Tag: Paresh Rawal

  • ಲಸಿಕೆ ಪಡೆದಿದ್ದ ಪರೇಶ್ ರಾವಲ್‍ಗೆ ಕೊರೊನಾ ಸೋಂಕು

    ಲಸಿಕೆ ಪಡೆದಿದ್ದ ಪರೇಶ್ ರಾವಲ್‍ಗೆ ಕೊರೊನಾ ಸೋಂಕು

    ನವದೆಹಲಿ: ಕೊರೊನಾ ಮೊದಲ ಡೋಸ್ ಲಸಿಕೆ ಪಡೆದ ನಂತರ ಲೋಕಸಭಾ ಸದಸ್ಯ, ಬಾಲಿವುಡ್ ನಟ ಪರೇಶ್ ರಾವಲ್ ಅವರಿಗೆ ಕೋವಿಡ್ 19 ದೃಢಪಟ್ಟಿದೆ.

    ದುರಾದೃಷ್ಟವಶಾತ್, ನಾನು ಕೊರೊನಾ ಪರೀಕ್ಷೆಯನ್ನು ಮಾಡಿಕಸಿಕೊಂಡಾಗ ನನಗೆ ಸೋಂಕು ಇರುವುದು ಖಚಿತವಾಗಿದೆ. ಕಳೆದ 10 ದಿನಗಳಲ್ಲಿ ನನ್ನೊಂದಿಗೆ ಸಂಪರ್ಕಕ್ಕೆ ಬಂದವರೆಲ್ಲರೂ ದಯವಿಟ್ಟು ತಮ್ಮನ್ನು ತಾವೇ ಪರೀಕ್ಷಿಸಿಕೊಳ್ಳಿ ಎಂದು ಪರೇಶ್ ರಾವಲ್ ಟ್ವೀಟ್ ಮಾಡಿದ್ದಾರೆ.

    ಪರೇಶ್ ರಾವಲ್(65) ಅವರು ಮಾರ್ಚ್ 9 ರಂದು ಮೊದಲ ಲಸಿಕೆ ಪಡೆದಿದ್ದರು. ಲಸಿಕೆ ಪಡೆದಿರುaವ ವಿಚಾರವನ್ನು ಟ್ವೀಟ್‍ನಲ್ಲಿ ತಿಳಿಸಿದ್ದರು. ಲಸಿಕೆಗಾಗಿ ಎಲ್ಲಾ ವೈದ್ಯರು ಮತ್ತು ದಾದಿಯರು ಮತ್ತು ಮುಂಚೂಣಿಯ ಆರೋಗ್ಯ ಕಾರ್ಯಕರ್ತರು ಮತ್ತು ವಿಜ್ಞಾನಿಗಳಿಗೆ ಧನ್ಯವಾದಗಳು. ಧನ್ಯವಾದಗಳು, ನರೇಂದ್ರ ಮೋದಿ ಎಂದು ಬೆರೆದುಕೊಂಡು ಲಸಿಕೆ ಕೇಂದ್ರದಲ್ಲಿ ಕ್ಲಿಕ್ ಮಾಡಿದ ಫೆÇೀಟೋವನ್ನು ಹಂಚಿಕೊಂಡಿದ್ದರು.

    ಕಳೆದ 24 ಗಂಟೆಗಳಲ್ಲಿ ಭಾರತವು 62,258 ಹೊಸ ಕರೋನ ವೈರಸ್ ಪ್ರಕರಣಗಳನ್ನು ದಾಖಲಾಗಿವೆ. ಇತ್ತೀಚಿನ ದಿನಗಳಲ್ಲಿ, ಮಿಲಿಂದ್ ಸೋಮನ್, ಆರ್ ಮಾಧವನ್, ಅಮೀರ್ ಖಾನ್, ರಣಬೀರ್ ಕಪೂರ್, ಕಾರ್ತಿಕ್ ಆರ್ಯನ್, ರೋಹಿತ್ ಸರಫ್, ಸಿದ್ಧಾಂತ್ ಚತುರ್ವೇದಿ, ಮನೋಜ್ ಬಾಜಪೇಯಿ, ರಣವೀರ್ ಶೋರೆ ಮುಂತಾದ ಗಣ್ಯರಲ್ಲಿ ಸೋಂಕು ಕಾಣಿಸಿಕೊಂಡಿದೆ. ಸಲ್ಮಾನ್ ಖಾನ್, ಸಂಜಯ್ ದತ್, ಧಮೇರ್ಂದ್ರ, ನಾಗಾರ್ಜುನ, ನೀನಾ ಗುಪ್ತಾ ಮುಂತಾದ ನಟರು ಈಗಾಗಲೇ ಲಸಿಕೆಯ ಮೊದಲ ಪ್ರಮಾಣವನ್ನು ಸ್ವೀಕರಿಸಿದ್ದಾರೆ.

  • ಪರೇಶ್ ರಾವಲ್ ಬದಲು ಎಚ್.ಎಸ್.ಪಟೇಲ್‍ಗೆ ಬಿಜೆಪಿ ಟಿಕೆಟ್

    ಪರೇಶ್ ರಾವಲ್ ಬದಲು ಎಚ್.ಎಸ್.ಪಟೇಲ್‍ಗೆ ಬಿಜೆಪಿ ಟಿಕೆಟ್

    ಗಾಂಧಿನಗರ: ನಟ, ಹಾಲಿ ಸಂಸದ ಪರೇಶ್ ರಾವಲ್ ಬದಲಾಗಿ ಹಸ್ಮುಖ್ ಎಸ್. ಪಟೇಲ್ ಅವರನ್ನು ಗುಜರಾತ್‍ನ ಅಹಮದಾಬಾದ್ ಪೂರ್ವ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯು ಕಣಕ್ಕೆ ಇಳಿಸಿದೆ.

    ಹಸ್ಮುಖ್ ಎಸ್ ಪಟೇಲ್ ಅವರ ಹೆಸರನ್ನು ಬಿಜೆಪಿ ಹೈಕಮಾಂಡ್ ಬುಧವಾರ ಘೋಷಣೆ ಮಾಡಿದೆ. ಎಚ್.ಎಸ್.ಪಟೇಲ್ ಅವರು ಗುಜರಾತ್‍ನ ಅಮ್ರಾವಾಡಿ ವಿಧಾನಸಭಾ ಕ್ಷೇತ್ರದಿಂದ ಅವರು 2012 ಹಾಗೂ 2017ರಲ್ಲಿ ಆಯ್ಕೆಯಾಗಿದ್ದರು.

    ಪರೇಶ್ ರಾವಲ್ ಅವರು 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು ಜಯಗಳಿಸಿದ್ದರು. ಆದರೆ ಈ ಬಾರಿ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಹೀಗಾಗಿ ಅವರ ಬದಲಾಗಿ ಎಚ್.ಎಸ್.ಪಟೇಲ್ ಅವರಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ.

    ನಾನು ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಐದು ತಿಂಗಳ ಹಿಂದೆಯೇ ತಿಳಿಸಿದ್ದೆ. ಇದು ಪಕ್ಷದ ಅಂತಿಮ ನಿರ್ಧಾರ ಕೂಡ ಆಗಿದೆ ಎಂದು ಪರೇಶ್ ರಾವಲ್ ತಿಳಿಸಿದ್ದಾರೆ.

    ಈ ಹಿಂದೆ ಟ್ವೀಟ್ ಮೂಲಕ ಚುನಾವಣೆ ಬಗ್ಗೆ ಹೇಳಿಕೊಂಡಿದ್ದ ಪರೇಶ್ ಅವರು, ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ. ಪ್ರಧಾನಿ ನರೇಂದ್ರ ಮೋದಿ ಅವರ ಗೆಲುವಿಗಾಗಿ ನಾನು ಶ್ರಮಿಸುತ್ತೇನೆ. ಆದರೆ ಪಕ್ಷ ಈ ಬಾರಿ ಟಿಕೆಟ್ ನೀಡಿದರೂ ಸ್ಪರ್ಧೆ ಮಾಡುವುದಿಲ್ಲ. ರಾಜಕೀಯ ಜೀವನದಲ್ಲಿ ನನಗೆ ಆಸಕ್ತಿಯಿಲ್ಲ ಎಂದು ತಿಳಿಸಿದ್ದರು.

  • ಟ್ವಿಟ್ಟರ್‍ಗೆ ಸೋನು ನಿಗಮ್ ಗುಡ್‍ಬೈ

    ಟ್ವಿಟ್ಟರ್‍ಗೆ ಸೋನು ನಿಗಮ್ ಗುಡ್‍ಬೈ

    ಮುಂಬೈ: ಗಾಯಕ ಸೋನು ನಿಗಮ್ ಸರಣಿ ಟ್ವೀಟ್ ಮಾಡಿ ಟ್ವಿಟ್ಟರ್‍ಗೆ ಗುಡ್ ಬೈ ಹೇಳಿದ್ದಾರೆ.

    ಟ್ವಿಟ್ಟರ್ ಖಾತೆಯನ್ನ ಡಿಲೀಟ್ ಮಾಡುವ ಮೊದಲು ಟ್ವೀಟ್ ಮಾಡಿದ್ದ ಸೋನು ನಿಗಮ್, ಮಾಧ್ಯಮದವರೇ ಹಾಗೂ ಟ್ವಿಟ್ಟರ್ ಬಳಕೆದಾರರೇ ನನ್ನ ಸಂದೇಶಗಳ ಸ್ಕ್ರೀನ್‍ಶಾಟ್ ತೆಗೆದಿಟ್ಟುಕೊಳ್ಳಿ. ಯಾಕಂದ್ರೆ ಇನ್ನು ಹೆಚ್ಚು ಸಮಯ ಅವು ಇಲ್ಲಿರುವುದಿಲ್ಲ ಎಂದು ಹೇಳಿದ್ದರು.

    ನಾನು ಟ್ವಿಟ್ಟರ್‍ಗೆ ಇಂದು ಗುಡ್‍ಬೈ ಹೇಳಲಿದ್ದೇನೆ. 70 ಲಕ್ಷ ಫಾಲೋವರ್‍ಗಳಲ್ಲಿ ಬಹುತೇಕರಿಗೆ ಇದರಿಂದ ನಿರಾಸೆಯಾಗಲಿದೆ. ಆದ್ರೆ ಕೆಲವು ಸ್ಯಾಡಿಸ್ಟ್ ಗಳಿಗೆ ಖುಷಿಯಾಗಲಿದೆ. ನಿದ್ದೆ ಮಾಡುತ್ತಿರುವವರನ್ನು ಎಬ್ಬಿಸಬಹುದು. ಆದ್ರೆ ನಿದ್ರಿಸುವಂತೆ ನಟಿಸೋರನ್ನ ಎಬ್ಬಿಸಲು ಸಾಧ್ಯವಿಲ್ಲ ಅನ್ನೋದು ನನಗೆ ಅರ್ಥವಾಗಿದೆ. ಮಾಧ್ಯಮಗಳು ಕೂಡ ಎರಡು ಭಾಗಗಳಾಗಿವೆ. ಕೆಲವು ರಾಷ್ಟ್ರೀಯವಾದಿಗಳು ಹಾಗೂ ಮೋಸಗಾರರು ಇತಿಹಾಸದಲ್ಲಿನ ದ್ರೋಹಿಗಳಿಂದ ಪಾಠ ಕಲಿಯಲು ಸಿದ್ಧರಿಲ್ಲ ಎಂದು ಟ್ವೀಟ್ ಮಾಡಿದ್ದರು.

    ನನ್ನ ಸಮತೋಲನವಾದ ಅಭಿಪ್ರಾಯಕ್ಕೆ ಅನೇಕ ಜನ ಪ್ರೀತಿ ತೋರೋದನ್ನ ನೋಡಿದ್ದೇನೆ. ಹಾಗೆ ಇನ್ನೂ ಕೆಲವರು ಕಾರಣವಿಲ್ಲದೆ, ತರ್ಕಬದ್ಧವಲ್ಲದ ಹೇಳಿಕೆಗಳನ್ನ ನೀಡ್ತಾರೆ. ಕೆಲವರು ನಿಮ್ಮನ್ನು ಹಾರೈಸುತ್ತಾರೆ. ಆದ್ರೆ ಇನ್ನೂ ಕೆಲವರು ಸಾಯಲಿ ಅಂತ ಇಚ್ಛಿಸುತ್ತಾರೆ. ಕೆಲ ಯುವ ಹುಡುಗ, ಹುಡುಗಿಯರು, ಮಕ್ಕಳೂ ಕೂಡ ಉಗ್ರರಂತೆ ವರ್ತಿಸುತ್ತಾರೆ ಎಂದು ಸೋನು ನಿಗಮ್ ಹೇಳಿದ್ರು.

    ಸೇನೆಯ ಜೀಪ್‍ಗೆ ಕಲ್ಲು ತೂರಾಟ ಮಾಡುವವರ ಬದಲು ಲೇಖಕಿ ಅರುಂಧತಿ ರಾಯ್ ಅವರನ್ನ ಕಟ್ಟಬೇಕು ಎಂಬ ಬಿಜೆಪಿ ಸಂಸದ ಹಾಗೂ ನಟ ಪರೇಶ್ ರಾವಲ್ ಅವರ ಹೇಳಿಕೆಯನ್ನ ಸೋನು ನಿಗಮ್ ಸಮರ್ಥಿಸಿಕೊಂಡಿದ್ದಾರೆ. ಸೇನೆಯ ಜೀಪ್ ಮುಂದೆ ಯುವತಿಯೊಬ್ಬಳು ಗೌತಮ್ ಗಂಭೀರ್ ಚಿತ್ರವನ್ನ ಪ್ರದರ್ಶಿಸುವಾಗ ಅದನ್ನೇ ಬೇರೊಬ್ಬರಿಗೆ ಮಾಡಿದ್ದಕ್ಕೆ ಪರೇಶ್ ರಾವಲ್‍ರನ್ನ ಟೀಕಿಸುತ್ತಿದ್ದಾರೆ. ಅರುಂಧತಿ ರಾಯ್ ಅವರಿಗೆ ಕಾಶ್ಮೀರದ ಬಗ್ಗೆ ಅಭಿಪ್ರಾಯ ಹೊಂದಿರಲು ಹೇಗೆ ಹಕ್ಕಿದೆಯೋ ಹಾಗೇ ಇತರೆ ಕೋಟ್ಯಾಂತರ ಭಾರತೀಯರಿಗೆ ಇದರಿಂದ ಬೇಸರವಾಗಲು ಕೂಡ ಹಕ್ಕಿದೆಯಲ್ಲವೇ ಎಂದೆಲ್ಲಾ ಸೋನು ನಿಗಮ್ ಟ್ವೀಟ್ ಮಾಡಿದ್ರು. ಈ ವೇದಿಕೆ ಏಕಪಕ್ಷೀಯವಾಗಿದೆ. ಆದ್ದರಿಂದ ಟ್ವಿಟ್ಟರ್‍ಗೆ ಗುಡ್‍ಬೈ ಹೇಳುತ್ತಿದ್ದೇನೆ ಎಂದು ಅವರು ತಿಳಿಸಿದ್ರು.

    ಕಾಶ್ಮೀರದಲ್ಲಿ ಸೇನೆಯ ಜೀಪ್‍ಗೆ ಕಲ್ಲು ತೂರಾಟ ಮಾಡಿದವರನ್ನ ಕಟ್ಟೋ ಬದಲು ಅರುಂಧತಿ ರಾಯ್ ಅವರನ್ನ ಕಟ್ಟಬೇಕು ಎಂದು ಪರೇಶ್ ರಾವಲ್ ಟ್ವೀಟ್ ಮಾಡಿದ್ದರು.

    ಸೋನು ನಿಗಮ್ ಈ ಹಿಂದೆ ಧ್ವನಿವರ್ಧಕದ ಮೂಲಕ ಬೆಳಗ್ಗೆ ಅಜಾನ್ ಮೊಳಗಿಸುವುದನ್ನು ವಿರೋಧಿಸಿ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

  • ಕಲ್ಲು ತೂರುವವರ ಬದಲು ಅರುಂಧತಿ ರಾಯ್‍ನ ಜೀಪಿಗೆ ಕಟ್ಟಿ: ಬಿಜೆಪಿ ಸಂಸದ ಪರೇಶ್ ರಾವಲ್

    ಕಲ್ಲು ತೂರುವವರ ಬದಲು ಅರುಂಧತಿ ರಾಯ್‍ನ ಜೀಪಿಗೆ ಕಟ್ಟಿ: ಬಿಜೆಪಿ ಸಂಸದ ಪರೇಶ್ ರಾವಲ್

    ನವದೆಹಲಿ: ಕಲ್ಲು ತೂರಾಟ ನಡೆಸುವವರನ್ನು ಜೀಪಿಗೆ ಕಟ್ಟುವ ಬದಲು ಲೇಖಕಿ ಅರುಂಧತಿ ರಾಯ್ ಅವರನ್ನು ಕಟ್ಟಿ ಎಂದು ಬಿಜೆಪಿ ಸಂಸದ ಪರೇಶ್ ರಾವಲ್ ವಿವಾದಾತ್ಮಕ ಟ್ವೀಟ್ ಮಾಡಿದ್ದಾರೆ.

    ಕಾಶ್ಮೀರದಲ್ಲಿ ಸೈನಿಕರ ಮೇಲೆ ಕಲ್ಲು ತೂರಾಟ ನಡೆಸುವವರನ್ನು ಸೇನೆಯ ಜೀಪಿನ ಮುಂಭಾಗಕ್ಕೆ ಕಟ್ಟಿದ್ದರ ಹಿನ್ನೆಲೆಯಲ್ಲಿ, ಕಲ್ಲು ತೂರಾಟ ನಡೆಸುವವರ ಬದಲು ಲೇಖಕಿ ಅರುಂಧತಿ ರಾಯ್ ಅವರನ್ನು ಕಟ್ಟಿ ಎಂದು ಪರೇಶ್ ರಾವಲ್ ಟ್ವೀಟ್ ಮಾಡಿದ್ದಾರೆ. ಪರೇಶ್ ರಾವಲ್ ಭಾನುವಾರ ರಾತ್ರಿ ಈ ರೀತಿಯಾಗಿ ಟ್ವಿಟ್ಟರ್‍ನಲ್ಲಿ ಬರೆದುಕೊಂಡಿದ್ದು, ಈ ಹೇಳಿಕೆಯ ಬಗ್ಗೆ ಪರ-ವಿರೋಧ ಚರ್ಚೆ ನಡೆಯುತ್ತಿದೆ.

    ಅರುಂಧತಿ ರಾಯ್ ಭಾರತೀಯ ಸೇನೆಯ ವಿರುದ್ಧ ಮಾತನಾಡಿದ್ದರು ಎಂಬ ಹಿನ್ನೆಲೆಯಲ್ಲಿ ರಾವಲ್ ಈ ರೀತಿ ಟ್ವೀಟ್ ಮಾಡಿದ್ದಾರೆಂದು ವರದಿಯಾಗಿದೆ.

    ಇದನ್ನೂ ಓದಿ: ಕಲ್ಲು ತೂರಿದ್ದ ಯುವಕನನ್ನು ಜೀಪಿಗೆ ಕಟ್ಟಿ ಮೆರವಣಿಗೆ ಮಾಡಿದ್ದ ಅಧಿಕಾರಿಗೆ ಸೇನೆಯಿಂದ ಪ್ರಶಸ್ತಿ

    ಪರೇಶ್ ರಾವಲ್ ಟ್ವೀಟ್‍ಗೆ ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿದ್ದು, `ನಿಮಗೆ ಅರುಂಧತಿ ರಾಯ್ ಸಿಗದಿದ್ರೆ, ಪತ್ರಕರ್ತೆ ಸಾಗಾರಿಕಾ ಘೋಷ್ ಅವರನ್ನು ಜೀಪಿನ ಮುಂಭಾಗಕ್ಕೆ ಕಟ್ಟಬಹುದು. ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‍ಗೆ ಪ್ರತಿಕ್ರಿಯಿಸಿರುವ ರಾವಲ್ `ನಮ್ಮ ಮುಂದೆ ಹಲವು ಆಯ್ಕೆಗಳಿವೆ’ ಎಂದು ಹೇಳಿದ್ದಾರೆ.

    ಪರೇಶ್ ರಾವಲ್ ಟ್ವೀಟ್‍ಗೆ ಅರುಂಧತಿ ರಾಯ್ ಇದೂವರೆಗೂ ಪ್ರತಿಕ್ರಿಯೆ ನೀಡಿಲ್ಲ. ಆದರೆ ಪತ್ರಕರ್ತೆ ಸಾಗರಿಕಾ ಘೋಷ್ ಪ್ರತಿಕ್ರಿಯಿಸಿದ್ದು, `ಅದ್ಭುತ ಸರ್, ತುಂಬಾ ಒಳ್ಳೆಯದು. ನೀವೊಬ್ಬ ಮಾದರಿ ಸಂಸದೀಯ ಪಟು’ ಎಂದು ವ್ಯಂಗ್ಯ ಮಾಡಿದ್ದಾರೆ.

    ಈ ಟ್ವೀಟ್‍ಗೆ ಕಾಂಗ್ರೆಸ್‍ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಪ್ರತಿಕ್ರಿಯಿಸಿ, `ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಡಿಪಿ ಬಿಜೆಪಿ ನಡುವೆ ಮೈತ್ರಿ ಬೆಸೆದವರನ್ನು ಯಾಕೆ ಜೀಪಿಗೆ ಕಟ್ಟಬಾರದು’ ಎಂದಿದ್ದಾರೆ.

     

    https://twitter.com/SirPareshRawal/status/866345474722320388