Tag: parents

  • ಶಿಕ್ಷಕಿ ಕ್ರೌರ್ಯಕ್ಕೆ ಕಣ್ಣು ಕಳೆದುಕೊಂಡ ಎಲ್‍ಕೆಜಿ ವಿದ್ಯಾರ್ಥಿ

    ಶಿಕ್ಷಕಿ ಕ್ರೌರ್ಯಕ್ಕೆ ಕಣ್ಣು ಕಳೆದುಕೊಂಡ ಎಲ್‍ಕೆಜಿ ವಿದ್ಯಾರ್ಥಿ

    ಹಾಸನ: ಶಿಕ್ಷಕಿಯೊಬ್ಬರ ಕ್ರೌರ್ಯಕ್ಕೆ ವಿದ್ಯಾರ್ಥಿಯೋರ್ವ ಕಣ್ಣು ಕಳೆದುಕೊಂಡ ಘಟನೆ ಜಿಲ್ಲೆಯ ಹೊರವಲಯದ ಎಲ್‍ವಿಜಿಎಸ್ ಶಾಲೆಯಲ್ಲಿ ನಡೆದಿದೆ.

    ವಿದ್ಯಾರ್ಥಿ ಮನಿಷ್ ದೃಷ್ಟಿ ಕಳೆದುಕೊಂಡಿದ್ದಾನೆ. ಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿ ಗಿರಿಜಾ ಅವರ ವಿರುದ್ಧ ಈ ಆರೋಪ ಕೇಳಿಬಂದಿದೆ. ಮನಿಷ್ ಎಲ್‍ಕೆಜಿಯಲ್ಲಿ ವ್ಯಾಸಂಗ ವಾಡುತ್ತಿದ್ದಾನೆ. ಅಗಸ್ಟ್ 13ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಶಾಲೆಯಲ್ಲಿ ಶಿಕ್ಷಕಿ ಮನಿಷ್ ಕಣ್ಣಿಗೆ ಕಬ್ಬಿಣದ ಸ್ಕೇಲ್‍ನಿಂದ ಹಲ್ಲೆ ಮಾಡಿದ್ದಾರೆ. ಹೀಗಾಗಿ ನಮ್ಮ ಮಗನಿಗೆ ಕಣ್ಣು ಕಳೆದುಕೊಳ್ಳುವ ಸ್ಥಿತಿ ಬಂದಿದೆ ಎಂದು ಪೋಷಕರು ಶಿಕ್ಷಕಿ ವಿರುದ್ಧ ಆರೋಪಿಸಿದ್ದಾರೆ.

    ಶಿಕ್ಷಕಿ ಹಲ್ಲೆ ನಡೆಸಿದ ದಿನದಿಂದ ವಿದ್ಯಾರ್ಥಿ ಕಣ್ಣು ನೋವು ಎಂದು ಹೇಳುತ್ತಿದ್ದನು. ಹೀಗಾಗಿ ವೈದ್ಯರ ಬಳಿ ಚಿಕಿತ್ಸೆಗೆ ಪೋಷಕರು ವಿದ್ಯಾರ್ಥಿಯನ್ನು ಕರೆದುಕೊಂಡ ಹೋದಾಗ ಆತನ ಕಣ್ಣಿಗೆ ಬಲವಾಗಿ ಹಾನಿಯಾಗಿದೆ ಎಂಬ ಸತ್ಯಾಂಶ ಹೊರಬಿದ್ದಿದೆ. ಹೀಗಾಗಿ ಶಿಕ್ಷಕಿಯ ಕ್ರೌರ್ಯಕ್ಕೆ ವಿದ್ಯಾರ್ಥಿ ಕಣ್ಣು ಕಳೆದುಕೊಂಡಿದ್ದಾನೆ. ಇದರಿಂದ ಪೋಷಕರು ಶಿಕ್ಷಕಿ ಹಾಗೂ ಶಾಲಾ ಆಡಳಿತ ಮಂಡಳಿ ವಿರುದ್ಧ ಸಿಡಿದೆದ್ದಿದ್ದಾರೆ.

    ಹಾಗೆಯೇ ಈ ಬಗ್ಗೆ ಪೊಲೀಸರಿಗೆ ಶಿಕ್ಷಕಿ ಹಾಗೂ ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಷಕರು ದೂರು ನೀಡಿದ್ದಾರೆ. ಸದ್ಯ ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಫೇಸ್‍ಬುಕ್ ಗೆಳೆಯನನ್ನು ನೋಡಲು ಭೋಪಾಲ್‍ಗೆ ತೆರಳಿದ ಬೆಂಗ್ಳೂರಿನ ಅಪ್ರಾಪ್ತೆ

    ಫೇಸ್‍ಬುಕ್ ಗೆಳೆಯನನ್ನು ನೋಡಲು ಭೋಪಾಲ್‍ಗೆ ತೆರಳಿದ ಬೆಂಗ್ಳೂರಿನ ಅಪ್ರಾಪ್ತೆ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ 10 ನೇ ತರಗತಿಯ ಹುಡುಗಿಯೊಬ್ಬಳು ತನ್ನ ಫೇಸ್‍ಬುಕ್ ಗೆಳೆಯನಿಗೆ ಸರ್ಪ್ರೈಸ್ ನೀಡಲು ವಿಮಾನದ ಮೂಲಕ ಭೋಪಾಲ್‍ಗೆ ತೆರಳಿರುವ ಪ್ರಸಂಗವೊಂದು ನಡೆದಿದೆ.

    ಫೇಸ್‍ಬುಕ್ ಗೆಳೆಯನು ಕೂಡ ಅಪ್ರಾಪ್ತ. ಮನೆಯಲ್ಲಿ ತಂದೆಯ ಜೊತೆ ಹುಡುಗಿ ಜಗಳ ಮಾಡಿಕೊಂಡು ತನ್ನ ಫೇಸ್‍ಬುಕ್ ಗೆಳೆಯನ ನೋಡಲು ವಿಮಾನದಲ್ಲಿ ಭೋಪಾಲ್‍ಗೆ ಹೋಗಿದ್ದು, ಅಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದು, ಸದ್ಯ ಬೆಂಗಳೂರಿಗೆ ವಾಪಸ್ಸಾಗಿದ್ದಾಳೆ.

    ಹುಡುಗಿಯು ಶನಿವಾರ ಹುಡುಗನಿಗೆ ಹೇಳದೆ ಅವನ ಮನೆಯ ಹತ್ತಿರ ಹೋಗಿದ್ದಾಳೆ. ಹುಡುಗಿಯನ್ನು ಮನೆಯ ಹತ್ತಿರ ನೋಡಿದ ಹುಡುಗ, ಅಲ್ಲಿಂದ ಕರೆದುಕೊಂಡು ಹೋಗಿ ಹೋಟೆಲಿನಲ್ಲಿ ರೂಮ್ ಮಾಡಿದ್ದಾನೆ. ಆದರೆ ಅವಳ ಜೊತೆ ಇರುವ ಬದಲಾಗಿ ನೀನು ವಾಪಸ್ ಮನೆಗೆ ಹೋಗು ಎಂದು ಬುದ್ಧಿಮಾತು ಹೇಳಿದ್ದಾನೆ. ಇದರಿಂದ ಕೋಪಗೊಂಡ ಆಕೆ ಹೋಟೆಲಿನಲ್ಲಿ ಗಲಾಟೆ ಮಾಡಿದ್ದಾಳೆ.

    ಹೀಗೆ ಹಬೀಬ್‍ಗಂಜ್‍ನ ಹೋಟೆಲಿನಲ್ಲಿ ಗಲಾಟೆ ಮಾಡುತ್ತಿದ್ದ ಹುಡುಗಿ ಸೋಮವಾರ ಗಸ್ತು ತಿರುಗುತ್ತಿದ್ದ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ. ಹುಡುಗಿಯನ್ನು ವಿಚಾರಿಸಿ ಆಕೆ ಇನ್ನೂ ಅಪ್ರಾಪ್ತೆ ಎಂದು ತಿಳಿದ ಪೊಲೀಸರು, ಅವಳನ್ನು ಠಾಣೆಗೆ ಕರೆದುಕೊಂಡು ಹೋಗದೆ ಮಕ್ಕಳ ಕಲ್ಯಾಣ ಸಮಿತಿಗೆ ಕರೆದುಕೊಂಡು ಹೋಗಿದ್ದಾರೆ.

    ಮಕ್ಕಳ ಕಲ್ಯಾಣ ಸಮಿತಿಯಲ್ಲಿ ಆಕೆಯನ್ನು ಕೌನ್ಸ್ ಲಿಂಗ್ ಮಾಡಿದ ಅಧಿಕಾರಿಗಳಿಗೆ ಹುಡುಗಿ, ತನ್ನ ಫೇಸ್‍ಬುಕ್ ಗೆಳೆಯನ ನಡತೆಯನ್ನು ಪರೀಕ್ಷೆ ಮಾಡಲು ನಾನು ಇಲ್ಲಿಗೆ ಬಂದಿದ್ದು ಎಂದು ಹೇಳಿದ್ದಾಳೆ. ಶನಿವಾರ ಹುಡುಗಿ ತನ್ನ ಗೆಳೆಯನ ಮನೆ ಹತ್ತಿರ ಹೋಗಿದ್ದಾಳೆ. ನಂತರ ಅವನು ತನ್ನ ಮನೆಯಲ್ಲಿ ನೀನು ಉಳಿದುಕೊಳ್ಳಲು ಆಗುವುದಿಲ್ಲ ಎಂದು ಹೇಳಿ ಹೋಟೆಲ್ ಬುಕ್ ಮಾಡಿದ್ದಾನೆ. ಆದರೆ ಅವಳ ಜೊತೆ ಉಳಿದುಕೊಳ್ಳದೆ ಸೋಮವಾರ ನೀನು ಮನಗೆ ವಾಪಸ್ ಹೋಗು ಎಂದು ಮನವೊಲಿಸಲು ಪ್ರಯತ್ನ ಮಾಡಿದ್ದಾನೆ. ಇದರಿಂದ ಬೇಸರಗೊಂಡ ಆಕೆ ಹುಡುಗನ ಜೊತೆ ಜಗಳವಾಡಿ ಹೋಟೆಲ್ ಬಿಟ್ಟು ಹೊರಗೆ ಬಂದು ಪೊಲೀಸರ ಕೈಗೆ ಸಿಕ್ಕಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ರಾಜೀವ್ ಜೈನ್, ಹುಡುಗಿ ಫೇಸ್‍ಬುಕ್‍ನಲ್ಲಿ ತುಂಬಾ ಸ್ನೇಹಿತರನ್ನು ಹೊಂದಿದ್ದಾಳೆ. ಮನೆಯಲ್ಲಿ ತಂದೆಯ ಜೊತೆ ಜಗಳವಾಡಿಕೊಂಡು, ಕಾಲ್ ಸೆಂಟರ್‍ ನಲ್ಲಿ ಕೆಲಸ ಮಾಡಿ ಹಣ ಹೊಂದಿಸಿಕೊಂಡು ಅವಳ ಫೇಸ್‍ಬುಕ್ ಗೆಳೆಯನನ್ನು ಭೇಟಿಯಾಗಲು ಭೋಪಾಲ್‍ಗೆ ಬಂದಿದ್ದಾಳೆ. ಆದರೆ ತನ್ನ ಮಗಳು ಅವಳ ಚಿಕ್ಕಮ್ಮನ ಮನೆಗೆ ಹೋಗಿರಬಹುದು ಎಂದು ಆಕೆಯ ಪೋಷಕರು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ನಾವು ಆಕೆಗೆ ಮನೆಬಿಟ್ಟು ಬರುವುದು ತಪ್ಪು ಎಂದು ಮನವರಿಕೆ ಮಾಡಿದ್ದೇವೆ ಎಂದು ಹೇಳಿದ್ದಾರೆ.

    ಆಕೆಯ ತಂದೆ ಬೆಂಗಳೂರಿನಲ್ಲಿ ದೊಡ್ಡ ಉದ್ಯಮಿಯಾಗಿದ್ದು, ಮಗಳು ಪಬ್‍ಗೆ ಹೋಗುವುದನ್ನು ನಿರಾಕರಿಸಿದ್ದಾರೆ. ಈ ಕಾರಣದಿಂದ ಮನೆಯಲ್ಲಿ ಜಗಳವಾಡಿಕೊಂಡು ಶುಕ್ರವಾರ ಭೋಪಾಲ್‍ಗೆ ವಿಮಾನ ಹತ್ತಿದ್ದಾಳೆ. ನಂತರ ಅಲ್ಲಿ ತನ್ನ ಇಬ್ಬರು ಫೇಸ್‍ಬುಕ್ ಗೆಳೆಯರ ಸಹಾಯ ಪಡೆದು ಶನಿವಾರ ಆಕೆಯ ಗೆಳೆಯನ ಮನೆ ಹತ್ತಿರ ಹೋಗಿದ್ದಾಳೆ. ನಾವು ಆಕೆಯ ತಂದೆಗೆ ಕರೆ ಮಾಡಿ, ಬಂದು ಮಗಳನ್ನು ಕರೆದುಕೊಂಡು ಹೋಗುವಂತೆ ಹೇಳಿದೆವು. ಅದರಂತೆ ಬಂದ ಅವರ ತಂದೆ, ಮಂಗಳವಾರ ರಾತ್ರಿ ಆಕೆಯನ್ನು ಕರೆದುಕೊಂಡು ಮನೆಗೆ ಹೋದರು ಎಂದು ಜೈನ್ ಹೇಳಿದ್ದಾರೆ.

    ನಾನು ಆಕೆಯ ತಂದೆಗೆ ಮಕ್ಕಳ ಜೊತೆ ಹೆಚ್ಚು ಸಮಯ ಕಳೆಯಬೇಕು ಎಂದು ಹೇಳಿದ್ದೇವೆ. ಮಕ್ಕಳ ಈ ಹಂತದಲ್ಲಿ ಪೋಷಕರು ಅವರ ಬಗ್ಗೆ ಹೆಚ್ಚು ಗಮನಹರಿಸಬೇಕು. ಮಕ್ಕಳು ಪೋಷಕರಿಗೆ ಹೇಳದೆ ಈ ರೀತಿ ಹೊರಗೆ ಬರುವುದು ಅವರ ಸುರಕ್ಷತೆಗೆ ಅಪಾಯವನ್ನುಂಟುಮಾಡುತ್ತದೆ ಎಂದು ನಾವು ಹುಡುಗಿಗೆ ಹೇಳಿದ್ದೇವೆ. ಆಕೆ ನೋಡಲು ಬಂದ ಹುಡುಗ ಒಳ್ಳೆಯವನು. ಇಲ್ಲದಿದ್ದರೆ ಈ ವಿಚಾರ ತುಂಬಾ ಗಂಭೀರವಾಗರುತ್ತಿತ್ತು ಎಂದು ಜೈನ್ ತಿಳಿಸಿದ್ದಾರೆ.

  • ನಟಿ ಸಾರಾ ವಿಡಿಯೋದಿಂದ ಕಳೆದು ಹೋದ ಮಗ ಪತ್ತೆ

    ನಟಿ ಸಾರಾ ವಿಡಿಯೋದಿಂದ ಕಳೆದು ಹೋದ ಮಗ ಪತ್ತೆ

    ಮುಂಬೈ: ಬಾಲಿವುಡ್ ನಟಿ ಸಾರಾ ಅಲಿ ಖಾನ್ ಅವರ ವಿಡಿಯೋ ಮೂಲಕ ಕಳೆದು ಹೋದ ವ್ಯಕ್ತಿಯ ಸುಳಿವು ಸಿಕ್ಕಿದ್ದು, ಆತನ ಕುಟುಂಬಸ್ಥರು ಖುಷಿ ವ್ಯಕ್ತಪಡಿಸಿದ್ದಾರೆ.

    ಕೆಲವು ದಿನಗಳ ಹಿಂದೆ ಯುವಕನೊಬ್ಬ ನಟಿ ಸಾರಾ ಅಲಿ ಖಾನ್ ಅವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅವರ ಹತ್ತಿರ ಬರುತ್ತಾರೆ. ಯುವಕ ಹತ್ತಿರ ಬರುತ್ತಿದ್ದಂತೆ ಸಾರಾ ಹೆದರಿಕೊಂಡಿದ್ದರು. ಬಳಿಕ ಯುವಕನ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ಈ ಇಡೀ ಘಟನೆಯನ್ನು ಮಾಧ್ಯಮದವರು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದು ಬಳಿಕ ವೆಬ್‍ಸೈಟ್ ನಲ್ಲಿ ಅಪ್ಲೋಡ್ ಮಾಡಿದ್ದರು.

    ಈ ವಿಡಿಯೋವನ್ನು ಮಧ್ಯಪ್ರದೇಶದ ರಾಯ್‍ಸೇನ್ ನಿವಾಸಿಯ ಸ್ವರೂಪ್ ಸಿಂಗ್ ಅವರ ಕುಟುಂಬ ನೋಡಿದೆ. ಸಾರಾ ಅವರ ಜೊತೆ ಸೆಲ್ಫಿಗೆ ಮುಗಿಬಿದಿದ್ದ ಯುವಕ ಅಜಯ್ ಸಿಂಗ್, ಸ್ವರೂಪ್ ಸಿಂಗ್ ಅವರ ಮಗನಾಗಿದ್ದು, 10ನೇ ತರಗತಿಯಲ್ಲಿ ಓದುತ್ತಿದ್ದಾನೆ. ಅಜಯ್ ಸಿಂಗ್ ಪರೀಕ್ಷೆಯಲ್ಲಿ ಫೇಲಾಗಿದ್ದ ಕಾರಣ ಆಗಸ್ಟ್ 17ರಂದು ಶಾಲೆಯಿಂದ ನಾಪತ್ತೆಯಾಗಿದ್ದನು. ಬಳಿಕ ಸ್ವರೂಪ್ ಸಿಂಗ್ ಎಲ್ಲಾ ಕಡೆ ತಮ್ಮ ಮಗನನ್ನು ಹುಡುಕಿದ್ದಾರೆ. ಆದರೆ ಮಗನ ಬಗ್ಗೆ ಸುಳಿವು ಸಿಗದಿದ್ದಾಗ ಅವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಸ್ವರೂಪ್ ಸಿಂಗ್ ಸ್ವೀಟ್ ಅಂಗಡಿ ನಡೆಸುತ್ತಿದ್ದು, ವಿಡಿಯೋದಲ್ಲಿ ತಮ್ಮ ಮಗ ಸುರಕ್ಷಿತವಾಗಿರುವುದನ್ನು ನೋಡಿ ಖುಷಿಪಟ್ಟಿದ್ದಾರೆ. ಸ್ವರೂಪ್ ಅವರು ಈ ವಿಡಿಯೋವನ್ನು ಪೊಲೀಸರಿಗೆ ಹಾಗೂ ಮುಂಬೈನಲ್ಲಿರುವ ತಮ್ಮ ಪರಿಚಿತರಿಗೆ ಕಳುಹಿಸಿ ಮಾಹಿತಿ ನೀಡಿದ್ದಾರೆ. ಇದರ ಜೊತೆಗೆ ವಿಡಿಯೋಗೆ ಕಮೆಂಟ್ ಮಾಡುವ ಮೂಲಕ ಅಜಯ್ ನಾಪತ್ತೆಯಾಗಿರುವ ವಿಷಯವನ್ನು ಆತನ ಸ್ನೇಹಿತರಿಗೆ ತಿಳಿಸಿದ್ದಾರೆ.

    ಈ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಅಜಯ್‍ನನ್ನು ಹುಡುಕಲು ಶುರು ಮಾಡಿದ್ದಾರೆ. ಆದರೆ ಇದುವರೆಗೂ ಅಜಯ್ ಲೋಕೇಶನ್ ಬಗ್ಗೆ ಪತ್ತೆಯಾಗಿಲ್ಲ.

  • ಕಣ್ಣಾರೆ ಕಂಡ ನಂತ್ರ ನನ್ನ ಕೊನೆಯುಸಿರು ನಿಲ್ಲಲಿ – ಸುದೀಪ್ ನೋಡಲು ಯುವಕ ಹಠ

    ಕಣ್ಣಾರೆ ಕಂಡ ನಂತ್ರ ನನ್ನ ಕೊನೆಯುಸಿರು ನಿಲ್ಲಲಿ – ಸುದೀಪ್ ನೋಡಲು ಯುವಕ ಹಠ

    ಚಾಮರಾಜನಗರ: ನಿಮ್ಮನ್ನು ಕಣ್ಣಾರೆ ನೋಡಿದ ಮೇಲೆ ನನ್ನ ಕೊನೆಯ ಉಸಿರು ನಿಲ್ಲಲಿ ಎಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರನ್ನು ನೋಡಲು ಕ್ಯಾನ್ಸರ್ ಪೀಡಿತ ಯುವಕ ಹಠ ಹಿಡಿದು ಕುಳಿತಿದ್ದಾರೆ.

    ಸಿದ್ದರಾಜು ಕ್ಯಾನ್ಸರ್ ಪೀಡಿತ ಯುವಕ. ಸಿದ್ದರಾಜು ಚಾಮರಾಜನಗರದ ನಂಜದೇವನಪುರ ಗ್ರಾಮದವರಾಗಿದ್ದು, ಸುದೀಪ್ ಅವರ ಅಪ್ಪಟ್ಟ ಅಭಿಮಾನಿ. ಸದ್ಯ ಈಗ ಅವರು ಸುದೀಪ್‍ರನ್ನು ನೋಡಲು ಹಠ ಹಿಡಿದು ಕುಳಿತಿದ್ದಾರೆ. ಇತ್ತ ಸಿದ್ದರಾಜು ಚಿಕಿತ್ಸೆಗಾಗಿ ವೃದ್ಧ ದಂಪತಿ ಪರದಾಡುತ್ತಿದ್ದಾರೆ.

    ಸಿದ್ದರಾಜು ಅವರ ತಂದೆ ಹುಟ್ಟು ಕುರುಡರಾಗಿದ್ದು, ಭಿಕ್ಷೆ ಬೇಡಿ ತನ್ನ ಮಗನಿಗೆ ಚಿಕಿತ್ಸೆ ಕೊಡಿಸುತ್ತಿದ್ದಾರೆ. ತಂದೆಗೆ ಊರುಗೋಲಾಗಬೇಕಾದ ಮಗ ಕೈ, ಕಾಲು ಸ್ವಾಧೀನ ಕಳೆದುಕೊಂಡು ಕಳೆದ ಒಂದೂವರೆ ವರ್ಷದಿಂದ ಹಾಸಿಗೆ ಹಿಡಿದಿದ್ದಾರೆ. ಮಗನನ್ನು ಉಳಿಸಿಕೊಳ್ಳಲು ತಂದೆ-ತಾಯಿ ಕಣ್ಣೀರು ಹಾಕುತ್ತಾ ಸಹಾಯ ಹಸ್ತಕ್ಕಾಗಿ ಅಂಗಲಾಚುತ್ತಿದ್ದಾರೆ.

    ಸರ್ವಿಕಲ್ ಕ್ಯಾನ್ಸರ್ ಕಾಯಿಲೆಯಿಂದ ಸಿದ್ದರಾಜು ಬಳಲುತ್ತಿದ್ದು, ಸಾವಿನ ಅಂತಿಮ ಕ್ಷಣಗಳನ್ನು ಎಣಿಸುತ್ತಿದ್ದಾರೆ. ಅಲ್ಲದೆ ಸಾಯುವುದಕ್ಕೂ ಮುನ್ನ ಒಮ್ಮೆ ಸುದೀಪ್ ನೋಡಲು ಬಯಸುತ್ತಿದ್ದಾರೆ. ಸುದೀಪಣ್ಣ ಒಮ್ಮೆ ಬಂದು ನನ್ನ ನೋಡಿ. ನಿಮ್ಮ ಕಣ್ಣಾರೆ ನೋಡಿದ ಮೇಲೆ ನನ್ನ ಕೊನೆ ಉಸಿರು ನಿಲ್ಲಲಿ ಎಂದು ಸಿದ್ದರಾಜು ಹಂಬಲಿಸುತ್ತಿದ್ದಾರೆ.

    ನನಗೆ ಒಂದೂವರೆ ವರ್ಷದಿಂದ ಸರ್ವಿಕಲ್ ಕ್ಯಾನ್ಸರ್ ಇದೆ. ನಾನು ಚಿಕ್ಕ ವಯಸ್ಸಿನಿಂದ ಸುದೀಪ್ ಅವರ ಅಪ್ಪಟ್ಟ ಅಭಿಮಾನಿಯಾಗಿದ್ದೇನೆ. ನಾನು ಅವರ ಯಾವುದೇ ಚಿತ್ರ ಇದ್ದರೂ ಫಸ್ಟ್ ಶೋಗೆ ಹೋಗುತ್ತಿದೆ. ಕೈ, ಕಾಲು ಸ್ವಾಧೀನ ಇಲ್ಲದಿದ್ದರೂ 5 ಗಂಟೆ ಶೋಗೆ ಹೋಗುತ್ತಿದ್ದೆ. ನಾನು ಈಗ ತುಂಬಾ ಕಷ್ಟದಲ್ಲಿದ್ದೇನೆ. ನನ್ನ ಎರಡೂ ಕೈ, ಕಾಲು ಸ್ವಾಧೀನ ಕಳೆದುಕೊಂಡಿದ್ದೇನೆ. ನನ್ನ ತಂದೆಗೆ ಕಣ್ಣು ಕಾಣಿಸುವುದಿಲ್ಲ. ಆದರೂ ಅವರು ಭಿಕ್ಷೆ ಬೇಡಿ ನನ್ನನ್ನು ನೋಡಿಕೊಳ್ಳುತ್ತಿದ್ದಾರೆ. ನೀವು ಎಲ್ಲೆ ಇದ್ದರೂ ನಮಗೆ ಸಹಾಯ ಮಾಡಿ ಎಂದು ಸುದೀಪ್ ಅವರಲ್ಲಿ ಸಿದ್ದರಾಜು ಮನವಿ ಮಾಡಿಕೊಂಡಿದ್ದಾರೆ.

  • ಆಹಾರವಿಲ್ಲದೆ ಬೀದಿ ನಾಯಿಗಳಿಂದ ಮಗುವಿನ ಮೇಲೆ ದಾಳಿ

    ಆಹಾರವಿಲ್ಲದೆ ಬೀದಿ ನಾಯಿಗಳಿಂದ ಮಗುವಿನ ಮೇಲೆ ದಾಳಿ

    ಬೆಳಗಾವಿ: ಆಹಾರ ಇಲ್ಲದೆ ಹಸಿವಿನಿಂದ ಬಳಲಿದ್ದ ಬೀದಿ ನಾಯಿಗಳು ಮಗುವಿನ ಮೇಲೆ ದಾಳಿ ಮಾಡಿರುವ ಘಟನೆ ಬೆಳಗಾವಿಯ ತಿಲಕವಾಡಿಯ ಲೇಲೆ ಮೈದಾನ ಬಳಿ ನಡೆದಿದೆ.

    ನಾಯಿಗಳ ದಾಳಿಗೆ ತುತ್ತಾದ ಐದು ವರ್ಷ ಮಗು ಪಾರ್ಥ ಪರುಶುರಾಮ್ ಗಾಯಕವಾಡಗೆ ಗಂಭೀರ ಗಾಯವಾಗಿದೆ. ಕೂಡಲೇ ಬಾಲಕನನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತದೆ.

    ಇಂದು ಬೆಳಗ್ಗೆ ಲೇಲೆ ಮೈದಾನದಲ್ಲಿ ಮೂರು ನಾಯಿಗಳು ಮಗುವಿನ ಮೇಲೆ ದಾಳಿ ಮಾಡಿದ್ದು, ಮಗುವಿನ ಮುಖ ಸೇರಿ ಎಲ್ಲೆಂದರಲ್ಲೇ ಕಚ್ಚಿ ಹಾಕಿವೆ. ಹೀಗೆ ಪದೇ ಪದೇ ನಾಯಿಗಳು ದಾಳಿಮಾಡುತ್ತಿರುವ ಕಾರಣ ಮಕ್ಕಳ ಪೋಷಕರು ಭಯದ ವಾತಾವರಣದಲ್ಲಿಯೇ ಜೀವನ ನಡೆಸುತ್ತಿದ್ದಾರೆ.

    ಬೆಳಗಾವಿ ತಿಲಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಮದ್ವೆಯಾದ ಮರುದಿನವೇ ಮನೆಗೆ ಕರ್ಕೊಂಡು ಬಂದು ಮಗಳ ಹತ್ಯೆ

    ಮದ್ವೆಯಾದ ಮರುದಿನವೇ ಮನೆಗೆ ಕರ್ಕೊಂಡು ಬಂದು ಮಗಳ ಹತ್ಯೆ

    -ಪೋಷಕರಿಗೆ ಜೀವಾವಧಿ ಶಿಕ್ಷೆ ಜೊತೆ ದಂಡ

    ಹೈದರಾಬಾದ್: ತಮ್ಮ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾಗಿದ್ದಕ್ಕೆ ಪೋಷಕರೇ ಮಗಳನ್ನು ಮರ್ಯಾದಾ ಹತ್ಯೆ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ದಂಪತಿಗೆ ಜೀವಾವಧಿ ಶಿಕ್ಷೆ ಮತ್ತು 2,000 ರೂ. ದಂಡವನ್ನು ವಿಧಿಸಿರುವ ಘಟನೆ ಆಂಧ್ರ ಪ್ರದೇಶದ ಗುಂಟೂರಿನಲ್ಲಿ ನಡೆದಿದೆ.

    ಅಪರಾಧಿ ದಂಪತಿಯನ್ನು ಪಚಲಾ ಹರಿಬಾಬು ಮತ್ತು ಸಾಮ್ರಾಜ್ಯಂ ಎಂದು ಗುರುತಿಸಲಾಗಿದೆ. ಇವರು ಗುಂಟೂರು ಜಿಲ್ಲೆಯ ಗೋಗುಲಮುಡಿ ಗ್ರಾಮದ ನಿವಾಸಿಗಳಾಗಿದ್ದು, ಈ ದಂಪತಿಗೆ ದೀಪ್ತಿ (26) ಮತ್ತು ಶ್ರುತಿ ಇಬ್ಬರು ಹೆಣ್ಣು ಮಕ್ಕಳಿದ್ದರು. ಆದರೆ ದೀಪ್ತಿ ಪ್ರೀತಿಸಿ ಮದುವೆಯಾಗಿದ್ದಕ್ಕೆ ಪೋಷಕರೇ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ದೀಪ್ತಿ ಹೈದರಾಬಾದ್‍ನ ಎಚ್‍ಸಿಎಲ್‍ನಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಳು. ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪಶ್ಚಿಮ ಗೋದಾವರಿ ಜಿಲ್ಲೆಯ ರಾಜೋಮಂಗಿ ಗ್ರಾಮದ ಅನಂತಪಲ್ಲಿ ಕಿರಣಕುಮಾರ್ ನನ್ನು ಪ್ರೀತಿಸುತ್ತಿದ್ದಳು. ಕಿರಣ್‍ಕುಮಾರ್ ಮತ್ತು ದೀಪ್ತಿ ಬೇರೆ ಬೇರೆ ಜಾತಿಯಾಗಿದ್ದರಿಂದ ತಮ್ಮ ಮದುವೆಗೆ ಪೋಷಕರು ಒಪ್ಪುವುದಿಲ್ಲವೆಂದು ಯಾರಿಗೂ ತಿಳಿಸದಂತೆ ಮದುವೆಯಾಗಲು ನಿರ್ಧರಿಸಿದ್ದರು. ಅದೇ ರೀತಿ ದೀಪ್ತಿ ಮತ್ತು ಕಿರಣ್ ಹೈದರಾಬಾದ್‍ನ ಆರ್ಯ ಸಮಾಜದಲ್ಲಿ ಪೋಷಕರ ವಿರೋಧದ ನಡುವೆ ಮದುವೆಯಾಗಿದ್ದರು.

    ದೀಪ್ತಿ ಮತ್ತು ಕಿರಣ್ ತಮ್ಮ ಇಚ್ಛೆಗೆ ವಿರುದ್ಧವಾಗಿ ವಿವಾಹವಾದರು ಎಂಬ ವಿಚಾರ ಪೋಷಕರಿಗೆ ತಿಳಿದಿದೆ. ಇದರಿಂದ ಕೋಪಗೊಂಡ ಪೋಷಕರು ಮಗಳನ್ನೇ ಕೊಲೆ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದರು. ಅದರಂತೆಯೇ ಮದುವೆಯಾದ ಮರುದಿನವೇ ಪೋಷಕರು ದಂಪತಿಯನ್ನು ಭೇಟಿಯಾಗಿದ್ದು, ನವಜೋಡಿಯನ್ನು ಗುಂಟೂರಿಗೆ ಕರೆದುಕೊಂಡು ಬಂದಿದ್ದಾರೆ. ಪೂಜೆ ಮಾಡುವ ನೆಪದಲ್ಲಿ ಪೋಷಕರು ತಮ್ಮೊಂದಿಗೆ ಮಗಳು ಮಾತ್ರ ಮನೆಗೆ ಬರಬೇಕೆಂದು ಹೇಳಿ ಕಿರಣ್‍ನನ್ನು ಹೋಟೆಲ್‍ನಲ್ಲಿ ಬಿಟ್ಟು ದೀಪ್ತಿಯನ್ನು ಕರೆದುಕೊಂಡು ಹೋಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಮಗಳನ್ನು ಮನೆಗೆ ಕರೆದುಕೊಂಡು ಬಂದ ಕೂಡಲೇ ಆಕೆಯನ್ನು ಮಂಚಕ್ಕೆ ಕಟ್ಟಿದ್ದಾರೆ. ತಾಯಿ ದೀಪ್ತಿಯ ಕೈಗಳನ್ನು ಹಿಡಿದುಕೊಂಡಿದ್ದಾಳೆ. ಆಗ ತಂದೆ ಹರಿಬಾಬು ದುಪ್ಪಟ್ಟದಿಂದ ಮಗಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಇತ್ತ ಪತಿ ಕಿರಣ್ ಕುಮಾರ್ ಪತ್ನಿಯನ್ನು ಹುಡುಕಿಕೊಂಡು ದೀಪ್ತಿ ಮನೆಗೆ ಬಂದಿದ್ದಾನೆ. ಆಗ ಪತ್ನಿಯ ಕೊಲೆಯ ವಿಚಾರ ಬೆಳಕಿಗೆ ಬಂದಿದೆ. ತಕ್ಷಣ ಕಿರಣ್ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

    ದೂರು ದಾಖಲಿಸಿಕೊಂಡ ಪೊಲೀಸರು ದಂಪತಿಯನ್ನು ಬಂಧಿಸಿ ವಿಚಾರಣೆ ಮಾಡಿದ್ದಾರೆ. ಆಗ ತಾವೇ ಮಗಳನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಸದ್ಯಕ್ಕೆ ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ದಂಪತಿಗೆ ಜೀವಾವಧಿ ಶಿಕ್ಷೆ ಮತ್ತು 2,000 ರೂ. ದಂಡವನ್ನು ವಿಧಿಸಿದೆ.

  • ವರನ ಹುಡುಕಾಟದಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ಕುಟುಂಬ

    ವರನ ಹುಡುಕಾಟದಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ಕುಟುಂಬ

    ಮುಂಬೈ: ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಅವರು ಕೊನೆ ಬಾರಿಗೆ ಅಭಿನಯಿಸಿದ ಚಿತ್ರ ಖಮೋಶಿ ಆದರೆ ಆದು ಅಷ್ಟೇನು ಯಶಸ್ಸು ಕಾಣಲಿಲ್ಲ. ಈಗ ಮುಂದಿನ ಚಿತ್ರಕ್ಕೆ ಸಜ್ಜಾಗುತ್ತಿರುವ ತಮನ್ನಾ ಅವರು ತನ್ನ ಮದುವೆ ಬಗ್ಗೆ ಮಾತನಾಡಿದ್ದಾರೆ.

    ಇತ್ತೀಚಿಗೆ ನಡೆದ ಸಂವಾದಲ್ಲಿ, ತನ್ನ ಮುದುವೆ ಬಗ್ಗೆ ಮಾತನಾಡಿರುವ ತಮನ್ನಾ ನನಗೆ ಹುಡುಗನನ್ನು ಹುಡುಕುವ ಸಂಪೂರ್ಣ ಜವಾಬ್ದಾರಿಯನ್ನು ನನ್ನ ಪೋಷಕರಿಗೆ ನೀಡಿದ್ದೇನೆ ಎಂದು ಹೇಳಿದ್ದಾರೆ. ಆದರೆ ಮೂಲಗಳ ಪ್ರಕಾರ ತಮನ್ನಾ ತಾಯಿ ರಜನಿ ಭಾಟಿಯಾ ಅವರು ಮಗಳಿಗಾಗಿ ಉತ್ತಮ ವರನನ್ನು ಹುಡುಕುತ್ತಿದ್ದಾರೆ ಎನ್ನಲಾಗಿದೆ.

    ಈ ಹಿಂದೆ 2018 ರಲ್ಲಿ ತಮನ್ನಾ ಭಾಟಿಯಾ ಅವರು ಅಮೆರಿಕ ಮೂಲದ ವೈದ್ಯರೊಬ್ಬರ ಜೊತೆ ಡೇಟಿಂಗ್‍ನಲ್ಲಿ ಇದ್ದಾರೆ. ಇಬ್ಬರು 2019ರ ವೇಳೆ ಮದುವೆಯಾಗಲಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಈ ಉಹಾಪೋಹಗಳಿಗೆ ತೆರೆ ಎಳೆದಿದ್ದ ತಮನ್ನಾ ನಾನು ಯಾರ ಜೊತೆಗೆ ಡೇಟಿಂಗ್ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಇದರ ಜೊತೆ ತನ್ನ ಮದುವೆಯ ಬಗ್ಗೆ ಏನೇ ಸುದ್ದಿ ಇದ್ದರೂ ನಾನು ಮಾಧ್ಯಮ ಮತ್ತು ನನ್ನ ಅಭಿಮಾನಿಗಳಿಗೆ ತಿಳಿಸುತ್ತೇನೆ ಎಂದು ಭರವಸೆ ನೀಡಿದ್ದರು.

    ತನ್ನ ಮೇಲೆ ಈ ವಿಚಾರದಲ್ಲಿ ಪದೇ ಪದೇ ವದಂತಿಗಳನ್ನು ಕೇಳಿ ಕೋಪಗೊಂಡಿದ್ದ ತಮನ್ನಾ ಅವರು, ಒಂದು ದಿನ ನಟ, ಇನ್ನೊಂದು ದಿನ ಕ್ರಿಕೆಟಿಗ ಮತ್ತು ಈಗ ವೈದ್ಯ ಈ ರೀತಿಯ ವದಂತಿಗಳು ನನಗೆ ತುಂಬ ನೋವುಂಟು ಮಾಡಿವೆ. ಆಧಾರ ರಹಿತ ಸುಳ್ಳು ಸುದ್ದಿಯನ್ನು ನನ್ನ ವೈಯಕ್ತಿಕ ಜೀವನದಲ್ಲಿ ನಾನು ಖಂಡಿತವಾಗಿಯೂ ಸಹಿಸುವುದಿಲ್ಲ. ನಾನು ಒಂಟಿಯಾಗಿ ಸಂತೋಷದಿಂದ ಇದ್ದೇನೆ. ನನ್ನ ಪೋಷಕರು ಇದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದು ಹೇಳಿದ್ದರು.

    ನಾನು ಮದುವೆಯಾಗಲು ತೀರ್ಮಾನ ಮಾಡಿದಾಗ ನನ್ನ ಅಭಿಮಾನಿಗಳಿಗೆ ಮತ್ತು ಮಾಧ್ಯಮದವರಿಗೆ ಮೊದಲು ತಿಳಿಸುತ್ತೇನೆ. ಅದ್ದರಿಂದ ನನ್ನ ಮದುವೆಯ ಬಗ್ಗೆ ಈಗಲೇ ಯಾವುದೇ ಉಹಾಪೋಹ ಬೇಡ ಎಂದು ಹೇಳಿದ್ದರು. ಈಗ ಮತ್ತೆ ಮದುವೆಯ ಬಗ್ಗೆ ಮಾತನಾಡಿದ್ದಾರೆ.

  • ಬುದ್ಧಿ ಮಾತು ಹೇಳಿದ್ದಕ್ಕೆ ಯುವ ಪ್ರೇಮಿಗಳು ಆತ್ಮಹತ್ಯೆ

    ಬುದ್ಧಿ ಮಾತು ಹೇಳಿದ್ದಕ್ಕೆ ಯುವ ಪ್ರೇಮಿಗಳು ಆತ್ಮಹತ್ಯೆ

    ಮೈಸೂರು: ಪೋಷಕರು ಬುದ್ಧಿ ಮಾತು ಹೇಳಿದ್ದಕ್ಕೆ ಮನನೊಂದು ಯುವ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರು ಜಿಲ್ಲೆಯ ಟಿ. ನರಸೀಪುರದ ಹೆಮ್ಮಿಗೆ ಸೇತುವೆ ಬಳಿ ನಡೆದಿದೆ.

    ಮನು (21) ಹಾಗೂ ದೀಪಶ್ರೀ (16) ಆತ್ಮಹತ್ಯೆ ಮಾಡಿಕೊಂಡು ಪ್ರೇಮಿಗಳು. ಮನು ಮೂಲತಃ ನಂಜನಗೂಡಿನ ಕಾಮಹಳ್ಳಿ ಗ್ರಾಮದ ಯುವಕನಾಗಿದ್ದು, ದೀಪಶ್ರೀ ಟಿ. ನರಸೀಪುರದ ಶ್ರೀರಾಂಪುರ ಗ್ರಾಮದವಳು. ದೀಪಶ್ರೀ ಟಿ.ನರಸೀಪುರದ ವಿದ್ಯೋದಯ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು.

    ದೀಪಶ್ರೀ ಮತ್ತು ಮನು ಕೆಲ ತಿಂಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಷಯ ಇಬ್ಬರ ಮನೆಯವರಿಗೂ ತಿಳಿದು ಬುದ್ಧಿ ಮಾತು ಹೇಳಿದ್ದಾರೆ. ಇದರಿಂದ ಮನನೊಂದು ಯುವ ಪ್ರೇಮಿಗಳು ಮೈಸೂರಿನ ತಲಕಾಡಿನ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಯುವಕ ಮನು ವಿಡಿಯೋ ಚಿತ್ರೀಕರಿಸಿದ್ದಾನೆ. ತೀವ್ರ ಶೋಧನೆಯ ಬಳಿಕ ಇಬ್ಬರ ಶವಗಳು ಪತ್ತೆಯಾಗಿದೆ. ಈ ಬಗ್ಗೆ ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ತಂದೆ, ತಾಯಿಯನ್ನು ಹೊತ್ತು ಕನ್ವರ್ ಯಾತ್ರೆ ಕೈಗೊಂಡ ನಾಲ್ವರು ಸಹೋದರರು

    ತಂದೆ, ತಾಯಿಯನ್ನು ಹೊತ್ತು ಕನ್ವರ್ ಯಾತ್ರೆ ಕೈಗೊಂಡ ನಾಲ್ವರು ಸಹೋದರರು

    ಚಂಡೀಗಢ್: ಹರ್ಯಾಣ ಮೂಲದ ನಾಲ್ವರು ಸಹೋದರರು ಹೆತ್ತವರನ್ನು ಹೊತ್ತುಕೊಂಡು ಕನ್ವರ್ ಯಾತ್ರೆ ಕೈಗೊಂಡಿದ್ದಾರೆ. ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಹರ್ಯಾಣದ ಪಾಣಿಪತ್‍ನಿಂದ ಪ್ರಯಾಣ ಆರಂಭಿಸಿರುವ ಸಹೋದರು ಈಗಾಗಲೇ ಉತ್ತರ ಪ್ರದೇಶದ ಶಾಮ್ಲಿ ತಲುಪಿದ್ದಾರೆ. ಅಲ್ಲಲ್ಲಿ ಕೆಲ ಹೊತ್ತು ವಿಶ್ರಾಂತಿ, ಆಹಾರ ಸೇವನೆ ಮಾಡಿ ಸಹೋದರರು ಯಾತ್ರೆ ಮುಂದುವರಿಸಿದ್ದಾರೆ.

    ಪಾಣಿಪತ್‍ನಿಂದ ಉತ್ತರಾಖಂಡದ ಹರಿದ್ವಾರವೂ ಸುಮಾರು 175 ಕಿ.ಮೀ. ಇದೆ. ಕಳೆದ ವರ್ಷ ಇಬ್ಬರು ಸಹೋದರು ಮಾತ್ರ ತಂದೆ, ತಾಯಿಯನ್ನು ಹೊತ್ತು ಯಾತ್ರೆ ಮಾಡಿದ್ದರು. ಈ ಬಾರಿ ಮತ್ತಿಬ್ಬರು ಸಹೋದದರು ಅವರಿಗೆ ಸಾಥ್ ನೀಡಿದ್ದಾರೆ. ಬಾಸ್ಕೇಟ್ ರೀತಿ ಆಸನದಲ್ಲಿ ತಂದೆ ಹಾಗೂ ತಾಯಿಯನ್ನು ಕೂರಿಸಿ, ಬಿದಿರಿನ ಕೋಲಿನ ಸಹಾಯದಿಂದ ಇಬ್ಬರು ಯುವಕರು ಹೊತ್ತು ಸಾಗುತ್ತಿದ್ದಾರೆ. ಸ್ವಲ್ಪ ದೂರ ಇಬ್ಬರು ಹೆತ್ತವರನ್ನು ಹೊತ್ತು ಸಾಗುತ್ತಾರೆ. ಅವರಿಗೆ ಆಯಾಸವಾಗುತ್ತಿದ್ದಂತೆ ಮತ್ತಿಬ್ಬರು ಹೆಗಲು ನೀಡುತ್ತಿದ್ದಾರೆ.

  • ಫೇಸ್ ಆ್ಯಪ್ ಮೂಲಕ 18 ವರ್ಷಗಳ ನಂತ್ರ ಪೋಷಕರಿಗೆ ಸಿಕ್ಕ ಯುವಕ

    ಫೇಸ್ ಆ್ಯಪ್ ಮೂಲಕ 18 ವರ್ಷಗಳ ನಂತ್ರ ಪೋಷಕರಿಗೆ ಸಿಕ್ಕ ಯುವಕ

    ಬೀಜಿಂಗ್: ಮೂರು ವರ್ಷದಲ್ಲಿ ಕಿಡ್ನಾಪ್ ಆಗಿದ್ದ ಬಾಲಕ ಫೇಸ್ ಆ್ಯಪ್ ಮೂಲಕ 18 ವರ್ಷಗಳ ನಂತರ ಪೋಷಕರಿಗೆ ಸಿಕ್ಕಿದ ಘಟನೆ ಚೀನಾದಲ್ಲಿ ನಡೆದಿದೆ.

    ಯು ವೈಫಾಂಗ್ (21) ಮೂರು ವರ್ಷದ ಮಗುವಿದ್ದಾಗ ಕಿಡ್ನಾಪ್ ಆಗಿದ್ದನು. ಬಳಿಕ ಆತನ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಯು ವೈಫಾಂಗ್‍ನನ್ನು ಹುಡುಕಲು ಫೇಸ್ ಆ್ಯಪ್ ತಂತ್ರಜ್ಞಾನ ಬಳಸಿ ಪತ್ತೆ ಹಚ್ಚಿದ್ದಾರೆ.

    ಪೊಲೀಸರು ಯು ವೈಫಾಂಗ್ ಈಗ ಹೇಗಿರುತ್ತಾನೆ ಎಂದು ಕಂಡು ಹಿಡಿಯಲು ಫೇಸ್ ಆ್ಯಪ್ ತಂತ್ರಜ್ಞಾನವನ್ನು ಬಳಸಿದ್ದರು. ಯು ವೈಫಾಂಗ್ ಮುಖಕ್ಕೆ ಸಾವಿರ ಮಂದಿಯ ಡೇಟಾಬೇಸ್ ಹೋಲಿಕೆ ಆಗಿದೆ. ದಕ್ಷಿಣ ಚೀನಾದ ಗಾವಾಂಗ್‍ಡಾಂಗ್ ಪ್ರಾಂತ್ಯದ ಕೋಲ್ಡ್-ಕೇಸ್ ತನಿಖಾಧಿಕಾರಿಗಳು ಕಾಣೆಯಾದ ವ್ಯಕ್ತಿಯನ್ನು ಪತ್ತೆ ಹಚ್ಚಲು ಅಸ್ತಿತ್ವದಲ್ಲಿರುವ ಮುಖ ಗುರುತಿಸಲು ಅಲ್ ತಂತ್ರಜ್ಞಾನವನ್ನು ಬಳಸಿದ್ದಾರೆ.

    ನಾವು ಆತನನ್ನು ಹುಡುಕಿದ್ದಾಗ ಆತ ತಾನು ಕಿಡ್ನಾಪ್ ಆಗಿದೆ ಎಂದು ನಂಬಲೇ ಇಲ್ಲ. ಬಳಿಕ ಆತನ ಡಿಎನ್‍ಎ ಪರೀಕ್ಷೆ ಮಾಡಿಸಲಾಯಿತು. ಡಿಎನ್‍ಎ ವರದಿ ಆತನ ಪೋಷಕರ ವರದಿಗೆ ಮ್ಯಾಚ್ ಆಗುತ್ತಿತ್ತು. ಯು ವೈಫಾಂಗ್‍ನನ್ನು ಲೀ ಎಂಬವರು ದತ್ತು ಪಡೆದುಕೊಂಡಿದ್ದರು. ಬಳಿಕ 2001ರಲ್ಲಿ ಅವರು ಕೆಲಸ ಮಾಡುತ್ತಿದ್ದ ಸೈಟ್ ಬಳಿ ಕಾಣೆಯಾಗಿದ್ದರು. ಈ ಬಗ್ಗೆ ಯು ವೈಫಾಂಗ್ ಪೋಷಕರು ಕಾಣೆಯಾಗಿದ್ದಾರೆ ಎಂದು ದೂರು ದಾಖಲಿಸಿದ್ದರು.

    ಯು ವೈಫಾಂಗ್ ಕಾಣೆಯಾಗಿದ್ದಾಗ ಅವರ ಪೋಷಕರು ಯು ಕ್ಸಿಂಗ್ವಾನ್ ಹಾಗೂ ರೊಂಗ್ ಮುಹುವಾನ್ ಅಕ್ಕಪಕ್ಕದ ಊರಿನಲ್ಲಿ ಆತನನ್ನು ಹುಡುಕಿದ್ದರು. ಆದರೆ ಯು ವೈಫಾಂಗ್ ಸಿಕ್ಕಿರಲಿಲ್ಲ. ಈಗ ಬರೋಬ್ಬರಿ 18 ವರ್ಷದ ನಂತರ ಆತ ತನ್ನ ಪೋಷಕರ ಬಳಿ ಸೇರಿದ್ದಾನೆ.