Tag: Parivartana yatre

  • ಸಮಾರೋಪ ಮುಕ್ತಾಯ ಬಳಿಕ ಬಿಜೆಪಿ ಕಾರ್ಯಕರ್ತರಿಗೆ ಶುರುವಾಯ್ತು ತೊಂದರೆ

    ಸಮಾರೋಪ ಮುಕ್ತಾಯ ಬಳಿಕ ಬಿಜೆಪಿ ಕಾರ್ಯಕರ್ತರಿಗೆ ಶುರುವಾಯ್ತು ತೊಂದರೆ

    ಬೆಂಗಳೂರು: ಮಹಾ ನಗರದಲ್ಲಿ ಇಂದು ನಡೆದ ಪರಿವರ್ತನಾ ಸಮಾರೋಪಕ್ಕೆ ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ ಕಾರ್ಯಕರ್ತರು ಆಗಮಿಸಿದ್ದರು. ಸಮಾರೋಪ ಸಮಾರಂಭಕ್ಕೆ ಲಕ್ಷಾಂತರ ಕಾರ್ಯಕರ್ತರು ಆಗಮಿಸಿದ್ದರಿಂದ ಕಾರ್ಯಕ್ರಮವೂ ಯಶಸ್ವು ಆಯಿತು. ಸಮಾರೋಪ ಮುಕ್ತಾಯ ಆಗುತ್ತಿದಂತೆ ದೂರದ ಊರುಗಳಿಂದ ಬಂದಿದ್ದ ಕಾರ್ಯಕರ್ತರಿಗೆ ಮರಳಿ ಹೋಗಲು ಬಸ್ ಗಳೇ ಸಿಗದೇ ಪರದಾಡುವಂತಾಯ್ತು.

    ಸಮಾರೋಪ ಮುಗಿದು ಮೂರು ಗಂಟೆಗಳಾದ್ರೂ ಇನ್ನು ಹಲವು ಕಾರ್ಯಕರ್ತರಿಗೆ ತಾವು ಬಂದಿರುವ ಬಸ್ ಗಳೆ ಸಿಗುತ್ತಿಲ್ಲ. ಕೆಲವೊಂದು ಕಡೆ ಬಸ್ ಸಿಕ್ಕರೆ ಡ್ರೈವರ್ ಗಳು ಸಿಗುತ್ತಿಲ್ಲ. ನಾನಾ ಕಡೆಗಳಿಂದ ಬಸ್ ಮಾಡಿಕೊಂಡು ಬಂದಿದ್ದರಿಂದ ಕೆಲವರಿಗೆ ಪಾರ್ಕಿಂಗ್ ಸ್ಥಳ ಸಿಗುತ್ತಿಲ್ಲ.

    ಕೆಲವು ಜಿಲ್ಲೆಗಳಿಂದ ಬಂದಿರುವ ಜನ ನಮ್ಮ ಬಸ್ ಎಲ್ಲಿ ಪಾರ್ಕ್ ಮಾಡಿದ್ದಾರೆ ಎಂದು ಗೊತ್ತಿಲ್ಲ ಅಂತಾ ಗೋಳಾಡುತ್ತಿರುವ ದೃಶ್ಯಗಳು ಕಂಡು ಬಂದವು. ಇತ್ತ ಊಟವು ಸಿಗದೆ, ಬಸ್ ಇಲ್ಲದೇ ಮಹಿಳೆಯರು ಮತ್ತು ವೃದ್ಧರು ರಸ್ತೆಯಲ್ಲಿಯೇ ನಿಂತು ತಮ್ಮ ಊರಿನ ಬಸ್ ಗಾಗಿ ಕಾಯುತ್ತಿದ್ದಾರೆ.

  • ಪರಿವರ್ತನಾ ಯಾತ್ರೆ ಸಮಾರೋಪಕ್ಕೆ ಮುತ್ತಿಗೆ ಎಚ್ಚರಿಕೆ-ಬಿಜೆಪಿ ಹೈಕಮಾಂಡ್ ಕರೆದ ತುರ್ತು ಸಭೆಯಲ್ಲಿ ಸಖತ್ ಪ್ಲ್ಯಾನ್

    ಪರಿವರ್ತನಾ ಯಾತ್ರೆ ಸಮಾರೋಪಕ್ಕೆ ಮುತ್ತಿಗೆ ಎಚ್ಚರಿಕೆ-ಬಿಜೆಪಿ ಹೈಕಮಾಂಡ್ ಕರೆದ ತುರ್ತು ಸಭೆಯಲ್ಲಿ ಸಖತ್ ಪ್ಲ್ಯಾನ್

    ಬೆಂಗಳೂರು: ಮಹದಾಯಿ ಮುಜುಗರ, ಬೆಂಗಳೂರು ಬಂದ್ ನಡುವೆಯೇ ಶತಯಗತಾಯವಾಗಿ ಪರಿವರ್ತನಾ ಯಾತ್ರೆ ಸಮಾರೋಪ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಬಿಜೆಪಿ ಸಿದ್ಧತೆ ನಡೆಸುತ್ತಿದೆ. ದೆಹಲಿಯಲ್ಲಿ ಗುಪ್ತ ಸಭೆಗಳನ್ನು ನಡೆಸುವ ಮೂಲಕ ಬಿಜೆಪಿ ನಾಯಕರು ಕಾರ್ಯಕ್ರಮ ಯಶಸ್ವಿಗೆ ತಂತ್ರಗಳನ್ನು ರೂಪಿಸುತ್ತಿದ್ದಾರೆ.

    ಯಡಿಯೂರಪ್ಪ-ಅಮಿತ್ ಶಾ ಸಭೆಯ ಬೆನ್ನಲ್ಲೆ, ಸೋಮವಾರ ರಾತ್ರಿ ನವದೆಹಲಿಯಲ್ಲಿ ಕಾರ್ಯಕ್ರಮ ಜವಾಬ್ದಾರಿ ಹೊತ್ತಿರುವ ಕೇಂದ್ರ ಸಚಿವ ಅನಂತ್ ಕುಮಾರ್ ನೇತೃತ್ವದಲ್ಲಿ ರಾಜ್ಯ ಬಿಜೆಪಿ ನಾಯಕರ ಸಭೆ ನಡೆಸಲಾಯಿತು. ಸಭೆಯಲ್ಲಿ ವಿಪಕ್ಷ ನಾಯಕ ಜಗದೀಶ ಶೆಟ್ಟರ್, ಕೆ.ಎಸ್ ಈಶ್ವರಪ್ಪ, ಆರ್.ಅಶೋಕ್, ಅರವಿಂದ್ ಲಿಂಬಾವಳಿ, ಬಿಎಲ್ ಸಂತೋಷ್ ಭಾಗಿಯಾಗಿದ್ರು.

    ಸಭೆಯುದ್ದಕ್ಕೂ ಮಹದಾಯಿಯಿಂದ ಆಗಿರುವ ಡ್ಯಾಮೇಜ್ ಕಂಟ್ರೊಲ್ ಹಾಗೂ ಪರಿವರ್ತನಾ ಯಾತ್ರೆ ಸಮಾರೋಪ ಕಾರ್ಯಕ್ರಮಕ್ಕೆ ಸಿದ್ಧತೆ ಕುರಿತು ಚರ್ಚಿಸಲಾಗಿದೆ ಎಂದು ಹೇಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಪರಿವರ್ತನಾ ಯಾತ್ರೆ ಸಮಾರೋಪ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದು, ಅಂದೇ ಬೆಂಗಳೂರು ಬಂದ್‍ಗೆ ಕರೆ ನೀಡಲಾಗಿದೆ. ಹೀಗಾಗಿ ಬಿಜೆಪಿ ನಾಯಕರು ಸಾಕಷ್ಟು ಎಚ್ಚರಿಕೆಯಿಂದ ಕಾರ್ಯಕ್ರಮ ಆಯೋಜಿಸಲು ಪ್ಲಾನ್ ರೂಪಿಸುತ್ತಿದ್ದಾರೆ ಎನ್ನಲಾಗಿದೆ.

    ಪ್ರತಿಭಟನಾನಿರತರು ಪ್ರಧಾನಿ ಮೋದಿ ಪಾಲ್ಗೊಳ್ಳುವ ಕಾರ್ಯಕ್ರಮದಲ್ಲಿ ಅನಾಹುತ ಸೃಷ್ಟಿಸಬಹುದಾದ ಭಯ ಬಿಜೆಪಿ ನಾಯಕರಿಗೆ ಶುರುವಾಗಿದೆ ಎಂದು ತಿಳಿದು ಬಂದಿದೆ. ಭದ್ರತೆ ಹಾಗೂ ಅಚಾತುರ್ಯ ಗಳಾದಂತೆ ವ್ಯವಸ್ಥೆ ಮಾಡಿಕೊಳ್ಳಲು ಅಮಿತ್ ಶಾ ಸೂಚನೆಯಂತೆ ಕ್ರಿಯಾಯೋಜನೆ ಕುರಿತು ರಾಜ್ಯ ನಾಯಕರೊಂದಿಗೆ ಅನಂತ ಕುಮಾರ್ ಚರ್ಚಿಸಿದ್ದಾರೆ.

    ಬಿಜೆಪಿ ಮೀಟಿಂಗ್‍ನ ಹೈಲೈಟ್ಸ್:
    1. ರಾಜ್ಯದಲ್ಲಿ ಕಾವೇರುತ್ತಿರುವ ಮಹದಾಯಿ ಹೋರಾಟದ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ.
    2. ಕರ್ನಾಟಕ ಬಂದ್ ಹಾಗೂ ಬೆಂಗಳೂರು ಬಂದ್ ಸಿದ್ಧತೆ ಕುರಿತು ವರದಿ ಪಡೆದ ಹೈಕಮಾಂಡ್.
    3. ರಾಜ್ಯಕ್ಕೆ ಪ್ರಧಾನಿ ಭೇಟಿ ವೇಳೆ ವಿವಿಧ ಸಂಘಟನೆಗಳಿಂದ ತಡೆ ಉಂಟಾಗುವ ವರದಿ ಹೈಕಮಾಂಡ್ ಕೈ ಸೇರಿದೆ.
    4. ಕಾರ್ಯಕ್ರಮಕ್ಕೆ ಹೆಚ್ಚಿನ ಭದ್ರತಾ ವ್ಯವಸ್ಥೆ ಕುರಿತು ಗಮನ ಹರಿಸಬೇಕು.
    5. ಯಾವುದೇ ಕಾರಣಕ್ಕೂ ಪರಿವರ್ತನಾ ಯಾತ್ರೆ ಸಮಾರೋಪ ಕಾರ್ಯಕ್ರಮ ಪ್ಲಾಪ್ ಆಗದಂತೆ ನೋಡಿಕೊಳ್ಳಬೇಕು.
    6. ಸಾಧ್ಯವಾದಲ್ಲಿ ಬಂದ್ ಗೆ ಕರೆ ನೀಡಿರುವ ವಿವಿಧ ಸಂಘಟನೆಗಳ ಜೊತೆ ಗುಪ್ತ ಮಾತುಕತೆ ನಡೆಸಿ ಹೋರಾಟಗಾರರ ಮನವೊಲಿಸಲು ಪ್ರಯತ್ನಿಸುವುದು.
    7. ಬಂದ್ ವೇಳೆ ಸಾರಿಗೆ ವ್ಯವಸ್ಥೆ ಕೈ ಕೊಟ್ಟರೆ ಜನರನ್ನು ಕರೆತರು ಬದಲಿ ಮಾರ್ಗಗಳ ಕುರಿತು ಚರ್ಚೆ.
    8. ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುವ ಕಾರ್ಯಕ್ರಮದಲ್ಲಿ ಅಚಾರ್ತ್ಯು ನಡೆಯದಂತೆ ಎಚ್ಚರ ವಹಿಸುವಂತೆ ಸೂಚನೆ.
    9. ಪ್ರಧಾನಿ ಬಂದು ಹೋಗುವರೆಗೂ ರಾಜ್ಯದಲ್ಲಿ ಮಹದಾಯಿ ಕುರಿತು ಯಾರು ಪ್ರತಿಕ್ರಿಯಿಸ ಕೂಡದು, ಅನಿವಾರ್ಯತೆ ಬಂದಲ್ಲಿ ಹಿರಿಯ ನಾಯಕರಿಗಷ್ಟೆ ಅವಕಾಶ.
    10. ಪ್ರಚೋದನೆ ನೀಡುವಂತೆ ಹೇಳಿಕೆಯಿಂದ ದೂರವಿದ್ದು ಪ್ರತಿಪಕ್ಷಗಳ ಟೀಕೆಗೆ ಒಳಗಾಗದಂತೆ ಎಚ್ಚರ ವಹಿಸಬೇಕು.
    11. ಅನಾವಶ್ಯಕ ದುಂದು ವೆಚ್ಚಗಳನ್ನು ಮಾಡದಂತೆ ಹಾಗೂ ಯಂತ್ರ ಹೋಮಗಳನ್ನ ಬಹಿರಂಗ ವಾಗಿ ಮಾಡಬಾರದು.
    12. ಮಹದಾಯಿ ವಿಷಯದಿಂದ ರಾಜ್ಯ ನಾಯಕರು ಎದುರಿಸುತ್ತಿರುವ ಮುಜುಗರ ಯಾವುದೇ ಕಾರಣಕ್ಕೂ ಪ್ರಧಾನಿಗೆ ಎದುರಾಗಾದಂತೆ ವ್ಯವಸ್ಥೆ ಮಾಡಿಕೊಳ್ಳಲು ಅನಂತ ಕುಮಾರ್ ರಾಜ್ಯ ನಾಯಕರೊಂದಿಗೆ ಪ್ಲಾನ್ ರೂಪಿಸಿದ್ದಾರೆ.

    ಈ ಮೇಲಿನ 12 ವಿಷಯಗಳ ಬಿಜೆಪಿ ಕಚೇರಿಯಲ್ಲಿ ಮಾತುಕತೆ ನಡೆದಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಫೆಬ್ರವರಿ 4ರಂದು ನಡೆಯುವ ಪರಿವರ್ತನಾ ಯಾತ್ರೆ ಸಮಾರೋಪ ಕಾರ್ಯಕ್ರಮಕ್ಕೆ ಯಾವುದೇ ಅಡೆತಡೆಗಳು ಉಂಟಾಗದಂತೆ ನೋಡಿಕೊಳ್ಳಲು ಹೈಕಮಾಂಡ್ ರಾಜ್ಯ ನಾಯಕರಿಗೆ ಸೂಚಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

  • ಪರಿವರ್ತನಾ ಯಾತ್ರೆ ಬಳಿಕ ಚುನಾವಣೆ ಸಿದ್ಧತೆಗೆ ಬಿಜೆಪಿ ಭರ್ಜರಿ ಪ್ಲ್ಯಾನ್

    ಪರಿವರ್ತನಾ ಯಾತ್ರೆ ಬಳಿಕ ಚುನಾವಣೆ ಸಿದ್ಧತೆಗೆ ಬಿಜೆಪಿ ಭರ್ಜರಿ ಪ್ಲ್ಯಾನ್

    ಬೆಂಗಳೂರು: ರಾಜ್ಯಾದ್ಯಂತ ಬಿಜೆಪಿ ಪರಿವರ್ತನಾ ಯಾತ್ರೆ ಹಮ್ಮಿಕೊಂಡಿದ್ದು, ಈ ಸಮಾವೇಶ ಫೆಬ್ರವರಿ 04 ರಂದು ಕೊನೆಗೊಳ್ಳಲಿದೆ. ಪರಿವರ್ತನಾ ಯಾತ್ರೆಯ ಕೊನೆಯ ದಿನದಂದು ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ. ಈ ಯಾತ್ರೆಯ ಬಳಿಕ ಬಿಜೆಪಿ ಚುನಾವಣೆಗೆ ಭರ್ಜರಿ ತಯಾರಿಯನ್ನು ನಡೆಸುತ್ತಿದೆ.

    ಪರಿವರ್ತನಾ ಯಾತ್ರೆ ಬಳಿಕ ರಾಜ್ಯಾದ್ಯಂತ ರಾಜ್ಯ ಮಟ್ಟದ ಒಟ್ಟು 19 ರ್ಯಾಲಿ ಆಯೋಜಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಫೆಬ್ರವರಿ 27ಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ 75ನೇ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಬೃಹತ್ ಕಿಸಾನ್ ಸಮಾವೇಶವನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ಯಡಿಯೂರಪ್ಪ ಅವರಿಗೆ 75 ವರ್ಷ ಪೂರ್ತಿ ಹಿನ್ನೆಲೆಯಲ್ಲಿ 75 ಸಾವಿರ ರೈತರನ್ನು ಸಮಾವೇಶ ಕರೆತರಲು ಬಿಜೆಪಿ ಸಿದ್ಧತೆ ನಡೆಸಿದೆ.

    ಅಲ್ಲದೇ ಫೆಬ್ರವರಿ 4ರ ನಂತರ ಬಿಜೆಪಿ ರಾಜ್ಯದಲ್ಲಿ 19 ಸಮಾವೇಶಗಳನ್ನು ನಡೆಸಲು ತೀರ್ಮಾನಿಸಿದೆ. ಕೋಲಿ, ಮರಾಠ, ಗೊಲ್ಲರ, ನಾಯಕ ಸೇರಿದಂತೆ ಹಿಂದುಳಿದ ವರ್ಗಗಳ ಸಮುದಾಯದ ಓಬಿಸಿ ಮೋರ್ಚಾ ವತಿಯಿಂದ 8 ರಾಜ್ಯ ಮಟ್ಟದ ರ‍್ಯಾಲಿಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

    ಎಸ್‍ಸಿ ಮತ್ತು ಎಸ್‍ಟಿ ಸಮುದಾಯದ 5 ರಾಜ್ಯ ಮಟ್ಟದ ಸಮಾವೇಶ, ಸ್ಲಂ ಮೋರ್ಚಾದಿಂದ 1 ರ್ಯಾಲಿ, ಮಹಿಳಾ ಮೋರ್ಚಾದಿಂದ 4 ರಾಜ್ಯ ಮಟ್ಟದ ರ‍್ಯಾಲಿ, ಒಂದು ಬೃಹತ್ ಕಿಸಾನ್ ರ‍್ಯಾಲಿಯನ್ನು ನಡೆಸಲು ಬಿಜೆಪಿ ಸಕಲ ಸಿದ್ಧತೆ ನಡೆಸುತ್ತಿದೆ. ದಾವಣಗೆರೆಯಲ್ಲಿ ನಡೆಯುವ ಬೃಹತ್ ಕಿಸಾನ್ ಸಮಾವೇಶದಲ್ಲಿ ಪ್ರಧಾನಿ ಮೋದಿಜಿ ಭಾಗವಹಿಸುವ ಸಾಧ್ಯತೆಗಳಿವೆ. ಮಾರ್ಚ್ 15ರೊಳಗೆ ಈ ಎಲ್ಲ ಸಮಾವೇಶಗಳು ಮುಗಿಯಲಿವೆ ಎಂಬುದಾಗಿ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.