Tag: Park

  • ಗಂಧದಗುಡಿ ಉದ್ಯಾನವನ್ನು ಲೋಕಾರ್ಪಣೆಗೊಳಿಸಿದ ಅಶ್ವಿನಿ ಪುನೀತ್ ರಾಜ್‌ಕುಮಾರ್

    ಗಂಧದಗುಡಿ ಉದ್ಯಾನವನ್ನು ಲೋಕಾರ್ಪಣೆಗೊಳಿಸಿದ ಅಶ್ವಿನಿ ಪುನೀತ್ ರಾಜ್‌ಕುಮಾರ್

    ಬೆಂಗಳೂರು: ಜಯನಗರ 4ನೇ ಬ್ಲಾಕ್‌ನಲ್ಲಿ ಗಂಧದಗುಡಿ ಹಬ್ಬದ (Gandhadagudi Festival) ಆಚರಣೆ ಪ್ರಯುಕ್ತ ಗಂಧದಗುಡಿ ಉದ್ಯಾನವನ್ನು (Gandhadagudi Park) ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ (Ashwini Puneeth Rajkumar) ಅವರು ಉದ್ಘಾಟನೆ ಮಾಡಿದರು.

    ಪಾರ್ಕ್‌ನಲ್ಲಿ 101 ಸಸಿ ನೆಡುವ ಕಾರ್ಯಕ್ರಮ, ಹಸಿ ಕಸದ ಗೊಬ್ಬರ ತಯಾರಿಕೆ ಕೇಂದ್ರ, ಕಟ್ಲರಿ ಬ್ಯಾಂಕ್ ಉದ್ಘಾಟನೆ ಮತ್ತು ಪರಿಸರ ಕುರಿತು ಪ್ರಬಂಧ ಮತ್ತು ಚಿತ್ರಕಲೆ ಸ್ಪರ್ಧೆ ಕಾರ್ಯಕ್ರಮವನ್ನು ಶಾಸಕಿ ಸೌಮ್ಯಾ ರೆಡ್ಡಿ, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮತ್ತು ಮಾಜಿ ಆಡಳಿತ ಪಕ್ಷದ ನಾಯಕ ಎನ್ ನಾಗರಾಜು ಲೋಕಾರ್ಪಣೆ ಮಾಡಿದರು.

    ಗಂಧದಗುಡಿ ಚಿತ್ರದ ನಿರ್ದೇಶಕ ಅಮೋಘವರ್ಷ ಹಾಗೂ ಗಂಧದಗುಡಿ ಚಲನಚಿತ್ರ ತಂಡದವರು ಸಹ ದೀಪ ಬೆಳಗಿಸಿ, ಗಂಧದಗುಡಿ ಹಬ್ಬಕ್ಕೆ ಚಾಲನೆ ನೀಡಿದರು.

    ಈ ವೇಳೆ ಸೌಮ್ಯಾ ರೆಡ್ಡಿ ಮಾತನಾಡಿ, ಪರಿಸರ ಉಳಿದರೆ ಮನುಷ್ಯ ಜೀವಿಸಲು ಸಾಧ್ಯ. ಅಭಿವೃದ್ಧಿ ಹೆಸರಿನಲ್ಲಿ ಗಿಡ, ಮರಗಳನ್ನು ಕಡಿದು ಕಾಂಕ್ರೀಟ್ ನಾಡುಗಳಾಗಿ ನಿರ್ಮಾಣ ಮಾಡಲಾಗುತ್ತಿದೆ. ಮುಂದಿನ ಜನಾಂಗ ಆಮ್ಲಜನಕ ಕೊರತೆಯಿಂದ ಉಸಿರಾಟದ ತೊಂದರೆ ಮತ್ತು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು. ಮನೆಯಿಂದಲೇ ಪರಿಸರ ಅಭಿಯಾನ ಆರಂಭವಾಗಬೇಕು. ಪ್ಲಾಸ್ಟಿಕ್ ಮುಕ್ತ, ಪರಿಸರಯುತ ವಾತಾವರಣ ನಿರ್ಮಿಸಲು ನಿತ್ಯ ಅಂದೋಲವಾಗಬೇಕು ಎಂದು ಹೇಳಿದರು. ಇದನ್ನೂ ಓದಿ: ಪೊಲೀಸ್‌ ಲಾಠಿ ಏಟಿನಿಂದ ತಪ್ಪಿಸಿಕೊಳ್ಳಲು ರ‍್ಯಾಪರ್‌ನನ್ನು ತಳ್ಳಿ ಬೀಳಿಸಿದ ಫ್ಯಾನ್‌

    ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮರ್ ಮಾತನಾಡಿ, ಕನ್ನಡಿಗರ ಮನಗೆದ್ದ ಮೇರುನಟ ಡಾ. ರಾಜ್‌ಕುಮಾರ್ ಅವರು ಮತ್ತು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಬಹುತೇಕ ಚಲನಚಿತ್ರಗಳಲ್ಲಿ ಪರಿಸರ ಕುರಿತು ಹೆಚ್ಚಿನ ವಿಷಯಗಳು ಇರುತ್ತಿತ್ತು. ನಮ್ಮ ಮನೆ, ನನ್ನ ಕುಟುಂಬ ಎಂಬ ಅಭಿಮಾನದಂತೆ ನಮ್ಮ ತಾಯಿ ನಾಡು, ನಮ್ಮ ಮರ, ಗಿಡ ಪರಿಸರ ಎಂಬ ಅಭಿಮಾನ ಬೆಳಸಿಕೊಳ್ಳಬೇಕು. ಪರಿಸರ ನಾಶವಾದರೆ ಹಣ ಕೊಟ್ಟರು ಬರುವುದಿಲ್ಲ. ಆದ್ದರಿಂದ ಎಲ್ಲರೂ ಸಸಿ ನೆಟ್ಟು ಪರಿಸರ ಉಳಿಸಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಅಮಿತ್ ಶಾ ಭೇಟಿ ಬಳಿಕ ಬೆಳಗಾವಿ ಬಿಜೆಪಿ ಪಾಳಯದಲ್ಲಿ ಒಗ್ಗಟ್ಟಿನ ಮಂತ್ರ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪಾರ್ಕ್‍ನಲ್ಲಿ ಕುಳಿತಿದ್ದಕ್ಕೆ ದಂಡ ವಸೂಲಿ ಪ್ರಕರಣ- ಹೋಂ ಗಾರ್ಡ್ ಬಂಧನ

    ಪಾರ್ಕ್‍ನಲ್ಲಿ ಕುಳಿತಿದ್ದಕ್ಕೆ ದಂಡ ವಸೂಲಿ ಪ್ರಕರಣ- ಹೋಂ ಗಾರ್ಡ್ ಬಂಧನ

    ಬೆಂಗಳೂರು: ಗೆಳೆಯನ ಜೊತೆ ಪಾರ್ಕ್ ನಲ್ಲಿ ಕುಳಿತಿದ್ದಕ್ಕೆ 1 ಸಾವಿರ ರೂ. ದಂಡ ವಸೂಲಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಹೋಂ ಗಾರ್ಡ್‍ನನ್ನು ಬಂಧಿಸಲಾಗಿದೆ.

    ಬಂಧತ ಹೋಂ ಗಾರ್ಡ್ ನನ್ನು ಮಂಜುನಾಥ್ ರೆಡ್ಡಿ ಎಂದು ಗುರುತಿಸಲಾಗಿದ್ದು, ಈತ ಬಿಬಿಎಂಪಿ ಕಡೆಯಿಂದ ಪಾರ್ಕ್ ಭದ್ರತೆಗೆ ನೇಮಕವಾಗಿದ್ದ. ಪಾರ್ಕ್ ನಲ್ಲಿ ಕುಳಿತಿದ್ದ ಯುವಕ- ಯುವತಿಯನ್ನು ಬೆದರಿಸಿದ ಹೊಮ್ ಗಾರ್ಡ್, ನಾನು ಪೊಲೀಸ್ ಅಂತಾ ಬೆದರಿಸಿ ಒಂದು ಸಾವಿರ ಲಂಚದ ಹಣ ಪೇಟಿಎಂ ಮಾಡಿಸಿಕೊಂಡಿದ್ದಾನೆ. ಇದೀಗ ಈತ ಪೊಲೀಸರ ಅತಿಥಿಯಾಗಿದ್ದಾನೆ. ಇದನ್ನೂ ಓದಿ: ಯುವಕನ ಜೊತೆಗೆ ಪಾರ್ಕ್‍ನಲ್ಲಿ ಕೂತಿದ್ದಕ್ಕೆ 1 ಸಾವಿರ ವಸೂಲಿ- ಪೇದೆ ವಿರುದ್ಧ ಯುವತಿ ದೂರು

    ಏನಿದು ಘಟನೆ..?: ಬೆಂಗಳೂರಿನ ಎಚ್ ಎಎಲ್ (HAL Police Station) ಪೊಲೀಸ್ ಠಾಣಾ ವ್ಯಾಪ್ತಿಯ ಕುಂದಲಹಳ್ಳಿ (Kundalahalli Park) ಕೆರೆಗೆ ವಾಯುವಿಹಾರಕ್ಕೆ ಯುವಕ- ಯುವತಿ ಕಳೆದ ಶನಿವಾರ ಮಧ್ಯಾಹ್ನದ ವೇಳೆ ಹೋಗಿದ್ರು. ಮಧ್ಯಾಹ್ನದ ವೇಳೆ ಆಗಿದ್ದರಿಂದ, ಮರದ ಕೆಳಗೆ ಕುಳಿತಿದ್ರು. ಈ ವೇಳೆ ಅಲ್ಲಿಗೆ ಬಂದ ಹೋಮ್ ಗಾರ್ಡ್ (Home Guard Arrest), ಏಕಾಏಕಿ ಯುವಕ- ಯುವತಿಯ ಫೋಟೋ ತೆಗೆಯೋಕೆ ಶುರುಮಾಡಿದ್ದಾನೆ.

    ಗಾಬರಿಗೊಂಡ ಯುವತಿ, ಯಾಕೆ ಫೋಟೋ ತೆಗೀತಿದ್ದೀರಿ. ನಾವು ಏನ್ ತಪ್ಪು ಮಾಡಿದೆವು ಅಂತಾ ಪ್ರಶ್ನೆ ಮಾಡಿದ್ರು. ಈ ವೇಳೆ ಮಾತಿಗಿಳಿದ ಹೋಮ್ ಗಾರ್ಡ್, ನಾನು ಪೊಲೀಸ್, ಪಾರ್ಕ್ ಒಳಗೆ ಒಟ್ಟಿಗೆ ಕುಳಿತುಕೊಂಡು ಏನ್ ಮಾಡ್ತಾ ಇದ್ದೀರಾ..? ಯಾರು ಒಳಗೆ ಬರೋಕೆ ಅನುಮತಿ ಕೊಟ್ಟಿದ್ದು ಅಂತಾ ಬೆದರಿಸಿದ್ರು. ನಿಮ್ ಮೇಲೆ ಕೇಸ್ ಹಾಕ್ತಿವಿ ನಡೀರಿ ಅಂತಾ ಬೆದರಿಸಿ, ಒಂದು ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದ ಹೋಮ್ ಗಾರ್ಡ್. ಮಾಡದ ತಪ್ಪಿಗೆ ಯುವತಿ ಅನಿವಾರ್ಯವಾಗಿ ಒಂದು ಸಾವಿರ ಕೊಟ್ಟು, ಅಲ್ಲಿಂದ ಹೊರ ಬಂದಿದ್ದರು. ಈ ಘಟನೆ ಬಗ್ಗೆ ಯುವತಿ ಬೈಕ್ ನಲ್ಲಿ ಬಂದಿದ್ದ ಹೊಮ್ ಗಾರ್ಡ್ ನ ಫೋಟೋ ಸಮೇತ ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ ಕ್ರಮಕ್ಕೆ ಒತ್ತಾಯಿಸಿದ್ದರು.

    ಈ ಸಂಬಂಧ ಎಚ್ ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಐತಿಹಾಸಿಕ ಸಿಂಗಾಪುರ ಕೆರೆ ಮರುನಾಮಕರಣಕ್ಕೆ ಭಾರೀ ವಿರೋಧ

    ಐತಿಹಾಸಿಕ ಸಿಂಗಾಪುರ ಕೆರೆ ಮರುನಾಮಕರಣಕ್ಕೆ ಭಾರೀ ವಿರೋಧ

    ಬೆಂಗಳೂರು: ಅದು ನೂರಾರು ವರ್ಷಗಳ ಸುದೀರ್ಘ ಅಸ್ತಿತ್ವ ಹೊಂದಿರುವ ಐತಿಹಾಸಿಕ ಪ್ರದೇಶ. ದಶಕಗಳ ಹಿಂದೆಯೇ ಇತಿಹಾಸಕಾರರು ಇದನ್ನು ಕೋಟೆಯ ಪಟ್ಟಣ ಎಂದು ಕರೆದಿದ್ದರು. ಇದೀಗ ಕೆರೆಗೆ ಇದ್ದ ಊರಿನ ಹೆಸರಿನ ಬದಲಾವಣೆ ಮಾಡಿದ್ದು ಜನಾಕ್ರೋಶಕ್ಕೆ ಕಾರಣವಾಗಿದ್ದು, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (BBMP) ವಿರುದ್ಧ ಜನ ತಿರುಗಿ ಬಿದ್ದಿದ್ದಾರೆ.

    16 ನೇ ಶತಮಾನದ ಆರಂಭದಿಂದಲೂ ಜನವಸತಿ ಪ್ರದೇಶವಾಗಿದೆ. ಈಗ ವಿಚಾರ ಏನಂದ್ರೆ, ಐತಿಹಾಸಿಕ ಸಿಂಗಾಪುರ ಕೆರೆ (Singapura Lake) ಯ ಹೆಸರನ್ನ ಬದಲಾವಣೆ ಮಾಡಿದ್ದರ ವಿರುದ್ಧ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಾವರ್ಕರ್ ವಿರುದ್ಧ ಹೇಳಿಕೆ – ರಾಹುಲ್ ಗಾಂಧಿ ವಿರುದ್ಧ ಪೊಲೀಸರಿಗೆ ದೂರು

    ಸಿಂಗಾಪುರ ಕೆರೆಗೆ ಭಗವಾನ್ ಬುದ್ದ, ಅಂಬೇಡ್ಕರ್ ಕೆರೆ ಎಂದು ಮರುನಾಮಕರಣ ಮಾಡಿರೋದು ಈಗ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಇದೇ ನವೆಂಬರ್ 6ರಂದು ಸಿಎಂ ಬೊಮ್ಮಾಯಿ (Basavaraj Bommai) ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ್ದಾರೆ. ಸಾರ್ವಜನಿಕರು ಇದರ ವಿರುದ್ಧ ತಿರುಗಿ ಬಿದ್ದಿದ್ದು, ಯಾವುದೇ ಕೆರೆಯನ್ನ ಬದಲಿಸುವ ಅಧಿಕಾರ ಬಿಬಿಎಂಪಿಗೆ ಇಲ್ಲ. ನಗರದ ಇತರೆ ಕೆರೆಗಳಿಗೆ ಊರಿನ ಹೆಸರನ್ನೇ ಇಡಲಾಗಿದೆ. ಸಿಂಗಾಪುರಕ್ಕೆ ಇರುವ ಐತಿಹಾಸಿಕ ಕೆರೆಯ ಪ್ರತಿಮೆಯನ್ನ ಹಾಳು ಮಾಡುವ ಕೆಲಸ ಆಗ್ತಿದೆ. ಕೂಡಲೇ ಇದನ್ನ ಹಿಂಪಡೆದು ಐತಿಹಾಸಿಕವಾಗಿದ್ದ ಸಿಂಗಾಪುರ ಕೆರೆ ಅಂತಲೇ ಮುಂದುವರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

    ಎಲ್ಲಿಯೂ ಸಹ ಜೀವಂತ ಕೆರೆಗೆ ‘ಪಾರ್ಕ್’ (Park) ಅಂತ ಯಾರೂ ಕರೆದಿರಲಿಲ್ಲ. ಆದರೆ ಈಗ ನೂರಾರು ವರ್ಷಗಳ ಇತಿಹಾಸವಿರುವ ಕೆರೆಗೆ ಈ ರೀತಿ ಪಾರ್ಕ್ ಅಂತ ಹೆಸರು ಬದಲಿಸಿದ್ದಾರೆ. ರಾಜಕೀಯ ದುರುದ್ದೇಶಕ್ಕೆ ಹೀಗೆ ಮಾಡಲಾಗ್ತಿದೆ. ನಾವು ಅಂಬೇಡ್ಕರ್ ಹೆಸರಿಗೆ ವಿರೋಧ ಮಾಡ್ತಿಲ್ಲ, ಊರಿಗೆ ಹಿರಿಮೆಗಾಗಿ ಸಿಂಗಾಪುರ ಹೆಸರನ್ನೇ ಕೆರೆಗೆ ಮುಂದುವರಿಸಬೇಕು. ಇಲ್ಲವಾದರೆ ಕಾನೂನಾತ್ಮಕವಾಗಿ ಹೋರಾಟ ನಡೆಸುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.

    ಒಟ್ಟಾರೆ, 16ನೇ ಶತಮಾನದಿಂದಲೂ ಜನವಸತಿ ಪ್ರದೇಶವಾಗಿರುವ ಸಿಂಗಾಪುರ ಗ್ರಾಮದ ಇತಿಹಾಸ ಮರೆಮಾಚಲು ರಾಜಕೀಯ ಬಳಸಲಾಗ್ತಿದೆ. ಕೆರೆಯ ಹೆಸರನ್ನ ಬದಲಿಸಿದ್ದರ ವಿರುದ್ಧ ಕಾನೂನು ಹೋರಾಟದ ಎಚ್ಚರಿಕೆಯನ್ನ ಸಿಂಗಾಪುರ ಗ್ರಾಮಸ್ಥರು ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪಾರ್ಕ್‍ನಲ್ಲಿ ಗುಂಡಿನ ದಾಳಿ- ಇಬ್ಬರು ಬಲಿ, ಐವರಿಗೆ ಗಂಭೀರ ಗಾಯ

    ಪಾರ್ಕ್‍ನಲ್ಲಿ ಗುಂಡಿನ ದಾಳಿ- ಇಬ್ಬರು ಬಲಿ, ಐವರಿಗೆ ಗಂಭೀರ ಗಾಯ

    ವಾಷಿಂಗ್ಟನ್: ಲಾಸ್ ಎಂಜಲೀಸ್‍ನ ಉದ್ಯಾನವನದಲ್ಲಿ 2 ಗುಂಪುಗಳ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ.

    ಕಾರ್ ಶೊನಲ್ಲಿ ಸ್ಯಾನ್ ಪೆಡ್ರೊದ ಪೆಕ್ ಪಾರ್ಕ್‍ನಲ್ಲಿ ಈ ಗುಂಡಿನ ದಾಳಿ ನಡೆದಿದೆ. ಪೆಕ್ ಪಾರ್ಕ್‍ನಲ್ಲಿ 2 ಗುಂಪುಗಳ ನಡುವೆ ನಡೆದ ವಾಗ್ವಾದ ಮಿತಿ ಮೀರಿದ್ದು, ಇದರಿಂದಾಗಿ ಗುಂಡಿನ ದಾಳಿ ನಡೆದಿದೆ.

    crime

    ಘಟನೆ ಸಂಬಂಧಿಸಿ ಅಲ್ಲಿನ ಸ್ಥಳೀಯ ಪೊಲೀಸರು ತನಿಖೆ ಕೈಗೊಂಡಿದ್ದು, ಒಂದಕ್ಕಿಂತ ಹೆಚ್ಚು ಜನರು ಈ ಘಟನೆಯಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಈ ಸಂಬಂಧ ಸದ್ಯದಲ್ಲೇ ಆರೋಪಿಗಳನ್ನು ಬಂಧಿಸುವುದಾಗಿ ತಿಳಿಸಿದರು. ಇದನ್ನೂ ಓದಿ: ಗಾಂಜಾ ಗ್ಯಾಂಗ್ ಹಿಡಿಯಲು ಹೋಗಿ ಭೀಕರ ಅಪಘಾತ: ಸ್ವಗ್ರಾಮಕ್ಕೆ ಆಗಮಿಸಿದ ಪಿಎಸ್‍ಐ ಮೃತದೇಹ

    crime

    ಘಟನೆಯಲ್ಲಿ ಗಾಯಗೊಂಡಿದ್ದ ನಾಲ್ವರು ಪುರುಷರು ಹಾಗೂ ಮೂವರು ಮಹಿಳೆಯರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಗಾಯಗೊಂಡ 7 ಜನರಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಬಸ್‍ಗಳ ನಡುವೆ ಭೀಕರ ಅಪಘಾತ – 8 ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

    Live Tv
    [brid partner=56869869 player=32851 video=960834 autoplay=true]

  • ಉದ್ಯಾನವನದಲ್ಲಿ ಕಾಡಾನೆ ಪ್ರತ್ಯಕ್ಷ – ದಿಕ್ಕಾಪಾಲಾದ ಪ್ರವಾಸಿಗರು

    ಉದ್ಯಾನವನದಲ್ಲಿ ಕಾಡಾನೆ ಪ್ರತ್ಯಕ್ಷ – ದಿಕ್ಕಾಪಾಲಾದ ಪ್ರವಾಸಿಗರು

    ಮಡಿಕೇರಿ: ಮೃಗಾಲಯದಿಂದ ಸಾಕು ಪ್ರಾಣಿಗಳು ತಪ್ಪಿಸಿಕೊಂಡು ನಗರದಲ್ಲಿ ಓಡಾಟ ಮಾಡಿರುವುದನ್ನು ನೀವೇಲ್ಲ ರೆಬೆಲ್ ಸ್ಟಾರ್ ಅಂಬರೀಶ್ ಅಭಿನಯದ ಮೃಗಾಲಯ ಚಿತ್ರದಲ್ಲಿ ನೋಡಿರುತ್ತಿರಿ. ಆದರೆ ಕಾಡಾನೆಯೊಂದು ಉದ್ಯಾನವನಕ್ಕೆ ಬಂದ ಹಿನ್ನೆಲೆಯಲ್ಲಿ ನೂರಾರು ಜನರು ಪ್ರಾಣ ಉಳಿಸಿಕೊಳ್ಳಲು ಓಡಾಟ ನಡೆಸಿರೋದು ನೋಡಿದ್ದೀರ? ಅಂಥಹದ್ದೊಂದು ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಹಾರಂಗಿ ಉದ್ಯಾನವನದಲ್ಲಿ ಇಂದು ಸಂಜೆ 7 ಗಂಟೆ ಸುಮಾರಿಗೆ ನಡೆದಿದೆ.

    ಇಂದು ಶಾನಿವಾರ ಆಗಿದ್ದರಿಂದ ನೂರಾರು ಪ್ರವಾಸಿಗರು ಹಾರಂಗಿ ಉದ್ಯಾನವನದಲ್ಲಿ ಇರುವ(ನೀರಿನ ಕಾರಂಜಿ) ನೋಡಲು ಆಗಮಿಸಿದ್ದಾರೆ. ಇದೇ ಹಾರಂಗಿ ಜಲಾಶಯದ ಉದ್ಯಾನವನಕ್ಕೆ ಕಾಡಾನೆಯೊಂದು ಲಗ್ಗೆಯಿಟ್ಟು ಜಲಾಶಯದ ಸುತ್ತಮುತ್ತ ಓಡಾಟ ನಡೆಸಿದೆ. ಅಷ್ಟೇ ಅಲ್ಲದೇ ಹಾರಂಗಿ ಅಣೆಕಟ್ಟು ಆವರಣದಲ್ಲಿರುವ ಗೇಟ್ ಒಂದನ್ನು ಒದ್ದು ಹೊರಕ್ಕೆ ಬಂದಿದೆ. ಇದನ್ನು ಕಂಡ ನೂರಾರು ಪ್ರವಾಸಿಗರು ಓಡಿ ಹೋಗಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿಗಳ ತೊಡೆಯಲ್ಲಿ ಕುಳಿತ ವಿದ್ಯಾರ್ಥಿನಿಯರು- ಒಟ್ಟಿಗೆ ಕೂರಬಾರದು ಎಂದಿದ್ದಕ್ಕೆ ವಿಭಿನ್ನ ಪ್ರತಿಭಟನೆ

    ಕಾಡಾನೆ ಉದ್ಯಾನವನದ ಒಳಗೆ ಬಂದ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸರು ಕಾಡಾನೆಯನ್ನು ದೊಡ್ಡತ್ತೂರು ಅರಣ್ಯ ಪ್ರದೇಶದತ್ತ ಓಡಿಸಿದ್ದಾರೆ. ಹಾರಂಗಿ ಅಣೆಕಟ್ಟಿಗೆ ಹೊಂದಿಕೊಂಡಂತೆ ಇರುವ ಅತ್ತೂರು ಮೀಸಲು ಅರಣ್ಯ ಪ್ರದೇಶದಿಂದ ಆಗಮಿಸಿದ ಕಾಡಾನೆ ಎನ್ನಲಾಗಿದೆ. ಇದನ್ನೂ ಓದಿ: ನಮ್ಮದು ಕಾಂಗ್ರೆಸ್ ಪಾರ್ಟಿ ಅಲ್ಲ, ಬೇಲ್‍ನಲ್ಲಿರುವ ಪಕ್ಷವಲ್ಲ: ಆರ್. ಅಶೋಕ್

    ಈ ಕಾಡಾನೆ ಸಕಲೇಶಪುರ ವ್ಯಾಪ್ತಿಯಲ್ಲಿ ದಾಂಧಲೆ ನಡೆಸುತ್ತಿದ್ದ ಕಾರಣ ಕಳೆದ 1 ವರ್ಷದ ಹಿಂದೆ ಹಿಡಿದು ರೇಡಿಯೋ ಕಾಲರ್ ಅಳವಡಿಸಿ ಬಂಡೀಪುರ ಅರಣ್ಯಕ್ಕೆ ಬಿಡಲಾಗಿತ್ತು ಎಂದು ತಿಳಿದುಬಂದಿದೆ. ಕಳೆದ 2 ದಿನಗಳ ಹಿಂದೆ ಈ ಪ್ರದೇಶಕ್ಕೆ ಆನೆ ಆಗಮಿಸಿರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ಲಭಿಸಿತ್ತು. ಇದೀಗ ಕಾಡಾನೆ ಕೂಡಿಗೆ ಸಮೀಪದ ಬೆಂಡೆಬೆಟ್ಟ ಅರಣ್ಯದಲ್ಲಿರುವ ಬಗ್ಗೆ ಮಾಹಿತಿ ಲಭಿಸಿದ್ದು ಈ ನಿಟ್ಟಿನಲ್ಲಿ ಕುಶಾಲನಗರ ಅರಣ್ಯ ಇಲಾಖೆ ಅಧಿಕಾರಿ ಶಿವರಾಮ್ ತಂಡ ಕಾಡಾನೆ ಪತ್ತೆಗೆ ಕ್ರಮ ಕೈಗೊಂಡಿದೆ.

    Live Tv
    [brid partner=56869869 player=32851 video=960834 autoplay=true]

  • ಕೆನಡಾ ಬಳಿಕ ಪಂಜಾಬ್‍ನಲ್ಲಿ ಗಾಂಧಿ ಪ್ರತಿಮೆ ಧ್ವಂಸ

    ಕೆನಡಾ ಬಳಿಕ ಪಂಜಾಬ್‍ನಲ್ಲಿ ಗಾಂಧಿ ಪ್ರತಿಮೆ ಧ್ವಂಸ

    ಚಂಡೀಗಢ: ಸಾರ್ವಜನಿಕ ಉದ್ಯಾನವನದಲ್ಲಿ ದುಷ್ಕರ್ಮಿಗಳು ಮಹಾತ್ಮ ಗಾಂಧಿ ಅವರ ಪ್ರತಿಮೆಯನ್ನು ಧ್ವಂಸಗೊಳಿಸಿದ ಘಟನೆ ಪಂಜಾಬ್‍ನ ರಮ್ಮನ್ ಮಂಡಿಯಲ್ಲಿ ನಡೆದಿದೆ.

    ಗಾಂಧೀಜಿ ಪ್ರತಿಮೆಯನ್ನು ರಾಮನ್ ಮಂಡಿಯ ಸಾರ್ವಜನಿಕ ಉದ್ಯಾನವನದಲ್ಲಿ ಸ್ಥಾಪಿಸಲಾಗಿತ್ತು. ಅದನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ಇದಾದ ಬಳಿಕ ಪ್ರತಿಮೆಯ ಮುಖವನ್ನು ತೆಗೆದುಕೊಂಡು ಹೋಗಿದ್ದಾರೆ.

    ಸ್ಟೇಷನ್ ಹೌಸ್ ಆಫೀಸರ್ ಹರ್ಜೋತ್ ಸಿಂಗ್ ಮಾನ್ ಮಾತನಾಡಿ, ಘಟನೆ ಸಂಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಘಟನೆ ಸಂಬಂಧಿಸಿ ರಮ್ಮನ್ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ. ಅಪರಾಧಿಗಳನ್ನು ಪತ್ತೆಹಚ್ಚಲು ಘಟನೆ ನಡೆದ ಸ್ಥಳದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದರು.

    ಜಿಲ್ಲಾ ನಗರ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಸಿಂಗ್ಲಾ ಮಾತನಾಡಿ, ಘಟನೆಯ ಹಿಂದಿರುವವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: 50ರಲ್ಲಿ ಒಬ್ಬ ಶಾಸಕ ಸೋತರೂ ಶಾಶ್ವತವಾಗಿ ರಾಜಕೀಯ ತೊರೆಯುವೆ: ಏಕನಾಥ್ ಶಿಂಧೆ

    ಇತ್ತೀಚೆಗಷ್ಟೇ ಕೆನಡಾದ ಒಂಟಾರಿಯೊದ ರಿಚ್ಮಂಡ್ ಹಿಲ್ ನಗರದಲ್ಲಿ ಮಹಾತ್ಮ ಗಾಂಧಿ ಪ್ರತಿಮೆಯ ಮೇಲೆ ದುಷ್ಕರ್ಮಿಗಳು ಕೆಟ್ಟದಾಗಿ ಬರೆದು, ವಿಷ್ಣು ದೇವಾಲಯದ ಕೆಲವು ಪ್ರತಿಮೆಗಳನ್ನು ವಿರೂಪಗೊಳಿಸಿದ್ದರು. ಇದನ್ನೂ ಓದಿ: ಕೆನಡಾದಲ್ಲಿ ಮಹಾತ್ಮ ಗಾಂಧಿ ಪ್ರತಿಮೆಯನ್ನು ಹಾನಿಗೊಳಿಸಿದ ದುಷ್ಕರ್ಮಿಗಳು

    Live Tv
    [brid partner=56869869 player=32851 video=960834 autoplay=true]

  • ಬೆಂಗಳೂರು ಜನರಿಗೆ ಗುಡ್‌ ನ್ಯೂಸ್‌ – ಇನ್ಮುಂದೆ ಉದ್ಯಾನಗಳು ರಾತ್ರಿ 8ರ ವರೆಗೂ ಓಪನ್

    ಬೆಂಗಳೂರು ಜನರಿಗೆ ಗುಡ್‌ ನ್ಯೂಸ್‌ – ಇನ್ಮುಂದೆ ಉದ್ಯಾನಗಳು ರಾತ್ರಿ 8ರ ವರೆಗೂ ಓಪನ್

    ಬೆಂಗಳೂರು: ನಗರದ ಜನತೆಗೆ ಬಿಬಿಎಂಪಿ ಗುಡ್‌ ನ್ಯೂಸ್‌ ನೀಡಿದೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಉದ್ಯಾನಗಳು ರಾತ್ರಿ 8 ಗಂಟೆ ವರೆಗೂ ಓಪನ್‌ ಇರಲಿವೆ.

    ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಉದ್ಯಾನಗಳನ್ನು ಬೆಳಗ್ಗೆ 5 ರಿಂದ ರಾತ್ರಿ 8ರ ವರೆಗೆ ಸಾರ್ವಜನಿಕರ ಉಪಯೋಗಕ್ಕೆ ಅವಕಾಶ ಮಾಡಿಕೊಡುವ ಸಂಬಂಧ ಮುಖ್ಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಇದನ್ನೂ ಓದಿ: ಮೂರು ತಿಂಗಳ ಮೊದಲೇ KRS ಡ್ಯಾಂ ಸಂಪೂರ್ಣ ಭರ್ತಿ

    ಬಿಬಿಎಂಪಿ ವ್ಯಾಪ್ತಿಯ ಉದ್ಯಾನಗಳನ್ನು ವಾಯು ವಿಹಾರಕ್ಕೆಂದು ಪ್ರತಿದಿನ ಬೆಳಗ್ಗೆ 5 ರಿಂದ 10ರ ವರೆಗೆ ಹಾಗೂ ಸಂಜೆ 4ರಿಂದ ರಾತ್ರಿ 8ರ ವರೆಗೆ ಸಾರ್ವಜನಿಕರ ಉಪಯೋಗಕ್ಕಾಗಿ ಅವಕಾಶ ಕಲ್ಪಿಸಲಾಗಿತ್ತು. ಇನ್ಮುಂದೆ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲೆಂದು ಸಮಯವನ್ನು ಮಾರ್ಪಡಿಸಿ ಬೆಳಗ್ಗೆ 5 ರಿಂದ ರಾತ್ರಿ 8ರ ವರೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ.

    ಉದ್ಯಾನಗಳ ನಿರ್ವಹಣೆಗಾಗಿ ಬೆಳಗ್ಗೆ 10 ರಿಂದ ಮದ್ಯಾಹ್ನ 1.30ರ ವರೆಗೆ ಸಮಯವನ್ನು ನಿಗದಿಪಡಿಸಿ ಬಿಬಿಎಂಪಿ ಆದೇಶಿಸಿದೆ. ಉದ್ಯಾನಗಳ ನಿರ್ವಹಣೆಯ ಸಮಯದಲ್ಲಿ ಸಾರ್ವಜನಿಕರಿಗೆ ಅವಕಾಶ ಇರುವುದಿಲ್ಲ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್‌ ಅವರು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ನನ್ನ ಹುಟ್ಟುಹಬ್ಬವನ್ನು ಸ್ನೇಹಿತರು ಆಚರಿಸಿದರೆ ಬಿಜೆಪಿಗೆ ಯಾಕೆ ಭಯ?: ಸಿದ್ದರಾಮಯ್ಯ

    Live Tv
    [brid partner=56869869 player=32851 video=960834 autoplay=true]

  • ಬೆಂಗಳೂರಿನಲ್ಲಿ ಕಬ್ಬನ್ ಪಾರ್ಕ್, ಲಾಲ್‍ಬಾಗ್‍ಗಳಿಗಿಂತ ದೊಡ್ಡ ಪಾರ್ಕ್ ನಿರ್ಮಾಣ: ಮುನಿರತ್ನ

    ಬೆಂಗಳೂರಿನಲ್ಲಿ ಕಬ್ಬನ್ ಪಾರ್ಕ್, ಲಾಲ್‍ಬಾಗ್‍ಗಳಿಗಿಂತ ದೊಡ್ಡ ಪಾರ್ಕ್ ನಿರ್ಮಾಣ: ಮುನಿರತ್ನ

    ಬೆಂಗಳೂರು: ಲಾಲ್‍ಬಾಗ್ ಮತ್ತು ಕಬ್ಬನ್ ಪಾರ್ಕ್‍ಗಳು ವಿಶ್ವದಲ್ಲೇ ಖ್ಯಾತಿ ಪಡೆದಿವೆ. ಈಗ ಇವೆರಡು ಪಾರ್ಕ್‍ಗಳಿಗಿಂತಲೂ ದೊಡ್ಡದಾದ ಪಾರ್ಕ್ ನಿರ್ಮಾಣಕ್ಕೆ ತೋಟಗಾರಿಕೆ ಇಲಾಖೆ ಮುಂದಾಗಿದೆ. ಈ ಸಂಬಂಧ ಈಗಾಗಲೇ ಬಜೆಟ್‍ನಲ್ಲೂ ಘೋಷಣೆ ಮಾಡಲಾಗಿದೆ. ಈಗ ಈ ಬೃಹತ್ ಪಾರ್ಕ್‍ನ ನಿರ್ಮಾಣದ ಕಾರ್ಯಕ್ಕೆ ಪ್ರಕ್ರಿಯೆಗಳು ವೇಗ ಪಡೆದುಕೊಂಡಿವೆ ಎಂದು ಸಚಿವ ಮುನಿರತ್ನ ತಿಳಿಸಿದರು.

    ವಿಕಾಸಸೌಧದಲ್ಲಿ ಅತಿ ದೊಡ್ಡ ಪಾರ್ಕ್ ನಿರ್ಮಾಣ ಸಂಬಂಧ ತೋಟಗಾರಿಕೆ ಸಚಿವ ಮುನಿರತ್ನ ಅವರು ಇಲಾಖೆ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದರು. ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ದೊಡ್ಡ ಪಾರ್ಕ್ ನಿರ್ಮಾಣಕ್ಕೆ ಸ್ಥಳ ಗುರುತಿಸುವಿಕೆ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆ ನಡೆಯಿತು. ಈ ದೊಡ್ಡ ಪಾರ್ಕ್ ನಿರ್ಮಾಣಕ್ಕೆ 400 ಎಕರೆ ಜಮೀನಿನ ಅಗತ್ಯ ಇದೆ ಎಂದರು.

    ಬನ್ನೇರುಘಟ್ಟ ಬಳಿ ಹಾಗೂ ದೊಡ್ಡಬಳ್ಳಾಪುರ ರಸ್ತೆಯಲ್ಲಿ ಸ್ಥಳ ಗುರುತಿಸಲಾಗಿದೆ. ಇದು ಅರಣ್ಯ ಇಲಾಖೆಯ ಜಾಗ. ಆಗಸ್ಟ್ 15ರೊಳಗೆ ಈ ಪಾರ್ಕ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ನನ್ನ ವಿಷಯಕ್ಕೆ ಬಂದು ಡಿಕೆಶಿ ಶೇಪ್ ಔಟ್ ಮಾಡಿಕೊಂಡಿದ್ದಾರೆ: ಅಶ್ವಥ್ ನಾರಾಯಣ

    ಬೆಂಗಳೂರಿಗೆ ಶುದ್ಧ ಗಾಳಿಯ ಅಗತ್ಯವಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾರ್ಕ್ ನಿರ್ಮಾಣ ಗುರಿಯಿದೆ. ಆ ಪಾರ್ಕ್ ಹೆಸರು ಅಟಲ್ ಬಿಹಾರಿ ವಾಜಪೇಯಿ ಉದ್ಯಾನವನ ಎಂದು ಹೆಸರಿಡಲು ನಿರ್ಧಾರ ಮಾಡಲಾಗಿದೆ. ಮುಂದಿನ ಶುಕ್ರವಾರ ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ನಕ್ಷೆ ತಯಾರಿಸಿ ತರ್ತಾರೆ ಎಂದು ಹೇಳಿದರು.

    ಜಾಗ ನಮ್ಮ ವಶಕ್ಕೆ ಬಂದ ನಂತರ ವೆಚ್ಚದ ಅಂದಾಜು ಗೊತ್ತಾಗುತ್ತದೆ. 350 ಎಕರೆಯಲ್ಲಿ ಪಾರ್ಕ್ ನಿರ್ಮಾಣ ಉದ್ದೇಶ ಇದೆ. ಪಾರ್ಕಿನ ಪ್ರಾಥಮಿಕ ವೆಚ್ಚಗಳಿಗೆ ಹತ್ತು ಕೋಟಿ ರೂ ಮೀಸಲಿಡಲಾಗಿದೆ. ಡಿಪಿಆರ್ ನಂತರ ವೆಚ್ಚದ ನಿರ್ಧಾರ ಆಗುತ್ತದೆ. ಈ ಪಾರ್ಕ್ ನಿರ್ಮಾಣಕ್ಕೆ ಅನುದಾನದ ಕೊರತೆ ಆಗಲ್ಲ ಎಂದರು.

    ಕಬ್ಬನ್ ಪಾರ್ಕ್, ಲಾಲ್‍ಬಾಗ್‍ಗಿಂತ ದೊಡ್ಡ ಪಾರ್ಕ್ ನಿರ್ಮಾಣ ನಮ್ಮ ಕನಸು, ಗುರಿ. ಈ ಪಾರ್ಕ್ ದೊಡ್ಡ ಲ್ಯಾಂಡ್‍ಮಾರ್ಕ್ ಆಗುತ್ತದೆ. ನಮ್ಮ ಇಲಾಖೆಯಿಂದ ಬೆಂಗಳೂರಿನಲ್ಲಿ ಒಂದು ಹೆಜ್ಜೆ ಗುರುತು ಬಿಡುತ್ತೇವೆ ಎಂದು ತಮ್ಮ ಇಲಾಖೆಯ ಮಹತ್ವದ ಉದ್ದೇಶದ ಬಗ್ಗೆ ಮಾಹಿತಿ ನೀಡಿದರು. ಇದನ್ನೂ ಓದಿ: ರಮ್ಯಾಗೆ ಕೋಪ ಇದ್ರೆ ಬೈಯಲಿ ಆದ್ರೆ ಟ್ವೀಟ್‍ನಲ್ಲಿ ಬೇಡ: ನಲಪಾಡ್

  • ತಾಲಿಬಾನ್ ಹೊಸ ಕಾನೂನು – ಪುರುಷರೊಂದಿಗೆ ಮಹಿಳೆಯರು ಪಾರ್ಕ್‌ಗೆ ಹೋಗುವಂತಿಲ್ಲ

    ತಾಲಿಬಾನ್ ಹೊಸ ಕಾನೂನು – ಪುರುಷರೊಂದಿಗೆ ಮಹಿಳೆಯರು ಪಾರ್ಕ್‌ಗೆ ಹೋಗುವಂತಿಲ್ಲ

    ಕಾಬೂಲ್: ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡು ಇಲ್ಲಿಗೆ 9 ತಿಂಗಳುಗಳೇ ಕಳೆದಿವೆ. ತಾಲಿಬಾನ್ ಆಡಳಿತ ಪ್ರಾರಂಭವಾದಾಗಿನಿಂದ ಒಂದೆಡೆ ಜನರು ಹಸಿವಿನಿಂದ ಒದ್ದಾಡುವಂತಾಗಿದ್ದರೆ, ಮತ್ತೊಂದೆಡೆ ತಾಲಿಬಾನ್ ಆದೇಶಗಳಿಂದಾಗಿ ಅಲ್ಲಿನ ಮಹಿಳೆಯರ ಜೀವನ ಕಷ್ಟಕರವಾಗುತ್ತಲೇ ಇದೆ.

    ಇದೀಗ ತಾಲಿಬಾನ್‌ನ ಹೊಸ ಆದೇಶ ಕಾಬೂಲ್‌ನಲ್ಲಿ ಮಹಿಳೆಯರು ಪುರುಷರೊಂದಿಗೆ ಪಾರ್ಕ್ ತೆರಳಲು ನಿಷೇಧಿಸಿದೆ. ಇದರ ಪ್ರಕಾರ ಮಹಿಳೆಯರು ಪುರಷರೊಂದಿಗೆ ಒಂದೇ ದಿನ ಪಾರ್ಕ್ ತೆರಳಲು ಸಾಧ್ಯವಾಗುವುದಿಲ್ಲ. ಇದನ್ನೂ ಓದಿ: ಯುಗಾದಿ ವೇಳೆ ಹಲಾಲ್ ಮಾಂಸ ಬಹಿಷ್ಕರಿಸಿ – ಹಿಂದೂ ಜನಜಾಗೃತಿ ಸಮಿತಿ ಕರೆ

    ತಾಲಿಬಾನ್ ಕಾಬೂಲ್‌ನಲ್ಲಿ ಮಹಿಳೆಯರಿಗೆ ವಾರದಲ್ಲಿ 3 ದಿನಗಳ ಕಾಲ ಪಾರ್ಕ್ ಪ್ರವೇಶಿಸಲು ಅವಕಾಶ ನೀಡಿದೆ. ಭಾನುವಾರ, ಸೋಮವಾರ ಹಾಗೂ ಮಂಗಳವಾರ ಮಹಿಳೆಯರಿಗೆ ಪಾರ್ಕ್‌ಗಳಲ್ಲಿ ಪ್ರವೇಶ ನೀಡಿದರೆ ವಾರದ ಉಳಿದ ದಿನಗಳು ಕೇವಲ ಪುರುಷರು ಪ್ರವೇಶಿಸಬಹುದು.

    ಒಂದು ವೇಳೆ ಮಹಿಳೆಯರು ಪುರುಷರಿಗೆ ನಿಗದಿ ಪಡಿಸಿರುವ ದಿನಗಳಲ್ಲಿ ಪಾರ್ಕ್ ಪ್ರವೇಶಿಸಿದ್ದಲ್ಲಿ ಅವರಿಗೆ ಕಠಿಣ ಕ್ರಮವನ್ನು ವಿಧಿಸಲಾಗುವುದು ಎಂದು ತಾಲಿಬಾನ್ ಸಂಸ್ಕೃತಿ ಸಚಿವಾಲಯ ಎಚ್ಚರಿಸಿದೆ. ಜೊತೆಗೆ ಮಹಿಳೆಯರು ಪಾರ್ಕ್ ಪ್ರವೇಶಿಸುವಾಗ ಕಡ್ಡಾಯವಾಗಿ ಹಿಜಬ್ ಧರಿಸಬೇಕು ಎಂದು ಆದೇಶಿಸಿದೆ. ಇದನ್ನೂ ಓದಿ: ಕಂಬಕ್ಕೆ ಸ್ಪೈಸ್‌ಜೆಟ್ ವಿಮಾನ ಡಿಕ್ಕಿ – ತಪ್ಪಿದ ಅನಾಹುತ

    ವಿಮಾನಗಳಲ್ಲಿ ಮಹಿಳೆಯರು ಮಾತ್ರವೇ ಪ್ರಯಾಣಿಸುವುದನ್ನು ನಿಷೇಧಿಸಿದೆ. ಮಹಿಳೆಯರು ವಿಮಾನದಲ್ಲಿ ಸ್ವದೇಶ ಅಥವಾ ವಿದೇಶಗಳಿಗೆ ಪ್ರಯಾಣಿಸುವಾಗ ಯಾರಾದರೂ ಕುಟುಂಬದ ಪುರುಷರನ್ನು ಕರೆದುಕೊಂಡು ಹೋಗುವಂತೆ ಸೂಚಿಸಿದೆ.

  • GAIL ಸಂಸ್ಥೆಯ ವಿರುದ್ಧ ಬೆಂಗಳೂರಿನ ಸದಾನಂದ ನಗರ ನಿವಾಸಿಗಳ ಪ್ರತಿಭಟನೆ‌

    GAIL ಸಂಸ್ಥೆಯ ವಿರುದ್ಧ ಬೆಂಗಳೂರಿನ ಸದಾನಂದ ನಗರ ನಿವಾಸಿಗಳ ಪ್ರತಿಭಟನೆ‌

    ಬೆಂಗಳೂರು: NGEF ಲೇಔಟ್ ಸದಾನಂದ ನಗರದ ಉದ್ಯಾನವನದಲ್ಲಿ GAIL ಸಂಸ್ಥೆ ಸ್ಥಾವರ ನಿರ್ಮಾಣಕ್ಕೆ ಮುಂದಾಗಿದ್ದು, ಜನಾಕ್ರೋಶ ಎದುರಾಗಿದೆ‌.

    ಇಲ್ಲಿನ ನಿವಾಸಿಗಳಿಗೆ ಮಕ್ಕಳಿಗೆ ವೃದ್ಧರಿಗೆ ಯುವಕರಿಗೆ ವಾಕಿಂಗ್ ಮಾಡಲು, ಆಟವಾಡಲು ಇರೋದು ಇದೊಂದೆ ಪಾರ್ಕ್ ಆಗಿದೆ. ಹೀಗಾಗಿ ಬೇರೆ ಸ್ಥಳದಲ್ಲಿ ಈಗಾಗಲೇ ಸ್ಥಾಪಿತವಾಗಿರುವ ಸ್ಥಾವರವನ್ನು ಈ ಪಾರ್ಕ್ ಜಾಗಕ್ಕೆ ಶಿಫ್ಟ್ ಮಾಡಲು ಹೊರಟಿರುವುದರ ವಿರುದ್ಧ ಜನ ತಿರುಗಿ ಬಿದ್ದಿದ್ದಾರೆ. ಇದನ್ನೂ ಓದಿ: ದೆಹಲಿಯಿಂದ ಕರೆ ಬರುವ ನಿರೀಕ್ಷೆಯಿದೆ: ಬೊಮ್ಮಾಯಿ

    ಈ ಸ್ಥಾವರ ನಿರ್ಮಾಣಕ್ಕೆ ಪಾರ್ಕ್‌ನಲ್ಲಿರುವ ಸುಮಾರು 30-50 ಮರಗಳ ತೆರವು ಮಾಡಬೇಕಾಗಿದೆ. ಹಸಿರನ್ನು ಅಪೋಷನ ತೆಗೆದುಕೊಂಡು ಈ ಸ್ಥಾವರ ನಿರ್ಮಾಣ ಬೇಕಾಗಿಲ್ಲ‌ ಉದ್ಯಾನವನ ಹೊರತುಪಡಿಸಿ ಬೇರೆ ಜಾಗದಲ್ಲಿ ನಿರ್ಮಾಣ ಮಾಡಲಿ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ‌. NGEF ಲೇಔಟ್ ಸದಾನಂದ ನಗರದ ಉದ್ಯಾನವನ ಬಿಡಿಎಗೆ ಸೇರಿದ್ದು, ಸದ್ಯ ಬಿಬಿಎಂಪಿ ನಿರ್ವಹಣೆ ಮಾಡುತ್ತಿದೆ.