Tag: Paresh Mesta case

  • ಮಗನ ಸಾವಿನ ಪ್ರಕರಣವನ್ನು ಮತ್ತೆ ಸಿಬಿಐಗೆ ಒಪ್ಪಿಸಿ – ಸಿಎಂಗೆ ಮನವಿ ಸಲ್ಲಿಸಿದ ಪರೇಶ್ ಮೆಸ್ತಾ ತಂದೆ

    ಮಗನ ಸಾವಿನ ಪ್ರಕರಣವನ್ನು ಮತ್ತೆ ಸಿಬಿಐಗೆ ಒಪ್ಪಿಸಿ – ಸಿಎಂಗೆ ಮನವಿ ಸಲ್ಲಿಸಿದ ಪರೇಶ್ ಮೆಸ್ತಾ ತಂದೆ

    ಬೆಂಗಳೂರು: ಉತ್ತರ ಕನ್ನಡ ಜಿಲ್ಲೆ ಕುಮಟಾ ಭಾಗದಲ್ಲಿ ನಡೆದಿದ್ದ ಪರೇಶ್ ಮೆಸ್ತಾ (Paresh Mesta) ಸಾವಿನ ಪ್ರಕರಣವನ್ನು ಮತ್ತೆ ಸಿಬಿಐ (CBI) ಮೂಲಕ ತನಿಖೆ ಮಾಡಿಸುವಂತೆ ಪರೇಶ್ ಮೆಸ್ತಾ ತಂದೆ ಕಮಾಲಾಕರ್ ಮೆಸ್ತಾ ಸಿಎಂ ಬಸವರಾಜ ಬೊಮ್ಮಾಯಿಗೆ (Basavaraj Bommai) ಮನವಿ ಸಲ್ಲಿಸಿದ್ದಾರೆ.

    ವಿಧಾನಸೌಧದಲ್ಲಿ ಸಿಎಂ ಭೇಟಿಯಾದ ಕಮಲಾಕರ್ ಮೆಸ್ತಾ, ನನ್ನ ಮಗನ ಸಾವು ಅಸಹಜ ಸಾವಾಗಿದೆ. ಸಿಬಿಐಗೆ ಸಾಕ್ಷಾಧಾರಗಳು ಲಭ್ಯ ಆಗಿಲ್ಲ ಎಂಬ ಕಾರಣಕ್ಕೆ ಬಿ ರಿಪೋರ್ಟ್‌ (B Report) ಸಲ್ಲಿಸಿದೆ. ಇದರಿಂದ ನನಗೆ ನ್ಯಾಯ ವಂಚನೆ ಆಗಿದೆ. ನನ್ನ ಮಗ ಪರೇಶ್ ಮೆಸ್ತಾನ ಪ್ರಕರಣವನ್ನು ಸಿಬಿಐಗೆ ನೀಡುವಾಗ 4 ತಿಂಗಳ ಅವಧಿ ಮೀರಿತ್ತು. ಬಹುತೇಕ ಸಾಕ್ಷಾಧಾರಗಳು ನಾಶ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಮತ್ತಷ್ಟು ಆಳವಾದ ತನಿಖೆ ಮಾಡಬೇಕಾದ ಅವಶ್ಯಕತೆ ಇದೆ. ಹೀಗಾಗಿ ಪ್ರಕರಣವನ್ನು ಸಿಬಿಐ ಮರು ತನಿಖೆಗೆ ಆದೇಶ ನೀಡಬೇಕೆಂದು ಸಿಎಂಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಸಾವನ್ನಪ್ಪುವ ಮೊದಲು ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ತೆರಳಿದ್ದ ಮೇಸ್ತಾ – ಸಿಬಿಐ ವರದಿಯಲ್ಲಿ ಬಯಲು

     

    ಕಮಾಲಾಕರ್ ಮೆಸ್ತಾ ಅವರ ಮನವಿಯನ್ನು ಆಲಿಸಿದ ಬೊಮ್ಮಾಯಿ, ತಂದೆಯಾಗಿ ನಿಮ್ಮ ಕಷ್ಟ ಸರ್ಕಾರ ಅರ್ಥಮಾಡಿಕೊಳ್ಳುತ್ತದೆ. ಮನವಿಯನ್ನು ಪರಿಶೀಲಿಸಿ, ಪುನರ್ ತನಿಖೆಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಇದನ್ನೂ ಓದಿ: SC-ST ಮೀಸಲಾತಿ ಹೆಚ್ಚಳಕ್ಕೆ ಸುಗ್ರೀವಾಜ್ಞೆ ಹೊರಡಿಸಲು ಮುಂದಾದ ಸರ್ಕಾರ

    Live Tv
    [brid partner=56869869 player=32851 video=960834 autoplay=true]

  • ಪರೇಶ್ ಮೇಸ್ತಾ ಕೇಸ್ ರೀ ಓಪನ್‍ಗೆ ಒತ್ತಡ – ಸರ್ಕಾರ ಸೈಲೆಂಟ್

    ಪರೇಶ್ ಮೇಸ್ತಾ ಕೇಸ್ ರೀ ಓಪನ್‍ಗೆ ಒತ್ತಡ – ಸರ್ಕಾರ ಸೈಲೆಂಟ್

    ಬೆಂಗಳೂರು: ಪರೇಶ್ ಮೇಸ್ತಾ ಕೇಸ್ (Paresh Mesta Case) ರೀ ಓಪನ್‍ಗೆ ಒತ್ತಡ ಜೋರಾಗುತ್ತಿದೆ. ಸರ್ಕಾರದ ಮೇಲೆ ಮಲೆನಾಡು, ಕರಾವಳಿ ಶಾಸಕರು, ಕಾರ್ಯಕರ್ತರಿಂದ ಒತ್ತಡ ಹೆಚ್ಚಾಗಿದ್ದು ಸರ್ಕಾರ (Government) ಆತಂಕದಲ್ಲಿದೆ.

    ಹೊನ್ನಾವರದ ಪರೇಶ್ ಮೇಸ್ತಾ ಕೊಲೆಯಾಗಿಲ್ಲ, ಆಕಸ್ಮಿಕ ಸಾವು ಎಂದು ಸಿಬಿಐ (CBI) ವರದಿ ಕೊಟ್ಟಾಗಿಂದ ಬಿಜೆಪಿಯಲ್ಲಿ (BJP) ಟೆನ್ಶನ್ ಶುರುವಾಗಿದೆ. ಸಿಬಿಐ ವರದಿಗೆ ಪರೇಶ್ ಮೆಸ್ತಾ ತಂದೆ ಕಮಲಾಕರ ಮೆಸ್ತಾ ಕೂಡಾ ಅಸಮಾಧಾನ ವ್ಯಕ್ತಪಡಿಸಿ, ಕೇಸ್‍ನ ಮರು ತನಿಖೆಗೆ ಸರ್ಕಾರ ಆದೇಶಿಸಬೇಕು ಎಂದು ಕಮಲಾಕರ ಮೇಸ್ತಾ ಆಗ್ರಹಿಸಿದ್ದಾರೆ. ಇದನ್ನೂ ಓದಿ: ರಿಷಿ ಸುನಾಕ್‌ಗೆ ಸಿಗುತ್ತಾ ಬ್ರಿಟನ್ ಪ್ರಧಾನಿ ಹುದ್ದೆ?

    ಮರು ತನಿಖೆಗೆ ನೀಡುವುದಾಗಿ ಪರೇಶ್ ಮೆಸ್ತಾ ಕುಟುಂಬಕ್ಕೆ ಬಿಜೆಪಿ ನಾಯಕರು ಭರವಸೆ ನೀಡಿದ್ರು. ಆದ್ರೆ ಕೊಟ್ಟ ಭರವಸೆ ಇನ್ನು ಹಾಗೆಯೇ ಉಳಿದುಕೊಂಡಿದೆ. ಸಿಬಿಐ ವರದಿ ಬಂದು ಈಗಾಗಲೇ ಎರಡು ವಾರಕ್ಕೂ ಹೆಚ್ಚು ಕಾಲವಾಗಿದ್ದು, ಮರು ತನಿಖೆ ಆದೇಶ ನೀಡದೇ ಸರ್ಕಾರ ಸೈಲೆಂಟ್ ಆಗಿದೆ. ಹೀಗಾಗಿ ಮತ್ತೆ ಕೇಸ್ ರೀ ಓಪನ್ ಮಾಡಬೇಕೆಂದು ಒತ್ತಡ ಜೋರಾಗಿದೆ. ಇದನ್ನೂ ಓದಿ: ಪರೇಶ್ ಮೇಸ್ತಾ ಹತ್ಯೆಯಲ್ಲ, ಅದು ಆಕಸ್ಮಿಕ ಸಾವು – ಸಿಬಿಐ ವರದಿ ಸಲ್ಲಿಕೆ

    2017ರ ಡಿಸೆಂಬರ್ 6ರಂದು ಹೊನ್ನಾವರದಲ್ಲಿ ನಡೆದ ಗಲಭೆಯಲ್ಲಿ ಹೊನ್ನಾವರದ ಮೀನುಗಾರ ಯುವಕ ಪರೇಶ್ ಮೇಸ್ತಾ ಕಾಣೆಯಾಗಿದ್ದ. ಡಿಸೆಂಬರ್ 8 ರಂದು ಹೊನ್ನಾವರ ನಗರದ ಶನಿ ದೇವಸ್ಥಾನದ ಹಿಂಭಾಗದ ಶೆಟ್ಟಿ ಕೆರೆಯಲ್ಲಿ ಪರೇಶ್ ಮೇಸ್ತಾ ಶವ ಪತ್ತೆಯಾಗಿತ್ತು. ಆತನನ್ನು ಅನ್ಯ ಕೋಮಿನವರು ಹತ್ಯೆ ಮಾಡಿದ್ದಾರೆಂದು ಹಿಂದೂ ಸಂಘಟನೆಗಳು ಹಾಗೂ ಬಿಜೆಪಿ ನಾಯಕರು ಆರೋಪಿಸಿದ್ದರು. ಅಷ್ಟೇ ಅಲ್ಲದೇ ಈತನನ್ನು ಹಿಂದೂ ಸಂಘಟನೆಗಳು ಹಿಂದೂ ಕಾರ್ಯಕರ್ತ ಎಂದು ಬಿಂಬಿಸಿದ್ದರಿಂದ ಕೋಮು ಸಂಘರ್ಷಕ್ಕೆ ಕಾರಣವಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ಪರೇಶ್‌ ಮೇಸ್ತಾ ಕೇಸ್‌ ರೀ ಓಪನ್‌ ಆಗಲಿ; CBIನದ್ದು ಮೋಸದ ವರದಿ – ಮುತಾಲಿಕ್‌

    ಪರೇಶ್‌ ಮೇಸ್ತಾ ಕೇಸ್‌ ರೀ ಓಪನ್‌ ಆಗಲಿ; CBIನದ್ದು ಮೋಸದ ವರದಿ – ಮುತಾಲಿಕ್‌

    ಉಡುಪಿ: ಪರೇಶ್‌ ಮೇಸ್ತಾ (Paresh Mesta) ಸಾವು ಪ್ರಕರಣ ರೀ ಓಪನ್‌ ಆಗಲಿ. ಆತನದ್ದು ಕೊಲೆಯಲ್ಲ ಸಹಜ ಸಾವು ಎಂದು ಸಿಬಿಐ (CBI) ಮೋಸದ ವರದಿ ಮಾಡಿದೆ ಎಂದು ವಿಶ್ವ ಹಿಂದೂ ಪರಿಷತ್‌ ಶ್ರೀರಾಮ ಸೇನೆ (Sri Ram Sena) ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ (Pramod Muthalik) ಅಸಮಾಧಾನ ಹೊರಹಾಕಿದ್ದಾರೆ.

    2017ರಲ್ಲಿ ಪರೇಶ್ ಮೇಸ್ತಾ ಹತ್ಯೆ ಆಯಿತು. ಇಡೀ ರಾಜ್ಯಾದ್ಯಂತ ಹಿಂದೂಗಳ ಆಕ್ರೋಶ, ಪ್ರತಿಭಟನೆ ವ್ಯಕ್ತವಾಯಿತು. ಗೃಹ ಸಚಿವ ಅಮಿತ್ ಶಾ (Amit Shah) ಅವರು ಸಂತ್ರಸ್ತರ ಮನೆಗೆ ಭೇಟಿ ಕೊಟ್ಟಿದ್ದರು. ಇಂತಹ ಗಂಭೀರ ಪ್ರಕರಣವಾದಾಗ ಸಿದ್ದರಾಮಯ್ಯ (Siddaramaiah) ಅವರು ಸಿಎಂ ಆಗಿದ್ದರು. ಪ್ರಕರಣವನ್ನು 2019ರಲ್ಲಿ ಸಿಬಿಐಗೆ ಒಪ್ಪಿಸಲಾಗಿತ್ತು ಎಂದು ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ: ಬಿಜೆಪಿ ಗೆದ್ದಿರೋ ಪ್ರತಿಯೊಂದು ಸ್ಥಾನದ ಹಿಂದೆ ಪರೇಶ್‍ನಂತಹ ಅಮಾಯಕರ ರಕ್ತ ಇದೆ: ಸಿದ್ದರಾಮಯ್ಯ

    ಮೂರು ವರ್ಷದ ನಂತರ ಸಿಬಿಐ ʻಬಿʼ ರಿಪೋರ್ಟ್ ಹಾಕಿದೆ. ಸಹಜ ಸಾವು ಎಂದಿರುವುದು ತಪ್ಪು. ಇದು ಅನ್ಯಾಯ. ನಾನು ಇದನ್ನು ಧಿಕ್ಕರಿಸುತ್ತೇನೆ. ಇದು ಅತ್ಯಂತ ಮೋಸ ಮಾಡಿದ ವರದಿ. ಪರೇಶ್ ಮೇಸ್ತಾನನ್ನು ನೂರಕ್ಕೆ ನೂರು ಕೊಲೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

    ಆ ಸಂದರ್ಭದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಎಲ್ಲಾ ಸಾಕ್ಷ್ಯಗಳನ್ನು ನಾಶ ಮಾಡಿದೆ. ಈಗಿನ ಕೇಂದ್ರ ಸರ್ಕಾರ ಕೇಸ್ ಅನ್ನು ರೀ ಓಪನ್ ಮಾಡಬೇಕು. ಸಂಪೂರ್ಣವಾಗಿ ತನಿಖೆ ಮಾಡಬೇಕು. ರಾಜ್ಯಾದ್ಯಂತ ಶ್ರೀರಾಮ ಸೇನೆ ಹೋರಾಟ ಮಾಡುತ್ತದೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಪರೇಶ್ ಮೇಸ್ತಾ ಹತ್ಯೆಯಲ್ಲ, ಅದು ಆಕಸ್ಮಿಕ ಸಾವು – ಸಿಬಿಐ ವರದಿ ಸಲ್ಲಿಕೆ

    ಇದು ಹಿಂದುತ್ವಕ್ಕೆ ಮತ್ತು ಮೇಸ್ತಾ ಕುಟುಂಬಕ್ಕೆ ಅನ್ಯಾಯ ಮಾಡಿದ ವರದಿ. ತಪ್ಪಿತಸ್ಥ ಮುಸ್ಲಿಂ ಗೂಂಡಾ, ಕಿಡಿಗೇಡಿಗಳ ಬಂಧನವಾಗಬೇಕು ಎಂದು ಒತ್ತಾಯಿಸಿದ್ದಾರೆ.

    ಇಂತಿಫದಾ (Intifada) ಕುರಿತು ಮಾತನಾಡಿದ ಅವರು, ನಿಮ್ಮ ಇಂತಿಫದಾ ನಾಗರಿಕ ಸಂಹಾರದ ಆಟ ನಡೆಯಲ್ಲ. ಕೇಂದ್ರ ಒದ್ದು ಒಳಗೆ ಹಾಕಿದ್ರೂ ಬುದ್ದಿ ಬಂದಿಲ್ವಾ? ದೇಶದ ಬದ್ಧತೆಯ ಬಗ್ಗೆ ಎಚ್ಚರವಾಗಿಲ್ಲ ಅಂತ ಅಂದರೆ ಏನರ್ಥ? ಇದೇ ರೀತಿ ಮುಂದುವರಿದರೆ ಭಯಾನಕ ಸ್ಥಿತಿ ಎದುರಾಗುತ್ತದೆ. ದೇಶದ ಸುರಕ್ಷತೆಗಾಗಿ ಹಿಂದೂ ಸಮಾಜ ನಿಮ್ಮನ್ನು ಮೆಟ್ಟಿ ನಿಲ್ಲುತ್ತದೆ. ಪಿಎಫ್‌ಐ ಬಾಲ ಬಿಚ್ಚುವ ಕೆಲಸ ಮಾಡಬಾರದು ಎಂದು ಕಿಡಿಕಾರಿದ್ದಾರೆ.

    ಮುಲ್ಲಾ, ಮೌಲ್ವಿಗಳು ಎಚ್ಚರಿಕೆ ಹೆಜ್ಜೆ ಇಡಿ. ಇದು ಮುಸ್ಲಿಂ ಸಮಾಜಕ್ಕೆ ಕಪ್ಪು ಚುಕ್ಕೆ. ನಿಮ್ಮ ಯುವಕರನ್ನು ಹದ್ದುಬಸ್ತಿನಲ್ಲಿ ಇಡಿ. ನಿಮ್ಮ ಯುವಕರಿಗೆ ದೇಶದ ಬದ್ಧತೆ, ದೇಶಪ್ರೇಮದ ಪಾಠ ಕಲಿಸಿ ಎಂದು ಸಲಹೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪರೇಶ್ ಮೇಸ್ತಾ ಕೇಸ್ ಸಂಬಂಧ ಪ್ರಚೋದನಕಾರಿ ಭಾಷಣ – ಪ್ರಾಸಿಕ್ಯೂಷನ್ ಲೋಪ, ಶಿಕ್ಷೆಯಿಂದ ಅನಂತ್‍ಕುಮಾರ್ ಹೆಗಡೆ ಪಾರು

    ಪರೇಶ್ ಮೇಸ್ತಾ ಕೇಸ್ ಸಂಬಂಧ ಪ್ರಚೋದನಕಾರಿ ಭಾಷಣ – ಪ್ರಾಸಿಕ್ಯೂಷನ್ ಲೋಪ, ಶಿಕ್ಷೆಯಿಂದ ಅನಂತ್‍ಕುಮಾರ್ ಹೆಗಡೆ ಪಾರು

    ಕಾರವಾರ: ಕೋಮು ಸೌಹಾರ್ದವನ್ನು ಕೆಡಿಸಿದ ಹಾಗೂ ಸಮಾಜದಲ್ಲಿ ಅಶಾಂತಿ ಸೃಷ್ಟಿಸಿದ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ವೈಫಲ್ಯದಿಂದ ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತ್‍ಕುಮಾರ್ ಹೆಗಡೆ ಶಿಕ್ಷೆಯಿಂದ ಪಾರಾಗಿದ್ದಾರೆ.

    ಕಳೆದ ವಿಧಾನಸಭಾ ಚುನಾವಣೆ ವೇಳೆ ಅನಂತ್‍ಕುಮಾರ್ ಹೆಗಡೆ ಭಟ್ಕಳದಲ್ಲಿ ಪರೇಶ್ ಮೇಸ್ತಾ ಪ್ರಕರಣ ಸಂಬಂಧಿಸಿದಂತೆ ಪ್ರಚೋದನಕಾರಿಯಾಗಿ ಮಾತನಾಡಿ ಎರಡು ಕೋಮುಗಳ ನಡುವೆ ಸಂಘರ್ಷ ಹುಟ್ಟಿಸುವ ವಾತಾವರಣ ಸೃಷ್ಟಿಸಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಭಟ್ಕಳ ವಿಧಾನಸಭಾ ಕ್ಷೇತ್ರದ ಚುನಾವಣಾ ಅಧಿಕಾರಿ ಎನ್. ಸಿದ್ದೇಶ್ವರ್ ಅವರು ಮಂಕಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಐಪಿಸಿ ಸೆಕ್ಷನ್ 153 ಹಾಗೂ ಜನಪ್ರತಿನಿಧಿ ಕಾಯ್ದೆ 125ರ ಅಡಿಯಲ್ಲಿ ದೂರು ದಾಖಲಿಸಿದ್ದರು.

    ಈ ಪ್ರಕರಣದ ವಿಚಾರಣೆ ನಡೆಸಿದ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶ ರಾಮಚಂದ್ರ ಹುಡ್ಡರ್ ಅವರು ಇಡೀ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ನಡೆದುಕೊಂಡ ರೀತಿಯ ಬಗ್ಗೆ ತೀರ್ಪಿನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ಪ್ರಾಸಿಕ್ಯೂಷನ್ ನಡೆದುಕೊಂಡ ರೀತಿ ಬಗ್ಗೆ ಉಲ್ಲೇಖಿಸುತ್ತಾ, ಈ ಪ್ರಕರಣದ ದೂರುದಾರರನ್ನು ಹೊರತುಪಡಿಸಿದರೆ ಪ್ರಕರಣದ ಯಾವ ಸಾಕ್ಷಿಯೂ ಪ್ರಾಸಿಕ್ಯೂಷನ್ ಅನ್ನು ಬೆಂಬಲಿಸಿಲ್ಲ. ಎಲ್ಲರ ಉದ್ದೇಶ ಅನಂತ್‍ಕುಮಾರ್ ಹೆಗಡೆಯವರಿಗೆ ಸಹಾಯ ಮಾಡುವುದೇ ಆಗಿದೆ ಎಂಬಂತೆ ಕಂಡುಬಂದಿದೆ. ಸಾಕ್ಷಿಗಳ ಹೇಳಿಕೆಯಲ್ಲಿ ವೈರುದ್ಯಗಳು ಹಾಗೂ ಲೋಪದೋಷಗಳು ಕಂಡುಬಂದಿದೆ. ಅಲ್ಲದೇ ಪ್ರಕರಣದ ಲೋಪದೋಷಗಳ ಬಗ್ಗೆ ಸಂಬಂಧಿಸಿದ ಸಾಕ್ಷಿಗಳಿಗೆ ಪ್ರಾಸಿಕ್ಯೂಷನ್ ಸರಿಯಾಗಿ ವಿವರಿಸಿಲ್ಲ. ಇಡೀ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ವೈಫಲ್ಯ ಎದ್ದು ಕಾಣುತ್ತದೆ. ಹೀಗಾಗಿ ಪ್ರಕರಣದಲ್ಲಿ ಆರೋಪಿಗೆ ಸಂಶಯದ ಲಾಭ ದೊರೆತಿದೆ. ಅಲ್ಲದೆ ಪ್ರಾಸಿಕ್ಯೂಷನ್ ಈ ಪ್ರಕರಣವನ್ನು ಸಂಶಯಾತೀತವಾಗಿ ಆರೋಪಿ ವಿರುದ್ಧ ಸಾಬೀತು ಪಡಿಸುವಲ್ಲಿ ವಿಫಲವಾಗಿದೆ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ.

    ಭಟ್ಕಳದಲ್ಲಿ ಅನಂತ್‍ಕುಮಾರ್ ಹೆಗಡೆ 2018ರ ಮೇ 7ರಂದು ಭಾಷಣ ಮಾಡಿದ ಬಗ್ಗೆ, 2018ರ ಮೇ 12ರಂದು ಸಂಸದರ ವಿರುದ್ಧ ದೂರು ದಾಖಲಿಸಲಾಗಿತ್ತು.

    ವಿಡಿಯೋ ಮಾಡಿದ ಕ್ಯಾಮರಾಮನ್ ಪ್ರತಿಕೂಲ ಸಾಕ್ಷಿ:
    ಈ ಪ್ರಕರಣದಲ್ಲಿ ಹೆಗಡೆರವರು ಪ್ರಚೋದನಕಾರಿ ಭಾಷಣವನ್ನು ಚುನಾವಣಾ ಆಯೋಗವೇ ನೇಮಕ ಮಾಡಿದ್ದ ವಿಡಿಯೋಗ್ರಾಫರ್ ರೆಕಾರ್ಡ್ ಮಾಡಿದ್ದರು. ಈ ವಿಡಿಯೋವನ್ನು ನ್ಯಾಯಾಲಯಕ್ಕೆ ನೀಡಲಾಗಿತ್ತು. ಆದರೇ ಸಾಕ್ಷಿಯಾಗಿ ಬಂದಿದ್ದ ವಿಡಿಯೋಗ್ರಾಫರ್ ತಾನು ಕೇವಲ ವಿಡಿಯೋ ರೆಕಾರ್ಡಿಂಗ್ ಮಾಡಿದ್ದೇನೆಯೇ ಹೊರತು ಅನಂತ್‍ಕುಮಾರ್ ಆಗ ಏನು ಹೇಳಿದ್ದರು ಎಂದು ಕೇಳಿಸಿಕೊಂಡಿಲ್ಲ ಎಂದು ನ್ಯಾಯಾಲಯದ ಮುಂದೆ ಹೇಳಿದ್ದಾನೆ. ಈ ಪ್ರಕರಣದಲ್ಲಿ ಸಿಡಿ(ಕಾಂಪ್ಯಾಕ್ಟ್ ಡಿಸ್ಕ್)ನ್ನು ವಶಪಡಿಸಿಕೊಳ್ಳುವಾಗ ಹಾಜರಾಗಿದ್ದ ವ್ಯಕ್ತಿ ಪೊಲೀಸರು ಏನನ್ನು ವಶಪಡಿಸಿಕೊಂಡಿದ್ದಾರು ಎಂಬುದು ತನಗೆ ತಿಳಿದೇ ಇಲ್ಲ ಎಂದು ಸಾಕ್ಷಿ ಹೇಳಿದ್ದಾನೆ. ಅಲ್ಲದೇ ಆಗ ಚುನಾವಣಾ ಆಯೋಗ ನೇಮಕ ಮಾಡಿದ್ದ ಫ್ಲೈಯಿಂಗ್ ಸ್ಕ್ವಾಡ್ ಡಿವೈಎಸ್‍ಪಿ ನಾಗೇಶ್ ಶೆಟ್ಟಿ ಹಾಗೂ ಪೊಲೀಸ್ ಸಿಬ್ಬಂದಿ ಮಂಜುನಾಥ್ ಸುಕ್ರು ಗೌಡ ಅವರು ಸಹ ಪ್ರತಿಕೂಲ ಸಾಕ್ಷಿಗಳಾಗಿ ಬದಲಾಗಿದ್ದಾರೆ.

    ನೆನಪಿಲ್ಲ ಎಂದ ಪೇದೆ:
    ಈ ಪ್ರಕರಣದಲ್ಲಿ ಅನಂತ್‍ಕುಮಾರ್ ಹೆಗಡೆ ಭಾಷಣ ಮಾಡುವಾಗ ಅಲ್ಲಿ ಕರ್ತವ್ಯದಲ್ಲಿ ಇದ್ದ ಪೊಲೀಸ್ ಪೇದೆ ವಿಠ್ಠಲ್ ಗೌಡ, ಅನಂತ್‍ಕುಮಾರ್ ಅವರು ಪ್ರಚೋದನಕಾರಿ ಹೇಳಿಕೆ ನೀಡಿದ್ದು ನಿಜ. ಆದರೆ ಏನು ಹೇಳಿದರು ಎಂಬುದು ನನಗೆ ನೆನಪಿಲ್ಲ ಎಂದು ಹೇಳಿದ್ದಾರೆ. ಈ ಎಲ್ಲಾ ಕಾರಣದಿಂದ ಅನಂತ್‍ಕುಮಾರ್ ಅವರನ್ನು ಪ್ರಕರಣದಿಂದ ದೋಷ ಮುಕ್ತಗೊಳಿಸಿದೆ ಎಂದು ನ್ಯಾಯಾಲಯ ತೀರ್ಪಿನಲ್ಲಿ ಉಲ್ಲೇಖಿಸಿದೆ.

    ಪ್ರಕರಣ ಕೈ ಬಿಡುವಂತೆ ಕೋರಿದ್ದ ಸಂಸದ:
    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಂತ್‍ಕುಮಾರ್ ಅವರು ನ್ಯಾಯಾಲಯಕ್ಕೆ ಕಳೆದ ಡಿಸೆಂಬರ್ ನಲ್ಲಿ ಪ್ರಕರಣ ಕೈಬಿಡುವಂತೆ ಅರ್ಜಿ ಸಲ್ಲಿಸಿದ್ದರು. ಆದರೆ ಅದನ್ನು ಪುರಸ್ಕರಿಸದ ನ್ಯಾಯಾಲಯ ಚಾರ್ಜ್‍ಶೀಟ್ ಸಲ್ಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿತ್ತು.

    ಏನಿದು ಪರೇಶ್ ಮೇಸ್ತಾ ಪ್ರಕರಣ?
    ಹೊನ್ನಾವರದಲ್ಲಿ 2017ರ ಡಿಸೆಂಬರ್ 6ರಂದು ನಾಪತ್ತೆಯಾಗಿದ್ದ ಪರೇಸ್ ಮೇಸ್ತಾ ನಗರದ ಶಟ್ಟಿಕೆರೆಯಲ್ಲಿ ಡಿಸೆಂಬರ್ 8 ರಂದು ಹೆಣವಾಗಿ ಪತ್ತೆಯಾಗಿದ್ದ. ನಿಗೂಢ ಸಾವಿನ ಕುರಿತು ತಂದೆ ಕಮಲಾಕರ್ ಮೇಸ್ತಾ ರವರು ಶವ ಪತ್ತೆಯಾದ ಡಿಸೆಂಬರ್ 8 ರಂದೇ ಐದು ಮಂದಿ ಆರೋಪಿಗಳ ವಿರುದ್ಧ ದೂರು ನೀಡಿದ್ದರು. ದೂರು ನೀಡಿದ ಬಳಿಕ ಐದು ಮಂದಿ ನಾಪತ್ತೆಯಾಗಿದ್ದರು. ಪರೇಶ್ ಮೆಸ್ತಾ ಸಾವು ರಾಜ್ಯಾದ್ಯಂತ ದೊಡ್ಡ ಸುದ್ದಿಯಾಗಿದ್ದಲ್ಲದೇ ಹಲವು ಭಾಗದಲ್ಲಿ ಘರ್ಷಣೆಗೆ ಕಾರಣವಾಗಿತ್ತು.