Tag: Parivartana Yatra

  • ಛತ್ತೀಸ್‌ಗಢದಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆ ಸಮಾರೋಪ ಸಮಾರಂಭ – ಪ್ರಧಾನಿ ಮೋದಿ ಭಾಗಿ

    ಛತ್ತೀಸ್‌ಗಢದಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆ ಸಮಾರೋಪ ಸಮಾರಂಭ – ಪ್ರಧಾನಿ ಮೋದಿ ಭಾಗಿ

    ರಾಯ್ಪುರ: ಛತ್ತೀಸ್‌ಗಢದ (Chattisgarh) ಬಿಲಾಸ್‌ಪುರದಲ್ಲಿ (Bilaspur) ಇಂದು (ಶನಿವಾರ) ನಡೆಯಲಿರುವ ಭಾರತೀಯ ಜನತಾ ಪಕ್ಷದ (BJP) 2 ಪರಿವರ್ತನಾ ಯಾತ್ರೆಗಳ (Parivartana Yatra) ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಭಾಗವಹಿಸಲಿದ್ದಾರೆ ಎಂದು ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ.

    ಕಾಂಗ್ರೆಸ್ (Congress) ಆಡಳಿತದ ಈ ರಾಜ್ಯಕ್ಕೆ ಪ್ರಧಾನಿ ಮೋದಿಯವರ ಮೂರನೇ ಭೇಟಿ ಇದಾಗಿದೆ. ಇಲ್ಲಿನ ವಿಜ್ಞಾನ ಕಾಲೇಜು ಮೈದಾನದಲ್ಲಿ ಮಧ್ಯಾಹ್ನ 2 ಗಂಟೆಗೆ 2 ಪರಿವರ್ತನಾ ಯಾತ್ರೆಗಳ ಸಮಾರೋಪ ಸಮಾರಂಭ ‘ಪರಿವರ್ತನ್ ಮಹಾಸಂಕಲ್ಪ’ ರ‍್ಯಾಲಿಯನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಲಿದ್ದಾರೆ ಎಂದು ರಾಜ್ಯ ಬಿಜೆಪಿ ಮುಖ್ಯಸ್ಥ ಅರುಣ್ ಸಾವೋ (Arun Sao) ತಿಳಿಸಿದ್ದಾರೆ. ಇದನ್ನೂ ಓದಿ: ಅ.15 ರವರೆಗೆ ತಮಿಳುನಾಡಿಗೆ 3,000 ಕ್ಯೂಸೆಕ್‌ ನೀರು ಹರಿಸಿ – ಕರ್ನಾಟಕಕ್ಕೆ ಕಾವೇರಿ ಪ್ರಾಧಿಕಾರ ಸೂಚನೆ

    ಮೊದಲ ಪರಿವರ್ತನಾ ಯಾತ್ರೆಯು ಸೆಪ್ಟೆಂಬರ್ 12ರಂದು ದಂತೇವಾಡದಿಂದ ಕೈಗೊಂಡಿದ್ದು, ಎರಡನೇ ಯಾತ್ರೆ ಸೆಪ್ಟೆಂಬರ್ 15ರಂದು ಜಶ್‌ಪುರದಿಂದ ಪ್ರಾರಂಭವಾಯಿತು. ಎರಡೂ ಯಾತ್ರೆಗಳು 83 ಸ್ವಾಗತ ಸಭೆಗಳು, 4 ರೋಡ್ ಶೋಗಳು ಮತ್ತು ವಿವಿಧ ಸಾರ್ವಜನಿಕ ಸಭೆಗಳನ್ನು ಸಮಾಪ್ತಿಗೊಳಿಸಿದ್ದು, 87 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 3,000 ಕಿಲೋ ಮೀಟರ್ ದೂರವನ್ನು ಕ್ರಮಿಸಿದೆ ಎಂದು ವರದಿಗಳು ತಿಳಿಸಿದೆ. ಇದನ್ನೂ ಓದಿ: ಮಹಿಳಾ ಮೀಸಲಾತಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ

    ಎರಡೂ ಯಾತ್ರೆಗಳಲ್ಲಿ ಸುಮಾರು 50 ಲಕ್ಷಕ್ಕೂ ಅಧಿಕ ಜನರು ಪಾಲ್ಗೊಂಡಿದ್ದು, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಅಧಿಕಾರದಿಂದ ಕಿತ್ತೊಗೆಯುವ ವಿಶ್ವಾಸವನ್ನು ಅರುಣ್ ಸಾವೋ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಏಷ್ಯಾದ ಅತಿದೊಡ್ಡ ಮಾರುಕಟ್ಟೆ ಧಗ ಧಗ – ಬೆಂಕಿ ನಂದಿಸಲು ಹರಸಾಹಸ

    ಪೊಲೀಸರ ಪ್ರಕಾರ, ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದೆ. ಪೊಲೀಸ್ ಪಡೆ, ವಿಶೇಷ ರಕ್ಷಣಾ ಪಡೆ, ಸಶಸ್ತ್ರ ಪಡೆ, ರಾಷ್ಟ್ರೀಯ ಭದ್ರತಾ ಸಿಬ್ಬಂದಿ ಮತ್ತು ಗೃಹರಕ್ಷಕ ದಳಕ್ಕೆ ಸೇರಿದ ಒಟ್ಟು 1,500 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ. ಪ್ರಧಾನ ಮಂತ್ರಿಯವರ ಭೇಟಿಯ ದೃಷ್ಟಿಯಿಂದ ನಗರದ 3 ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ‘ನೋ ಫ್ಲೈಯಿಂಗ್ ಝೋನ್’ ಎಂದು ಘೋಷಿಸಿದ್ದು, ಆ್ಯಂಟಿ ಡ್ರೋನ್ ಗನ್‌ಗಳನ್ನು ಸಹಾ ನಿಯೋಜಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ವಿಶ್ವಕಪ್‌ ಕ್ರಿಕೆಟ್‌ ಅಲ್ಲ, ವಿಶ್ವ ಟೆರರ್‌ ಕಪ್‌ ಮಾಡ್ತೀವಿ – ಖಲಿಸ್ತಾನ್‌ ಉಗ್ರನಿಂದ ಬೆದರಿಕೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರಧಾನಿಯವರು ಭಾಷಣ ಮಾಡುವ ಅರಮನೆ ಮೈದಾನದಲ್ಲಿ ತಪ್ಪಿತು ಭಾರೀ ಅವಘಢ!

    ಪ್ರಧಾನಿಯವರು ಭಾಷಣ ಮಾಡುವ ಅರಮನೆ ಮೈದಾನದಲ್ಲಿ ತಪ್ಪಿತು ಭಾರೀ ಅವಘಢ!

    ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ 85 ದಿನಗಳ ಪರಿವರ್ತನಾ ಯಾತ್ರೆಗೆ ಇಂದು ತೆರೆ ಬೀಳಲಿದೆ. ಹೀಗಾಗಿ ಪ್ರಧಾನಿ ಮೋದಿ ಇಂದು ಅರಮನೆ ಮೈದಾನಕ್ಕೆ ಭೇಟಿ ನೀಡಲಿದ್ದು, ಈ ಮೊದಲೇ ಭಾರೀ ಅನಾಹುತವೊಂದು ತಪ್ಪಿದೆ.

    ಅರಮನೆ ಮೈದಾನದಲ್ಲಿ ಅಡುಗೆ ಮಾಡುವಾಗ ಸಿಲಿಂಡರ್‍ನಿಂದ ಗ್ಯಾಸ್ ಲೀಕ್ ಆಗಿದೆ. ಇದನ್ನು ಕಂಡು ಅಡುಗೆಭಟ್ಟರು ಒಂದು ಕ್ಷಣ ಬೆಚ್ಚಿಬಿದ್ದು ಓಡಿಹೋಗಿದ್ದಾರೆ. ಬಳಿಕ ಗ್ಯಾಸ್ ಲೀಕ್ ವಿಷಯದಲ್ಲಿ ಅಡುಗೆಯವರು ಮತ್ತು ಆಯೋಜಕರ ನಡುವೆ ಮಾತಿನ ಚಕಮಕಿ ನಡೆದಿದೆ. ಆಯೋಜಕರು ಗ್ಯಾಸ್ ಲೀಕ್ ಆದ ರೆಗ್ಯೂಲೇಟರ್ ಬದಲಿಸಿದ್ದು, ಆತಂಕದಿಂದ ದೂರವಿದ್ದ ಅಡುಗೆಯವರಿಂದ ಅಡುಗೆ ಕೆಲಸ ಪುನಃ ಆರಂಭವಾಗಿದೆ.

    60 ಸಾವಿರ ಮಂದಿ ಕಾರ್ಯಕರ್ತರಿಗೆ ಬೆಳಗ್ಗಿನ ತಿಂಡಿ, 1 ಲಕ್ಷದ 80 ಸಾವಿರ ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿದ್ದು, 4 ಭೋಜನ ಶಾಲೆಗಳಲ್ಲಿ ಸಮಾರೋಪ ಜಾಥಾಕ್ಕಾಗಿ ತಿಂಡಿ, ಊಟ ತಯಾರಿ ಮಾಡಲಾಗಿದೆ. ಪ್ರಧಾನಿ ಮೋದಿ ಇಂದು ಸಂಜೆ 4 ಗಂಟೆಗೆ ಅರಮನೆ ಮೈದಾನದಲ್ಲಿ ಭಾಷಣ ಮಾಡಲಿದ್ದಾರೆ.

    ಇಂದು ನಡೆಯುವ ಈ ಸಮಾವೇಶದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸುಮಾರು ಮೂರೂವರೆ ಲಕ್ಷ ಜನ ಭಾಗಿಯಾಗುವ ನಿರೀಕ್ಷೆ ಇದೆ. ಮಧ್ಯಾಹ್ನ 1 ಗಂಟೆಗೆ ದೆಹಲಿಯಿಂದ ಹೊರಡಲಿರುವ ಪ್ರಧಾನಿ ಮೋದಿ 3.30ರ ವೇಳೆಗೆ ಎಚ್‍ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಬಳಿಕ ಅಲ್ಲಿಂದ ನೇರವಾಗಿ ವಿಶೇಷ ಹೆಲಿಕಾಪ್ಟರ್ ಮೂಲಕ 3.50ಕ್ಕೆ ಜೆಸಿನಗರದ ಹೆಲಿಪ್ಯಾಡ್‍ಗೆ ಬಂದಿಳಿಯಲಿದ್ದಾರೆ. ಅಲ್ಲಿಂದ 3.55ಕ್ಕೆ ಸಮಾವೇಶಕ್ಕೆ ಆಗಮಿಸಿ, 1 ಗಂಟೆಗಳ ಕಾಲ ಭಾಷಣ ಮಾಡಲಿದ್ದಾರೆ.

  • ಪರಿವರ್ತನಾ ಯಾತ್ರೆಗೆ ಜನರನ್ನು ಸೆಳೆಯಲು ಬಿಜೆಪಿಯಿಂದ ಆರ್ಕೆಸ್ಟ್ರಾ ಆಯೋಜನೆ!

    ಪರಿವರ್ತನಾ ಯಾತ್ರೆಗೆ ಜನರನ್ನು ಸೆಳೆಯಲು ಬಿಜೆಪಿಯಿಂದ ಆರ್ಕೆಸ್ಟ್ರಾ ಆಯೋಜನೆ!

    ಚಿಕ್ಕಬಳ್ಳಾಪುರ: ಕಾಂಗ್ರೆಸ್ ಭದ್ರಕೋಟೆಯಾದ ಪಂಚಗಿರಿಗಳ ನಾಡು ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಾಂತ ಇಂದು ಬಿಜೆಪಿಯ ಪರಿವರ್ತನಾ ಯಾತ್ರೆ ಭರ್ಜರಿಯಾಗಿ ನಡೆದಿದೆ. ಆದರೆ ಪರಿವರ್ತನಾ ಯಾತ್ರೆಗೆ ಜನರನ್ನು ಸೆಳೆಯಲು ಆರ್ಕೆಸ್ಟ್ರಾ ಆಯೋಜನೆ ಮಾಡಿದ್ದು ಈಗ ಭಾರೀ ವಿರೋಧಕ್ಕೆ ಕಾರಣವಾಗಿದೆ.

    ಮೊದಲಿಗೆ ಯಾತ್ರೆ ಗೌರಿಬಿದನೂರು ನಗರದಲ್ಲಿ ಆರಂಭವಾಗಿತ್ತು. ಆದರೆ ಜನರನ್ನು ಬಾಗೇಪಲ್ಲಿ ಪಟ್ಟಣದ ಯಾತ್ರೆಗೆ ಸೆಳೆಯಲು ಆರ್ಕೆಸ್ಟ್ರಾ ಆಯೋಜಿಸಿದ್ದರು. ಬಾಗೇಪಲ್ಲಿ ಪಟ್ಟಣದ ಗೂಳೂರು ವೃತ್ತದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿರುವ ಅರಿಕೆರೆ ಕೃಷ್ಣಾರೆಡ್ಡಿ ಅವರು ಆರ್ಕೆಸ್ಟ್ರಾ ಆಯೋಜನೆ ಮಾಡಿದ್ದರು.

    ಆರ್ಕೆಸ್ಟ್ರಾ ದಲ್ಲಿ ಬೆಡಗಿಯರು ಮಸ್ತ್ ಮಸ್ತ್ ಸಾಂಗ್ ಗಳಿಗೆ ಸ್ಟೆಪ್ಸ್ ಹಾಕಿದ್ದಾರೆ. ಈ ವೇಳೆ ಜನರು ನಾ ಮುಂದು ತಾ ಮುಂದು ಎಂದು ನೋಡೋಕೆ ಮುಗಿಬಿದ್ದಿದ್ದರು. ಇನ್ನೂ ಕಾರ್ಯಕ್ರಮದ ವೇಳೆ ವಯಸ್ಸದ ವ್ಯಕ್ತಿಯೊಬ್ಬರು ಸ್ಟೇಜ್ ಹತ್ತಿ ಡ್ಯಾನ್ಸ್ ಆಡೋಕೆ ಮುಂದಾದರು. ಇದು ನೆರೆದಿದ್ದವರ ಗಮನ ಸೆಳೆದಿತ್ತು. ಮತ್ತೊಂದೆಡೆ ಹಲವರು ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಅಶ್ಲೀಲ ನೃತ್ಯ ಆಯೋಜಿಸಿರುವುದಾಗಿ ಆಕ್ರೋಶ ವ್ಯಕ್ತಪಡಿಸಿದರು.

    ಇನ್ನು ಕಾರ್ಯಕ್ರಮದ ಆರಂಭ ವೇಳೆಗೆ ತಲೆಯ ಮೇಲೆ ಕಳಶ ಹೊತ್ತು ಕುಂಭ ಮೇಳದೊಂದಿಗೆ ಮಾಜಿ ಸಿಎಂ ಯಡಿಯೂರಪ್ಪ ನವರ ಜೊತೆ ಜನರು ಹೆಜ್ಜೆ ಹಾಕಿದರು. ಮೊದಲಿಗೆ ಗೌರಿಬಿದನೂರು ನಗರಕ್ಕೆ ಆಗಮಿಸಿದ ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯ ಉಸ್ತುವಾರಿ ಮುರುಳೀಧರ್, ಕೇಂದ್ರ ಸಚಿವ ಸದಾನಂದಗೌಡರಿಗೆ ಭರ್ಜರಿ ಸ್ವಾಗತ ಸಿಕ್ಕಿತ್ತು. ಪರಿವರ್ತನಾ ಯಾತ್ರೆಯಲ್ಲಿ ಭಾಗವಹಿಸಿದ್ದ ಬಿಜೆಪಿ ನಾಯಕರು ಸಿಎಂ ಸಿದ್ದರಾಮಯ್ಯ ಸೇರಿದಂತೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

    ಇನ್ನೂ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಬಿಜೆಪಿ ಉಸ್ತುವಾರಿ ಮುರುಳೀಧರ್, ಬಿಜೆಪಿ ಪರಿವರ್ತನಾ ಯಾತ್ರೆಗೆ ಹರಿದು ಬರುತ್ತಿರುವ ಜನಸ್ತೋಮ ಕಂಡು ಸಿಎಂ ಸಿದ್ದರಾಮಯ್ಯ ತಮ್ಮ ಬಟ್ಟೆ ಹರಿದು ಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

    ಕಾಂಗ್ರೆಸ್ ಭದ್ರ ಕೋಟೆಯಲ್ಲಿ ಬಿಜೆಪಿಯ ಪರಿವರ್ತನಾ ಯಾತ್ರೆಯ ದರ್ಬಾರ್ ಭರ್ಜರಿಯಾಗೇ ನಡೆದರೂ ಆರ್ಕೆಸ್ಟ್ರಾ ಆಯೋಜನೆ ಹಲವು ಆಕ್ಷೇಪಗಳಿಗೆ ಕಾರಣವಾಗಿ ವಿಪಕ್ಷಗಳಿಗೆ ಟೀಕಾಸ್ತ್ರವಾಯಿತು. ಇನ್ನು ಪರಿವರ್ತನಾ ಯಾತ್ರೆ ಕಾರ್ಯಕ್ರಮದ ನಂತರ ಸೀರೆ ಟೋಕನ್ ವಿತರಣೆ ಮಾಡುತ್ತಿದ್ದಾರೆ ಎಂಬ ಆರೋಪವು ಕೇಳಿ ಬಂದಿದೆ.

  • ಗೋವಿಂದರಾಜು ಡೈರಿ ಓದಿದ್ರೆ 1 ವಾರ ಕೈ ಸರ್ಕಾರ ಅಕ್ರಮದ ಬಗ್ಗೆ ಭಾಷಣ ಮಾಡಬಹುದು: ಅಮಿತ್ ಶಾ

    ಗೋವಿಂದರಾಜು ಡೈರಿ ಓದಿದ್ರೆ 1 ವಾರ ಕೈ ಸರ್ಕಾರ ಅಕ್ರಮದ ಬಗ್ಗೆ ಭಾಷಣ ಮಾಡಬಹುದು: ಅಮಿತ್ ಶಾ

    ಚಿತ್ರದುರ್ಗ: ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ನಿವಾಸದಲ್ಲಿ ಆದಾಯ ತೆರಿಗೆ ದಾಳಿ ವೇಳೆ ಸಿಕ್ಕಿದ ಡೈರಿಯಲ್ಲಿ ಉಲ್ಲೇಖಗೊಂಡಿರುವ ವಿಚಾರಗಳನ್ನು ಓದಿದರೆ ಸರ್ಕಾರದ ಅಕ್ರಮಗಳ ಬಗ್ಗೆಯೇ ಒಂದು ವಾರ ಭಾಷಣ ಮಾಡಬಹುದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

    ಹೊಳಲ್ಕೆರೆಯಲ್ಲಿ ನಡೆದ ಪರಿವರ್ತನಾ ಯಾತ್ರೆಯಲ್ಲಿ ಭಾಷಣ ಮಾಡಿದ ಅವರು, 170 ಕ್ಷೇತ್ರಗಳಲ್ಲಿ ಪ್ರವಾಸ ಮಾಡಿರುವ ಈ ಯಾತ್ರೆ ಸುಮಾರು 8 ಸಾವಿರ ಕಿಲೋ ಮೀಟರ್ ಮುಗಿಸಿದೆ. ಈ ಯಾತ್ರೆ ಪ್ರಭಾವದಿಂದಾಗಿ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಪ್ರಧಾನಿ ಮೋದಿ ಅವರು ಕರ್ನಾಟಕಕ್ಕೆ ಇಲ್ಲಿಯವರೆಗೆ ಮೂರು ಲಕ್ಷ ಕೋಟಿ ರೂ. ಅನುದಾನ ನೀಡಿದ್ದು, ಈ ಹಣವನ್ನು ಸರ್ಕಾರ ತಿಂದು ಹಾಕಿದೆ. ತಾಯಂದಿರ ಕಣ್ಣು ಒರೆಸಲು ಉಜ್ವಲ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಈ ಹಣ ಎಲ್ಲಿ ಹೋಯಿತು ಅಂದರೆ ಅದು ಕಾಂಗ್ರೆಸ್ ಕಾರ್ಯಕರ್ತನ ಮನೆ ಸೇರಿದೆ. ಮೋದಿ ಕಳಿಸಿದ ಮೂರು ಲಕ್ಷದ ಜೊತೆಗೆ ಜನ ಕಟ್ಟಿದ ತೆರಿಗೆ ಹಣವನ್ನು ಸಹ ಈ ಸರ್ಕಾರ ತಿಂದಿದೆ ಎಂದು ಕಟುವಾಗಿ ಟೀಕಿಸಿದರು.

    ಯಾರಾದರೂ ನಿಮಗೆ ಬೆಲೆಬಾಳುವ ಗಡಿಯಾರ ಉಡುಗೊರೆ ಕೊಟ್ಟಿದ್ದಾರಾ? ಸಿಎಂ ಸಿದ್ದರಾಮಯ್ಯಗೆ 70 ಲಕ್ಷ ರೂ. ಮೌಲ್ಯದ ವಾಚ್ ಎಲ್ಲಿಂದ ಬಂತು? ಸಿಎಂಗೆ ಯಾಕೆ ದುಬಾರಿ ಉಡುಗೊರೆ ನೀಡುತ್ತಾರೆ ಗೊತ್ತೆ ಎಂದು ಪ್ರಶ್ನಿಸಿ ಉದ್ಯೋಗಿಗಳಿಗೆ ಅನುಕೂಲ ಮಾಡಿದ್ದ ಕಾರಣ ಸಿಎಂಗೆ ಉಡುಗೊರೆ ಸಿಕ್ಕಿದೆ. ಗ್ರಂಥಾಲಯ ಮೇಲ್ವಿಚಾರಕರ ಸಂಬಳ ಹೆಚ್ಚಿಸಲು ಲಂಚ ಕೇಳುವ ಮಂತ್ರಿಗಳಿದ್ದಾರೆ. ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕಾಗಿ 100 ಕೋಟಿ ರೂ. ಲಂಚ ಕೇಳುತ್ತಾರೆ ಎಂದು ಶಾ ಆರೋಪಿಸಿದರು.

    ಕರ್ನಾಟಕದ ಜನರ ಆಶೀರ್ವಾದದಿಂದಲೂ ನರೇಂದ್ರ ಮೋದಿ ಪ್ರಧಾನಿ ಆಗಿದ್ದಾರೆ. ನಮಗಿಂತ ಮೊದಲು ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಸರ್ಕಾರ ಕೇಂದ್ರ ದಲ್ಲಿತ್ತು. 14ನೇ ಹಣಕಾಸು ಯೋಜನೆಯಲ್ಲಿ 2 ಲಕ್ಷ 19 ಸಾವಿರ ಕೋಟಿ ಕರ್ನಾಟಕಕ್ಕೆ ಅನುದಾನ ಸಿಕ್ಕಿದೆ. ಈ ಅನುದಾನ ಹಣ ಎಲ್ಲಿ ಹೋಯಿತು ಎಂದು ಅವರು ಪ್ರಶ್ನಿಸಿದರು.

    ಅನ್ನಭಾಗ್ಯದ ಅಕ್ಕಿ ಹಣವನ್ನ ಕಾಂಗ್ರೆಸ್‍ನವರು ತಿಂದಿದ್ದಾರೆ. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಂತೋಷ್ ಲಾಡ್ ಸಿಕ್ಕಿ ಹಾಕಿಕೊಂಡು ರಾಜೀನಾಮೆ ಕೊಟ್ಟರು. ಅಷ್ಟೇ ಅಲ್ಲದೇ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮನೆ ಮೇಲೆ ಐಟಿ ದಾಳಿ ಆಗಿದೆ. ಆದರೆ ಡಿಕೆಶಿ ಸಚಿವರಾಗಿ ಈಗಲೂ ಹೇಗೆ ಮುಂದುವರೆಯುತ್ತಾರೆ? ಮಲಪ್ರಭಾ ಯೋಜನೆಯಲ್ಲಿ 900 ಕೋಟಿ ಅಕ್ರಮ ನಡೆದಿದೆ ಎಂದು ಅಮಿತ್ ಶಾ ಆರೋಪಿಸಿದರು. ಇದನ್ನು ಓದಿ: ಡೈರಿ ಡೈನಮೈಟ್ ಸ್ಫೋಟಕ್ಕೆ ಊಹಿಸಲಸಾಧ್ಯ ಟ್ವಿಸ್ಟ್: ಗೋವಿಂದರಾಜು ಹೇಳಿಕೆಯಿಂದಲೇ ಸರ್ಕಾರಕ್ಕೆ ಕಂಟಕ!

    ಬಿಜೆಪಿ ಹಾಗೂ ಆರ್‍ಎಸ್‍ಎಸ್‍ಗೆ ಸೇರಿದ 23 ಜನರ ಹತ್ಯೆಯಾಗಿದೆ. ಅವರು ಏನು ತಪ್ಪು ಮಾಡಿದ್ದಾರೆ? ಸರ್ಕಾರ ಈ ಬಗ್ಗೆ ಕ್ರಮವನ್ನೇ ತೆಗೆದುಕೊಂಡಿಲ್ಲ. ಬಿಜೆಪಿ ಸರ್ಕಾರ ಬರುತ್ತಿದ್ದಂತೆ ಕೊಲೆ ಮಾಡಿದವರನ್ನು ಜೈಲಿಗೆ ಸೇರಿಸುತ್ತೇವೆ. ರಾಜ್ಯ ಸರ್ಕಾರ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದು, ಎಸ್‍ಡಿಪಿಐ ವಿರುದ್ಧದ ಎಲ್ಲಾ ಪ್ರಕರಣಗಳನ್ನ ರಾಜ್ಯ ಸರ್ಕಾರ ಹಿಂಪಡೆದಿದೆ. ಯಾವ ಪೊಲೀಸರ ಹಣೆಯಲ್ಲಿ ವಿಭೂತಿ ಹಾಗೂ ಕುಂಕಮ ಇಡದಂತೆ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಮಾಡಿದೆ. ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಬಗ್ಗೆ ಮಾತಾಡುತ್ತದೆ. ಆದರೆ ಅವರ ಉದ್ಧಾರಕ್ಕೆ ತರಲು ಹೊರಟಿರುವ ಮಸೂದೆಗೆ ದೆಹಲಿಯಲ್ಲಿ ಕಾಂಗ್ರೆಸ್ ಅಡ್ಡಿ ಪಡಿಸುತ್ತದೆ. ಈ ಸರ್ಕಾರವನ್ನು ಕಿತ್ತೊಗೆದು ಕಾಂಗ್ರೆಸ್ ಮುಕ್ತ ಕರ್ನಾಟಕವನ್ನು ಮಾಡಲು ನಮ್ಮನ್ನು ಬೆಂಬಲಿಸಿ ಎಂದು ಶಾ ಜನರಲ್ಲಿ ಮನವಿ ಮಾಡಿದರು.

    ರಾಜ್ಯ ಸರ್ಕಾರ ಓಟ್ ಬ್ಯಾಂಕ್ ರಾಜಕೀಯ ಮಾಡುತ್ತಿದ್ದು, ದೇವಸ್ಥಾನದ ಅರ್ಚಕರಿಗೆ ಸರಿಯಾಗಿ ಸಂಬಳ ನೀಡುತ್ತಿಲ್ಲ. ಇಂತಹ ವೊಟ್ ಬ್ಯಾಂಕ್ ಸರ್ಕಾರ ಮನೆಗೆ ಕಳಿಸಬೇಕೋ? ಬೇಡವೋ ಎನ್ನುವುದನ್ನು ನೀವೇ ನಿರ್ಧರಿಸಬೇಕು. ಮತ್ತೊಮ್ಮೆ ಬಿಜೆಪಿ ಸರ್ಕಾರವನ್ನು ಆಡಳಿತಕ್ಕೆ ತಂದು ಪ್ರಧಾನಿ ಮೋದಿ ಅವರ ಕೈಯನ್ನು ಬಲಪಡಿಸಬೇಕು ಎಂದು ಅಮಿತ್ ಶಾ ವಿನಂತಿಸಿದರು. ಇದನ್ನು ಓದಿ: ಕಾಂಗ್ರೆಸ್‍ನಿಂದ ‘ಕಪ್ಪ’ಕಾಣಿಕೆ: ಯಾರಿಗೆ ಎಷ್ಟು ಹಣ ಸಂದಾಯವಾಗಿದೆ? ಡೈರಿಯಲ್ಲಿ ಏನಿದೆ?

  • ತಾಯಿಯಂತೆ ಇನ್ನೂ 20 ವರ್ಷ ರಾಹುಲ್‍ಗಾಂಧಿ ಅಧ್ಯಕ್ಷ ಸ್ಥಾನ ಬಿಡಲ್ಲ, ಮದ್ವೆಯಾಗೋದೆ ಡೌಟ್- ಆಯನೂರು ಮಂಜುನಾಥ್ ಲೇವಡಿ

    ತಾಯಿಯಂತೆ ಇನ್ನೂ 20 ವರ್ಷ ರಾಹುಲ್‍ಗಾಂಧಿ ಅಧ್ಯಕ್ಷ ಸ್ಥಾನ ಬಿಡಲ್ಲ, ಮದ್ವೆಯಾಗೋದೆ ಡೌಟ್- ಆಯನೂರು ಮಂಜುನಾಥ್ ಲೇವಡಿ

    ಚಿಕ್ಕಮಗಳೂರು: ಆ ರಾಹುಲ್ ಗಾಂಧಿ ಮದುವೆಯಾಗ್ತಾನೆ ಅನ್ನೋದೇ ನಂಗೆ ಡೌಟ್ ಎಂದು ಆಯನೂರು ಮಂಜುನಾಥ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಹಾಗೂ ಅಧ್ಯಕ್ಷರ ವಿರುದ್ಧ ಲೇವಡಿ ಮಾಡಿದ್ದಾರೆ.

    ಚಿಕ್ಕಮಗಳೂರು ಜಿಲ್ಲೆ ಕೊಪ್ಪದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು, ತನ್ನ ತಾಯಿಯಂತೆ ಇನ್ನೂ 20 ವರ್ಷ ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನವನ್ನ ಬಿಡೋದಿಲ್ಲ. ಅವನು ಮದುವೆಯಾಗಿ, ಅವನಿಗೆ ಮಕ್ಕಳಾಗಿ, ಅದು ದೊಡ್ಡದಾದ ಮೇಲೆ ಅದು ಮುಂದಿನ ಅಧ್ಯಕ್ಷ. ಆ ರಾಹುಲ್ ಗಾಂಧಿ ಮದುವೆಯಾಗ್ತಾನೆ ಅನ್ನೋದೇ ಡೌಟ್ ನಂಗೆ. ಕಾಂಗ್ರೆಸ್‍ನಲ್ಲಿ ಅಧ್ಯಕ್ಷರಾಗುವಂತಹಾ ಯೋಗ್ಯತೆ ಯಾರಿಗೂ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.

    ಇದೇ ವೇಳೆ ಕೇಂದ್ರ ಸಚಿವ ಸದಾನಂದಗೌಡ ಮಾತನಾಡಿ, ಸಿದ್ದರಾಮಯ್ಯನವರಿಗೆ ನಾಚಿಕೆಯಾಗಬೇಕು. ನಿಮ್ಮ ದುಡ್ಡು ತಿನ್ನೋದೇ ನಮ್ಮ ಜವಾಬ್ದಾರಿ ಅಂತ ಅವರು ತಿಳಿದುಕೊಂಡಿದ್ದಾರೆ. ನಿಮ್ಮ ಖರ್ಚಿನಲ್ಲಿ ನಮ್ಮ ಯಾತ್ರೆ ಮಾಡೋದು ಅಂತ ನಿಶ್ಚಯ ಮಾಡ್ಕೊಂಡು ಇವತ್ತು ಯಾತ್ರೆ ಮಾಡ್ತಿರೋ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ಸಿಗರಿಗೆ ನಾಚಿಕೆಯಾಗ್ಬೇಕು ಎಂದು ಕಿಡಿಕಾರಿದ್ರು.