Tag: parents

  • 28 ವರ್ಷಗಳ ಬಳಿಕ ಸತ್ಯ ತಿಳಿದು ತಂದೆ-ತಾಯಿಯನ್ನ ಹುಡುಕಲು ಸ್ವೀಡನ್ ನಿಂದ ಭಾರತಕ್ಕೆ ಬಂದ ಮಹಿಳೆ

    28 ವರ್ಷಗಳ ಬಳಿಕ ಸತ್ಯ ತಿಳಿದು ತಂದೆ-ತಾಯಿಯನ್ನ ಹುಡುಕಲು ಸ್ವೀಡನ್ ನಿಂದ ಭಾರತಕ್ಕೆ ಬಂದ ಮಹಿಳೆ

    ಬೆಂಗಳೂರು: ವಿದೇಶಿ ಮಹಿಳೆಯೊಬ್ಬರು ತನ್ನ ಸ್ವಂತ ತಂದೆ-ತಾಯಿಯನ್ನ ಹುಡುಕಲು ಭಾರತಕ್ಕೆ ಬಂದಿದ್ದಾರೆ.

    ವಿದೇಶಿ ಮಹಿಳೆ ಸೋನಿ 2 ವರ್ಷದ ಮಗುವಾಗಿದ್ದಾಗ ಹುಬ್ಬಳ್ಳಿಯಲ್ಲಿ ತನ್ನ ಪೋಷಕರಿಂದ ತಪ್ಪಿಸಿಕೊಂಡಿದ್ದರು. ಅಳುತ್ತಿದ್ದ ಮಗುವನ್ನ ಕಂಡ ಬೆಂಗಳೂರಿನ ಮಾತೃಚಾಯ ಅನಾಥಾಶ್ರಮದವರು ಕರೆದುಕೊಂಡು ಹೋಗಿ ಸಾಕಿದ್ದು, ಎರಡು ವರ್ಷಗಳ ಕಾಲ ಪೋಷಿಸಿದ್ದಾರೆ. ನಂತರ ಸ್ವೀಡನ್ ಮೂಲದ ದಂಪತಿ ಈಕೆಯನ್ನು ದತ್ತು ಪಡೆದಿದ್ದು, ಸ್ವೀಡನ್‍ಗೆ ಕರೆದುಕೊಂಡು ಹೋಗಿದ್ದಾರೆ.

    ಸೋನಿ ಕಳೆದ 28 ವರ್ಷಗಳ ಕಾಲ ಅವರ ಪೋಷಣೆಯಲ್ಲಿದ್ದು, ಅವರು ಸೋನಿಗೆ ಮದುವೆ ಕೂಡ ಮಾಡಿದ್ದಾರೆ. ಆದರೆ ಸೋನಿಗೆ ತನ್ನ ನಿಜವಾದ ತಂದೆ-ತಾಯಿ ಇವರಲ್ಲ, ಅವರು ಭಾರತದಲ್ಲಿದ್ದಾರೆ ಎಂದು ತಿಳಿದಿದೆ.

    28 ವರ್ಷಗಳ ಬಳಿಕ ಸತ್ಯ ತಿಳಿದ ಸೋನಿ, ಅಪ್ಪ ಅಮ್ಮನನ್ನ ನೋಡಬೇಕೆಂಬ ಆಸೆಯಿಂದ ಭಾರತಕ್ಕೆ ಬಂದಿದ್ದು, ಹೆತ್ತ ತಂದೆತಾಯಿಯ ಹುಟುಕಾಟದಲ್ಲಿದ್ದಾರೆ. ಐಶ್ವರ್ಯ ಅಂತಸ್ತು ಎಲ್ಲಾ ಇದ್ದರು ಸೋನಿಯ ಹೆತ್ತ ತಂದೆ-ತಾಯಿ ಯಾರು ಅಂತಾ ಗೊತ್ತಿಲ್ಲದೇ ಪ್ರತಿದಿನ ನೋವಲ್ಲೇ ಕಾಲ ಕಳೆಯುತ್ತಿದ್ದಾರೆ.

  • ಪ್ರೀತಿಸಿ ಓಡಿಹೋಗಿ ಮದ್ವೆಯಾದವರು ಪೋಷಕರಿಂದ ತಪ್ಪಿಸಿಕೊಳ್ಳಲು ಹೋಗಿ ಆಸ್ಪತ್ರೆ ಸೇರಿದ್ರು!

    ಪ್ರೀತಿಸಿ ಓಡಿಹೋಗಿ ಮದ್ವೆಯಾದವರು ಪೋಷಕರಿಂದ ತಪ್ಪಿಸಿಕೊಳ್ಳಲು ಹೋಗಿ ಆಸ್ಪತ್ರೆ ಸೇರಿದ್ರು!

    ಹೈದರಾಬಾದ್: ಪ್ರೇಮಿಗಳಿಬ್ಬರು ಯುವತಿಯ ಪೋಷಕರಿಂದ ತಪ್ಪಿಸಿಕೊಂಡು ಓಡಿ ಹೋಗುವಾಗ ಅಪಘಾತವಾಗಿರುವ ಘಟನೆ ಕಮ್ಮಮ್ ಜಿಲ್ಲೆಯ ಗೋಪಾಲಪುರಂನಲ್ಲಿ ನಡೆದಿದೆ.

    ಸುಮಾ ಹಾಗೂ ತರುಣ್ ಇಬ್ಬರು ಪ್ರೀತಿಸುತ್ತಿದ್ದು, ಇವರ ಪ್ರೀತಿಗೆ ಯುವತಿಯ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಇವರಿಬ್ಬರು ಶನಿವಾರ ಬೆಳಗ್ಗೆ ಭದ್ರಚಲಂಗೆ ಹೋಗಿ ಮದುವೆ ಆಗಿದ್ದರು. ಭದ್ರಚಲಂನಲ್ಲಿ ಮದುವೆಯಾಗಿ ಹಿಂತಿರುಗುತ್ತಿದ್ದಾಗ ಯುವತಿಯ ಸಂಬಂಧಿಕರು ಅವರನ್ನು ಸಿನಿಮಿಯ ರೀತಿಯಲ್ಲಿ ಚೇಸ್ ಮಾಡಿದ್ದರು.

    ಈ ಸಂದರ್ಭದಲ್ಲಿ ಯುವತಿ ಸುಮಾ ಅವರ ಪೋಷಕರಿಂದ ತಪ್ಪಿಸಿಕೊಳ್ಳಲು, ಪ್ರೇಮಿಗಳು ಹಾಗೂ ಇನ್ನೂ ಇಬ್ಬರು ಇದ್ದ ಕಾರನ್ನು ವೇಗವಾಗಿ ಚಲಿಸಿದ್ದರು. ಅಂತೆಯೇ ಕಾರ್ ಗೋಪಾಲಪುರಂ ಬಳಿ ಬರುತ್ತಿದ್ದಾಗ ಕಲ್ವರ್ಟ್ ಗೆ ಡಿಕ್ಕಿಯಾಗಿ ಪಲ್ಟಿ ಹೊಡೆದಿದೆ.

    ಕಾರು ಡಿಕ್ಕಿಯಾಗಿ ಪಲ್ಟಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇನ್ನು ಘಟನೆಯಲ್ಲಿ ಪ್ರೇಮಿಗಳು ಹಾಗೂ ಮತ್ತೊಬ್ಬ ಸ್ನೇಹಿತ ಗಾಯಗೊಂಡಿದ್ದು, ಕೂಡಲೇ ಅವರನ್ನು ಕಮ್ಮಮ್ ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವಕ ತರುಣ್ ನ ಆರೋಗ್ಯದ ಸ್ಥಿತಿ ಗಂಭೀರವಾಗಿದೆ ಎಂಬುದಾಗಿ ವರದಿಯಾಗಿದೆ.

  • ಮೈಸೂರಿನಲ್ಲೊಬ್ಬ ನೀಚ ಶಿಕ್ಷಕ- 6ನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ

    ಮೈಸೂರಿನಲ್ಲೊಬ್ಬ ನೀಚ ಶಿಕ್ಷಕ- 6ನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ

    ಮೈಸೂರು: 6ನೇ ತರಗತಿ ವಿದ್ಯಾರ್ಥಿನಿಗೆ ಮೂರು ತಿಂಗಳಿನಿಂದ ಶಿಕ್ಷಕನೊಬ್ಬ ಲೈಂಗಿಕ ಕಿರುಕುಳ ನೀಡಿ ಅನುಚಿತವಾಗಿ ವರ್ತಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.

    ಕೆ.ಆರ್.ನಗರದ ಶಾಲೆಯ ಶಿಕ್ಷಕನಾಗಿರುವ ರೋಹಿತ್ ಮೇಲೆ ಈ ಆರೋಪ ಕೇಳಿಬಂದಿದೆ. ಮೂಲತಃ ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲೂಕಿನ ನಿವಾಸಿಯಾದ ರೋಹಿತ್ ಶಾಲಾ ಅವಧಿಯಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಪೋಷಕರು ಆರೋಪಿಸಿದ್ದಾರೆ

    ಬಾಲಕಿಯ ಹಾವಭಾವದಲ್ಲಿ ಬದಲಾವಣೆ ಕಂಡು ಬಂದ ಹಿನ್ನೆಲೆಯಲ್ಲಿ ಆತಂಕಗೊಂಡ ಪೋಷಕರು ನಂತರ ಮೈಸೂರಿನಲ್ಲಿ ಮನಶಾಸ್ತ್ರಜ್ಞರಲ್ಲಿ ಕೌನ್ಸಿಲಿಂಗ್ ಮಾಡಿಸಿದ್ದಾರೆ. ಈ ವೇಳೆ ಬಾಲಕಿ ರೋಹಿತ್ ಕೃತ್ಯದ ಬಗ್ಗೆ ಬಾಯಿ ಬಿಟ್ಟಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಪೋಷಕರು ಶಾಲೆ ಬಳಿ ತೆರಳಿ ಶಿಕ್ಷಕನಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

    ಅಪ್ರಾಪ್ತೆಯ ಪೋಷಕರು ಶಿಕ್ಷಕನನ್ನು ಎಳೆತಂದು ಪೊಲೀಸ್ ಠಾಣೆಗೆ ಒಪ್ಪಿಸಿದ್ದರು. ಕೆ.ಆರ್. ನಗರ ಠಾಣೆಯಲ್ಲಿ ಪೋಸ್ಕೋ ಕಾಯ್ದೆಯಡಿ ಈ ಪ್ರಕರಣ ದಾಖಲಾಗಿದೆ.

  • ತೊಟ್ಟಿಲು ತೂಗೋ ಮೂಲಕ 8 ದಿನದ ಮಗುವನ್ನು ನಿದ್ರೆ ಮಾಡಿಸುತ್ತೆ ಈ ಚಿಕ್ಕು- ವಿಡಿಯೋ

    ತೊಟ್ಟಿಲು ತೂಗೋ ಮೂಲಕ 8 ದಿನದ ಮಗುವನ್ನು ನಿದ್ರೆ ಮಾಡಿಸುತ್ತೆ ಈ ಚಿಕ್ಕು- ವಿಡಿಯೋ

    ಹಾಂಕಾಂಗ್: ಇತ್ತೀಚಿನ ದಿನಗಳಲ್ಲಿ ತಂದೆ-ತಾಯಿ ಇಬ್ಬರೂ ಕೆಲಸದಲ್ಲಿದ್ದರೆ ಮಗುವನ್ನು ನೋಡಿಕೊಳ್ಳಲು ಆಯಾಗಳನ್ನು ನೇಮಿಸುತ್ತಾರೆ. ಅಂತೆಯೇ ಹಾಂಕಾಂಗ್ ನಲ್ಲಿ ನಾಯಿಯೊಂದು ಮಗು ಜೋಪಾನವಾಗಿ ನೋಡಿಕೊಳ್ಳುತ್ತದೆ.

    ಹೌದು. 1 ವರ್ಷದ ಚಿಕ್ಕು 8 ದಿನದ ಕಂದಮ್ಮ ಲಿಯೋನಾಲ್ಡೋ ಮಲಗಿರುವಾಗ ತೊಟ್ಟಿಲು ತೂಗುವ ಮೂಲಕ ನಿದ್ರೆ ಮಾಡಿಸುತ್ತದೆ. ಈಗ ನಾಯಿ ತೊಟ್ಟಿಲು ತೂಗುತ್ತಿರುವ ದೃಶ್ಯವನ್ನು ಮನೆಯವರು ಸೆರೆಹಿಡಿದಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶ್ವಾನ ತೊಟ್ಟಿಲು ತೂಗುತ್ತಿರೋ ಆ ದೃಶ್ಯ ನೋಡುಗರನ್ನು ಅಯ್ಯೋ ಅನಿಸಿಬಿಡುತ್ತಿದೆ.

    https://www.youtube.com/watch?v=_0ksUPN03hM

    ಲಿಯೋನಾಲ್ಡೋ ತಾಯಿ ಓಲಿಶಾ ಖುಝ್ಮಯಿಚೋವಾ ಅವರ ಪ್ರಕಾರ ಚಿಕ್ಕು ಹಾಗೂ ಲಿಯೋನಾಲ್ಡೋ ನಡುವೆ ಅತಿಯಾದ ಆತ್ಮೀಯತೆ ಹಾಗೂ ಸಲುಗೆ ಇದೆ. ಅಷ್ಟೇ ಅಲ್ಲದೆ ಕಂದಮ್ಮ ಎಲ್ಲಿರತ್ತೋ ಅಲ್ಲೇ ಚಿಕ್ಕು ಕೂಡ ಇರುತ್ತೆ. ಒಟ್ಟಿನಲ್ಲಿ ಚಿಕ್ಕು ತುಂಬಾ ಪ್ರೀತಿಯಿಂದ ಹಾಗೂ ಜಾಗರೂಕತೆಯಿಂದ ಲಿಯೋನಾಲ್ಡೋವನ್ನು ನೋಡಿಕೊಳ್ಳುತ್ತದೆ ಅಂತ ಹೇಳಿದ್ದಾರೆ.

    ಚಿಕ್ಕು ಅತ್ಯಂತ ಮುದ್ದಾದ ಪ್ರಾಣಿ. ನನಗೆ ಅದು ಸಾಕಷ್ಟು ಸಹಾಯ ಮಾಡುತ್ತದೆ. ನಾನು ಮಗುವಿಗೆ ಸರಿಯಾಗಿ ನೋಡಿಕೊಳ್ಳದ ಸಮಯದಲ್ಲಿ ಚಿಕ್ಕು ಮಗುವನ್ನು ನೋಡಿಕೊಳ್ಳುತ್ತದೆ. ಲಿಯೋನಾಲ್ಡೋ ಮಲಗಿರುವಾಗ ಚಿಕ್ಕು ತೊಟ್ಟಿಲು ತೂಗುತ್ತದೆ. ಚಿಕ್ಕು ಯಾವಾಗಲ್ಲೂ ತನ್ನ ಮಗುವಿನ ಜೊತೆಯಲ್ಲಿ ಇದ್ದು ಯಾವುದೇ ಸಮಸ್ಯೆ ಬರದ ಹಾಗೆ ನೋಡಿಕೊಳ್ಳುತ್ತದೆ ಎಂದು ಓಲಿಶಾ ತಿಳಿಸಿದ್ದಾರೆ.

    ಲಿಯೋನಾಲ್ಡೋಗೆ ಈಗ 8 ದಿನ. ನನಗೆ ತುಂಬಾ ಖುಷಿಯಾಗುತ್ತಿದೆ ಚಿಕ್ಕು ಕೂಡ ನಮ್ಮ ಕುಟುಂಬ ಸದಸ್ಯ ಆಗಿದೆ ಎಂದು ಓಲಿಶಾ ನಾಯಿ ಮೇಲಿರುವ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

  • ಹೆತ್ತವರ ಮೇಲಿನ ದ್ವೇಷ ತೀರಿಸಿಕೊಳ್ಳಲು 4ರ ಬಾಲಕಿಗೆ ಕಬ್ಬಿಣ ರಾಡ್ ನಿಂದ ಹಲ್ಲೆಗೈದ!

    ಹೆತ್ತವರ ಮೇಲಿನ ದ್ವೇಷ ತೀರಿಸಿಕೊಳ್ಳಲು 4ರ ಬಾಲಕಿಗೆ ಕಬ್ಬಿಣ ರಾಡ್ ನಿಂದ ಹಲ್ಲೆಗೈದ!

    ಮುಂಬೈ: ತನ್ನದಲ್ಲದ ತಪ್ಪಿಗೆ 4 ವರ್ಷದ ಬಾಲಕಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರೋ ಅಮಾನವೀಯ ಘಟನೆಯೊಂದು ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ಘಟನೆಗೆ ಸಂಬಂಧಿಸಿದಂತೆ 19 ವರ್ಷದ ರಹೀಮ್ ಶೌಕರ್ ಅಲಿ ಶೇಕ್ ಎಂಬಾತನನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ. ಈತ ಭಯಾಂಡರ್ ಪೂರ್ವದ ಆಜಾದ್ ನಗರದ ನಿವಾಸಿ ಅಂತ ಪೊಲೀಸರು ತಿಳಿಸಿದ್ದಾರೆ.

    ಏನಿದು ಘಟನೆ?: ಹೆತ್ತವರ ಮೇಲಿನ ದ್ವೇಷವನ್ನು ತೀರಿಸಿಕೊಳ್ಳಲು ಅವರ 4 ವರ್ಷದ ಬಾಲಕಿಯ ತಲೆಗೆ ಆರೋಪಿ ಕಬ್ಬಿಣದ ರಾಡ್ ನಿಂದ ಹೊಡೆದು ಗಂಭೀರವಾಗಿ ಹಲ್ಲೆ ನಡೆಸಿದ್ದಾನೆ ಅಂತ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಮನೆಯ ಪಕ್ಕದಲ್ಲಿರೋ ಕಸದ ರಾಶಿಯ ಬಳಿ ಮಗಳು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಹೆತ್ತವರು ಗಮನಿಸಿದ್ದಾರೆ. ಬಳಿಕ ಅವರು ಆಕೆಯನ್ನು ಕೂಡಲೇ ಸ್ಥಳಿಯ ಕಸ್ತೂರಿ ಆಸ್ಪತ್ರೆಗೆ ದಾಖಲಿಸಿದ್ದು, ಇದೀಗ ಬಾಲಕಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟದಲ್ಲಿದ್ದಾಳೆ.

    ಹಲ್ಲೆಗೆ ಕಾರಣವೇನು?: ಆರೋಪಿ ಬಾಲಕಿಯನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದನು. ಹೀಗಾಗಿ ಹೆತ್ತವರು ಆತನ ಜೊತೆ ಸಲುಗೆಯಿಂದ ವರ್ತಿಸದಂತೆ ಎಚ್ಚರಿಕೆ ನೀಡಿದ್ದರು. ಈ ವಿಚಾರ ಆರೋಪಿಗೆ ತಿಳಿದು ಹೆತ್ತವರ ಮೇಲಿನ ಸಿಟ್ಟಿಗೆ ಬಾಲಕಿಯ ಮೇಲೆ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

    ಆರೋಪಿ ಕಬ್ಬಿಣದ ರಾಡ್ ನಿಂದ ಬಾಲಕಿಯ ತಲೆಗೆ ಹೊಡೆದಿದ್ದರಿಂದ ಆಕೆ ಗಂಭೀರ ಗಾಯಗೊಂಡಿದ್ದಾಳೆ. ಅಲ್ಲದೇ ಆಕೆಯ ಮುಖ ಹಾಗೂ ಕಣ್ಣುಗಳಿಗೂ ಗಂಭೀರ ಗಾಯಗಳಾಗಿವೆ. ಹೀಗಾಗಿ ಸದ್ಯ ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಅಂತ ವೈದ್ಯ ರಾಜೀವ್ ಅಗರ್ ವಾಲ್ ತಿಳಿಸಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿಯನ್ನು ಬಂಧಿಸಲಾಗಿದೆ. ಆತನ ವಿರುದ್ಧ ಐಪಿಸಿ ಸೆಕ್ಷನ್ 307(ಹತ್ಯೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಡಿಸೆಂಬರ್ 18ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ ಅಂತ ಪೊಲೀಸರು ತಿಳಿಸಿದ್ದಾರೆ.

     

  • ಸೀರಿಯಲ್ ಗೆ ಬಾಲಕಿ ಬಲಿ ಪ್ರಕರಣ- ಟಿವಿ ಒಡೆದು ನೊಂದ ಪೋಷಕರ ಆಕ್ರೋಶ

    ಸೀರಿಯಲ್ ಗೆ ಬಾಲಕಿ ಬಲಿ ಪ್ರಕರಣ- ಟಿವಿ ಒಡೆದು ನೊಂದ ಪೋಷಕರ ಆಕ್ರೋಶ

    ದಾವಣಗೆರೆ: 7 ವರ್ಷದ ಬಾಲಕಿ ಪ್ರಾರ್ಥನಾ ಖಾಸಗಿ ವಾಹಿನಿಯಲ್ಲಿ ಪ್ರಸಾರವಾದ ನಂದಿನಿ ಸೀರಿಯಲ್ ನೋಡಿ ಅದೇ ರೀತಿ ನಟನೆ ಮಾಡಲು ಹೋಗಿ ಸಾವನ್ನಪ್ಪಿದ ಹಿನ್ನಲೆಯಲ್ಲಿ ನೊಂದ ಪೋಷಕರು ಟಿವಿಯನ್ನು ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕಳೆದ 11 ನೇ ತಾರೀಖಿನಂದು ನಡೆದ ಘಟನೆಯಿಂದ ಅಘಾತ ಉಂಟಾಗಿರುವ ಮಗುವಿನ ಪೋಷಕರು ಟಿವಿಯ ಮೇಲೆ ತಮ್ಮ ಆಕ್ರೋಶ ತೋರಿಸಿದ್ದಾರೆ. ನಗು ನಗುತ್ತಾ ಮನೆಯ ತುಂಬಾ ಓಡಾಡುತ್ತಿದ್ದ ಮಗು ಈಗ ಕಾಣದ ಲೋಕಕ್ಕೆ ಹೋಗಿದೆ. ಇದೆಕ್ಕೆಲ್ಲ ಕಾರಣ ಈ ಟಿವಿ, ಇದರಿಂದಲೇ ನಮ್ಮ ಮಗು ಸಾವನ್ನಪ್ಪಿದೆ ಎಂದು ಪ್ರಾರ್ಥನಾ ತಂದೆ ಮಂಜುನಾಥ್ ಕಲ್ಲಿನಿಂದ ಒಡೆದು ಹಾಕಿದ್ದಾರೆ.

    ಅಲ್ಲದೇ ಧಾರಾವಾಹಿಯ ನಿರ್ದೇಶಕರ ಮೇಲೆ ಹಾಗೂ ಸಂಬಂಧಪಟ್ಟವರ ಮೇಲೆ ದೂರು ನೀಡಲು ಹಲವು ಮುಖಂಡರು ಹೇಳಿದ್ದರು. ಆದ್ರೆ ಮಗುವಿನ ಪೋಷಕರು ಮಾತ್ರ ಹಿಂದೇಟು ಹಾಕುತ್ತಿದ್ದಾರೆ. ಕೂಲಿ ಮಾಡಿ ಜೀವನ ಮಾಡುವ ನಮಗೆ ಕೋರ್ಟು ಕಚೇರಿ ಎಂದು ಓಡಾಡಲು ಆಗುವುದಿಲ್ಲ. ಇರೋ ಇಬ್ಬರು ಮಕ್ಕಳನ್ನು ಹುಷಾರಾಗಿ ಸಾಕುತ್ತೇವೆ ಎಂದು ಪೋಷಕರು ಹೇಳುತ್ತಿದ್ದಾರೆ.

    https://youtu.be/ukbXoVNhqR8

  • ಶಾಲೆಯ 3ನೇ ಮಹಡಿಯಿಂದ ಕಿಟಕಿ ಗಾಜು ಬಿದ್ದು ವಿದ್ಯಾರ್ಥಿಗಳಿಗೆ ಗಂಭೀರ ಗಾಯ- ಪೋಷಕರ ಪ್ರತಿಭಟನೆ

    ಶಾಲೆಯ 3ನೇ ಮಹಡಿಯಿಂದ ಕಿಟಕಿ ಗಾಜು ಬಿದ್ದು ವಿದ್ಯಾರ್ಥಿಗಳಿಗೆ ಗಂಭೀರ ಗಾಯ- ಪೋಷಕರ ಪ್ರತಿಭಟನೆ

    ಬೆಂಗಳೂರು: ಶಾಲೆಯ ಮೂರನೇ ಮಹಡಿಯಿಂದ ಕಿಟಕಿಯ ಗಾಜು ಬಿದ್ದು ಮೂವರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಲ್ಯಾಣ ನಗರದ ರಾಯಲ್ ಕಾನ್‍ಕಾರ್ಡ್ ಶಾಲೆಯಲ್ಲಿ ನಡೆದಿದೆ.

    ಮಾಜಿ ಶಾಸಕ ಶಿವರಾಮೇಗೌಡರಿಗೆ ಸೇರಿದ ಶಾಲೆ ಇದಾಗಿದೆ. ಬುಧವಾರ ಮಧ್ಯಾಹ್ನ  3.30ರ ಸುಮಾರಿಗೆ ಈ ಘಟನೆ ನಡೆದಿದೆ. ಕೆಳಗೆ ಆಟವಾಡ್ತಿದ್ದ ಮಕ್ಕಳ ಮೇಲೆ ಅಲಂಕಾರಿಕ ಗ್ಲಾಸ್ ಬಿದ್ದು ತಲೆಗೆ ಗಾಯವಾಗಿದೆ. ವಾಟ್ಸಪ್ ಮೂಲಕ ಮಕ್ಕಳ ಪೋಷಕರ ಗಮನಕ್ಕೆ ಈ ಬಗ್ಗೆ ಮಾಹಿತಿ ತಿಳಿದುಬಂದ ನಂತರ ಪೋಷಕರು ಇಂದು ಶಾಲೆಗೆ ಮಕ್ಕಳನ್ನು ಕಳಿಸಲು ನಿರಾಕರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

    ಗಾಜು ಬಿದ್ದ ಪ್ರಕರಣ ಮಾತ್ರವಲ್ಲದೆ ಶಾಲೆಯಲ್ಲಿ ಇತರೆ ಸಮಸ್ಯೆಗಳೂ ಇದೆ ಎಂದು ಪೋಷಕರು ಆರೋಪಿಸಿದ್ದಾರೆ. ನಮ್ಮ ಮಕ್ಕಳನ್ನು ಶಾಲೆಗೆ ಕಳಿಸುವುದಿಲ್ಲ. ಮಕ್ಕಳಿಗೆ ಈ ಶಾಲೆಯಲ್ಲಿ ರಕ್ಷಣೆ ಇಲ್ಲ. ಮಕ್ಕಳನ್ನು ಶಾಲೆಗೆ ಕಳಿಸೋಕೆ ನಮಗೆ ಭಯವಾಗುತ್ತಿದೆ. ಈ ಹಿಂದೆಯೂ ಕೂಡ ಇಂಥದ್ದೇ ಅನಾಹುತಗಳು ನಡೆದಿದ್ದರೂ ಶಾಲೆ ಯಾವುದೇ ರೀತಿಯ ಕ್ರಮವನ್ನು ಕೈಗೊಂಡಿಲ್ಲ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಶಾಲೆಯ ಆಡಳಿತ ಮಂಡಳಿಗೆ ಇ-ಮೇಲ್ ಕಳಿಸಿ ನಂತರ ಪೋಷಕರು ಪ್ರತಿಭಟನೆ ಮಾಡುತ್ತಿದ್ದಾರೆ. ಸಾಕಷ್ಟು ಸಂಖ್ಯೆಯಲ್ಲಿ ಪೋಷಕರು ಶಾಲೆಯ ಆವರಣದಲ್ಲಿ ಸೇರಿದ್ದಾರೆ. ಅಷ್ಟೇ ಅಲ್ಲದೇ ಶಾಲೆಯ ವಿರುದ್ಧ ಪೊಲೀಸರ ಮೊರೆ ಹೋಗಲು ಪೋಷಕರು ಚಿಂತನೆ ಮಾಡಿದ್ದಾರೆ.

    ಪ್ರತಿಭಟನೆ ನಡೆಸುತ್ತಿರುವ ಪೋಷಕರ ಜೊತೆಗೆ ರಾಯಲ್ ಕಾನ್‍ಕಾರ್ಡ್ ಚೇರ್ಮನ್ ಎಲ್.ಆರ್ ಶಿವರಾಮೇಗೌಡ ಮಾತುಕತೆ ನಡೆಸಿದ್ದು, ಶಾಲೆಗೆ ಇಂದಿನಿಂದ ಮೂರು ದಿನಗಳ ಕಾಲ ರಜೆಯನ್ನು ಘೋಷಿಸಿದ್ದಾರೆ. ಅಲ್ಲದೇ ಮೂರು ದಿನದಲ್ಲಿ ಸಮಸ್ಯೆಯನ್ನು ಬಗೆಹರಿಸುವಂತೆ ಭರವಸೆ ನೀಡಿದ್ದಾರೆ.

    ಒಟ್ಟು ನಾಲ್ವರು ಮಕ್ಕಳಿಗೆ ಗಾಯಗಳಾಗಿದ್ದು, ಮೂವರ ಸ್ಥಿತಿ ಗಂಭೀರವಾಗಿತ್ತು. ಗಾಯಗೊಂಡಿರುವರಲ್ಲಿ ಇಬ್ಬರು ಮಕ್ಕಳು ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ ಎಂದು ತಿಳಿದುಬಂದಿದೆ.

     

  • ಪೋಷಕರು ಮದುವೆ ಮಾಡಿಕೋ ಎಂದು ಹೇಳಿದ್ದಕ್ಕೆ ಯುವಕ ಆತ್ಮಹತ್ಯೆ

    ಪೋಷಕರು ಮದುವೆ ಮಾಡಿಕೋ ಎಂದು ಹೇಳಿದ್ದಕ್ಕೆ ಯುವಕ ಆತ್ಮಹತ್ಯೆ

    ಬೆಂಗಳೂರು: ವಯಸ್ಸಾದ ಪೋಷಕರು ಮಗನನ್ನು ಮದುವೆ ಮಾಡಿಕೋ ಎಂದು ಗೋಗರಿಯುತ್ತಿದ್ದರಿಂದ ಮನನೊಂದ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಮಧ್ಯಪ್ರದೇಶ ಮೂಲದ ಅಜಯ್ (23) ಆತ್ಮಹತ್ಯೆ ಶರಣಾದ ಯುವಕ. ಟೈಲ್ಸ್ ಕೆಲಸ ಮಾಡಿಕೊಂಡು ವರ್ತೂರು ಸಮೀಪದ ಮುಳ್ಳೂರು ಗ್ರಾಮದಲ್ಲಿ ನೆಲಸಿದ್ದ ಅಜಯ್ ಗೆ ಮಧ್ಯಪ್ರದೇಶದಲ್ಲಿ ನೆಲೆಸಿರುವ ವಯಸ್ಸಾದ ಪೋಷಕರು ಸೋಮವಾರ ಹುಡುಗಿಯ ಫೋಟೋ ಕಳುಹಿಸಿ ಮದುವೆ ಮಾಡಿಕೋ ಎಂದು ತಿಳಿಸಿದ್ದರಂತೆ.

    ಮದುವೆ ಮಾಡಿಕೊಳ್ಳಲು ಇಷ್ಟವಿಲ್ಲದ ಅಜಯ್ ಇದೇ ವಿಷಯಕ್ಕೆ ಮನನೊಂದು ಕಳೆದ ರಾತ್ರಿ ಮುಳ್ಳೂರು ಗ್ರಾಮದ ಹೊರವಲಯದಲ್ಲಿನ ನೀಲಗಿರಿ ತೋಪಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.

    ವಿಷಯ ತಿಳಿದ ವರ್ತೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

  • ಪೋಷಕರಿಗೆ ಐಷಾರಾಮಿ ಕಾರನ್ನು ಗಿಫ್ಟ್ ಕೊಟ್ಟ ರೈನಾ: ಬೆಲೆ ಎಷ್ಟು ಗೊತ್ತಾ?

    ಪೋಷಕರಿಗೆ ಐಷಾರಾಮಿ ಕಾರನ್ನು ಗಿಫ್ಟ್ ಕೊಟ್ಟ ರೈನಾ: ಬೆಲೆ ಎಷ್ಟು ಗೊತ್ತಾ?

    ನವದೆಹಲಿ: ಟೀಂ ಇಂಡಿಯಾ ತಂಡದಲ್ಲಿ ಸ್ಥಾನ ಪಡೆಯಲು ಪ್ರಯತ್ನಿಸುತ್ತಿರುವ ಎಡಗೈ ಆಲ್ ರೌಂಡರ್ ಸುರೇಶ್ ರೈನಾ ಪೋಷಕರಿಗಾಗಿ 80 ಲಕ್ಷ ರೂ. ಬೆಲೆ ಬಾಳುವ ಕಾರನ್ನು ಖರೀದಿಸಿ ಗಿಫ್ಟ್ ನೀಡಿದ್ದಾರೆ.

    ಮರ್ಸಿಡಿಸ್ ಬೆಂಝ್‍ನ ಜಿಎಲ್‍ಇ 350ಡಿ  ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್(ಎಸ್‍ಯುವಿ) ಕಾರನ್ನು ಹೆತ್ತವರಿಗೆ ರೈನಾ ಉಡುಗೊರೆಯಾಗಿ ನೀಡಿದ್ದಾರೆ. ಒಟ್ಟು ಬೆಲೆಯ 80% ರಷ್ಟು ಹಣವನ್ನು ಸಾಲ ಮಾಡಿ ಈ ಐಷಾರಾಮಿ ಕಾರನ್ನು ಖರೀದಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

    ಉತ್ತರ ಪ್ರದೇಶ ಮೂಲದ ಸುರೇಶ್ ರೈನಾ ಉತ್ತರಾಖಂಡ್ ಡೆಹ್ರಾಡೂನ್ ನಲ್ಲಿ ಖರೀದಿ ಮಾಡಿದ್ದು ಯಾಕೆ ಎನ್ನುವ ಪ್ರಶ್ನೆ ಎದ್ದಿದೆ. ಈ ಪ್ರಶ್ನೆಗೆ, ನಾನು ನೀಲಿ ಬಣ್ಣದ ಕಾರನ್ನು ಹುಡುಕುತ್ತಿದ್ದೆ. ಈ ಬಣ್ಣದ ಕಾರು ಬೇರೆ ಎಲ್ಲಿಯೂ ಲಭ್ಯವಿಲ್ಲದ ಕಾರಣ ಉತ್ತರಾಖಂಡ್ ನಲ್ಲಿ ಖರೀದಿ ಮಾಡಿದ್ದೇನೆ ಎಂದು ರೈನಾ ಉತ್ತರಿಸಿದ್ದಾರೆ.

    ಆದರೆ ಕೆಲ ಮಾಧ್ಯಮಗಳು, ತೆರಿಗೆ ಉಳಿತಾಯ ಮಾಡಲು ಡೆಹ್ರಾಡೂನ್ ನಲ್ಲಿ ರೈನಾ ಕಾರನ್ನು ಖರೀದಿ ಮಡಿದ್ದಾರೆ ಎಂದು ಸುದ್ದಿ ಪ್ರಕಟಿಸಿವೆ.

    ಡೆಹ್ರಾಡೂನ್ ಹೆಚ್ಚುವರಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಅರವಿಂದ್ ಕುಮಾರ್ ಪ್ರತಿಕ್ರಿಯಿಸಿ, 10 ಲಕ್ಷ ರೂ. ಅಧಿಕ ಬೆಲೆಯ ಕಾರಿಗೆ ಉತ್ತರ ಪ್ರದೇಶದಲ್ಲಿ 10% ರಸ್ತೆ ತೆರಿಗೆ ಇದ್ದರೆ, ಉತ್ತರಾಖಂಡ್ ನಲ್ಲಿ 8% ಇದೆ. ಹೀಗಾಗಿ ಬಹಳಷ್ಟು ಮಂದಿ ಐಷಾರಾಮಿ ಕಾರುಗಳನ್ನು ಡೆಹ್ರಾಡೂನ್ ನಿಂದಲೇ ಖರೀದಿಸುತ್ತಾರೆ ಎಂದು ತಿಳಿಸಿದ್ದಾರೆ.

    ಈ ವಿಚಾರದ ಬಗ್ಗೆ ಶೋ ರೂಂ ಮ್ಯಾನೇಜರ್ ರವೀಂದ್ರ ಚೌಹನ್ ಮಾಧ್ಯಮ ಒಂದಕ್ಕೆ ಪ್ರತಿಕ್ರಿಯಿಸಿ, ಕಳೆದ 10 ದಿನಗಳಿಂದ ರೈನಾ ಕಾರು ಖರೀದಿ ಬಗ್ಗೆ ಫೋನ್ ಮೂಲಕ ನಮ್ಮನ್ನು ಸಂಪರ್ಕಿಸುತ್ತಿದ್ದರು. ಅಂತಿಮವಾಗಿ ನವೆಂಬರ್ 14 ರಂದು ಕಾರನ್ನು ರೈನಾ ಖರೀದಿಸಿದರು ಎಂದು ಮಾಹಿತಿ ನೀಡಿದ್ದಾರೆ.

    ಪ್ರಸ್ತುತ ಉತ್ತರ ಪ್ರದೇಶ ರಣಜಿ ತಂಡದಲ್ಲಿ ಆಡುತ್ತಿರುವ ರೈನಾ 223 ಏಕದಿನ ಪಂದ್ಯಗಳನ್ನು ಆಡಿ 5568 ರನ್ ಹೊಡೆದಿದ್ದಾರೆ.

    https://youtu.be/76kEsZqBZEE

  • ಹುಡುಗಿಯಾಗಲು ಬಯಸಿದ 12 ವರ್ಷದ ಮಗ- ಲಿಂಗ ಪರಿವರ್ತನೆಗೆ ಚಿಕಿತ್ಸೆ ಕೊಡಿಸಲು ಮುಂದಾದ ಪೋಷಕರು

    ಹುಡುಗಿಯಾಗಲು ಬಯಸಿದ 12 ವರ್ಷದ ಮಗ- ಲಿಂಗ ಪರಿವರ್ತನೆಗೆ ಚಿಕಿತ್ಸೆ ಕೊಡಿಸಲು ಮುಂದಾದ ಪೋಷಕರು

    ಲಂಡನ್: ಹುಡುಗ ಆಗಿ ಹುಟ್ಟಿ ಹೆಣ್ಣು ಮಕ್ಕಳ ರೀತಿ ಉಡುಪುಗಳನ್ನು ಧರಿಸಿ ಹುಡುಗಿಯರಂತೆಯೇ ಇರಬೇಕು ಎಂದು ಬಯಸಿದ ಮಗನಿಗೆ ಪೋಷಕರೇ ಲಿಂಗ ಪರಿವರ್ತನೆ ಚಿಕಿತ್ಸೆ ಕೊಡಿಸುತ್ತಿರುವ ಘಟನೆ ಲಂಡನ್‍ನಲ್ಲಿ ನಡೆದಿದೆ.

    ಕಿಯಾನ್ ಹುಡುಗ ಆಗಿ ಹುಟ್ಟಿದ್ದನು. ಆದರೆ ಅವನು ತನ್ನ ಸ್ನೇಹಿತರು ಮತ್ತು ಕುಟುಂಬದವರಿಗೆ ತನ್ನನ್ನು ಝೋಯಿ ಎಂದು ಕರೆಯಲು ಹೇಳುತ್ತಿದ್ದನು. ಬೇಸಿಗೆ ರಜೆ ಮುಗಿದ ನಂತರ ಶಾಲೆಗೆ ಸ್ಕರ್ಟ್ ಹಾಗೂ ಟೈಟ್ಸ್ ಧರಿಸಿಕೊಂಡು ಹೋಗುತ್ತಿದ್ದನು.

    ಈ ರೀತಿ ಬದಲಾಗಿದ್ದು ನನ್ನಲ್ಲಿ ಸಾಕಷ್ಟು ಖುಷಿ ತಂದಿದೆ ಹಾಗೂ ನನಗೆ ಧೈರ್ಯ ಬಂದಿದೆ ಎಂದು ಆತ ಹೇಳಿದ್ದಾನೆ. ಆತನ ಪೋಷಕರು ಅದಷ್ಟು ಬೇಗ ಮಗನಿಗೆ ಪ್ಯೂರ್ಬಟಿ ಬ್ಲಾಕಿಂಗ್ ಡ್ರಗ್ಸ್ ಕೊಡಿಸುವುದಾಗಿ ನಿರ್ಧರಿಸಿದ್ದಾರೆ.

     

    ಪೋಷಕರಾದ ಕರೆನ್ ಹಾಗೂ ಡೇವಿಡ್ ತಮ್ಮ ಮನೆಯಿಂದ 150 ಕಿ.ಮಿ ದೂರವಿರುವ ಲಂಡನ್ ಆಸ್ಪತ್ರೆಯಲ್ಲಿ ಝೋಯಿಗೆ ಆದಷ್ಟು ಬೇಗ ಚಿಕಿತ್ಸೆ ಶುರುವಾಗಲಿದೆ ಎಂಬ ಭರವಸೆಯಲ್ಲಿದ್ದಾರೆ. ಝೋಯಿಯ ಪ್ರೌಢಾವಸ್ಥೆ ಪ್ರರಂಭವಾಗೋದನ್ನ ನಿಯಂತ್ರಿಸಲು ಮಾಸಿಕ ಹಾರ್ಮೋನ್ ಇಂಜೆಕ್ಷನ್ ಶುರು ಮಾಡುವ ನಿರೀಕ್ಷೆಯಲ್ಲಿದ್ದಾರೆ.

    ಈಗ ಆತನ ವಯಸ್ಸು 12, ಶೀಘ್ರದಲ್ಲೇ 13 ವಯಸ್ಸಿಗೆ ಕಾಲಿಡುತ್ತಿದ್ದಾನೆ. ಪ್ರೌಢಾವಸ್ಥೆ ಶುರುವಾಗುವುದಕ್ಕೆ ಮುಂಚೆಯೇ ಚಿಕಿತ್ಸೆ ಕೊಡಿಸಬೇಕು. ಡಗ್ರ್ಸ್ ತಗೆದುಕೊಳ್ಳುವುದರಿಂದ ಅವನಿಗೆ ತನ್ನಚ್ಛಿಯಂತೆ ಇರಲು ಸಾಧ್ಯವಾದ್ರೆ ಹಾಗೇ ಆಗಲಿ. ನಮಗೆ ಅವನ ಸಂತೋಷ ಮುಖ್ಯ ಎಂದು ಝೋಯಿ ತಾಯಿ ಕರೆನ್ ತಿಳಿಸಿದ್ದಾರೆ.

    ಈ ಪ್ರಕ್ರಿಯೆ ಅವನಿಗೆ ಸುಲಭವಲ್ಲ. ಆದರೆ ಬ್ಲಾಕರ್ಸ್ ತೆಗೆದುಕೊಳ್ಳುವುದೇ ಝೋಯಿಗೆ ಅಗತ್ಯವಿದ್ದರೆ ನಾನು 100% ಆತನ ಬೆಂಬಲವಾಗಿರ್ತೀನಿ ಎಂದು ಝೋಯಿ ತಂದೆ ಡೇವಿಡ್ ತಿಳಿಸಿದ್ದಾರೆ.