Tag: parents

  • ಅಪ್ರಾಪ್ತೆಯ ಕಿಡ್ನಾಪ್ ಕೇಸ್‍ಗೆ ಟ್ವಿಸ್ಟ್ – ಯುವತಿ ನನಗೆ ಬೇಕೆಂದು ಹಠ ಹಿಡಿದ ಯುವಕ

    ಅಪ್ರಾಪ್ತೆಯ ಕಿಡ್ನಾಪ್ ಕೇಸ್‍ಗೆ ಟ್ವಿಸ್ಟ್ – ಯುವತಿ ನನಗೆ ಬೇಕೆಂದು ಹಠ ಹಿಡಿದ ಯುವಕ

    ಹಾಸನ: ಜಿಲ್ಲೆಯ ಆಲೂರು ತಾಲೂಕಿನಲ್ಲಿ 7 ತಿಂಗಳ ಹಿಂದಿನ ಅಪ್ರಾಪ್ತೆ ಅಪಹರಣ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

    ಅನ್ಯ ಕೋಮಿನ ಹುಡುಗಿಯನ್ನು ಕರೆದುಕೊಂಡು ಹೋಗಿದ್ದ ಮತ್ತೊಂದು ಕೋಮಿನ ಯುವಕ ಆಕೆಯೊಂದಿಗೆ ಲವ್ ಮ್ಯಾರೇಜ್ ಆಗಿದ್ದಾನೆ ಎನ್ನಲಾಗಿದೆ. ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದರಿಂದ ಹಾಸನದ ಬಾಲ ಭವನದಲ್ಲಿ ಆಶ್ರಯ ಪಡೆದಿದ್ದ ಆಕೆಯನ್ನು ಪೋಷಕರು ಕರೆದೊಯ್ಯಲು ಬಂದಾಗ ಎರಡೂ ಕಡೆಯವರ ನಡುವೆ ವಾಗ್ವಾದ, ತಳ್ಳಾಟದಿಂದಾಗಿ ದೊಡ್ಡ ಹೈಡ್ರಾಮವೇ ನಡೆದು ಹೋಗಿದೆ. ಈ ಮಧ್ಯೆ ನಾನು ಮೆಚ್ಚಿರುವ ಹುಡುಗಿಯನ್ನು ಬಲವಂತವಾಗಿ ಕರೆದುಕೊಂಡು ಹೋಗಲಾಗುತ್ತಿದೆ. ನನಗೆ ಆಕೆಯೇ ಬೇಕು. ಇಲ್ಲವಾದರೆ ಸಾಯುತ್ತೇನೆ ಎಂದು ರಘು ಅಳಲು ತೋಡಿಕೊಂಡಿದ್ದಾನೆ.

    ತಂದೆಯಿಂದ ಕಿಡ್ನಾಪ್ ದೂರು:
    ಆಲೂರು ತಾಲೂಕು ಕರಡೀಬೈಲು ಗ್ರಾಮದ ಮಹಮದ್ ಅಲಿ ಪುತ್ರಿ ರಂಶೀನಾ, ನವೆಂಬರ್ 2017ರ 13ರಂದು ಏಕಾಏಕಿ ಕಾಣೆಯಾಗಿದ್ದಳು. 2ನೇ ಪಿಯುಸಿ ಓದುತ್ತಿದ್ದ 17 ವರ್ಷದ ಮಗಳು ಏಕಾಏಕಿ ನಾಪತ್ತೆಯಾಗಿದ್ದರಿಂದ ಸಹಜವಾಗಿಯೇ ಪೋಷಕರು ಆತಂಕಗೊಂಡಿದ್ದರು. ಅದಾದ ಕೆಲ ದಿನಗಳ ನಂತರ ಆಲೂರು ಪೊಲೀಸರಿಗೆ ದೂರು ನೀಡಿದ್ದ ಪೋಷಕರು, ಪಕ್ಕದ ಕಾಗನೂರು ಹೊಸಳ್ಳಿ ಗ್ರಾಮದ ರಘು ತಮ್ಮ ಮಗಳನ್ನು ಕಿಡ್ನಾಪ್ ಮಾಡಿಕೊಂಡು ಹೋಗಿದ್ದು, ಕೂಡಲೇ ಮಗಳನ್ನು ಹುಡುಕಿಕೊಡಿ ಎಂದು ಮೊರೆ ಇಟ್ಟಿದ್ದರು.

    ಹೈಕೋರ್ಟ್ ಮೆಟ್ಟಿಲೇರಿದ ರಂಶೀನಾ ಪೋಷಕರು:
    ನಂತರ ತಮ್ಮ ಮಗಳ ಪತ್ತೆ ಸಂಬಂಧ ಪೊಲೀಸ್ ಪ್ರಯತ್ನ ಆಗದ ಹಿನ್ನೆಲೆಯಲ್ಲಿ ರಂಶೀನಾ ತಂದೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ಸ್ವೀಕರಿಸಿದ ಹೈಕೋರ್ಟ್ ಕೂಡಲೇ ಅಪ್ರಾಪ್ತೆಯನ್ನು ಹುಡುಕಿ ಎಂದು ಪೊಲೀಸರಿಗೆ ತಾಕೀತು ಮಾಡಿತ್ತು. ಅದಾದ ಕೆಲ ದಿನಗಳ ಬಳಿಕ ರಂಶೀನಾ ಪತ್ತೆಯಾದ ಬಳಿಕ ಪೊಲೀಸರು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದರು. ಆಗ ಹುಡುಗಿಗೆ 18 ವರ್ಷ ತುಂಬುವವರೆಗೂ ಸರ್ಕಾರಿ ಬಾಲ ಮಂದಿರದಲ್ಲಿ ಉಳಿಸುವಂತೆ ಹೈಕೋರ್ಟ್ ಆದೇಶ ಮಾಡಿತ್ತು.

    ಅದರಂತೆ ಬಾಲಭವನದಲ್ಲಿದ್ದ ರಂಶೀನಾಗೆ ಮೊನ್ನೆಯಷ್ಟೇ 18 ವರ್ಷ ತುಂಬಿದ್ದರಿಂದ ಆಕೆಯನ್ನು ನನ್ನೊಂದಿಗೆ ಕಳಿಸಿಕೊಡುವಂತೆ ಪ್ರಿಯಕರ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಮನವಿ ಮಾಡಿದ್ದ. ಮಗಳು ಬಾಲ ಭವನದಲ್ಲಿರುವ ಸುದ್ದಿ ತಿಳಿದ ಆಕೆಯ ಪೋಷಕರು ಇಂದು ಅಲ್ಲಿಗೆ ಆಗಮಿಸಿ ಮಗಳನ್ನು ಜೊತೆಯಲ್ಲಿ ಕರೆದೊಯ್ಯಲು ಮುಂದಾದರು. ಈ ಸಂಬಂಧ ಎರಡೂ ಕಡೆಯವರ ನಡುವೆ ಮಾತಿನ ಚಕಮಕಿ, ನೂಕಾಟ-ತಳ್ಳಾಟ ನಡೆದು ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.

    ಯುವತಿ ನನ್ನನ್ನು ಮೆಚ್ಚಿ ಮದುವೆಯಾಗಿದ್ದಾಳೆ. ಆದರೆ ಆಕೆಯ ಪೋಷಕರು ಬಲವಂತ ಮಾಡುತ್ತಿದ್ದಾರೆ. ಇದಕ್ಕೆ ಅಧಿಕಾರಿಗಳೂ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ರಘು ಆರೋಪಿಸಿದ್ದಾನೆ. ನಾನು ಇಲ್ಲದೆ ಹೋದರೆ ಆಕೆ ಸಾಯುತ್ತಾಳೆ. ಆಕೆ ಇಲ್ಲದೇ ಹೋದರೆ ನಾನೂ ಸಾಯುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾನೆ.

    ಆದರೆ ಮಗಳು ನಮಗೆ ಬೇಕು. ಆಕೆ ತುಂಬಾ ಬುದ್ದಿವಂತೆ. ಓದಿ ದೊಡ್ಡವಳಾದ ನಂತರ ನಮ್ಮನ್ನು ಸಾಕುತ್ತೇನೆ ಎಂದಿದ್ದಳು. ಆದರೀಗ ನಡೆಯಬಾರದ ಘಟನೆ ನಡೆದು ಹೋಗಿದೆ. ನಮಗೆ ನಮ್ಮ ಮಗಳು ಬೇಕು. ಆಕೆಯ ಕೊರಗಲ್ಲೇ ತಾಯಿ ಹಾಸಿಗೆ ಹಿಡಿದಿದ್ದಾಳೆ ಎಂದು ಪೋಷಕರು ಕಣ್ಣೀರಿಡುತ್ತಿದ್ದಾರೆ. ಹೀಗಾಗಿ ಪ್ರಕರಣ ಒಂದು ರೀತಿಯಲ್ಲಿ ಕಗ್ಗಂಟಾಗಿದ್ದು ಮುಂದೆ ಯಾವ ರೀತಿ ಅಂತ್ಯ ಕಾಣಲಿದೆ ಎಂಬುದನ್ನು ಕಾದು ನೋಡಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನನ್ನ ಮದ್ವೆ ನಿಲ್ಲಿಸಲು ಸಹಾಯ ಮಾಡಿ: ಪೊಲೀಸ್ ಠಾಣೆಯ ಮೆಟ್ಟಿಲೇರಿದ 12ರ ಬಾಲೆ

    ನನ್ನ ಮದ್ವೆ ನಿಲ್ಲಿಸಲು ಸಹಾಯ ಮಾಡಿ: ಪೊಲೀಸ್ ಠಾಣೆಯ ಮೆಟ್ಟಿಲೇರಿದ 12ರ ಬಾಲೆ

    ಕೋಲ್ಕತ್ತ: 13 ವರ್ಷದ ಬಾಲಕಿಯೊಬ್ಬಳು ಶಾಲಾ ಉಡುಪಿನಲ್ಲೇ ನನ್ನ ಮದುವೆ ನಿಲ್ಲಿಸಲು ಸಹಾಯ ಮಾಡಿ, ನಾನಿನ್ನು ಓದಬೇಕು ಎಂದು ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ.

    ನನ್ನ ತಂದೆ ನನಗೆ ಮದುವೆ ಮಾಡಲು ಸಿದ್ಧತೆ ನಡೆಸಿದ್ದಾರೆ. ನನಗೆ ಈ ಮದುವೆ ಇಷ್ಟವಿಲ್ಲ. ನಾನು ಓದಬೇಕು ಎಂದು ಓಸಿ ಸುಭಾಷ್ ಚಂದ್ರ ಘೋಷ್ ಅವರ ಬಳಿ 6ನೇ ತರಗತಿ ಓದುತ್ತಿದ್ದ ಬಾಲಕಿ ಕಣ್ಣೀರು ಹಾಕಿದ್ದಾಳೆ. ಬಾಲಕಿಯ ಅಕ್ರಂದನವನ್ನು ಆಲಿಸಿದ ಪೊಲೀಸರು, ಈಗ ಮದುವೆ ಮಾಡುವುದು ಶಿಕ್ಷಾರ್ಹ ಅಪರಾಧ ಎಂದು ಪೋಷಕರಿಗೆ ಬುದ್ಧಿವಾದ ಹೇಳಿಸಿ ಮದುವೆಯನ್ನು ನಿಲ್ಲಿಸಿದ್ದಾರೆ.

    ಏನಿದು ಘಟನೆ?
    ಬಾಲಕಿಯ ತಂದೆ ಮದುವೆ ಮಾಡಲು 6 ತಿಂಗಳಿಂದ ವರನನ್ನು ಹುಡುಕುತ್ತಿದ್ದರು. ಕೊನೆಗೆ ಪೋಷಕರು ಬಾಂಗರ್ ನಲ್ಲಿದ್ದ ಚಂದ್ರನೇಶ್ವರ ಹಳ್ಳಿಯಲ್ಲಿ ವರನನ್ನು ಹುಡುಕಿ ಮದುವೆ ಮಾಡಲು ಸಿದ್ಧತೆ ನಡೆಸುತ್ತಿದ್ದರು. ಬಾಲಕಿ ನಾನು ಮದುವೆ ಆಗುವುದಿಲ್ಲ ಎಂದು ಎಷ್ಟೇ ಹಠ ಮಾಡಿದರೂ ತಂದೆ ಮದುವೆ ಮಾಡಿಸಿಯೇ ಸಿದ್ಧ ಎಂದು ಹೇಳುತ್ತಿದ್ದ.

    ತನ್ನ ಕಷ್ಟವನ್ನು ಸ್ನೇಹಿತೆಯ ಜೊತೆ ಹೇಳಿ ಠಾಣೆಗೆ ಬರುವಂತೆ ಕೇಳಿಕೊಳ್ಳುತ್ತಾಳೆ. ಆದರೆ ಆ ಸ್ನೇಹಿತೆ ಭಯಗೊಂಡು ನಾನು ಠಾಣೆಗೆ ಬರುವುದಿಲ್ಲ ಎಂದು ಹೇಳುತ್ತಾಳೆ. ಕೊನೆಗೆ ಶನಿವಾರ ಧೈರ್ಯದಿಂದ ತಾನೊಬ್ಬಳೇ ಹೋಗುವುದಾಗಿ ನಿರ್ಧರಿಸಿ 2.5 ಕಿ.ಮೀ ನಡೆದುಕೊಂಡು ಪೊಲೀಸ್ ಠಾಣೆಗೆ ಬಂದು ಓಸಿ ಅವರನ್ನು ಭೇಟಿ ಮಾಡಿ ತನ್ನ ಸಮಸ್ಯೆಯನ್ನು ಹೇಳಿಕೊಂಡು ದಯಮಾಡಿ ಮದುವೆಯನ್ನು ನಿಲ್ಲಿಸಿ ಎಂದು ಬೇಡಿಕೊಂಡಿದ್ದಾಳೆ.

    ಬಾಲಕಿಯ ಅಳಲನ್ನು ಕೇಳಿದ ಓಸಿ, ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿಯನ್ನು ಬಾಲಕಿಯ ಮನೆಗೆ ಕಳುಹಿಸಿದ್ದಾರೆ. ಸಿಬ್ಬಂದಿ ಮನೆಗೆ ಬಂದು ಮದುವೆ ನಿಲ್ಲಿಸಲು ಹೇಳಿದಾಗ ಬಾಲಕಿಯ ತಂದೆ ಒಪ್ಪಿಕೊಳ್ಳುವುದಿಲ್ಲ. ಈ ವೇಳೆ ಬಾಲಕಿಯನ್ನು ಮದುವೆ ಮಾಡಿದರೆ ನಿಮ್ಮ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ನಂತರ ತಂದೆ 18 ವರ್ಷದವರೆಗೂ ನಾನು ಆಕೆಯನ್ನು ಮದುವೆ ಮಾಡಿ ಕೊಡುವುದಿಲ್ಲ ಎಂದು ಪತ್ರದಲ್ಲಿ ಬರೆದು ಸಹಿ ಹಾಕಿ ಕೊಟ್ಟಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಗೂಂಡಾಗಿರಿ ಮಾಡಿದ ವಿದ್ಯಾರ್ಥಿಗೆ ಬುದ್ಧಿ ಹೇಳಿದ ಪ್ರಿನ್ಸಿಪಾಲ್ ವಿರುದ್ಧವೇ ಪೋಷಕರಿಂದ ದೂರು!

    ಗೂಂಡಾಗಿರಿ ಮಾಡಿದ ವಿದ್ಯಾರ್ಥಿಗೆ ಬುದ್ಧಿ ಹೇಳಿದ ಪ್ರಿನ್ಸಿಪಾಲ್ ವಿರುದ್ಧವೇ ಪೋಷಕರಿಂದ ದೂರು!

    -ವಿದ್ಯಾರ್ಥಿಯ ಪುಂಡಾಟಿಕೆ ಸಿಸಿ ಕ್ಯಾಮರಾದಲ್ಲಿ ಸೆರೆ!

    ಬಳ್ಳಾರಿ: ತರಗತಿಯಲ್ಲಿ ರೌಡಿಯಂತೆ ವರ್ತನೆ ಮಾಡಿದ ವಿದ್ಯಾರ್ಥಿಯನ್ನು ಥಳಿಸಿದ್ದಕ್ಕೆ ಪ್ರಿನ್ಸಿಪಾಲ್ ವಿರುದ್ಧವೇ ಪೋಷಕರು ಪೊಲೀಸರಿಗೆ ದೂರು ನೀಡಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

    ಸಹಪಾಠಿಗಳ ಮೇಲೆ ಹಲ್ಲೆ ಮಾಡುತ್ತಿದ್ದ ವಿದ್ಯಾರ್ಥಿ ಮೇಲೆ ಮಾಸ್ಟರ್‌ಗೆ ಸಿಟ್ಟು ಬಂದಿದೆ. ಜಿಲ್ಲೆಯ ಬ್ರಹ್ಮ ಚೈತ್ಯನ್ಯ ಶಾಲೆಯ 8 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ ತರಗತಿಯಲ್ಲಿನ ಇತರೆ ವಿಧ್ಯಾರ್ಥಿಗಳ ಮೇಲೆ ನಿತ್ಯ ಹಲ್ಲೆ ಮಾಡುತ್ತಿದ್ದ. ವಿದ್ಯಾರ್ಥಿಯ ಈ ಪುಂಡಾಟಿಕೆಯನ್ನು ಪ್ರಶ್ನೆ ಮಾಡಿದಕ್ಕೆ ವಿದ್ಯಾರ್ಥಿಯ ಪೋಷಕರು ಇದೀಗ ಪ್ರಿನ್ಸಿಪಾಲ್ ವಿರುದ್ಧವೇ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಖಾಸಿಂ ರಜಾಕ್ ಮಾಡಿದ ಪುಂಡಾಟಿಕೆ ಶಾಲೆಯಲ್ಲಿದ್ದ ಸಿಸಿ ಕ್ಯಾಮಾರಾದಲ್ಲಿ ಸೆರೆಯಾಗಿದೆ. ಇದನ್ನು ಗಮನಿಸಿದ ಶಾಲೆಯ ಶಿಕ್ಷಕರು ಹಾಗೂ ಪ್ರಿನ್ಸಿಪಾಲ್ ವಿದ್ಯಾರ್ಥಿಗೆ ಸ್ವಲ್ಪ ಹೆಚ್ಚು ಎನ್ನುವಂತೆ ಥಳಿಸಿ ಬುದ್ಧಿ ಹೇಳಿದರು. ಇದನ್ನೇ ತಪ್ಪಾಗಿ ತಿಳಿದ ಪೋಷಕರು ಪೊಲೀಸ್ ಠಾಣೆಯ ಮೇಟ್ಟಿಲೇರಿದ ನಂತರ ಪ್ರಿನ್ಸಿಪಾಲ್ ವಿದ್ಯಾರ್ಥಿಯ ಪುಂಡಾಟಿಕೆಗೆ ಬುದ್ಧಿ ಹೇಳಿದ್ದೆ ತಪ್ಪಾಯ್ತು ಅಂತಿದ್ದಾರೆ.

    ವಿದ್ಯಾರ್ಥಿಗೆ ಥಳಿಸಿದ ಹಿನ್ನೆಲೆಯಲ್ಲಿ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಪ್ರಿನ್ಸಿಪಾಲ್ ವಿದ್ಯಾರ್ಥಿಯ ಪುಂಡಾಟಿಕೆಯ ವಿಡಿಯೋ ನೋಡಿದ ನಂತರ ಪೋಷಕರು ಇದೀಗ ರಾಜಿ ಸಂಧಾನ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಾಪತ್ತೆಯಾದ ಕಂದಮ್ಮನಿಗಾಗಿ ಪೋಷಕರ ಬೀದಿ ಬೀದಿ ಅಲೆದಾಟ

    ನಾಪತ್ತೆಯಾದ ಕಂದಮ್ಮನಿಗಾಗಿ ಪೋಷಕರ ಬೀದಿ ಬೀದಿ ಅಲೆದಾಟ

    ಬೆಂಗಳೂರು: ಮನೆಯ ಬಳಿ ನಾಪತ್ತೆಯಾದ ಕಂದಮ್ಮನ ಫೋಟೋ ಹಿಡಿದು ಪೋಷಕರು ಬೀದಿ ಬೀದಿ ಅಲೆಯುತ್ತಾ ಕಣೀರಿಡುತ್ತಿರುವ ಮನ ಮಿಡಿಯುವ ಘಟನೆ ನಡೆದಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಗಂಡ್ರುಗೋಳಿಪುರ ನಿವಾಸಿ, ಮಂಜುನಾಥ್ ಹಾಗೂ ಮಂಗಳಮ್ಮ ತನ್ನ ಮಗನ ಫೋಟೋ ಹಿಡಿದು ನೆಲಮಂಗಲದ ಎಲ್ಲೆಡೆ ಅಲೆಯುತ್ತಿದ್ದಾರೆ. ಜಯರಾಮಕೃಷ್ಣ(7)ನ ಫೋಟೊ ಕೈಯಲ್ಲಿಡಿದು, ನನ್ನ ಮಗನನ್ನು ಹುಡುಕಿಕೊಡಿ ಎಂದು ಬೀದಿ ಬೀದಿಗಳಲ್ಲಿ ಅಂಗಲಾಚುತ್ತಾ ಕಣ್ಣೀರಿಡುತ್ತಿದ್ದಾರೆ.

    ಕಳೆದ ನಾಲ್ಕು ದಿನದ ಹಿಂದೆ ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕ ಜಯರಾಮಕೃಷ್ಣ ಇದ್ದಕಿದ್ದ ಆಗೆ ನಾಪತ್ತೆಯಾಗಿದ್ದಾನೆ. ಮಗ ಕಾಣೆಯಾದಗಿನಿಂದ ಗಾಬರಿಗೊಂಡ ಹೆತ್ತವರು ಕಳೆದ ನಾಲ್ಕು ದಿನಗಳಿಂದ ಸ್ನೇಹಿತರ ಹಾಗೂ ಸಂಬಂಧಿಗಳ ಮನೆಯಲ್ಲಿ ಹುಡುಕಿದ್ದಾರೆ.

    ಆದರೆ ಎಲ್ಲೂ ಸಿಗದ ಹಿನ್ನೆಲೆಯಲ್ಲಿ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯ ಮೊರೆ ಹೋದರು. ಪೊಲೀಸರು ಪ್ರಕರಣ ಸಹ ದಾಖಲಿಸಿಕೊಂಡು ಬಾಲಕನಿಗಾಗಿ ಹುಡುಕಾಟ ನಡೆಸಿದ್ದಾರೆ. ಕಡು ಬಡತನದ ಬೇಗೆಯಿಂದ ಕಂಗೆಟ್ಟಿರುವ ಈ ಕುಟುಂಬ ದಾರಿ ಕಾಣದೆ ಮಗನಿಗಾಗಿ ಪರಿತಪಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 10 ವರ್ಷ ಸಾಕಿದ ಮಗನನ್ನು ನಾಯಿಗೆ ಬಲಿಕೊಟ್ಟಿದ್ದೇವೆ- ಶವಾಗಾರದ ಮಂದೆ ಪೋಷಕರು ಕಣ್ಣೀರು

    10 ವರ್ಷ ಸಾಕಿದ ಮಗನನ್ನು ನಾಯಿಗೆ ಬಲಿಕೊಟ್ಟಿದ್ದೇವೆ- ಶವಾಗಾರದ ಮಂದೆ ಪೋಷಕರು ಕಣ್ಣೀರು

    ಬೆಂಗಳೂರು: ನಗರದ ವಿಭೂತಿಪುರದಲ್ಲಿ ಬಾಲಕನಿಗೆ ನಾಯಿಕಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಶವಾಗಾರದ ಮುಂದೆ ಬಾಲಕನ ಪೋಷಕರು ಕಣ್ಣೀರು ಹಾಕುತ್ತಿರುವ ದೃಶ್ಯ ಮನಕಲಕುವಂತಿದೆ.

    10 ವರ್ಷ ಸಾಕಿದ ಮಗನನ್ನು ಇದೀಗ ನಾವು ನಾಯಿಗೆ ಬಲಿಕೊಟ್ಟಿದ್ದೇವೆ. ನಮ್ಮ ಮಗುವಿಗೆ ಬಂದ ಸ್ಥಿತಿ ಬೇರೆ ಯಾವ ಮಕ್ಕಳಿಗೂ ಕೂಡ ಬರಬಾರದು. ಅಧಿಕಾರಿಗಳು ಅವರ ಕೆಲಸ ಮಾಡ್ತಿದ್ದಾರೆ. ಆದ್ರೆ ಮಧ್ಯದವರು ಅದನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಅಂತ ಬಾಲಕನ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಆಸ್ಪತ್ರೆಯಲ್ಲಿ ಅವರ ಆಕ್ರಂದನ ಮುಗಿಲು ಮುಟ್ಟಿತ್ತು.

    ಬೌರಿಂಗ್ ಆಸ್ಪತ್ರೆಯಲ್ಲಿ ಮೃತ ಬಾಲಕನ ಶವ ಪರೀಕ್ಷೆ ನಡೆದಿದ್ದು, ಮಗುವಿನ ಸಾವಿಗೆ ಸಾರ್ವಜನಿಕರ ನಿರ್ಲಕ್ಷ್ಯವೇ  ಕಾರಣ ಎಂದು ಪೋಷಕರು ಆರೋಪಿಸುತ್ತಿದ್ದಾರೆ.

    ನಡೆದಿದ್ದೇನು?:
    ಮುರಗಮ್ಮ ಹಾಗೂ ಮನೋಜ್ ದಂಪತಿಯ ಮಗಪ್ರವೀಣ್ ಬುಧವಾರ ತನ್ನ ಸ್ನೇಹಿತರ ಜೊತೆ ಕೆರೆಯಲ್ಲಿ ಈಜಲು ಹೋಗಿದ್ದನು. ಈ ವೇಳೆ ಬಾಲಕನ ಮೇಲೆ ಸುಮಾರು 10 ಕ್ಕೂ ಹೆಚ್ಚು ನಾಯಿಗಳು ದಾಳಿ ಮಾಡಿದ್ದು, ಪ್ರವೀಣ್ ನ ಕತ್ತು, ಮೈ ಹಾಗೂ ಕೈ ಭಾಗಕ್ಕೆ ಕಚ್ಚಿ ಗಂಭೀರವಾಗಿ ಗಾಯಗೊಳಿಸಿವೆ. ಇದನ್ನು ಕಂಡ ಸ್ಥಳೀಯರು ನಾಯಿಗಳನ್ನು ಓಡಿಸಿ, ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಮಣಿಪಾಲ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಬಾಲಕನ ಸ್ಥಿತಿಯು ಚಿಂತಾಜನಕವಾಗಿತ್ತು. ಆಗ ವೈದ್ಯರು ಇನ್ನು ಮೂರು ದಿನಗಳ ಕಾಲ ಏನು ಹೇಳುವುದಕ್ಕೆ ಆಗುವುದಿಲ್ಲ ಎಂದಿದ್ದರು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಬಾಲಕ ಮೃತಪಟ್ಟಿದ್ದಾನೆ.

    ಬಾಲಕನ ಪೋಷಕರು ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರು. ಚಿಕಿತ್ಸೆಗೆ ಹಣವಿಲ್ಲದಿದ್ದಾಗ ಸಹಾಯಕ್ಕಾಗಿ ಮನವಿ ಮಾಡಿಕೊಂಡಿದ್ದರು. ಆಗ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಪ್ರವೀಣ್ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ಮೇಯರ್ ಸಂಪತ್ ರಾಜ್ ಅವರು ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಡೆಡ್ಲಿ ಮೋಮೋ ಗೇಮ್: ಸೈಬರ್ ಕ್ರೈಂ ಪೊಲೀಸರಿಂದ ಜಾಗೃತಿ ಕಾರ್ಯಕ್ರಮ

    ಡೆಡ್ಲಿ ಮೋಮೋ ಗೇಮ್: ಸೈಬರ್ ಕ್ರೈಂ ಪೊಲೀಸರಿಂದ ಜಾಗೃತಿ ಕಾರ್ಯಕ್ರಮ

    ಬೆಂಗಳೂರು: ಭಾರತದಲ್ಲಿ ಹೆಚ್ಚಾಗಿ ಹರಡುತ್ತಿರುವ ಡೆಡ್ಲಿ ಮೋಮೋ ಗೇಮ್ ಬಗ್ಗೆ ಸಿಐಡಿ ಸೈಬರ್ ಕ್ರೈಂ ವಿಭಾಗದ ಪೊಲೀಸರು ಸಾರ್ವಜನಿಕರಿಗೆ ಜಾಗೃತಿ ಕಾರ್ಯಕ್ರಮ ನೀಡುತ್ತಿದ್ದಾರೆ.

    ಹೌದು, ಇತ್ತೀಚಿನ ದಿನಗಳಲ್ಲಿ ಮಕ್ಕಳು ಹಾಗೂ ಯುವಪೀಳಿಗೆಯು ಬ್ಲೂ ವೇಲ್ ಹಾಗೂ ಮೋಮೋ ಗೇಮ್‍ಗಳಂತಹ ಮಾರಣಾಂತಿಕ ಆಟಗಳಿಗೆ ಮುಗಿಬಿದ್ದು, ತಮ್ಮ ಜೀವನವನ್ನೇ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಪೋಷಕರು ತಮ್ಮ ಮಕ್ಕಳು ಏನು ಮಾಡುತ್ತಿದ್ದಾರೆ ಎನ್ನುವ ಬಗ್ಗೆ ಗಮನಹರಿಸಬೇಕಾಗಿ ಸೈಬರ್ ಕ್ರೈಂ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

    ಮೋಮೋ ಗೇಮ್ ಗೆ ಸಂಬಂಧಿಸಿದ ಯಾವುದೇ ಲಿಂಕ್‍ಗಳನ್ನು ಶೇರ್ ಹಾಗೂ ಡೌನ್‍ಲೋಡ್ ಮಾಡದಂತೆ ಎಚ್ಚರವಹಿಸುವಂತೆ ಶಾಲಾ ಶಿಕ್ಷಕರು, ಮಕ್ಕಳು ಹಾಗೂ ಪೋಷಕರಿಗೆ ಸಿಐಡಿ ಸೈಬರ್ ಕ್ರೈಂ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಮಕ್ಕಳು ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಎಚ್ಚರವಹಿಸಿ ಎಂದು ಹೇಳಿದ್ದಾರೆ.

    ಏನಿದು ಮೋಮೋ ಗೇಮ್?
    ವಾಟ್ಸಪ್‍ಗೆ ಮೊದಲು ಅಪರಿಚಿತ ನಂಬರಿನಿಂದ ಒಂದು ಸಂದೇಶದ ಬರುತ್ತದೆ. ಬಳಿಕ ಆ ಚಾಲೆಂಜ್ ಒಪ್ಪಿಕೊಂಡರೆ, ಹಾಯ್-ಹಲೋ ಎಂದು ಸಂದೇಶ ಕಳುಹಿಸಬೇಕಾಗುತ್ತದೆ. ನಂತರ ಒಂದು ಅಪರಿಚಿತ ನಂಬರ್ ಕೊಟ್ಟು ಮಾತನಾಡುವಂತೆ ಅನಾಮಿಕನು ಚಾಲೆಂಜ್ ನೀಡುತ್ತಾನೆ. ಬಳಕೆದಾರರಿಗೆ ಕೆಲವು ಟಾಸ್ಕ್‍ಗಳನ್ನು ನೀಡುತ್ತಾರೆ. ಒಂದು ವೇಳೆ ಆ ಟಾಸ್ಕನ್ನು ಪೂರ್ಣ ಮಾಡದಿದ್ದರೆ, ಬಳಕೆದಾರರಿಗೆ ಬೆದರಿಕೆ ಹಾಕುತ್ತಾರೆ. ಕೊನೆಯದಾಗಿ ಬೆದರಿಕೆ ಮತ್ತು ಭಯದಿಂದ ಬಳಕೆದಾರರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದನೆ ನೀಡುತ್ತಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸರ್ಕಾರಿ ಉರ್ದು ಶಾಲೆಯಲ್ಲಿ ಬಿರಿಯಾನಿ ಬಾಡೂಟ

    ಸರ್ಕಾರಿ ಉರ್ದು ಶಾಲೆಯಲ್ಲಿ ಬಿರಿಯಾನಿ ಬಾಡೂಟ

    ದಾವಣಗೆರೆ: ಸರ್ಕಾರಿ ಉರ್ದು ಶಾಲೆಯಲ್ಲಿ ಇಂದು ಬಿರಿಯಾನಿ ಬಾಡೂಟ ಮಾಡಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.

    ಜಿಲ್ಲೆಯ ವಿನೋಬನಗರದ ಸರ್ಕಾರಿ ಉರ್ದು ಶಾಲೆಯಲ್ಲಿ ಶಿಕ್ಷಕರು ಹಾಗೂ ಪೋಷಕರು ಬಿರಿಯಾನಿ ಮಾಡಿಸಿ ಶಾಲೆಯಲ್ಲೇ ಮಜಾ ಮಾಡಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದು ಮಾಧ್ಯಮಗಳು ಸ್ಥಳಕ್ಕೆ ಭೇಟಿ ನೀಡುತ್ತಿದ್ದಂತೆಯೇ ಬಿರಿಯಾನಿ ಮಾಡಿದ ಪಾತ್ರೆಗಳನ್ನ ಒಂದು ರೂಮಿನಲ್ಲಿ ಇಟ್ಟು ಬೀಗ ಹಾಕಲಾಗಿದೆ.

    ಈ ಸಂಬಂಧಪಟ್ಟ ದೃಶ್ಯವನ್ನ ಸೆರೆ ಹಿಡಿಯಲು ಮುಂದಾದಾಗ ಅಲ್ಲಿನ ಶಿಕ್ಷಕರು ಹಾಗೂ ಪೋಷಕರು ಮಾಧ್ಯಮಗಳ ಮೇಲೆ ದೌರ್ಜನ್ಯ ನಡೆಸಿದ್ದಲ್ಲದೇ, ನಿಮ್ಮಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದು ಉದ್ಧಟತನ ಮೆರೆದಿದ್ದಾರೆ.

  • ಮಗನನ್ನು ಸರಪಳಿಯಿಂದ ಕಟ್ಟಿಹಾಕಿದ ಪೋಷಕರು!

    ಮಗನನ್ನು ಸರಪಳಿಯಿಂದ ಕಟ್ಟಿಹಾಕಿದ ಪೋಷಕರು!

    ದಾವಣಗೆರೆ: ಗಾಂಧಿನಗರದ ಚೌಡೇಶ್ವರಿ ನಗರದಲ್ಲಿ ಪೋಷಕರು ತಮ್ಮ ಮಾನಸಿಕ ಅಸ್ವಸ್ಥ ಮಗನನ್ನು ಪ್ರಾಣಿಯಂತೆ ಕಟ್ಟಿ ಹಾಕಿದ ವಿಚಾರ ಬೆಳಕಿಗೆ ಬಂದಿದೆ.

    ಪೋಷಕರಾದ ಉಚ್ಚಂಗಪ್ಪ, ರೇಣುಕಮ್ಮ ತಮ್ಮ ಮಗನಾದ ರಘು(18)ವನ್ನು ಸರಪಳಿಯಿಂದ ಕಟ್ಟಿಹಾಕಿದ್ದಾರೆ. ರಘು ಮಾನಸಿಕ ಅಸ್ವಸ್ಥನಾಗಿದ್ದು, ಆತ ಸಾರ್ವಜನಿಕರಿಗೆ ಕಲ್ಲಿನಿಂದ ಹೊಡೆಯುತ್ತಿದ್ದ. ಅಷ್ಟೇ ಅಲ್ಲದೇ ಜನರ ಮೇಲೆ ಹಲ್ಲೆ ಮಾಡುತ್ತಿದ್ದ.

    ಈ ವರ್ತನೆಯಿಂದಾಗಿ ಬೇಸತ್ತ ಪೋಷಕರು ಸುಮಾರು 5 ತಿಂಗಳಿದಲ್ಲೂ ರಘುವಿನ ಕುತ್ತಿಗೆಗೆ ಸರಪಳಿಯನ್ನು ಸುತ್ತಿ ಕಟ್ಟಿಹಾಕಿದ್ದು, ಈಗ ಬೆಳಕಿಗೆ ಬಂದಿದೆ. ರಘುವಿನ ಪೋಷಕರು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಈತನನ್ನು ಅವರ ಅಜ್ಜಿ ನೋಡಿಕೊಳ್ಳುತ್ತಿದ್ದರು.

  • ಪೋಷಕರ ವಿರೋಧದ ನಡುವೆಯೂ ಪ್ರೇಮಿಗಳ ಮದುವೆ

    ಪೋಷಕರ ವಿರೋಧದ ನಡುವೆಯೂ ಪ್ರೇಮಿಗಳ ಮದುವೆ

    ಚಿತ್ರದುರ್ಗ: ಪೋಷಕರ ವಿರೋಧದ ನಡುವೆಯೂ ಪ್ರೇಮಿಗಳು ಮದುವೆಯಾಗಿರೋ ವಿಡಿಯೋವನ್ನು ವಾಟ್ಸಪ್‍ಗಳಲ್ಲಿ ಹರಿಬಿಟ್ಟಿರೋ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಖಂಡೆನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ನವೀನ್ ಮತ್ತು ವಿದ್ಯಾ(ಹೆಸರು ಬದಲಾಯಿಸಲಾಗಿದೆ) ಪ್ರೇಮಿಗಳಿಬ್ಬರು ವಯಸ್ಕರಾಗಿದ್ದು, ಕಳೆದ ಒಂದೂವರೆ ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇಬ್ಬರ ಪ್ರೀತಿಗೆ ಮನೆಯಲ್ಲಿ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಆ ಪ್ರೇಮಿಗಳು ಮನೆ ಬಿಟ್ಟು ಹೋಗಿ ಮದುವೆಯಾದರು.

    ನಮ್ಮನ್ನು ಹುಡುಕಬೇಡಿ, ನನ್ನ ಹುಡುಗ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ ಅಂತ ಯುವತಿ ವಿಡಿಯೋ ಮಾಡಿ ಅದನ್ನ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದಾರೆ. ಅಲ್ಲದೇ ಈ ಪ್ರೇಮಿಗಳಿಬ್ಬರು ಒಂದೇ ಗ್ರಾಮದವರಾಗಿದ್ದು, ನವೀನ್ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಶುರುವಾದ ಪ್ರೀತಿಗೆ ಯುವತಿ ಮನೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನಲೆಯಲ್ಲಿ ಮನೆ ಬಿಟ್ಟು ಹೋಗಿ ವಿವಾಹವಾಗಿದ್ದೇವೆಂದು ಹೇಳಿಕೊಂಡಿರೋ ವಿಡಿಯೋ ಗ್ರಾಮಸ್ಥರ ವಾಟ್ಸಪ್ ಗ್ರೂಪ್ ಗಳಿಗೆ ಹರಿದಾಡುತ್ತಿದೆ.

    ಸದ್ಯ ಈ ಸಂಬಂಧ ಯುವತಿಯ ಪೋಷಕರು ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಪ್ರಕರಣ ದಾಖಲಿಸಿದ್ದಾರೆ.

  • ಪೋಷಕರೇ.. ಮಕ್ಕಳಿಗೆ ಚಿಪ್ಸ್ ಕೊಡಿಸುವ ಮುನ್ನ ಹುಷಾರ್!

    ಪೋಷಕರೇ.. ಮಕ್ಕಳಿಗೆ ಚಿಪ್ಸ್ ಕೊಡಿಸುವ ಮುನ್ನ ಹುಷಾರ್!

    ರಾಯಚೂರು: ಪೋಷಕರೇ ನಿಮ್ಮ ಮಕ್ಕಳಿಗೆ ಬೇಕರಿ ತಿನಿಸುಗಳನ್ನು ಕೊಡುವ ಮೊದಲು ಹುಷಾರಾಗಿರಿ. ಯಾಕಂದ್ರೆ ತಂದೆಯೊಬ್ಬರು ತನ್ನ ಮಗಳಿಗೆ ಚಿಪ್ಸ್ ಕೊಡಿಸಿದಾಗ ಆ ಪ್ಯಾಕೆಟ್‍ನಲ್ಲಿ ಹುಳ ಕಂಡುಬಂದ ಘಟನೆ ರಾಯಚೂರಿನಲ್ಲಿ ನಡೆದಿದೆ.

    ಜಿಲ್ಲೆಯ ಯದ್ಲಾಪುರ ಗ್ರಾಮದಲ್ಲಿ ಮಗಳಿಗೆ ಕೊಡಿಸಿದ ಯುರೋ ಕಂಪೆನಿ ಚಿಪ್ಸ್ ಪ್ಯಾಕೆಟ್ ನಲ್ಲಿ ಹುಳ ಕಂಡು ಪೋಷಕರು ದಂಗಾಗಿದ್ದಾರೆ. ಮಗಳು ಶಾಲೆಗೆ ಹೋಗಲು ಅಳುತ್ತಿದ್ದಾಳೆ ಅಂತ ರಮಿಸಲು ಕೊಡಿಸಿದ ಚಿಪ್ಸ್ ನಲ್ಲಿ ಹುಳ ಕಂಡುಬಂದಿದೆ.

    ಎಕ್ಸ್ ಪೈರಿ ಡೇಟ್‍ಗಿಂತ ಮೊದಲೇ ಪ್ಯಾಕೆಟ್ ನಲ್ಲಿ ಚಿಪ್ಸ್ ಹಾಳಾಗಿದೆ. ಆತಂಕಗೊಂಡ ಪಾಲಕರು ಮುಂಜಾಗೃತವಾಗಿ ಚಿಪ್ಸ್ ತಿಂದ ಮಗುವನ್ನು ವೈದ್ಯರಿಗೆ ತೋರಿಸಿದ್ದಾರೆ.