Tag: parimala nagappa

  • ಸತ್ತು 14 ವರ್ಷಗಳೇ ಕಳೆದ್ರೂ ಚುನಾವಣೆಯಲ್ಲಿ ಇಂದಿಗೂ ವೀರಪ್ಪನ್ ಹೆಸರು ಬಳಕೆ

    ಸತ್ತು 14 ವರ್ಷಗಳೇ ಕಳೆದ್ರೂ ಚುನಾವಣೆಯಲ್ಲಿ ಇಂದಿಗೂ ವೀರಪ್ಪನ್ ಹೆಸರು ಬಳಕೆ

    ಚಾಮರಾಜನಗರ: ನರಹಂತಕ ವೀರಪ್ಪನ್ ಸತ್ತು 14 ವರ್ಷಗಳು ಉರುಳಿದ್ರೂ ಆತನ ಹೆಸರು ಇಂದಿಗೂ ಸಹ ಚುನಾವಣೆ ಸಂದರ್ಭದಲ್ಲಿ ಪ್ರಚಲಿತಕ್ಕೆ ಬರುತ್ತಿದ್ದು, ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ತನ್ನ ಪುತ್ರನನ್ನು ಗೆಲ್ಲಿಸಲು ತಾಯಿಯೊಬ್ಬರು ವೀರಪ್ಪನ್ ಹೆಸರನ್ನು ಎಳೆದು ತರುತ್ತಿದ್ದಾರೆ.

    ಕಾಡುಗಳ್ಳ ವೀರಪ್ಪನ್ ಹತ್ಯೆ ನಡೆದು 14 ವರ್ಷ ಕಳೆದಿದೆ. ಆದರೂ ವೀರಪ್ಪನ್ ಹೆಸರಲ್ಲಿ ಚಾಮರಾಜನಗರದ ಹನೂರಿನಲ್ಲಿ ಚುನಾವಣಾ ರಾಜಕೀಯ ನಡೆಯುತ್ತಿದೆ. ಬಿಜೆಪಿ ಅಭ್ಯರ್ಥಿ ಪ್ರೀತಂ ಪರ ಮಾಜಿ ಶಾಸಕಿ ಪರಿಮಳಾ ನಾಗಪ್ಪ ಅವರು ವೀರಪ್ಪನ್ ದಾಳ ಉರುಳಿಸಿದ್ದಾರೆ. ವೀರಪ್ಪನ್ ಇದ್ದಾಗ ಹೆದರಿಸಿ ಕಾಂಗ್ರೆಸ್‍ಗೆ ವೋಟ್ ಹಾಕಿಸುತ್ತಿದ್ದ. ಈಗ ಅವನಿಲ್ಲ, ನನ್ ಮಗನಿಗೆ ಮತ ನೀಡಿ ಗೆಲ್ಲಿಸಿ ಅಂತಾ ಹೋದಲ್ಲಿ ಬಂದಲ್ಲಿ ಮನವಿ ಮಾಡುತ್ತಿದ್ದಾರೆ.

    ಯಾವಗಾಲೂ ಕಾಡಲ್ಲೆ ಇರುತ್ತಿದ್ದ ವೀರಪ್ಪನ್ ಚುನಾವಣೆ ಸಮಯದಲ್ಲಿ ಮಾತ್ರ ಕಾಡಂಚಿನ ಗ್ರಾಮಗಳಲ್ಲಿ ಕಾಣಿಸಿಕೊಳ್ಳೂತ್ತಿದ್ದನು. ಆಗಿನ ಕಾಂಗ್ರೆಸ್ ಅಭ್ಯರ್ಥಿ ರಾಜೂಗೌಡರ ಪರ ಪ್ರಚಾರ ಮಾಡುತ್ತಿದ್ದನು ಎಂಬುದನ್ನು ಜನ ಈಗಲೂ ಮರೆತಿಲ್ಲ ಎಂದು ಸ್ಥಳಿಯ ಬಸವರಾಜು ಹೇಳಿದ್ದಾರೆ.

    ವೀರಪ್ಪನ್ ಮೃತಪಟ್ಟು ದಶಕವೇ ಆದರೂ ಆತನನ್ನ ಚುನಾವಣೆ ರಾಜಕೀಯಕ್ಕೆ ಎಳೆದು ತರೋದು ನಿಂತಿಲ್ಲ.

  • ಹನೂರು ಕ್ಷೇತ್ರದಿಂದಲೇ ಸ್ವರ್ಧಿಸುವ ಬಯಕೆ: ಮಾಜಿ ಸಚಿವ ವಿ.ಸೋಮಣ್ಣ

    ಹನೂರು ಕ್ಷೇತ್ರದಿಂದಲೇ ಸ್ವರ್ಧಿಸುವ ಬಯಕೆ: ಮಾಜಿ ಸಚಿವ ವಿ.ಸೋಮಣ್ಣ

    -ಯಾವುದೇ ಷರತ್ತು ಇಲ್ಲದೇ ಪರಿಮಳಾ ನಾಗಪ್ಪ ಪಕ್ಷಕ್ಕೆ ಬರಲಿ

    ಮೈಸೂರು: ನಾನು ಚಾಮರಾಜನಗರ ಜಿಲ್ಲೆಯ ಹನೂರು ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ. ಇದೇ ನನ್ನ ಆಸೆಯಾಗಿದೆ. ಹೀಗಾಗಿ ನನ್ನ ಈ ಬಯಕೆಯನ್ನು ವರಿಷ್ಠರ ಗಮನಕ್ಕೆ ತಂದಿದ್ದೇನೆ ಎಂದು ಮಾಜಿ ಸಚಿವ ವಿ.ಸೋಮಣ್ಣ ಹೇಳಿದ್ರು.

    ಅವರು ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷಕ್ಕೆ ಸೇರ್ಪಡೆ ಆಗುತ್ತಿರುವ ಪರಿಮಳಾ ನಾಗಪ್ಪ ಅವರು ಯಾವುದೇ ಷರತ್ತು ಇಲ್ಲದೇ ಬಿಜೆಪಿಗೆ ಸೇರಲಿ. ಅವರಂತವರು ಹಾಗು ನನ್ನಂತವರು ಪಕ್ಷಕ್ಕೆ ನೂರಾರು ಜನ ಬರ್ತಾರೆ ಹೋಗ್ತಾರೆ. ಆದರೆ ಅವರು ಟಿಕೆಟ್ ನೀಡಿದ್ರೆ ಮಾತ್ರ ಪಕ್ಷಕ್ಕೆ ಬರುವುದಾಗಿ ತಿಳಿಸಿದ್ದಾರೆ. ಇಂತಹ ಹೇಳಿಕೆಗಳು ಸರಿಯಲ್ಲ ಎಂದು ಸೋಮಣ್ಣ ಹೇಳಿದರು.

    ಪರಿಮಳಾ ನಾಗಪ್ಪ ಅವರು ಪಕ್ಷಕ್ಕೆ ಬರುವುದಕ್ಕೆ ಆಂತರಿಕ ವಿರೋಧ ಇಲ್ಲ. ಆದರೆ ಅವರು ಯಾವುದೇ ಷರತ್ತು ಇಲ್ಲದೇ ಬಿಜೆಪಿ ಪಕ್ಷಕ್ಕೆ ಬರಬೇಕು ಎಂದು ಸೋಮಣ್ಣ ಅವರು ಪರಿಮಳಾ ನಾಗಪ್ಪ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.

     

  • ತೆನೆ ಹೊರೆ ಇಳಿಸಿ ಕಮಲ ಹಿಡಿದ ದಿನಕರ್ ಶೆಟ್ಟಿ

    ತೆನೆ ಹೊರೆ ಇಳಿಸಿ ಕಮಲ ಹಿಡಿದ ದಿನಕರ್ ಶೆಟ್ಟಿ

    – ಮುಂದಿನ ತಿಂಗಳು ಮಾಜಿ ಶಾಸಕಿ ಪರಿಮಳ ನಾಗಪ್ಪ ಬಿಜೆಪಿ ಸೇರ್ಪಡೆ

    ಬೆಂಗಳೂರು: ವಿಧಾನಸಭೆ ಚುನಾವಣೆಗೂ ಮೊದಲೇ ಪಕ್ಷಾಂತರ ಪರ್ವ ಜೋರಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕುಮುಟಾ ಕ್ಷೇತ್ರದ ಮಾಜಿ ಶಾಸಕ ದಿನಕರ್ ಶೆಟ್ಟಿ ಜೆಡಿಎಸ್‍ಗೆ ಗುಡ್‍ಬೈ ಹೇಳಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.

    ಇಂದು ಬೆಂಗಳೂರಿನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಪಕ್ಷದ ರಾಜ್ಯಧ್ಯಕ್ಷ ಬಿಎಸ್ ಯಡಿಯರೂಪ್ಪ ಸಮ್ಮುಖದಲ್ಲಿ ದಿನಕರ್ ಶೆಟ್ಟಿ ಕಮಲ ಪಕ್ಷ ಸೇರ್ಪಡೆಯಾಗಿದ್ದಾರೆ. 2008ರಲ್ಲಿ ಜೆಡಿಎಸ್ ಶಾಸಕರಾಗಿ ದಿನಕರ್ ಶೆಟ್ಟಿ ಆಯ್ಕೆ ಆಗಿದ್ದರು.

    ಮಾಜಿ ಶಾಸಕಿ ಪರಿಮಳ ನಾಗಪ್ಪ ಕೂಡ ಜೆಡಿಎಸ್‍ಗೆ ಗುಡ್‍ಬೈ ಹೇಳಿ ಬಿಜೆಪಿ ಸೇರಲಿದ್ದಾರೆ. ಮಾರ್ಚ್ 16ರಂದು ಮಲೆಮಹದೇಶ್ವರ ಬೆಟ್ಟದಲ್ಲಿ ಯಡಿಯೂರಪ್ಪ ಸಮ್ಮುಖದಲ್ಲಿ ಪರಿಮಳ ನಾಗಪ್ಪ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಚಾಮರಾಜನಗರದಲ್ಲಿ ಪ್ರಭಾವಿ ನಾಯಕಿಯಾಗಿರುವ ಪರಿಮಳ ನಾಗಪ್ಪ ಹನೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ.