Tag: parents

  • ಪಬ್ಲಿಕ್ ಟಿವಿ ಡ್ರೀಮ್ಸ್ ಸ್ಕೂಲ್ ಎಕ್ಸ್‌ಪೋ – ಪೋಷಕರೇ ಭಾಗವಹಿಸಿ ಶಾಲೆಗಳ ಮಾಹಿತಿ ತಿಳಿಯಿರಿ

    ಪಬ್ಲಿಕ್ ಟಿವಿ ಡ್ರೀಮ್ಸ್ ಸ್ಕೂಲ್ ಎಕ್ಸ್‌ಪೋ – ಪೋಷಕರೇ ಭಾಗವಹಿಸಿ ಶಾಲೆಗಳ ಮಾಹಿತಿ ತಿಳಿಯಿರಿ

    ಬೆಂಗಳೂರು: ಪಬ್ಲಿಕ್ ಟಿವಿಯ ಸ್ಕೂಲ್‍ನ ಡ್ರೀಮ್ಸ್ ಸ್ಕೂಲ್ ಎಕ್ಸ್‌ಪೋದ 2ನೇ ಆವೃತ್ತಿ ಚಾಲನೆಗೆ ಕ್ಷಣಗಣನೆ ಆರಂಭವಾಗಿದೆ. ನಮ್ಮ ಮಕ್ಕಳು ಉತ್ತಮ ಸ್ಕೂಲ್‍ನಲ್ಲಿ ಓದಬೇಕು, ಒಳ್ಳೆಯ ಕೋರ್ಸ್ ಮಾಡಬೇಕೆಂಬ ಪೋಷಕರ ಕನಸಿಗೆ ಮಾಹಿತಿ ನೀಡಲು ವೇದಿಕೆ ಸಜ್ಜಾಗುತ್ತಿದೆ.

    ಬೆಂಗಳೂರಿನ ವಿಜಯನಗರದ ಎಂಸಿ ಲೇಔಟ್ ಬಾಲಗಂಗಾಧರನಾಥ ಸ್ವಾಮೀಜಿ ಕ್ರೀಡಾಂಗಣದಲ್ಲಿ ಡ್ರೀಮ್ಸ್ ಸ್ಕೂಲ್ ಎಕ್ಸ್‌ಪೋ ನಡೆಯಲಿದೆ. ಸುಮಾರು 20ಕ್ಕೂ ಹೆಚ್ಚು ಶಾಲೆಗಳು ಈ ಎಕ್ಸ್‌ಪೋನಲ್ಲಿ ಭಾಗವಹಿಸಲಿದೆ. ತಜ್ಞ ಶಿಕ್ಷಕರು ಪೋಷಕರಿಗೆ ಮಕ್ಕಳ ಬೆಳವಣಿಗೆ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದ್ದಾರೆ. 2 ದಿನಗಳ ಈ ಎಕ್ಸ್‌ಪೋ ಶನಿವಾರ ಬೆಳಿಗ್ಗೆ 10.30ಕ್ಕೆ ಆರಂಭವಾಗಲಿದ್ದು, ಭಾನುವಾರವೂ ಎಕ್ಸ್‌ಪೋ ಇರಲಿದೆ. ಇದನ್ನೂ ಓದಿ: ಪಬ್ಲಿಕ್ ಟಿವಿ ಡ್ರೀಮ್ಸ್ ಸ್ಕೂಲ್ ಎಕ್ಸ್‌ಪೋ – ಒಂದೇ ಸೂರಿನಲ್ಲಿ ಶಾಲೆಗಳ ಮಾಹಿತಿ

    ರಾಯಲ್ ಕಾನ್ಕಾರ್ಡ್, ಸಂಸಿದ್ ಮಿಲ್ಜ್ ಸ್ಪಾನ್ಸರ್ ಗಳಾಗಿದ್ದು, ಗೋಲ್ಡನ್ ಸ್ಪಾನ್ಸರ್ ಆಗಿ ಅಹಮ್ ಆತ್ಮಾ ವಿದ್ಯಾಲಯ, ಆರ್ಕಿಡ್ಸ್ ಭಾಗವಹಿಸಲಿದೆ. ಪೋಷಕರಿಗಾಗಿ ಮಾಹಿತಿ ಪೂರ್ಣ ಸಂವಾದ, ಮಕ್ಕಳಿಗಾಗಿ ಚಿತ್ರಕಲೆ ಸ್ಪರ್ಧೆ ನಡೆಯಲಿದೆ. ಸ್ಪರ್ಧಿಗಳಿಗೆ ಉಚಿತ ಗಿಫ್ಟ್‌ಗಳನ್ನ ರೇವಾ ಯೂನಿವರ್ಸಿಟಿ ನೀಡಲಿದ್ದು, ಸ್ಟೇಷನರಿ ಗಿಫ್ಟ್ ಸಿಪಿಸಿ ಬುಕ್ಸ್ ನೀಡಲಿದೆ. ಇನ್ನು ಸ್ಥಳದಲ್ಲೇ ಆಡ್ಮಿಶನ್ ಮಾಡಲು ಅವಕಾಶವಿದೆ. ಪ್ರವೇಶ ಉಚಿತವಾಗಿದ್ದು, ತಪ್ಪದೇ ಪೋಷಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕಿದೆ.

  • ಶಾಲೆಗೆ ಪೋಷಕರನ್ನ ಕರೆದುಕೊಂಡು ಬಾ ಎಂದಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ

    ಶಾಲೆಗೆ ಪೋಷಕರನ್ನ ಕರೆದುಕೊಂಡು ಬಾ ಎಂದಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ

    – ಶಾಲಾ ಸಿಬ್ಬಂದಿ ವಿರುದ್ಧ ಪೋಷಕರ ಆಕ್ರೋಶ

    ಬೆಂಗಳೂರು: ಶಿಕ್ಷಕರು ಶಾಲೆಗೆ ಪೋಷಕರನ್ನ ಕರೆದುಕೊಂಡು ಬಾ ಎಂದಿದ್ದಕ್ಕೆ ಹೆದರಿದ ವಿದ್ಯಾರ್ಥಿಯೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ನಗರದ ದೊಮ್ಮಲೂರು ಲೇಔಟ್‍ನಲ್ಲಿ ನಡೆದಿದೆ.

    ವಿದ್ಯಾರ್ಥಿ ವೇಣುಗೋಪಾಲ್(13) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೆಆರ್‍ಎಲ್‍ಎಸ್ ಪಟೇಲ್ ರಾಮರೆಡ್ಡಿ ಸ್ಕೂಲ್‍ನಲ್ಲಿ ವೇಣುಗೋಪಾಲ್ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ಶಾಲೆಗೆ ಆಗಾಗ ವೇಣುಗೋಪಾಲ್ ಗೈರಾಗುತ್ತಿದ್ದ ಹಿನ್ನೆಲೆ ಶಿಕ್ಷಕರು ಪೋಷಕರನ್ನು ಕರೆದುಕೊಂಡು ಬಾ ಎಂದು ಆತನಿಗೆ ಹೇಳಿದ್ದರಂತೆ. ಇದಕ್ಕೆ ಭಯಬಿದ್ದ ಬಾಲಕ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.

    ಬುಧವಾರ ಮಧ್ಯಾಹ್ನ ಶಾಲೆಯಲ್ಲಿ ಊಟಕ್ಕೆ ಬಿಟ್ಟ ವೇಳೆ ಇತರೇ ವಿದ್ಯಾರ್ಥಿಗಳ ಜೊತೆಗೆ ವೇಣುಗೋಪಾಲ್ ಗಲಾಟೆ ಮಾಡಿಕೊಂಡಿದ್ದನು. ಗಲಾಟೆ ವೇಳೆ ವೇಣುಗೋಪಾಲ್ ಮತ್ತೊಂದು ವಿದ್ಯಾರ್ಥಿಯ ಕೈಗೆ ಗಾಯ ಮಾಡಿದ್ದನು. ಗಾಯದ ಗುರುತು ನೋಡಿದ ಪೋಷಕರು ಸ್ಕೂಲ್‍ಗೆ ಬಂದು ವೇಣುಗೋಪಾಲ್ ವಿರುದ್ಧ ಶಾಲಾ ಆಡಳಿತದ ಬಳಿ ದೂರಿದ್ದರು. ಈ ದೂರು ಆಧಾರಿಸಿದ ಶಾಲೆ ವೇಣುಗೋಪಾಲ್ ನನ್ನು ಕರೆದು, ನಾಳೆ ಬರುವಾಗ ಪೋಷಕರನ್ನು ಕರೆದುಕೊಂಡು ಬರುವಂತೆ ತಿಳಿಸಿದ್ದರು. ಇದರಿಂದ ಭಯಗೊಂಡ ವಿದ್ಯಾರ್ಥಿ ಮನೆ ಹಿಂಭಾಗದ ನಿರ್ಜನ ಪ್ರದೇಶದ ಭಾವಿ ಬಳಿಯಿದ್ದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಪೋಷಕರು ಮಾತ್ರ ಮಗನ ಸಾವಿಗೆ ಶಾಲಾ ಸಿಬ್ಬಂದಿಯೇ ಕಾರಣ ಎಂದು ಆರೋಪಿಸಿದ್ದಾರೆ. ಮಗನಿಗೆ ಶಾಲೆಯಲ್ಲಿ ಶಿಕ್ಷಕರು ಹೊಡೆದಿದ್ದಾರೆ, ನಿಂದಿಸಿದ್ದಾರೆ. ಇದರಿಂದ ಆತ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗುತ್ತಿದೆ. ಅಲ್ಲದೆ ಮೃತ ವಿದ್ಯಾರ್ಥಿ ಪೋಷಕರು ಹಾಗೂ ಇತರೆ ಮಕ್ಕಳ ಪೋಷಕರು ಶಾಲೆ ಬಳಿ ತೆರಳಿ ಗಲಾಟೆ ಕೂಡ ಮಾಡಿದ್ದಾರೆ.

    ಶಾಲಾ ಮಂಡಳಿ ಈ ಆರೋಪವನ್ನು ತಳ್ಳಿಹಾಕಿದ್ದು, ವಿದ್ಯಾರ್ಥಿ ಆಗಾಗ ಶಾಲೆ ತಪ್ಪಿಸುತ್ತಿದ್ದನು. ಅಲ್ಲದೆ ಇತರೆ ಮಕ್ಕಳ ಜೊತೆ ಗಲಾಟೆ ಮಾಡಲು ಹೋಗುತ್ತಿದ್ದನು. ಅದಕ್ಕೆ ಪೋಷಕರನ್ನು ಶಾಲೆಗೆ ಕರೆದುಕೊಂಡು ಬಾ ಎಂದು ನಮ್ಮ ಶಿಕ್ಷಕರು ಹೇಳಿದ್ದರು ಅಷ್ಟೇ. ಆದರೆ ವಿದ್ಯಾರ್ಥಿ ಯಾಕೆ ಆತ್ಮಹತ್ಯೆ ಮಾಡಿಕೊಂಡ ಎಂದು ನಮಗೆ ತಿಳಿದಿಲ್ಲ ಎಂದು ಹೇಳುತ್ತಿದೆ.

    ವಿದ್ಯಾರ್ಥಿ ಸಾವಿನ ಸುತ್ತ ಹಲವು ಅನುಮಾನಗಳು ಹುಟ್ಟುಕೊಂಡಿದೆ. ಒಂದು ಕಡೆ ಶಾಲಾ ಮಂಡಳಿ ನಾವು ಆತನಿಗೆ ಹೊಡೆದಿಲ್ಲ, ಕೇವಲ ಪೋಷಕರನ್ನು ಕರೆದುಕೊಂಡು ಬಾ ಎಂದು ತಿಳಿಸಿದ್ದೆವು ಎನ್ನುತ್ತಿದ್ದರೆ, ಪೋಷಕರು ಮಾತ್ರ ಶಾಲಾ ಸಿಬ್ಬಂದಿಯಿಂದಲೇ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕಣ್ಣೀರಿಡುತ್ತಿದ್ದಾರೆ.

    ಈ ಬಗ್ಗೆ ಸ್ಥಳೀಯರೊಬ್ಬರು ಪ್ರತಿಕ್ರಿಯಿಸಿ, ವೇಣುಗೋಪಾಲ್ ಒಳ್ಳೆಯ ಹುಡುಗ. ಓದಿನಲ್ಲೂ ಚುರುಕಾಗಿದ್ದನು, ಎಲ್ಲರೊಡನೆ ಖುಷಿಯಿಂದ ಇರುತ್ತಿದ್ದನು. ಶಾಲೆಯಲ್ಲಿ ಆತನಿಗೆ ಶಿಕ್ಷಕರು ಹೊಡೆದು, ನಿಂದಿಸಿದ್ದರು ಎಂದು ಆತನ ತರಗತಿಯಲ್ಲಿ ಓದುತ್ತಿದ್ದ ಬಾಲಕಿ ತಿಳಿಸಿದ್ದಾಳೆ. ಇದರಿಂದ ಮನನೊಂದು ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ ಮೃದು ಸ್ವಭಾವದ ಬಾಲಕ ಎಂದು ಶಾಲಾ ಸಿಬ್ಬಂದಿ ವಿರುದ್ಧ ಕಿಡಿಕಾರಿದ್ದಾರೆ.

    ಬಾಲಕನ ಸಾವಿಗೆ ನಿಖರ ಕಾರಣವೇನೆಂದು ತಿಳಿಯುತ್ತಿಲ್ಲ. ಈ ಬಗ್ಗೆ ಹಲವು ಅನುಮಾನಗಳು ಕೂಡ ವ್ಯಕ್ತವಾಗುತ್ತಿದೆ. ಸದ್ಯ ಹಲಸೂರು ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಈ ಸಾವಿನ ಸತ್ಯಾಂಶ ತನಿಖೆ ನಡೆಸಿದ ಬಳಿಕವೇ ಬಯಲಿಗೆ ಬರಲಿದೆ.

  • ವಿವಾಹವಾದ ಎಂಟೇ ತಿಂಗಳಲ್ಲಿ ಗೃಹಿಣಿ ಸಾವು

    ವಿವಾಹವಾದ ಎಂಟೇ ತಿಂಗಳಲ್ಲಿ ಗೃಹಿಣಿ ಸಾವು

    ಮೈಸೂರು: ಪತಿ ಮನೆಯವರ ಕಿರುಕುಳಕ್ಕೆ ಬೇಸತ್ತು ವಿವಾಹದ ಎಂಟೇ ತಿಂಗಳಲ್ಲಿ ನವ ವಿವಾಹಿತೆಯೊಬ್ಬರು ನೇಣಿಗೆ ಶರಣಾಗಿದ್ದಾರೆ. ಆದರೆ, ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಮಹಿಳೆಯ ಪೋಷಕರು ಆರೋಪಿಸಿದ್ದಾರೆ.

    ಜಿಲ್ಲೆಯ ನಂಜನಗೂಡಿನ ನಿವಾಸಿಯಾಗಿದ್ದ ಹೆಚ್.ಆರ್ ಬಿಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಎಚ್.ಡಿ ಕೋಟೆ ಸರಗೂರು ತಾಲೂಕಿನ ಹಳೆಯೂರು ಗ್ರಾಮದ ಪತಿಯ ಮನೆಯಲ್ಲೇ ಬಿಂದು ಅನುಮಾನಾಸ್ಪದವಾಗಿ ನೇಣಿಗೆ ಶರಣಾಗಿದ್ದಾರೆ. ಆದರೆ ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಬಿಂದು ಪೋಷಕರು ಆರೋಪಿಸಿ, ಪತಿ ಹಾಗೂ ಆತನ ಕುಟುಂಬದ ವಿರುದ್ಧ ದೂರು ನೀಡಿದ್ದಾರೆ.

    ಸರಗೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಬಿಂದು ಪತಿ ಗುರುಸ್ವಾಮಿ, ಮಾವ ಚಂದ್ರ, ಅತ್ತೆ ತಾಯಮ್ಮನನ್ನು ಪೊಲೀಸರು ಬಂಧಿಸಿದ್ದಾರೆ. ಅಷ್ಟೇ ಅಲ್ಲದೆ ಪತಿಯ ಸಂಬಂಧಿಗಳಾದ ಪ್ರೇಮ, ರೇಖಾ, ಕಾವ್ಯ ಮತ್ತು ವಲುವ ಸೇರಿದಂತೆ ಏಳು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

  • ಬೃಹತ್ ಆಂಜನೇಯ ಪ್ರತಿಮೆ ಮುಂದೆ ಹನುಮನ ವೇಷದಲ್ಲಿ ಮಿಂಚಿದ 4ರ ಪೋರಿ

    ಬೃಹತ್ ಆಂಜನೇಯ ಪ್ರತಿಮೆ ಮುಂದೆ ಹನುಮನ ವೇಷದಲ್ಲಿ ಮಿಂಚಿದ 4ರ ಪೋರಿ

    ತುಮಕೂರು: ಸಾಮಾನ್ಯವಾಗಿ ಕೃಷ್ಣ ಜಯಂತಿಯಲ್ಲಿ ತಮ್ಮ ಮುದ್ದಾದ ಮಕ್ಕಳಿಗೆ ಕೃಷ್ಣನ ವೇಷ ಹಾಕುತ್ತಾರೆ. ಆದರೆ ಕಲ್ಪತರು ನಾಡಿನಲ್ಲಿ ಹನುಮ ಜಯಂತಿ ದಿನದಂದು ಕೆಲ ಚಿಣ್ಣರು ಆಂಜನೇಯ ವೇಷಭೂಷಣದಲ್ಲಿ ಕಂಡಿದ್ದು ವಿಶೇಷವಾಗಿತ್ತು.

    ವಕೀಲರಾದ ಹಿಮಾನಂದ ಮತ್ತು ರೇಖಾ ದಂಪತಿ ತಮ್ಮ ಮುದ್ದಾದ ಮಗಳಿಗೆ ಹನುಮನ ವೇಷ ತೊಡಿಸಿ ಕೈಯಲ್ಲಿ ಗದೆಯನ್ನು ಕೊಟ್ಟಿದ್ದಾರೆ. ಅಲ್ಲದೆ ಆಂಜನೇಯ ದೇವಸ್ಥಾನದ ಬೃಹತ್ ಹನುಮನ ಪ್ರತಿಮೆಯ ಮುಂದೆ ಫೋಟೋ ಕ್ಲಿಕ್ಕಿಸಿದ್ದು, ಸಖತ್ ಸದ್ದಾಗಿದೆ. ಹಿರಿ ಆಂಜನೇಯನ ಕೆಳಗೆ ಕಿರಿ ಆಂಜನೇಯ ಕಂಡು ಬಂದು ಅಚ್ಚರಿ ಮೂಡಿಸಿದ್ದಾಳೆ.

    ನಾಲ್ಕು ವರ್ಷದ ಬಾಲಕಿ ತನ್ವಿ ಕೊರಳ ತುಂಬ ಮುತ್ತಿನಂಥ ಹಾರಗಳನ್ನು ಹಾಕಿ ಸಿಂಗಾರಗೊಂಡಿದ್ದಳು. ಹನುಮಂತ ಪ್ರತಿಮೆಯ ಮುಂದಿನ ರಸ್ತೆಯಲ್ಲಿ ತನ್ವಿಯನ್ನು ನಿಲ್ಲಿಸಿ ಪೋಷಕರು ಫೋಟೋ ಕ್ಲಿಕ್ಕಿಸುತ್ತಿದ್ದರೆ ಜನ ನಿಂತು ತನ್ವಿ ಸಿಂಗಾರವನ್ನು ನೋಡಿ ಸಂತೋಷಪಟ್ಟರು.

    ತನ್ವಿಳ ಎಡಗೈಯಲ್ಲಿದ್ದ ಗದೆಯನ್ನು ನೆಲಕ್ಕೆ ಒತ್ತಿ ಹಿಡಿದು ಫೋಟೋವೊಂದಕ್ಕೆ ಪೋಸ್ ನೀಡಿದ್ದಾಳೆ. ಸದ್ಯ ಬಾಲ ಆಂಜನೇಯನ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

  • ನೇಣು ಬಿಗಿದುಕೊಂಡು ಟೆಕ್ಕಿ ಪತ್ನಿ ಆತ್ಮಹತ್ಯೆ

    ನೇಣು ಬಿಗಿದುಕೊಂಡು ಟೆಕ್ಕಿ ಪತ್ನಿ ಆತ್ಮಹತ್ಯೆ

    ಬೆಂಗಳೂರು: ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿಲಿಕಾನ್ ಸಿಟಿಯ ರಾಜಾಜಿನಗರದ ಪ್ರಶಾಂತ್ ನಗರದಲ್ಲಿ ಗುರುವಾರ ಸಂಜೆ ನಡೆದಿದೆ.

    ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಗೃಹಿಣಿಯನ್ನು ಆಶಾ (30) ಎಂದು ಗುರುತಿಸಲಾಗಿದೆ. 15 ವರ್ಷಗಳ ಹಿಂದೆ ಆಶಾಳಿಗೆ ಸತ್ಯನಾರಾಯಣ ಎಂಬಾತನ ಜೊತೆ ವಿವಾಹವಾಗಿತ್ತು. ಸಾಫ್ಟ್ ವೇರ್ ಉದ್ಯೋಗಿಯಾಗಿದ್ದ ಸತ್ಯನಾರಾಯಣ, ತನ್ನ ಪತ್ನಿ ಜೊತೆ ಯುಎಸ್‍ಎನಲ್ಲಿ ನೆಲೆಸಿದ್ದು 6 ತಿಂಗಳ ಹಿಂದೆ ಬೆಂಗಳೂರಿಗೆ ವಾಪಸಾಗಿದ್ದರು.

    ಅಮೆರಿಕದಿಂದ ಬಂದು ಮೃತ ಆಶಾ ಮತ್ತು ಪತಿ ಸತ್ಯನಾರಾಯಣ ಪ್ರಶಾಂತ್ ನಗರದಲ್ಲಿ ನೆಲೆಸಿದ್ದರು. ಆದರೆ ಗುರುವಾರ ಸಂಜೆ 7 ಗಂಟೆ ಸುಮಾರಿಗೆ ಆಶಾ ನೇಣಿಗೆ ಶರಣಾಗಿದ್ದಾರೆ. ಈ ವಿಚಾರವಾಗಿ ಗಂಡ ಸತ್ಯನಾರಾಯಣ ವಿರುದ್ಧ ಆಶಾ ಪೋಷಕರು ಅನುಮಾನ ವ್ಯಕ್ತಪಡಿಸಿದ್ದು, ಈ ಸಂಬಂಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಸತ್ಯನಾರಾಯಣನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ಮಾಡಿದ್ದಾರೆ.

  • ತರಗತಿಯಲ್ಲಿ ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು – ಪೋಷಕರಿಂದ ಅಂಗಾಂಗ ದಾನ

    ತರಗತಿಯಲ್ಲಿ ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು – ಪೋಷಕರಿಂದ ಅಂಗಾಂಗ ದಾನ

    ಗಾಂಧಿನಗರ: ತರಗತಿಯಲ್ಲಿ ವಿದ್ಯಾರ್ಥಿನಿ ಕುಸಿದು ಬಿದ್ದು ಮೃತಪಟ್ಟ ಘಟನೆ ಗುಜರಾತಿನ ಸೂರತ್‍ನಲ್ಲಿ ನಡೆದಿದ್ದು, ಪೋಷಕರು ಆಕೆಯ ಅಂಗಾಂಗ ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ರಿಂಪಲ್(12) ಮೃತಪಟ್ಟ ಬಾಲಕಿ. ಭಾವೇಶ್‍ಬಾಯಿ ಸಂಗಾಣಿ ಮಗಳಾಗಿರುವ ರಿಂಪಲ್ ಪಿಪಿ ಸವಾಣಿ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿದ್ದಳು. ಮಂಗಳವಾರ ರಿಂಪಲ್ ತರಗತಿಯಲ್ಲೇ ಏಕಾಏಕಿ ಕುಸಿದು ಬಿದ್ದಿದ್ದಾಳೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ವೈದ್ಯರು ಆಕೆ ಮೃತಪಟ್ಟಿದ್ದಾಳೆ ಎಂದು ತಿಳಿಸಿದ್ದರು. ಇದನ್ನೂ ಓದಿ: ಗೋಡೆ ಕುಸಿದು ಇಬ್ಬರು ಮಕ್ಕಳ ಸಾವು – ಕಣ್ಣು ದಾನ ಮಾಡಿ ಮಾನವೀಯತೆ ಮೆರೆದ ತಂದೆ

    ಮಂಗಳವಾರ ಬೆಳಗ್ಗೆ ರಿಂಪಲ್ ತರಗತಿಯಲ್ಲಿ ಭಾಷಣ ಮಾಡಿದ ನಂತರ ತನ್ನ ಜಾಗದಲ್ಲಿ ಹೋಗಿ ಕುಳಿತಿದ್ದಾಳೆ. ಈ ವೇಳೆ ಆಕೆ ಏಕಾಏಕಿ ಕುಸಿದು ಬಿದ್ದಿದ್ದು, ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆಸ್ಪತ್ರೆಗೆ ಹೋದಾಗ ಅಲ್ಲಿ ವೈದ್ಯರು ರಿಂಪಲ್ ಮೃತಪಟ್ಟಿದ್ದಾಳೆ ಎಂದು ಹೇಳಿದ್ದರು.

    ರಿಂಪಲ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು. ಮರಣೋತ್ತರ ಪರೀಕ್ಷೆ ಮಾಡಿದ ನಂತರ ವೈದ್ಯರು, ಬಾಲಕಿಯ ದೇಹದಲ್ಲಿ ಯಾವುದೇ ಗಾಯದ ಗುರುತುಗಳು ಪತ್ತೆ ಆಗಿಲ್ಲ. ವರದಿ ಬಂದ ನಂತರ ರಿಂಪಲ್ ಸಾವಿನ ನಿಖರ ಕಾರಣ ತಿಳಿಯುತ್ತದೆ ಎಂದು ತಿಳಿಸಿದ್ದರು.

    ಈ ಬಗ್ಗೆ ಕಾಮರೇಜ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಸಾವಿನ ನಿಖರ ಕಾರಣ ತಿಳಿಯುತ್ತದೆ ಎಂದು ಪ್ರತಿಕ್ರಿಯಿಸಿದ್ದರು. ಇತ್ತ ಪೋಷಕರು ಮಗಳ ಅಂಗಾಂಗ ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

  • ಮದ್ವೆಯಾದ 20 ದಿನದಲ್ಲಿ ಟೆಕ್ಕಿ ಶವವಾಗಿ ಪತ್ತೆ

    ಮದ್ವೆಯಾದ 20 ದಿನದಲ್ಲಿ ಟೆಕ್ಕಿ ಶವವಾಗಿ ಪತ್ತೆ

    ಹೈದರಾಬಾದ್: ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳಾ ಟೆಕ್ಕಿಯ ಮೃತದೇಹ ಮಂಗಳವಾರ ಹೈದರಾಬಾದ್‍ನ ಸನತ್‍ನಗರದಲ್ಲಿ ಪತ್ತೆಯಾಗಿದೆ.

    ಪೂರ್ಣಿಮಾ ಶವವಾಗಿ ಪತ್ತೆಯಾದ ಮಹಿಳೆ. 20 ದಿನಗಳ ಹಿಂದೆ ಪೂರ್ಣಿಮಾ ಕಾರ್ತಿಕ್ ಎಂಬವನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಳು. ಕಾರ್ತಿಕ್ ಕೂಡ ಟೆಕ್ಕಿ ಆಗಿದ್ದು, ಇಬ್ಬರು ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು.

    ಪೋಷಕರ ವಿರೋಧದ ನಡುವೆಯೇ ಪೂರ್ಣಿಮಾ ಹಾಗೂ ಕಾರ್ತಿಕ್ 20 ದಿನಗಳ ಹಿಂದೆ ಮದುವೆಯಾಗಿದ್ದರು. ಮಂಗಳವಾರ ಪೂರ್ಣಿಮಾ ತನ್ನ ಮನೆಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ನೇಣು ಬಿಗಿದ ಸ್ಥಿತಿಯಲ್ಲಿ ಆಕೆಯ ಮೃತದೇಹ ಪತ್ತೆಯಾಗಿದೆ.

    ಪೂರ್ಣಿಮಾಳನ್ನು ಆಕೆಯ ಪತಿ ಕಾರ್ತಿಕ್ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾನೆ ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ. ಅಲ್ಲದೆ ಸನತ್‍ನಗರ ಪೊಲೀಸ್ ಠಾಣೆ ಮುಂದೆ ಕುಳಿತು ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ.

    ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಮರಣೋತ್ತರ ಪರೀಕ್ಷೆಗಾಗಿ ಪೂರ್ಣಿಮಾಳ ಮೃತದೇಹವನ್ನು ಗಾಂಧಿ ಆಸ್ಪತ್ರೆಗೆ ರವಾನಿಸಲಾಗಿದೆ.

  • ಪಶುವೈದ್ಯೆ ರೇಪ್, ಕೊಲೆ ಪ್ರಕರಣ- ನಿರ್ಲಕ್ಷ್ಯ ತೋರಿದ ಮೂವರು ಪೊಲೀಸರ ಅಮಾನತು

    ಪಶುವೈದ್ಯೆ ರೇಪ್, ಕೊಲೆ ಪ್ರಕರಣ- ನಿರ್ಲಕ್ಷ್ಯ ತೋರಿದ ಮೂವರು ಪೊಲೀಸರ ಅಮಾನತು

    – ದೂರು ಕೊಡಲು ಹೋದ ತಂದೆಯನ್ನು ಅಲೆದಾಡಿಸಿದ ಪೊಲೀಸರು

    ಹೈದರಾಬಾದ್: ತೆಲಂಗಾಣ ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣ ಸಂಬಂಧ ನಿರ್ಲಕ್ಷ್ಯ ತೋರಿದ ಮೂವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.

    ಮೊದಲು ಪ್ರಿಯಾಂಕಾ ಅವರು ನಾಪತ್ತೆಯಾಗಿದ್ದಾರೆ ಎಂದು ಪೋಷಕರು ಪೊಲೀಸರಿಗೆ ದೂರು ಕೊಡಲು ಹೋದಾಗ ಶಂಶಾಬಾದ್ ಠಾಣೆಯ ಪೊಲೀಸರು ನಿರ್ಲಕ್ಷ್ಯ ತೋರಿದ್ದರು. ಪೋಷಕರು ನಾಪತ್ತೆ ದೂರು ನೀಡಲು ಹೋದಾಗ ಒಂದು ಠಾಣೆಯಿಂದ ಇನ್ನೊಂದು ಠಾಣೆಗೆ ಅವರನ್ನು ಪೊಲೀಸರು ಅಲೆದಾಡಿಸಿದ್ದರು. ಒಂದು ವೇಳೆ ಪೊಲೀಸರು ನಿರ್ಲಕ್ಷ್ಯ ತೋರದೇ ತಮ್ಮ ಕೆಲಸ ಮಾಡಿದ್ದರೆ ಈ ಅನಾಹುತ ನಡೆಯುವುದನ್ನು ತಡೆಯಬಹುದಿತ್ತು ಎಂದು ಮಹಿಳಾ ರಾಷ್ಟ್ರೀಯ ಆಯೋಗ(ಎನ್‍ಡಬ್ಲುಸಿ) ಕಾರ್ಯಕರ್ತರು ಆರೋಪಿಸಿದ್ದಾರೆ. ಇದನ್ನೂ ಓದಿ: ಪಶುವೈದ್ಯೆಯನ್ನು ಕೊಂದಂತೆ ನನ್ನ ಮಗನನ್ನು ಕೊಲ್ಲಿ – ಸಿಡಿದೆದ್ದ ಅತ್ಯಾಚಾರಿಯ ತಾಯಿ

    ಈ ಹಿನ್ನೆಲೆಯಲ್ಲಿ ನಿರ್ಲಕ್ಷ್ಯ ಮೆರೆದ ಶಂಶಾಬಾದ್ ಪೊಲೀಸ್ ಠಾಣೆಯ ಎಸ್‍ಐ ಎಂ. ರವಿ ಕುಮಾರ್, ರಾಜೀವ್ ಗಾಂಧಿ ಅಂತರಾಷ್ಟ್ರೀಯ ಏರ್‌ಪೋರ್ಟ್‌ ಪೊಲೀಸ್ ಠಾಣೆಯ ಮುಖ್ಯ ಪೇದೆ ಪಿ. ವೇಣುಗೋಪಾಲ್ ರೆಡ್ಡಿ ಹಾಗೂ ಎ. ಸತ್ಯನಾರಾಯಣ ಗೌಡ್ ಅವರನ್ನು ಅಮಾನತು ಮಾಡಲಾಗಿದೆ. ಇದನ್ನೂ ಓದಿ: ವೈದ್ಯೆಗೆ ಕೂಲ್ ಡ್ರಿಂಕ್ಸ್‌ನಲ್ಲಿ ವಿಸ್ಕಿ ಕುಡಿಸಿ ಅತ್ಯಾಚಾರಗೈದ ಪಾಪಿಗಳು

    ಈ ಬಗ್ಗೆ ಸೈಬರಾಬಾದ್ ಪೊಲೀಸ್ ಆಯುಕ್ತರಾದ ವಿ.ಸಿ ಸಜ್ಜನರ್ ಅವರು ಪ್ರತಿಕ್ರಿಯಿಸಿ, ಈಗಾಗಲೇ ನಿರ್ಲಕ್ಷ್ಯ ತೋರಿದ ಮೂವರು ಪೊಲೀಸರನ್ನು ಅಮಾನತುಗೊಳಿಸಿದ್ದೇವೆ. ಮುಂದಿನ ಆದೇಶದವರೆಗೂ ಅವರು ಕೆಲಸಕ್ಕೆ ಬರುವಂತಿಲ್ಲ. ಪೊಲೀಸರು ಪ್ರಿಯಾಂಕ ನಾಪತ್ತೆ ದೂರು ದಾಖಲಿಸಿಕೊಳ್ಳಲು ಸಮಯ ಹಾಳು ಮಾಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ ಎಂದು ತಿಳಿಸಿದರು.

    ಈ ಬಗ್ಗೆ ತಂದೆ ಮಾತನಾಡಿ, ಪ್ರಿಯಾಂಕ ಬುಧವಾರ ರಾತ್ರಿ 9.15ಕ್ಕೆ ಸೋದರಿ ಜೊತೆ ಮಾತನಾಡಿದ್ದಳು. ಮತ್ತೆ ರಾತ್ರಿ 11 ಗಂಟೆಗೆ ಕರೆ ಮಾಡಿದಾಗ ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಚಾರ್ಜ್ ಇಲ್ಲದೆ ಫೋನ್ ಆಫ್ ಆಗಿರಬಹುದೆಂದು ತಿಳಿದು ಆಕೆಯನ್ನು ಹುಡುಕಿಕೊಂಡು ಟೋಲ್ ಪ್ಲಾಜಾ ಬಳಿ ನಾವು ಹೋದೆವು. ಆದರೆ ಅಲ್ಲಿ ಪ್ರಿಯಾಂಕ ಇರಲಿಲ್ಲ. ನಂತರ ಮಗಳು ಕಾಣೆಯಾದ ಬಗ್ಗೆ ದೂರು ನೀಡಲು ಶಂಶಾಬಾದ್ ಠಾಣೆಗೆ ಹೋದೆವು. ಆದರೆ ಈ ಪ್ರಕರಣ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂಬ ನೆಪ ಹೇಳಿ, ಪೊಲೀಸರು ನಮ್ಮನ್ನು ಒಂದು ಠಾಣೆಯಿಂದ ಮತ್ತೊಂದು ಠಾಣೆಗೆ ಅಲೆದಾಡಿಸಿದರು. ಇದನ್ನೂ ಓದಿ: ಪಶುವೈದ್ಯೆಯನ್ನ ಗ್ಯಾಂಗ್‍ರೇಪ್ ಮಾಡಿ, ಕೊಲೆ – 25 ಕಿ.ಮೀ ದೂರ ಶವವೊಯ್ದು ಸುಟ್ಟರು

    ಪೊಲೀಸರು ಈ ಪ್ರಕರಣ ಯಾವ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುತ್ತದೆ ಎನ್ನುವುದನ್ನ ನಿರ್ಧರಿಸುವಲ್ಲೇ ಕಾಲ ಹರಣ ಮಾಡಿದರು. ಕೊನೆಗೆ ಇಬ್ಬರು ಕಾನ್‍ಸ್ಟೇಬಲ್‍ಗಳ ನೆರವು ಕೋರಿದೆವು. ಆದರು ಏನೂ ಪ್ರಯೋಜನವಾಗಲಿಲ್ಲ. ಮಗಳನ್ನು ಹುಡುಕಿಕೊಂಡು ಗುರುವಾರ ಬೆಳಗ್ಗಿನ ಜಾವ 3 ಗಂಟೆಗೆ ನಾನೇ ಹೋದೆ ಎಂದು ತಂದೆ ಅಳಲನ್ನು ತೋಡಿಕೊಂಡರು.

    26 ವರ್ಷದ ಪಶುವೈದ್ಯೆ ಪ್ರಿಯಾಂಕ ರೆಡ್ಡಿಯನ್ನು ಸ್ಕೂಟಿ ಪಂಕ್ಚರ್ ಹಾಕಿಸಿಕೊಡುವ ನೆಪದಲ್ಲಿ ಲಾರಿ ಚಾಲಕ ಮಹ್ಮದ್ ಪಾಷಾ, ಮೂವರು ಕ್ಲೀನರ್‍ಗಳಾದ ನವೀನ್, ಚೆನ್ನಕೇಶವುಲು ಮತ್ತು ಶಿವಾ ಸೇರಿ ಕಿಡ್ನಾಪ್ ಮಾಡಿ, ಸಾಮೂಹಿಕ ಅತ್ಯಾಚಾರ ಮಾಡಿದ್ದರು. ಅಲ್ಲದೆ ವೈದ್ಯೆಯ ಮೃತ ದೇಹವನ್ನು ಸುಟ್ಟು ಹಾಕಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಸೈಬರಾಬಾದ್ ಪೊಲೀಸರು, ನಾಲ್ವರು ಮೃಗೀಯ ಮನುಷ್ಯರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಗಳನ್ನು 14 ದಿನಗಳ ಕಾಲ ರಿಮ್ಯಾಂಡ್‍ನಲ್ಲಿ ಇರಿಸುವಂತೆ ಕೋರ್ಟ್ ಆದೇಶಿಸಿದೆ.

    ಮಗನ ಕೃತ್ಯಕ್ಕೆ ತಾಯಿ ಕಿಡಿ:
    ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಚೆನ್ನಕೇಶವುಲು ತಾಯಿ ಪ್ರತಿಕ್ರಿಯಿಸಿ, ಮಗನ ಅಮಾನುಷ ಕೃತ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ನನ್ನ ಮಗ ಈ ಪಾಪ ಮಾಡಿದ್ದಾನೆ ಎಂದು ಸಾಬೀತಾದರೆ ಖಂಡಿತಾ ಆತನಿಗೆ ಶಿಕ್ಷೆಯಾಗಬೇಕು. ಬೇಕಾದರೆ ಪ್ರಿಯಾಂಕ ರೆಡ್ಡಿಯನ್ನು ಹೇಗೆ ಆರೋಪಿಗಳು ಅಮಾನುಷವಾಗಿ ಕೊಲೆಗೈದಿದ್ದಾರೋ ಹಾಗೆಯೇ ನನ್ನ ಮಗನನ್ನೂ ಹತ್ಯೆ ಮಾಡಿ ಎಂದು ತಾಯಿ ಕಣ್ಣೀರಿಟ್ಟಿದ್ದಾರೆ.

    ನಾನು ಒಬ್ಬಳು ಹೆಣ್ಣು. ನನಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮಕ್ಕಳಿಗೆ ಹೀಗಾದರೆ ಹೆತ್ತ ಕರುಳು ಎಷ್ಟು ನೋವು ಪಡುತ್ತದೆ ಎಂದು ನನಗೂ ತಿಳಿದಿದೆ. ನನ್ನ ಮಗ ತಪ್ಪಿತಸ್ಥ ಆಗಿದ್ದರೆ ಆತನಿಗೆ ಶಿಕ್ಷೆ ಖಂಡಿತ ಆಗಬೇಕು. ಈ ರೀತಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡಿ ಹೀನಾಯ ಕೆಲಸ ಮಾಡುವವರಿಗೆ ಕಠಿಣ ಶಿಕ್ಷೆ ಕೊಡಬೇಕು. ಆಗ ಮುಂದೆ ಇಂತಹ ದುಷ್ಕೃತ್ಯಕ್ಕೆ ಯಾರು ಕೈ ಹಾಕಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಆರೋಪಿಗಳನ್ನು ಗಲ್ಲಿಗೇರಿಸುವಂತೆ ಆಗ್ರಹ:
    ಈಗಾಗಲೇ ದೇಶಾದ್ಯಂತ ಈ ಪ್ರಕರಣ ವಿರುದ್ಧ ಸಾರ್ವಜನಿಕರು ಸಿಡಿದೆದ್ದಿದ್ದಾರೆ. ಪ್ರಿಯಾಂಕ ರೆಡ್ಡಿಗಾದ ಅನ್ಯಾಯಕ್ಕೆ ನ್ಯಾಯ ಕೊಡಿಸಿ ಎಂದು ಎಲ್ಲೆಡೆ ಕ್ಯಾಂಡಲ್ ಮಾರ್ಚ್, ಪ್ರತಿಭಟನೆ ಮಾಡುತ್ತಿದ್ದಾರೆ. ಅಲ್ಲದೆ ಟ್ರಾಫಿಕ್ ನಿಯಮ ಉಲ್ಲಂಘಿಸಿದವರಿಗೆ ದೊಡ್ಡ ಮೊತ್ತದ ದಂಡ ವಿಧಿಸಿ ಬಿಸಿ ಮುಟ್ಟಿಸಿ ನಿಯಮ ಪಾಲಿಸುವಂತೆ ಸರ್ಕಾರ ಮಾಡಿದೆ. ಅದರಂತೆ ಅತ್ಯಾಚಾರಿಗಳಿಗೆ ಗಲ್ಲಿಗೇರಿಸಿ, ಆಗ ಕಾಮುಕರ ಅಟ್ಟಹಾಸ ಅಂತ್ಯವಾಗುತ್ತದೆ. ಇಂಥವರಿಗೆ ಜೀವಾವಧಿ ಶಿಕ್ಷೆ ನೀಡರೆ ಆರಾಮಾಗಿ ಸಾಯುವ ತನಕ ಜೈಲಿನಲ್ಲಿ ಇರುತ್ತಾರೆ. ಅದರ ಬದಲು ಶಿಕ್ಷೆ ಸಾಬೀತಾದ ಕೂಡಲೇ ಗಲ್ಲಿಗೇರಿಸಿ ಎಂದು ಆಗ್ರಹಿಸಿದ್ದಾರೆ.

  • ಪ್ರಿಯಕರನ ಜೊತೆ ಮದ್ವೆಯಾಗಲು ರಾತ್ರೋರಾತ್ರಿ ಧರಣಿ ಕುಳಿತ ಯುವತಿ – ಪೋಷಕರು ಸಾಥ್

    ಪ್ರಿಯಕರನ ಜೊತೆ ಮದ್ವೆಯಾಗಲು ರಾತ್ರೋರಾತ್ರಿ ಧರಣಿ ಕುಳಿತ ಯುವತಿ – ಪೋಷಕರು ಸಾಥ್

    ಹೈದರಾಬಾದ್: ಪ್ರಿಯಕರನ ಜೊತೆ ಮದುವೆಯಾಗಲು ಯುವತಿ ಪೊಲೀಸ್ ಠಾಣೆ ಮುಂದೆ ಧರಣಿ ಕುಳಿತ ಘಟನೆ ಆಂಧ್ರ ಪ್ರದೇಶದ ಕಾಕಿನಾಡದಲ್ಲಿ ನಡೆದಿದೆ.

    ದುರ್ಗ ಭವಾನಿ ಶುಕ್ರವಾರ ರಾತ್ರಿ ತನ್ನ ಪ್ರಿಯಕರನನ್ನು ಮದುವೆ ಆಗಬೇಕೆಂದು ಗೊಲ್ಲಾಪ್ರೋಲು ಪೊಲೀಸ್ ಠಾಣೆ ಮುಂದೆ ಕುಳಿತು ಧರಣಿ ನಡೆಸಿದ್ದಾಳೆ. ಯುವತಿಗೆ ಆಕೆಯ ಪೋಷಕರು ಹಾಗೂ ಸಂಬಂಧಿಕರು ಸಾಥ್ ನೀಡಿದ್ದರು.

    ಸಲಾದಿ ನಾಗೇಶ್ವರ್ ರಾವ್ ಹಾಗೂ ದುರ್ಗ ಕಳೆದ 2 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಈ ಸಂದರ್ಭದಲ್ಲಿ ನಾಗೇಶ್ವರ್, ದುರ್ಗಾಳನ್ನು ಮದುವೆಯಾಗುವುದಾಗಿ ಆಶ್ವಾಸನೆ ನೀಡಿದ್ದನು. ಆದರೆ ಈಗ ದುರ್ಗಾ ಮದುವೆಯ ಪ್ರಸ್ತಾಪ ಮಾಡಿದಾಗ ನಾಗೇಶ್ವರ್ ನಿರಾಕರಿಸಿದ್ದಾನೆ. ಬೇರೆ ಯುವತಿಯ ಜೊತೆ ಮದುವೆಯಾಗಲು ತಯಾರಿ ನಡೆಸುತ್ತಿದ್ದನು.

    ನಾಗೇಶ್ವರ್ ಬೇರೆ ಯುವತಿಯ ಜೊತೆ ಮದುವೆ ಆಗುತ್ತಿದ್ದಾನೆ ಎಂಬ ವಿಷಯ ತಿಳಿದ ದುರ್ಗಾ ತನ್ನ ತಂದೆ-ತಾಯಿ ಹಾಗೂ ಸಂಬಂಧಿಕರ ಜೊತೆ ಗೊಲ್ಲಾಪ್ರೋಲು ಪೊಲೀಸ್ ಠಾಣೆಯ ಎದುರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಳಿತು ಧರಣಿ ನಡೆಸಿದ್ದಾಳೆ. ಇದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.

    ಪಿತಾಪುರಂ ಸಿಐಬಿ ಸೂರ್ಯ ಅಪ್ಪರಾವ್ ಹಾಗೂ ಎಸ್‍ಐಎನ್ ರಾಮಲಿಂಗೇಶ್ವರ ರಾಣೆ ಅವರು ಧರಣಿ ಕುಳಿತವರಿಗೆ ಸಮಾಧಾನ ಮಾಡಲು ಮುಂದಾದರು. ಆದರೆ ಯುವತಿ ಹಾಗೂ ಆಕೆಯ ಪೋಷಕರು ಒಪ್ಪಲಿಲ್ಲ. ಬಳಿಕ ಪೊಲೀಸರು ವಾಹನ ಸವಾರರಿಗೆ ಬೈಪಾಸ್ ಮೂಲಕ ಹೋಗುವುದಾಗಿ ಹೇಳಿ ಟ್ರಾಫಿಕ್ ಕ್ಲಿಯರ್ ಮಾಡಿದ್ದರು.

    ಸದ್ಯ ಪೊಲೀಸರು ನಾಗೇಶ್ವರ್ ರಾವ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • ನಮ್ಮನ್ನು ಬದುಕಲು ಬಿಡಿ – ವಿಡಿಯೋ ಮಾಡಿ ಅಂಗಲಾಚಿದ ಪ್ರೇಮಿಗಳು

    ನಮ್ಮನ್ನು ಬದುಕಲು ಬಿಡಿ – ವಿಡಿಯೋ ಮಾಡಿ ಅಂಗಲಾಚಿದ ಪ್ರೇಮಿಗಳು

    ಹಾಸನ: ನಮ್ಮನ್ನು ಬದುಕಲು ಬಿಡಿ ಎಂದು ಪ್ರೇಮಿಗಳು ಸೆಲ್ಫಿ ವಿಡಿಯೋ ಮಾಡಿ ಅಂಗಲಾಚಿದ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣದಲ್ಲಿ ನಡೆದಿದೆ.

    ಜೀವಿತಾ ಹಾಗೂ ರಾಕೇಶ್ ಒಂದೂವರೆ ವರ್ಷದಿಂದ ಪ್ರೀತಿಸುತ್ತಿದ್ದರು. ಅತ್ತೆಯ ಮಗನ ಜೊತೆ ಮದುವೆ ಮಾಡುತ್ತಾರೆ ಎಂದು ಜೀವಿತಾ ತನ್ನ ಪ್ರೇಮಿ ರಾಕೇಶ್ ಜೊತೆ ಮನೆ ಬಿಟ್ಟು ಓಡಿ ಹೋದರು. ಬಳಿಕ ಪೋಷಕರನ್ನು ವಿರೋಧಿಸಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು.

    ಮನೆಯಲ್ಲಿ ಚಿತ್ರ ಹಿಂಸೆಯ ನೀಡುತ್ತಿರುವ ಬಗ್ಗೆ ಜೀವಿತಾ ಸೆಲ್ಫಿ ವಿಡಿಯೋ ಮಾಡಿದ್ದಾಳೆ. ವಿಡಿಯೋದಲ್ಲಿ ಜೀವಿತಾ, ನಾನು ರಾಕೇಶ್‍ನನ್ನು ಪ್ರೀತಿಸುತ್ತಿರುವ ವಿಷಯ ನಮ್ಮ ಮನೆಯಲ್ಲಿ ತಿಳಿಯಿತು. ಬಳಿಕ ನಾನೇ ನನ್ನ ತಂದೆ-ತಾಯಿ ಬಳಿ ಹೋಗಿ ಆತನನ್ನು ಮದುವೆ ಆಗುತ್ತೇನೆ ಎಂದು ಹೇಳಿದೆ. ಮೊದಲು ಅವರು ರಾಕೇಶ್ ಏನು ಕೆಲಸ ಮಾಡುತ್ತಾನೆ ಎಂದು ಕೇಳಿದ್ದಾರೆ. ನಾನು ಲಾರಿ ಡ್ರೈವರ್ ಎಂದಾಗ ಅವರು ನಮ್ಮ ಪ್ರೀತಿಯನ್ನು ಒಪ್ಪಲಿಲ್ಲ. ನನ್ನ ಮೇಲೆ ಹಲ್ಲೆ ಮಾಡಿ ಮನೆಯಲ್ಲಿ ಬಂಧಿಸಿದ್ದರು ಎಂದು ಜೀವಿತಾ ಹೇಳಿದ್ದಾಳೆ.

    ಪೋಷಕರು ನನ್ನ ಮೇಲೆ ಹಲ್ಲೆ ಮಾಡಿದಾಗ ಇವರು ನನ್ನನ್ನು ಕೊಲೆ ಮಾಡಬಹುದು ಎಂದು ರಾಕೇಶ್‍ಗೆ ಕರೆ ಮಾಡಿದೆ. ಆಗ ರಾಕೇಶ್ ಪೋಷಕರಿಗೆ ಒಪ್ಪಿಸು ಎಂದು ಹೇಳಿದ. ಆದರೆ ನನ್ನ ಪೋಷಕರು ಮದುವೆಗೆ ಒಪ್ಪುತ್ತಿರಲಿಲ್ಲ. ನಾನು ರಾಕೇಶ್‍ಗೆ ಕರೆ ಮಾಡಿ, ನೀನು ನನ್ನನ್ನು ಕರೆದುಕೊಂಡು ಹೋಗಲಿಲ್ಲ ಎಂದರೆ ನಿನ್ನ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದೆ. ಆಗ ಆತ ನನ್ನನ್ನು ಇಲ್ಲಿಂದ ಕರೆದುಕೊಂಡು ಹೋದನು ಎಂದು ಜೀವಿತಾ ತಿಳಿಸಿದ್ದಾಳೆ.

    ಮನೆಯಿಂದ ಓಡಿ ಬಂದ ಮೇಲೆ ನಾವು ಬಸ್ಸಿನಲ್ಲಿಯೇ ತಿರುಗಾಡುತ್ತಿದ್ದೆವು. ನಾವು ಮೊದಲು ಧರ್ಮಸ್ಥಳಕ್ಕೆ ಹೋಗಿದ್ದೆವು. ಅಲ್ಲಿರಲು ನಮಗೆ ಭಯವಾಯಿತು. ಬಳಿಕ ನಾವು ಬೆಂಗಳೂರಿಗೆ ಬಂದು ರಿಜಿಸ್ಟರ್ ಮದುವೆ ಮಾಡಿಕೊಂಡಿದ್ದೇವೆ. ಆದರೆ ನನ್ನ ತಂದೆ, ರಾಕೇಶ್‍ನನ್ನು ಹೊಡೆದು ನನ್ನನ್ನು ಕರೆದುಕೊಂಡು ಹೋಗುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ನಾವು ಈಗ ರಿಜಿಸ್ಟರ್ ಮ್ಯಾರೇಜ್ ಆಗಿದ್ದು, ನಮ್ಮನ್ನು ಬದುಕಲು ಬಿಡಿ ಎಂದು ವಿಡಿಯೋದಲ್ಲಿ ಜೀವಿತಾ ಉಲ್ಲೇಖಿಸಿದ್ದಾಳೆ.

    ಈ ಬಗ್ಗೆ ಚನ್ನರಾಯಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.