Tag: Park

  • ಕರುಳು ಕಿತ್ತು ಬಂದ ಅಶ್ವವನ್ನು ಕರುಣೆ ತೋರಿ ರಕ್ಷಿಸಿದ ಯುವಕರು

    ಕರುಳು ಕಿತ್ತು ಬಂದ ಅಶ್ವವನ್ನು ಕರುಣೆ ತೋರಿ ರಕ್ಷಿಸಿದ ಯುವಕರು

    ಶಿವಮೊಗ್ಗ: ತಾಯಿಯೊಂದಿಗೆ ಪಾರ್ಕ್ ನಲ್ಲಿ ಹುಲ್ಲು ಮೇಯುತ್ತಿದ್ದಾಗ ಪಾರ್ಕ್ ನಲ್ಲಿ ಅಳವಡಿಸಿದ್ದ ಗ್ರಿಲ್ ಗೆ ಸಿಲುಕಿಕೊಂಡ ಪರಿಣಾಮ ಮರಿ ಕುದುರೆಯ ಕರುಳು ಹೊರ ಬಂದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

    ಶಿವಮೊಗ್ಗದ ವಿನೋಬನಗರದ ಪಾರ್ಕ್‍ನಲ್ಲಿ ತಾಯಿ ಕುದುರೆಯೊಂದಿಗೆ ಮರಿ ಕುದುರೆ ಹುಲ್ಲು ಮೇಯುತಿತ್ತು. ಈ ವೇಳೆ ಪಾರ್ಕ್‍ನಿಂದ ತಾಯಿ ಕುದುರೆ ಮರೆಯಾಗಿದೆ. ಇದನ್ನು ಗಮನಿಸದ ಮರಿ ಕುದುರೆ ಅಲ್ಲಿಯೇ ಹುಲ್ಲು ಮೇಯುತಿತ್ತು. ನಂತರ ಪಾರ್ಕ್ ನಿಂದ ಹೊರ ಬರಲಾರದೇ ಚಡಪಡಿಸಿದೆ. ಅಲ್ಲದೇ ಪಾರ್ಕ್ ಅಳವಡಿಸಿದ್ದ ಗ್ರಿಲ್ ದಾಟಿ ಹೋಗಲು ಪ್ರಯತ್ನಿಸಿದೆ.

    ಆದರೆ ಈ ವೇಳೆ ಗ್ರಿಲ್‍ಗೆ ಅಳವಡಿಸಿದ್ದ ಚೂಪಾದ ಭರ್ಜಿಗೆ ಸಿಲುಕಿಕೊಂಡ ಕುದುರೆಯ ಕರುಳು ಹೊಟ್ಟೆ ಭಾಗದಿಂದ ಹೊರಬಂದಿದೆ. ನಂತರ ಕುದುರೆ ಅಲ್ಲಿಯೇ ನರಳಾಡುತ್ತಿದ್ದ ದೃಶ್ಯ ಗಮನಿಸಿದ ಯುವಕರು ತಕ್ಷಣವೇ ಪಶು ವೈದ್ಯರನ್ನು ಸ್ಥಳಕ್ಕೆ ಕರೆಯಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪಶು ವೈದ್ಯರು ಸ್ಥಳದಲ್ಲಿಯೇ ಕುದುರೆಗೆ ಶಸ್ತ್ರಚಿಕಿತ್ಸೆ ನಡೆಸಿ ಕರಳನ್ನು ಉದರದ ಒಳಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.

  • ನಿನ್ನೆ ಸಿಂಗಾಪುರದಿಂದ ರಿಟರ್ನ್, ಇಂದು ಹಾಸನ ಪಾರ್ಕಿನಲ್ಲಿ ಸುತ್ತಾಟ

    ನಿನ್ನೆ ಸಿಂಗಾಪುರದಿಂದ ರಿಟರ್ನ್, ಇಂದು ಹಾಸನ ಪಾರ್ಕಿನಲ್ಲಿ ಸುತ್ತಾಟ

    – ಸ್ಟಾಂಪ್ ನೋಡಿ ಗಾಬರಿಗೊಂಡ ಜನತೆ
    – ಆರೋಗ್ಯಾಧಿಕಾರಿಗಳ ಜೊತೆ ಯುವತಿ ವಾಗ್ವಾದ

    ಹಾಸನ: ಶನಿವಾರ ತಾನೇ ಸಿಂಗಾಪೂರ್‍ನಿಂದ ಬಂದಿದ್ದ ಯುವತಿಯೋರ್ವಳು ಇಂದು ಪಾರ್ಕಿನಲ್ಲಿ ಸುತ್ತಾಡಿ ಜನಸಾಮಾನ್ಯರನ್ನು ಆತಂಕ ಪಡುವಂತೆ ಮಾಡಿರುವ ಘಟನೆ ಹಾಸನದ ರವೀಂದ್ರ ನಗರದಲ್ಲಿ ನಡೆದಿದೆ.

    ಶನಿವಾರ ಸಂಜೆ ಸಿಂಗಾಪೂರ್‍ನಿಂದ ಹಾಸನಕ್ಕೆ ಬಂದಿದ್ದ ಯವತಿಯನ್ನು ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್ ಮಾಡಲಾಗಿದೆ. ನಂತರ ಅವಳ ಕೈಗೆ ಸ್ಟಾಂಪ್ ಹಾಕಿ 14 ದಿನ ಎಲ್ಲಿಗೂ ತೆರಳಬಾರದು ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ. ಆದರೆ ಇದಕ್ಕೆ ಬೆಲೆ ಕೊಡದ ಯುವತಿ ಇಂದು ಪಾರ್ಕಿಗೆ ಬಂದಿದ್ದಾಳೆ.

    ಈ ವೇಳೆ ಕೈಯಲ್ಲಿ ಇರುವ ಸ್ಟಾಂಪ್ ನೋಡಿ ಸ್ಥಳೀಯರು ಭಯಗೊಂಡಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ತಕ್ಷಣ ಸ್ಥಳಕ್ಕೆ ಬಂದ ಅಧಿಕಾರಿಗಳು, ನೀವು ಹೊರಗೆ ಏಕೆ ಬಂದಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ.

    ಇದಕ್ಕೆ ಗರಂ ಆದ ಯುವತಿ ಅಧಿಕಾರಿಗಳ ಜೊತೆ ಮಾತಿನ ಚಕಮಕಿ ನಡೆಸಿದ್ದಾಳೆ. ಕೊನೆಗೆ ಅಧಿಕಾರಿಗಳು ಮನವೊಲಿಸಿ ಆಸ್ಪತ್ರೆ ಬನ್ನಿ ಎಂದು ಮನವಿ ಮಾಡಿದ್ದಾರೆ. ಆದರೆ ಈ ಮನವಿಗೆ ಒಪ್ಪದೆ ಹಠಕ್ಕೆ ಬಿದ್ದ ಯುವತಿ ಹೈಡ್ರಾಮವನ್ನೇ ಸೃಷ್ಟಿಸಿದ್ದಾಳೆ. ಕೊನೆಗೆ ಯುವತಿಯನ್ನು ಮನವೊಲಿಸಿದ ಅಧಿಕಾರಿಗಳು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

    ಸಿಂಗಾಪೂರ್‍ನಿಂದ ಬಂದ ಯುವತಿ ಬೆಂಗಳೂರಿನಿಂದ ಹಾಸನಕ್ಕೆ ಮೂವರ ಜೊತೆ ಒಂದೇ ಕಾರಿನಲ್ಲಿ ಬಂದಿದ್ದಾಳೆ ಎಂಬ ಮಾಹಿತಿ ಸಿಕ್ಕಿದೆ. ಇದರ ಜೊತೆಗೆ ಯುವತಿ ಬಾಡಿಗೆ ಮನೆಯಲ್ಲಿ ಇದ್ದು, ಮನೆ ಖಾಲಿ ಮಾಡುವಂತೆ ಮನೆ ಮಾಲೀಕ ಪಟ್ಟು ಹಿಡಿದಿದ್ದಾರೆ. ಇದರಿಂದ ಅಕ್ಕ ಪಕ್ಕದ ಸ್ಥಳೀಯರಲ್ಲಿ ಭಯದ ವಾತವರಣ ನಿರ್ಮಾಣವಾಗಿದೆ. ಸ್ಥಳಕ್ಕೆ ಹಾಸನ ಡಿಹೆಚ್‍ಓ ಭೇಟಿ ನೀಡಿದ್ದಾರೆ.

  • ವಾಕಿಂಗ್ ಮಾಡಿದ್ರೆ ಸೋಂಕು ಹರಡಲ್ಲ- ಯಾಕ್ರಿ ಪಾರ್ಕ್ ಬಂದ್ ಮಾಡ್ತಿರಿ?

    ವಾಕಿಂಗ್ ಮಾಡಿದ್ರೆ ಸೋಂಕು ಹರಡಲ್ಲ- ಯಾಕ್ರಿ ಪಾರ್ಕ್ ಬಂದ್ ಮಾಡ್ತಿರಿ?

    ಬೆಂಗಳೂರು: ನಗರದ ಪಾರ್ಕ್‌ಗಳಲ್ಲಿ ವಾಕ್ ಮಾಡಿದರೆ ಕೊರೊನಾ ಸೊಂಕು ಹರಡುತ್ತಾ? ಯಾಕ್ರಿ ಪಾರ್ಕ್‌ಗಳನ್ನು ಬಂದ್ ಮಾಡುತ್ತೀರಿ ಎಂದು ಸಿಎಂ ಯಡಿಯೂರಪ್ಪ ಅವರ ಆದೇಶದ ವಿರುದ್ಧ ಲಾಲ್ ಬಾಗ್‍ನಲ್ಲಿ ವಾಯುವಿಹಾರಿಗಳು ಅಸಮಾಧಾನ ವ್ಯಕ್ತಪಡಿಸಿದರು.

    ಪಾರ್ಕ್‌ಗಳಲ್ಲಿ ಜನ ಸಂದಣಿ ಇರುತ್ತೆ. ಹೀಗಾಗಿ ಸೋಂಕು ಹರಡಬಹುದು ಎಂಬ ಮುನ್ನೆಚ್ಚರಿಕೆ ಕ್ರಮವಾಗಿ, ಪಾರ್ಕ್‌ಗಳನ್ನು ಬಂದ್ ಮಾಡಿ ಎಂದು ಸಿಎಂ ಆದೇಶ ಮಾಡಿದ್ದಾರೆ. ಆದರೆ ಸಿಎಂ ಆದೇಶಕ್ಕೆ ಕಿಮ್ಮತ್ತು ನೀಡದ ಲಾಲಾ ಬಾಗ್ ತೋಟಗಾರಿಕೆ ಆಡಳಿತ ಮಂಡಳಿ, ಪಾರ್ಕ್ ಅನ್ನು ಶುರು ಮಾಡಿದೆ. ಹೀಗಾಗಿ ನಿತ್ಯ ಸಾವಿರಾರು ವಾಕರ್ಸ್ ಮಾಸ್ಕ್ ಧರಿಸದೇ ಲಾಲ್ ಬಾಗ್ ಉದ್ಯಾನವನಕ್ಕೆ ಬರುತ್ತಿದ್ದಾರೆ.

    ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪಾರ್ಕ್ ನಲ್ಲಿ ಸೂಚನಾ ಫಲಕಗಳನ್ನು ಕೂಡ ಹಾಕಿಲ್ಲ. ಇನ್ನೂ ಸಿಎಂ ಆದೇಶದ ಕ್ರಮವನ್ನು ಕೆಲ ವಾಯು ವಿಹಾರಿಗಳು ಸ್ವಾಗತಿಸಿದರೆ, ಇನ್ನೂ ಕೆಲವರು ಪಾರ್ಕ್ ಗಳಲ್ಲಿ 30-40 ವರ್ಷದಿಂದ ವಾಕ್ ಮಾಡುತ್ತಿದ್ದೇವೆ. ಏಕಾಏಕಿ ಬಂದ್ ಮಾಡಿದರೆ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀಳುತ್ತೆ. ಎರಡ್ಮೂರು ಗಂಟೆಯಾದರೂ ಪಾರ್ಕ್ ಓಪನ್ ಇದ್ದರೆ ವಾಕರ್ಸ್‍ಗೆ ಅನುಕೂಲವಾಗುತ್ತೆ ಎಂದು ಕೆಲವರು ಅಭಿಪ್ರಾಯಪಟ್ಟರು.

  • ಡಿಸಿ ಮಾತಿಗೆ ಕ್ಯಾರೇ ಎನ್ನದ ಜನ- ನಿಷೇಧವಿದ್ರೂ ಹಿಂಬದಿಯಿಂದ ಪಾರ್ಕಿಗೆ ಎಂಟ್ರಿ

    ಡಿಸಿ ಮಾತಿಗೆ ಕ್ಯಾರೇ ಎನ್ನದ ಜನ- ನಿಷೇಧವಿದ್ರೂ ಹಿಂಬದಿಯಿಂದ ಪಾರ್ಕಿಗೆ ಎಂಟ್ರಿ

    – ಆರೋಗ್ಯ ತುರ್ತುಪರಿಸ್ಥಿತಿ ಘೋಷಣೆ
    – ಮಾರುಕಟ್ಟೆಯ ವ್ಯಾಪಾರ, ವಹಿವಾಟು ಕುಸಿತ

    ಕಲಬುರಗಿ: ದೇಶದಲ್ಲಿಯೇ ಕೊರೊನಾ ವೈರಸ್‍ಗೆ ಕಲಬುರಗಿಯಲ್ಲಿ ಮೊದಲ ಸಾವು ಸಂಭವಿಸಿದ್ದರೂ ಕಲಬುರಗಿ ಸಾರ್ವಜನಿಕರಿಗೆ ಕೊರೊನಾ ಭೀತಿ ಉಂಟಾಗಿಲ್ಲ ಅನ್ನುವಂತಿದೆ.

    ಜನರು ಕೆಲ ದಿನಗಳವರೆಗೆ ಮನೆ ಬಿಟ್ಟು ಹೊರ ಬರಬೇಡಿ ಅಂತ ಶನಿವಾರ ಜಿಲ್ಲಾಧಿಕಾರಿಗಳು ಜನರಿಗೆ ಮನವಿ ಮಾಡಿದ್ದರು. ಅಲ್ಲದೆ ಪಾರ್ಕ್, ಮಾಲ್, ಥಿಯೇಟರ್‌ಗಳನ್ನು ಮುಚ್ಚಲು ಸಹ ಆದೇಶ ಮಾಡಿದ್ದರು. ಇದನ್ನೂ ಓದಿ: ತುರ್ತು ಪರಿಸ್ಥಿತಿ ಬಿಟ್ಟು ಮನೆಯಿಂದ ಹೊರ ಬರಬೇಡಿ- ಕಲಬುರಗಿ ಡಿಸಿ ಮನವಿ

    ಹೀಗಾಗಿ ನಗರದ ಪಾರ್ಕ್ ಗಳಿಗೆ ಪ್ರವೇಶ ನಿಷೇಧಿಸಿ ಬೀಗ ಹಾಕಲಾಗಿದೆ. ಆದರೂ ಜನ ಮಾತ್ರ ತಲೆ ಕಡೆಸಿಕೊಳ್ಳುತ್ತಿಲ್ಲ. ಪಾರ್ಕಿನ ಹಿಂಬದಿಯ ಗೇಟ್ ಮೂಲಕ ಒಳ ಬಂದು ವಾಕಿಂಗ್, ಯೋಗವನ್ನು ಮಾಡುತ್ತಿದ್ದಾರೆ.

    ಇದಕ್ಕೆ ಕೆಲ ಪ್ರಜ್ಞಾವಂತ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ಜನರ ಹಿತಕ್ಕಾಗಿ ಈ ಕಠಿಣ ನಿರ್ಧಾರ ತೆಗೆದುಕೊಂಡಿದೆ. ಇದಕ್ಕೆ ನಾವು ಸಹ ಕೈಜೋಡಿಸಿದಾಗ ಮಾತ್ರ ಕೊರೊನಾ ವೈರಸ್ ವಿರುದ್ಧ ಹೋರಾಟ ನಡೆಸಬಹುದು ಎಂದು ಪಬ್ಲಿಕ್ ಟಿವಿ ಬಳಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಮಾರುಕಟ್ಟೆಯ ವ್ಯಾಪಾರ, ವಹಿವಾಟು ಕುಸಿತ:
    ಕಲಬುರಗಿಗೆ ಆರೋಗ್ಯ ತುರ್ತುಪರಿಸ್ಥಿತಿ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಕಲಬುರಗಿ ನಗರಕ್ಕೆ ಮತ್ತು ಜಿಲ್ಲೆಗೆ ತರಕಾರಿ, ಹಾಲು ಮತ್ತು ಆಹಾರ ಸಾಮಾಗ್ರಿಗಳನ್ನು ಪೂರೈಕೆ ಮಾಡುವ ಕಣೀ ಮಾರುಕಟ್ಟೆಯಲ್ಲಿ ವ್ಯಾಪಾರ ಮತ್ತು ವಹಿವಾಟು ಕುಸಿತ ಕಂಡಿದೆ.

    ಸದಾ ಜನಸಂದಣಿಯಿಂದ ಮತ್ತು ನಡೆದಾಡಲು ಸಹ ಜಾಗವಿರದಷ್ಟು ಕಿಕ್ಕಿರಿದು ಸೇರುತ್ತಿದ್ದ ಜನ ಈಗ ಇತ್ತ ಕಡೆ ಮುಖ ಮಾಡುತ್ತಿಲ್ಲ. ಅಗತ್ಯ ಸಾಮಾಗ್ರಿಗಳನ್ನು ಖರೀದಿಸಲು ಎರಡು ಗಂಟೆ ಮಾತ್ರ ಅವಕಾಶ ನೀಡಲಾಗಿದೆ. ಹೀಗಾಗಿ ಬೆರಳೆಣಿಕೆಯಷ್ಟು ಜನ ಮಾರುಕಟ್ಟೆಯತ್ತ ಆಗಮಿಸಿ ತರಕಾರಿಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಜಿಲ್ಲಾಡಳಿತ ನಿರ್ಧಾರಕ್ಕೆ ವ್ಯಾಪಾರಿಗಳು ಅಸಮಾಧಾನ ವ್ಯಕ್ತಪಡಿಸಿದರೆ, ಗ್ರಾಹಕರು ಜಿಲ್ಲಾಡಳಿತ ಕ್ರಮವನ್ನು ಸ್ವಾಗತಿಸಿದ್ದಾರೆ.

  • ಏಕಾಏಕಿ ಗಣೇಶ ದೇವಸ್ಥಾನ ಧ್ವಂಸ – ಪಾರ್ಕ್ ನಿರ್ಮಿಸಿರುವ ಮಹಿಳೆಯರ ಕಣ್ಣೀರು

    ಏಕಾಏಕಿ ಗಣೇಶ ದೇವಸ್ಥಾನ ಧ್ವಂಸ – ಪಾರ್ಕ್ ನಿರ್ಮಿಸಿರುವ ಮಹಿಳೆಯರ ಕಣ್ಣೀರು

    ರಾಯಚೂರು: ಸಾರ್ವಜನಿಕರೆಲ್ಲಾ ಕೈಯಿಂದ ದುಡ್ಡು ಹಾಕಿ ನಿರ್ಮಿಸಿದ್ದ ಉದ್ಯಾನವನವನ್ನು ಪುರಸಭೆ ಮುಖ್ಯಾಧಿಕಾರಿಯೇ ಹಾಳು ಮಾಡಲು ಮುಂದಾಗಿರುವುದಕ್ಕೆ ಮಹಿಳೆಯರೆಲ್ಲ ಆಕ್ರೋಶ ವ್ಯಕ್ತಪಡಿಸಿ ಹೋರಾಟಕ್ಕೆ ಮುಂದಾಗಿರುವ ಘಟನೆ ರಾಯಚೂರಿನ ಮಸ್ಕಿಯಲ್ಲಿ ನಡೆದಿದೆ.

    ಸಾರ್ವಜನಿಕ ಸ್ಥಳಗಳಲ್ಲಿನ ದೇವಸ್ಥಾನಗಳನ್ನು ತೆರವುಗೊಳಿಸಬೇಕು ಎಂಬ ಸುಪ್ರೀಂಕೋರ್ಟ್ ಆದೇಶ ಹಿನ್ನೆಲೆ ಮಸ್ಕಿ ಪುರಸಭೆ ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ ರಾತ್ರೋ ರಾತ್ರಿ ಮಸ್ಕಿಯ ಬಸವೇಶ್ವರ ನಗರದಲ್ಲಿನ ಬಲಮೂರಿ ಗಣೇಶ ದೇವಸ್ಥಾನವನ್ನು ಹೊಡೆದು ಹಾಕುವ ಮೂಲಕ ಸ್ಥಳೀಯ ಆಕ್ರೋಶಕ್ಕೆ ಕಾರಣರಾಗಿದ್ದಾರೆ.

    ಪುರಸಭೆ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಉದ್ಯಾನವನವನ್ನು ಸಾರ್ವಜನಿಕರೇ ಲಕ್ಷಾಂತರ ರೂಪಾಯಿ ದುಡ್ಡು ಹಾಕಿ ಇಡೀ ಜಿಲ್ಲೆಗೆ ಮಾದರಿ ಉದ್ಯಾನವನವನ್ನಾಗಿ ನಿರ್ಮಿಸಿದ್ದರು. ಕಿಡಿಗೇಡಿಗಳು, ಪುಂಡರು ಉದ್ಯಾನವನ ಹಾಳು ಮಾಡಬಾರದು ಎಂದು ಗಣೇಶನ ಪುಟ್ಟ ದೇವಾಲಯ ನಿರ್ಮಿಸಿ ಸಾರ್ವಜನಿಕರು ಪೂಜಿಸುತ್ತಿದ್ದರು. ಆದರೆ ಏಕಾಏಕಿ ದೇವಸ್ಥಾನ ತೆರವುಗೊಳಿಸಿರುವುದಲ್ಲದೆ ಜೆಸಿಬಿಯನ್ನು ಉದ್ಯಾನವನದಲ್ಲಿ ಓಡಾಡಿಸಿ ಗಿಡಮರಗಳು, ಲಾನ್, ಕಾಂಪೌಂಡ್ ಹಾಳು ಮಾಡಲಾಗಿದೆ. ದೇವಸ್ಥಾನದ ವಿಗ್ರಹವನ್ನು ಸ್ವತಃ ತೆರುವುಮಾಡಿಕೊಳ್ಳುವುದಾಗಿ ಸಾರ್ವಜನಿಕರು ಹೇಳಿದ್ದರೂ ರಾತ್ರೋರಾತ್ರಿ ಧ್ವಂಸಮಾಡಲಾಗಿದೆ. ಇದರಿಂದ ರೊಚ್ಚಿಗೆದ್ದಿರುವ ಇಲ್ಲಿನ ಮಹಿಳೆಯರು ಕಣ್ಣೀರು ಹಾಕುತ್ತಲೇ ಹೋರಾಟಕ್ಕೆ ಮುಂದಾಗಿದ್ದಾರೆ.

    ದೇವಸ್ಥಾನಗಳನ್ನು ತೆರವುಗೊಳಿಸುವುದಕ್ಕಿಂತ ಮುಂಚೆ ಅನಧಿಕೃತ ಕಟ್ಟಡಗಳ ಸಮೀಕ್ಷೆ ಮಾಡಬೇಕು. ಅದನ್ನು ಮಾಧ್ಯಮಗಳಲ್ಲಿ ಪ್ರಕಟಿಸಿ ಸಂಬಂಧ ಪಟ್ಟವರಿಗೆ ಒಂದು ವಾರಗಳ ಕಾಲವಕಾಶ ನೀಡಬೇಕು ಎಂದು ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ಸೂಚಿಸಿದ್ದರೂ ಸಹ ಮುಖ್ಯಾಧಿಕಾರಿಗಳು ಸುಪ್ರೀಂ ಆದೇಶವನ್ನೇ ಉಲ್ಲಂಘನೆ ಮಾಡಿದ್ದಾರೆ. ದೇವಸ್ಥಾನದ ಒಳಗಿನ ಮೂರ್ತಿಗಳನ್ನು ಎಲ್ಲೆಂದರಲ್ಲಿ ಬಿಸಾಕಿ ದೇವಸ್ಥಾನ ದ್ವಂಸಗೊಳಸಲಾಗಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪ ಮಾಡಿದ್ದಾರೆ.

    ಸುಪ್ರೀಂ ಕೋರ್ಟ್ ಆದೇಶಕ್ಕೆ ನಾವು ತಲೆಬಾಗುತ್ತೇವೆ. ಸುಪ್ರೀಂ ಆದೇಶದಂತೆ ದೇವಸ್ಥಾನ ತೆರವುಗೊಳಿಸಲು ನಾವು ಸಿದ್ಧರಿದ್ದೇವು. ಆದರೆ ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ರಾತ್ರೋ ರಾತ್ರಿ ದೇವಸ್ಥಾನ ದ್ವಂಸಗೊಳಿಸುವ ಮೂಲಕ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಕಿಡಿಕಾರಿದ್ದಾರೆ.

  • ಗಿಡ ನೆಟ್ಟು, ಸಾರ್ವಜನಿಕರ ಜೊತೆ 51ನೇ ಹುಟ್ಟುಹಬ್ಬ ಆಚರಿಸಿಕೊಂಡ ಅಶ್ವಥ್ ನಾರಾಯಣ್

    ಗಿಡ ನೆಟ್ಟು, ಸಾರ್ವಜನಿಕರ ಜೊತೆ 51ನೇ ಹುಟ್ಟುಹಬ್ಬ ಆಚರಿಸಿಕೊಂಡ ಅಶ್ವಥ್ ನಾರಾಯಣ್

    ಬೆಂಗಳೂರು: ರಾಜ್ಯದ ಉಪಮುಖ್ಯಮಂತ್ರಿ ಡಾ. ಸಿ.ಎನ್ ಅಶ್ವಥ್ ನಾರಾಯಣ್ 51ನೇ ವಸಂತಕ್ಕೆ ಕಾಲಿಟ್ಟಿದ್ದು, ಹುಟ್ಟು ಹಬ್ಬವನ್ನ ಆಚರಿಸಿಕೊಂಡಿದ್ದಾರೆ. ಡಾಲರ್ಸ್ ಕಾಲೋನಿಯ ಅಶ್ವಥ್ ನಗರ ನಿವಾಸದ ಮುಂದೆ ಇರುವ ಪಾರ್ಕಿನಲ್ಲಿ ಸಾರ್ವಜನಿಕರ ಮಧ್ಯೆ ಡಿಸಿಎಂ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

    ಅಶ್ವಥ್ ನಾರಾಯಣ್ ಅವರ ಹುಟ್ಟುಹಬ್ಬದ ಬಗ್ಗೆ ತಿಳಿದು ಅಭಿಮಾನಿಗಳು, ಕಾರ್ಯಕರ್ತರು ಕೇಕ್ ತಂದು ಪಾರ್ಕಿನಲ್ಲಿ ಕಟ್ ಮಾಡಿಸಲು ನಿರ್ಧರಿಸಿದ್ದರು. ಆದ್ದರಿಂದ ಇಂದು ಬೆಳಗ್ಗೆ 7 ಗಂಟೆಗೆ ಪಾರ್ಕಿನಲ್ಲಿ ಡಿಸಿಎಂ ಕೈಯಲ್ಲಿ ಕೇಕ್ ಕಟ್ ಮಾಡಿಸಿ ಖುಷಿ ಪಟ್ಟಿದ್ದಾರೆ. ಜೊತೆಗೆ ಹುಟ್ಟು ಹಬ್ಬದ ನೆನಪಿಗಾಗಿ ಪಾರ್ಕ್ ಒಳಗಡೆ ಗಿಡ ನೆಟ್ಟು ಸಂಭ್ರಮಿಸಿದರು.

    ಕೇಕ್ ಕಟ್ ಮಾಡಿದ ಬಳಿಕ ಮಾತನಾಡಿದ ಅವರು ಈ ವರ್ಷದ ಹುಟ್ಟು ಹಬ್ಬ ತುಂಬಾ ವಿಶೇಷ. ಡಿಸಿಎಂ ಆಗಿರೋ ಖುಷಿ ಇರುವುದು ಈ ವರ್ಷದ ಹುಟ್ಟುಹಬ್ಬಕ್ಕೆ ಕಳೆ ತಂದಿದೆ. ವಿವಿಧ ಪಾರ್ಕ್‍ಗಳಿಗೆ ಭೇಟಿ ಕೊಡುತ್ತಿದ್ದೇನೆ. ಅಭಿಮಾನಿಗಳು ಎಲ್ಲರೂ ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದಾರೆ. ಮಧ್ಯಾಹ್ನದವರೆಗೂ ಹುಟ್ಟುಹಬ್ಬದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ನಂತರ ಬಿಜೆಪಿ ಕಛೇರಿಗೆ ಹೋಗುತ್ತೇನೆ. ನಿಷ್ಠೆಯಿಂದ ಕೆಲಸ ಮಾಡುತ್ತೇನೆ. ಜನತೆಗೆ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಮಯ ಕೊಡುತ್ತೇನೆ. ನನ್ನ ಹೆತ್ತವರು, ಅಭಿಮಾನಿಗಳು, ಕಾರ್ಯಕರ್ತರು ಇಲ್ಲಿವರೆಗೂ ನನ್ನ ಬೆಳೆಸಿದ್ದಾರೆ. ಅವರಿಗೋಸ್ಕರ ನಿಷ್ಠೆಯಿಂದ ಕೆಲಸ ಮಾಡುತ್ತೇನೆ ಎಂದು ಖುಷಿಯನ್ನು ಹಂಚಿಕೊಂಡರು.

    ಇದೇ ವೇಳೆ ಸಚಿವ ಸಂಪುಟ ವಿಸ್ತರಣೆ ವಿಚಾರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸೋಮವಾರ ಸಚಿವ ಸಂಪುಟ ವಿಸ್ತರಣೆ ಆಗಬಹುದು. ವಿಸ್ತರಣೆ ಆಗುತ್ತೋ? ಪುನರ್ ರಚನೆ ಆಗುತ್ತೋ? ಗೊತ್ತಿಲ್ಲ. ಎಲ್ಲಾ ಸಿಎಂ ಅವರೇ ತೀರ್ಮಾನ ತೆಗೆದುಕೊಂಡು ದಿನಾಂಕ ನಿಗದಿ ಮಾಡುತ್ತಾರೆ. ಕಾದು ನೋಡೋಣ ಏನೆಲ್ಲಾ ಆಗುತ್ತೆ ಎಂದರು.

  • ಹಾಡಹಗಲೇ ಪಾರ್ಕ್ ಮಧ್ಯದಲ್ಲಿ ಜೋಡಿಯಿಂದ ಸೆಕ್ಸ್

    ಹಾಡಹಗಲೇ ಪಾರ್ಕ್ ಮಧ್ಯದಲ್ಲಿ ಜೋಡಿಯಿಂದ ಸೆಕ್ಸ್

    ಕ್ಯಾನ್ವೆರಾ: ಪಾರ್ಕಿನಲ್ಲಿ ಹಾಡಹಗಲೇ ದಂಪತಿ ಸೆಕ್ಸ್ ಮಾಡಿರುವ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. ಆ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಆಸ್ಟ್ರೇಲಿಯಾದ ಜೋಡಿಯೊಂದು ಒಂದು ದೊಡ್ಡ ಉದ್ಯಾನವನದಲ್ಲಿ ಅದರಲ್ಲೂ ಎಲ್ಲರಿಗೂ ಕಾಣುವಂತೆ ಪಾರ್ಕಿನ ಮಧ್ಯದಲ್ಲೇ ಸೆಕ್ಸ್ ಮಾಡಿದ್ದಾರೆ. ಪಾರ್ಕಿನಲ್ಲಿ ಕೆಲವರು ಓಡಾಡುತ್ತಿದ್ದರು. ಆದರೂ ದಂಪತಿ ಅವರ ಮುಂದೆಯೇ ಅಸಭ್ಯವಾಗಿ ಸೆಕ್ಸ್ ಮಾಡಿದ್ದಾರೆ. ಜೊತೆಗೆ ಪಾರ್ಕಿನ ಪಕ್ಕದಲ್ಲಿ ಕಾರು ಕೂಡ ಹೋಗಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

    ಅದೇ ಪಾರ್ಕಿನಲ್ಲಿದ್ದ ಮಂದಿ ಜೋಡಿಯ ಸೆಕ್ಸ್ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ. ನಂತರ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದು, ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಸುಮಾರು 85 ಸಾವಿರಕ್ಕೂ ಅಧಿಕ ಮಂದಿ ನೋಡಿದ್ದಾರೆ. ಈ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

    ಕೆಲವರು ಕಾಡಿನಲ್ಲಿ ಪ್ರಾಣಿಗಳು ಮಾಡುವ ಕೆಲಸವನ್ನು, ಮನುಷ್ಯರು ಉದ್ಯಾನವನದಲ್ಲಿ ಮಾಡುತ್ತಿದ್ದಾರೆ ಎಂದು ಕಮೆಂಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಕೆಲವರು ಹವಾಮಾನದ ಸಂತಸವನ್ನು ಪಾರ್ಕಿನಲ್ಲಿ ದಂಪತಿ ಎಂಜಾಯ್ ಮಾಡುತ್ತಿದ್ದಾರೆ ಎಂದು ಕಮೆಂಟ್ ಮಾಡುತ್ತಿದ್ದಾರೆ.

    ಸಾರ್ವಜನಿಕ ಪ್ರದೇಶದಲ್ಲಿ ದಂಪತಿ ಈ ರೀತಿ ಅಸಭ್ಯವಾಗಿ ಸೆಕ್ಸ್ ಮಾಡಿರುವುದರಿಂದ ಪೊಲೀಸರು ಕ್ರಮ ಕೈಗೊಂಡಿದ್ದಾರಾ, ಇಲ್ಲವಾ ಎಂಬುದು ತಿಳಿದು ಬಂದಿಲ್ಲ.

  • ಕಿರುಕುಳದಿಂದ ಯುವತಿಯನ್ನು ರಕ್ಷಿಸಿದ ಗುಂಪಿನಿಂದಲೇ ಗ್ಯಾಂಗ್ ರೇಪ್

    ಕಿರುಕುಳದಿಂದ ಯುವತಿಯನ್ನು ರಕ್ಷಿಸಿದ ಗುಂಪಿನಿಂದಲೇ ಗ್ಯಾಂಗ್ ರೇಪ್

    ಲಕ್ನೋ: ಲೈಂಗಿಕ ಕಿರುಕುಳ ನೀಡುತ್ತಿದ್ದವನಿಂದ ಯುವತಿಯನ್ನು ರಕ್ಷಿಸಿದ 6 ಮಂದಿ ಯುವಕರೇ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಕ್ರೂರ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.

    ಬುಧವಾರದಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನೋಯ್ಡಾದ 21 ವರ್ಷದ ಯುವತಿ ತನ್ನ ಕುಟುಂಬವನ್ನು ಸಾಕಲು ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದಳು. ಆಕೆಗೆ ವ್ಯಕ್ತಿಯೋರ್ವನ ಪರಿಚಯವಾಗಿತ್ತು. ಆ ವ್ಯಕ್ತಿ ನಿನಗೆ ಕೆಲಸ ಕೊಡಿಸುತ್ತೇನೆ, ಆ ಬಗ್ಗೆ ಮಾತನಾಡಬೇಕು ಎಂದು ಬುಧವಾರ ರಾತ್ರಿ 7 ಗಂಟೆ ವೇಳೆಗೆ ಪಾರ್ಕ್ ವೊಂದರಲ್ಲಿ ಆತನನ್ನು ಭೇಟಿಯಾಗುವಂತೆ ಯುವತಿಗೆ ಹೇಳಿದ್ದನು. ಆತನ ಮಾತು ನಂಬಿ ಯುವತಿ ಪಾರ್ಕಿಗೆ ಹೋಗಿದ್ದಳು. ಆದರೆ ಅಲ್ಲಿ ವರಸೆ ಬದಲಿಸಿದ ವ್ಯಕ್ತಿ ಆಕೆಯ ಜೊತೆಗೆ ಅಸಭ್ಯವಾಗಿ ವರ್ತಿಸುತ್ತಿದ್ದನು. ಇದನ್ನೂ ಓದಿ:ಬಾಲಕಿಯನ್ನು ಮಂಚಕ್ಕೆ ಕಟ್ಟಿ 16ರ ಬಾಲಕನಿಂದ ರೇಪ್

    ಈ ವೇಳೆ ಸ್ಥಳದಲ್ಲಿದ್ದ 6 ಮಂದಿ ಯುವಕರು ಯುವತಿಯ ಸಹಾಯಕ್ಕೆ ಬಂದು, ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ಅಲ್ಲಿಂದ ಓಡಿಸಿದರು. ಬಳಿಕ ಯವತಿ ಮೇಲೆ ತಾವೇ ಸಾಮೂಹಿಕ ಅತ್ಯಾಚಾರ ನಡೆಸಿ ವಿಕೃತಿ ಮೆರೆದಿದ್ದರು. ಘಟನೆ ಬಳಿಕ ಯುವತಿ ಈ ಸಂಬಂಧ ಮೂರ್ನಾಲ್ಕು ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋದರೂ ಯಾರು ದೂರು ತೆಗೆದುಕೊಂಡಿಲ್ಲ. ಕೊನೆಗೆ ಶುಕ್ರವಾರ ಪೊಲೀಸರು ಯುವತಿಯ ದೂರು ಪಡೆದು, ಈ ಸಂಬಂಧ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ:‘ಪತ್ನಿ ಮನೆಯಲಿಲ್ಲ, ಬಂದು ಅಡುಗೆ ಮಾಡು’- ನಡುರಾತ್ರಿ ವಿದ್ಯಾರ್ಥಿನಿಗೆ ಪ್ರೊಫೆಸರ್ ಮೆಸೇಜ್

    ಸದ್ಯ ಯುವತಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 354, 376 ಮತ್ತು 511 ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ:ಫೇಸ್‍ಬುಕ್‍ನಲ್ಲಿ ಪರಿಚಯ- ನಂತ್ರ ಚಾಟಿಂಗ್, ಮೀಟಿಂಗ್, ಚೀಟಿಂಗ್

    ಆರೋಪಿಗಳ ಬಗ್ಗೆ ನಿಖರ ಮಾಹಿತಿ ಇಲ್ಲ, ಅಲ್ಲದೆ ಅವರ ವಿರುದ್ಧ ಈ ಹಿಂದೆ ಯಾವುದೇ ಪ್ರಕರಣ ಕೂಡ ಇಲ್ಲ. ಹೀಗಾಗಿ ಅವರನ್ನು ಪತ್ತೆಹಚ್ಚುವುದು ಕಷ್ಟದ ಕೆಲಸವಾಗಿದೆ. ಸದ್ಯ ಆರೋಪಿಗಳಲ್ಲಿ ಮೂವರು ಘಟನೆ ನಡೆದ ಸ್ಥಳದ ಸುತ್ತಮುತ್ತಲು ಗುತ್ತಿಗೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎಂಬುದು ತಿಳಿದು ಬಂದಿದೆ.

    ಅಲ್ಲದೆ ಆರೋಪಿಗಳೆಲ್ಲರೂ 20ರಿಂದ 25 ವರ್ಷದ ವಯಸ್ಸಿನವರು, ಅವರನ್ನು ಹುಡುಕಿ ಕೊಟ್ಟವರಿಗೆ 25 ಸಾವಿರ ಬಹುಮಾನ ಹಣನವನ್ನು ಕೂಡ ಪೊಲೀಸರು ಘೋಷಿಸಿದ್ದಾರೆ. ಸದ್ಯ ಈ ಸಂಬಂಧ ತನಿಖೆ ಮುಂದುವರಿದಿದೆ.

  • ಮಾಜಿ ಸಚಿವರಿಗೆ ಟ್ರಾಫಿಕ್ ನಿಯಮ ಅನ್ವಯ ಆಗಲ್ವಾ? ರಸ್ತೆಯಲ್ಲಿಯೇ ಬಸ್ ಪಾರ್ಕ್

    ಮಾಜಿ ಸಚಿವರಿಗೆ ಟ್ರಾಫಿಕ್ ನಿಯಮ ಅನ್ವಯ ಆಗಲ್ವಾ? ರಸ್ತೆಯಲ್ಲಿಯೇ ಬಸ್ ಪಾರ್ಕ್

    -ಪಾರ್ಕ್ ಮಾಡ್ಬೇಡಿ ಅನ್ನೋರು ಇಲ್ಲ

    ಬೆಂಗಳೂರು: ಸಿಕ್ಕಸಿಕ್ಕ ರಸ್ತೆಯಲ್ಲಿ ವಾಹನ ಪಾರ್ಕ್ ಮಾಡುವಂತಿಲ್ಲ, ಕೆಟ್ಟು ನಿಂತ ವಾಹನಗಳನ್ನು ಪಾರ್ಕ್ ಮಾಡಿದರೆ ಗಂಟೆಗಳ ಲೆಕ್ಕದಲ್ಲಿ ಫೈನ್ ಹಾಕುತ್ತಾರೆ. ಆದರೆ ಶಾಸಕ, ಮಾಜಿ ಸಚಿವ ಜಮೀರ್ ಅಹ್ಮದ್ ಒಡೆತನದ ನ್ಯಾಷನಲ್ ಟ್ರಾವೆಲ್ಸ್ ಬಸ್ ಅನ್ನು ಚಾಮರಾಜಪೇಟೆಯ ರೋಡ್‍ನಲ್ಲಿ ಪಾರ್ಕ್ ಮಾಡಲಾಗುತ್ತಿದೆ.

    ರಸ್ತೆ ಕಿರಿದಾಗಿದರೂ ಬಿಂದಾಸ್ ಆಗಿ ಬಸ್‍ಗಳನ್ನು ಚಾಮರಾಜಪೇಟೆಯ ರಸ್ತೆಯಲ್ಲಿ ಪಾರ್ಕ್ ಮಾಡಲಾಗಿದೆ. ಹೀಗೆ ನೋ ಪಾರ್ಕಿಂಗ್ ಜಾಗದಲ್ಲಿ ಪಾರ್ಕ್ ಮಾಡುವ ವಾಹನಕ್ಕೆ ಒಂದು ಸಾವಿರ ದಂಡ ವಿಧಿಸಬೇಕು. ಆದರೆ ಜಮೀರ್ ಅವರ ಬಸ್ಸಿಗೆ ದಂಡ ಬಿಡಿ ಬಸ್ ಅನ್ನು ರಸ್ತೆಯಲ್ಲಿ ಪಾರ್ಕ್ ಮಾಡಬೇಡಿ ಎಂದು ಪೊಲೀಸರು ಹೇಳುತ್ತಿಲ್ಲ.

    ಕೆಟ್ಟು ನಿಂತ ಬಸ್‍ಗಳನ್ನು ಕೂಡ ಇನ್ನೊಂದು ಸಿಗ್ನಲ್ ಪಕ್ಕದ ರಸ್ತೆಯಲ್ಲಿ ವರ್ಷಾನುಗಟ್ಟಲೆಯಿಂದ ಪಾರ್ಕ್ ಮಾಡಲಾಗಿದೆ. ಟ್ರಾಫಿಕ್ ನಿಯಮದ ಪ್ರಕಾರ ಕೆಟ್ಟು ನಿಂತ ವಾಹನಗಳನ್ನು ರಸ್ತೆಯಲ್ಲಿ ನಿಲುಗಡೆ ಮಾಡಿದರೆ, ಗಂಟೆಗಳ ಲೆಕ್ಕದಲ್ಲಿ ದಂಡ ವಿಧಿಸಬೇಕು. ಆದರೆ ಜಮೀರ್ ಬಸ್‍ಗೆ ಇದ್ಯಾವುದು ಅನ್ವಯವಾಗಲ್ವಾ ಎಂಬ ಪ್ರಶ್ನೆಯೊಂದು ಮೂಡಿದೆ.

    ಬಸ್ ಪಾರ್ಕ್ ಮಾಡಿದರಿಂದ ವಾಹನ ಸವಾರರಿಗೆ ಸಂಚರಿಸಲು ಕಷ್ಟವಾಗುತ್ತದೆ. ಜಮೀರ್ ಅವರು ಸಂಚಾರ ಮಾಡುವ ಬಸ್ ಪಾರ್ಕ್ ಮಾಡುವ ಜೊತೆ ಕೆಟ್ಟು ಹೋದ ಬಸ್‍ಗಳನ್ನು ಕೂಡ ಪಾರ್ಕ್ ಮಾಡುತ್ತಿದ್ದಾರೆ. ಸುಮಾರು 10ಕ್ಕೂ ಹೆಚ್ಚು ಬಸ್‍ಗಳನ್ನು ಪಾರ್ಕ್ ಮಾಡಲಾಗಿದೆ. ಆದರೆ ಇದೂವರೆಗೂ ಪೊಲೀಸರು ದಂಡ ವಿಧಿಸಿಲ್ಲ.

  • ಬಹಿರಂಗವಾಗಿ ಹಾಡಹಗಲೇ ಯುವತಿಯರಿಂದ ಎಣ್ಣೆ ಪಾರ್ಟಿ

    ಬಹಿರಂಗವಾಗಿ ಹಾಡಹಗಲೇ ಯುವತಿಯರಿಂದ ಎಣ್ಣೆ ಪಾರ್ಟಿ

    ಶಿವಮೊಗ್ಗ: ಜಿಲ್ಲೆಯ ಮಹಾನಗರ ಪಾಲಿಕೆ ನಿರ್ವಹಣೆಯಲ್ಲಿ ಇರುವ ಗಾಂಧಿ ಪಾರ್ಕ್ ಅನೈತಿಕ ಚಟುವಟಿಕೆಗಳ ಕೇಂದ್ರವಾಗಿದೆ.

    ಶಿವಮೊಗ್ಗ ನಗರದ ಹೃದಯ ಭಾಗದಲ್ಲಿ ಇರುವ ಪಾರ್ಕಿನಲ್ಲಿ ನಡೆವ ಚಟುವಟಿಕೆಗಳ ಬಗ್ಗೆ ವ್ಯಾಪಕವಾದ ದೂರುಗಳು ಇದ್ದರೂ ಖಚಿತವಾದ ಆಧಾರ ಇರಲಿಲ್ಲ. ಈಗ ಈ ಪಾರ್ಕಿನಲ್ಲಿ ಒಂದಷ್ಟು ಜನ ಹುಡುಗಿಯರು ಎಣ್ಣೆ ಪಾರ್ಟಿ ಮಾಡಿದ ವಿಡಿಯೋ ಪಬ್ಲಿಕ್ ಟಿವಿಗೆ ಸಿಕ್ಕಿದೆ.

    ಮೂರ್ನಾಲ್ಕು ಜನ ಹುಡುಗಿಯರು ಹಾಗೂ ಹುಡುಗರು ಗಾಂಧಿ ಪಾರ್ಕಿನಲ್ಲಿ ಇರುವ ಕಟ್ಟೆ ಮೇಲೆ ಬೀರ್ ಬಾಟಲುಗಳನ್ನು ಇಟ್ಟುಕೊಂಡು ಕುಡಿದಿದ್ದಾರೆ. ಅಷ್ಟೇ ಅಲ್ಲದೆ ಕೇಕೆ ಹಾಕುತ್ತಾ ಅದನ್ನು ವಿಡಿಯೋ ಮಾಡಿದ್ದಾರೆ. ಬಹಿರಂಗವಾಗಿ ಹಾಡಹಗಲೇ ಎಣ್ಣೆ ಹಾಕಿದ ಈ ಯುವತಿಯರ ಕೃತ್ಯ ಗಂಭೀರವಾಗಿದೆ.

    ಈ ವಿಡಿಯೋ ಪಾರ್ಕಿಗೆ ವಾಕಿಂಗ್‍ಗಾಗಿ ಬರುವ ಸಭ್ಯಸ್ಥರಿಗೆ ಶಾಕ್ ನೀಡಿದೆ. ಇಂತಹ ಅನೇಕ ಘಟನೆಗಳಿಗೆ ಗಾಂಧಿ ಪಾರ್ಕ್ ಕೇಂದ್ರವಾಗಿದೆ. ಆದರೆ ಈ ಬಗ್ಗೆ ಮಹಾನಗರ ಪಾಲಿಕೆ ಜಾಣ ಮೌನ ತೋರುತ್ತಿದೆ.