Tag: Parking Fees

  • ಪಾಲಿಕೆಯ ಹೊಸ ಪಾರ್ಕಿಂಗ್ ರೂಲ್ಸ್ – ಲೂಟಿ ಯೋಜನೆಯೆಂದು ಜನಾಕ್ರೋಶ

    ಪಾಲಿಕೆಯ ಹೊಸ ಪಾರ್ಕಿಂಗ್ ರೂಲ್ಸ್ – ಲೂಟಿ ಯೋಜನೆಯೆಂದು ಜನಾಕ್ರೋಶ

    ಬೆಂಗಳೂರು: ಸಿಲಿಕಾನ್ ಸಿಟಿಯ (Bengaluru) ವಾಹನ ಸವಾರರಿಗೆ ಬಿಬಿಎಂಪಿ ಬಿಗ್ ಶಾಕ್ ನೀಡಿದೆ. ನೂತನ ಪಾರ್ಕಿಂಗ್ ನೀತಿಯನ್ನು ಜಾರಿಗೆ ತಂದು ಟೆಂಡರ್ ಪ್ರಕ್ರಿಯೆಗೆ ಬಿಬಿಎಂಪಿ ಚಾಲನೆ ನೀಡಿದೆ. ಇದನ್ನ ಜನ ತೀವ್ರವಾಗಿ ವಿರೋಧಿಸುತ್ತಿದ್ದು, ಬಿಬಿಎಂಪಿಯ ರೂಲ್ಸ್ ಗೆ ಆಕ್ರೋಶಗೊಂಡಿದ್ದಾರೆ.

    ಹೌದು, ಬಿಬಿಎಂಪಿ (BBMP) ತನ್ನ ವ್ಯಾಪ್ತಿ ಯಲ್ಲಿ ಬರೋ ರೋಡ್ ಗಳಲ್ಲಿ ಪಾರ್ಕಿಂಗ್ ಮಾಡೋ ವಾಹನಗಳಿಗೆ ಪಾರ್ಕಿಂಗ್ ಶುಲ್ಕ (Parking Fees) ವಿಧಿಸೋ ಪ್ಲಾನ್ ಮಾಡಿಕೊಂಡು ನೂತನ ಪಾರ್ಕಿಂಗ್ ನೀತಿಯನ್ನ ಜಾರಿಗೆ ತಂದಿದೆ. ಮನೆಯ ಮುಂದೆ ಪಾರ್ಕ್ ಮಾಡಿದ್ರು ಫೀಸ್ ಕಟ್ಟಬೇಕು ಅನ್ನೋವಂತಿದೆ ಈ ಹೊಸ ರೂಲ್ಸ್. ಇದನ್ನೂ ಓದಿ: ರಾಜ್ಯದಲ್ಲಿ ಅಂಬುಲೆನ್ಸ್ ಸೇವೆ ವ್ಯತ್ಯಯ – ನಿನ್ನೆ ಸಂಜೆಯಿಂದ ಕರೆ ಸ್ವೀಕರಿಸದ 108

    ಈಗಾಗಲೇ ಟೆಂಡರ್ (Tendor) ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಮುಂದಿನ ದಿನಗಳಲ್ಲಿ ಪಾರ್ಕಿಂಗ್ ಶುಲ್ಕ ವಸೂಲಿ ಶುರುವಾಗಲಿದೆ. ಜನ ಇದಕ್ಕೆ ತೀವ್ರವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನಾವೂ ಬದುಕಬೇಕಾ ಬೇಡವಾ..? ಪ್ರತಿಯೊಂದಕ್ಕೂ ಟ್ಯಾಕ್ಸ್ ಟ್ಯಾಕ್ಸ್ (Tax) ಅಂತಾ ಸಂಪಾದನೆಯಲ್ಲ ಟ್ಯಾಕ್ಸ್ ಗೆ ಹೋಗ್ತಿದೆ. ಈಗ ಪಾರ್ಕಿಂಗ್‍ಗೂ ದುಡ್ಡುಕೊಡಿ ಅಂದ್ರೆ ಯಾರ್ ಕೊಡ್ತಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

    ಮೊದಲು ರೋಡ್ (Road) ಸರಿ ಮಾಡಿ, ಪಾರ್ಕಿಂಗ್ ಹೆಸರಲ್ಲಿ ಲೂಟಿ ಮಾಡಲು ಪ್ಲಾನ್ ಮಾಡಿಕೊಂಡಿದ್ದೀರಾ..? ನೀವು ಈ ರೂಲ್ಸ್ ಫಾಲೋ ಮಾಡ್ತೀರಾ. ಬಿಬಿಎಂಪಿ ಪಾರ್ಕಿಂಗ್ ಗೆ ಅಂತಾ ಏನಾದರೂ ಪ್ಲಾನ್ ಮಾಡಿದ್ದೀಯಾ..? ಏನೂ ಮಾಡದೇ ಈಗ ಶುಲ್ಕ ಅಂತಾ ಬಂದ್ರೇ ಯಾರ್ ಕಟ್ಟುತ್ತಾರೆ. ಇವತ್ತಿನ ಪೆಟ್ರೋಲ್ರೇ (Petrol) ಟ್ ನಲ್ಲಿ ಗಾಡಿ ಓಡಿಸೋದೆ ಕಷ್ಟವಾಗಿದೆ. ನಿಲ್ಲಿಸೋಕು ದುಡ್ಡು ಅಂದ್ರೆ ಜನ ಕಲ್ಲು ತೆಗೆದುಕೊಂಡು ಹೊಡೆಯುತ್ತಾರೆ ಅಂತಾ ಜನ ಬಿಬಿಎಂಪಿಯ ರೂಲ್ಸ್ ವಿರುದ್ಧ ಕಿಡಿಕಾರಿದ್ದಾರೆ.

    ಬಿಬಿಎಂಪಿ ಜಾರಿಗೆ ತಂದಿರೋ ನ್ಯೂಪಾರ್ಕಿಂಗ್ ರೂಲ್ಸ್ ಹಿಂಪಡೆಯಬೇಕು ಅಂತಾ ಈಗಾಗಲೇ ಸಿಎಂಗೆ ವೀಲ್ಸ್ ಅನ್ನೋ ಸಂಸ್ಥೆಯವರು ಮನವಿ ಮಾಡಿದ್ದಾರೆ. ಸರ್ಕಾರ ಏನಾದರೂ ಈ ರೂಲ್ಸ್ ಜಾರಿಗೆ ತಂದ್ರೇ ಜನ ರೊಚ್ಚಿಗೆ ಎದ್ದು ಉಗ್ರ ಹೋರಾಟ ಮಾಡೋದಂತೂ ಪಕ್ಕಾ ಆಗಿದೆ.

    Live Tv
    [brid partner=56869869 player=32851 video=960834 autoplay=true]

  • ಮಾಲ್‍ಗಳಿಗೆ ಪಾರ್ಕಿಂಗ್ ಶುಲ್ಕ ಸಂಗ್ರಹಿಸಲು ಹಕ್ಕಿಲ್ಲ: ಕೇರಳ ಹೈಕೋರ್ಟ್

    ಮಾಲ್‍ಗಳಿಗೆ ಪಾರ್ಕಿಂಗ್ ಶುಲ್ಕ ಸಂಗ್ರಹಿಸಲು ಹಕ್ಕಿಲ್ಲ: ಕೇರಳ ಹೈಕೋರ್ಟ್

    ಕೊಚ್ಚಿ: ಮಾಲ್‍ಗಳಿಗೆ ಪಾರ್ಕಿಂಗ್ ಶುಲ್ಕ ಸಂಗ್ರಹಿಸುವ ಯಾವುದೇ ಹಕ್ಕು ಇಲ್ಲ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಕೇರಳ ಹೈಕೋರ್ಟ್ ತಿಳಿಸಿದೆ.

    ಎರ್ನಾಕುಲಂನಲ್ಲಿರುವ ಲಾಲು ಮಾಲ್‍ಗೆ ಪಾರ್ಕಿಂಗ್ ಶುಲ್ಕ ಸಂಗ್ರಹಿಸಲು ಪರವಾನಿಗೆ ನೀಡಲಾಗಿದೆಯೇ ಎಂದು ಕಲಾಮಸ್ಸೇರಿ ನಗರಸಭೆಗೆ ಹೈಕೋರ್ಟ್ ಪ್ರಶ್ನಿಸಿದೆ. ನಟ ಪೌಲಿ ವಡಕ್ಷಣ್ ಅವರು ಡಿ.2ರಂದು ಮಾಲ್‍ಗೆ ಭೇಟಿ ನೀಡಿದ್ದಾಗ ಪಾರ್ಕಿಂಗ್ ಶುಲ್ಕ ವಿಧಿಸಿದ್ದರು. ಈ ಹಣವನ್ನು ಪಾವತಿಸದಿದ್ದರೆ ಹೊರಹೋಗಲು ಬಿಡುವುದಿಲ್ಲ ಎಂದು ಮಾಲ್‍ನ ಸಿಬ್ಬಂದಿ ಹೇಳಿದ್ದರು. ಈ ವಿಚಾರವನ್ನು ಅವರು ಹೈಕೋರ್ಟ್‍ನಲ್ಲಿ ಪ್ರಶ್ನಿಸಿದ್ದರು.

    ಕಟ್ಟಡ ಕಟ್ಟುವಾಗ ಇರುವ ನಿಯಮಗಳಂತೆ ಪಾರ್ಕಿಂಗ್ ಜಾಗವನ್ನು ನಿಗದಿ ಮಾಡಬೇಕು. ಪಾರ್ಕಿಂಗ್ ಸ್ಥಳವಿಲ್ಲದೇ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲಾಗುವುದಿಲ್ಲ. ಆದರೆ ಕಟ್ಟಡ ನಿರ್ಮಾಣ ಮಾಡಿದ ನಂತರ ಪಾರ್ಕಿಂಗ್‍ಗೆ ಮಾಲೀಕರು ಶುಲ್ಕ ವಿಧಿಸಬಹುದೇ ಎಂಬುದು ಈಗಿರುವ ಪ್ರಶ್ನೆ. ಮೇಲ್ನೋಟಕ್ಕೆ ನೋಡಿದರೆ ಮಾಲ್‍ಗಳಿಗೆ ಶುಲ್ಕ ಸಂಗ್ರಹಿಸುವ ಯಾವುದೇ ಅಧಿಕಾರವಿಲ್ಲ ಎಂದು ಕೋರ್ಟ್ ಹೇಳಿದೆ. ಇದನ್ನೂ ಓದಿ: ಕಾಂಗ್ರೆಸ್ ಪಾದಯಾತ್ರೆ ಎಫೆಕ್ಟ್ – 25 ಪೊಲೀಸರಿಗೆ ಕೊರೊನಾ

    ಪಾರ್ಕಿಂಗ್ ಶುಲ್ಕ ವಿಧಿಸುವುದಕ್ಕೆ ನೀಡಿರುವ ಪರವಾನಗಿಯ ಕುರಿತಾದ ಸಂಪೂರ್ಣ ಮಾಹಿತಿ ಒದಗಿಸುವಂತೆ ನಗರ ಸಭೆಗೆ ಆದೇಶ ನೀಡಿದೆ. ಇದಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಜ.28ಕ್ಕೆ ಮುಂದೂಡಲಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಶಾಪಿಂಗ್ ಮಾಲ್‍ನಲ್ಲಿ ಬೆಂಕಿ

  • ಪ್ರವಾಸಿಗರಿಗೆ ಧಮ್ಕಿ ಹಾಕಿ ಹಣ ವಸೂಲಿ – ಪಬ್ಲಿಕ್ ಟಿವಿ ಸ್ಟಿಂಗ್‌ನಲ್ಲಿ ಬಯಲು

    ಪ್ರವಾಸಿಗರಿಗೆ ಧಮ್ಕಿ ಹಾಕಿ ಹಣ ವಸೂಲಿ – ಪಬ್ಲಿಕ್ ಟಿವಿ ಸ್ಟಿಂಗ್‌ನಲ್ಲಿ ಬಯಲು

    ಗದಗ: ಉತ್ತರ ಕರ್ನಾಟಕದ ಖ್ಯಾತ ಮೃಗಾಲಯಕ್ಕೆ ಬರುವ ಪ್ರವಾಸಿಗರಿಗೆ ಧಮ್ಕಿ ಹಾಕಿ ಹಣ ವಸೂಲಿ ಮಾಡುವ ದಂಧೆ ನಡೆಯುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿತ್ತು. ಈ ಕುರಿತು ಪಬ್ಲಿಕ್ ಟಿವಿ ನಡೆಸಿದ ಸ್ಟಿಂಗ್ ಆಪರೇಷನ್‌ನಲ್ಲಿ ಕೂಡ ಬಯಲಾಗಿದೆ.

    ಗದಗ ಜಿಲ್ಲೆಯ ಬಿಂಕದಕಟ್ಟಿ ಮಕ್ಕಳ ಉದ್ಯಾನವನ ಹಾಗೂ ಪ್ರಾಣಿ ಸಂಗ್ರಹಾಲಯ ಉತ್ತರ ಕರ್ನಾಟಕ ಭಾಗದ ಫೇಮಸ್ ಮೃಗಾಲಯ. ನಿತ್ಯ ಸಾವಿರಾರು ಮಂದಿ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಇದನ್ನೇ ಅಸ್ತ್ರ ಮಾಡಿಕೊಂಡಿರುವ ಸುಲಿಗೆಕೋರರು ಜನರಿಗೆ ಹಾಗೂ ಸರ್ಕಾರಕ್ಕೆ ಪಂಗನಾಮ ಹಾಕುತ್ತಿದ್ದಾರೆ.

    ಪ್ರವೀಣ್ ಮೃಗಾಲಯದಲ್ಲಿ ಹಣ ವಸೂಲಿ ಮಾಡುತ್ತಿರುವ ವ್ಯಕ್ತಿ. 2018-19ನೇ ಸಾಲಿನಲ್ಲಿ ಹರೀಶ್ ಜೋಗಣ್ಣವರ್ ಎಂಬವರಿಗೆ ಪಾರ್ಕಿಂಗ್ ಟೆಂಡರ್ ಆಗಿತ್ತು. ಆದರೆ ಮಾರ್ಚ್ 2019ಕ್ಕೆ ಟೆಂಡರ್ ಮುಗಿದಿದೆ. ಇಲ್ಲಿಯವರೆಗೆ ಮರುಟೆಂಡರ್ ಆಗಿಲ್ಲ. ಹಳೆ ಟೆಂಡರ್ ಹರೀಶ್ ಅವರ ಬೆಂಬಲಿಗರ ಹವಾ ಇಲ್ಲಿಯವರೆಗೂ ಜೋರಾಗಿ ನಡೆಯುತ್ತಿದೆ. ಪಾರ್ಕಿಂಗ್ ಟಿಕೆಟ್ ಕೊಡಿ ಎಂದು ಕೇಳಿದರೆ, ಟಿಕೆಟ್ ಇಲ್ಲ, ಅಂಗಡಿಯಲ್ಲಿದೆ. ಅಂಗಡಿ ಇವತ್ತಿಲ್ಲ ಎಂದು ಪ್ರತಿನಿತ್ಯ ಹೇಳಿದ್ದನ್ನೇ ಹೇಳುತ್ತಾರೆ.

    ಟಿಕೆಟ್ ಕೊಡಿ ನಾವು ಹಣ ಕೊಡುತ್ತೇವೆ ಎಂದು ಹೇಳಿದ್ದರೆ, ಟಿಕೆಟ್-ಗಿಕೆಟ್ ಏನಿಲ್ಲ, ಹಣ ಕೊಡಿ ಇಲ್ಲ ಗಾಡಿ ತಗೊಂಡು ಹೊರಗೆ ನಡಿ ಎಂದು ಪ್ರವೀಣ್ ಧಮ್ಕಿ ಹಾಕುತ್ತಾನೆ. ಅಷ್ಟಕ್ಕೂ ಪ್ರವೀಣ್ ಮೂಲ ಗುತ್ತಿಗೆದಾರನಲ್ಲ. ಯಾರೋ ಗುತ್ತಿಗೆ ಪಡೆದು ಇನ್ಯಾರೋ ಮೂರನೇ ವ್ಯಕ್ತಿಗೆ ಲೀಸ್ ನೀಡಿ ಹಣ ವಸೂಲಿಗೆ ಮುಂದಾಗಿದ್ದಾರೆ. ಈ ಬಗ್ಗೆ ಹಣ ಪಡೆಯುವ ವ್ಯಕ್ತಿ ಕೇಳಿದರೆ ನನ್ನ ಬಿಟ್ಟುಬಿಡಿ, ನನಗೆ ಯಾವ ಅಧಿಕಾರಿಯೂ ಗೊತ್ತಿಲ್ಲ. ಟೆಂಡರ್‌ದಾರರೇ ಬೇರೆ, ನಾನೇ ಬೇರೆ ಎಂದು ಹೇಳಿದ್ದಾನೆ.

    ಪಾರ್ಕಿಂಗ್ ಶುಲ್ಕ ಎಂದು ಬೈಕಿಗೆ 10 ರೂ., ಕಾರ್ ಹಾಗೂ ಆಟೋಗೆ 20 ರೂ., ಟೆಂಪೋ, ಟ್ರಕ್ ಹಾಗೂ ಬಸ್ಸಿಗೆ 50 ರೂ., ಯಂತೆ ನಿತ್ಯ ಸಾವಿರಾರು ರೂ. ವಸೂಲಿ ಮಾಡುತ್ತಿದ್ದಾರೆ. ಪ್ರವಾಸಿಗರಿಗೆ ಟಿಕೆಟ್ ನೀಡದೆ ಧಮ್ಕಿ ಹಾಕಿ ತಿಂಗಳಿಂದ ಹಣ ಪಡೆದು, ಸರ್ಕಾರಕ್ಕೆ ಪಂಗನಾಮ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ವರ್ಷಕ್ಕೆ ಹತ್ತಾರು ಲಕ್ಷ ರೂ. ಪಾರ್ಕಿಂಗ್ ಹಣ ಸಂಗ್ರಹವಾಗುತ್ತದೆ. ಆದರೆ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಸೇರಿ ಕೇವಲ 1 ಲಕ್ಷ 1 ಸಾವಿರ ಮಾತ್ರ ಟೆಂಡರ್ ಮಾಡುತ್ತಾರೆ ಎನ್ನುವ ಆರೋಪ ಕೂಡ ಕೇಳಿ ಬರುತ್ತಿದೆ. ಈ ಬಗ್ಗೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಸಾರ್ವಜನಿಕರಿಂದ ಹಗಲು ದರೋಡೆ ಮಾಡುವುದನ್ನ ನಿಲ್ಲಿಸಬೇಕು. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ತಿಳಿಸಿದ್ದಾರೆ.