Tag: parents

  • SSLC ಸಾಮೂಹಿಕ ನಕಲು – ಸಹಕರಿಸಲು ಪರೀಕ್ಷಾ ಕೇಂದ್ರದತ್ತ ಮುಗಿಬಿದ್ದ ಪೋಷಕರು, ಸ್ನೇಹಿತರು

    SSLC ಸಾಮೂಹಿಕ ನಕಲು – ಸಹಕರಿಸಲು ಪರೀಕ್ಷಾ ಕೇಂದ್ರದತ್ತ ಮುಗಿಬಿದ್ದ ಪೋಷಕರು, ಸ್ನೇಹಿತರು

    ಕಲಬುರಗಿ: ಇಂದು ರಾಜ್ಯಾದ್ಯಂತ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಆರಂಭವಾಗಿದ್ದು, ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ನಕಲು ಮಾಡಲು ಪೋಷಕರು ಹಾಗೂ ಸ್ನೇಹಿತರು ಸಹಕರಿಸುತ್ತಿದ್ದ ದೃಶ್ಯ ಜಿಲ್ಲೆ ಅಫಜಲಪುರ ತಾಲೂಕಿನ ಮಣ್ಣೂರ ಗ್ರಾಮದಲ್ಲಿ ಕಂಡು ಬಂದಿದೆ.

    ಮಣ್ಣೂರು ಗ್ರಾಮದ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರದಲ್ಲಿ ಸಾಮೂಹಿಕ ನಕಲು ಮಾಡುತ್ತಿದ್ದ ವೇಳೆ ವಿದ್ಯಾರ್ಥಿಗಳು ಸಿಕ್ಕಿಬಿದ್ದಿದ್ದಾರೆ. ಮಣ್ಣೂರು ಪರೀಕ್ಷಾ ಕೇಂದ್ರದಲ್ಲಿ 298ರ ಪೈಕಿಯ 296 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇಂದು ಎಸ್‍ಎಸ್‍ಎಲ್‍ಸಿ ಪ್ರಥಮ ಭಾಷೆ ಕನ್ನಡ ಪರೀಕ್ಷೆ ವೇಳೆ ನಕಲು ಮಾಡಲು ವಿದ್ಯಾರ್ಥಿಗಳ ಪೋಷಕರು ಹಾಗೂ ಸ್ನೇಹಿತರು ಪರೀಕ್ಷಾ ಕೇಂದ್ರದ ಹೊರಗಿನಿಂದ ಸಹಾಯ ಮಾಡುತ್ತಿದ್ದ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪರೀಕ್ಷಾ ಕೊಠಡಿಯ ಕಿಟಕಿ ಹೊರಗಿನಿಂದ ವಿದ್ಯಾರ್ಥಿಗಳಿಗೆ ಕಾಪಿ ಚೀಟಿ, ಪುಸ್ತಕಗಳನ್ನು ಕೊಡುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ.

    ಪರೀಕ್ಷಾ ಕೇಂದ್ರದಲ್ಲಿರುವ ಸಿಬ್ಬಂದಿಯೇ ಸಾಮೂಹಿಕ ನಕಲಿಗೆ ಸಹಕರಿಸಿದ್ದಾರೆಂದು ಆರೋಪಗಳು ಕೇಳಿ ಬಂದಿದ್ದು, ಸ್ಕ್ಟಾಡ್ ತಂಡದಿಂದ ಪರೀಕ್ಷಾ ಕೇಂದ್ರದ ಮೇಲೆ ದಾಳಿ ನಡೆಸಿದಾಗ ನಕಲು ಮಾಡುತ್ತಿರುವುದು ಬಹಿರಂಗವಾಗಿದೆ. ಅಫಜಲಪುರ ಬಿಇಒ ವಸಂತ ರಾಠೋಡ್ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ. ಆದರಿಂದಲೇ ಈ ರೀತಿ ಆಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

  • ಗರ್ಭಿಣಿ ಮಗಳನ್ನು ಅಪಹರಿಸಲು ತಂದೆಯೇ ಯತ್ನ..!

    ಗರ್ಭಿಣಿ ಮಗಳನ್ನು ಅಪಹರಿಸಲು ತಂದೆಯೇ ಯತ್ನ..!

    ಕೊಪ್ಪಳ: ಪ್ರೀತಿಸಿ ಮದುವೆಯಾಗಿರುವ ಜೋಡಿಗೆ ಯುವತಿಯ ಪೋಷಕರು ಆಕೆಯನ್ನು ಬಲವಂತವಾಗಿ ಕರೆದುಕೊಂಡು ಹೋಗಲು ಯತ್ನಿಸಿ ವಿಫಲವಾದ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ಪ್ರಗತಿ ನಗರದಲ್ಲಿ ನಡೆದಿದೆ. ಘಟನೆ ಹಿನ್ನೆಲೆಯಲ್ಲಿ ಪ್ರೇಮ ವಿವಾಹವಾಗಿರುವ ಜೋಡಿಯು ರಕ್ಷಣೆ ಕೋರಿ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಗೆ ದೌಡಾಯಿಸಿದ್ದಾರೆ.

    ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಪ್ರಗತಿ ನಗರದ ರಮೇಶ್ ಹಾಗೂ ಹಾಸನ ಮೂಲದ ರೇಖಾ ಈ ಹಿಂದೆ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾಗ ಪ್ರೇಮಾಂಕುರವಾಗಿ ಕಳೆದ 8 ತಿಂಗಳ ಹಿಂದೆ ಇಬ್ಬರು ಮದುವೆಯಾಗಿದ್ದಾರೆ. ಈ ಮದುವೆಗೆ ರೇಖಾಳ ಮನೆಯವರು ಒಪ್ಪಿಗೆ ನೀಡಿಲ್ಲ. ಅಲ್ಲದೆ ಗರ್ಭಿಣಿ ರೇಖಾಳನ್ನು ಆಕೆಯ ತಂದೆಯೇ ಅಪಹರಿಸಲು ಪ್ರಯತ್ನಿಸಿದ್ದಾರೆ.

    ರೇಖಾಳನ್ನು ಕರೆದೊಯ್ಯಲು ಆಕೆಯ ಮನೆಯವರು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಶನಿವಾರ ಮಧ್ಯಾಹ್ನದ ವೇಳೆಗೆ ರೇಖಾಳ ತಂದೆ ಹಾಗೂ ಇನ್ನಿತರು 8 ರಿಂದ 10 ಜನರು ಎರಡು ಕಾರಿನಲ್ಲಿ ಪ್ರಗತಿ ನಗರಕ್ಕೆ ಬಂದಿದ್ದಾರೆ. ರೇಖಾಳನ್ನು ಬಲವಂತವಾಗಿ ಕರೆದೊಯ್ಯಲು ಪ್ರಯತ್ನ ಮಾಡಿದ್ದಾರೆ ಎಂದು ರೇಖಾ ಪತಿ ರಮೇಶ್ ಆರೋಪಿಸಿದ್ದಾರೆ.

    ಈ ಸಂದರ್ಭದಲ್ಲಿ ರೇಖಾಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳೀಯರ ನೆರವಿನೊಂದಿಗೆ ರಮೇಶ್ ಹಾಗೂ ರೇಖಾ ರಕ್ಷಣೆ ಕೋರಿ ಗಂಗಾವತಿ ಗ್ರಾಮೀಣ ಠಾಣೆಗೆ ದೌಡಾಯಿಸಿದ್ದಾರೆ. ರೇಖಾಳನ್ನು ಬಳ್ಳಾರಿಯವರೆಗೆ ಕರೆದುಕೊಂಡು ಹೋಗಿ ಬಳಿಕ ಬಿಟ್ಟು ಹೋಗಿದ್ದಾರೆ. ರೇಖಾ ಶನಿವಾರ ತಡ ರಾತ್ರಿ ಆಟೋ ಮೂಲಕ ಗಂಗಾವತಿಗೆ ಬಂದು ಗ್ರಾಮೀಣ ಠಾಣೆಗೆ ಮಾಹಿತಿ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶಾಲಾ ಅಡ್ಮಿಷನ್ ಫಾರ್ಮ್‌ಗೆ ರಾತ್ರಿಯಿಡೀ ನಿದ್ದೆಗೆಟ್ಟು ಕಾದುಕುಳಿತ ಪೋಷಕರು..!

    ಶಾಲಾ ಅಡ್ಮಿಷನ್ ಫಾರ್ಮ್‌ಗೆ ರಾತ್ರಿಯಿಡೀ ನಿದ್ದೆಗೆಟ್ಟು ಕಾದುಕುಳಿತ ಪೋಷಕರು..!

    ಕಾರವಾರ: ಮಕ್ಕಳ ಮುಂದಿನ ಭವಿಷ್ಯದ ಸಲುವಾಗಿ ತಂದೆ-ತಾಯಿ ದಿನವಿಡೀ ದುಡಿಯುತ್ತಾರೆ. ಅದರ ಜೊತೆಗೆನೇ ಮಕ್ಕಳ ಶಾಲಾ-ಕಾಲೇಜು ವಿದ್ಯಾಭ್ಯಾಸದ ಬಗ್ಗೆಯೂ ವಿಚಾರ ಮಾಡುತ್ತಾರೆ. ಆದರೆ ಈ ಶಾಲೆಯಲ್ಲಿ ನೀಡುವ ಅಡ್ಮಿಷನ್ ಫಾರ್ಮ್‌ಗೆ ಪಾಲಕರು ರಾತ್ರಿಯಿಡೀ ನಿದ್ದೆಗೆಟ್ಟು ಶಾಲಾ ಆವರಣದಲ್ಲಿ ಕಾದು ಕಳಿತು ಘಟನೆ ನಡೆದಿದೆ.

    ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸೆಂಟ್ ಅಂಥೋನಿ ಎಲ್‍ಕೆಜಿ ಸ್ಕೂಲ್, ಶಿರಸಿಯಲ್ಲಿಯೇ ಮೊದಲು ಪ್ರಾರಂಭವಾದ ಇಂಗ್ಲೀಷ್ ಮೀಡಿಯಂ ಸ್ಕೂಲ್ ಆಗಿದೆ. ಇಲ್ಲಿ ಪ್ರತಿ ವರ್ಷವೂ ಅಡ್ಮಿಷನ್‍ಗೆ ಸಾಕಷ್ಟು ಬೇಡಿಕೆ ಇದೆ. ವರ್ಷದಲ್ಲೊಮ್ಮೆ ನೀಡುವ ಅಡ್ಮಿಷನ್ ಫಾರ್ಮ್ ಪಡೆಯೋಕೆ 500ಕ್ಕೂ ಹೆಚ್ಚು ಪಾಲಕರು ರಾತ್ರಿಯಿಡೀ ಕ್ಯೂ ನಿಲ್ಲುತ್ತಾರೆ.

    ಸೇಂಟ್ ಅಂಥೋನಿ ಶಾಲೆಯಲ್ಲಿ 160 ರಿಂದ 200 ಮಕ್ಕಳನ್ನು ಎಲ್‍ಕೆಜಿಗೆ ಅಡ್ಮಿಷನ್ ಮಾಡಿಸಿಕೊಳ್ತಾರೆ. ಆ 200 ಮಕ್ಕಳಲ್ಲಿ ತಮ್ಮ ಮಕ್ಕಳೂ ಒಬ್ಬರಾಗಬೇಕು ಎನ್ನುವ ಆಸೆಯಲ್ಲಿ ಪೋಷಕರು ಕಾಯುತ್ತಿರುತ್ತಾರೆ. ಬೆಳಗ್ಗೆ 10 ಗಂಟೆಗೆ ನೀಡುವ ಅಡ್ಮಿಷನ್ ಫಾರ್ಮ್‌ಗೆ ರಾತ್ರಿಯಿಂದಲೇ ಕ್ರಮ ಸಂಖ್ಯೆ ಬರೆದು ಚೀಟಿ ಇಟ್ಟು ರಾತ್ರಿಯಿಡೀ ಕಾದು, ಶಾಲಾ ಆವರಣದಲ್ಲೇ ಕೂತಿರೋದು ನಿಜಕ್ಕೂ ಆಶ್ಚರ್ಯ ಎನಿಸಿದೆ.

    ಪ್ರತಿ ವರ್ಷ ಯಾರು ಮೊದಲು ಹೆಸರು ನೋಂದಾಯಿಸುತ್ತಾರೋ ಆ ಮಕ್ಕಳಿಗೆ ಇಲ್ಲಿ ಸೀಟು ಸಿಗುತ್ತದೆ. ಅಡ್ಮಿಷನ್ ಬೇರೆಯವರ ವರ್ಚಸ್ಸಿನ ಮೇಲೆ ನಡೆದು ಗಲಾಟೆ ಆಗಬಾರದೆಂದು ಎನ್ನುವ ಕಾರಣಕ್ಕೆ ಪೋಷಕರೇ ಈ ನಿಯಮವನ್ನು ಹಾಕಿಕೊಂಡಿದ್ದಾರೆ. ವರ್ಷ ಪೂರ್ತಿ ಮಕ್ಕಳ ಭವಿಷ್ಯಕ್ಕೆ ಏನೆಲ್ಲ ಮಾಡುತ್ತೇವೆ. ಆದ್ರೆ ಒಂದು ರಾತ್ರಿ ನಿದ್ರೆ ಬಿಟ್ಟು ಕಷ್ಟ ಆದ್ರುನೂ ಪರವಾಗಿಲ್ಲ. ಇದೇ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಅಡ್ಮಿಷನ್ ಸಿಗಲಿ ಎಂದು ಕಾದು ಕುಳಿತಿದ್ದೇವೆ ಎಂದು ಪೋಷಕರು ಹೇಳಿದ್ದಾರೆ.

    ನಮ್ಮ ಮಕ್ಕಳ ಭವಿಷ್ಯ ಮುಖ್ಯ ಎನ್ನುವ ಇಲ್ಲಿಯ ಪೋಷಕರು ರಾತ್ರಿಯಿಂದ ಬೆಳಗ್ಗೆವರೆಗೂ ಕಾದು ಕುಳಿತು ತಮ್ಮ ಸಂಖ್ಯೆಗೆ ತಕ್ಕಂತೆ ಫಾರ್ಮ್ ಪಡೆಯಲು ಮುಗಿಬಿದ್ದಿದ್ದಾರೆ. ಇಂಗ್ಲೀಷ್ ವ್ಯಾಮೋಹ ಮತ್ತು ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಈ ಪೋಷಕರು ಬಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ. ಹಾಗಂತ ಬೇರೆಲ್ಲೂ ಇಂಗ್ಲಿಷ್ ಮೀಡಿಯಂ ಶಾಲೆ ಇಲ್ಲ ಎಂದೇನೂ ಅಲ್ಲ. ಇದ್ದರೂ ಕೂಡ ಶಿರಸಿಯಲ್ಲೇ ಪ್ರಥಮವಾಗಿ ಪ್ರಾರಂಭಗೊಂಡ ಈ ಶಾಲೆ ಬ್ರಾಂಡ್ ಆಗಿದ್ದು ಈ ಕಾರಣದಿಂದ ಪೋಷಕರು ಮುಗಿಬಿದ್ದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಪೋಷಕರ ನಿರ್ಲಕ್ಷ್ಯಕ್ಕೆ 13 ವರ್ಷದ ಬಾಲಕ ಸಾವು

    ಪೋಷಕರ ನಿರ್ಲಕ್ಷ್ಯಕ್ಕೆ 13 ವರ್ಷದ ಬಾಲಕ ಸಾವು

    ಬೆಂಗಳೂರು: ಪೋಷಕರ ನಿರ್ಲಕ್ಷ್ಯಕ್ಕೆ 13 ವರ್ಷದ ಬಾಲಕ ಬಲಿ ಆಗಿರುವ ಘಟನೆ ಬೆಂಗಳೂರಿನ ಎಚ್‍ಎಎಲ್ ಠಾಣಾ ವ್ಯಾಪ್ತಿಯಲ್ಲಿ ನೆಡೆದಿದೆ.

    13 ವರ್ಷದ ಸಮೀರ್ ಮೃತ ಬಾಲಕ. ಸಮೀರ್ ಹಾಗೂ ಆತನ ಕುಟುಂಬದವರು ಮೂಲತಃ ನೇಪಾಳದವರು. ಇಂದು ಬೆಳಗ್ಗೆ 5 ಗಂಟೆಗೆ ಸಮೀರ್ ತಾಯಿ ಕಲಾವತಿ ಕೆಲಸಕ್ಕೆಂದು ಮನೆಯಿಂದ ಹೋಗಿದ್ದರು. ಈ ವೇಳೆ ಮನೆಯಲ್ಲಿದ್ದ ಸಿಲಿಂಡರ್ ಗ್ಯಾಸ್ ಲೀಕ್ ಆಗಿದೆ.

    ಗ್ಯಾಸ್ ಲೀಕ್ ಆದ ಪರಿಣಾಮ ಮನೆಯಲ್ಲಿದ್ದ ಎರಡು ಮಕ್ಕಳ ಪೈಕಿ ಬಾಲಕ ಸಮೀರ್ ಗ್ಯಾಸ್ ಕುಡಿದು ಉಸಿರುಗಟ್ಟು ಮೃತಪಟ್ಟಿದ್ದಾನೆ. ಇನ್ನೊಬ್ಬ ಬಾಲಕ ಶಶೀರ್ (11) ತೀವ್ರ ಅಸ್ವಸ್ಥವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

    ಹೆಚ್ಚಿನ ಚಿಕೆತ್ಸೆಗೆ ಶಶೀರ್‍ನನ್ನು ಸೇಂಟ್ ಜಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಘಟನೆಗೆ ಪೋಷಕರ ನಿರ್ಲಕ್ಷ್ಯವೇ ಕಾರಣ ಎಂದು ಹೇಳಲಾಗುತ್ತಿದೆ. ಅಲ್ಲದೇ ಗ್ಯಾಸ್ ಸಿಲಿಂಡರ್ ಲೀಕ್ ಆಗುವ ವೇಳೆ ಮನೆಯಲ್ಲಿ ಮಕ್ಕಳು ಹೊರತುಪಡಿಸಿ ಪೋಷಕರು ಯಾರೂ ಇರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮತ್ತೊಬ್ಬ ಮಗ ವಾಪಸ್ ಬರ್ತಿದ್ದಾರೆ – ಗುರು ಪೋಷಕರ ಸಂತಸ

    ಮತ್ತೊಬ್ಬ ಮಗ ವಾಪಸ್ ಬರ್ತಿದ್ದಾರೆ – ಗುರು ಪೋಷಕರ ಸಂತಸ

    – ಬಿಬಿಎಂಪಿ ವತಿಯಿಂದ 25 ಲಕ್ಷ ರೂ. ಪರಿಹಾರ

    ಬೆಂಗಳೂರು: ವಿಂಗ್ ಕಮಾಂಡರ್ ಅಭಿನಂದನ್ ಭಾರತಕ್ಕೆ ವಾಪಸ್ ಕರೆತರುತ್ತಿರುವುದು ಸಂತಸ ವಿಷಯ. ನಮ್ಮ ಸಹೋದರರ ನೋವಿನಲ್ಲೂ ಅವರು ವಾಪಸ್ ಬರುತ್ತಿರುವುದು ಸಂತಸ ತಂದಿದೆ ಎಂದು ಯೋಧರ ಗುರು ಅವರ ಪೋಷಕರು ಹೇಳಿದ್ದಾರೆ.

    ಬಿಬಿಎಂಪಿ ಕಚೇರಿಗೆ ಆಗಮಿಸಿದ್ದ ವೇಳೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಅಭಿನಂದನ್ ವಾಪಸ್ ಬರುತ್ತಿರುವುದು ನಮ್ಮ ಮತ್ತೊಬ್ಬ ಮಗ ವಾಪಸ್ ಬರುತ್ತಿದಂತೆ ಎನಿಸುತ್ತಿದೆ ಎಂದರು. ಇದೇ ವೇಳೆ ಮಾತನಾಡಿದ ಗುರು ಸಹೋದರ, ನನ್ನ ದೊಡ್ಡಣ್ಣ ವಾಪಸ್ ಬರುತ್ತಿದ್ದಾರೆ. ಆದರೆ ನಮ್ಮನ್ನು ಮೋಸ ಮಾಡಿದವರು ಈ ದೇಶದಲ್ಲಿ ಮತ್ತೆ ಉಳಿದಂತೆ ಮಾಡಬೇಕು ಎಂದರು.

    ಈ ವೇಳೆ ಮಾತನಾಡಿದ ಬಿಬಿಎಂಪಿ ಮೇಯರ್ ಅವರು, ಪಾಲಿಕೆ ವತಿಯಿಂದ 25 ಲಕ್ಷ ರೂ. ಪರಿಹಾರ ನೀಡಲಾಗಿದೆ. ಬಿಬಿಎಂಪಿ ಸದಸ್ಯರ ಗೌರವಧನ ಹಾಗು ನೌಕರರ ಹಣ ಒಟ್ಟು ಸೇರಿ ಹಣ ನೀಡಲಾಗಿದೆ. ಅಲ್ಲದೇ ಪಾಲಿಕೆ ನೌಕರರು ಸ್ವಾತಂತ್ರ್ಯ ಉದ್ಯಾನವನದಲ್ಲಿ ಯೋಧ ಗುರು ಅವರ ಪ್ರತಿಮೆಯನ್ನು ನಿರ್ಮಿಸಲು ಮನವಿ ಮಾಡಿದ್ದಾರೆ. ಈ ಕುರಿತು ಕೌನ್ಸಿಲ್ ಸಭೆಯಲ್ಲಿ ಪ್ರಸ್ತಾಪ ಮಾಡಿ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

    ಇದೇ ವೇಳೆ ತಮ್ಮ ಕುಟುಂಬದಲ್ಲಿ ಯಾವುದೇ ರೀತಿಯ ಅಸಮಾಧಾನ ಇಲ್ಲ ಎಂದು ಸ್ಪಷ್ಟಪಡಿಸಿದ ಗುರು ಅವರ ತಾಯಿ ಚಿಕ್ತಾಯಮ್ಮ ಅವರು, ನಿಮ್ಮೆಲರ ಸಹಾಯದಿಂದ ನಾವು ಮತ್ತೆ ನಗು ಕಾಣಲು ಸಾಧ್ಯವಾಗುತ್ತಿದೆ. ಅತ್ತೆ, ಸೊಸೆ ಮಧ್ಯೆ ಜಗಳ ಹಾಗೂ ಪೊಲೀಸ್ ಠಾಣೆಯ ಮೆಟ್ಟಿಲೆರಿದ್ದಾರೆ ಎಂದು ವರದಿಯಾಗಿದೆ. ಆದರೆ ಅಂತಹ ಯಾವುದೇ ಘಟನೆ ನಡೆದಿಲ್ಲ. ನಮ್ಮ ಸೊಸೆ ಮಗಳ ರೀತಿ ಇದ್ದೇವೆ. ಜನರ ಮಾತಿನಿಂದ ಮತ್ತೆ ನೋವು ಆಗುತ್ತಿದೆ. ದಯವಿಟ್ಟು ಇದನ್ನೆಲ್ಲ ಯಾರೂ ನಂಬಬೇಡಿ, ಸದ್ಯ ನಮಗೇ ಹಣಕ್ಕಿಂತ ನೆಮ್ಮದಿ ಬೇಕು ಅಷ್ಟೇ ಎಂದು ಸ್ಪಷ್ಟಪಡಿಸಿದರು.

    ಮಗನ ಸುದ್ದಿ ಕೇಳಿ ಮನೆಯಲ್ಲಿ ಯಾರು ಒಂದು ವಾರ ಅನ್ನ ತಿನ್ನಲು ಆಗದ ಸ್ಥಿತಿ ಇತ್ತು. ಸದ್ಯ ಸರ್ಕಾರ ಉದ್ಯೋಗ ನೀಡುವ ಭರವಸೆ ನೀಡಿದೆ. ನನಗೆ ಹಣ ಬೇಡ, ನಮ್ಮ ಗೌರವ ಉಳಿಸಿಕೊಂಡರೆ ಸಾಕು ಎಂದು ಕಣ್ಣೀರಿಟ್ಟರು. ಈ ವೇಳೆ ಗುರು ತಂದೆ ಹೊನ್ನಯ್ಯ ಹಾಗೂ ಸಹೋದರ ಹಾಜರಿದ್ದರು.

    ಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎದ್ದು ನಿಂತು ಚಪ್ಪಾಳೆ- ವಿಮಾನದೊಳಗೆ ಅಭಿ ಪೋಷಕರಿಗೆ ಗೌರವದ ಆಹ್ವಾನ

    ಎದ್ದು ನಿಂತು ಚಪ್ಪಾಳೆ- ವಿಮಾನದೊಳಗೆ ಅಭಿ ಪೋಷಕರಿಗೆ ಗೌರವದ ಆಹ್ವಾನ

    ನವದೆಹಲಿ: ಪಾಕಿಸ್ತಾನ ತನ್ನ ವಶದಲ್ಲಿಟ್ಟುಕೊಂಡಿರುವ ವಿಂಗ್ ಕಮಾಂಡರ್ ಅಭಿನಂದನ್ ವರ್ಥಮಾನ್ ಅವರನ್ನು ಇಂದು ಬಿಡುಗಡೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಅವರ ಪೋಷಕರು ಅಮೃತಸರದ ವಾಘಾ ಗಡಿಗೆ ತೆರಳಿದ್ದಾರೆ.

    ಹೆಮ್ಮೆಯ ಪುತ್ರ ಅಭಿನಂದನ್ ಬರುತ್ತಿರುವ ಮಾಹಿತಿ ತಿಳಿದ ತಕ್ಷಣ ಅವರ ತಂದೆ ನಿವೃತ್ತ ಏರ್‍ಮಾರ್ಷಲ್ ಸಿಂಹಕುಟ್ಟಿ ವರ್ಥಮಾನ್ ಮತ್ತು ತಾಯಿ ಶೋಭಾ ವರ್ಥಮಾನ್ ಅವರು ಗುರುವಾರ ರಾತ್ರಿ ಚೆನ್ನೈನಿಂದ ದೆಹಲಿಗೆ ವಿಮಾನದ ಮೂಲಕ ಪ್ರಯಾಣ ಬೆಳೆಸಿದ್ದರು. ಇದನ್ನೂ ಓದಿ:ಭಾರತೀಯರಿಗೆ ಅಭಿನಂದನ್ ತಂದೆ ಧನ್ಯವಾದ

    ಅಭಿನಂದನ್ ಪೋಷಕರು ವಿಮಾನದ ಒಳಗೆ ಪ್ರವೇಶ ಮಾಡುತ್ತಿದ್ದಂತೆಯೇ ಅದರೊಳಗಿದ್ದ ಸಹ ಪ್ರಯಾಣಿಕರು ಹರ್ಷೋದ್ಗಾರ ಕೂಗಿದ್ದು, ಅಲ್ಲದೇ ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಅವರನ್ನು ಬರಮಾಡಿಕೊಂಡಿದ್ದರು. ಮಧ್ಯರಾತ್ರಿ ದೆಹಲಿ ವಿಮಾನ ನಿಲ್ದಾಣಕ್ಕೆ ತಲುಪಿದ್ದು, ಏರ್ ಪೋರ್ಟ್ ನಲ್ಲಿಯೂ ಕೂಡ ಸೇನೆಯವರು ಅವರನ್ನು ಗೌರವದಿಂದ ಸ್ವಾಗತಿಸಿದ್ದಾರೆ.

    ಈ ವೇಳೆ ಅಭಿನಂದನ್ ಅವರ ತಂದೆ ನಿವೃತ್ತ ಏರ್ ಮಾರ್ಷಲ್ ಸಿಂಹಕುಟ್ಟಿ ವರ್ಥಮಾನ್, “ಮೊದಲು ನನ್ನ ಮಗನನ್ನು ನೋಡಬೇಕು, ಆಮೇಲಷ್ಟೇ ಪ್ರತಿಕ್ರಿಯೆ ಕೊಡ್ತೇನೆ” ಎಂದು ಹೇಳಿದ್ದಾರೆ. ಅಭಿನಂದನ್ ತಂದೆ ನಿವೃತ್ತ ಏರ್ ಮಾರ್ಷಲ್ ಆಗಿದ್ದು, ತಾಯಿ ಶೋಭಾ ವರ್ಥಮಾನ್ ವೈದ್ಯರಾಗಿದ್ದಾರೆ. ಪೋಷಕರು ದೆಹಲಿಗೆ ಬಂದು ಇಳಿದ ಕೂಡಲೇ ಅಮೃತಸರಕ್ಕೆ ತೆರಳಿದ್ದಾರೆ.

    ಪಾಕಿಸ್ತಾನವು ವಾಘಾ ಗಡಿಯಲ್ಲಿ ಇಂದು ಮಧ್ಯಾಹ್ನದ ಬಳಿಕ 3.30ರ ಸುಮಾರಿಗೆ ಅಭಿನಂದನ್ ಅವರನ್ನು ಭಾರತಕ್ಕೆ ಒಪ್ಪಿಸುತ್ತದೆ. ಈ ಹಿನ್ನೆಲೆಯಲ್ಲಿ ಇದೀಗ ಭಾರತೀಯರ ಸಂಭ್ರಮ ಮುಗಿಲುಮುಟ್ಟಿದೆ. ಅಲ್ಲದೇ ವಾಘಾ ಗಡಿಯಲ್ಲಿ ತ್ರಿವರ್ಣ ಧ್ವಜ ಹಿಡಿದು ಹೆಮ್ಮೆಯ ಸೈನಿಕ ಅಭಿಯನ್ನು ಅದ್ಧೂರಿಯಿಂದ ಬರಮಾಡಿಕೊಳ್ಳಲು ಸಜ್ಜಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ಕೊಡದೆ ಸತಾಯ್ತಿಸಿರೋ ಪ್ರಾಂಶುಪಾಲ..!

    ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ಕೊಡದೆ ಸತಾಯ್ತಿಸಿರೋ ಪ್ರಾಂಶುಪಾಲ..!

    ಬೆಂಗಳೂರು: ಹಾಲ್ ಟಿಕೆಟ್ ಸಿಗದೆ ವಿದ್ಯಾರ್ಥಿಗಳು ಹಾಗೂ ಪೋಷಕರು ಪರದಾಡಿದ್ದು, ದಯವಿಟ್ಟು ಹಾಲ್ ಟಿಕೆಟ್ ಕೊಡಿಸಿ ಎಂದು ಪಿಯು ಬೋರ್ಡ್‍ಗೆ ಬಂದಿದ್ದಾರೆ.

    ಬೆಂಗಳೂರಿನ ಆರ್ಯ ವಿದ್ಯಾ ಶಾಲಾ ಪಿಯು ಕಾಲೇಜ್ ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ಕೊಟ್ಟಿಲ್ಲ. ದ್ವಿತೀಯ ಪಿಯುಸಿ ಪರೀಕ್ಷೆಯ ಹಾಲ್ ಟಿಕೆಟ್ ಕೊಡದೆ ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳ ಮೇಲೆ ದ್ವೇಷ ಸಾಧಿಸಿದೆ.

    ವಿದ್ಯಾರ್ಥಿಗಳು ಪ್ರಥಮ ಪಿಯುಸಿನಲ್ಲಿ ಕ್ಲಾಸಿನಲ್ಲಿ ಕಿರಿಕ್ ಮಾಡಿಕೊಂಡಿದ್ದರು. ಕಾಲೇಜು ಆಡಳಿತ ಮಂಡಳಿ ಕಿರಿಕ್ ಮಾಡಿದ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿದೆ. ಅಲ್ಲದೆ ಹಾಜರಾತಿ ಕಡಿಮೆ ಇದೆ ಎನ್ನುವ ನೆಪದಲ್ಲಿ ಪಿಯು ಬೋರ್ಡ್‍ಗೆ ಹಾಲ್ ಟಿಕೆಟ್ ವಾಪಸ್ ಕಳುಹಿಸಿದೆ.

    ನಾನು ರೆಗ್ಯೂಲರ್ ಆಗಿ ಕ್ಲಾಸಿಗೆ ಬಂದಿದ್ದೇನೆ. ಬೇಕಾದರೆ ನಾನು ಕ್ಲಾಸಿಗೆ ಬಂದಿದ್ದೀನೋ ಇಲ್ವೋ ಎಂದು ಸಿಸಿಟಿವಿ ಚೆಕ್ ಮಾಡಿ ಎಂದು ಹಾಲ್ ಟಿಕೆಟ್ ವಂಚಿತ ವಿದ್ಯಾರ್ಥಿ ಸತೀಶ್ ಹೇಳಿದ್ದಾನೆ. ಪ್ರಿನ್ಸಿಪಾಲ್ ಈಶ್ವರಯ್ಯ ಹಾಲ್ ಟಿಕೆಟ್ ನೀಡದೆ ಸತಾಯಿಸುತ್ತಿದ್ದು, ಮೂರು ದಿನಗಳಿಂದ ಫೋನ್ ಸ್ವಿಚ್ಛ್ ಆಫ್ ಮಾಡಿ ಕಾಲೇಜಿಗೆ ರಜೆ ಹಾಕಿದ್ದಾರೆ.

    ಹಾಲ್ ಟಿಕೆಟ್ ನೀಡದಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಕಣ್ಣೀರು ಹಾಕುತ್ತಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಪಿಯು ಬೋರ್ಡ್‍ಗೆ ಬಂದ ಪ್ರಿನ್ಸಿಪಾಲ್ ಈಶ್ವರಯ್ಯ, ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಲು ನಕಾರ ಮಾಡಿದ್ದಾರೆ. ಅಲ್ಲದೇ ಉಡಾಫೆ ಮಾತನಾಡ್ತಾ ಅಲ್ಲಿಂದ ಹೊರಟು ಹೋಗಿದ್ದಾರೆ. ವಿದ್ಯಾರ್ಥಿಗಳು ಹಾಗೂ ಪೋಷಕರು ಕೂಡ ಪ್ರಿನ್ಸಿಪಾಲ್ ಹಿಂದೆ ಹೋದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗುಪ್ತಾಂಗ ದಪ್ಪಗಾಗಿ, ಸುಟ್ಟು ಗಾಯಗಳಿಂದ 3 ವರ್ಷದ ಬಾಲಕ ಅನುಮಾನಸ್ಪದ ಸಾವು

    ಗುಪ್ತಾಂಗ ದಪ್ಪಗಾಗಿ, ಸುಟ್ಟು ಗಾಯಗಳಿಂದ 3 ವರ್ಷದ ಬಾಲಕ ಅನುಮಾನಸ್ಪದ ಸಾವು

    ಕೋಲಾರ: 3 ವರ್ಷದ ಬಾಲಕ ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಮಗ ಹಠ ಮಾಡುತ್ತಿದ್ದ ಎನ್ನುವ ಕಾರಣಕ್ಕೆ ಹೆತ್ತವರೆ ಚಿತ್ರಹಿಂಸೆ ಕೊಟ್ಟು ಕೊಂದ್ರು ಎಂಬ ಅನುಮಾನ ಮೂಡಿದ್ದು, ಸದ್ಯ ಪೋಷಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಕೋಲಾರ ಜಿಲ್ಲೆ ಮಾಲೂರು ಪಟ್ಟಣದ ಮಾಸ್ತಿ ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು, ಪೃತ್ವಿಕ್ (3) ಅನುಮಾನಸ್ಪದವಾಗಿ ಸಾವಿಗೀಡಾದ ಮಗು. ತಂದೆ ಹರೀಶ್ ಹಾಗೂ ತಾಯಿ ರೇಣುಕಾ ದಂಪತಿಯೆ ಮಗುವನ್ನ ಹೊಡೆದು ಕೊಂದ್ರು ಎಂಬ ಅನುಮಾನ ಮೂಡಿದೆ.

    ಗುಪ್ತಾಂಗ ದಪ್ಪಗಾಗಿ, ಸುಟ್ಟು ಗಾಯಗಳಾಗಿರುವ ಮೃತ ಬಾಲಕನ ತಲೆಗೆ ಬಲವಾಗಿ ಹೊಡೆದ ಗಾಯಗಳಾಗಿವೆ. ಗಾಯಗಳಿಂದ ತೀವ್ರ ಅಸ್ವಸ್ಥವಾದ ಮಗು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ. ತಂದೆ ತಾಯಿ ವಿರುದ್ದ 304 ಸೆಕ್ಷನ್ ಅಡಿಯಲ್ಲಿ ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಲೈಂಗಿಕ ಕ್ರಿಯೆಯ ಬಗ್ಗೆ ಚರ್ಚೆ- ಗಂಡು, ಹೆಣ್ಣಿನ ಖಾಸಗಿ ಕ್ಷಣಗಳ ಸ್ಕೆಚ್ ಬರೆಯುವಂತೆ ಪೀಡಿಸಿದ ಬಾಲಕಿ!

    ಲೈಂಗಿಕ ಕ್ರಿಯೆಯ ಬಗ್ಗೆ ಚರ್ಚೆ- ಗಂಡು, ಹೆಣ್ಣಿನ ಖಾಸಗಿ ಕ್ಷಣಗಳ ಸ್ಕೆಚ್ ಬರೆಯುವಂತೆ ಪೀಡಿಸಿದ ಬಾಲಕಿ!

    ಬೆಂಗಳೂರು: ಸಿಲಿಕಾನ್ ಸಿಟಿಯ ಶಾಲೆಯೊಂದರಲ್ಲಿ ಶಾಕಿಂಗ್ ಸ್ಟೋರಿ ಬೆಳಕಿಗೆ ಬಂದಿದ್ದು, ಏಳನೇ ತರಗತಿಯ ಇಬ್ಬರು ವಿಧ್ಯಾರ್ಥಿನಿಯರ ನಡುವೆ ಲೈಂಗಿಕ ಕ್ರಿಯೆಯ ಬಗ್ಗೆ ಚರ್ಚೆ ನಡೆದಿದೆ.

    ವಿದ್ಯಾರ್ಥಿನಿಯೊಬ್ಬಳು ಗಂಡು-ಹೆಣ್ಣಿನ ಖಾಸಗಿ ಕ್ಷಣಗಳ ಸ್ಕೆಚ್ ಬರೆಯುವಂತೆ ಪೀಡಿಸಿದ್ದಾಳೆ. ತನ್ನ ಸಹಪಾಠಿ ವಿದ್ಯಾರ್ಥಿನಿಯ ಪ್ರಶ್ನೆಯಿಂದ ಮತ್ತೋರ್ವ ವಿದ್ಯಾರ್ಥಿನಿ ಅತಂಕಕ್ಕೀಡಾಗಿದ್ದಳು. ಅಲ್ಲದೆ ಸಹಪಾಠಿ ನಿರಂತರ ಕಿರುಕುಳ ನೀಡುತ್ತಿದ್ದಳು. ಸಹಪಾಟಿಯ ಕಿರುಕುಳ ತಾಳಲಾರದೇ ಬಾಲಕಿ ಈ ಬಗ್ಗೆ ತನ್ನ ಪೋಷಕರ ಬಳಿ ಅಳಲು ತೋಡಿಕೊಂಡಿದ್ದಾಳೆ.

    ಈ ವಿಚಾರ ತಿಳಿದ ಬಾಲಕಿ ಪೋಷಕರು, ಒತ್ತಾಯ ಮಾಡ್ತಿದ್ದ ಬಾಲಕಿ ಮನೆ ಬಳಿ ಹೋಗಿ ಗಲಾಟೆ ಮಾಡಿದ್ದಾರೆ. ಈ ವೇಳೆ ಇಬ್ಬರು ವಿದ್ಯಾರ್ಥಿನಿಯರ ಪೋಷಕರ ನಡುವೆ ಮಾತಿನ ಚಕಮಕಿ ನಡೆದಿದೆ. ಅಲ್ಲದೇ ಪ್ರಶ್ನೆ ಮಾಡಿದ ಪೋಷಕರ ಮೇಲೆ ಮತ್ತೋರ್ವ ಬಾಲಕಿ ಪೋಷಕರು ಹಲ್ಲೆ ಮಾಡಿದ್ದಾರೆ.

    ವಿದ್ಯಾರ್ಥಿನಿಯ ಉಪಟಳ ಹೆಚ್ಚಾಗುತ್ತಿದ್ದಂತೆ ನೊಂದ ಬಾಲಕಿಯ ಪೋಷಕರು ಠಾಣೆ ಮೆಟ್ಟಿಲೇರಿದ್ದಾರೆ. ಬಾಣಸವಾಡಿ ಠಾಣಾ ವ್ಯಾಪ್ತಿಯ ಎಚ್‍ಆರ್‍ಬಿಆರ್ ಲೇಔಟ್‍ನಲ್ಲಿ ಈ ಘಟನೆ ನಡೆದಿದ್ದು, ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಐಪಿಸಿ 504, 323, ಹಾಗೂ 324 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಗ ಮೃತಪಟ್ಟು 6 ತಿಂಗಳ ಬಳಿಕ ಪೋಷಕರು ಬೆಂಕಿ ಹಂಚಿಕೊಂಡು ಆತ್ಮಹತ್ಯೆ

    ಮಗ ಮೃತಪಟ್ಟು 6 ತಿಂಗಳ ಬಳಿಕ ಪೋಷಕರು ಬೆಂಕಿ ಹಂಚಿಕೊಂಡು ಆತ್ಮಹತ್ಯೆ

    ಚೆನ್ನೈ: ಏಕೈಕ ಮಗ ಮೃತಪಟ್ಟು ಆರು ತಿಂಗಳ ಬಳಿಕ ವೃದ್ಧ ದಂಪತಿ ಆತ್ಮಹತ್ಯೆ ಮಾಡಿಕೊಂಡ ಮನಕಲಕುವ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ.

    ತಂಗಮುತ್ತು(62) ಹಾಗೂ ವಲ್ಲಿಯಮ್ಮಲ್(57) ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ದಂಪತಿ. ದಂಪತಿ ತಮಿಳುನಾಡಿನ ತಿರುಪುರ್ ಜಿಲ್ಲೆಯಲ್ಲಿ ತಮ್ಮ ಮಗ ಚಂದ್ರಶೇಖರ್ ಹಾಗೂ ಮಮ್ಮೊಗ ತರುಣ್ ಜೊತೆ ವಾಸಿಸುತ್ತಿದ್ದರು. ಚಂದ್ರಶೇಖರ್ ಪತ್ನಿ ತನ್ನ ಪತಿ ಹಾಗೂ 10 ವರ್ಷದ ಮಗನನ್ನು ಬಿಟ್ಟು ಬೇರೆ ವ್ಯಕ್ತಿ ಜೊತೆ ಓಡಿ ಹೋಗಿದ್ದಳು. ಬಳಿಕ ಚಂದ್ರಶೇಖರ್ ಕಿಡ್ನಿ ವೈಫಲ್ಯದಿಂದ 6 ತಿಂಗಳ ಹಿಂದೆ ಮೃತಪಟ್ಟಿದ್ದನು.

    ತಂಗಮುತ್ತು ಹಾಗೂ ವಲ್ಲಿಯಮ್ಮಲ್ ಇಬ್ಬರು ತಮ್ಮ ಮಗನ ಸಾವಿನಿಂದ ಖಿನ್ನತೆಗೆ ಒಳಗಾಗಿದ್ದರು. ಅಲ್ಲದೇ ತಂಗಮುತ್ತು ಡಯಾಬಿಟಿಸ್‍ನಿಂದ ಬಳಲುತ್ತಿದ್ದರು. ಇತ್ತೀಚೆಗೆ ತಂಗಮುತ್ತು ಆರೋಗ್ಯದಲ್ಲಿ ಏರಾಪೇರಾಗಿದ್ದು, ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಹೋಗಿದ್ದರು. ಆಗ ವೈದ್ಯರು ತಂಗಮುತ್ತುಗೆ ಆಸ್ಪತ್ರೆಯಲ್ಲಿ ದಾಖಲಾಗುವಂತೆ ಹೇಳಿದ್ದರು. ಹಣಕಾಸಿನ ಸಮಸ್ಯೆಯಿಂದ ತಂಗಮುತ್ತು ಆಸ್ಪತ್ರೆಗೆ ದಾಖಲಾಗದೇ ಮನೆಗೆ ಹಿಂತಿರುಗಿದ್ದರು.

    ಸೋಮವಾರ ದಂಪತಿ ತಮ್ಮ ಮೊಮ್ಮಗ ತರುಣ್‍ನನ್ನು ಹೊರಗೆ ಕಳುಹಿಸಿ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ಮನೆಯಿಂದ ಬೆಂಕಿ ಹಾಗೂ ಹೊಗೆ ಬರುತ್ತಿರುವುದನ್ನು ಗಮನಿಸಿದ ತರುಣ್ ತಕ್ಷಣ ಮನೆಯ ಒಳಗಡೆ ಓಡಿ ಹೋಗಿ ಬೆಂಕಿಯನ್ನು ಲೆಕ್ಕಿಸದೇ ಅಜ್ಜಿ-ತಾತರನ್ನು ರಕ್ಷಿಸಲು ಮುಂದಾಗಿದ್ದಾನೆ. ಈ ವೇಳೆ ದಂಪತಿ ಆತನನ್ನು ದೂರ ತಳ್ಳಿದ್ದಾರೆ. ಆಗ ತರುಣ್ ಮನೆ ಹೊರಗೆ ಬಂದು ಸಹಾಯಕ್ಕಾಗಿ ಕೇಳಿಕೊಂಡಿದ್ದಾನೆ. ಬಳಿಕ ಅಕ್ಕಪಕ್ಕದ ಮನೆಯವರು ಬೆಂಕಿ ನಂದಿಸಿ ದಂಪತಿಯನ್ನು ರಕ್ಷಿಸಿದ್ದರು.

    ದಂಪತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಇಬ್ಬರು ಮೃತಪಟ್ಟಿದ್ದು, ತರುಣ್ ಬೆಂಕಿಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪೊಲೀಸರು ಈ ಘಟನೆ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv