Tag: Park

  • ರೋಡ್, ಪಾರ್ಕ್, ಮೆಟ್ರೋ, ಬಸ್ ನಿಲ್ದಾಣಕ್ಕೆ ಪುನೀತ್ ಹೆಸರು?

    ರೋಡ್, ಪಾರ್ಕ್, ಮೆಟ್ರೋ, ಬಸ್ ನಿಲ್ದಾಣಕ್ಕೆ ಪುನೀತ್ ಹೆಸರು?

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ದೊಡ್ಮನೆ ಹುಡುಗ ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಿಧನದ ಬಳಿಕ ಅವರ ಹೆಸರನ್ನು ರೋಡ್, ಪಾರ್ಕ್, ಮೆಟ್ರೋ ಹಾಗೂ ಬಸ್ ನಿಲ್ದಾಣಗಳಿಗೆ ಇಡುವ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.

    ನಗರದ ಪ್ರಮುಖ ರಸ್ತೆ, ಪಾರ್ಕ್, ಮೆಟ್ರೋ ಹಾಗೂ ಬಸ್ ನಿಲ್ದಾಣಗಳಿಗೆ ಪವರ್ ಸ್ಟಾರ್ ಹೆಸರಿಡಲು ಬೆಂಗಳೂರು ಮಹಾನನಗರ ಪಾಲಿಕೆ ವತಿಯಿಂದ ಅಭಿಪ್ರಾಯ ವ್ಯಕ್ತವಾಗಿದೆ. ಪುನೀತ್ ಅಭಿಮಾನಿಗಳ ಒತ್ತಾಸೆಯ ಬೆನ್ನಲ್ಲೇ ಬಿಬಿಎಂಪಿ ಈ ನಿರ್ಧಾರ ಕೈಗೊಂಡಿದ್ದು, ನಗರದ ಮುಖ್ಯ ರಸ್ತೆಯೊಂದಕ್ಕೆ ಪುನೀತ್ ಹೆಸರಿಡಲು ಚರ್ಚೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಪುನೀತ್ ಸಾವಿಗೂ 46 ಸಂಖ್ಯೆಗೂ ಸಂಬಂಧವೇನು?

    ಈಗಾಗಲೇ ರಾಜಾಜಿನಗರ ಮುಖ್ಯ ರಸ್ತೆಗೆ ಪುನೀತ್ ಹೆಸರಿಡಲಾಗಿದ್ದು, ಪಕ್ಕದ ವೆಸ್ಟ್ ಆಫ್ ಕಾರ್ಡ್ ರೋಡ್‍ಗೆ ಕೂಡ ಪುನೀತ್ ನಾಮಕರಣ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಈ ಬಗ್ಗೆ ಮೊದಲು ಪುನೀತ್ ರಾಜ್‍ಕುಮಾರ್ ಅವರ ಕುಟುಂಬಸ್ಥರೊಂದಿಗೆ ಚರ್ಚಿಸಿ, ನಂತರ ಸರ್ಕಾರದ ಮುಂದೆ ಈ ವಿಚಾರ ಪ್ರಸ್ತಾಪಿಸಲಾಗುತ್ತದೆ. ಇದನ್ನೂ ಓದಿ: ಪುನೀತ್ ಸಾವಿನ ಬೆನ್ನಲ್ಲೇ ಹೆಚ್ಚಾಯ್ತು ಇಸಿಜಿ, ಹೃದಯಸಂಬಂಧಿ ಟೆಸ್ಟ್‌ಗಳು

    ನಗರದ ಪ್ರತಿಷ್ಠಿತ ಪಾರ್ಕ್, ಆಟದ ಮೈದಾನ, ಮೆಟ್ರೋ ಹಾಗೂ ಬಸ್ ನಿಲ್ದಾಣಕ್ಕೂ ಅಪ್ಪು ಹೆಸರಿಡಲು ಚಿಂತನೆ ನಡೆಸಲಾಗಿದೆ. ಆದರೆ ಈ ವಿಚಾರವಾಗಿ ಅಂತಿಮವಾಗಿ ಸರ್ಕಾರ ನಿರ್ಧರಿಸಬೇಕಾಗಿದೆ.

  • ರಸ್ತೆ ಗುಂಡಿ ಆಯ್ತು, ಈಗ ಪಾರ್ಕ್ ಹೊಂಡಕ್ಕೆ ಬಾಲಕ ಬಲಿ..!

    ರಸ್ತೆ ಗುಂಡಿ ಆಯ್ತು, ಈಗ ಪಾರ್ಕ್ ಹೊಂಡಕ್ಕೆ ಬಾಲಕ ಬಲಿ..!

    – ಶೋಕಸಾಗರದಲ್ಲಿ ಕುಟುಂಬ
    – ಶಾಸಕರಿಂದ 50 ಸಾವಿರ ರೂ. ಧನಸಹಾಯ

    ಬೆಂಗಳೂರು/ನೆಲಮಂಗಲ: ರಸ್ತೆ ಗುಂಡಿ ಆಯ್ತು, ಇದೀಗ ಪಾರ್ಕ್ ಹೊಂಡಕ್ಕೆ ಬಿದ್ದು ಬಾಲಕನೊಬ್ಬ ಮೃತಪಟ್ಟ ಘಟನೆ ಮಲ್ಲಸಂದ್ರ ವಾರ್ಡಿನ ಪಾರ್ಕ್‍ನಲ್ಲಿ ಶುಕ್ರವಾರ ದುರ್ಘಟನೆ ನಡೆದಿದೆ.

    ಪ್ರತಾಪ್(8) ಮೃತ ದುರ್ದೈವಿ ಬಾಲಕ. ಈತ ರುದ್ರಮುನಿ ಹಾಗೂ ಕಾಂತಮ್ಮರ ಎರಡನೇ ಮಗ. ಆಟವಾಡುವ ವೇಳೆ ಬಿಬಿಎಂಪಿ ವತಿಯಿಂದ ನಿರ್ಮಾಣವಾಗಿದ್ದ ಕೆಂಪೇಗೌಡ ಉದ್ಯಾನವನದ ಪಾರ್ಕ್‍ನಲ್ಲಿರುವ ಹೊಂಡಕ್ಕೆ ಬಿದ್ದಿದ್ದಾನೆ. ಇದನ್ನೂ ಓದಿ:  ಡ್ರೋನ್ ದಾಳಿ- 10 ಜನರಿಗೆ ತೀವ್ರ ಗಾಯ

    ಮೂಲತಃ ಹಾಸನ ಜಿಲ್ಲೆಯವರಾದ ರುದ್ರಮುನಿ ಕುಟುಂಬ ಕಳೆದ 25 ವರ್ಷಗಳಿಂದ ಮಲ್ಲಸಂದ್ರದಲ್ಲಿ ವಾಸವಾಗಿದೆ. ನಿನ್ನೆ ಆಟವಾಡಲು ಹೋಗಿದ್ದ ಮಗ ಮಧ್ಯಾಹ್ನ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ್ದಾನೆ. ತಮ್ಮನನ್ನು ರಕ್ಷಣೆ ಮಾಡಲು ಅಣ್ಣ ರವಿತೇಜಾ ಮುಂದಾಗಿದ್ದು, ಆತ ಕೂಡ ಹೊಂಡಕ್ಕೆ ಬಿದ್ದಿದ್ದಾನೆ. ಇದನ್ನು ಗಮನಸಿದ ಸ್ಥಳೀಯರು ಕೂಡಲೇ ರವಿತೇಜಾನನ್ನ ಕಾಪಾಡಿದ್ದಾರೆ. ಆದರೆ ತಮ್ಮ ಪ್ರತಾಪ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸದ್ಯ ಬಾಲಕನ ಮೃತದಲ್ಲಿ ಸಪ್ತಗಿರಿ ಆಸ್ಪತ್ರೆಯಲ್ಲಿದ್ದು, ಹಾಸ್ಪಿಟಲ್ ಮುಂದೆ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿದೆ.

    ಶಾಸಕರಾದ ಶ್ರೀ ಆರ್ ಮಂಜುನಾಥ್ ಅವರು ಮಗುವಿನ ಕುಟುಂಬಕ್ಕೆ 50 ಸಾವಿರ ರೂಗಳ ಧನಸಹಾಯ ಮಾಡಿದರು. ಕುಟುಂಬಕ್ಕೆ ಸರ್ಕಾರದಿಂದ ಮನೆ ಮಂಜೂರು ಮಾಡಿಸುವುದಾಗಿಯು ಈ ಸಂದರ್ಭದಲ್ಲಿ ತಿಳಿಸಿದರು. ಈ ಸಂಬಂಧ ಬಾಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: 627 ಗ್ರಾಂ ಚಿನ್ನ, 24.71 ಲಕ್ಷ ರೂ. ಲೂಟಿ ಮಾಡಿ ಪರಾರಿಯಾಗಿದ್ದ ಕಳ್ಳರು ಅರೆಸ್ಟ್

  • ಪಾರ್ಕಿನಲ್ಲಿ ಆಟ ಆಡುವಾಗ ವಿದ್ಯುತ್ ತಗುಲಿ ಬಾಲಕ ಸಾವು

    ಪಾರ್ಕಿನಲ್ಲಿ ಆಟ ಆಡುವಾಗ ವಿದ್ಯುತ್ ತಗುಲಿ ಬಾಲಕ ಸಾವು

    ಕಲಬುರಗಿ: ಪಾರ್ಕ್ ನಲ್ಲಿ ಆಟ ಆಡುತ್ತಿರುವಾಗ ವಿದ್ಯುತ್ ತಂತಿ ತಗುಲಿ ಬಾಲಕ ಸಾವನ್ನಪ್ಪಿದ ಆಘಾತಕಾರಿ ಘಟನೆ ನಗರದ ಎನ್.ಜಿ.ಓ. ಕಾಲೋನಿಯ ಹನುಮಾನ್ ಮಂದಿರದ ಉದ್ಯಾನವನದಲ್ಲಿ ನಡೆದಿದೆ.

    ನಗರದ ಎನ್.ಜಿ.ಓ. ಕಾಲೋನಿಯ ಮಹಾದೇವಿ ಸುರೇಶ ದಂಪತಿ ಪುತ್ರ 6 ವರ್ಷದ ಸಿದ್ದು ಮೃತ ಬಾಲಕ. ವಿದ್ಯುತ್ ತಂತಿ ತಗಲಿ ಮೃತಪಟ್ಟಿದ್ದಾನೆ. ಹನುಮಾನ್ ಮಂದಿರದ ಉದ್ಯಾನವನದಲ್ಲಿನ ಹೈ ಮಾಸ್ಕ್ ದೀಪದ ವಿದ್ಯುತ್ ವೈರ್ ಕಟ್ ಆಗಿ ಬಿದ್ದ ಹಿನ್ನೆಲೆಯಲ್ಲಿ ಈ ಘಟನೆ ಸಂಭವಿಸಿದೆ. ಇದನ್ನೂ ಓದಿ: ಮೀರಾಬಾಯಿ ಕೊಪ್ಪಿಕರ್‌ಗೆ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ

    ಆಟವಾಡುತ್ತಿದ್ದ ಬಾಲಕ ಆಕಸ್ಮಿಕವಾಗಿ ವಿದ್ಯುತ್ ತಂತಿ ತುಳಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಪಾಲಿಕೆಯಡಿಯಲ್ಲಿ ಬರುವ ಈ ಹೈ ಮಾಸ್ಕ್ ದೀಪದಿಂದಾಗಿ ಸಾವನ್ನಪ್ಪಿದ್ದ ಘಟನೆ ಬಗ್ಗೆ ಮಹಾನಗರ ಪಾಲಿಕೆ ಆಯುಕ್ತ ಸ್ನೇಹಾಲ್ ಲೋಖಂಡೆ ಖೇದ ವ್ಯಕ್ತ ಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿ, ಆಟ ಆಡುವಾಗ ಅರ್ಥಿಂಗ್ ಕೇಬಲ್ ಮೇಲೆ ಮತ್ತು ಜಂಕ್ಷನ್ ಬಾಕ್ಸ್ ನಲ್ಲಿ ಕೈ ಇಟ್ಟಿದ್ದರಿಂದ ಅಕಸ್ಮಿಕವಾಗಿ 6 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ಮೃತ ಬಾಲಕನ ಪಾಲಕರೊಂದಿಗೆ ಮಾತನಾಡಿದ್ದು, ಅವರಿಗೆ ಸಾಂತ್ವನ ಹೇಳಿದ್ದಲ್ಲದೇ, ಪರಿಹಾರ ಕೊಡುವ ಬಗ್ಗೆ ಮಾತನಾಡಿದ್ದೇನೆ ಎಂದು ತಿಳಿಸಿದರು.

  • ಲಾಲ್‍ಬಾಗ್, ಕಬ್ಬನ್ ಪಾರ್ಕ್ ಮಾದರಿಯಲ್ಲಿ ಮತ್ತೊಂದು ಉದ್ಯಾನವನ: ತೋಟಗಾರಿಕೆ ಸಚಿವ ಮುನಿರತ್ನ

    ಲಾಲ್‍ಬಾಗ್, ಕಬ್ಬನ್ ಪಾರ್ಕ್ ಮಾದರಿಯಲ್ಲಿ ಮತ್ತೊಂದು ಉದ್ಯಾನವನ: ತೋಟಗಾರಿಕೆ ಸಚಿವ ಮುನಿರತ್ನ

    ಕೋಲಾರ: ಅಂತರಾಷ್ಟ್ರೀಯ ಮಟ್ಟದಲ್ಲಿ ಹೆರುವಾಸಿಯಾದ ಬೆಂಗಳೂರಿನ ನಾಡಪ್ರಭು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಮೂರನೇ ದೊಡ್ಡ ಉದ್ಯಾನವನ ಮಾಡುವ ಚಿಂತನೆ ನಡೆಯುತ್ತಿದೆ ಎಂದು ತೋಟಗಾರಿಕೆ ಸಚಿವ ಮುನಿರತ್ನ ಹೇಳಿದ್ದಾರೆ.

    75ನೇ ಸ್ವತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಂಪೇಗೌಡರು ಕಟ್ಟಿದ ಕೆಂಪುತೋಟ 34 ಎಕರೆ ಮತ್ತು ಅದರ ಜೊತೆಗೆ 240 ಎಕರೆ ಲಾಲ್ ಬಾಗ್ ಮತ್ತು ಕಬ್ಬನ್ ಉದ್ಯಾನವನ ಬಿಟ್ಟರೆ ಇದುವರೆಗೂ ಬಹುದೊಡ್ಡ ಉದ್ಯಾನವನ ನಿರ್ಮಾಣವಾಗಿಲ್ಲ. ಸುಮಾರು 300 ರಿಂದ 400 ವರ್ಷಗಳಿಂದ ಲಾಲ್ ಬಾಗ್ ಮತ್ತು ಕಬ್ಬನ್ ಪಾರ್ಕ್ ನಂತರ ಯಾವುದೇ ಮೂರನೇ ಉದ್ಯಾನವನ ಮಾಡುವ ಚಿಂತನೆ ಮಾಡಿಲ್ಲ. ಇವೆರೆಡು ಉದ್ಯಾನವನವನ್ನು ಬಿಟ್ಟರೆ ಅದಕ್ಕಿಂತ ದೊಡ್ಡ ಉದ್ಯಾನವನವನ್ನು ನಿರ್ಮಾಣ ಮಾಡುವ ಚಿಂತನೆ ನಮ್ಮ ಸರ್ಕಾರದಲ್ಲಿ ನಡೆಯುತ್ತಿದೆ. ನಾಡಪ್ರಭು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಿರುವಂತೆ ಮಾಡಬೇಕು ಎಂಬುದು ನನ್ನ ಉದ್ದೇಶ ಎಂದು ತಿಳಿಸಿದರು.

    ಪ್ರಪಂಚದಲ್ಲಿ ಯಾವುದೇ ದೇಶಕ್ಕೆ ಹೋದ್ರು ಭಾರತ, ಕರ್ನಾಟಕ ಅನ್ನೋದಿಲ್ಲ, ಬೆಂಗಳೂರು ಸಿಲಿಕಾನ್ ಸಿಟಿ ಅಂತ ತನ್ನದೇ ಹೆಸರು ಹೊಂದಿದೆ. ಹಾಗಾಗಿ ಮೂರನೇ ಅತಿ ದೊಡ್ಡ ಉದ್ಯಾನವನ ಮಾಡಬೇಕಾಗಿರೋದು ನಮ್ಮ ಗುರಿಯಾಗಿದೆ. ಕೋಲಾರ ಜಿಲ್ಲೆಯ ಅಭಿವೃದ್ದಿ ನನ್ನ ಮೊದಲ ಧ್ಯೇಯ. ಹಂತ ಹಂತವಾಗಿ ಜಿಲ್ಲೆಯಲ್ಲಿರುವ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು. ಇದನ್ನೂ ಓದಿ: ಮಂಗಳೂರು ಏರ್ ಪೋರ್ಟ್ ರ್‍ಯಾಪಿಡ್ ಪಿಸಿಆರ್ ಟೆಸ್ಟ್ – ಅನಿವಾಸಿಗಳ ಬೇಡಿಕೆಗೆ ಸ್ಪಂದಿಸಿದ ದ.ಕ. ಡಿಸಿ

    ಕಾರ್ಯಕ್ರಮದಲ್ಲಿ ಸಂಸದ ಎಸ್.ಮುನಿಸ್ವಾಮಿ, ಶಾಸಕ ಶ್ರೀನಿವಾಸಗೌಡ, ವಿಧಾನ ಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ಗೊವಿಂದರಾಜು, ಜಿಲ್ಲಾಧಿಕಾರಿ ಡಾ. ಅರ್. ಸೆಲ್ವಮಣಿ, ಜಿಲ್ಲಾ ವರಿಷ್ಠಾಧಿಕಾರಿ ಕಿಶೋಬಾಬು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ರು. ಇದನ್ನೂ ಓದಿ: ಮನಸ್ಸಿನಲ್ಲಿ ಸ್ವಾತಂತ್ರ್ಯವಿರಲಿ, ಪದಗಳಲ್ಲಿ ನಂಬಿಕೆಯಿರಲಿ: ಯಶ್

  • ಸ್ಮಶಾನದಲ್ಲಿ ಸ್ಥಳಾವಕಾಶದ ಕೊರತೆ – ಪಾರ್ಕ್ ಗಳಲ್ಲಿ ನಡೆಯಲಿದೆ ಅಂತ್ಯಸಂಸ್ಕಾರ

    ಸ್ಮಶಾನದಲ್ಲಿ ಸ್ಥಳಾವಕಾಶದ ಕೊರತೆ – ಪಾರ್ಕ್ ಗಳಲ್ಲಿ ನಡೆಯಲಿದೆ ಅಂತ್ಯಸಂಸ್ಕಾರ

    – ಸ್ಮಶಾನಗಳಾಗಿ ಬದಲಾದ ಪಾರ್ಕ್ ಗಳು

    ನವದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ ಕೊರೊನಾ ಮರಣ ಮೃದಂಗ ಮುಂದುವರಿದಿದೆ. ಸ್ಮಶಾನಗಳಲ್ಲಿ ಅಂತ್ಯಕ್ರಿಯೆಗೆ ಸ್ಥಳ ಇಕ್ಕಟ್ಟಾದ ಹಿನ್ನೆಲೆ ಅಂತ್ಯಸಂಸ್ಕಾರಕ್ಕೆ ಪಾರ್ಕ್ ಗಳಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ.

    ದೆಹಲಿಯ ಸರಾಯ ಕಾಲೇಂ ಖಾಂ ಪಾರ್ಕ್ ಸ್ಮಶಾನವಾಗಿ ಬದಲಾಗಿದೆ. ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಮೃತದೇಹ ಬರುತ್ತಿರೋದರಿಂದ ಜನರು ಕ್ಯೂ ಹಚ್ಚುವಂತಾಗಿದೆ. ಈ ಸಮಸ್ಯೆ ಪರಿಹಾರಕ್ಕೆ ಮುಂದಾಗಿರುವ ದೆಹಲಿ ಸರ್ಕಾರ ಅಲ್ಲಿರುವ ಪಾರ್ಕ್ ನಲ್ಲಿ ಅಂತ್ಯ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಿಕೊಟ್ಟಿದೆ. ಸರಾಯ ಕಾಲೇಂ ಖಾಂನಲ್ಲಿ ಏಕಕಾಲದಲ್ಲಿ 20 ಶವಗಳನ್ನು ದಹಿಸುವ ವ್ಯವಸ್ಥೆಗೊಳಿಸಲಾಗುತ್ತಿದೆ. ಮತ್ತೊಂದು ಭಾಗದಲ್ಲಿ 50 ಶವಗಳನ್ನ ಸುಡಲು ಕಟ್ಟೆಗಳನ್ನ ನಿರ್ಮಿಸಲಾಗುತ್ತಿದೆ.

    ಸದ್ಯ ಸ್ಮಶಾನದಲ್ಲಿ ಸ್ಥಳ ತುಂಬಾ ಇಕ್ಕಟ್ಟು ಆಗ್ತಿದೆ. ಹೆಣಗಳನ್ನು ಸುಡಲು ಹೆಚ್ಚಿನ ಸಮಯ ಬೇಕಾಗುತ್ತದೆ. ಇತ್ತ ಮೃತದೇಹಗಳು ಒಂದಾದ ನಂತರ ಒಂದು ಬರುತ್ತಿವೆ. ಹೆಣ ಸುಡಲು ಕಟ್ಟಿಗೆಗಳ ಕೊರತೆ ಉಂಟಾಗಿದೆ. ಎಂಎಸ್‍ಡಿ ಕೆಲ ಕಟ್ಟಿಗೆಗಳು ಪೂರೈಕೆ ಮಾಡುತ್ತಿದ್ರೆ, ಸಾರ್ವಜನಿಕರು ಕಟ್ಟಿಗೆ ನೀಡುತ್ತಿದ್ದಾರೆ ಎಂದು ಸ್ಮಶಾನದ ಸಿಬ್ಬಂದಿ ಹೇಳಿದ್ದಾರೆ.

    ಕೊರೊನಾ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಈಗಿರುವ ಲಾಕ್‍ಡೌನ್‍ಅನ್ನು ದೆಹಲಿಯಲ್ಲಿ ಇನ್ನು ಒಂದು ವಾರಗಳ ಕಾಲ ಮೇ 3ರವರೆಗೆ ಮುಂದುವರಿಸುವುದಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆದೇಶ ಹೊರಡಿಸಿದ್ದಾರೆ.

  • ಉಡುಪಿಯಲ್ಲಿ ಭವಿಷ್ಯದ ಸೈನಿಕರು ಬೀದಿಪಾಲು

    ಉಡುಪಿಯಲ್ಲಿ ಭವಿಷ್ಯದ ಸೈನಿಕರು ಬೀದಿಪಾಲು

    ಉಡುಪಿ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸೇನಾ ನೇಮಕಾತಿ ನಡೆಯುತ್ತಿದೆ. ಜಿಲ್ಲಾ ಸರ್ಕಾರಿ ಅಜ್ಜರಕಾಡು ಮೈದಾನದಲ್ಲಿ ನಡೆಯುವ ಈ ಪ್ರಕ್ರಿಯೆಯಲ್ಲಿ ಪ್ರತಿದಿನ ಮೂರು ಸಾವಿರಕ್ಕಿಂತಲೂ ಹೆಚ್ಚು ಯುವಕರು ಪಾಲ್ಗೊಳ್ಳುತ್ತಿದ್ದಾರೆ. ಆಯ್ಕೆ ಪ್ರಕ್ರಿಯೆಗೆ ಬರುವ ಹೊರಜಿಲ್ಲೆಯ ಯುವಕರಿಗೆ ಮೂಲಭೂತ ಸೌಕರ್ಯದ ಕೊರತೆ ಎದ್ದು ಕಾಣುತ್ತಿದೆ.

    ಭವಿಷ್ಯದ ಸೈನಿಕರು ರಾತ್ರಿ ರಸ್ತೆಬದಿ ಮಲಗಿ ಕತ್ತಲು ಕಳೆಯುತ್ತಿದ್ದಾರೆ. ಒಂದು ದಿನ ಮೊದಲೇ ಉಡುಪಿಗೆ ಬರುವ ಯುವಕರು ಪಾರ್ಕ್ ರಸ್ತೆಬದಿ, ಫುಟ್‍ಪಾತ್ ಮೇಲೆ ಹಗಲು-ರಾತ್ರಿ ಕಳೆಯುತ್ತಿದ್ದಾರೆ. ಅಲ್ಲದೆ ಬೆಳಗ್ಗಿನ ಜಾವ ಬಿರುಬಿಸಿಲಿಗೆ ಒದ್ದಾಡುವ ಯುವಕರನ್ನು ಕಂಡು ಜನ ಉಡುಪಿ ಜಿಲ್ಲಾಡಳಿತದ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಸರಿಯಾದ ವ್ಯವಸ್ಥೆ ಮಾಡಲು ಆಗದಿದ್ದರೆ ಜವಾಬ್ದಾರಿ ಯಾಕೆ ಹೊರಬೇಕು ಎಂದು ಕಿಡಿಕಾರಿದ್ದಾರೆ.

    ಜಿಲ್ಲೆಯಲ್ಲಿ ನಡೆಯುವ ಸೇನಾ ನೇಮಕಾತಿ ಪ್ರಕ್ರಿಯೆಗೆ ಯಾವುದೇ ರಾಜಕೀಯ ಪಕ್ಷಗಳು ಸಂಘಟನೆಗಳು ಮೂಲಭೂತ ಸೌಕರ್ಯವನ್ನು ಒದಗಿಸಿಲ್ಲ. ಮಾತು ಎತ್ತಿದರೆ ದೇಶ, ಸೈನಿಕರು ಎಂದು ಉದ್ದುದ್ದ ಭಾಷಣ ಬಿಗಿಯುವವರೂ ಎಲ್ಲವನ್ನೂ ನೋಡಿಯೋ ನೋಡದೆಯೋ ಸುಮ್ಮನಿದ್ದಾರೆ. ಮಾತಿನ ಮಂಟಪ ಕಟ್ಟುವವರು ಎಲ್ಲಿ ಕಣ್ಮರೆಯಾಗಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಅಸಮಾಧಾನ ವ್ಯಕ್ತಪಡಿಸಿದರು.

    ಮೈದಾನದ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದೇವೆ. ಊಟದ ವ್ಯವಸ್ಥೆ ಸರಾಗವಾಗಿ ನಡೆಯುತ್ತಿದೆ. ಮೂರು ಕಡೆ ವಸತಿ ವ್ಯವಸ್ಥೆ ಮಾಡಿದ್ದೇವೆ. ದೇಗುಲದ ಸಭಾಂಗಣ ನಿಗದಿಯಾಗಿದೆ. ಒಂದು ದಿನ ಮೊದಲೇ ಯುವಕರು ಬರುತ್ತಿರುವುದರಿಂದ, ಮೈದಾನದ ಪಕ್ಕದಲ್ಲೇ ಇದ್ದು ಸರತಿ ಸಾಲಿನ ಮೊದಲು ನಿಲ್ಲಲು ಯುವಕರು ಮೈದಾನ ಪಕ್ಕವೇ ಮಲಗುತ್ತಾರೆ ಹೀಗಾಗಿ ಈ ಸಮಸ್ಯೆ ಆಗಿರಬಹುದು ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಜಿಲ್ಲಾಡಳಿತಕ್ಕೆ ಹೇಳಿದ್ದಾರೆ.

    ಧಾರ್ಮಿಕ, ಸಾರ್ವಜನಿಕ, ರಾಜಕೀಯ ಕಾರ್ಯಕ್ರಮಗಳನ್ನು ಉಡುಪಿಯಲ್ಲಿ ವ್ಯವಸ್ಥಿತವಾಗಿ ನಡೆಸಲಾಗುತ್ತದೆ. ಆದರೆ ಭವಿಷ್ಯದ ಸೈನಿಕರ ವಿಚಾರದಲ್ಲಿ ಸ್ವಯಂಪ್ರೇರಿತವಾಗಿಯೂ ಜನ ಮುಂದೆ ಬಂದಿಲ್ಲ. ಜಿಲ್ಲಾಡಳಿತ ಕರ್ತವ್ಯದ ರೀತಿಯಲ್ಲಿ ಕೆಲಸ ಮಾಡಿ ಕೈ ತೊಳೆದುಕೊಂಡಿದೆ ಎಂದು ಸಾಮಾಜಿಕ ಕಾರ್ಯಕರ್ತರು ಅಸಮಾಧಾನ ಆಕ್ರೋಶಗೊಂಡಿದ್ದಾರೆ.

  • ಸಿಡಿ ಹೆಸರಲ್ಲಿ ಬ್ಲಾಕ್‍ಮೇಲ್ – ಹುಬ್ಬಳ್ಳಿಯಲ್ಲಿ ದೂರು ದಾಖಲು

    ಸಿಡಿ ಹೆಸರಲ್ಲಿ ಬ್ಲಾಕ್‍ಮೇಲ್ – ಹುಬ್ಬಳ್ಳಿಯಲ್ಲಿ ದೂರು ದಾಖಲು

    ಹುಬ್ಬಳ್ಳಿ: ಪ್ರೇಮಿಗಳಿಬ್ಬರ ಖಾಸಗಿ ವೀಡಿಯೋ ತೋರಿಸಿ ಬೆದರಿಸಿ ಬ್ಲಾಕ್ ಮೇಲ್ ಮಾಡಿದ್ದಲ್ಲದೇ ಯುವಕನನ್ನು ಥಳಿಸಿದ ರೌಡಿ ಗ್ಯಾಂಗ್ ವಿರುದ್ಧ ಹುಬ್ಬಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

    ಹುಬ್ಬಳ್ಳಿಯ ಕುಮಾರಸ್ವಾಮಿ ಎನ್ನುವ ಯುವಕ ತನ್ನ ಪ್ರೇಯಸಿಯೊಂದಿಗೆ ಪಾರ್ಕ್ ನಲ್ಲಿದ್ದ ವೇಳೆ ವೀಡಿಯೋ ಶೂಟ್ ಮಾಡಿದ್ದ ರೌಡಿ ಗ್ಯಾಂಗ್, ನಂತರ ಕುಮಾರಸ್ವಾಮಿಗೆ ವೀಡಿಯೋ ತೋರಿಸಿ ಬ್ಲಾಕ್ ಮೇಲ್ ಮಾಡಿದ್ದರು. ಯುವಕ 5 ಲಕ್ಷ ರೂಪಾಯಿ ಹಣ ನೀಡಲು ಒಪ್ಪದಿದ್ದಾಗ ಯುವಕ ಕುಮಾರಸ್ವಾಮಿಯನ್ನ ಹಿಗ್ಗಾಮುಗ್ಗ ಥಳಿಸಿದ ಘಟನೆ ನಡೆದಿದೆ.

    ಕುಮಾರಸ್ವಾಮಿ ಎಂಬ ಯುವಕ ತನ್ನ ಪ್ರೇಯಿಸಿ ಜೊತೆಗಿದ್ದಾಗ ಅಕ್ಷಯ ಪಾರ್ಕ್ ನಿವಾಸಿಗಳಾದ ಶಕ್ತಿರಾಜ ದಾಂಡೇಲಿ ಸೇರಿದಂತೆ ಹಲವರು ವೀಡಿಯೋ ಶೂಟ್ ಮಾಡಿದ್ದಾರೆ. ಇದೇ ವೀಡಿಯೋ ಇಟ್ಟುಕೊಂಡು ಕುಮಾರಸ್ವಾಮಿಯನ್ನ ಬ್ಲಾಕ್ ಮೇಲ್ ಮಾಡುತ್ತಿದ್ದ ಶಕ್ತಿರಾಜ ದಾಂಡೇಲಿ, ಸಂತೋಷ್ ಬ್ಯಾಹಟ್ಟಿ, ರಾಹುಲ ಹಾಗೂ ಪ್ರಭು ಸೇರಿದಂತೆ ಹಲವರು ಕುಮಾರಸ್ವಾಮಿಯನ್ನ ಅಪಹರಿಸಿ ಹಣಕ್ಕಾಗಿ ಪೀಡಿಸಿ ಹಲ್ಲೆ ಮಾಡಿದ್ದಾರೆ. ಅಲ್ಲದೇ ಮೀಡಿಯಾದವರಿಗೆ ವೀಡಿಯೋ ಕೊಡುವುದಾಗಿ ಬೆದರಿಕೆ ಹಾಕಿದ್ದಾರೆ.

    ಘಟನೆಯ ಕುರಿತು ಹಲ್ಲೆಗೊಳಗಾದ ಕುಮಾರಸ್ವಾಮಿ ತಾಯಿ ಹುಬ್ಬಳ್ಳಿಯ ಗೋಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ಆರೋಪಿಗಳಿಗಾಗಿ ಜಾಲ ಬೀಸಿದ್ದಾರೆ.

  • ಮತ್ತೆ ಸಂಯುಕ್ತ ಹೆಗ್ಡೆಯಿಂದ ಕಿರಿಕ್ – ಸಾರ್ವಜನಿಕರಿಂದ ದೂರು, ಪಾರ್ಕಿನಲ್ಲೇ ಲಾಕ್

    ಮತ್ತೆ ಸಂಯುಕ್ತ ಹೆಗ್ಡೆಯಿಂದ ಕಿರಿಕ್ – ಸಾರ್ವಜನಿಕರಿಂದ ದೂರು, ಪಾರ್ಕಿನಲ್ಲೇ ಲಾಕ್

    ಬೆಂಗಳೂರು: ಕಿರಿಕ್ ಪಾರ್ಟಿ ಸಿನಿಮಾ ಖ್ಯಾತಿಯ ನಟಿ ಸಂಯುಕ್ತ ಹೆಗ್ಡೆಯವರು ಮತ್ತೆ ವಿವಾದದಲ್ಲಿ ಸಿಲುಕಿಕೊಂಡಿದ್ದು, ಸಾರ್ವಜನಿಕರಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ.

    ಸಿಲಿಕಾನ್ ಸಿಟಿಯ ಅಗರ ಉದ್ಯನವನದಲ್ಲಿ ಸಂಯುಕ್ತ ಅಸಭ್ಯವಾಗಿ ವರ್ತನೆ ಮಾಡಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಇಂದು ಸಾರ್ವಜನಿಕರು ವಾಕಿಂಗ್ ಮಾಡುವ ಪಾರ್ಕ್‍ನಲ್ಲಿ ಸಂಯುಕ್ತ ಹೆಗ್ಡೆ ಮತ್ತವರ ಸಂಗಡಿಗರು ತುಂಡು ಹುಲಾ ಹೂಪ್ ಡ್ಯಾನ್ಸ್ ಮಾಡಿದ್ದಾರೆ.

    ತುಂಡು ಬಟ್ಟೆ ತೊಟ್ಟು ಡ್ಯಾನ್ಸ್ ಮಾಡಿದ್ದಕ್ಕೆ ಸ್ಥಳೀಯರು ಮತ್ತು ಹಿರಿಯ ನಾಗರಿಕರು ವಿರೋಧ ವ್ಯಕ್ತಪಡಿಸಿದ್ದಾರೆ. ಆಗ ಸಾರ್ವಜನಿಕರ ವಿರುದ್ಧ ನಟಿ ಸಂಯುಕ್ತ ಕಿರುಚಾಡಿ ರಂಪ ಮಾಡಿದ್ದಾರೆ. ಈ ವೇಳೆ ಸಾರ್ವಜನಿಕರು ನಟಿಯ ವಿರುದ್ಧ ಧಿಕ್ಕಾರ ಕೂಗಿ, ನಂತರ ಪಾರ್ಕ್ ಗೇಟನ್ನು ಲಾಕ್ ಮಾಡಿ ಪೊಲೀಸರಿಗೆ ಕರೆ ಮಾಡಿದ್ದಾರೆ.

    ಈ ವೇಳೆ ಗೇಟ್ ಓಪನ್ ಮಾಡುವಂತೆ ಸಂಯುಕ್ತ ಮತ್ತು ಸಾರ್ವಜನಿಕರ ನಡುವೆ ಜಗಳವಾಗಿದೆ. ಅಷ್ಟರಲ್ಲಿ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಆಗ ತಕ್ಷಣ ಇನ್‍ಸ್ಟಾಗ್ರಾಮ್‍ನಲ್ಲಿ ಲೈವ್ ಬಂದ ಸಂಯುಕ್ತ, ನಾನು ಏನೂ ತಪ್ಪು ಮಾಡಿಲ್ಲ. ಇವರು ಸುಮ್ಮನೆ ನಮ್ಮನ್ನು ಕೂಡಿ ಹಾಕಿದ್ದಾರೆ ಎಂದು ದೂರಿದ್ದಾರೆ. ಆನಂತರ ಪೊಲೀಸರು ಬಂದು ಆಕೆಯನ್ನು ಮತ್ತು ಅವರ ಸ್ನೇಹಿತರನ್ನು ಅಲ್ಲಿಂದ ಕರೆದುಕೊಂಡು ಹೋಗಿದ್ದಾರೆ.

    https://www.instagram.com/tv/CEtwP4plMhN/?utm_source=ig_web_copy_link

     

  • ಸ್ಕೂಲ್ ಪಕ್ಕದ ಪಾರ್ಕಿನಲ್ಲಿ ಟೆಂಟ್ ಹಾಕಿ ಸೆಕ್ಸ್ ದಂಧೆ

    ಸ್ಕೂಲ್ ಪಕ್ಕದ ಪಾರ್ಕಿನಲ್ಲಿ ಟೆಂಟ್ ಹಾಕಿ ಸೆಕ್ಸ್ ದಂಧೆ

    -ಸ್ಥಳದಲ್ಲಿ ಸಿರಿಂಜ್, ಡ್ರಗ್ಸ್, ಕಾಂಡೋಮ್ ಪತ್ತೆ

    ಮೆಲ್ಬೋರ್ನ್: ಶಾಲೆಯ ಅನತಿ ದೂರದಲ್ಲಿರುವ ಪಾರ್ಕ್ ನಲ್ಲಿ ಟೆಂಟ್ ಹಾಕಿ ಸೆಕ್ಸ್ ದಂಧೆ ನಡೆಯುತ್ತಿರುವ ಘಟನೆ ಮೆಲ್ಬೋರ್ನ್ ನ ಪಶ್ಚಿಮ ದಾಂಡೆನಾಂಗ್ ನಗರದ ಹೆಮ್ಮಿಂಗ್ ಸ್ಟ್ರೀಟ್ ನಲ್ಲಿ ನಡೆದಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯ ವ್ಯಾಪಾರಿ, ಇತ್ತೀಚೆಗೆ ಈ ಸ್ಥಳದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ದಾಂಡೆನಾಂಗ್ ಸ್ಟ್ರೀಟ್ ನ ಜನರು ಡ್ರಗ್ಸ್ ನಶೆಯಲ್ಲಿ ತೇಲಾಡುತ್ತಾರೆ. ಸಾರ್ವಜನಿಕ ಸ್ಥಳಗಳಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುವವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕಿದೆ. ಶಾಲೆಯ ಸಮೀಪದ ಪಾರ್ಕ್, ಮಕ್ಕಳ ಪ್ಲೇ ಗ್ರೌಂಡ್ ಬಳಿ ನಡೆಯುತ್ತಿರುವ ಈ ರೀತಿಯ ಅನೈತಿಕ ಚಟುವಟಿಕೆಗಳನ್ನ ನಿಯಂತ್ರಿಸಬೇಕಿದೆ ಎಂದು ಆಗ್ರಹಿಸಿದ್ದಾರೆ.

    ಕೆಲ ಅಪರಿಚಿತರು ಬಂದು ತಾತ್ಕಾಲಿಕ ಟೆಂಟ್ ಹಾಕಿ ಲೈಂಗಿಕ ಕ್ರಿಯೆ, ಮಾದಕ ವಸ್ತುಗಳ ಸೇವನೆಯಲ್ಲಿ ತೊಡಗುತ್ತಾರೆ. ಇನ್ನು ಪಾರ್ಕಿನಲ್ಲಿ ಸ್ಲೀಪಿಂಗ್ ಬ್ಯಾಗ್ಸ್, ಕಾಂಡೋಮ್, ಸಿರಿಂಜ್, ಡ್ರಗ್ಸ್ ಪ್ಯಾಕೇಟ್ ಗಳು ಕಾಣುತ್ತಿವೆ. ಕಳೆದ ನಾಲ್ಕು ತಿಂಗಳಿನಿಂದ ಈ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದು, ಸ್ಥಳೀಯ ಅಧಿಕಾರಿಗಳು ಎಚ್ಚೆತ್ತುಕೊಂಡು ಕಾರ್ಯಪ್ರವೃತ್ತರಾಗಬೇಕಿದೆ ಎಂದು ಹೆಸರು ಹೇಳಲು ಇಚ್ಛಿಸದ ಮಹಿಳೆ ಹೇಳಿದ್ದಾರೆ.

  • ವಾಕಿಂಗ್‍ಗೆ ತೆರಳಿದ್ದ ವ್ಯಕ್ತಿ ಪಾರ್ಕ್‍ನಲ್ಲಿ ಸಾವು

    ವಾಕಿಂಗ್‍ಗೆ ತೆರಳಿದ್ದ ವ್ಯಕ್ತಿ ಪಾರ್ಕ್‍ನಲ್ಲಿ ಸಾವು

    – ಬಿಬಿಎಂಪಿಗೆ ಸವಾಲಾದ ಸಾವಿನ ಪ್ರಕರಣ

    ಬೆಂಗಳೂರು: ನಗರದಲ್ಲಿ ಬೆಳ್ಳಂ ಬೆಳಗ್ಗೆ ವಾಕಿಂಗ್ ಬಂದಿದ್ದ ವ್ಯಕ್ತಿ, ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಆರ್.ಟಿ ನಗರದಲ್ಲಿ ನಡೆದಿದೆ.

    ದಿನದಿಂದ ದಿನಕ್ಕೆ ಕೊರೊನಾ ಸೋಂಕಿನ ಸಂಖ್ಯೆ ನಗರದಲ್ಲಿ ಹೆಚ್ಚಾಗುತ್ತಿರುವುದು ಬಿಬಿಎಂಪಿಗೆ ಬಹುದೊಡ್ಡ ಸವಾಲಾಗಿದೆ. ಇದರ ನಡುವೆ ಏಕಾಏಕಿ ವರದಿಯಾಗುತ್ತಿರುವ ಸಾವಿನ ಪ್ರಕರಣಗಳು ಆರೋಗ್ಯ ಇಲಾಖೆ ಸಿಬ್ಬಂದಿಗೆ ತಲೆನೋವಾಗಿ ಬದಲಾಗುತ್ತಿವೆ.

    ಸದ್ಯ ನಗರದ ಆರ್.ಟಿ ನಗರದ ಪಾರ್ಕಿನಲ್ಲಿ ವ್ಯಕ್ತಿ ಸಾವನ್ನಪ್ಪಿದ್ದು, ಮೃತ ವ್ಯಕ್ತಿ ಯಾರು ಎಂಬ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ. ಆದರೆ ಪಾರ್ಕಿನಲ್ಲಿ ವ್ಯಕ್ತಿ ಹೇಗೆ ಮೃತಪಟ್ಟಿದ್ದಾರೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಕೊರೊನಾ ಭಯದ ಕಾರಣ ಸಾರ್ವಜನಿಕರು ವ್ಯಕ್ತಿ ಕುಸಿದು ಬಿದ್ದರೂ ಯಾರು ವ್ಯಕ್ತಿಯ ಬಳಿ ತೆರಳಿ ಸಹಾಯ ಮಾಡಲು ಮುಂದಾಗಿಲ್ಲ ಎನ್ನಲಾಗಿದೆ. ಬಳಿಕ ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಮೃತದೇಹವನ್ನು ಕೊಂಡೊಯ್ದಿದ್ದಾರೆ. ಸದ್ಯ ಮೃತ ದೇಹದ ಕೊರೊನಾ ಪರೀಕ್ಷೆ ನಡೆದ ಬಳಿಕವಷ್ಟೇ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ.

    ನಗರದಲ್ಲಿ ಏಕಾಏಕಿ ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚಾತ್ತಿದ್ದು, ಹಲವು ಪ್ರಕರಣಗಳಲ್ಲಿ ಮೃತಪಟ್ಟ ಬಳಿಕ ಕೊರೊನಾ ಪಾಸಿಟಿವ್ ಇರುವುದು ದೃಢಪಡುತ್ತಿವೆ. ಅಲ್ಲದೇ ಮೃತರ ಮನೆಯವರಿಗೂ ಪಾಸಿಟಿವ್ ಪತ್ತೆ ಆಗುತ್ತಿದೆ. ಸದ್ಯ ಇಂತಹ ಸಾವಿನ ಪ್ರಕರಣಗಳು ಬಿಬಿಎಂಪಿ ಆರೋಗ್ಯ ಇಲಾಖೆಗೆ ಸವಾಲಾಗಿ ಪರಿಣಮಿಸುತ್ತಿದೆ.