ್‌ಗಳೇ ಧ್ವಂಸ
ಪಾಕಿಸ್ತಾನದ ದಾಳಿಗೆ ʻಆಪರೇಷನ್ ಸಿಂಧೂರʼ ಹೆಸರಿನಲ್ಲಿ ಭಾರತ ಪ್ರತಿ ದಾಳಿ ನಡೆಸಿತು. ಪಾಕಿಸ್ತಾನದ ವಿಮಾನ ನಿಲ್ದಾಣ, ಸೇನಾ ನೆಲೆ, ಏರ್ ಡಿಫೆನ್ಸ್ ಸಿಸ್ಟಮ್ (ರಕ್ಷಣಾ ವ್ಯವಸ್ಥೆ) ಗಳನ್ನ ಟಾರ್ಗೆಟ್ ಮಾಡಿ ಧ್ವಂಸಗೊಳಿಸಿತು. ಮೂರು ಸೇನಾಪಡೆಗಳನ್ನ ಬಳಸಿಕೊಂಡು ಪಾಕಿಸ್ತಾನದ ಪ್ರತಿಯೊಂದು ದಾಳಿಗೂ ತಕ್ಕ ಉತ್ತರ ನೀಡಲಾಯಿತು ಎಂದು ವಿವರಿಸುತ್ತಿದ್ದರು. ಈ ವೇಳೆ ವಿಕ್ಷಗಳಿಂದ ಗದ್ದಲ ಶುರುವಾಯಿತು, ಭಾಷಣಕ್ಕೆ ಅಡ್ಡಿಪಡಿಸುವ ಪ್ರಯತ್ನವೂ ನಡೆಯಿತು. ಆದಾಗ್ಯೂ ರಾಜನಾಥ್ ಸಿಂಗ್ ಮಾತು ಮುಂದುವರಿಸಿದ್ರು.
ಮತ್ತೆ ಕೆಣಕಿದ್ರೆ ಸುಮ್ಮನಿರಲ್ಲ
ಗಡಿ ದಾಟುವುದು, ಅಲ್ಲಿನ ಪ್ರದೇಶವನ್ನ ವಶಕ್ಕೆ ಪಡೆಯುವುದು ನಮ್ಮ ಉದ್ದೇಶವಾಗಿರಲಿಲ್ಲ. ಪಹಲ್ಗಾಮ್ ದಾಳಿಗೆ ಪ್ರತಿಕಾರ, ಭಯೋತ್ಪಾದಕ ನೆಲೆಗಳನ್ನ ಧ್ವಂಸ ಮಾಡುವುದು, ಫ್ರಾಕ್ಸಿ ವಾರ್ ಮಾಡುತ್ತಿರುವ ಪಾಕಿಸ್ತಾನಕ್ಕೆ ಬುದ್ಧಿ ಕಲಿಸುವುದು ನಮ್ಮ ಉದ್ದೇಶವಾಗಿತ್ತು. ಇದರಲ್ಲಿ ಪಾಕಿಸ್ತಾನ ಸೋಲು ಒಪ್ಪಿಕೊಂಡಿತು. ದಾಳಿಯನ್ನ ನಿಲ್ಲಿಸುವಂತೆ ಮನವಿ ಮಾಡಿಕೊಂಡಿತು. ಪಾಕಿಸ್ತಾನದ ಡಿಜಿಎಂಓ ಮನವಿ ಬಳಿಕವೇ ಕದನ ವಿರಾಮ ಮಾಡಿಕೊಳ್ಳಲಾಯಿತು. ಆದ್ರೆ ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ. ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಪಾಕ್ ಪ್ರಚೋದನೆ ನೀಡಿದ್ರೆ ಮತ್ತೆ ಆಪರೇಷನ್ ಶುರುವಾಗಲಿದೆ. ಆಪರೇಷನ್ ಸಿಂಧೂರದಿಂದ ನಮ್ಮ ಸೈನಿಕರ ಮನೋಬಲ ಹೆಚ್ಚಾಗಿದೆ ಎಂದು ಇಂಚಿಂಚೂ ಮಾಹಿತಿ ನೀಡಿದರು.
ಪಹಲ್ಗಾಮ್ ದಾಳಿಯ ಇಂಚಿಂಚು ವಿವರ
ಇದರೊಂದಿಗೆ ಏ.22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ಗುಂಪೊಂದು ಅಮಾಯಕ ಪ್ರವಾಸಿಗರ ಮೇಲೆ ಭೀಕರ ದಾಳಿ ನಡೆಸಿತು. ಈ ದಾಳಿಯಲ್ಲಿ ಓರ್ವ ವಿದೇಶಿ ಪ್ರಜೆಯೂ ಸೇರಿದಂತೆ ಒಟ್ಟು 26 ಭಾರತೀಯ ನಾಗರಿಕರು ಸಾವನ್ನಪ್ಪಿದ್ದರು. ಭಯೋತ್ಪಾದಕರು ಪ್ರವಾಸಿಗರ ಧರ್ಮ ಕೇಳಿ ಅವರ ಮೇಲೆ ಗುಂಡು ಹಾರಿಸಿದ್ದರು. ಈ ಘಟನೆ ದೇಶಾದ್ಯಂತ ಆಕ್ರೋಶದ ಅಲೆಯನ್ನೇ ಸೃಷ್ಟಿಸಿತ್ತು. ಈ ದಾಳಿಯನ್ನು ಲಷ್ಕರ್-ಎ-ತೋಯ್ಬಾ ಸಂಘಟನೆಯ ಅಂಗಸಂಸ್ಥೆ ದಿ ರೆಸಿಸ್ಟನ್ಸ್ ಫ್ರಂಟ್ (ಟಿಆರ್‌ಎಫ್) ನಡೆಸಿತ್ತು ಎಂದು ರಾಜನಾಥ್ ಸಿಂಗ್, ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ಆರಂಭಿಸಲು ಕಾರಣವಾದ ಘಟನೆಗಳನ್ನು ವಿವರಿಸಿದರು.