Tag: parents

  • ಮಗ್ಳ ಸಾವಿನ ದುಃಖದಲ್ಲಿದ್ದ ಪೋಷಕರ ಕೈಯಲ್ಲಿ ಪೊಲೀಸರು ಮಾಡಿಸಿದ್ರು ಅಮಾನವೀಯ ಕೆಲಸ!

    ಮಗ್ಳ ಸಾವಿನ ದುಃಖದಲ್ಲಿದ್ದ ಪೋಷಕರ ಕೈಯಲ್ಲಿ ಪೊಲೀಸರು ಮಾಡಿಸಿದ್ರು ಅಮಾನವೀಯ ಕೆಲಸ!

    ಲಕ್ನೋ: ಕೆಲ ಪೊಲೀಸ್ ಅಧಿಕಾರಿಗಳು ಮಾನವೀಯತೆಯನ್ನು ಮರೆತು ಬಿಡ್ತಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. 10ನೇ ತರಗತಿಯ ಪರೀಕ್ಷೆಯಲ್ಲಿ ಫೇಲಾಗಿದ್ದಕ್ಕೆ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಪೋಷಕರು ಮಗಳ ಸಾವಿನ ದುಃಖದಲ್ಲಿದ್ದರು. ಈ ವೇಳೆ ಪೊಲೀಸರು ಪೋಷಕರ ಕೈಯಿಂದಲೇ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಕಟ್ಟಿಕೊಡಲು ಆದೇಶಿಸಿದ್ದಾರೆ.

    ಉತ್ತರ ಪ್ರದೇಶ ರಾಜ್ಯದ ಮೈನಪುರಿ ಜಿಲ್ಲೆಯ ಮೋಹನ್ ನಗರದಲ್ಲಿ ಈ ಅಮಾನವೀಯ ಘಟನೆ ನಡೆದಿದೆ. 10ನೇ ತರಗತಿಯ ಪರೀಕ್ಷೆಯಲ್ಲಿ ಫೇಲಾಗಿದ್ದಕ್ಕೆ ಅಂಜಲಿ ಎಂಬ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಅಂಜಲಿ ತಂದೆ-ತಾಯಿ ಎಂದಿನಂತೆ ಕೂಲಿ ಕೆಲಸಕ್ಕೆ ತೆರಳಿದ್ದ ವೇಳೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ.

    ಅಂಜಲಿ ಸಾವಿನ ಸುದ್ದಿ ತಿಳಿದ ಬಳಿಕ ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ. ಪೊಲೀಸರು ಬರುವ ಮೊದಲೇ ಗ್ರಾಮಸ್ಥರು ಅಂಜಲಿ ಶವವನ್ನು ಕೆಳಗೆ ಇಳಿಸಿದ್ರು. ಮೃತದೇಹದ ಮರಣೋತ್ತರ ಶವ ಪರೀಕ್ಷೆ ನಡೆಸಬೇಕಿದೆ. ಹಾಗಾಗಿ ಮೃತದೇಹವನ್ನು ಬೆಡ್ ಶೀಟ್ ನಲ್ಲಿ ಕಟ್ಟಿಕೊಡಿ ಅಂತಾ ಪೋಷಕರಿಗೆ ಆದೇಶಿಸಿದ್ದಾರೆ. ಕೊನೆಗೆ ಪೋಷಕರೇ ಬೆಡ್‍ಶೀಟ್‍ನಲ್ಲಿ ಅಂಜಲಿ ಮೃತದೇಹವನ್ನು ಸುತ್ತಿ, ದಾರದಿಂದ ಕಟ್ಟಿ ಪೊಲೀಸರ ವಶಕ್ಕೆ ನೀಡಿದ್ದಾರೆ.

    ಪೊಲೀಸರ ವರ್ತನೆಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಘಟನೆಗಳು ನಡೆದಾಗ ಪೊಲೀಸರು ಆಸ್ಪತ್ರೆಯ ಸಿಬ್ಬಂದಿಯ ಜೊತೆಗೆ ಬಂದು ಮೃತದೇಹವನ್ನು ತೆಗೆದುಕೊಂಡು ಹೋಗುತ್ತಾರೆ. ಆದ್ರೆ ಇಲ್ಲಿಯ ಪೊಲೀಸರು ಪೋಷಕರ ಕೈಯಲ್ಲಿಯೇ ಅಮಾನವೀಯ ಕೆಲಸ ಮಾಡಿಸಿದ್ದಾರೆ.

  • ಅಪಘಾತದಲ್ಲಿ ಶಾರ್ದೂಲ್ ಠಾಕೂರ್ ಪೋಷಕರಿಗೆ ಗಾಯ

    ಅಪಘಾತದಲ್ಲಿ ಶಾರ್ದೂಲ್ ಠಾಕೂರ್ ಪೋಷಕರಿಗೆ ಗಾಯ

    ಮುಂಬೈ: ಟೀಂ ಇಂಡಿಯಾ ಯುವ ಆಟಗಾರ ಶಾರ್ದೂಲ್ ಪೋಷಕರು ಮಹಾರಾಷ್ಟ್ರದ ಪಾಲ್ಗರ್ ಪ್ರದೇಶದಲ್ಲಿ ಮಂಗಳವಾರ ತಡರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದಾರೆ.

    ಘಟನೆ ಮಂಗಳವಾರ ರಾತ್ರಿ 8 ಗಂಟೆ ವೇಳೆಗೆ ನಡೆದಿದೆ. ಬೈಕ್ ನಲ್ಲಿ ತೆರಳುತ್ತಿದ್ದ ಶಾರ್ದೂಲ್ ತಂದೆ ಠಾಕೂರ್, ತಾಯಿ ಹಂಸ ಠಾಕೂರ್ ಅಪಘಾತಕ್ಕೆ ಒಳಗಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಇಬ್ಬರನ್ನು ಪಾಲ್ಗರ್ ನ ಸ್ಥಳೀಯ ಧಾವಲೇ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಬೈಕ್ ಚಾಲನೆ ವೇಳೆ ಆಯತಪ್ಪಿ ಬಿದ್ದ ಕಾರಣದಿಂದ ಘಟನೆ ನಡೆದಿದೆ ಎಂದು ವರದಿಯಾಗಿದೆ.

    ಸದ್ಯ ಶಾರ್ದೂಲ್ ಐಪಿಎಲ್ 2018ರ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದಾರೆ. ಚೆನ್ನೈ ತಂಡ ಶಾರ್ದೂಲ್ ರನ್ನು 2.60 ಕೋಟಿ ರೂ. ನೀಡಿ ಖರೀದಿಸಿತ್ತು.

  • ನಾಪತ್ತೆಯಾಗಿದ್ದ ಬೆಂಗ್ಳೂರಿನ ಬಾಲಕ ಪತ್ತೆ

    ನಾಪತ್ತೆಯಾಗಿದ್ದ ಬೆಂಗ್ಳೂರಿನ ಬಾಲಕ ಪತ್ತೆ

    ಬೆಂಗಳೂರು: ನಾಪತ್ತೆಯಾಗಿದ್ದ ನಗರದ ಬಾಲಕ ತಮಿಳುನಾಡಿನಲ್ಲಿ ಪತ್ತೆಯಾಗಿದ್ದಾನೆ.

    ಮೇ 4 ರಂದು ಮಹಾಲಕ್ಷಿಪುರ ನಿವಾಸಿ 15 ವರ್ಷದ ಎಸ್. ಕಾರ್ತಿಕ್ ನಾಪತ್ತೆಯಾಗಿದ್ದನು. ನಂತರ ಆತನ ಪೋಷಕರು ಈ ಬಗ್ಗೆ ಪೊಲೀಸರಿಗೆ ಮತ್ತು ಮಾಧ್ಯಮದವರಿಗೆ ಮಾಹಿತಿ ತಿಳಿಸಿ ಹುಡುಕಾಡುತ್ತಿದ್ದರು. ಮೂರು ದಿನಗಳಾದರೂ ಕಾರ್ತಿಕ್ ಪತ್ತೆಯಾಗಿರಲಿಲ್ಲ. ಆದರೆ ಇಂದು ತಮಿಳುನಾಡಿನಲ್ಲಿ ಬಾಲಕ ಪತ್ತೆಯಾಗಿದ್ದಾನೆ.

    ಏನಿದು ಪ್ರಕರಣ?: ಶುಕ್ರವಾರ ಕಾರ್ತಿಕ್ ಮನೆಯಿಂದ ಸುಮಾರು 10.15 ಕ್ಕೆ ಆಟವಾಡಿಕೊಂಡು ಬರುವುದಾಗಿ ಮನೆಯಲ್ಲಿ ತಿಳಿಸಿ, ಹೊರಗೆ ಹೋದವನು ಹಿಂದಿರುಗಿ ಬಂದಿರಲಿಲ್ಲ. ಆದ್ದರಿಂದ ಕಾಣೆಯಾಗಿರುವ ನಮ್ಮ ಮಗನನ್ನ ಪತ್ತೆ ಮಾಡಿಕೊಡಬೇಕೆಂದು ಮನವಿ ಮಾಡಿಕೊಳ್ಳೂತ್ತಿದ್ದೇವೆ ಎಂದು ಪೋಷಕರು ದೂರಿನಲ್ಲಿ ತಿಳಿಸಿದ್ದರು.

    ಈ ಕುರಿತು ಬಾಲಕ ಅಪ್ರಾಪ್ತನಾಗಿರುವುದರಿಂದ ಐಪಿಸಿ 363 ಅಡಿಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ನಂತರ ಬಾಲಕನ ಬಗ್ಗೆ ಏನಾದರೂ ಮಾಹಿತಿ ತಿಳಿದರೆ ಮಹಾಲಕ್ಷಿಪುರ ಪೊಲೀಸ್ ಠಾಣೆಗೆ ಅಥವಾ ನಮಗೆ ಮಾಹಿತಿ ನೀಡಬೇಕೆಂದು ಪೋಷಕರು ಜನರಲ್ಲಿ ಮನವಿ ಮಾಡಿಕೊಂಡಿದ್ದರು.

  • ಚಲಿಸುವ ವ್ಯಾನ್‍ ನಿಂದ 10 ತಿಂಗ್ಳ ಮಗು ಬಿದ್ದರೂ ಪೋಷಕರಿಗೆ ಗೊತ್ತಾಗ್ಲಿಲ್ಲ- ವಿಡಿಯೋ ನೋಡಿ

    ಚಲಿಸುವ ವ್ಯಾನ್‍ ನಿಂದ 10 ತಿಂಗ್ಳ ಮಗು ಬಿದ್ದರೂ ಪೋಷಕರಿಗೆ ಗೊತ್ತಾಗ್ಲಿಲ್ಲ- ವಿಡಿಯೋ ನೋಡಿ

    ಬೀಜಿಂಗ್: 10 ತಿಂಗಳ ಮಗುವೊಂದು ಚಲಿಸುವ ವ್ಯಾನ್ ನಿಂದ ಬಿಡುವಿಲ್ಲದೆ ವಾಹನಗಳೂ ಓಡಾಡುವ ರಸ್ತೆಯಲ್ಲಿ ಬಿದ್ದ ಆಘಾತಕಾರಿ ಘಟನೆ ಚೀನಾದಲ್ಲಿ ನಡೆದಿದೆ.

    ಈ ಘಟನೆ ಚೀನಾದ ಜಿಯಾಂಗ್ಸು ನಗರದ ಚಾಂಗ್ಝೌ ನಗರದಲ್ಲಿ ನಡೆದಿದ್ದು, ಮಗು ವ್ಯಾನಿನಿಂದ ಬಿದ್ದರೂ ಪೋಷಕರು ಗಮನಿಸದೆ ಹೋಗಿದ್ದಾರೆ. ಬಿಳಿಯ ವ್ಯಾನ್ ಒಂದು ರಸ್ತೆಯಲ್ಲಿ ತಿರುವು ತೆಗೆದುಕೊಂಡಿದೆ. ಆಗ ವ್ಯಾನಿನ ಹಿಂಭಾಗದ ಸೀಟಿನಲ್ಲಿದ್ದ ಮಗು ರಸ್ತೆಗೆ ಬಿದ್ದಿದೆ. ಆದರೆ ಮಗು ವಾಹನದಿಂದ ಹೊರ ಬಿದ್ದರೂ ಪೋಷಕರು ಅದನ್ನು ಗಮನಿಸದೇ ವಾಹನ ಚಲಾಯಿಸಿಕೊಂಡು ಹೋಗಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ರಸ್ತೆಯಲ್ಲಿ ಬಿದ್ದ ತಕ್ಷಣ ಅದೃಷ್ಟವಶಾತ್ ದಾರಿಯಲ್ಲಿ ಸಂಚರಿಸುತ್ತಿದ್ದ ಜನರು ನೋಡಿ ಮಗುವನ್ನು ಎತ್ತಿಕೊಂಡಿದ್ದಾರೆ. ಅಷ್ಟರಲ್ಲಿ ವಾಹನದಲ್ಲಿ ಮಗು ಇಲ್ಲದಿರುವುದನ್ನು ಪೋಷಕರು ಗಮನಿಸಿದ್ದು, ಹಿಂದಿರುಗಿ ಬಂದು ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

    https://www.youtube.com/watch?v=nGtzwflKNio

  • ಪ್ಲಾನ್ ಕೇಳಿದ್ರೆ ಶಾಕ್ ಆಗ್ತೀರಿ- ಪ್ರಿಯತಮನ ಜೊತೆ ಹೊಸ ಜೀವನ ಆರಂಭಿಸಲು ತಂದೆ-ತಾಯಿ, ಇಬ್ಬರು ಹೆಣ್ಮಕ್ಕಳನ್ನೇ ಕೊಲೆಗೈದ್ಳು!

    ಪ್ಲಾನ್ ಕೇಳಿದ್ರೆ ಶಾಕ್ ಆಗ್ತೀರಿ- ಪ್ರಿಯತಮನ ಜೊತೆ ಹೊಸ ಜೀವನ ಆರಂಭಿಸಲು ತಂದೆ-ತಾಯಿ, ಇಬ್ಬರು ಹೆಣ್ಮಕ್ಕಳನ್ನೇ ಕೊಲೆಗೈದ್ಳು!

    ತಿರುವನಂತಪುರ: ತನ್ನ ಪ್ರಿಯತಮನ ಜೊತೆ ಹೊಸ ಜೀವನ ನಡೆಸಲು ಅಡ್ಡಿಯಾಗುತ್ತಿದ್ದಾರೆಂದು ತಂದೆ-ತಾಯಿ ಹಾಗೂ ತನ್ನಿಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದ ಖತರ್ನಾಕ್ ಮಹಿಳೆಯನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ.

    ಬಂಧಿತ ಮಹಿಳೆಯನ್ನು 34 ವರ್ಷದ ಸೌಮ್ಯ ಎಂದು ಗುರುತಿಸಲಾಗಿದೆ. ಬಂಧಿಸಿದ ಬಳಿಕ ಬರೋಬ್ಬರಿ 11 ಗಂಟೆ ವಿಚಾರಣೆ ನಡೆಸಿದಾಗ ನಾಲ್ವರ ಸಾವಿನ ಹಿಂದಿನ ರಹಸ್ಯ ಬಯಲಾಗಿದೆ ಅಂತ ಪೊಲೀಸರು ತಿಳಿಸಿದ್ದಾರೆ.

    ಹೆತ್ತವರು, ಮಗಳ ಕೊಲೆ: ಜನವರಿ 31ರಂದು ಸೌಮ್ಯ ಮಗಳು 8 ವರ್ಷದ ಐಶ್ವರ್ಯಾ ಸಾವನ್ನಪ್ಪಿದ್ದಳು. ಈ ಮೊದಲು ಮಾರ್ಚ್ 7ರಂದು ಆಕೆಯ ತಾಯಿ 68 ವರ್ಷದ ತಾಯಿ ಕಮಲ ಹಾಗೂ ಏಪ್ರಿಲ್ 13ರಂದು ತಂದೆ 76 ವರ್ಷದ ಕುನ್ಹಿಕನ್ನಣ್ ಮೃತಪಟ್ಟಿದ್ದರು. ಇನ್ನೊರ್ವ ಮಗಳು ಕೀರ್ತನಾ 2012ರಲ್ಲಿ ಮೃತಪಟ್ಟಿದ್ದಳು. ಈ ನಾಲ್ವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿವಾಸದ ಪಕ್ಕದ ನಿವಾಸದಲ್ಲಿದ್ದು, ಇವೆರೆಲ್ಲರೂ ವಾಂತಿ ಬಾಧೆಯಿಂದ ಮೃತಪಟ್ಟಿದ್ದಾರೆಂದು ವರದಿಯಾಗಿತ್ತು.

    ಇತ್ತ ಒಬ್ಬರಾದ ಮೇಲೊಬ್ಬರಂತೆ ಕುಟುಂಬದವರೆಲ್ಲ ಸಾವನ್ನಪ್ಪಿದ್ದರಿಂದ ಸಂಶಯಗೊಂಡ ಕುಟುಂಬಸ್ಥರು ಈ ಕುರಿತು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

    ತನ್ನ ನಿವಾಸದ ಬಳಿಯೇ ನಿಗೂಢವಾಗಿ ವ್ಯಕ್ತಿಗಳು ಸಾವನ್ನಪ್ಪುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಪಿಣರಾಯಿ ವಿಜಯನ್ ಪೊಲೀಸರಿಗೆ ತನಿಖೆ ನಡೆಸಿ ಕೊಲೆ ರಹಸ್ಯವನ್ನು ಬೇಧಿಸುವಂತೆ ಸೂಚಿಸಿದ್ದರು. ತನಿಖೆಗೆ ಒತ್ತಡ ಜಾಸ್ತಿಯಾಗುತ್ತಿದ್ದಂತೆ ಮೃತದೇಹಗಳನ್ನು ಸಮಾಧಿಯಿಂದ ಮೇಲಕ್ಕೆ ಎತ್ತಲಾಗಿತ್ತು. ವಿಧಿ ವಿಜ್ಞಾನ ಪ್ರಯೋಗಾಲಯದವರು ಮೃತದೇಹವನ್ನು ಪರಿಶೀಲಿಸಿದಾಗ ಐಶ್ವರ್ಯಾ ದೇಹದಲ್ಲಿ ಅಲ್ಯೂಮಿನಿಯಂ ಫಾಸ್ಫೈಡ್ ಇರುವ ಅಂಶ ಪತ್ತೆಯಾಗಿತ್ತು. ಸಾಧಾರಣವಾಗಿ ಕೀಟನಾಶಕದಲ್ಲಿ ಬಳಸುವ ಈ ರಾಸಾಯನಿಕ ದೇಹದಲ್ಲಿ ಪತ್ತೆಯಾದ ಹಿನ್ನಲೆಯಲ್ಲಿ ಇದೊಂದು ಕೊಲೆ ಎನ್ನುವುದು ಪೊಲೀಸರಿಗೆ ಗೊತ್ತಾಯಿತು.

    ಈ ನಡುವೆ ತನ್ನ ಮೇಲೆ ಯಾರೂ ಸಂಶಯ ವ್ಯಕ್ತಪಡಿಸಬಾರದೆಂದು ಸೌಮ್ಯ ಮಕ್ಕಳು ಹಾಗೂ ಪೋಷಕರಿಗೆ ಕಂಡು ಬಂದಿದ್ದ ಸಮಸ್ಯೆ ನನ್ನಲ್ಲೂ ಕಂಡುಬರುತ್ತದೆ ಎಂದು ಹೇಳಿ ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾಗಿದ್ದಳು. ಚಿಕಿತ್ಸೆಯಿಂದ ಡಿಸ್ಚಾರ್ಜ್ ಆದ ಕೂಡಲೇ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ಗೌಪ್ಯ ಸ್ಥಳದಲ್ಲಿ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ನಿಜವಾದ ಸಂಗತಿ ಪ್ರಕಟವಾಗಿದ್ದು, ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಸದ್ಯ ಆರೋಪಿ ಸೌಮ್ಯಾಳನ್ನು 4 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

    ಕೊಲೆ ಮಾಡಿದ್ದು ಯಾಕೆ?
    ಮದುವೆಯಾಗಿ ಈಗಾಗಲೇ ಮಕ್ಕಳನ್ನು ಹೊಂದಿರುವ ಸೌಮ್ಯಳಿಗೆ ಅಕ್ರಮ ಸಂಬಂಧವಿತ್ತು. ಅಷ್ಟೇ ಅಲ್ಲದೇ ಗಂಡ ಜೊತೆ ಡೈವೋರ್ಸ್ ಪಡೆದಿದ್ದಳು. ಒಂದು ದಿನ ತಾಯಿ ಸೌಮ್ಯ ಪ್ರಿಯಕರ ಜೊತೆ ಲೈಂಗಿಕ ಸಂಪರ್ಕ ನಡೆಸುತ್ತಿದ್ದಾಗ ಸಣ್ಣ ಮಗಳು ಕೀರ್ತನಾ ನೋಡಿದ್ದಾಳೆ. ಈ ವಿಚಾರ ಗೊತ್ತಾದ ಕೂಡಲೇ ಸಿಟ್ಟುಗೊಂಡ ಸೌಮ್ಯ ಮಗಳನ್ನು ಇಲಿಪಾಷಾಣ ಹಾಕಿ 2012 ರಲ್ಲಿ ಕೊಲೆ ಮಾಡಿದ್ದಳು. ನಂತರ ತನ್ನ ಅಕ್ರಮ ಸಂಬಂಧಕ್ಕೆ ಮುಂದುವರಿಸಲು ಮನೆಯವರು ಅಡ್ಡಿ ಆಗುತ್ತಿದ್ದಾರೆ ಎಂದು ತಿಳಿದು ಹಂತ ಹಂತವಾಗಿ ಒಬ್ಬೊಬ್ಬರನ್ನು ಮುಗಿಸಲು ಪ್ಲಾನ್ ಮಾಡುತ್ತಾ ಬಂದಿದ್ದಾಳೆ. ಅದರಂತೆ ಎಲ್ಲರಿಗೂ ಆಹಾರದಲ್ಲಿ ಇಲಿ ಪಾಷಾಣ ಹಾಕಿ ಕೊಲೆ ಮಾಡಿದ್ದಾಳೆ. ನಿಗೂಢವಾಗಿ ಸಾವನ್ನಪ್ಪುತ್ತಿದ್ದ ಹಿನ್ನೆಲೆಯಲ್ಲಿ ಜನರು ಪ್ರಶ್ನೆ ಮಾಡುತ್ತಿದ್ದಾಗ ಆಕೆ ನನ್ನ ಮಗಳು ಹಿಂದೆ ವಾಂತಿ ಮಾಡಿ ಮೃತಪಟ್ಟಿದ್ದಳು. ಇದಾದ ನಂತರ ಪೋಷಕರು ಈ ರೀತಿಯಾಗಿ ಸಾವನ್ನಪ್ಪಿದ್ದಾರೆ. ಯಾವ ಕಾರಣಕ್ಕೆ ಇವರೆಲ್ಲ ಮೃತಪಡುತ್ತಿದ್ದಾರೆ ಎನ್ನುವುದು ತಿಳಿದಿಲ್ಲ ಎಂದು ಜನರಲ್ಲಿ ಹೇಳಿ ತಾನು ಈ ಪ್ರಕರಣದಲ್ಲಿ ಅಮಾಯಕಿ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಳು.

  • ನಾಪತ್ತೆಯಾಗಿರುವ ಮಗನನ್ನು ಹುಡುಕಿ ಕೊಡಿ- ಪೋಷಕರಿಂದ ಮನವಿ

    ನಾಪತ್ತೆಯಾಗಿರುವ ಮಗನನ್ನು ಹುಡುಕಿ ಕೊಡಿ- ಪೋಷಕರಿಂದ ಮನವಿ

    ಬೆಂಗಳೂರು: 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಬಾಲಕನೊಬ್ಬ ನಾಪತ್ತೆಯಾಗಿದ್ದು ಆತನನ್ನು ದಯವಿಟ್ಟು ಹುಡುಕಿಕೊಡಿ ಎಂದು ಪೋಷಕರು ಮನವಿ ಮಾಡಿದ್ದಾರೆ.

    ಲೋಕೇಶ್ ನಾಪತ್ತೆಯಾಗಿರುವ ಬಾಲಕ. ಏಪ್ರಿಲ್ 5 ರಂದು ನಾಪತ್ತೆಯಾಗಿದ್ದು ಆತನ ಪೋಷಕರು ಅಂದಿನಿಂದ ಹುಡುಕಾಡುತ್ತಿದ್ದಾರೆ. ಚನ್ನಪ್ಪ ಬಿಲ್ಡಿಂಗ್, ಶೀಗೇಹಳ್ಲಿಯಲ್ಲಿ ವಾಸವಾಗಿರುವ ಬಾಲಕನ ತಂದೆ ಡಿ.ಬಿ.ನಾಗರಾಜ ನಗರದ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

    ದೂರಿನಲ್ಲಿದೆ?
    ಚೈತನ್ಯ ಕಂಪನಿಯಲ್ಲಿ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿರುವ ನಾಗರಾಜು ಅವರಿಗೆ ಜನಾರ್ದನ್ (18) ಮತ್ತು ಲೋಕೇಶ್(15) ವರ್ಷದ ಇಬ್ಬರು ಮಕ್ಕಳಿದ್ದಾರೆ. 2ನೇ ಮಗ ಲೋಕೇಶ್ ಕೊಳ್ಳೇಗಾಲ ಡಾನ್ ಬಾಸ್ಕೋ ಸ್ಕೂಲ್ ನಲ್ಲಿ 9 ನೇ ತರಗತಿ ಓದುತ್ತಿದ್ದನು. ಲೋಕೇಶ್ ಇತ್ತೀಚೆಗೆ ವಾರ್ಷಿಕ ಪರೀಕ್ಷೆ ಮುಗಿಸಿ ಮಾರ್ಚ್ 31ರಂದು ಬೆಂಗಳೂರಿನ ಮನೆಗೆ ಬಂದಿದ್ದ.

    ಏಪ್ರಿಲ್ 5ರಂದು ಮಧ್ಯಾಹ್ನ 4 ಗಂಟೆಗೆ ಮನೆಯಿಂದ ಹೊರಗಡೆ ಹೋಗಿದ್ದನು. ಆದರೆ ಈತ ತುಂಬಾ ಸಮಯವಾದರೂ ಮನೆಗೆ ಹಿಂದಿರುಗಲಿಲ್ಲ. ಪೋಷಕರು ಆತನ ಸ್ನೇಹಿತರು ಮತ್ತು ಸಂಬಂಧಿಕರೆಲ್ಲರನ್ನು ವಿಚಾರಿಸಿದ್ದಾರೆ. ಅಷ್ಟೇ ಅಲ್ಲದೇ ಆತನ ಶಾಲೆಗೂ ಹೋಗಿ ವಿಚಾರಿಸಿದ್ದಾರೆ. ಆದರೆ ಏನು ಪ್ರಯೋಜನವಾಗಿಲ್ಲ. ಇದುವರೆಗೂ ಬಾಲಕ ಪತ್ತೆಯಾಗಿಲ್ಲ. ಹೀಗಾಗಿ ಲೋಕೇಶ್ ಕಾಣೆಯಾಗಿರಬಹುದು ಅಥವಾ ಅಪಹರಣವಾಗಿರಬಹುದು ಎಂದು ದೂರಿನಲ್ಲಿ ಅನುಮಾನ ವ್ಯಕ್ತಪಡಿಸಿದ್ದಾರೆ.

    ಈ ಬಾಲಕನ ಬಗ್ಗೆ ನಿಮಗೆ ಏನಾದರೂ ಮಾಹಿತಿ ತಿಳಿದರೆ ಈ ಫೋನ್ ನಂಬರ್ ಗೆ ಕರೆ ಮಾಡಿ 99009 13545, 98808 53844

  • ಸಬ್ ರಿಜಿಸ್ಟರ್ ಕಚೇರಿಗೆ ಮದ್ವೆಯಾಗಲು ಬಂದ ಜೋಡಿ-ಅವ್ರಿಗಿಂತ ಮುಂಚೆಯೇ ಕುಟುಂಬಸ್ಥರ ಎಂಟ್ರಿ

    ಸಬ್ ರಿಜಿಸ್ಟರ್ ಕಚೇರಿಗೆ ಮದ್ವೆಯಾಗಲು ಬಂದ ಜೋಡಿ-ಅವ್ರಿಗಿಂತ ಮುಂಚೆಯೇ ಕುಟುಂಬಸ್ಥರ ಎಂಟ್ರಿ

    ದಾವಣಗೆರೆ: ಪ್ರೇಮಿಗಳು ಮದುವೆಯಾಗಲು ಮುಂದಾಗಿದ್ದಕ್ಕೆ ಮನೆಯವರು ಸಬ್ ರಿಜಿಸ್ಟರ್ ಕಚೇರಿ ಮುಂದೆಯೇ ಪ್ರೇಮಿಗಳ ಕುಟುಂಬದವರು ಹೊಡೆದಾಡಿಕೊಂಡ ಘಟನೆ ದಾವಣಗೆರೆ ಯಲ್ಲಿ ನಡೆದಿದೆ.

    ಜಿಲ್ಲೆಯ ಹೊಸನಾಯ್ಕನಹಳ್ಳಿಯ ಬಸವರಾಜ್ ಹಾಗೂ ಚಿತ್ರದುರ್ಗ ಜಿಲ್ಲೆ ಖಂಡೇನಹಳ್ಳಿ ತಾಂಡದ ನಯನ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಕುಟುಂಬದವರ ವಿರೋಧದ ಹಿನ್ನೆಲೆ ಇಂದು ದಾವಣಗೆರೆಯ ಸಬ್ ರಿಜಿಸ್ಟರ್ ಅಫೀಸ್ ನಲ್ಲಿ ಮದುವೆಯಾಗಲು ಮುಂದಾಗಿದ್ದರು. ವಿಷಯ ತಿಳಿದು ಎರಡು ಕುಟುಂಬದವರು ಸಬ್ ರಿಜಿಸ್ಟರ್ ಅಫೀಸ್ ಗೆ ಅಗಮಿಸಿದ್ರು.

    ಯುವತಿಯನ್ನು ಕರೆದುಕೊಂಡಲು ಹೋಗಲು ಆಕೆಯ ಮನೆಯವರು ಪ್ರಯತ್ನಿಸಿದ್ದರು. ನಯನಾ ಮನೆಗೆ ಹೋಗಲು ಒಪ್ಪದ ಕಾರಣ ಎರಡು ಕುಟುಂಬಗಳ ನಡುವೆ ಕಾರಣ ಸಬ್ ರಿಜಿಸ್ಟರ್ ಅಫೀಸ್ ಮುಂಭಾಗದಲ್ಲಿಯೇ ಜಗಳ ಶುರುವಾಗಿದೆ.

    ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಎರಡು ಕುಟುಂಬಸ್ಥರನ್ನು ಸಮಾಧಾನ ಮಾಡಿಸಿ ಸಂಧಾನ ಮಾಡಿಸಿದ್ದಾರೆ. ಕೊನೆಗೆ ಎರಡು ಕುಟುಂಬಸ್ಥರ ಸಮ್ಮುಖದಲ್ಲಿ ಪ್ರೇಮಿಗಳಿಬ್ಬರ ಮದುವೆಯನ್ನು ಪೊಲೀಸರು ಮಾಡಿಸಿದ್ದಾರೆ.

  • ತನ್ನ ಜೊತೆ ಪ್ರಿಯಕರ ಓಡಿಹೋಗಲು ನಿರಾಕರಿಸಿದ್ದಕ್ಕೆ ಮತ್ತೊಬ್ಬನ ಜೊತೆ ಓಡಿಹೋದ ಅಪ್ರಾಪ್ತೆ!

    ತನ್ನ ಜೊತೆ ಪ್ರಿಯಕರ ಓಡಿಹೋಗಲು ನಿರಾಕರಿಸಿದ್ದಕ್ಕೆ ಮತ್ತೊಬ್ಬನ ಜೊತೆ ಓಡಿಹೋದ ಅಪ್ರಾಪ್ತೆ!

    ಡೆಹ್ರಾಡೂನ್: ಪ್ರಿಯಕರ ತನ್ನ ಜೊತೆ ಓಡಿಹೋಗಲು ನಿರಾಕರಿಸಿದ್ದಕ್ಕೆ ಅಪ್ರಾಪ್ತೆ ಬಾಲಾಕಿಯೊಬ್ಬಳು ಮತ್ತೊಬ್ಬ ಯುವಕನ ಜೊತೆಗೆ ಓಡಿ ಹೋದ ಘಟನೆ ಉತ್ತರಖಂಡದ ಡೆಹ್ರಾಡೂನ್‍ನಲ್ಲಿ ನಡೆದಿದ್ದು, ಪೊಲೀಸರು ವಿಚಾರಣೆ ನಡೆಸಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ.

    ಬಾಲಕಿ ತನ್ನದೇ ಗ್ರಾಮದ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ನಂತರ ಈ ವಿಷಯ ಗ್ರಾಮದಲ್ಲಿ ಎಲ್ಲರಿಗೂ ತಿಳಿದು, ಚರ್ಚೆಯಾಗುತ್ತಿದ್ದಂತೆ ಬಾಲಕಿಯ ಪೋಷಕರು ಆಕೆಯನ್ನು ಮನೆಯ ಹೊರಗೆ ಕಳುಹಿಸದಂತೆ ರೂಮಿನಲ್ಲಿ ಕೂಡಿ ಹಾಕಿದ್ದರು.

    ಪೋಷಕರ ಈ ವರ್ತನೆಯನ್ನು ನೋಡಿ ಬಾಲಕಿ ನಾವಿಬ್ಬರೂ ಓಡಿ ಹೋಗೋಣವೆಂದು ಪ್ರಿಯಕರನಿಗೆ ಕರೆ ಮಾಡಿ ಒತ್ತಡ ಹೇರಿದ್ದಾಳೆ. ಆದರೆ ಯುವಕ ಬಾಲಕಿ ಜೊತೆ ಓಡಿ ಹೋಗಲು ನಿರಾಕರಿಸಿದ್ದಾನೆ.

    ಆದರೆ ಬಾಲಕಿ ತನ್ನ ಹಠವನ್ನು ಬಿಡದೇ ಸಮಯ ನೋಡಿ ಮನೆಯಿಂದ ಓಡಿ ಹೋಗಿ ರಾಯಸಿ ತಲುಪಿದ್ದಳು. ನಂತರ ಅಲ್ಲಿ ಬೇರೆ ಯುವಕನನ್ನು ಕರೆ ಮಾಡಿ ಆ ಯುವಕನನ್ನು ಕೂಡ ರಾಯಸಿಗೆ ಕರೆಸಿಕೊಂಡು ಆತನ ಜೊತೆ ಓಡಿಹೋಗಿದ್ದಾಳೆ ಎಂದು ವರದಿಯಾಗಿದೆ.

    ಬಾಲಕಿ ಮನೆಯಿಂದ ನಾಪತ್ತೆ ಆದಾಗಿನಿಂದ ಆಕೆಯ ಪೋಷಕರು ಆಕೆಯನ್ನು ಹುಡುಕಾಡುತ್ತಿದ್ದರು. ಆದರೆ ಬಾಲಕಿಯ ಸುಳಿವು ಅವರಿಗೆ ಸಿಗಲಿಲ್ಲ. ನಂತರ ಬಾಲಕಿಯ ಪೋಷಕರು ಲಶ್ಕರ್ ಕೋತ್‍ವಾಲ್ ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ಪೊಲೀಸರು ಬಾಲಕಿಯ ಪ್ರಿಯಕರನನ್ನು ಕರೆಸಿ ವಿಚಾರಣೆ ನಡೆಸಿದ್ದಾಗ ಸಂಪೂರ್ಣ ವಿಷಯ ಬೆಳಕಿಗೆ ಬಂದಿದೆ.

    ಬಾಲಕಿ ಬೇರೊಬ್ಬ ಯುವಕನ ಜೊತೆ ಓಡಿ ಹೋಗಿರುವ ಮಾಹಿತಿ ದೊರೆತ್ತಿದ್ದು, ಆ ಆಧಾರದ ಮೇಲೆ ತನಿಖೆ ನಡೆಸಲಾಗುತ್ತದೆ ಎಂದು ಕೋತ್‍ವಾಲ್ ತ್ರಿವೇಂದ್ರ್ ಸಿಂಗ್ ರಾಣಾ ತಿಳಿಸಿದ್ದಾರೆ.

  • ಲವ್ವರ್ ಜೊತೆ ಮದ್ವೆಯಾಗುವಂತೆ ಪತ್ನಿಗೆ ಹೇಳಿ ಪತಿ ಆತ್ಮಹತ್ಯೆ!

    ಲವ್ವರ್ ಜೊತೆ ಮದ್ವೆಯಾಗುವಂತೆ ಪತ್ನಿಗೆ ಹೇಳಿ ಪತಿ ಆತ್ಮಹತ್ಯೆ!

    ಹೈದರಾಬಾದ್: ಪತ್ನಿಯ ಅನೈತಿಕ ಸಂಬಂಧದಿಂದ ಬೇಸತ್ತ ಪತಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ಶಮೀರ್‍ಪೆಟ್ ನಲ್ಲಿ ನಡೆದಿದೆ.

    ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು 24 ವರ್ಷದ ಕೆ ಆಚಾರ್ಯ ಎಂದು ಗುರುತಿಸಲಾಗಿದ್ದು, ಇವರು ಯದಾದ್ರಿ ಭೊಂಗಿರ್ ಜಿಲ್ಲೆಯ ಅಲೈರ್ ಮಂಡಲ್ ನಿವಾಸಿ. ಆತ್ಮಹತ್ಯೆಗೂ ಮುನ್ನ ಆಚಾರ್ಯ ಡೆತ್ ನೋಟ್ ಬರೆದಿದ್ದು, ಅದರಲ್ಲಿ ತನ್ನ ಹೆಂಡತಿಯನ್ನು ಆಕೆಯ ಪ್ರಿಯತಮನ ಜೊತೆ ಮದುವೆ ಮಾಡಿಸಿ ಅಂತ ಹೆತ್ತವರಿಗೆ ಹೇಳಿದ್ದಾರೆ.

    ಏನಿದು ಘಟನೆ?:
    ಎರಡು ವರ್ಷದ ಹಿಂದೆ ಆಚಾರ್ಯ ಅವರು ಉಷಾ ರಾಣಿ ಎಂಬಾಕೆಯನ್ನು ವರಿಸಿದ್ದರು. ದಂಪತಿಗೆ ಈಗಾಗಲೇ 1 ವರ್ಷದ ಮಗುವೂ ಇದೆ. ಕಳೆದ ವರ್ಷವಷ್ಟೇ ಆಚಾರ್ಯ ತನ್ನ ಪತ್ನಿ ಹಾಗೂ ಮಗುವಿನ ಜೊತೆ ಶಮೀರ್ ಪೆಟ್ ನ ತುರ್ಕಪಲ್ಲಿ ಎಂಬಲ್ಲಿ ಬಂದು ನೆಲೆಸಿದ್ದರು. ಅಲ್ಲದೇ ಸ್ಥಳೀಯ ಕಾರ್ಖಾನೆಯೊಂದರಲ್ಲಿ ಎಲೆಕ್ಟ್ರೀಷಿಯನ್ ಆಗಿ ಕೆಲಸ ಮಾಡುತ್ತಿದ್ದರು.

    ಬುಧವಾರ ತಂದೆ ಕೆ ಸತ್ಯನಾರಾಯಣ್ ಅವರ ಮೊಬೈಲ್ ಗೆ ಆಚಾರ್ಯ ಮೆಸೇಜ್ ಮಾಡಿದ್ದಾರೆ. ಅದರಲ್ಲಿ ನೆರೆಯಮನೆಯ ಶ್ರೀಕಾಂತ್ ಎಂಬಾತನಿಂದಾಗಿ ಆತ್ಮಹತ್ಯೆಗೆ ಶರಣಾಗುವುದಾಗಿ ತಿಳಿಸಿದ್ದಾರೆ. ಕೂಡಲೇ ಸತ್ಯನಾರಾಯಣ್ ಅವರು ಮಗನಿಗೆ ಕರೆ ಮಾಡಿದ್ದಾರೆ. ಆದ್ರೆ ಆಚಾರ್ಯ ಅದಾಗಲೇ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಇದರಿಂದ ಆತಂಕಗೊಂಡ ಹೆತ್ತವರು ಆಚಾರ್ಯ ಮನೆಗೆ ದೌಡಾಯಿಸಿದ್ದಾರೆ. ಈ ವೇಳೆ ಮಗ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿರುವುದು ಕಂಡುಬಂದಿದೆ.

    ಘಟನೆಯ ಬಳಿಕ ಸ್ಥಳೀಯರು ಜಮಾಯಿಸಿದ್ದು, ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ತಕ್ಷಣಕ್ಕೆ ಪೊಲೀಸರು ಸ್ಥಳಕ್ಕೆ ಬಂದು, ಮರಣೋತ್ತರ ಪರೀಕ್ಷೆಗಾಗಿ ಶವವನ್ನು ರವಾನಿಸಿದ್ರು. ಈ ಸಂಬಂಧ ಇನ್ಸ್ ಪೆಕ್ಟರ್ ಡಿ ಭಾಸ್ಕರ್ ರೆಡ್ಡಿ ಪ್ರತಿಯಿಸಿದ್ದು, ಆಚಾರ್ಯ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ ತಮ್ಮ ಪತ್ನಿಗೆ ಶ್ರೀಕಾಂತ್ ಎಂಬಾತನ ಜೊತೆ ಅನೈತಿಕ ಸಂಬಂಧವಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ನನ್ನಂತಹ ಮಗ ಯಾವ ತಂದೆ-ತಾಯಿಗೂ ಹುಟ್ಟಬಾರದು. ಜೀವನದಲ್ಲಿ ಸೋತಿದ್ದೇನೆ ಅಂತ ತಂದೆ-ತಾಯಿ ಬಳಿ ಕ್ಷಮೆ ಕೇಳಿದ್ದಾರೆ. ಹಾಗೆಯೇ ಶ್ರೀಕಾಂತ್ ಜೊತೆ ಪತ್ನಿ ಉಷಾಳಿಗೆ ಮದುವೆ ಮಾಡಿಕೊಡಿ. ಇದು ನನ್ನ ಕೊನೆಯ ಆಸೆ ಆಗಿದೆ. ಅವಳ ಹೆತ್ತವರು ಈ ಬಗ್ಗೆ ಏನೂ ಹೇಳಲಾರರು ಅಂತ ಬರೆದಿರುವುದಾಗಿ ತಿಳಿಸಿದ್ದಾರೆ.

    ಸದ್ಯ ಆಚಾರ್ಯ ತಂದೆಯ ದೂರಿನಂತೆ ಪೊಲೀಸರು ಶಂಕಾಸ್ಪದ ಸಾವು ಅಂತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಆಚಾರ್ಯ ಮೃತದೇಹವನ್ನು ಗುರುವಾರ ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂಬುದಾಗಿ ವರದಿಯಾಗಿದೆ.

  • ಗೆಳತಿಯ ಹುಟ್ಟುಹಬ್ಬಕ್ಕೆ ಕಳಿಸಲು ಪೋಷಕರು ನಿರಾಕರಿಸಿದ್ದಕ್ಕೆ ಯುವತಿ ಆತ್ನಹತ್ಯೆಗೆ ಶರಣು!

    ಗೆಳತಿಯ ಹುಟ್ಟುಹಬ್ಬಕ್ಕೆ ಕಳಿಸಲು ಪೋಷಕರು ನಿರಾಕರಿಸಿದ್ದಕ್ಕೆ ಯುವತಿ ಆತ್ನಹತ್ಯೆಗೆ ಶರಣು!

    ಬೆಂಗಳೂರು: ಗೆಳತಿಯ ಹುಟ್ಟುಹಬ್ಬಕ್ಕೆ ಕಳುಹಿಸಲು ಪೋಷಕರು ನಿರಾಕರಿಸಿದ್ದಕ್ಕೆ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಕೆಂಪೇಗೌಡ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಅರ್ಪಿತಾ(18) ಆತ್ಮಹತ್ಯೆ ಮಾಡಿಕೊಂಡ ಯುವತಿ. ಪಿಇಎಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ಅರ್ಪಿತಾ ತನ್ನ ಗೆಳತಿಯ ಹುಟ್ಟುಹಬ್ಬಕ್ಕೆ ಹೋಗಲು ಪೋಷಕರ ಹತ್ತಿರ ಕೇಳಿಕೊಂಡಿದ್ದಾಳೆ. ಆದರೆ ಅರ್ಪಿತಾ ಪೋಷಕರು ಆಕೆಯನ್ನು ಕಳುಹಿಸಿಲು ನಿರಾಕರಿಸಿದ್ದರು.

    ಪೋಷಕರ ನಡೆಯಿಂದ ಬೇಸತ್ತ ಅರ್ಪಿತಾ ಯಾರೂ ಇಲ್ಲದ ವೇಳೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಇಂದು ಬೆಳಗ್ಗೆ ರೂಮ್ ಬಾಗಿಲು ತೆಗೆದ ವೇಳೆ ಘಟನೆ ಬೆಳಕಿಗೆ ಬಂದಿದೆ.

    ಸದ್ಯ ಘಟನಾ ಸ್ಥಳಕ್ಕೆ ಕೆಂಪೇಗೌಡ ನಗರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.