Tag: parents

  • ಬೆಂಗ್ಳೂರಿನಲ್ಲಿ ಮತ್ತೊಂದು ಕೊರೊನಾ ಕೇಸ್ – ಶಾಲೆಗೆ ರಜೆ ಘೋಷಣೆ

    ಬೆಂಗ್ಳೂರಿನಲ್ಲಿ ಮತ್ತೊಂದು ಕೊರೊನಾ ಕೇಸ್ – ಶಾಲೆಗೆ ರಜೆ ಘೋಷಣೆ

    – ವಿದ್ಯಾರ್ಥಿನಿಯ ತಾಯಿಯಿಂದ ಶಾಲೆಗೆ ಪತ್ರ
    – ಭಯಗೊಂಡು ರಜೆ ಘೋಷಿಸಿದ ಶಾಲೆ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೊಬ್ಬ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ.

    ನಗರದ ವೈಟ್‍ಫೀಲ್ಡ್ ನ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯ ತಂದೆಗೆ ಕೊರೊನಾ ಸೋಂಕು ತಗುಲಿದೆ ಎಂದು ಶಂಕಿಸಲಾಗುತ್ತಿದೆ. ಈ ಬಗ್ಗೆ ಸ್ವತಃ ವಿದ್ಯಾರ್ಥಿನಿಯ ತಾಯಿ ಶಾಲಾ ಆಡಳಿತ ಮಂಡಳಿಗೆ ಪತ್ರ ಬರೆಯುವ ಮೂಲಕ ವಿಷಯ ತಿಳಿಸಿದ್ದಾರೆ. ಇದನ್ನೂ ಓದಿ: ಕೇರಳದಲ್ಲಿ ಮೂರರ ಕಂದಮ್ಮಗೆ ಕೊರೊನಾ ವೈರಸ್

    ನನ್ನ ಪತಿಗೆ ಕೊರೊನಾ ಸೋಂಕು ಶಂಕೆ ಇದೆ. ಹೀಗಾಗಿ ನಾನು ಮಗಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ವಿದ್ಯಾರ್ಥಿನಿಯ ತಾಯಿ ಇಮೇಲ್ ಮೂಲಕ ತಿಳಿಸಿದ್ದಾರೆ. ಇಮೇಲ್ ನೋಡಿ ಭಯಗೊಂಡ ಶಾಲಾ ಆಡಳಿತ ಮಂಡಳಿ ತರಾತುರಿಯಲ್ಲಿ ಪೋಷಕರಿಗೆ ನೋಟಿಸ್ ಜಾರಿ ಮಾಡಿ ರಜೆ ಘೋಷಿಸಿದೆ.

    ನಮ್ಮ ಶಾಲೆಯಲ್ಲಿ ಓದುವ ವಿದ್ಯಾರ್ಥಿನಿಯ ಪೋಷಕರೊಬ್ಬರಿಗೆ ಕೊರೊನಾ ಪಾಸಿಟಿವ್ ಇದೆ. ಹೀಗಾಗಿ ರಜೆ ಘೋಷಣೆ ಮಾಡುತ್ತೇವೆ ಎಂದು ಶಾಲಾ ಆಡಳಿತ ಮಂಡಳಿ ಎಲ್ಲಾ ಪೋಷಕರಿಗೂ ಪತ್ರ ಬರೆದಿದೆ. ಇದನ್ನು ತಿಳಿದ ಆರೋಗ್ಯಾಧಿಕಾರಿಗಳು ಕೂಡಲೇ ಸ್ಥಳಕ್ಕೆ ತೆರಳಿದ್ದಾರೆ. ಇದನ್ನೂ ಓದಿ: ಕೊರೊನಾ ಟೆನ್ಶನ್ ಮಧ್ಯೆ ಬೆಂಗ್ಳೂರಿನಲ್ಲಿ ವಿಚಿತ್ರ ಸಾಂಕ್ರಾಮಿಕ ಕಾಯಿಲೆ

    ಆರೋಗ್ಯಾಧಿಕಾರಿಗಳು ಶಾಲೆಗೆ ತೆರಳಿ ಮುಂಜಾಗೃತ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಆರೋಗ್ಯ ಇಲಾಖೆಯ ಅಧಿಕೃತ ಮಾಹಿತಿ ಇಲ್ಲದೆ ಕೊರೊನಾ ಪಾಸಿಟಿವ್ ಎಂದು ಪೋಷಕರಿಗೆ ಭಯಪಡಿಸಿದ್ದಕ್ಕೆ ಶಾಲೆಯ ಆಡಳಿತ ಮಂಡಳಿ ವಿರುದ್ಧ ಆರೋಗ್ಯ ಇಲಾಖೆ ಕ್ರಮಕ್ಕೆ ಸಜ್ಜಾಗಿದೆ.

    ಸದ್ಯ ಆರೋಗ್ಯಾಧಿಕಾರಿಗಳು ವೈಟ್‍ಫೀಲ್ಡ್ ನ ಸೋಂಕು ಶಂಕೆಯ ವ್ಯಕ್ತಿಯ ಅಪಾರ್ಟ್‍ಮೆಂಟ್‍ಗೂ ಭೇಟಿ ನೀಡಿ ಅಲ್ಲೂ ಕೂಡ ಸ್ಕ್ರೀನಿಂಗ್ ನಡೆಸಿದ್ದಾರೆ. ಎರಡನೇ ಬಾರಿಗೆ ದೃಢಪಡಿಸಿಕೊಳ್ಳಲು ಸೋಂಕು ಶಂಕೆಯ ವ್ಯಕ್ತಿಯ ರಕ್ತಮಾದರಿಯನ್ನು ಪುಣೆಗೆ ಕಳುಹಿಸಲಾಗಿದೆ.

    ಆರೋಗ್ಯ ಇಲಾಖೆ ಶಾಲೆಯ ವಿರುದ್ಧ ಕ್ರಮಕ್ಕೆ ಸಜ್ಜಾಗಿದ್ದು, ಪ್ರಾಂಶುಪಾಲರಿಗೆ ನೋಟಿಸ್ ಜಾರಿ ಮಾಡಿದೆ. ಸದ್ಯ ಆಡಳಿತ ಮಂಡಳಿ ಶಾಲೆಗೆ ರಜೆ ಘೋಷಿಸಿದೆ.

  • ಫೋನ್‍ನಲ್ಲಿ ಮಾತು-ಬಾಲಕಿಯ ಕೂದಲು ಕತ್ತರಿಸಿದ ಪೋಷಕರು

    ಫೋನ್‍ನಲ್ಲಿ ಮಾತು-ಬಾಲಕಿಯ ಕೂದಲು ಕತ್ತರಿಸಿದ ಪೋಷಕರು

    ಭೋಪಾಲ್: ಹುಡುಗನ ಜೊತೆ ಫೋನ್ ನಲ್ಲಿ ಮಾತನಾಡಿದ್ದ ಬಾಲಕಿಯ ಕೂದಲು ಕತ್ತರಿಸಿರುವ ಅಮಾನವೀಯ ಘಟನೆ ಮಧ್ಯ ಪ್ರದೇಶದ ಸೊಂಡವಾ ಪ್ರದೇಶದ ಅಲಿರಾಜಪುರದಲ್ಲಿ ನಡೆದಿದೆ.

    ಫೋನ್ ನಲ್ಲಿ ಹುಡುಗರ ಜೊತೆ ಮಾತನಾಡಿದ್ದಾಳೆ ಎಂದು ಶಂಕಿಸಿ ಬಾಲಕಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಮಾತನಾಡಿದ್ದು ತಪ್ಪು ಎಂದು ಹೇಳಿ ಬಾಲಕಿಯ ಕೂದಲನ್ನು ಕತ್ತರಿಸಿದ್ದಾರೆ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮೂವರನ್ನು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಎಫ್‍ಐಆರ್ ಸಹ ದಾಖಲಾಗಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿ, ಅಪ್ರಾಪ್ತ ಬಾಲಕಿ ಠಾಣೆಗೆ ಬಂದು ಪೋಷಕರು ತನ್ನನ್ನು ದೊಣ್ಣೆಯಿಂದ ಥಳಿಸಿ, ಕೂದಲು ಕತ್ತರಿಸಿದ್ದಾರೆ ಎಂದು ದೂರು ನೀಡಿದ್ದಳು. . ಬಾಲಕಿ ಹುಡುಗರ ಜೊತೆ ಫೋನ್ ನಲ್ಲಿ ಮಾತನಾಡುತ್ತಾಳೆ ಎಂದು ಶಂಕೆ ವ್ಯಕ್ತಪಡಿಸಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಬಾಲಕಿಯ ಚಿಕ್ಕಪ್ಪ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

  • ಕೈ ಮೇಲೆ ಡೆತ್‍ನೋಟ್ ಬರೆದು ಯುವಕ ಆತ್ಮಹತ್ಯೆ

    ಕೈ ಮೇಲೆ ಡೆತ್‍ನೋಟ್ ಬರೆದು ಯುವಕ ಆತ್ಮಹತ್ಯೆ

    – ಇಬ್ಬರು ಯುವಕನಿಂದ ನೇಣಿಗೆ ಶರಣಾಗಿದ್ದೇನೆ

    ಲಕ್ನೋ: ಯುವಕನೊಬ್ಬ ತನ್ನ ಕೈ ಮೇಲೆ ಡೆತ್‍ನೋಟ್ ಬರೆದುಕೊಂಡು ಆತ್ಮಹತ್ಯೆಗೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದ ಔರೇಯಾ ಜಿಲ್ಲೆಯಲ್ಲಿ ನಡೆದಿದೆ.

    ವಿಕಾಸ್ ಕುಮಾರ್(19) ಆತ್ಮಹತ್ಯೆ ಮಾಡಿಕೊಂಡ ಯುವಕ.ಮುರಾದ್‌ಗಂಜ್‌ನ ಅಯಾನಾ ರಸ್ತೆ ನಿವಾಸಿಯಾಗಿರುವ ವಿಕಾಸ್ ಅಂತಿಮ ವರ್ಷದ ಬಿಎಸ್‍ಸಿ ಓದುತ್ತಿದ್ದನು. ಇಬ್ಬರು ಯುವಕರ ಕಿರುಕುಳ ತಾಳಲಾರದೆ ವಿಕಾಸ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಬುಧವಾರ ರಾತ್ರಿ ವಿಕಾಸ್ ಮದುವೆ ಮೆರವಣಿಗೆ ಹೋಗಿದ್ದನು. ರಾತ್ರಿ ಸುಮಾರು 2 ಗಂಟೆಗೆ ಮನೆಗೆ ಹಿಂತಿರುಗಿದ ವಿಕಾಸ್ ರೂಮಿಗೆ ಹೋಗಿ ಮಲಗಿದ್ದನು. ಗುರುವಾರ ಬೆಳಗ್ಗೆ ಪೋಷಕರು ಆತನ ರೂಮಿಗೆ ಹೋಗಿದ್ದಾಗ ಆತ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

    ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ವಿಕಾಸ್ ತನ್ನ ಕೈಯಲ್ಲಿ ಡೆತ್‍ನೋಟ್ ಬರೆದುಕೊಂಡಿದ್ದನು. ಅದರ ಜೊತೆಗೆ ಆತನ ರೂಮಿನಲ್ಲಿ ಮತ್ತೊಂದು ಡೆತ್‍ನೋಟ್ ಕೂಡ ಪತ್ತೆಯಾಗಿತ್ತು. ಸದ್ಯ ಡೆತ್‍ನೋಟ್ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಡೆತ್‍ನೋಟ್‍ನಲ್ಲಿ ಅಪ್ಪ, ಅಮ್ಮ ದಯವಿಟ್ಟು ನನ್ನನ್ನು ಕ್ಷಮಿಸಿ. ನಿಮ್ಮ ವೃದ್ಧಾಪ್ಯದಲ್ಲಿ ಸಹಾಯ ಮಾಡಲು ನನಗೆ ಸಾಧ್ಯವಿಲ್ಲ. ಆದರೆ ಇಬ್ಬರು ಯುವಕರಾದ ಶಿವ ಹಾಗೂ ಸತ್ಯಂ ಅವರನ್ನು ಸುಮ್ಮನೆ ಬಿಡಬೇಡಿ. ಅವರಿಬ್ಬರು ನನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಹಾಗಾಗಿ ನಾನು ಆತ್ಮಹತ್ಯೆ ಮಾಡಿಕೊಂಡಿದ್ದೇನೆ ಎಂದು ಬರೆದಿದ್ದನು.

  • ಅನಾಥ ಯುವತಿಯರಿಗೆ ಕೂಡಿಬಂತು ಕಂಕಣ ಭಾಗ್ಯ- ಇಲ್ಲಿ ಅಧಿಕಾರಿಗಳೇ ಪೋಷಕರು

    ಅನಾಥ ಯುವತಿಯರಿಗೆ ಕೂಡಿಬಂತು ಕಂಕಣ ಭಾಗ್ಯ- ಇಲ್ಲಿ ಅಧಿಕಾರಿಗಳೇ ಪೋಷಕರು

    ದಾವಣಗೆರೆ: ಅಲ್ಲಿ ಸಡಗರ ಮನೆ ಮಾಡಿತ್ತು. ಮದುವೆ ಮನೆ ಎಂದರೆ ಕೇಳಬೇಕೇ ಸಂಭ್ರಮವೇ ಹೆಚ್ಚು ಆದರೆ ಇಲ್ಲಿ ಸಂಬಂಧಿಕರ ಕಲರವವಿರಲಿಲ್ಲ. ಸ್ನೇಹಿತರು, ಹಿತೈಷಿಗಳು ಹಾಗೂ ಅಧಿಕಾರಿಗಳ ಶುಭಹಾರೈಕೆ ಇತ್ತು. ಸಾಂಪ್ರದಾಯಿಕ ವಾತಾವರಣದಲ್ಲಿ ಸಂಪ್ರದಾಯ ಬದ್ಧವಾಗಿ ಅಧಿಕಾರಿಗಳೇ ಸಂಬಂಧಿಕರ ಸ್ಥಾನದಲ್ಲಿ ನಿಂತು ಇಬ್ಬರು ಯುವತಿಯರಿಗೆ ಧಾರೆಯೆರೆದು ಅವರ ಬಾಳಿಗೆ ಬೆಳಕು ನೀಡಿದ್ದು ವಿಶೇಷವಾಗಿತ್ತು.

    ಹೌದು. ದಾವಣಗೆರೆ ನಗರದ ಕೈಗಾರಿಕಾ ಪ್ರದೇಶದಲ್ಲಿರುವ ಶ್ರೀರಾಮನಗರದ ರಾಜ್ಯ ಮಹಿಳಾ ನಿಲಯದಲ್ಲಿಂದು ಇಂದು ವಿವಾಹದ ಸಂಭ್ರಮ ಕಂಡುಬಂದಿತ್ತು. ಹೆತ್ತವರಿಂದ ದೂರವಾಗಿ ಮಹಿಳಾ ನಿಲಯದಲ್ಲಿ ಆಶ್ರಯ ಪಡೆದಿದ್ದ ಅನಿತಾ ಹಾಗೂ ರೇಣುಕಾ ಗೊರವಪ್ಪನವರ ವಿವಾಹ ಇಂದು ಬೆಳಗ್ಗೆ 11ರಿಂದ 11.30 ವರೆಗೂ ಇದ್ದ ವೃಶ್ಚಿಕ ಲಗ್ನದಲ್ಲಿ ಸಂಭ್ರಮದಿಂದ ಜರುಗಿತು.

    ಅನಿತಾ ಅವರನ್ನು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಬಾಳೆಕೊಪ್ಪದ ಲೋಲಾಕ್ಷಿ, ಸುಬ್ಬರಾಯ ಹೆಗಡೆಯವರ ಪುತ್ರ ವಿನಾಯಕ ಹೆಗಡೆ ಬಾಳ ಸಂಗಾತಿಯನ್ನಾಗಿಸಿಕೊಂಡರು. ರೇಣುಕಾ ಗೊರವಪ್ಪನವರ ಅವರ ವಿವಾಹ ಶಿರಸಿ ತಾಲೂಕಿನ ಶಿವಳ್ಳಿಯ ಸೀತಾ ಹಾಗೂ ಜನಾರ್ದನ ಸುಬ್ಬರಾಯ ಭಟ್ಟ ಅವರ ಪುತ್ರ ನಾಗೇಂದ್ರಭಟ್ಟ ಅವರೊಂದಿಗೆ ಜರುಗಿತು. ಜಿಲ್ಲಾಧಿಕಾರಿಗಳಾದ ಮಹಾಂತೇಶ್ ಬೀಳಗಿ ಹಾಗೂ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು ಪೋಷಕರ ಸ್ಥಾನದಲ್ಲಿ ನಿಂತು ಈ ಇಬ್ಬರು ಯುವತಿಯರಿಗೆ ಧಾರೆ ಎರೆದು ಕೊಟ್ಟಿದ್ದು ವಿಶೇಷವಾಗಿತ್ತು.

    ತಮ್ಮ ಮನೆಯ ಮಕ್ಕಳಂತೆ ಅಧಿಕಾರಿಗಳಿಬ್ಬರೂ ಮನಃಪೂರ್ವಕವಾಗಿ ಹರಸಿ ಹೊಸಬಾಳಿಗೆ ಅಡಿಯಿಟ್ಟ ದಂಪತಿಗೆ ಶುಭಾಶಯ ಕೋರಿದರು. ಅನಾಥ ಭಾವದಿಂದ ಕೊರಗುತ್ತಿದ್ದ ಹೆಣ್ಣು ಮಕ್ಕಳ ಮುಖದಲ್ಲಿ ಮಂದಹಾಸ ಮೂಡಿದ್ದು ಆ ಕ್ಷಣದಲ್ಲಿ ಕಂಡಿತು.

    ಇದರೊಂದಿಗೆ ಮೌಢ್ಯತೆಯ ಅಂಧಕಾರಕ್ಕೆ ಬಲಿಯಾದ ಹೆಣ್ಣು ಮಗಳೊಬ್ಬಳ ಕರುಳಿನ ಕುಡಿಯ ನಾಮಕರಣ ಕೂಡ ಸಂಭ್ರಮದಿಂದ ನಡೆಯಿತು. ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕು ಅಣಬೂರು ಗೊಲ್ಲರಹಟ್ಟಿ ನಿವಾಸಿ. ಹುಟ್ಟಿನಿಂದಲೇ ಮಾತು ಬರುತ್ತಿರಲಿಲ್ಲ. ಈ ಮುಗ್ಧ ಮಹಿಳೆ ಮೇಲೆ ಕಳೆದ ಒಂದು ವರ್ಷದ ಹಿಂದೆ ಪಾಪಿಯೊಬ್ಬ ಅತ್ಯಾಚಾರವೆಸಗಿದ್ದ, ಈ ಕಾರಣ ಒಂದು ಗಂಡು ಮಗುವಿಗೆ ಜನ್ಮವಿತ್ತಳು ಮಹಾತಾಯಿ. ವಿಚಿತ್ರ ಎಂದರೆ ಯಾದವ ಸಮುದಾಯದವರಾದ ಈ ಮಹಿಳೆಯನ್ನ ಗ್ರಾಮದಿಂದಲೇ ಹೊರಗೆ ಇಡಲಾಗಿತ್ತು.

    ಮೌಢ್ಯತೆ ಹಿನ್ನೆಲೆ ಗ್ರಾಮಸ್ಥರು ಅತ್ಯಾಚಾರಕ್ಕೊಳಗಾಗಿ ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ಬಹಿಷ್ಕಾರ ಹಾಕಿದ್ದರು. ಗ್ರಾಮದ ಹೊರವಲಯದಲ್ಲಿ ಮಗುವಿನೊಂದಿಗೆ ಮೂಗ ಮಹಿಳೆ ವಾಸ ಮಾಡುತ್ತಿದ್ದಳು. ಜಿಲ್ಲಾಧಿಕಾರಿಗಳೇ ಗ್ರಾಮಕ್ಕೆ ಭೇಟಿ ನೀಡಿ ಮನವೊಲಿಸಿದ್ದರೂ ಸ್ಥಳೀಯರು ಮಾತ್ರ ಮಹಿಳೆ ಗ್ರಾಮ ಪ್ರವೇಶಕ್ಕೆ ಅವಕಾಶ ನೀಡಿರಲಿಲ್ಲ. ನಂತರ ಜಿಲ್ಲಾಧಿಕಾರಿಗಳು ದಾವಣಗೆರೆಯ ರಾಜ್ಯ ಮಹಿಳಾ ನಿಲಯದಲ್ಲಿ ಆಶ್ರಯ ಕಲ್ಪಿಸಿದ್ದರು. ಇದೀಗ ಆ ಮಗುವಿಗೆ ಜಿಲ್ಲಾಡಳಿ ನೇತೃತ್ವದಲ್ಲಿ ನಾಮಕರಣ ಮಾಡಲಾಯಿತು. ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಕಂದಮ್ಮನ ಕಿವಿಯಲ್ಲಿ ಮೂರು ಬಾರಿ ಮಗುವಿನ ಹೆಸರು ಹೇಳಿ ನಾಮಕರಣ ಮಾಡಿದರು.

  • ನನ್ನಿಂದ ಯಾರು ಕಷ್ಟ ಪಡಬಾರದೆಂದು ಡೆತ್‍ನೋಟ್ ಬರೆದು ಯುವತಿ ಆತ್ಮಹತ್ಯೆ

    ನನ್ನಿಂದ ಯಾರು ಕಷ್ಟ ಪಡಬಾರದೆಂದು ಡೆತ್‍ನೋಟ್ ಬರೆದು ಯುವತಿ ಆತ್ಮಹತ್ಯೆ

    ಮಡಿಕೇರಿ: ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಬಳ್ಳೇಕೆರೆಯಲ್ಲಿ ನಡೆದಿದೆ.

    ರಂಜಿತಾ ಆತ್ಮಹತ್ಯೆ ಮಾಡಿಕೊಂಡ ಯುವತಿ. ಸಿದ್ದಾಪುರದಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ರಂಜಿತಾ ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು ಎನ್ನಲಾಗಿದೆ. ಅಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ರಂಜಿತಾ ಡೆತ್‍ನೋಟ್ ಬರೆದಿದ್ದಾಳೆ.

    ಡೆತ್‍ನೋಟ್‍ನಲ್ಲಿ ಏನಿದೆ?
    ನನ್ನ ಸಾವಿಗೆ ಯಾರು ಕಾರಣ ಅಲ್ಲ. ನನ್ನ ಕುಟುಂಬದಲ್ಲಿ ನಡೆಯುವುದನ್ನು ನೋಡಿಯೇ ನಾನು ಈ ತೀರ್ಮಾನಕ್ಕೆ ಬಂದಿದ್ದೇನೆ. ನಾನು ಎಲ್ಲರಿಗೂ ಕಷ್ಟವನ್ನು ಕೊಡುತ್ತಿದ್ದೇನೆ. ನನ್ನಿಂದ ಯಾರು ಕಷ್ಟ ಪಡಬಾರದು. ಅಪ್ಪ ಅಮ್ಮ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ, ನನ್ನ ಎಲ್ಲಾ ಸ್ನೇಹಿತರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾಳೆ.

    ಮನೆಯಲ್ಲಿ ಯಾರು ಇಲ್ಲದ ವೇಳೆ ರಂಜಿತಾ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬಲವಂತವಾಗಿ ಅಪ್ರಾಪ್ತ ಮಗನಿಗೆ ಮದ್ವೆ ಮಾಡಿ ಸಂಕಷ್ಟಕ್ಕೆ ಸಿಲುಕಿದ ಪೋಷಕರು

    ಬಲವಂತವಾಗಿ ಅಪ್ರಾಪ್ತ ಮಗನಿಗೆ ಮದ್ವೆ ಮಾಡಿ ಸಂಕಷ್ಟಕ್ಕೆ ಸಿಲುಕಿದ ಪೋಷಕರು

    ಬೆಂಗಳೂರು: ಅಪ್ರಾಪ್ತ ಮಗನಿಗೆ ಮದುವೆ ಮಾಡಿ ಪೋಷಕರು ಸಂಕಷ್ಟಕ್ಕೆ ಸಿಲುಕಿರುವ ಘಟನೆ ಬೆಂಗಳೂರಿನ ಪುಟ್ಟೆಹಳ್ಳಿಯಲ್ಲಿ ನಡೆದಿದೆ.

    ಮಗ ಬೇಡ ಅಂದ್ರು ಬಲವಂತದಿಂದ 19 ವರ್ಷದ ಯುವತಿ ಜೊತೆ ಮದುವೆ ಮಾಡಿಸಿ ಯುವಕನ ತಂದೆ ತಾಯಿ ಭಯದ ವಾತಾವರಣದಲ್ಲಿದ್ದಾರೆ. ಅಪ್ರಾಪ್ತನಿಗೆ ಮದುವೆ ಮಾಡಿ ಮನೆಯಲ್ಲಿ ಇಟ್ಟುಕೊಂಡಿರುವ ಬಗ್ಗೆ ಮಾಹಿತಿ ತಿಳಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಪೊಲೀಸರೊಂದಿಗೆ ಹೋಗಿ ಮದುವೆ ಹೆಣ್ಣು ಹಾಗೂ ಅಪ್ರಾಪ್ತ ಯುವಕನ್ನ ರಕ್ಷಿಸಿದ್ದಾರೆ.

    ಯುವಕ ಅಪ್ರಾಪ್ತವಾಗಿದ್ದರಿಂದ ಬಾಲಮಂದಿರಕ್ಕೆ ಕಳಿಸಿ ಯುವತಿಯನ್ನ ಪೋಷಕರೊಂದಿಗೆ ಕಳಿಸಿಕೊಡಲಾಗಿದೆ. ಘಟನೆ ಸಂಬಂದ ಸ್ಥಳೀಯ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಯುವಕ ಪೋಷಕರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

    ನಾವು ಮೂಲತಃ ಅಸ್ಸಾಂ ರಾಜ್ಯದವರಾಗಿದ್ದು, ಕಳೆದ 15 ವರ್ಷಗಳಿಂದ ಬೆಂಗಳೂರಿನ ಪುಟ್ಟೆನಹಳ್ಳಿಯಲ್ಲಿ ವಾಸವಾಗಿದ್ದೇವೆ. ಯುವತಿ ಪೋಷಕರು ಆಕೆ ಚಿಕ್ಕವಳಿದ್ದಾಗಲೇ ಮರಣ ಹೊಂದಿದ್ದಾರೆ. ಅವಳು ಒಬ್ಬಳೇ ವಾಸಿಸುತ್ತಿದ್ದರಿಂದ ನನ್ನ ಮಗನ ಜೊತೆ ಮದುವೆ ಮಾಡಿಸಿದ್ದೇವೆ ಎಂದು ವಿಚಾರಣೆ ವೇಳೆ ಯುವಕ ಪೋಷಕರು ಬಾಯಿ ಬಿಟ್ಟಿದ್ದಾರೆ ಎನ್ನಲಾಗಿದೆ. ಈ ಪ್ರಕರಣವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ.

  • 19ರ ಯುವತಿಗೆ 16 ವರ್ಷದ ಬಾಲಕನ ಜೊತೆ ಮದುವೆ

    19ರ ಯುವತಿಗೆ 16 ವರ್ಷದ ಬಾಲಕನ ಜೊತೆ ಮದುವೆ

    – ಬಲವಂತವಾಗಿ ಬಾಲಕನ ಜೊತೆ ಮದ್ವೆ ಮಾಡಿಸಿದ್ರು
    – ವಿವಾಹವಾದ ಬಳಿಕ ಇಬ್ಬರನ್ನು ಬೇರ್ಪಡಿಸಿದ ಪೊಲೀಸ್ರು

    ಬೆಂಗಳೂರು: 19 ವರ್ಷದ ಯುವತಿಗೆ 16 ವರ್ಷದ ಬಾಲಕನ ಜೊತೆ ಮದುವೆ ಮಾಡಿಸಿದ ಘಟನೆ ನಗರದ ಅರೆಕೆರೆ ಮೈಕೋ ಲೇಔಟ್‍ನಲ್ಲಿ ನಡೆದಿದೆ.

    ಕೆಲ ದಿನಗಳ ಹಿಂದೆ ಯುವತಿ ಹಾಗೂ ಬಾಲಕನ ಮದುವೆ ಮಾಡಲಾಗಿತ್ತು. ಈ ವಿಷಯ ತಿಳಿದ ಪೊಲೀಸರು ಫೆಬ್ರವರಿ 19ರಂದು ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ಮಾಡಿದ ವೇಳೆ ಬಾಲ್ಯ ವಿವಾಹ ಮಾಡಿರುವುದು ಬೆಳಕಿಗೆ ಬಂದಿದೆ.

    ಎರಡು ಕುಟುಂಬದವರು ಅಸ್ಸಾಂ ಹಾಗೂ ನೇಪಾಳದವರು. ಯುವತಿಗೆ ತಂದೆ-ತಾಯಿ ಇರದ ಕಾರಣ ಬಲವಂತವಾಗಿ ಪೋಷಕರು ಅಪ್ರಾಪ್ತ ಬಾಲಕನ ಮದುವೆ ಮಾಡಿಸಿದ್ದಾರೆ. ಸದ್ಯ ಪೊಲೀಸರು ಮದುವೆಯಾದ ಬಳಿಕ ಇಬ್ಬರನ್ನು ಬೇರೆ ಮಾಡಿದ್ದಾರೆ.

    ಈ ಬಗ್ಗೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಬಾಲ್ಯ ವಿವಾಹ ಕಾಯ್ಕೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನೂ ಅಪ್ರಾಪ್ತ ಬಾಲಕನಿಗೆ ಮದುವೆ ಮಾಡಿ ಪೋಷಕರು ಪೊಲೀಸರ ಅತಿಥಿ ಆಗಿದ್ದಾರೆ.

  • ಪೋಷಕರು ಮದುವೆ ಫಿಕ್ಸ್ ಮಾಡಿದ್ದಕ್ಕೆ 19ರ ಯುವತಿ ಆತ್ಮಹತ್ಯೆ

    ಪೋಷಕರು ಮದುವೆ ಫಿಕ್ಸ್ ಮಾಡಿದ್ದಕ್ಕೆ 19ರ ಯುವತಿ ಆತ್ಮಹತ್ಯೆ

    – ಓದು ಪೂರ್ಣವಾಗೋವರೆಗೂ ಮದ್ವೆ ಬೇಡ ಎಂದ ವಿದ್ಯಾರ್ಥಿನಿ
    – ಪೋಷಕರು ಒಪ್ಪದ್ದಕ್ಕೆ ಮನನೊಂದು ನೇಣಿಗೆ ಶರಣು

    ಹೈದರಾಬಾದ್: ಪೋಷಕರು ಮದುವೆ ನಿಗದಿ ಮಾಡಿದ್ದಕ್ಕೆ ಮನನೊಂದು 19 ವರ್ಷದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಆಂಧ್ರಪ್ರದೇಶದ ಶ್ರೀಕಾಕುಲಂನಲ್ಲಿ ನಡೆದಿದೆ.

    ಭಾರತಿ(19) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಶ್ರೀಕಾಕುಲಂ ಜಿಲ್ಲೆಯ ಬಸವ ಕೊಟ್ಟೂರು ನಿವಾಸಿಗಳಾದ ರಾಮಯ್ಯ ಹಾಗೂ ಲಕ್ಷ್ಮಿ ತಮ್ಮ ಮಗಳ ಮದುವೆಯನ್ನು ಫಿಕ್ಸ್ ಮಾಡಿದ್ದಾರೆ. ಎರಡನೇ ವರ್ಷದ ಪದವಿ ಓದುತ್ತಿರುವ ಭಾರತಿ ನಾನು ಇನ್ನೂ ಓದಬೇಕು ಈಗಲೇ ಮದುವೆ ಬೇಡ ಎಂದರೂ ಪೋಷಕರು ಒಪ್ಪಲಿಲ್ಲ. ಇದರಿಂದ ಮನನೊಂದ ಭಾರತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ನಾನು ನನ್ನ ಪದವಿಯನ್ನು ಪೂರ್ಣಗೊಳಿಸಬೇಕು. ಅಲ್ಲಿಯವರೆಗೂ ಮದುವೆ ಮುಂದೂಡುವಂತೆ ಭಾರತಿ ಪೋಷಕರ ಬಳಿ ಮನವಿ ಮಾಡಿಕೊಂಡಿದ್ದಾಳೆ. ಆದರೆ ಎರಡನೇ ಮಗಳಿಗೆ ಈಗಲೇ ಮದುವೆ ಸಂಬಂಧ ಬಂದಿರುವ ಕಾರಣ ಪೋಷಕರು ಭಾರತಿಯ ವಿವಾಹ ಮಾಡಲು ನಿರ್ಧರಿಸಿದ್ದರು. ಪೋಷಕರ ವರ್ತನೆಯಿಂದ ಮನನೊಂದ ಭಾರತಿ ಗುರುವಾರ ಸಂಜೆ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾಳೆ.

    ಗುರುವಾರ ಸಂಜೆ ಭಾರತಿ ಸಹೋದರಿ ಮನೆಗೆ ಬಂದಾಗ ಈ ಪ್ರಕರಣ ಬೆಳಕಿಗೆ ಬಂದಿದ್ದು, ತಕ್ಷಣ ಅಕ್ಕಪಕ್ಕದ ಮನೆಯವರಿಗೆ ವಿಷಯ ತಿಳಿಸಿದ್ದಾಳೆ. ಅಕ್ಕಪಕ್ಕದ ಮನೆಯವರು ಭಾರತಿಯನ್ನು ಮೊದಲು ಸೋಮಪೇಟಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ನಂತರ ಅಲ್ಲಿಂದ ಮತ್ತೊಂದು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆದಲ್ಲಿ ಭಾರತಿ ಮೃತಪಟ್ಟಿದ್ದಾಳೆ.

    ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಭಾರತಿಯ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.

  • ಫಂಕ್ಷನ್‍ಗೆ ಕರೆದುಕೊಂಡು ಹೋಗದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ

    ಫಂಕ್ಷನ್‍ಗೆ ಕರೆದುಕೊಂಡು ಹೋಗದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ

    ಮೈಸೂರು: ಫಂಕ್ಷನ್‍ಗೆ ಕರೆದುಕೊಂಡು ಹೋಗದ್ದಕ್ಕೆ ಪಿಯುಸಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ ಶಾರದಾ ದೇವಿನಗರದಲ್ಲಿ ನಡೆದಿದೆ.

    17 ವರ್ಷದ ಅಮಿತ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಮೈಸೂರಿನ ಮರಿಮಲ್ಲಪ್ಪ ಕಾಲೇಜಿನಲ್ಲಿ ಅಮಿತ್ ವಿಜ್ಞಾನ ವಿಷಯದಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದನು. ಅಮಿತ್ ತಂದೆ ಮಾಜಿ ಯೋಧರು. ಈಗ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

    ಕುಟುಂಬದ ಕಾರ್ಯಕ್ರಮಕ್ಕೆ ತೆರಳುವ ವೇಳೆ ಅಮಿತ್ ನನ್ನು ಪೋಷಕರು ಕರೆದುಕೊಂಡು ಹೋಗದೆ ಪರೀಕ್ಷೆಗೆ ಓದುವಂತೆ ಹೇಳಿದ್ದರು. ಫಂಕ್ಷನ್‍ಗೆ ಕರೆದುಕೊಂಡು ಹೋಗದ ಹಿನ್ನೆಲೆಯಲ್ಲಿ ಬೇಸತ್ತ ಅಮಿತ್ ನೇಣಿಗೆ ಶರಣಾಗಿದ್ದಾನೆ.

    ಈ ಬಗ್ಗೆ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಚೆನ್ನಾಗಿ ಓದು ಎಂದು ವಿದ್ಯಾರ್ಥಿನಿ ಬೆನ್ನು ತಟ್ಟಿದ್ದಕ್ಕೆ ಬಿಇಒಗೆ ಥಳಿತ

    ಚೆನ್ನಾಗಿ ಓದು ಎಂದು ವಿದ್ಯಾರ್ಥಿನಿ ಬೆನ್ನು ತಟ್ಟಿದ್ದಕ್ಕೆ ಬಿಇಒಗೆ ಥಳಿತ

    ಗದಗ: ಚೆನ್ನಾಗಿ ಓದು ಎಂದು ಬೆನ್ನುತಟ್ಟಿ ಪ್ರೋತ್ಸಾಹಿಸಿ ಹೆಗಲ ಮೇಲೆ ಕೈಹಾಕಿದ ಬಿಇಓ ಅಧಿಕಾರಿಯನ್ನು ಪಾಲಕರು ಹಿಗ್ಗಾಮುಗ್ಗ ಥಳಿಸಿರುವ ಘಟನೆ ಗದಗ ಜಿಲ್ಲೆ ಮುಂಡರಗಿ ಪಟ್ಟಣದಲ್ಲಿ ನಡೆದಿದೆ.

    ಮುಂಡರಗಿ ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರ್ ಎನ್. ಹಳ್ಳಿಗುಡಿಯವರ ಮನೆಗೆ ನುಗ್ಗಿ 6 ಜನ ಪಾಲಕರ ಗುಂಪೊಂದು ಮನಬಂದಂತೆ ಹಲ್ಲೆ ಮಾಡಿದೆ. ಮನೆ-ಮನೆಗೆ ಭೇಟಿ ಕಾರ್ಯಕ್ರಮದ ಅಂಗವಾಗಿ ಕ್ಷೇತ್ರದ ಹಳ್ಳಿಕೇರಿ ಗ್ರಾಮಕ್ಕೆ ಶಂಕರ್ ಭೇಟಿ ನೀಡಿದ್ದಾರೆ. ಆಗ ರಾತ್ರಿ ವೇಳೆ ಗ್ರಾಮದ ವಿದ್ಯಾರ್ಥಿನಿ ಮನೆಗೆ ಹೋಗಿದ್ದಾರೆ. ಮನೆಯಲ್ಲಿ ವಿದ್ಯಾರ್ಥಿನಿ ಒಬ್ಬಳೇ ಇದ್ದಾಗ ಚೆನ್ನಾಗಿ ಓದು ಎಂದು ಬೆನ್ನುತಟ್ಟಿ ಪ್ರೋತ್ಸಾಹಿಸಿ ಹೆಗಲ ಮೇಲೆ ಕೈಹಾಕಿದ್ದಾರೆ.

    ಇದನ್ನೇ ಅಪಾರ್ಥ ತಿಳಿದ ಪಾಲಕರು, ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಮೇಲೆ 6 ಜನ ಪಾಲಕರ ತಂಡ ಮುಂಡರಗಿ ಪಟ್ಟಣದ ಅವರ ಮನೆಗೆ ನುಗ್ಗಿ ಮನಬಂದಂತೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ತೀವ್ರ ಗಾಯಗೊಂಡಿರುವ ಕೇತ್ರ ಶಿಕ್ಷಣಾಧಿಕಾರಿ ಶಂಕರ್ ಹಳ್ಳಿಗುಡಿ ಅವರನ್ನು ಮುಂಡರಗಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

    ಈ ಕುರಿತು ಮುಂಡರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.