Tag: Park

  • ಪಾರ್ಕ್ ನಲ್ಲಿ ಕೆಲ ಸಮಯ ಕಳೆದು ಪ್ರೇಮಿಗಳು ಆತ್ಮಹತ್ಯೆಗೆ ಯತ್ನ!

    ಪಾರ್ಕ್ ನಲ್ಲಿ ಕೆಲ ಸಮಯ ಕಳೆದು ಪ್ರೇಮಿಗಳು ಆತ್ಮಹತ್ಯೆಗೆ ಯತ್ನ!

    ಮಂಗಳೂರು: ಪಾರ್ಕಿಗೆ ಬಂದ ಪ್ರೇಮಿಗಳು ಆತ್ಮಹತ್ಯೆಗೆ ಯತ್ನಿಸಿದ ಘಟನೆಯೊಂದು ಸೋಮವಾರ ಸಂಜೆ ಮಂಗಳೂರಿನ ಕದ್ರಿ ಪಾರ್ಕ್ ನಲ್ಲಿ ನಡೆದಿದೆ.

    ಅಮೃತ್ ಕುಮಾರ್(22) ಹಾಗೂ ಹರ್ಷಿತಾ(20) ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು. ಅಮೃತ್ ಹಾಗೂ ಹರ್ಷಿತಾ ಇಬ್ಬರು ಕಾಸರಗೋಡು ಮೂಲದವರು ಎಂದು ಹೇಳಲಾಗುತ್ತಿದೆ. ಈ ಪ್ರೇಮಿಗಳು ಆತ್ಮಹತ್ಯೆಗೆ ಯಾಕೆ ಯತ್ನಿಸಿದ್ದಾರೆ ಎಂಬುದರ ಬಗ್ಗೆ ನಿಖರ ಕಾರಣ ತಿಳಿದುಬಂದಿಲ್ಲ.

    ಅಮೃತ್ ಹಾಗೂ ಹರ್ಷಿತಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇಬ್ಬರು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಪಾರ್ಕಿನಲ್ಲಿ ಕೆಲ ಸಮಯ ಕಳೆದಿದ್ದಾರೆ. ಬಳಿಕ ಇಬ್ಬರೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇವರಿಬ್ಬರು ವಿಷ ಸೇವಿಸಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಿದ್ದನ್ನು ನೋಡಿದ ಸಾರ್ವಜನಿಕರು ಇಬ್ಬರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಸದ್ಯ ಅಮೃತ್ ಸ್ಥಿತಿ ಚಿಂತಾಜನಕವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಹರ್ಷಿತಾ ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ಸದ್ಯ ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರವಾಸಿಗರನ್ನು ನೋಡ್ತಿದ್ದಂತೆ ವಾಹನದ ಮೇಲೆ ಹಾರಿದ ಸಿಂಹ: ವಿಡಿಯೋ ವೈರಲ್

    ಪ್ರವಾಸಿಗರನ್ನು ನೋಡ್ತಿದ್ದಂತೆ ವಾಹನದ ಮೇಲೆ ಹಾರಿದ ಸಿಂಹ: ವಿಡಿಯೋ ವೈರಲ್

    ಕ್ರೈಮಿಯಾ: ಪ್ರವಾಸಿಗರನ್ನು ನೋಡುತ್ತಿದ್ದಂತೆ ವಿಲ್ನೋಹಿಸ್ರ್ಕ್ ನ ಸಫಾರಿ ಪಾರ್ಕ್ ನಲ್ಲಿದ್ದ ಸಿಂಹವೊಂದು ವಾಹನದ ಮೇಲೆ ಜಿಗಿದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಓಪನ್ ಸಫಾರಿ ವಾಹನದಲ್ಲಿ ಪ್ರವಾಸಿಗರು ಪಾರ್ಕ್ ವೀಕ್ಷಣೆ ಮಾಡ್ತಿದ್ದರು. ವ್ಯಾನ್ ಚಾಲನೆ ಮಾಡುತ್ತಿದ್ದ ಚಾಲಕನನ್ನು ನೋಡುತ್ತಿದ್ದಂತೆ ಫಿಲ್ಯಾ ಹೆಸರಿನ ಸಿಂಹವೊಂದು ವಾಹನದ ಮೇಲೆ ಜಿಗಿದಿದೆ. ವಾಹನದ ಮೇಲೆ ಸಿಂಹ ಜಿಗಿಯತ್ತಿದ್ದಂತೆ ಮಹಿಳೆಯೊಬ್ಬರು ವ್ಯಾನ್ ಇಳಿದು ಬಂದಿದ್ದಾರೆ. ಆದ್ರೆ ತನ್ನನ್ನು ಸಾಕಿದ ಚಾಲಕನ ಬಳಿ ಬಂದು ಆತನನ್ನು ಮುದ್ದಾಡಿದೆ. ಅಷ್ಟೇ ಅಲ್ಲದೇ ವಾಹನದಲ್ಲಿದ್ದ ಪ್ರವಾಸಿಗರಿಗೂ ಯಾವುದೇ ಹಾನಿಯುಂಟು ಮಾಡಿಲ್ಲ.

    ಪಾರ್ಕ್ ನಲ್ಲಿಯ ವಿಠ್ಠಾ ಎಂಬ ಸಿಂಹವೊಂದು ಒಂದು ವಾರದ ಹಿಂದೆ ಪ್ರವಾಸಿ ಮಹಿಳೆಯ ತೋಳನ್ನು ಕಚ್ಚಿತ್ತು. ಈ ಘಟನೆಯ ಆದ ಸ್ವಲ್ಪ ದಿನಗಳಲ್ಲಿ ಈ ಆಶ್ಚರ್ಯವಾದ ಘಟನೆ ನಡೆದಿದೆ. ಇದನ್ನು ಪಾರ್ಕ್ ಸಿಬ್ಬಂದಿ ಮೊಬೈಲ್‍ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದು, ವೈರಲ್ ಆಗಿದೆ. ಈ ವಿಡಿಯೋ ಇದೂವರೆಗೂ 4 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ.

    ಈ ಹಿಂದೆ ಇಂಗ್ಲೆಂಡಿನ ವೆಸ್ಟ್ ಮಿಡ್‍ಲ್ಯಾಂಡ್ ನ ವರ್ಸೆಸ್ಟಶೈರ್ ನಲ್ಲಿ ಕಾರಿನಲ್ಲಿ ಸಫಾರಿ ಮಾಡುವ ವೇಳೆ ಎದುರಿಗೆ ಬಂದ ಜಿರಾಫೆಗೆ ಆಹಾರ ನೀಡಲು ದಂಪತಿ ಮುಂದಾಗಿದ್ದರು. ಈ ವೇಳೆ ಕಾರಿನಲ್ಲಿದ್ದ ಆಹಾರದ ಪೊಟ್ಟಣಗಳನ್ನು ನೋಡಿದ ಜಿರಾಫೆ ಕಾರಿನೊಳಗೆ ತನ್ನ ತಲೆಯನ್ನು ತೂರಿಸಿತ್ತು. ಇದ್ರಿಂದ ಭಯಗೊಂಡ ಕಾರಿನಲ್ಲಿದ್ದ ಮಹಿಳೆ ಕಾರಿನ ಕಿಟಕಿಯ ಗ್ಲಾಸ್ ಮೇಲೆರಿಸಲು ಪ್ರಯತ್ನಿಸಿದ್ದರು. ಜಿರಾಫೆಗೆ ತಗುಲಿದ ಗ್ಲಾಸ್ ಒಡೆದು ಚೂರು ಚೂರಾಚೂರಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಜಭವನದಿಂದ ಸಾರ್ವಜನಿಕರಿಗೆ ಸ್ವಾತಂತ್ರ್ಯೋತ್ಸವದ ಗಿಫ್ಟ್

    ರಾಜಭವನದಿಂದ ಸಾರ್ವಜನಿಕರಿಗೆ ಸ್ವಾತಂತ್ರ್ಯೋತ್ಸವದ ಗಿಫ್ಟ್

    ಬೆಂಗಳೂರು: ಕೇವಲ ವಿಐಪಿ ಹಾಗೂ ವಿವಿಐಪಿಗಳಿಗೆ ಮಾತ್ರ ಸಿಮೀತವಾಗಿದ್ದ ರಾಜಭವನ ಪ್ರವೇಶವನ್ನು ಸ್ವಾತಂತ್ರೋತ್ಸವದ ಅಂಗವಾಗಿ ಇದೇ ಮೊದಲ ಬಾರಿಗೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.

    ರಾಜಭವನದಿಂದ ಸಾರ್ವಜನಿಕರಿಗೆ ಸ್ವಾತಂತ್ರೋತ್ಸವದ ಗಿಫ್ಟ್ ನೀಡಲಾಗಿದ್ದು, ಈ ಮೂಲಕ ರಾಜಭವನ ಸಾಮಾನ್ಯ ಜನರಿಗೆ ಇನ್ನಷ್ಟು ಹತ್ತಿರವಾಗುವ ಪ್ರಯತ್ನಕ್ಕೆ ಕೈ ಹಾಕಿದೆ. ಇದೇ ಆಗಸ್ಟ್ 16 ರಿಂದ 31 ರವರೆಗೆ ಸಾರ್ವಜನಿಕರ ಪ್ರವೇಶ ಕಲ್ಪಿಸಿಕೊಟ್ಟಿದ್ದು, ರಾಜಭವನ ನಿರ್ಧರಿಸಿರುವಂತೆ ಸಂಜೆ 4 ರಿಂದ 6.30 ರವರೆಗೆ ಸಾರ್ವಜನಿಕರು ಪ್ರವೇಶಿಸಬಹುದಾಗಿದೆ.

    ರಾಜಭವನದ ವಿಶೇಷತೆ ಏನು? ಒಳಗೆ ಏನೇನಿದೆ?
    ಬ್ರಿಟಿಷ್ ಕಮಿಷನರ್ ಆಗಿದ್ದ ಮಾರ್ಕ್ ಕಬ್ಬನ್ ರಾಜಭವನದ ನಿರ್ಮಾಣ ಮಾಡಿದ್ದರು. ಈ ಕಟ್ಟಡವು ಸುಮಾರು 42,380 ಅಡಿ ವ್ಯಾಪ್ತಿಯನ್ನು ಹೊಂದಿದ್ದು, ಇಂಡೋ ಸಾರ್ಥಾನಿಕ್ ಶೈಲಿಯ ಹೊರಾಂಗಣ ಮತ್ತು ಒಳಾಂಗಣ ವಿನ್ಯಾಸವನ್ನು ಹೊಂದಿದೆ. ಕಟ್ಟಡದೊಳಗೆ 19ನೇ ಶತಮಾನದ ಕಲಾಕೃತಿಗಳಿದ್ದು, ಭಾರತೀಯ ಪರಂಪರೆಯನ್ನು ಬಿಂಬಿಸುವ ಅನೇಕ ಕಲಾಕೃತಿಗಳನ್ನು ಕಾಣಬಹುದಾಗಿದೆ.

    ಪ್ರಮುಖವಾಗಿ ಗ್ಲಾಸ್ ಹೌಸ್ ಸೇರಿದಂತೆ ಸುಮಾರು 16 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಹರಡಿರುವ ಗುಲಾಬಿ ಉದ್ಯಾನವನ, ಮಲ್ಲಿಗೆ ಸೇರಿದಂತೆ ವಿವಿಧ ಹೂ ಗಿಡಗಳ ಉದ್ಯಾನವನಗಳನ್ನು ಕಾಣಬಹುದು. ಅಲ್ಲದೇ ಕೂಕ್‍ಪೈನ್ ಮರಗಳು ಆಕರ್ಷಣೀಯ ಕೇಂದ್ರಬಿಂದುವಾಗಿದೆ.

    ರಾಜಭವನಕ್ಕೆ ಪ್ರವೇಶ ಹೇಗೆ?
    ರಾಜಭವನದ ಭೇಟಿಗೆ ಸಾರ್ವಜನಿಕರನ್ನು ತಂಡಗಳಾಗಿ ವಿಂಗಡಿಸಿ ಪ್ರವೇಶ ಕಲ್ಪಿಸಿಕೊಡಲಾಗುತ್ತಿದ್ದು, ಒಂದು ತಂಡದಲ್ಲಿ 30 ಜನರು ಹೋಗಬಹುದಾಗಿದೆ. ಒಂದು ತಂಡ ಸುಮಾರು 20 ರಿಂದ 30 ನಿಮಿಷಗಳ ಕಾಲ ರಾಜಭವನದೊಳಗಿನ ಪರಿಸರ, ವಿಶೇಷತೆಯನ್ನು ವೀಕ್ಷಿಸಬಹುದಾಗಿದೆ.

    ರಾಜಭವನಕ್ಕೆ ಪ್ರವೇಶ ಸಂಪೂರ್ಣ ಉಚಿತವಾಗಿದ್ದು, ಸಾರ್ವಜನಿಕರು ಆನ್‍ಲೈನ್ ಮೂಲಕ ಬುಕ್ಕಿಂಗ್ ಮಾಡಬಹುದಾಗಿದೆ. ಬುಕ್ಕಿಂಗ್ ಮಾಡಿದ ನಂತರ ರಾಜಭವನದಿಂದ ಅಧಿಕೃತವಾಗಿ ಈ-ಮೇಲ್ ಅಥವಾ ಮೊಬೈಲ್ ಎಸ್‍ಎಂಎಸ್ ಮೂಲಕ ಭೇಟಿಯ ದಿನಾಂಕ ಹಾಗೂ ಸಮಯವನ್ನು ತಿಳಿಸಲಾಗುತ್ತದೆ.

    ಸಾರ್ವಜನಿಕರ ಪ್ರವೇಶದ ವೇಳೆಯಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಹೊಣೆಯನ್ನು ರಾಜಭವನ ಈಗಾಗಲೇ ಬಿಬಿಎಂಪಿಗೆ ನೀಡಿದೆ. ಹೀಗಾಗಿ ರಾಜಭವನದ ಒಳಗಡೆ ಸಾರ್ವಜನಿಕರಿಗಾಗಿ ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆ, ಸಾರ್ವಜನಿಕ ತಂಗುದಾಣಗಳನ್ನು ಬಿಬಿಎಂಪಿ ನಿರ್ಮಿಸಲಿದೆ. ದೆಹಲಿಯಲ್ಲಿನ ರಾಷ್ಟ್ರಪತಿ ಭವನ ಮಾದರಿಯಲ್ಲಿ ರಾಜಭವನ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.

    ರಾಜಭನದ ಭೇಟಿಗೆ www.rajbhavan.kar.nic.in ವೆಬ್‌ಸೈಟ್‌ ಗೆ ಭೇಟಿ ನೀಡಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಸಾರ್ಜಜನಿಕರು ರಾಜಭವನದ ಪ್ರವೇಶಕ್ಕೂ ಮುನ್ನ ಕಡ್ಡಾಯವಾಗಿ ಯಾವುದಾದರೂ ಮೂಲ ದಾಖಲೆಗಳನ್ನು ಹಾಜರುಪಡಿಸುವಂತೆ ಆದೇಶಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಹಚ್ಚಹಸಿರಾಗಿ ಸುಂದರವಾಗಿದ್ದ ಪಾರ್ಕ್ ಅಭಿವೃದ್ಧಿಗೆ ಬರೋಬ್ಬರಿ 1.30 ಕೋಟಿ ರೂ. ಖರ್ಚು!

    ಹಚ್ಚಹಸಿರಾಗಿ ಸುಂದರವಾಗಿದ್ದ ಪಾರ್ಕ್ ಅಭಿವೃದ್ಧಿಗೆ ಬರೋಬ್ಬರಿ 1.30 ಕೋಟಿ ರೂ. ಖರ್ಚು!

    ಬೆಂಗಳೂರು: ನಗರದ ಶಾಸಕ ಹಾಗೂ ಬಿಬಿಎಂಪಿ ಸದಸ್ಯರು ಸೇರಿ ಹಚ್ಚಹಸಿರಾಗಿ ಎಲ್ಲ ಸೌಲಭ್ಯವಿದ್ದ ಪಾರ್ಕ್ ಅಭಿವೃದ್ಧಿ ಮಾಡುತ್ತೇವೆ ಎಂದು ಸುಮಾರು 1.30 ಕೋಟಿ ಖರ್ಚು ಮಾಡಿದ್ದಾರೆ.

    ಶಂಕರಮಠ ಬಳಿಯ ಸ್ವಾಮಿ ವಿವೇಕಾನಂದ ಪಾರ್ಕ್ ಅಭಿವೃದ್ಧಿಗಾಗಿ ಕೋಟ್ಯಾಂತರ ರೂ. ಖರ್ಚು ಮಾಡಿದ್ದಾರೆ. ಈಗಾಗಲೇ ಈ ಪಾರ್ಕಿನಲ್ಲಿ ವಾಕಿಂಗ್ ಪಾಥ್ ಗಳಿಗೆ ಕಾಬುಲ್ ಕಲ್ಲು, ಸಾವಿರಾರು ವರ್ಷ ಆದ್ರೂ ಅಲುಗಾಡದ ಕಲ್ಲುಗಳು ಮತ್ತು ಹಸಿರು ಗಿಡ ಮರಗಳು ಇದ್ದವು. ಆದರೆ ಈ ಪಾರ್ಕನ್ನು ಶಾಸಕ ಗೋಪಾಲಯ್ಯ ಹಾಗೂ ಬಿಬಿಎಂಪಿ ಸದಸ್ಯರು ಸೇರಿ ಅಭಿವೃದ್ಧಿ ಮಾಡುತ್ತೇವೆ ಅಂತ ಚೆನ್ನಾಗಿದ್ದ ಗಿಡಗಳನ್ನ, ಕಲ್ಲುಗಳನ್ನ ಕಿತ್ತು ಹೊಸದಾಗಿ ಕಾಂಕ್ರೀಟ್ ಹಾಕಿ ಟೈಲ್ಸ್ ಪಾಥ್ ಮಾಡುತ್ತಿದ್ದಾರೆ.

    ಟೈಲ್ಸ್ ಪಾಥ್ ನಲ್ಲಿ ಮಳೆ ನೀರು ಬಂದರೆ ನೀರು ಭೂಮಿಗೆ ಇಂಗೋದೆ ಇಲ್ಲ. ಹಳೆಯ ವಾಕಿಂಗ್ ಪಾಥ್ ಗೆ ಏನಾಗಿತ್ತು. ಅಭಿವೃದ್ಧಿ ಮಾಡಿ ಅಂದರೆ ಅನಾವಶ್ಯಕವಾಗಿ ದುಡ್ಡನ್ನ ಯಾಕೆ ಹಾಳು ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ನರೇಂದ್ರ ಬಾಬು ಅವರು ಆಕ್ರೋಶಗೊಂಡು ಪ್ರಶ್ನಿಸಿದ್ದಾರೆ.

    ಈ ಪಾರ್ಕ್ ನಲ್ಲಿ ಈಗಾಗಲೇ ಒಂದು ಓಪನ್ ಜಿಮ್ ಇದೆ. ಇದೀಗ ಮತ್ತೊಂದು ಜಿಮ್ ಮಾಡುತ್ತಿದ್ದಾರೆ. ಇದಕ್ಕಾಗಿ 30 ಲಕ್ಷ ರೂಪಾಯಿ ಖರ್ಚು ಮಾಡುತ್ತಿದ್ದಾರೆ. ಇದ್ದ ಗಿಡಗಳನ್ನೆಲ್ಲ ಕಡಿದು ಹಾಕಿ ಹೊಸ ಗಿಡಗಳನ್ನ ನೆಡುವುದಕ್ಕೆ 30 ಲಕ್ಷ ರೂಪಾಯಿಗಳನ್ನ ಬಳಸುತ್ತಿದ್ದಾರೆ. ಅಷ್ಟೇ ಅಲ್ಲದೇ ಅಭಿವೃದ್ಧಿ ಹೆಸರಲ್ಲಿ ಚೆನ್ನಾಗಿ ಬೆಳೆದಿದ್ದ ಮರಗಳಿಗೆ ಕೊಡಲಿ ಹಾಕಿದ್ದಾರೆ. ಅಭಿವೃದ್ಧಿ ಕಾಮಗಾರಿ ಬಗ್ಗೆ ಟೆಂಡರ್ ಪಡೆದಿರುವವರು ಯಾರು?, ಯಾವ ನಿಧಿಯಿಂದ ಹಣ ಬಂದಿದೆ? ಎಷ್ಟು ಹಣದಲ್ಲಿ ಕಾಮಗಾರಿ ನಡೆಯುತ್ತಿದೆ? ಅಂತಾ ಸರ್ವಾಜನಿಕರಿಗೆ ತಿಳಿಯುವಂತೆ ನೋಟಿಸ್ ಹಾಕಬೇಕು. ಆದ್ರೆ ಇಲ್ಲಿ ಅದೂ ಕೂಡ ಹಾಕಿಲ್ಲ. ಈ ಪಾರ್ಕ್ ಅಭಿವೃದ್ಧಿಗೆ ಸುಮಾರು 1.30 ಕೋಟಿ ಖರ್ಚು ಮಾಡುತ್ತಿದ್ದು, ಹಣವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ನಾವು ಈ ಸಂಬಂಧ ದೂರು ದಾಖಲು ಮಾಡುತ್ತೇವೆ ಎಂದು ಮಾಜಿ ಉಪಮೇಯರ್ ಹರೀಶ್ ಎಚ್ಚರಿಸಿದ್ದಾರೆ.

    ಮಾಜಿ ಶಾಸಕ ನರೇಂದ್ರ ಬಾಬು

    ಈ ಬಗ್ಗೆ ಶಾಸಕ ಗೋಪಾಲಯ್ಯ ಪ್ರತಿಕ್ರಿಯಿಸಿ, ಯಾವುದೇ ದುಂದುವೆಚ್ಚ ಮಾಡುತ್ತಿಲ್ಲ. ಹಣ ದುರುಪಯೋಗ ಮಾಡಿದರೆ ಜನ ಮತ್ತೆ ನನ್ನ ಶಾಸಕ ಮಾಡುತ್ತಿರಲಿಲ್ಲ. ನನ್ನ ಕ್ಷೇತ್ರದ ಇತರೆ ಪಾರ್ಕ್ ನ ಅಭಿವೃದ್ಧಿ ಮಾದರಿಯಲ್ಲೇ ಇಲ್ಲೂ ಅಭಿವೃದ್ಧಿ ಮಾಡುತ್ತಿದ್ದೇವೆ. ಜನರ ಜೊತೆ ಮಾತನಾಡಿಯೇ ಅಲ್ಲಿ ಹೊಸ ಮಾದರಿಯ ಪಾರ್ಕ್ ಮಾಡುತ್ತಿರುವುದು. ಪಾರ್ಕ್ ಉದ್ಘಾಟನೆಯಾದ ಮೇಲೆ ನೋಡಿ ಬೆಂಗಳೂರಿನ ಬೆಸ್ಟ್ ಪಾರ್ಕ್ ಆಗುತ್ತದೆ ಎಂದು ಹೇಳುವ ಮೂಲಕ ಸಮರ್ಥಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ನಾಲ್ಕು ವರ್ಷಗಳ ನಂತ್ರ ಅಂಜನಾಪುರ ಡ್ಯಾಂನ ಉದ್ಯಾನವನ ಓಪನ್

    ನಾಲ್ಕು ವರ್ಷಗಳ ನಂತ್ರ ಅಂಜನಾಪುರ ಡ್ಯಾಂನ ಉದ್ಯಾನವನ ಓಪನ್

    ಶಿವಮೊಗ್ಗ: ಜಿಲ್ಲೆಯ ಶಿಕಾರಿಪುರ ತಾಲೂಕಿನ ಅಂಜನಾಪುರ ಇದೂವರೆಗೂ ಜಲಾಶಯದಿಂದ ಖ್ಯಾತಿಗಳಿಸಿತ್ತು. ಈಗ ಇಲ್ಲಿ ನಿರ್ಮಾಣವಾಗಿರುವ ವಿಶಿಷ್ಟ ಉದ್ಯಾನವನದಿಂದಾಗಿ ಖ್ಯಾತಿಗಳಿಸುತ್ತಿದೆ.

    ಅಂಜನಾಪುರ ಡ್ಯಾಂ ಆವರಣದಲ್ಲಿ ನಾಲ್ಕು ವರ್ಷದ ಹಿಂದೆ ಆರಂಭಗೊಂಡ ಉದ್ಯಾನವನ ನಿರ್ಮಾಣ ಕಾಮಗಾರಿ ಪೂರ್ಣಗೊಂಡು ಈ ವರ್ಷದಿಂದ ಸಾರ್ವಜನಿಕರ ವೀಕ್ಷಣೆಗೆ ತೆರೆದಿದೆ. ಗ್ರಾಮೀಣ ಬದುಕನ್ನು ಪ್ರತಿಬಿಂಬಿಸುವ ಕಲಾಕೃತಿಗಳಿಂದ ಈ ಉದ್ಯಾನವನ ಎಲ್ಲರನ್ನೂ ಆಕರ್ಷಿಸುತ್ತಿದೆ.

    ಉದ್ಯಾನವನ ಪ್ರವೇಶದಲ್ಲೇ ಈಸೂರು ಹೋರಾಟದ ಕಲಾಕೃತಿಗಳಿವೆ. ಗ್ರಾಮೀಣ ಕುಟುಂಬ, ಬೇಸಾಯ, ಭತ್ತದ ನಾಟಿ ಡೊಳ್ಳುಕುಣಿತ, ಜಗ್ಗಲಿಗೆ ಕುಣಿತ, ಕೋಲು ಕುಣಿತ, ಮಂಗಳವಾದ್ಯ, ಭಜನೆ, ಕುರಿ ಕಾಯುವ ದೃಶ್ಯ, ವಯೋವೃದ್ಧ ದನ ಕಾಯುವ ಹಾಗೂ ಎಮ್ಮೆ ಮೇಲೆ ಬಾಲಕ ಕುಳಿತ ಕಲಾಕೃತಿಗಳು ಉದ್ಯಾನದಲ್ಲಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿವೆ.

    ಶಿಕಾರಿಪುರ ತಾಲೂಕಿನಲ್ಲಿ ಹರಿಯುವ ಕುಮದ್ವತಿ ನದಿಗೆ ಡ್ಯಾಂ ನಿರ್ಮಿಸಲು 1927ರಲ್ಲಿ ಮೈಸೂರು ಮಹಾರಾಜರು ಶಂಕುಸ್ಥಾಪನೆ ಮಾಡಿದ್ದರು. ಸುಮಾರು 10 ಸಾವಿರ ಎಕರೆ ಭೂಮಿಗೆ ನೀರುಣಿಸುತ್ತಿರುವ ಈ ಡ್ಯಾಂ ತುಂಬಿದಾಗ ಮಾತ್ರ ಜನ ಬಂದು ನಯನ ಮನೋಹರ ದೃಶ್ಯ ಕಣ್ತುಂಬಿಕೊಳ್ಳುತ್ತಿದ್ದರು. ಈಗ ವರ್ಷವಿಡೀ ಇಲ್ಲಿರುವ ಕಲಾಕೃತಿಗಳು ಜನರನ್ನು ಸೆಳೆಯಲಿವೆ. ಶಿಕಾರಿಪುರ ತಾಲೂಕಿನ ಪ್ರವಾಸಿ ತಾಣಗಳ ಸಾಲಿಗೆ ಹೊಸ ಸೇರ್ಪಡೆಯಾಗಿ ಈ ಅಂಜನಾಪುರ ಡ್ಯಾಂ ಉದ್ಯಾನವನ ಖ್ಯಾತಿ ಗಳಿಸುತ್ತಿದೆ.

  • ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಅರಣ್ಯ ಸಚಿವ ದಿಢೀರ್ ಭೇಟಿ!

    ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಅರಣ್ಯ ಸಚಿವ ದಿಢೀರ್ ಭೇಟಿ!

    ಬೆಂಗಳೂರು: ಅರಣ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಸಚಿವ ಶಂಕರ್ ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ದಿಢೀರ್ ಭೇಟಿ ನೀಡಿ ವ್ಯವಸ್ಥೆಯನ್ನು ಪರಿಶೀಲನೆ ನಡೆಸಿದ್ದಾರೆ.

    ಸಚಿವರು ಭೇಟಿ ನೀಡಿದ ಸಂದರ್ಭದಲ್ಲಿ ಜೈವಿಕ ಉದ್ಯಾನವನದ ಮುಖ್ಯ ನಿರ್ವಹಣಾಧಿಕಾರಿ ಗೋಕುಲ್ ಗೈರು ಹಾಜರಾಗಿದ್ದು, ಡಿ.ಡಿ. ಕುಶಾಲಪ್ಪಗೆ ಸಚಿವರು ತರಾಟೆ ತೆಗೆದುಕೊಂಡಿದ್ದರು. ಇದೇ ಸಂದರ್ಭದಲ್ಲಿ ತಮ್ಮ ಭೇಟಿಯ ನೆನಪಿಗಾಗಿ ಬೇವಿನ ಗಿಡವನ್ನು ನೆಟ್ಟಿದ್ದಾರೆ. ಮೃಗಾಲಯಕ್ಕೆ ಭೇಟಿಕೊಟ್ಟ ಸಚಿವರು ಪ್ರವಾಸಿಗರಲ್ಲಿ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದ ಸಚಿವರು ಮತ್ತಷ್ಟು ಸೌಲಭ್ಯಗಳ ಬಗ್ಗೆ ಪ್ರವಾಸಿಗರ ಬಳಿ ಕೇಳಿ ತಿಳಿದು ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.

    ಸಚಿವರು ಸಸ್ಯಾಹಾರಿ, ಮಾಂಸಾಹಾರಿ ಸಫಾರಿ ಹಾಗೂ ಚಿಟ್ಟೆ ಪಾರ್ಕ್ ಗೆ ಭೇಟಿಕೊಟ್ಟು ಪ್ರಾಣಿಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ. ಇದೇ ಸಂದರ್ಭದಲ್ಲಿ ಆನೆ ಸಫಾರಿಯಲ್ಲಿ ಆನೆಯ ಆಶೀರ್ವಾದ ಪಡೆದಿದ್ದು ವಿಶೇಷವಾಗಿತ್ತು. ಇನ್ನು ಸಫಾರಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿ ಗುಣಮಟ್ಟವನ್ನು ಕಾಪಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

    ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಉದ್ಯಾನವನದಲ್ಲಿ ಹೆಚ್ಚಿನ ಬಯಲು ಪ್ರದೇಶ ಇದ್ದು, ಅಲ್ಲಿ ಮರಗಳನ್ನು ಬೆಳೆಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಜೊತೆಗೆ ಮೃಗಾಲಯ ಹಾಗೂ ಸಫಾರಿಗಳ ಮುಖ್ಯದ್ವಾರದ ಬಳಿ ಉದ್ಯಾನವನ ಹಾಗೂ ಕಿರು ಜಲಪಾತಗಳು ಸೃಷ್ಟಿಸಿ ಪ್ರವಾಸಿಗರನ್ನು ಆಕರ್ಷಿಸಲು ಯೋಜನೆ ರೂಪಿಸುವಂತೆ ತಿಳಿಸಿದ್ದೇವೆ. ಬಹಳ ವರ್ಷಗಳಿಂದ ಇಲ್ಲಿ ಕೆಲಸ ಮಾಡುವ ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸುವಂತೆ ಬೇಡಿಕೆ ಇದೆ. ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಂಡು ಖಾಯಂಗೊಳಿಸುವುದಾಗಿ ತಿಳಿಸಿದರು.

  • ತಾಯಿ-ಮಗುವನ್ನು ಅಟ್ಟಾಡಿಸಿಕೊಂಡು ಬಂದ ಚಿರತೆಗಳು!- ವಿಡಿಯೋ ವೈರಲ್

    ತಾಯಿ-ಮಗುವನ್ನು ಅಟ್ಟಾಡಿಸಿಕೊಂಡು ಬಂದ ಚಿರತೆಗಳು!- ವಿಡಿಯೋ ವೈರಲ್

    ನೆದರ್ಲ್ಯಾಂಡ್: ಉದ್ಯಾನವನೊಂದರಲ್ಲಿ ತಾಯಿ-ಮಗು ಸೇರಿದಂತೆ ಕುಟುಂಬದವರನ್ನು ಎರಡು ಚಿರತೆಗಳು ಅಟ್ಟಾಡಿಸಿಕೊಂಡು ಹೋಗಿರುವ ಘಟನೆ ನೆದರ್ಲ್ಯಾಂಡ್ ಹೇಗ್ ನಗರದಲ್ಲಿ ನಡೆದಿದೆ.

    ಡಚ್ ವನ್ಯಜೀವಿ ಉದ್ಯಾನವನದಲ್ಲಿ ಈ ಘಟನೆ ಸಂಭವಿಸಿದ್ದು, ದಂಪತಿ ಕಾರಿನಿಂದ ಹೊರಬಂದ ಬಳಿಕ ಚಿರತೆಗಳು ಹಿಂಬಾಲಿಸಿವೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


    ಫ್ರಾನ್ಸ್ ನ ದಂಪತಿ ತಮ್ಮ ಮಗುವಿನೊಂದಿಗೆ ಬೀಕ್ಸೆ ಬರ್ಗೆನ್ ಸಫಾರಿ ಪಾರ್ಕ್ ಗೆ ಹೋಗಿದ್ದರು. ಉದ್ಯಾನವನದಲ್ಲಿ ಕಾರಿನಿಂದ ಇಳಿಯಬಾರದು ಎಂದು ಮುಂಜಾಗ್ರತಾ ಕ್ರಮವಾಗಿ ಎಚ್ಚರಿಕೆಗಳನ್ನು ನೀಡಲಾಗಿತ್ತು. ಆದರೂ ದಂಪತಿ ತಮ್ಮ ಮಗುವಿನೊಂದಿಗೆ ಕಾರಿನಿಂದ ಇಳಿದು ಪಾರ್ಕ್ ನಲ್ಲಿ ಸುತ್ತಾಡುತ್ತಿದ್ದರು.

    ಇದೇ ವೇಳೆ ಮಹಿಳೆಯ ಕೈಯಲ್ಲಿ ಮಗು ನೋಡಿ ಒಂದು ಚಿರತೆ ಹಿಂಬಾಲಿಸಿದೆ. ಅದರಿಂದ ತಪ್ಪಿಸಿಕೊಂಡು ಕಾರಿನ ಬಳಿ ಹೋಗುತ್ತಿದ್ದಂತೆಯೇ ಮತ್ತೊಂದು ಚಿರತೆ ದೂರದಿಂದ ತಾಯಿ ಮಗುವಿನ ಬಳಿ ಓಡಿ ಬಂದಿದೆ. ಆಗ ಭಯಗೊಂಡ ತಾಯಿ ಕೆಲ ಸೆಕೆಂಡ್ ನಿಂತು ಬಿಟ್ಟಿದ್ದಾರೆ. ನಂತರ ಮಗುವನ್ನು ಎತ್ತಿಕೊಂಡು ತಾಯಿ ಕಾರಿ ಬಳಿ ಓಡಿದ್ದಾರೆ. ಆಗಲೂ ಚಿರತೆ ಆಕೆಯನ್ನು ಹಿಂಬಾಲಿಸಿಕೊಂಡು ಹೋಗಿದೆ. ಕೂಡಲೇ ಎಲ್ಲರೂ ಕಾರಿನೊಳಗೆ ಹೋಗಿದ್ದು, ತಮ್ಮ ಪ್ರಾಣವನ್ನು ಉಳಿಸಿಕೊಂಡಿದ್ದಾರೆ.

    ಅದೇ ಉದ್ಯಾನವನಕ್ಕೆ ಬಂದಿದ್ದ ಬೇರೆ ಪ್ರವಾಸಿಗರು ಕಾರಿನಲ್ಲಿ ಕುಳಿತು ಪಾರ್ಕ್ ವೀಕ್ಷಿಸುತ್ತಿದ್ದ ಸಂದರ್ಭದಲ್ಲಿ ತಮ್ಮ ಮೊಬೈಲ್ ನಲ್ಲಿ ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ನಂತರ ಇದನ್ನು ಯೂಟ್ಯೂಬ್ ಗೆ ಅಪ್ಲೋಡ್ ಮಾಡಿದ್ದಾರೆ. ಇದೂವರೆಗೂ 46 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

    ಪಾರ್ಕ್ ನಲ್ಲಿ ಪ್ರವಾಸಿಗರು ಕಾರಿನಿಂದ ಹೊರಗಿಳಿಯಬಾರದು ಎಂದು ಉದ್ಯಾನವನದಲ್ಲಿ ನಿರ್ದೇಶನಗಳಿವೆ. ಆದ್ರೂ ಈ ದಂಪತಿ ಕಾರಿನಿಂದ ಹೊರಗಿಳಿದು ಪಾರ್ಕ್‍ನ ನಿಯಮವನ್ನು ಉಲ್ಲಂಘಿಸಿದ್ದಾರೆ. ಸದ್ಯ ದಂಪತಿ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದು, ಈ ಘಟನೆಯಿಂದ ತೀವ್ರ ಆಘಾತಕ್ಕೊಳಗಾಗಿದ್ದಾರೆ ಎಂದು ಪಾರ್ಕ್ ಮ್ಯಾನೇಜ್ ಮೆಂಟ್ ತಿಳಿಸಿದೆ.

  • ಪ್ರಾಣಿಗಳ ಸರಣಿ ಸಾವಿನಿಂದ ಕಂಗೆಟ್ಟಿದ್ದ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿ ಸೇರ್ಪಡೆ

    ಪ್ರಾಣಿಗಳ ಸರಣಿ ಸಾವಿನಿಂದ ಕಂಗೆಟ್ಟಿದ್ದ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿ ಸೇರ್ಪಡೆ

    ಬೆಂಗಳೂರು: ಪ್ರಾಣಿಗಳ ಸರಣಿ ಸಾವಿನಿಂದ ಕಂಗೆಟ್ಟಿದ್ದ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಇದೀಗ ಹೊಸ ಅತಿಥಿಗಳ ಸೇರ್ಪಡೆಯಿಂದ ಹೆಚ್ಚು ಪ್ರವಾಸಿಗರನ್ನು ಸೆಳೆಯುತ್ತಿದೆ.

    ಜೈವಿಕ ಉದ್ಯಾನವನಕ್ಕೆ ಗುರುವಾರ ಕೂಡ ಹೊಸ ಅತಿಥಿಯೊಬ್ಬರು ಸೇರ್ಪಡೆಯಾಗಿದ್ದಾರೆ. ಬನ್ನೇರುಘಟ್ಟ ಜೈವಿಕ ಉದ್ಯಾನವನದ ವೇದಾ ಎಂಬ ಆನೆ ಹೆಣ್ಣು ಮರಿಗೆ ಜನ್ಮ ನೀಡಿದೆ. ಈ ಮೂಲಕ ಉದ್ಯಾನವನದ ಆನೆಗಳ ಸಂಖ್ಯೆ 22 ಕ್ಕೆ ಏರಿಕೆಯಾಗಿದೆ.

    ಇದೇ ತಿಂಗಳಿನಿಂದ ಬನ್ನೇರುಘಟ್ಟಕ್ಕೆ ಹೊಸ ಅತಿಥಿಗಳ ಆಗಮನವಾಗುತ್ತಿದ್ದು, ಮೊದಲಿಗೆ ಮೈಸೂರು ಜೂ ನಿಂದ ಗೌರಿ ಎಂಬ ಎರಡೂವರೆ ವರ್ಷದ ಜಿರಾಫೆಯನ್ನು ತರಲಾಗಿತ್ತು. ನಂತರ ಪಾರ್ಕ್ ನಲ್ಲಿರುವ ಝೀಬ್ರಾ ಮರಿಯೊಂದಕ್ಕೆ ಕಳೆದ ವಾರ ಜನ್ಮ ನೀಡಿತ್ತು. ಈಗ ವೇದಾ ಆನೆ ಹೆಣ್ಣು ಮರಿಗೆ ಜನ್ಮ ನೀಡಿದೆ.

    ಸದ್ಯಕ್ಕೆ ತಾಯಿ ಮತ್ತು ಮರಿಯಾನೆ ಆರೋಗ್ಯದಿಂದ ಇವೆ. ಈಗ ಬೇಸಿಗೆ ರಜೆ ಇರುವ ಕಾರಣ ಈ ಮೂರು ಹೊಸ ಅತಿಥಿಗಳ ಆಗಮನದಿಂದ ಬನ್ನೇರುಘಟ್ಟಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದೆ.

  • ಜೆಪಿ ಪಾರ್ಕ್ ನಲ್ಲಿ ಮಹಿಳೆಯನ್ನ ಪೊದೆಯೊಳಗೆ ಎಳೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನ

    ಜೆಪಿ ಪಾರ್ಕ್ ನಲ್ಲಿ ಮಹಿಳೆಯನ್ನ ಪೊದೆಯೊಳಗೆ ಎಳೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನ

    ಬೆಂಗಳೂರು: ಸಾರ್ವಜನಿಕ ಉದ್ಯಾನವನದಲ್ಲಿ ಹಾಡಹಗಲೇ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪಿ ಈಗ ಪೊಲೀಸರ ಆತಿಥಿಯಾಗಿದ್ದಾನೆ.

    ಈ ಘಟನೆ ಫೆಬ್ರವರಿ 21 ರಂದು ನಗರದ ಮತ್ತಿಕೆರೆಯ ಜೆಪಿ ಪಾರ್ಕ್ ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕೆಎಸ್‍ಆರ್ ಟಿಸಿ ಬಸ್ ಚಾಲಕನಾಗಿರೋ ಶ್ಯಾಮ್ ಎಂಬಾತ ಈ ಕೃತ್ಯ ಎಸಗಿದ್ದಾನೆ.

    ನಡೆದಿದ್ದೇನು?: ಫೆಬ್ರವರಿ 21ರಂದು ರಂದು ಗೃಹಿಣಿಯೊಬ್ಬರು ವಾಯುವಿಹಾರಕ್ಕೆಂದು ಮತ್ತಿಕೆರೆಯ ಜೆಪಿ ಪಾರ್ಕ್ ಗೆ ಬೆಳಗ್ಗೆ ಸುಮಾರು 11.30ಕ್ಕೆ ಹೋಗಿದ್ದಾರೆ. ಗೃಹಿಣಿ ಪಾರ್ಕ್‍ನ ಒಳಭಾಗದಲ್ಲಿ ಹೋಗಿ ವಾಯುವಿಹಾರ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಆರೋಪಿ ಶ್ಯಾಮ್ ಬಂದು ಏಕಾಏಕಿ ಆಕೆಯ ಕೈ ಹಿಡಿದು ಎಳೆದುಕೊಂಡು ಪಕ್ಕದಲ್ಲಿದ್ದ ಪೊದೆಯೊಳಗೆ ಹೋಗಿದ್ದಾನೆ. ಸಂತ್ರಸ್ತೆಯನ್ನು ತಬ್ಬಿಕೊಂಡು ಕೂಗಾಡಲು ಬಿಡದಂತೆ ಬಾಯಿಯನ್ನ ಮುಚ್ಚಿದ್ದಾನೆ. ಬಳಿಕ ಗೃಹಿಣಿ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ್ದಾನೆ.

    ಸಂತ್ರಸ್ತೆ ಕೂಗಾಡಿದ್ದರಿಂದ ಯಾರಿಗಾದರೂ ಈ ವಿಚಾರ ಹೇಳಿದರೆ ಕೊಲೆ ಮಾಡುತ್ತೀನಿ ಎಂದು ಜೀವ ಬೆದರಿಕೆ ಹಾಕಿದ್ದು, ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾನೆ. ಅಷ್ಟರಲ್ಲಿ ಅಲ್ಲೇ ಪಾರ್ಕ್‍ನಲ್ಲಿದ್ದ ಸಾರ್ವಜನಿಕರು ಸಂತ್ರಸ್ತೆಯ ಸಹಾಯಕ್ಕೆ ದೌಡಾಯಿಸಿದ್ದಾರೆ. ನಂತರ ಸಾರ್ವಜನಿಕರ ಆರೋಪಿಯನ್ನ ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಈ ಘಟನೆ ಸಂಬಂಧ ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಶ್ಯಾಮ್ ನನ್ನು ಬಂಧಿಸಿದ್ದಾರೆ.