Tag: Park

  • ಕಾಲೇಜಿಗೆ ಚಕ್ಕರ್- ಪಾರ್ಕಿನಲ್ಲಿ ವಿದ್ಯಾರ್ಥಿಗಳಿಂದ ಅಸಭ್ಯ ವರ್ತನೆ

    ಕಾಲೇಜಿಗೆ ಚಕ್ಕರ್- ಪಾರ್ಕಿನಲ್ಲಿ ವಿದ್ಯಾರ್ಥಿಗಳಿಂದ ಅಸಭ್ಯ ವರ್ತನೆ

    -ಪಡ್ಡೆ ಹುಡುಗರ ಗ್ಯಾಂಗ್ ಹಾಜರ್

    ದಾವಣಗೆರೆ: ಕಾಲೇಜಿಗೆ ಚಕ್ಕರ್ ಹಾಕಿ ನಗರದ ಕೆಲ ವಿದ್ಯಾರ್ಥಿಗಳು ಪಾರ್ಕಿನಲ್ಲಿ ಕುಳಿತು ಅಸಭ್ಯವಾಗಿ ವರ್ತಿಸಿದ್ದಾರೆ.

    ನಗರದ ವಿಶ್ವೇಶ್ವರಯ್ಯ ಪಾರ್ಕ್, ವಿದ್ಯಾನಗರ ಪಾರ್ಕ್ ಸೇರಿದಂತೆ ಪ್ರಮುಖ ಪಾರ್ಕ್ ತುಂಬಾ ಪ್ರೇಮ ಪಕ್ಷಿಗಳು ಗರಿ ಬಿಚ್ಚಿ ಹಾರಾಡುತ್ತಿರುತ್ತವೆ. ಅದರಲ್ಲೂ ವಾಯು ವಿಹಾರಕ್ಕೆ ಎಂದು ನಗರದ ಜನರು ಪಾರ್ಕ್ ಗಳಿಗೆ ಹೋದರೆ ಸಾಕು ಮುಜುಗರಪಡುವಂತ ಸನ್ನಿವೇಶಗಳೇ ಹೆಚ್ಚಿರುತ್ತವೆ. ಕಾಲೇಜು ಯುವಕ- ಯುವತಿಯರು ಪಾರ್ಕಿನ ಒಳಗೆ ಕೂತು ಪ್ರಪಂಚವನ್ನೇ ಮರೆತಿರುತ್ತಾರೆ. ಆದರೆ ಇದನ್ನು ನೋಡಲು ಪಡ್ಡೆ ಹುಡುಗರ ಗ್ಯಾಂಗ್‍ಗಳು ಹಾಜರು ಇರುತ್ತವೆ. ಪಾರ್ಕಿನಲ್ಲಿ ನಡೆಯುವ ಇಂತಹ ಅಸಭ್ಯ ಘಟನೆಗಳಿಗೆ ಪೊಲೀಸರು ಕಡಿವಾಣ ಹಾಕಬೇಕು ಇಲ್ಲವಾದ್ರೆ ಮುಂದಿನ ದಿನಗಳಲ್ಲಿ ಯಾರು ಕೂಡ ಕುಟುಂಬ ಸಮೇತರಾಗಿ ಕಾಲು ಇಡಲು ಕೂಡ ತೊಂದರೆಯಾಗುತ್ತದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ. ಇದನ್ನೂ ಓದಿ: ಕಾಲೇಜಿಗೆ ಬಂದ ವಿದ್ಯಾರ್ಥಿಗಳು ಪಾರ್ಕಿನೊಳಗೆ ಮೋಜು ಮಸ್ತಿ

    ಪಾರ್ಕಿನಲ್ಲಿ ಬಹುತೇಕ ಪಿಯುಸಿ ಹಾಗೂ ಡಿಗ್ರಿ ಕಾಲೇಜು ವಿದ್ಯಾರ್ಥಿಗಳೇ ಹೆಚ್ಚಿದ್ದು, ಕ್ಲಾಸಿಗೆ ಚಕ್ಕರ್ ಹಾಕಿ ಪಾರ್ಕ್ ಪೊದೆಗಳಲ್ಲಿ ಕೂತಿರುತ್ತಾರೆ. ಕೆಲವೊಮ್ಮೆ ಕುಟುಂಬದ ಜೊತೆ ಹೋಗುವುದಕ್ಕೂ ಮುಜುಗರವಾಗುವಂತಹ ಸನ್ನಿವೇಶಗಳು ಸೃಷ್ಟಿ ಆಗಿರುತ್ತವೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದರೆ ಇದುವರೆಗೂ ಈ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ. ನಮ್ಮ ಸಿಬ್ಬಂದಿ ಗಸ್ತು ತಿರುಗುತ್ತಿದ್ದರು. ಎಲ್ಲಾ ಕಡೆಗಳಲ್ಲಿ ಸೂಕ್ತವಾದ ಸಿಬ್ಬಂದಿಯನ್ನು ನಿಯೋಜನೆ ಮಾಡಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

  • ಕಾಲೇಜಿಗೆ ಬಂದ ವಿದ್ಯಾರ್ಥಿಗಳು ಪಾರ್ಕಿನೊಳಗೆ ಮೋಜು ಮಸ್ತಿ

    ಕಾಲೇಜಿಗೆ ಬಂದ ವಿದ್ಯಾರ್ಥಿಗಳು ಪಾರ್ಕಿನೊಳಗೆ ಮೋಜು ಮಸ್ತಿ

    ಚಿಕ್ಕಬಳ್ಳಾಪುರ: ಕಾಲೇಜಿಗೆ ಹೋಗುತ್ತೇನೆ ಎಂದು ವಿದ್ಯಾರ್ಥಿಗಳು ಪಾರ್ಕಿನಲ್ಲಿ ಮೋಜು ಮಾಡುತ್ತಿರುವ ದೃಶ್ಯ ಚಿಕ್ಕಬಳ್ಳಾಪುರದಲ್ಲಿ ಕಂಡು ಬಂದಿದೆ.

    ಚಿಕ್ಕಬಳ್ಳಾಪುರ ನಗರ ಹೊರವಲಯದ ಸೂಲಾಲಪ್ಪನದಿನ್ನೆಯಲ್ಲಿರುವ ಅರಣ್ಯವನ್ನು ಮಾರ್ಪಡಿಸಿ ಸಾರ್ವಜನಿಕರ ಅನುಕೂಲಕ್ಕಾಗಿ ಅರಣ್ಯ ಇಲಾಖೆ ಟ್ರೀ ಪಾರ್ಕ್ ಮಾಡಿದೆ. ಕೆಲವು ಮೂಲಭೂತ ಸೌಕರ್ಯಗಳನ್ನು ಒದಗಿಸಿ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಕಲ್ಪಿಸಿದೆ. ಆದರೆ ಇತ್ತೀಚೆಗೆ ಸಾರ್ವಜನಿಕರ ಬದಲು ಸುತ್ತಮುತ್ತಲಿರುವ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕಾಲೇಜಿಗೆ ಚಕ್ಕರ್ ಹೊಡೆದು ನೇರವಾಗಿ ಟ್ರೀ ಪಾರ್ಕ್ ಗೆ ಬಂದು ಅಸಭ್ಯವಾಗಿ ವರ್ತಿಸುತ್ತಾರೆ. ಇದನ್ನು ನೋಡಿ ಪಾರ್ಕಿಗೆ ಬರುವ ಸಾರ್ವಜನಿಕರು ಅಸಹ್ಯಪಡುವ ಸ್ಥಿತಿ ಬಂದಿದೆ.

    ಅರಣ್ಯ ಇಲಾಖೆಯ ಸೂಲಾಲಪ್ಪನದಿನ್ನೆಯ ಟ್ರೀ ಪಾರ್ಕ್ ಸುತ್ತಮುತ್ತ ಡಿಪ್ಲೋಮಾ, ಎಂಜಿನಿಯರಿಂಗ್, ಮ್ಯಾನೇಜ್‍ಮೆಂಟ್, ಐಟಿಐ, ಡಿಗ್ರಿ ಖಾಸಗಿ ಕಾಲೇಜುಗಳಿವೆ. ಕಾಲೇಜುಗಳಿಗೆ ಹೋಗುತ್ತೇವೆ ಎಂದು ಮನೆಯಲ್ಲಿ ಹೇಳಿ ಚಿಕ್ಕಬಳ್ಳಾಪುರ ನಗರಕ್ಕೆ ಬರುವ ಅದೆಷ್ಟೋ ಜನ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಕಾಲೇಜು ಬ್ಯಾಗ್ ಊಟದ ಬಾಕ್ಸ್ ಗಳ ಸಮೇತ ನೇರವಾಗಿ ಬೆಳ್ಳಂಬೆಳಗ್ಗೆ ತಮ್ಮ ಗರ್ಲ್ ಫ್ರೆಂಡ್ ಹಾಗೂ ಬಾಯ್ ಫ್ರೆಂಡ್‍ಗಳ ಜೊತೆ ಪಾರ್ಕಿಗೆ ಬರುತ್ತಾರೆ. ವಿದ್ಯಾರ್ಥಿಗಳು ಓದು ಬರಹ ಎಲ್ಲವನ್ನು ಮರೆತು ಮೋಜುಮಸ್ತಿಯಲ್ಲಿ ತೊಡಗುತ್ತಿದ್ದಾರೆ.

    ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಾದ ಅರಣ್ಯ ಇಲಾಖೆ ಜಾಣ ಕುರುಡಾಗಿದೆ. ಕಾಡಿನಂತಿದ್ದ ಸೂಲಾಲಪ್ಪನದಿನ್ನೆಯ ಅರಣ್ಯದಲ್ಲಿ, ಲಕ್ಷಾಂತರ ರೂ. ಖರ್ಚು ಮಾಡಿ ಅರಣ್ಯ ಇಲಾಖೆ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಒದಗಿಸಿ, ಮುಕ್ತ ಪ್ರವೇಶ ನೀಡಿದೆ. ಸುಂದರ ಗಿಡಮರ ಬಳ್ಳಿಗಳ ಸೌಂದರ್ಯ ಸವಿಯಬೇಕಿದ್ದ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಈಗ ವೈಯಕ್ತಿಕ ದೇಹ ಸೌಂದರ್ಯ ಸವಿಯುವುದಕ್ಕೆ ಬಳಸಿಕೊಳ್ಳುತ್ತಿದ್ದಾರೆ.

  • ಔಟ್‍ಡೋರ್ ಮೀಟಿಂಗ್ ರೂಮಿನಲ್ಲಿ ಜೋಡಿಯಿಂದ ಸೆಕ್ಸ್ – ವಿಡಿಯೋ ರೆಕಾರ್ಡ್

    ಔಟ್‍ಡೋರ್ ಮೀಟಿಂಗ್ ರೂಮಿನಲ್ಲಿ ಜೋಡಿಯಿಂದ ಸೆಕ್ಸ್ – ವಿಡಿಯೋ ರೆಕಾರ್ಡ್

    ಲಂಡನ್: ಹೊರಾಂಗಣ ಮೀಟಿಂಗ್ ಪಾಡ್‍ ರೂಮಿನಲ್ಲಿ ಬೆಳಗ್ಗೆಯೇ ದಂಪತಿ ಸೆಕ್ಸ್ ಮಾಡಿದ್ದು, ಆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಈ ಘಟನೆ ಇಂಗ್ಲೆಂಡಿನ ಪ್ರತಿಷ್ಠಿತ ಬಿಸಿನೆಸ್ ಪಾರ್ಕಿನಲ್ಲಿ ನಡೆದಿದ್ದು, ಉದ್ಯಾನವನದಲ್ಲಿದ್ದ ಜನರು ದಂಪತಿಯ ವಿಡಿಯೋವನ್ನು ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ.

    ದಂಪತಿಯನ್ನು ಮಧ್ಯವಯಸ್ಕರು ಎಂದು ಗುರುತಿಸಲಾಗಿದೆ. ಪಾರ್ಕಿನಲ್ಲಿ ಸಾರ್ವಜನಿಕರು ವಾಕಿಂಗ್ ಮಾಡುತ್ತಿದ್ದರು. ಆದರೆ ಈ ಜೋಡಿ ಪಾಡ್‍ ರೂಮಿನಲ್ಲಿ ದೈಹಿಕ ಸಂಪರ್ಕವನ್ನು ಹೊಂದಿದ್ದಾರೆ. ಪಾಡ್‍ ರೂಮನ್ನು ಗ್ಲಾಸಿನಿಂದ ಮಾಡಲಾಗಿದೆ. ಇದನ್ನು ನೋಡಿದ ಯಾರೋ ಒಬ್ಬರು ತಮ್ಮ ಮೊಬೈಲಿನಲ್ಲಿ ದಂಪತಿಯ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ. ಬಳಿಕ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ.

    ವಿಡಿಯೋ ವೈರಲ್ ಆಗುತ್ತಿದ್ದಂತೆ ನಾವು ತನಿಖೆ ಮಾಡುತ್ತಿದ್ದೇವೆ. ಆದರೆ ದಂಪತಿಯನ್ನು ಗುರುತಿಸಲು ಸಾಧ್ಯವಾಗಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಆದರೆ ಆ ವಿಡಿಯೋಗೆ ಕೆಲವರು ಅಸಭ್ಯವಾಗಿ, ಫನ್ನಿ ಫನ್ನಿಯಾಗಿ ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ದಂಪತಿಯ ವರ್ತನೆಗೆ ಕೋಪಗೊಂಡು ಬೈದಿದ್ದಾರೆ.

    ಸಾಮಾನ್ಯವಾಗಿ ಪಾರ್ಕಿನಲ್ಲಿ ಪಾಡನ್ನು ನಿರ್ಮಿಸಿರುತ್ತಾರೆ. ಯಾಕೆಂದರೆ ವಾಕಿಂಗ್ ಬರುವಂತಹವರು ಬಿಸಿನೆಸ್ ಸಂಬಂಧಿತ ಸಭೆ ಮಾಡಲು ಈ ಪಾಡ್‍ ರೂಮ್ ಬಳಸುತ್ತಾರೆ. ಆದರೆ ಈ ದಂಪತಿ ಬೆಳಗ್ಗೆಯೇ ವಾಕಿಂಗ್ ಬಂದು ಅದು ಸಾರ್ವಜನಿಕ ಪಾಡ್‍ ರೂಮಿನಲ್ಲಿ ಸೆಕ್ಸ್ ಮಾಡಿದ್ದಾರೆ.

  • ಮದ್ಯಪಾನ ಮಾಡಲು ಹಣ ನೀಡದ್ದಕ್ಕೆ ಕೊಲೆ

    ಮದ್ಯಪಾನ ಮಾಡಲು ಹಣ ನೀಡದ್ದಕ್ಕೆ ಕೊಲೆ

    ನವದೆಹಲಿ: ಮದ್ಯಪಾನ ಮಾಡಲು ಹಣ ನೀಡಿಲ್ಲ ಎಂಬ ಕಾರಣಕ್ಕೆ ಇಬ್ಬರು ಯುವಕರು ಸೇರಿ ನೆರೆಯ ಮನೆಯ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನವದೆಹಲಿಯ ಶಕುರ್ಪುರದಲ್ಲಿ ನಡೆದಿದೆ.

    ಮದ್ಯ ಖರೀದಿಸಲು ಹಣ ನೀಡದ ಚಂದರ್ ಖಾನ್‍ನನ್ನು ಶಕುರ್ಪುರದ ನಿವಾಸಿಗಳಾದ ಗಿರಿ ರಾಜ್ ಮತ್ತು ಪವನ್ ಕತ್ತು ಹಿಸುಕಿ ಹತ್ಯೆ ಮಾಡಿ ಜಿಲ್ಲಾ ಉದ್ಯಾನವನದ ಪೊದೆಯೊಳಗೆ ಎಸೆದು ಹೋಗಿದ್ದಾರೆ.

    ಪಾರ್ಕಿನಲ್ಲಿ ಮೃತ ದೇಹವೊಂದನ್ನು ಕಂಡು ತನಿಖೆ ಆರಂಭ ಮಾಡಿದ ಪೊಲೀಸರು ಮೃತ ಚಂದರ್ ಖಾನ್ ಅವರ ಸಹೋದರಿ ನೀಡಿದ ಮಾಹಿತಿಯ ಆಧಾರದ ಮೇಲೆ ಈ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

    ಈ ಘಟನೆಯ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಆರೋಪಿಗಳು ಚಂದರ್ ಖಾನ್ ಹತ್ತಿರ ಮದ್ಯ ಖರೀದಿಸಲು ಹಣ ಕೇಳಿದ್ದಾರೆ. ಈ ವೇಳೆ ಹಣ ಕೊಡಲು ನಿರಾಕರಿಸಿದ ಆತನ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಚಂದರ್ ಖಾನ್ ಸಹೋದರಿ ನೀಡಿದ ಮಾಹಿತಿ ಮೇರೆಗೆ ಈಗ ಇಬ್ಬರನ್ನು ಬಂಧಿಸಿ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

  • ಹೊರಗಿನಿಂದ ಸುಂದರ ಪಾರ್ಕ್-ಒಳಗೆ ಪ್ರೇಮಿಗಳ ಅಸಭ್ಯ ವರ್ತನೆ

    ಹೊರಗಿನಿಂದ ಸುಂದರ ಪಾರ್ಕ್-ಒಳಗೆ ಪ್ರೇಮಿಗಳ ಅಸಭ್ಯ ವರ್ತನೆ

    ಕಾರವಾರ: ದೇಹದ ಆರೋಗ್ಯ ಕಾಪಾಡಿಕೊಳ್ಳೋಕೆ ಮತ್ತು ಒಳ್ಳೆಯ ವಾತಾವರಣ ಬೇಕು ಅಂತ ಜನ ಉದ್ಯಾನವನಗಳಿಗೆ ಹೋಗುತ್ತಾರೆ. ಆದರೆ ಇಲ್ಲೊಂದು ಪಾರ್ಕಿಗೆ ಹೋಗಬೇಕು ಅಂದರೆ ಜನ ಕಣ್ಣು-ಕಿವಿ ಮುಚ್ಚಿಕೊಳ್ಳಲೇಬೇಕು.

    ಕಾರವಾರ ನಗರದ ರವೀಂದ್ರನಾಥ್ ಟಾಗೋರ್ ಬೀಚ್ ಬಳಿ ಇರೋ ಮಕ್ಕಳ ಉದ್ಯಾನವನ ಹಾಗೂ ಗಾಂಧಿ ಉದ್ಯಾನವನದಲ್ಲಿ ಎಲ್ಲಿ ನೋಡಿದರೂ ಪ್ರೇಮಿಗಳೇ ಕಾಣುತ್ತಾರೆ. ಪ್ರೇಮಿಗಳ ಅಸಭ್ಯ ವರ್ತನೆಗೆ ಹಿರಿಯರು, ಮಕ್ಕಳು ಉದ್ಯಾನವನಕ್ಕೆ ಕಾಲಿಡದ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಜನರು ಬೆಳಗ್ಗೆ ವಾಯುವಿಹಾರಕ್ಕೆ ಬರುವ ಮೊದಲೇ ವಿದ್ಯಾರ್ಥಿಗಳು ಆಗಮಿಸುತ್ತಾರೆ. ಹೀಗಾಗಿ ಪಾರ್ಕ್ ನಲ್ಲಿ ಅಶ್ಲೀಲ ಚಟುವಟಿಕೆಗಳು ನಡೆಯುತ್ತವೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.

    ಈ ಪಾರ್ಕ್ ನೋಡಿಕೊಳ್ಳಲು ಯಾವುದೇ ಸಿಬ್ಬಂದಿ ಇಲ್ಲ. ಈ ಉದ್ಯಾನವನದ ವಿದ್ಯುತ್ ದೀಪಗಳು ಕೆಟ್ಟು 2 ವರ್ಷ ಕಳೆದಿದೆ. ಹೀಗಾಗಿ ಅಶ್ಲೀಲ ಚಟುವಟಿಕೆ ಮಾಡೋರಿಗೆ ಮೆಚ್ಚಿನ ತಾಣವಾಗಿದೆ. ಇಲ್ಲಿನ ಅಶ್ಲೀಲ ದೃಶ್ಯಗಳನ್ನು ನೋಡಿ ಯಾರೂ ಕೂಡ ಬರದಂತಹ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಶಾಲಾ ವಿದ್ಯಾರ್ಥಿಗಳು ಅಶ್ಲೀಲ ಚಟುವಟಿಕೆ ನಡೆಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಅಂತ ಇಲ್ಲಿನ ನಾಗರೀಕರು ಒತ್ತಾಯಿಸಿದ್ದಾರೆ.

    ಸಾರ್ವಜನಿಕರ ಉಪಯೋಗಕ್ಕೆ ಬರಬೇಕಿದ್ದ ಪಾರ್ಕ್ ನಗರಸಭೆ ನಿರ್ಲಕ್ಷ್ಯದಿಂದ ಅಶ್ಲೀಲ ಚಟುವಟಿಕೆಯ ತಾಣವಾಗಿ ಬದಲಾಗಿದೆ. ಇನ್ನಾದರೂ ನಗರಸಭೆ ಹಾಗೂ ಜಿಲ್ಲಾಡಳಿತ ಇತ್ತ ಗಮನಿಸಿ ಲವ್ವರ್ಸ್ ಪಾರ್ಕ್ ಆಗಿ ಬದಲಾಗಿರೋ ಗಾಂಧಿ ಉದ್ಯಾನವನ ಹಾಗೂ ಮಕ್ಕಳ ಉದ್ಯಾನವನವನ್ನ ಬದಲಿಸಬೇಕಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಪಾರ್ಕಿಗೆ ಪ್ರವೇಶ ಶುಲ್ಕ ನಿಗದಿ-ಸ್ಥಳೀಯರ ಪ್ರತಿಭಟನೆ

    ಪಾರ್ಕಿಗೆ ಪ್ರವೇಶ ಶುಲ್ಕ ನಿಗದಿ-ಸ್ಥಳೀಯರ ಪ್ರತಿಭಟನೆ

    ಬೆಳಗಾವಿ: ನಗರದಲ್ಲಿರುವ ಪ್ರಸಿದ್ಧ ಕೋಟೆ ಕೆರೆಯ ಗಾರ್ಡನ್ ಪ್ರವೇಶಕ್ಕೆ ಜಿಲ್ಲಾಡಳಿತ ಪ್ರವೇಶ ಶುಲ್ಕ ನಿಗದಿ ಮಾಡಿದ್ದನ್ನು ಖಂಡಿಸಿ ಇಂದು ಬೆಳಗ್ಗೆ ಸ್ಥಳೀಯ ನಿವಾಸಿಗಳು ಪ್ರತಿಭಟನೆ ನಡೆಸಿದರು.

    ಸ್ಥಳೀಯ ಮತ್ತು ಅಕ್ಕಪಕ್ಕದ ಕಾಲೋನಿ ಜನರಿಗೆ ಕೆರೆಯ ಮೇಲಿರುವ ಗಾರ್ಡನ್ ವಾಯುವಿವಾರ ಸೇರಿದಂತೆ ಮಕ್ಕಳಿಗೆ ಆಟವಾಡಲು ಹಾಗೂ ಗ್ರಾಮೀಣ ಪ್ರದೇಶದಿಂದ ಬಂದ ಜನರಿಗೆ ಕುಳಿತು ರಿಲ್ಯಾಕ್ಸ್ ಮಾಡಲು ಅನುಕೂಲ ಆಗಿತ್ತು. ಈಗ ಪ್ರತಿಯೊಬ್ಬರಿಗೂ ಹತ್ತು ರೂಪಾಯಿ ಶುಲ್ಕ ವಿಧಿಸಿದ್ದರಿಂದ ನಿತ್ಯವೂ ಹಣ ಕೊಟ್ಟು ಕೆರೆಯ ಉದ್ಯಾನವನಕ್ಕೆ ಹೋಗಲು ಆಗುವುದಿಲ್ಲ ಎಂದು ಸಾರ್ವಜನಿಕರು ಕಿಡಿಕಾರಿದರು.

    ಇಂದು ಬೆಳಗ್ಗೆ ಜಿಲ್ಲಾಡಳಿತದ ವಿರುದ್ಧ ಧರಣಿ ಮಾಡಿ ಆಕ್ರೋಶ ಹೊರ ಹಾಕಿದ್ದು, ಕೂಡಲೇ ಪ್ರವೇಶ ಶುಲ್ಕ ಪಡೆಯುವ ಆದೇಶ ಹಿಂಪಡೆಯುವಂತೆ ಸ್ಥಳೀಯರು ಆಗ್ರಹಿಸಿದರು.

  • ತಮ್ಮ ಸ್ವಂತ ಖರ್ಚಿನಲ್ಲಿ ಪಾರ್ಕ್ ನಿರ್ಮಿಸಿದ ಪೊಲೀಸರು

    ತಮ್ಮ ಸ್ವಂತ ಖರ್ಚಿನಲ್ಲಿ ಪಾರ್ಕ್ ನಿರ್ಮಿಸಿದ ಪೊಲೀಸರು

    – ಬಿಡುವಿನ ಸಮಯದಲ್ಲಿ ಪಾಕ್ ನಿರ್ಮಾಣಕ್ಕೆ ಶ್ರಮದಾನ

    ತುಮಕೂರು: ಪೊಲೀಸ್ ಎಂದರೆ ಕೇವಲ ಬಂದೋಬಸ್ತ್, ಕೊಲೆ, ದರೋಡೆ ಪ್ರಕರಣಗಳ ತನಿಖೆ ಈ ರೀತಿಯ ಕೆಲಸದಲ್ಲೇ ಜೀವನ ಕಳೆದು ಹೋಗುತ್ತೆ. ಆದರೆ ಈ ಎಲ್ಲಾ ಒತ್ತಡಗಳ ನಡುವೆ ತುಮಕೂರು ಜಿಲ್ಲೆಯ ಪೊಲೀಸರು ಸ್ವಲ್ಪ ಡಿಫರೆಂಟಾಗಿದ್ದಾರೆ. ಇಲ್ಲಿನ ಕುಣಿಗಲ್ ತಾಲೂಕಿನ ಅಮೃತ್ತೂರು ಠಾಣಾ ಆವರಣದಲ್ಲಿ ಸುಂದರವಾದ ಉದ್ಯಾನವನ ನಿರ್ಮಿಸಿ ಇತರರಿಗೆ ಮಾದರಿಯಾಗಿದ್ದಾರೆ.

    ಹೌದು, ಅಮೃತೂರು ಪೊಲೀಸ್ ಠಾಣೆಗೆ ಭೇಟಿ ಕೊಟ್ಟರೆ ಸೀಜಾದ ಬೈಕ್‍ಗಳು, ಅಪಘಾತವಾದ ಕಾರುಗಳ ಬದಲಾಗಿ ಹಚ್ಚ ಹಸಿರಿನ ವಾತಾವರಣ ನಮ್ಮ ಕಣ್ಣಮುಂದೆ ನಿಲ್ಲುತ್ತದೆ. ತಂಪು ತಂಗಾಳಿ ನಮ್ಮ ಮನ ಮುದಗೊಳಿಸುತ್ತದೆ. ಇಲ್ಲಿನ ಪೊಲೀಸರು ಸ್ವತಃ ತಾವೇ ಶ್ರಮದಾನದ ಮೂಲಕ ಮುದ್ದಾದ ಉದ್ಯಾನವನ ನಿರ್ಮಿಸಿಕೊಂಡು ತಮ್ಮ ಪರಿಸರ ಪ್ರೇಮ ತೋರಿದ್ದಾರೆ.

    ಪ್ರಸ್ತುತ ಕ್ಯಾತಸಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಪಿಎಸ್‍ಐ ರಾಜು ಈ ಪಾರ್ಕ್ ನಿರ್ಮಾಣಕ್ಕೆ ಕಾರಣಿಕರ್ತರು. ರಾಜು ಅಮೃತ್ತೂರಲ್ಲಿ ಕಾರ್ಯನಿರ್ವಹಿಸುತಿದ್ದ ಸಂದರ್ಭದಲ್ಲಿ ಅವರ ಆಸಕ್ತಿ ಹಾಗೂ ಸಹೋದ್ಯೋಗಿಗಳ ಸಹಕಾರದಿಂದ ಸುಂದವಾದ ಪಾರ್ಕ್ ಕಂಗೊಳಿಸುತಿದೆ. ಈ ಠಾಣೆಯ ಅಧಿಕಾರಿಗಳು ಎಷ್ಟೇ ಒತ್ತಡ ಇದ್ದರೂ ತಮ್ಮ ಕರ್ತವ್ಯದ ನಡುವೆ ಶ್ರಮದಾನದ ಮೂಲಕ ಅತ್ಯಂತ ಸುಂದರವಾದ ಪಾರ್ಕ ಕಟ್ಟಿಕೊಂಡಿದ್ದಾರೆ. ಬಿಡುವಿನ ವೇಳೆ ಬಂದು ಶ್ರದ್ಧೆಯಿಂದ ಶ್ರಮದಾನ ಮಾಡಿ ತಮ್ಮ ಠಾಣೆಯ ಆವರಣ ಹಚ್ಚ ಹಸಿರಿನಂತೆ ಕಂಗೊಳಿಸುವಂತೆ ಮಾಡಿಕೊಂಡಿದ್ದಾರೆ.

    ಸುಮಾರು ಅರ್ಧ ಎಕರೆ ಭೂ ಪ್ರದೇಶದಲ್ಲಿ ಈ ಪಾರ್ಕ್ ನಿರ್ಮಾಣವಾಗಿದ್ದು, ಮಧ್ಯ ಕಲ್ಲಿನ ಮಂಟಪ, ವಿವಿಧ ಹೂವಿನ ಗಿಡಗಳು, ಅಲಂಕಾರಿಕ ಬಳ್ಳಿ, ನೆಲದ ಮೇಲೆ ಹುಲ್ಲಿನ ಹಾಸು, ಹಣ್ಣಿನ ಗಿಡಗಳು ಹೀಗೆ ಸ್ವಚ್ಚ ಸುಂದರವಾಗಿ ಉದ್ಯಾನವನ ಮೂಡಿಬಂದಿದೆ. ಸುತ್ತಲು ವಾಕಿಂಗ್ ಪಾಥ್ ನಿರ್ಮಾಣ ಮಾಡಲಾಗಿದೆ. ಅಮೃತೂರಿನ ಕೆಲ ಸಾರ್ವಜನಿಕರೂ ಕೂಡಾ ಈ ಪಾರ್ಕ್‍ಲ್ಲಿ ಬಂದು ಸುತ್ತಾಡಿ ವಿಶ್ರಾಂತಿ ಪಡೆಯುತ್ತಾರೆ. ಹಾಗೇಯೇ ಪೊಲೀಸರು ಕೂಡಾ ಹಚ್ಚಹಸಿರಿನಿಂದ ಕಂಗೊಳಿಸುವ ಈ ಪಾರ್ಕ್ ನಲ್ಲಿ ಕುಳಿತು ತಮ್ಮ ಒತ್ತಡ ಕಡಿಮೆ ಮಾಡಿಕೊಳ್ಳುತ್ತಾರೆ.

    ಈ ಪಾರ್ಕ್ ನಿರ್ಮಾಣಕ್ಕೆ ಬೇಕಾದ ಕೆಲ ಸಾಮಗ್ರಿಗಳನ್ನು ದಾನಿಗಳು ನೀಡಿದ್ದಾರೆ. ಇನ್ನೂ ಕೆಲವನ್ನು ಪೊಲೀಸರೇ ಸ್ವತಃ ತಮ್ಮ ಹಣ ವಿನಿಯೋಗಿಸಿ ಹಸಿರು ಕ್ರಾಂತಿ ಮಾಡಿದ್ದಾರೆ. ಪಿಎಸ್‍ಐ ರಾಜು ಕೇವಲ ಅಮೃತ್ತೂರು ಠಾಣೆ ಅಷ್ಟೆ ಅಲ್ಲಾ ಕೆ.ಬಿ ಕ್ರಾಸ್ ಠಾಣೆ ಎದುರಲ್ಲೂ ಉದ್ಯಾನವನ ನಿರ್ಮಿಸಿದ್ದಾರೆ. ಪ್ರತಿ ಭಾನುವಾರ ಪರೇಡ್ ಮುಗಿದ ಬಳಿಕ ಪಾರ್ಕ್ ನಿರ್ವಹಣೆ ಕೆಲಸ ಮಾಡಲಾಗುತ್ತಿದ್ದು, ಕಳೆ ಕೀಳುವುದು, ಎಲೆಗಳನ್ನು ಕಟ್ ಮಾಡಿ ಸುಂದರಗೊಳಿಸುತ್ತಾರೆ. ಒಟ್ಟಾರೆ ಖಾಕಿಗಳ ಕೈಚಳಕದಲ್ಲಿ ಕಂಗೊಳಿಸುತ್ತಿದ್ದ ಉದ್ಯಾನವನ ಎಲ್ಲರ ಆಕರ್ಷಣಿಯ ಸ್ಥಳವಾಗಿದೆ.

    ಪಿಎಸ್‍ಐ ರಾಜು ಅವರ ಈ ಹಸಿರು ಪ್ರೀತಿ ಎಲ್ಲರಿಗೂ ಮಾದರಿಯಾಗಿದೆ.

  • ನಮ್ಮ ಕೈಯಲ್ಲಿ ಏನಾಗುತ್ತೆ ಅದನ್ನು ನಾವು ಮಾಡ್ತೇವೆ: ಪುನೀತ್ ರಾಜ್‍ಕುಮಾರ್

    ನಮ್ಮ ಕೈಯಲ್ಲಿ ಏನಾಗುತ್ತೆ ಅದನ್ನು ನಾವು ಮಾಡ್ತೇವೆ: ಪುನೀತ್ ರಾಜ್‍ಕುಮಾರ್

    – ಕೊಡಗಿನಲ್ಲಿ ಆಸ್ಪತ್ರೆ ಅಭಿಯಾನಕ್ಕೆ ಬೆಂಬಲ

    ಮೈಸೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ನಟಿಯರಾದ ರಶ್ಮಿಕಾ ಮಂದಣ್ಣ ಹಾಗೂ ಹರ್ಷಿಕಾ ಪೂಣಚ್ಚ ಬೆನ್ನಲ್ಲೇ ಇದೀಗ ಕೊಡಗಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡ ಬೆಂಬಲ ಸೂಚಿಸಿದ್ದಾರೆ.

    ಇಂದು ಮೈಸೂರಿನ ರಾಮಕೃಷ್ಣ ನಗರದಲ್ಲಿನ ಪರಮಹಂಸ ಉದ್ಯಾನವನದಲ್ಲಿ ನಿರ್ಮಾಣವಾದ ಔಟ್ ಡೋರ್ ಜಿಮ್ ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ವಿಚಾರದಲ್ಲಿ ಕನ್ನಡ ಚಿತ್ರರಂಗ ಸದಾ ಜೊತೆಯಾಗಿರುತ್ತದೆ. ನಮ್ಮ ಕೈಯಲ್ಲಿ ಏನಾಗುತ್ತದೆ, ಅದನ್ನು ನಾವು ಮಾಡುತ್ತೇವೆ. ಕನ್ನಡಿಗನಾಗಿ ಈ ದೇಶದ ಪ್ರಜೆಯಾಗಿ ಇದು ನಮ್ಮ ಕರ್ತವ್ಯ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಿಎಂ ಬಳಿ ನಟಿ ರಶ್ಮಿಕಾ, ಹರ್ಷಿಕಾ ಮನವಿ

    ಬಳಿಕ ಯಶ್ ಅವರ ಜೊತೆ ಸಿನಿಮಾ ಮಾಡುವ ಪ್ಲಾನ್ ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಮಯ ಬಂದಾಗ ನಾನು ಹಾಗೂ ಯಶ್ ಸಿನಿಮಾ ಮಾಡುತ್ತೇವೆ. ಈಗ ಇಬ್ಬರು ಇಲ್ಲಿಯೇ ಶೂಟಿಂಗ್ ಮಾಡುತ್ತಿದ್ದೇವೆ. ಅಲ್ಲದೆ ಒಂದೇ ಹೋಟೆಲಿನಲ್ಲಿ ವಾಸಿಸುತ್ತಿದ್ದೇವೆ. ಹಾಗಾಗಿ ಇಬ್ಬರೂ ಭೇಟಿ ಮಾಡಿ ಊಟ ಮಾಡಿದ್ದೇವೆ ಎಂದರು. ಇದನ್ನೂ ಓದಿ: ಕೊಡಗು ಜಿಲ್ಲೆಗೆ ಆಸ್ಪತ್ರೆ ಅಭಿಯಾನಕ್ಕೆ ಸ್ಯಾಂಡಲ್‍ವುಡ್ ಬೆಂಬಲ

    ಇದಕ್ಕೂ ಮೊದಲು ಮಾತನಾಡಿದ ಪವರ್ ಸ್ಟಾರ್, ರಾಮಕೃಷ್ಣ ಪರಮಹಂಸ ಅವರ ಹೆಸರಿನಲ್ಲಿ ಪಾರ್ಕ್ ನಿರ್ಮಿಸಿದ್ದಾರೆ. ಮೈಸೂರಿನ ನನ್ನ ಸ್ನೇಹಿತರು ಪಾರ್ಕ್ ನಿರ್ಮಿಸಿದ್ದೇವೆ ಎಂದು ಹೇಳಿದ್ದರು. ನಾನು ಮೈಸೂರಿನಲ್ಲೇ ಶೂಟಿಂಗ್ ಮಾಡುತ್ತಿದ್ದ ಕಾರಣ ಇಲ್ಲಿ ಬಂದು ಪಾರ್ಕ್ ನೋಡಿದಂತೆ ಆಯ್ತು, ಜಿಮ್ ಉದ್ಘಾಟಿಸಿದಂತೆ ಆಯ್ತು. ಈ ಪಾರ್ಕ್ ಎಲ್ಲ ನೋಡುತ್ತಿದ್ದರೆ, ನನಗೆ ನನ್ನ ಬಾಲ್ಯ ನೆನಪಾಗುತ್ತದೆ ಎಂದು ಹೇಳಿದರು.

  • ‘ನಿನ್ನ ಕೈಗಳನ್ನ ನನ್ನ ಪ್ಯಾಂಟ್‍ನ ಒಳಗೆ ಇಡ್ತಿಯಾ’ – ಬೆಂಗ್ಳೂರು ಟೆಕ್ಕಿಗೆ ಸೈಕೋ ಕಾಟ

    ‘ನಿನ್ನ ಕೈಗಳನ್ನ ನನ್ನ ಪ್ಯಾಂಟ್‍ನ ಒಳಗೆ ಇಡ್ತಿಯಾ’ – ಬೆಂಗ್ಳೂರು ಟೆಕ್ಕಿಗೆ ಸೈಕೋ ಕಾಟ

    ಬೆಂಗಳೂರು: ಬೆಳ್ಳಂಬೆಳಗ್ಗೆ ಪಾರ್ಕ್‌ನಲ್ಲಿ ಜಾಗಿಂಗ್ ತೆರಳುವ ಯುವತಿಯರೇ ಹುಷಾರ್. ಯಾಕೆಂದರೆ ಜಾಗಿಂಗ್ ಮಾಡುವ ನೆಪದಲ್ಲಿ ಕಾಮುಕರು ಬಂದು ಕಿರುಕುಳ ನೀಡುತ್ತಾರೆ.

    ಸಿಲಿಕಾನ್ ಸಿಟಿಯಲ್ಲಿ ಮತ್ತೊಬ್ಬ ಸೈಕೋ ಕಾಮಿಯ ಬಂಧನವಾಗಿದೆ. ಶ್ರೀನಿವಾಸ್ ರೆಡ್ಡಿ ಬಂಧಿತ ಆರೋಪಿಯಾಗಿದ್ದು, ಈತ ಜೀವನ್ ಭೀಮಾನಗರ, ಹಲಸೂರು, ಇಂದಿರಾನಗರ ಮತ್ತು ದೊಮ್ಮಲೂರು ಪಾರ್ಕ್ ಗಳಲ್ಲಿ ಯುವತಿಯರಿಗೆ ಕಾಟ ಕೊಡುತ್ತಿದ್ದನು. ಕನ್ನಡ ಬಾರದ ಉತ್ತರಭಾರತ ಮೂಲದ ಯುವತಿಯರನ್ನೇ ಆರೋಪಿ ಟಾರ್ಗೆಟ್ ಮಾಡುತ್ತಿದ್ದನು ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಅಣ್ಣ ಅಣ್ಣ ಅಂತ ಮನೆಯಲ್ಲೇ ಲವರ್ ಜೊತೆ ಚಕ್ಕಂದ – ಹಳೆ ಪ್ರೇಮಿ ಜೊತೆ ಸೇರಿ ಪತಿಯ ಹತ್ಯೆ

    ಕಳೆದ ಮೂರು ದಿನದ ಹಿಂದೆ ಜೀವನ್ ಭೀಮಾನಗರ ಮಿರಿಂಡಾ ಸ್ಕೂಲ್ ಬಳಿ ಇರುವ ಪಾರ್ಕ್‌ನಲ್ಲಿ ವಿಕೃತಿ ಮೆರೆದಿದ್ದು, ಉತ್ತರ ಭಾರತೀಯ ಮೂಲದ ಟೆಕ್ಕಿ ಯುವತಿಯ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ನಿನ್ನ ಕೈಗಳನ್ನ ನನ್ನ ಪ್ಯಾಂಟ್‍ನ ಒಳಗೆ ಇಡುತ್ತೀಯಾ ಎಂದು ಯುವತಿಗೆ ಕಿರುಕುಳ ನೀಡಿದ್ದಾನೆ. ವಾಕಿಂಗ್ ಮಾಡುತ್ತಿದ್ದ ಯುವತಿ ಇದನ್ನ ಪ್ರಶ್ನಿಸಿದ್ದಕ್ಕೆ ಜೀವ ಬೆದರಿಕೆ ಹಾಕಿದ್ದಾನೆ. ನಂತರ ಯುವತಿಯನ್ನೇ ಹಿಂಬಾಲಿಸಿ ಕಿರುಕುಳ ನೀಡಿದ್ದಾನೆ.  ಇದನ್ನೂ ಓದಿ: ಪತ್ನಿಯ ಜೊತೆ ಸೆಕ್ಸ್ ಮಾಡೋದನ್ನ ನೋಡೋ ಆಸೆ – ಅದಕ್ಕಾಗಿ ಬೆಡ್‍ರೂಂನಲ್ಲೇ ಸಿಸಿಟಿವಿ ಇಟ್ಟ ಪತಿ

    ಈ ಬಗ್ಗೆ ಯುವತಿ ಐಪಿಸಿ ಸೆಕ್ಷನ್ 354 (ಲೈಂಗಿಕ ಕಿರುಕುಳ) ಹಾಗೂ 506 (ಜೀವಬೆದರಿಕೆ) ಅಡಿಯಲ್ಲಿ ದೂರು ದಾಖಲಿಸಿದ್ದಾಳೆ. ಆರೋಪಿ ವಿರುದ್ಧ ಜೀವನ್ ಭೀಮಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

  • ಹಾಡಹಗಲೇ ಎಲ್ಲರೂ ನೋಡ್ತಿದ್ದಂತೆ ಪಾರ್ಕಿನಲ್ಲಿ ಜೋಡಿಯಿಂದ ಸೆಕ್ಸ್

    ಹಾಡಹಗಲೇ ಎಲ್ಲರೂ ನೋಡ್ತಿದ್ದಂತೆ ಪಾರ್ಕಿನಲ್ಲಿ ಜೋಡಿಯಿಂದ ಸೆಕ್ಸ್

    ಲಂಡನ್: ಹಾಡಹಗಲೇ ಜೋಡಿಯೊಂದು ಪಾರ್ಕಿನಲ್ಲಿ ಸೆಕ್ಸ್ ಮಾಡಿದ್ದು, ಇದೀಗ ಪೊಲೀಸರು ಆ ವಿಡಿಯೋ ವೈರಲ್ ಆದ ಬಳಿಕ 30 ವರ್ಷದ ಮಹಿಳೆಯನ್ನು ಬಂಧಿಸಿದ್ದಾರೆ.

    ಈ ವಿಲಕ್ಷಣ ಘಟನೆ ಮೇ 11 ರಂದು ನಡೆದಿದ್ದು, ಆಕ್ಸ್ಫಡ್ರ್ಶೈರ್ ನಲ್ಲಿರುವ ಬಿಸ್ಸೆಟರ್ ಪಿಂಗಲ್ ಪ್ರದೇಶದಲ್ಲಿ ನಡೆದಿದೆ. ಜೋಡಿಯ ಸೆಕ್ಸ್ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.

    ವಿಡಿಯೋದಲ್ಲಿ ಜೋಡಿಯೊಂದು ಪಾರ್ಕಿನಲ್ಲಿ ಸಾರ್ವಜನಿಕರು ಓಡಾಡುತ್ತಿದ್ದಾಗಲೇ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡಿದ್ದಾರೆ. ಮಗುವನ್ನು ಕರೆದುಕೊಂಡು ಹೋಗುವ ಒಬ್ಬ ವ್ಯಕ್ತಿ ಮತ್ತು ಇನ್ನೂ ಇತರೆ ವ್ಯಕ್ತಿಗಳು ಪಾರ್ಕಿನಲ್ಲಿ ಇರೋದನ್ನು ವಿಡಿಯೋದಲ್ಲಿ ಕಾಣಬಹುದು. ಅವರೆಲ್ಲರೂ ನೋಡುತ್ತಿದ್ದರು ಜೋಡಿಯೂ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡಿತ್ತು.

    ಥೇಮ್ಸ್ ವ್ಯಾಲಿ ಪೊಲೀಸರು ಈ ಘಟನೆಯ ಬಗ್ಗೆ ತನಿಖೆ ನಡೆಸಿದ್ದು, ಈ ಘಟನೆ ಬಗ್ಗೆ ಸಾಕ್ಷಿಗಾಗಿ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಅದು ಹಗಲಿನಲ್ಲಿಯೇ ಜೋಡಿಯೊಂದು ಈ ರೀತಿ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಈ ಅಪರಾಧಕ್ಕೆ ಇನ್ನೂ ಹೆಚ್ಚಿನ ಸಾಕ್ಷಿಗಳು ಬೇಕಾಗಿದೆ. ಸದ್ಯಕ್ಕೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ ಎಂದು ಡಿಟೆಕ್ಟಿವ್ ಇನ್ಸ್ ಪೆಕ್ಟರ್ ಜಾನ್ ಕ್ಯಾಪ್ಪ್ಸ್ ಹೇಳಿದ್ದಾರೆ.

    ಈ ರೀತಿಯ ಘಟನೆಗಳು ಇಲ್ಲಿ ಸಾಮಾನ್ಯವಾಗಿದ್ದರೂ, ಇಂತಹ ಘಟನೆಗಳು ನಡೆದಾಗ ವರದಿ ಮಾಡಲು ಸಿಬ್ಬಂದಿ ನೇಮಕ ಅವಶ್ಯಕ ಎಂದು ಪೊಲೀಸರು ತಿಳಿಸಿದ್ದಾರೆ.