Tag: parents

  • ದಂಪತಿ ಕೊರೊನಾಗೆ ಬಲಿ- ಅನಾಥವಾದ 8 ಮಕ್ಕಳು

    ದಂಪತಿ ಕೊರೊನಾಗೆ ಬಲಿ- ಅನಾಥವಾದ 8 ಮಕ್ಕಳು

    – 8 ಲಕ್ಷ ಖರ್ಚು ಮಾಡಿದ್ರೂ ಬದುಕಲಿಲ್ಲ ತಂದೆ, ತಾಯಿ

    ಬಾಗಲಕೋಟೆ: ವಾರದ ಅಂತರದಲ್ಲಿ ಕೋವಿಡ್ ಗೆ ದಂಪತಿ ಬಲಿಯಾದ ಕಾರಣ, ಎಂಟು ಜನ ಮಕ್ಕಳು ಅನಾಥರಾಗಿರುವ ಹೃದಯವಿದ್ರಾವಕ ಘಟನೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಿಗಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ರಾಮಪ್ಪ ಹೂಗಾರ, ದುಂಡವ್ವ ಹೂಗಾರ ಅವರು ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಕಳೆದ ಶನಿವಾರ ಮೇ 29 ರಂದು ದುಂಡವ್ವ ಹೂಗಾರ ಮೃತರಾದರೆ, ಬಳಿಕ ಪತಿ ದುಂಡಪ್ಪ ಸಾವನ್ನಪ್ಪಿದ್ದಾರೆ. ಕಾರಣ ಎಂಟು ಜನ ಮಕ್ಕಳು ಅನಾಥರಾಗಿದ್ದಾರೆ. ದಂಪತಿಗೆ ಏಳು ಜನ ಹೆಣ್ಣು ಮಕ್ಕಳು, ಓರ್ವ ಗಂಡು ಮಗ ಇದ್ದು, ಆರು ಜನ ಹೆಣ್ಣು ಮಕ್ಕಳ ಮದುವೆ ಮಾಡಿದ್ದಾರೆ. ಇನ್ನೋರ್ವ 16 ವರ್ಷದ ಪುತ್ರಿ, 17 ವರ್ಷದ ಮಗ ಇದ್ದಾರೆ. ತಂದೆ ತಾಯಿ ಕಳೆದುಕೊಂಡು ಅನಾಥರಾದ ಮಕ್ಕಳು, ಬೇಸರದ ಜೀವನ ಸಾಗಿಸುತ್ತಿದ್ದಾರೆ. ಇದನ್ನೂ ಓದಿ: 16,387 ಹೊಸ ಕೊರೊನಾ ಪ್ರಕರಣ – ನಿಲ್ಲದ ಮ’ರಣ’ಕೇಕೆ, 463 ಸಾವು

    ಮೊದಲು ರಾಮಪ್ಪ ಹೂಗಾರಗೆ ಸೊಂಕು ಕಾಣಿಸಿಕೊಂಡು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು. ಆದರೆ ಪತಿಯ ಆರೈಕೆ ಮಾಡುತಿದ್ದ ಪತ್ನಿಗೂ ನಂತರ ಸೊಂಕು ತಗುಲಿ ವಾರದ ಬಳಿಕ ವಿಜಯಪುರ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಎಂಟು ಲಕ್ಷ ರೂ. ಖರ್ಚು ಮಾಡಿದರೂ ತಂದೆ, ತಾಯಿಯನ್ನು ಬದುಕಿಸಿಕೊಳ್ಳಲು ಆಗಲಿಲ್ಲ ಎಂದು ಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ.

  • ಶಾಲಾ, ಕಾಲೇಜು ಶುಲ್ಕ ಕಡಿತಗೊಳಿಸಿ- ಸಿಎಂ ಬಿಎಸ್‍ವೈಗೆ ನಟ ಕಿರಣ್ ರಾಜ್ ಮನವಿ

    ಶಾಲಾ, ಕಾಲೇಜು ಶುಲ್ಕ ಕಡಿತಗೊಳಿಸಿ- ಸಿಎಂ ಬಿಎಸ್‍ವೈಗೆ ನಟ ಕಿರಣ್ ರಾಜ್ ಮನವಿ

    ಬೆಂಗಳೂರು: ಕೊರೊನಾ ಬಿಕ್ಕಟ್ಟಿನ ಪರಿಸ್ಥಿತಿ ಇರುವುದರಿಂದ ಶಾಲಾ-ಕಾಲೇಜುಗಳ ಶುಲ್ಕವನ್ನು ಕಡಿಮೆಗೊಳಿಸುವಂತೆ ನಟ ಕಿರಣ್ ರಾಜ್, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರಿಗೆ ಪತ್ರ ಬರೆಯುವ ಮೂಲಕ ಮನವಿ ಮಾಡಿಕೊಂಡಿದ್ದಾರೆ.

    ಕೊರೊನಾದಿಂದ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿದ್ದು, ವಿದ್ಯಾರ್ಥಿಗಳಿಗೆ ಆನ್‍ಲೈನ್ ಮೂಲಕ ಶಿಕ್ಷಣ ನೀಡಲಾಗುತ್ತಿದೆ. ಅಲ್ಲದೆ ಇದೀಗ ಲಾಕ್‍ಡೌನ್ ಜಾರಿಗೊಳಿಸಲಾಗಿದ್ದು, ಪೋಷಕರು ಜೀವನ ನಡೆಸಲು ಕೂಡ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. ಹೀಗಿರುವಾಗ ಮಕ್ಕಳ ಶಾಲಾ ಕಾಲೇಜಿನ ಪೂರ್ತಿ ಶುಲ್ಕವನ್ನು ಪಾವತಿಸಲು ಪೋಷಕರು ಕಷ್ಟಪಡುತ್ತಿದ್ದಾರೆ. ಅಲ್ಲದೆ ಶಾಲಾ ಆಡಳಿತ ಮಂಡಳಿಗಳು ಶುಲ್ಕ ಪಾವತಿಸುವಂತೆ ಪೋಷಕರ ಮೇಲೆ ಒತ್ತಡ ಹೇರುತ್ತಿದ್ದಾರೆ. ಇಂತಹ ಪೋಷಕರ ಬೆಂಬಲಕ್ಕೆ ಇದೀಗ ನಟ ಕಿರಣ್ ರಾಜ್ ನಿಂತಿದ್ದಾರೆ.

    ಕಿರುತೆರೆಯ ಕನ್ನಡತಿ ಸಿರಿಯಲ್‍ನಲ್ಲಿ ಮಿಂಚುತ್ತಿರುವ ನಟ ಕಿರಣ್ ರಾಜ್ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪತ್ರವೊಂದನ್ನು ಬರೆದಿದ್ದಾರೆ. ‘ಜಗತ್ತಿನೆಲ್ಲೆಡೆ ಕೋವಿಡ್-19 ವ್ಯಾಪಕವಾಗಿ ಹರಡುತ್ತಿದ್ದು, ಸಾಮಾನ್ಯ ಜನರ ಬದುಕು ಅಲ್ಲೋಲ-ಕಲ್ಲೋಲವಾಗಿದೆ. ಇನ್ನು ಮಕ್ಕಳು ಶಾಲಾ-ಕಾಲೇಜು ಇಲ್ಲದೆ ಆನ್‍ಲೈನ್ ಶಿಕ್ಷಣಕ್ಕೆ ಒಗ್ಗಿಕೊಳ್ಳುತ್ತಿದ್ದಾರೆ. ಇಂತಹ ಸಮಯದಲ್ಲಿ ಶಾಲಾ-ಕಾಲೇಜುಗಳ ಶುಲ್ಕವೂ ಸ್ವಲ್ಪವೂ ಕುಗ್ಗಿಲ್ಲ. ದಯವಿಟ್ಟು ಶಾಲಾ-ಕಾಲೇಜುಗಳ ಶುಲ್ಕದಲ್ಲಿ ರಿಯಾಯಿತಿ ಕೊಡಿಸಬೇಕೆಂದು ಈ ಮೂಲಕ ನಿಮ್ಮಲ್ಲಿ, ಎಲ್ಲಾ ಪೋಷಕರ ಪರವಾಗಿ ವಿನಂತಿಸಿಕೊಳ್ಳುತ್ತಿದ್ದೇವೆ. ನಮ್ಮ ಈ ವಿನಂತಿಯನ್ನು ನೀವು ಪರಿಗಣಿಸಿ, ಪರಿಶೀಲಿಸಿ ಜನರ ಬೆನ್ನೆಲುಬಾಗಿ ನಿಲ್ಲುವೆರೆಂಬ ವಿಶ್ವಾಸವಿದೆ ಎಂದು ಆಶಾಯ ವ್ಯಕ್ತಪಡಿಸಿದ್ದಾರೆ.

    ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯಿಂದ ಜನರು ಒದ್ದಾಡುತ್ತಿದ್ದು, ಹಲವಾರು ಸೆಲೆಬ್ರಿಟಿಗಳು ಸಹಾಯ ಹಸ್ತ ಚಾಚಿದ್ದಾರೆ. ಈ ಮಧ್ಯೆ ನಟ ಕಿರಣ್ ರಾಜ್ ಕೂಡ ತಮ್ಮ ಫೌಂಡೇಶನ್ ಮೂಲಕ ಅನೇಕ ಮಂದಿಗೆ ಸಹಾಯ ಮಾಡುತ್ತಿದ್ದಾರೆ. ‘ಮಾರ್ಚ್ 22’ ಸಿನಿಮಾದಲ್ಲಿ ಕಿರಣ್ ರಾಜ್ ನಾಯಕ ನಟರಾಗಿ ಅಭಿನಯಿಸಿದ್ದಾರೆ.

  • ಕೋವಿಡ್ 19 – ಅನಾಥ ಮಕ್ಕಳನ್ನು ದತ್ತು ಪಡೆಯಲು ಮುಂದಾದ ಭಾಲ್ಕಿ ಹೀರೆಮಠ ಸಂಸ್ಥಾನ

    ಕೋವಿಡ್ 19 – ಅನಾಥ ಮಕ್ಕಳನ್ನು ದತ್ತು ಪಡೆಯಲು ಮುಂದಾದ ಭಾಲ್ಕಿ ಹೀರೆಮಠ ಸಂಸ್ಥಾನ

    ಬೀದರ್: ಕೊರೊನಾದಿಂದ ಪೋಷಕರ ಕಳೆದುಕೊಂಡು ಅನಾಥರಾದ ಮಕ್ಕಳನ್ನು ದತ್ತು ಪಡೆಯಲು ಭಾಲ್ಕಿ ಹೀರೆಮಠ ಸಂಸ್ಥಾನ ಮುಂದಾಗಿದೆ.

    ಭಾಲ್ಕಿ ಹೀರೆಮಠ ಸಂಸ್ಥಾನದ ಪೀಠಾಧಿಪತಿ ಡಾ. ಬಸವಲಿಂಗ ಪಟ್ಟದ್ದೆವರು ಈ ಮಹತ್ವದ ನಿರ್ಧಾರ ಮಾಡಿದ್ದಾರೆ. ಇದರಿಂದಾಗಿ ನಿರ್ಗತಿಕ ಹಾಗೂ ಅನಾಥ ಮಕ್ಕಳಲ್ಲಿ ಆಶಾಕಿರಣ ಮೂಡಿದೆ. ಈ ಕ್ರೂರಿ ಕೊರೊನಾ ಅಬ್ಬರಿಸುತ್ತಿರುವ ಸಮಯದಲ್ಲಿ ಅನಾಥ ಮಕ್ಕಳ ರಕ್ಷಣೆಗೆ ಮುಂದಾದ ಭಾಲ್ಕಿ ಹೀರೆಮಠ ಸಂಸ್ಥಾನದ ಕಾರ್ಯ ಮಾನವೀಯ ಮೌಲ್ಯಗಳನ್ನು ಮತ್ತೊಮ್ಮೆ ಎತ್ತಿ ಹಿಡಿದಿದೆ.

    2010ರಿಂದಲೂ ಅನಾಥ ಮಕ್ಕಳಿಗೆ ದಾರಿ ದೀಪವಾಗಿರುವ ಭಾಲ್ಕಿ ಹೀರೆಮಠ ಸಂಸ್ಥಾನ ಇಲ್ಲಿಯವರೆಗೆ 85 ಅನಾಥ ಮಕ್ಕಳಿಗೆ ದಾರಿ ದೀಪವಾಗಿದೆ. 85 ಮಕ್ಕಳಲ್ಲಿ 30 ಮಕ್ಕಳು ಮಾತ್ರ ಮಠದಲ್ಲಿ ಆಶ್ರಯ ಪಡೆಯುತ್ತಿದ್ದು, ಉಳಿದ 55 ಮಕ್ಕಳನ್ನು ಹಲವು ದಂಪತಿ ದತ್ತು ಪಡೆದಿದ್ದಾರೆ.

    ರಾಜ್ಯದ ಯಾವುದೇ ಜಿಲ್ಲೆಯಲ್ಲಿರುವ ಅನಾಥ ಹಾಗೂ ನಿರ್ಗತಿಕ ಮಕ್ಕಳನ್ನು ದತ್ತು ಪಡೆಯಲು ನಿರ್ಧಾರ ಮಾಡಲಾಗಿದೆ. ಈ ರೀತಿಯ ಅನಾಥ ಮಕ್ಕಳು ರಾಜ್ಯದಲ್ಲಿ ಎಲ್ಲೆ ಕಂಡು ಬಂದರೂ, ನಮ್ಮ ಸಂಸ್ಥಾನವನ್ನು ಸಂಪರ್ಕಿಸಿ ಎಂದು ಹೀರೆಮಠ ಸಂಸ್ಥಾನದ ಶ್ರೀಗಳು ಮನವಿ ಮಾಡಿಕೊಂಡಿದ್ದಾರೆ.

    ಮೊದಲಿನಿಂದಲೂ ಅನಾಥ ಮಕ್ಕಳಿಗೆ ದಾರಿ ದೀಪವಾಗಿರುವ ಭಾಲ್ಕಿ ಹೀರೆಮಠ ಸಂಸ್ಥಾನ ಈ ಕೋವಿಡ್ ಸಮಯದಲ್ಲಿ ಅನಾಥ ಮಕ್ಕಳನ್ನು ದತ್ತು ಪಡೆಯಲು ಮುಂದಾಗಿ ಮಾನವೀಯತೆಯ ಸಂದೇಶವನ್ನು ಸಾರಿದೆ.

  • 20 ವರ್ಷ ದೂರವಿದ್ದ ಮಗನನ್ನ ಪೋಷಕರ ಬಳಿ ಕರೆತಂದ ಕೊರೊನಾ

    20 ವರ್ಷ ದೂರವಿದ್ದ ಮಗನನ್ನ ಪೋಷಕರ ಬಳಿ ಕರೆತಂದ ಕೊರೊನಾ

    – 16ನೇ ವಯಸ್ಸಿನಲ್ಲಿ ಮನೆ ತೊರೆದಿದ್ದ ಮಗ

    ಹಾಸನ: ಮಹಾಮಾರಿ ಕೊರೊನಾ ನಾನಾ ರೀತಿಯ ನಷ್ಟ ತಂದೊಡ್ಡಿರುವುದರ ಜೊತೆಗೆ ಅದೆಷ್ಟೋ ಮಂದಿಯನ್ನು ಕುಟುಂಬ ಸದಸ್ಯರಿಂದ ಶಾಶ್ವತವಾಗಿ ದೂರ ಮಾಡಿ ಕಣ್ಣೀರಿಗೆ ಕಾರಣವಾಗಿದೆ. ಆದರೆ ಇದೇ ವೈರಸ್ ಕಳೆದ 20 ವರ್ಷದ ಹಿಂದೆ ಮನೆಬಿಟ್ಟು ಹೋಗಿದ್ದವರನ್ನು ಮತ್ತೆ ಮನೆಗೆ ಬರುವಂತೆ ಮಾಡಿದ್ದು, ಕುಟುಂಬ ಸದಸ್ಯರಲ್ಲಿ ಸಂತಸ, ಹಿಗ್ಗು ಮರಳುವಂತೆ ಮಾಡಿದೆ.

    ಹಾಸನದ ಹೊಂಗೆರೆ ಗ್ರಾಮದ ರಾಜೇಗೌಡ-ಅಕ್ಕಯ್ಯಮ್ಮ ದಂಪತಿಯ ಇಬ್ಬರು ಮಕ್ಕಳಲ್ಲಿ ಹಿರಿಯ ಮಗ ಶೇಖರ್. ಒಬ್ಬನೇ ಮಗ ಎಂದು ಅಕ್ಕರೆಯಿಂದ ಸಾಕಿ ಸಲಹಿದ್ದರು. ಶೇಖರ್ ನಿಗೆ ಏನಾಯಿತೋ ಏನೋ, 16 ವಯಸ್ಸಿನಲ್ಲಿ ಮನೆಯಿಂದ ದಿಢೀರ್ ಕಾಣೆಯಾದ. ಮಗನಿಗಾಗಿ ಹೆತ್ತವರು, ಸಂಬಂಧಿಕರು ಹುಡುಕದ ಜಾಗ, ವಿಚಾರಿಸದ ಜನ ಇಲ್ಲ. ಎಲ್ಲಿ ತಡಕಾಡಿದರೂ, ಶೇಖರ್ ಸುಳಿವೇ ಸಿಗಲಿಲ್ಲ. ಪುತ್ರಶೋಖಂ ನಿರಂತರಂ ಅನ್ನೋ ಹಾಗೆ, ಒಬ್ಬನೇ ಮಗ ತಮ್ಮಿಂದ ಇಲ್ಲವಾಗಿದ್ದನ್ನು ನೆನೆದು ಹೆತ್ತವರು ನಿತ್ಯವೂ ಕಣ್ಣೀರಿಡುತ್ತಿದ್ದರು. ಹೋದ ಮಗ ಬಂದರೆ ಸಾಕು ಎಂದು ಕಂಡ ಕಂಡ ದೇವರಿಗೆ ಕೈ ಮುಗಿದರು. ಹರಕೆ ಕಟ್ಟಿಕೊಟ್ಟರು. ಇಷ್ಟಾದರೂ ಶೇಖರ್ ಕಾಣಸಿಗಲೇ ಇಲ್ಲ.

    ಮಗನಿಗಾಗಿ ಕಾದು ಕಾದು ಹೈರಾಣಾದರೂ, ಆತ ಮರಳಿ ಬರದೇ ಇದ್ದಾಗ, ಸ್ಥಳೀಯರು ಮತ್ತು ಸಂಬಂಧಿಕರು ಶೇಖರ್ ಬಹುಶಃ ಸತ್ತು ಹೋಗಿದ್ದಾನೆ. ಒಂದು ವೇಳೆ ಆತ ಬದುಕಿದ್ದರೆ ಎಲ್ಲೇ ಇದ್ದರೂ ಇಷ್ಟೊತ್ತಿಗೆ ಊರಿಗೆ ಬರುತ್ತಿದ್ದ ಎಂದೆಲ್ಲಾ ಮಾತನಾಡಿಕೊಳ್ಳುತ್ತಿದ್ದರು. ಈ ನಡುವೆ ಶೇಖರ್ ಚಿಕ್ಕಪ್ಪ ತೀರಿಕೊಂಡರು, ಒಬ್ಬಳೇ ತಂಗಿಯ ಮದುವೆ ಇತ್ತೀಚಿಗೆ ನೆರವೇರಿತು. ಅದಕ್ಕೂ ಶೇಖರ್ ಆಗಮನ ಆಗಲಿಲ್ಲ. ಆತನನ್ನು ಕರೆಯೋಣ ಎಂದರೆ, ಎಲ್ಲಿದ್ದಾನೆ ಎಂಬ ಸುಳಿವಾಗಲೀ, ಫೋನ್ ಸಂಪರ್ಕವಾಗಲೀ ಮೊದಲೇ ಇರಲಿಲ್ಲ. ಹೀಗಾಗಿ ಪುತ್ರಭಾಗ್ಯ ನಮ್ಮ ಪಾಲಿಗೆ ಸಿಕ್ಕಿದ್ದೇ ಇಷ್ಟು ಎಂದುಕೊಂಡು ಹೆತ್ತವರು ಸುಮ್ಮನಾಗಿದ್ದರು.

    ಎಲ್ಲೋ ಇದ್ದ ಶೇಖರ್, ಮಂಗಳವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ದಿಢೀರ್ ಮನೆಗೆ ಬಂದಿದ್ದಾನೆ. 22 ವರ್ಷಗಳಿಂದ ಕಣ್ಮರೆಯಾಗಿದ್ದ ಮಗ ಒಮ್ಮೆಗೇ ಕಣ್ಣೆದುರು ಕಾಣಿಸಿಕೊಂಡಿದ್ದು ಹೆತ್ತವರ ಖುಷಿಗೆ ಪಾರವೇ ಇಲ್ಲದಂತಾಗಿದೆ. ನಮ್ಮ ಪಾಲಿಗೆ ಮಗ ನೆನಪು ಎಂದುಕೊಂಡಿದ್ದವರು ಈಗ ಸಂತಸದ ಅಲೆಯಲ್ಲಿ ಸಂಭ್ರಮಿಸುತ್ತಿದ್ದಾರೆ. ಅಷ್ಟೇ ಅಲ್ಲ ಊರಿನವರೂ ಸಂತೋಷಗೊಂಡಿದ್ದಾರೆ. ಶೇಖರ್ ಮನೆ ಬಿಟ್ಟು ಹೋದಾಗ ತಂದೆ-ತಾಯಿ ವಯಸ್ಸಿನ್ನೂ 40 ದಾಟಿತ್ತು. ಈಗ ಇಬ್ಬರೂ 60 ವರ್ಷ ಮೀರಿದ್ದಾರೆ. ಇಳಿವಯಸ್ಸಿನಲ್ಲಾದರೂ ಮಗ ಬಂದನಲ್ಲಾ ಅಷ್ಟೇ ಸಾಕು ಎಂಬುದು ಹೆತ್ತವರ ನಿರುಮ್ಮಳ ನುಡಿಯಾಗಿದೆ.

    ಮನೆ ಬಿಟ್ಟು ಹೋದ ಶೇಖರ್, ಜೀವನೋಪಾಯಕ್ಕಾಗಿ ಮುಂಬೈ ಸೇರಿದಂತೆ ದೇಶದ ಅನೇಕ ರಾಜ್ಯಗಳಲ್ಲಿ ಅಲೆದಾಡಿದ್ದಾನೆ. ದೊಡ್ಡವನಾದ ನಂತರ ತನ್ನದೇ ಬ್ಯುಸಿನೆಸ್ ಸಹ ಆರಂಭಿಸಿದ್ದಾನೆ. ಆದರೆ ಕೊರೊನಾ ಕಾರಣದಿಂದ ಇತ್ತೀಚೆಗೆ ಕೈ ಹಾಕಿದ್ದ ವ್ಯಾಪಾರ ನಷ್ಟವಾಗಿದೆ. ಅನೇಕ ಸಲ ಊರಿಗೆ ಬರುವ ಮನಸ್ಸಾಗಿತ್ತು. ಆದರೆ ಈವರೆಗೂ ಸಾಧ್ಯವಾಗಿರಲಿಲ್ಲ. ಇತ್ತೀಚೆಗೆ ಹಾಸನಕ್ಕೂ ಬಂದಿದ್ದೆ. ಆದರೆ ನನ್ನ ಕಷ್ಟವನ್ನು ಮನೆಯವರ ಜೊತೆ ಹಂಚಿಕೊಳ್ಳಲು ಹಿಂಜರಿಕೆಯಾಯಿತು. ಇದೇ ಬೇಸರದಿಂದ ವಾಪಸ್ ಹೋದೆ. 2ನೇ ಬಾರಿಗೆ ಲಾಕ್‍ಡೌನ್ ಆದಾಗ ಜೀವನ ನಡೆಸುವುದು ಕಷ್ಟವಾಯಿತು. ಕಡೆಗೆ ನಮ್ಮೂರೇ ನನಗೆ ಮೇಲು ಎಂದು ತಿಳಿದು ಮರಳಿ ಬಂದೆ ಎಂದು ಶೇಖರ್ ಹೇಳುತ್ತಾನೆ.

    ಕೊರೊನ ರಣಕೇಕೆಗೆ ಜನಜೀವನ ತತ್ತರಿಸಿ ಹೋಗಿದ್ದರೆ, ಹೊಟ್ಟೆಪಾಡಿಗಾಗಿ ಊರು ತೊರೆದಿದ್ದವರು ಪುನಃ ಹಿಂದಿರುಗುತ್ತಿದ್ದಾರೆ. ಆದರೆ 20 ವರ್ಷಗಳ ಹಿಂದೆ ಮನೆಬಿಟ್ಟು ಹೋಗಿದ್ದ ಮಗ ಕೊರೊನದಿಂದಾಗಿ ಮನೆಗೆ ವಾಪಾಸ್ ಆಗಿರುವುದು ಹೆತ್ತವರನ್ನು ಹಿರಿ ಹಿರಿ ಹಿಗ್ಗಿಸಿದೆ.

  • ಈಜಲು ಹೋದ ಇಬ್ಬರು ಯುವಕರು ನೀರು ಪಾಲು

    ಈಜಲು ಹೋದ ಇಬ್ಬರು ಯುವಕರು ನೀರು ಪಾಲು

    ಮಂಡ್ಯ: ದೇವಸ್ಥಾನದ ಪೂಜೆಗೆ ಬಂದ ಇಬ್ಬರು ಯುವಕರು ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‍ಎಸ್‍ನ ನಾರ್ಥ್ ಬ್ಯಾಂಕ್ ಬಳಿಯ ವಿಸಿ ನಾಲೆಯಲ್ಲಿ ಜರುಗಿದೆ.

    ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಮಲ್ಲಿನಾಥಪುರ ಗ್ರಾಮದ ಬಸವೇಗೌಡ (26), ಜವರೇಗೌಡ (34) ಎಂಬವರು ಕೆಆರ್‍ಎಸ್ ಬಳಿ ಇರುವ ಕಾಳಮ್ಮನ ದೇವಸ್ಥಾನಕ್ಕೆ ಪೂಜೆಗೆಂದು ಬಂದಿದ್ದಾರೆ. ಈ ವೇಳೆ ಇಬ್ಬರು ಯುವಕರು ಪಕ್ಕದಲ್ಲಿ ಹರಿಯುತ್ತಿದ್ದ ವಿಸಿ ನಾಲೆಯಲ್ಲಿ ಈಜಲು ಹೋಗಿದ್ದಾರೆ.

    ಈ ವೇಳೆ ವಿಸಿ ನಾಲೆಯಲ್ಲಿ 2500 ಕ್ಯೂಸೆಕ್ ನೀರು ಬಿಟ್ಟಿದ್ದ ಪರಿಣಾಮ ಬಸವೇಗೌಡ ಹಾಗೂ ಜವರೇಗೌಡ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಸದ್ಯ ಓರ್ವ ಯುವಕನ ಶವ ಪತ್ತೆಯಾಗಿದ್ದು, ಇನ್ನೋರ್ವ ಯುವಕನ ಶವವನ್ನು ಶೋಧ ಮಾಡಲಾಗುತ್ತಿದೆ. ಯುವಕರ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಕೆಆರ್‍ಎಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ಜರುಗಿದೆ.

  • ಹೆತ್ತವರು ಹೇಳಿದ ಸುಳ್ಳನ್ನು ಬಯಲು ಮಾಡಿದ ಕಂಗನಾ

    ಹೆತ್ತವರು ಹೇಳಿದ ಸುಳ್ಳನ್ನು ಬಯಲು ಮಾಡಿದ ಕಂಗನಾ

    ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ತಂದೆ, ತಾಯಿ ಮದುವೆಯ ವಾರ್ಷಿಕೋತ್ಸವದ ಶುಭಾಶಯವನ್ನು ತಿಳಿಸಿ ಪೋಷಕರು ಬಚ್ಚಿಟ್ಟಿದ್ದ ರಹಸ್ಯವನ್ನು ತಮ್ಮ ಇನ್‍ಸ್ಟಾಗ್ರಾಮ್‍ಖಾತೆಯಲ್ಲಿ ಬಯಲು ಮಾಡಿದ್ದಾರೆ.

    ಅಮ್ಮ ಕಾಲೇಜು ಮುಗಿಸಿ ಹೋಗುವಾಗ ಬಸ್ಟ್ಯಾಂಡ್‍ನಲ್ಲಿ ನಿಂತಿರುವುದನ್ನು ನೋಡಿದ ಅಪ್ಪ ಮೊದಲ ನೋಟಕ್ಕೆ ಪ್ರೇಮದ ಬಲೆಗೆ ಸಿಲುಕಿದ್ದರು. ಅದಾದ ಮೇಲೆ ಪ್ರತಿದಿನ ಅವರಿಗಾಗಿ ಬಸ್‍ಸ್ಟ್ಯಾಂಡ್‍ಗೆ ಹೋಗಿ ಕಾಯುತ್ತಿದ್ದರು. ಅವರ ಪ್ರೇಮದ ವಿಚಾರವನ್ನು ನಮ್ಮ ಅಜ್ಜನ ಬಳಿ ಹೇಳಿದ್ದರು. ಆದರೆ ಸಮಾಜದಲ್ಲಿ ಅವರಿಗೆ ಕೆಟ್ಟ ಹೆಸರಿತ್ತು ಎನ್ನುವ ಕಾರಣಕ್ಕೆ ನಿರಾಕರಿಸಿದ್ದರು. ಅದಾದ ಮೇಲೆ ಕಂಗನಾ ಅವರ ತಾಯಿಯೇ ಕುಟುಂಬದ ಮನವೊಲಿಸಿ ಪ್ರೇಮ ವಿವಾಹವಾಗಿದ್ದರು.

     

    View this post on Instagram

     

    A post shared by Kangana Ranaut (@kanganaranaut)

    ಈ ವಿಚಾರವನ್ನು ನಮಗೆ ನಮ್ಮ ತಂದೆ ತಾಯಿ ಹೇಳಿರಲಿಲ್ಲ. ನಾನು ಮತ್ತು ರಂಗೋಲಿಯ ಬಳಿ ಇಂದಿಗೂ ಈ ವಿಚಾರದ ಕುರಿತಾಗಿ ಮಾತನಾಡಿಲ್ಲ. ನಮ್ಮದು ಅರೇಂಜ್ ಮ್ಯಾರೇಜ್ ಎಂದು ಹೇಳುತ್ತಿದ್ದರು. ಆದರೆ ನಮ್ಮ ಅಜ್ಜಿ ನಮಗೆ ಈ ವಿಚಾರವನ್ನು ಹೇಳಿದ್ದಾರೆ ಎಂದು ಬರೆದುಕೊಂಡು ಅಪ್ಪ ಅಮ್ಮ ಮದುವೆಯ ಕುರಿತಾದ ಘಟನೆಯನ್ನು ಹೇಳಿದ್ದಾರೆ. ಪೋಷಕರ ಮದುವೆ ಸಿಕ್ರೇಟ್ ಕುರಿತಾಗಿ ಬರೆದುಕೊಂಡು ವಿವಾಹ ವಾರ್ಷಿಕೋತ್ಸವದ ಶುಭಾಶಯವನ್ನು ಕೋರಿದ್ದಾರೆ.

  • ಮಗಳನ್ನು ಪ್ರೀತಿ ಮಾಡಿದ್ದಕ್ಕೆ ಅಪ್ರಾಪ್ತನ ಮರ್ಡರ್

    ಮಗಳನ್ನು ಪ್ರೀತಿ ಮಾಡಿದ್ದಕ್ಕೆ ಅಪ್ರಾಪ್ತನ ಮರ್ಡರ್

    – ಮಂಡ್ಯದ ಕೌನ್ಸಿಲರ್ ಮೇಲೆ ಗಂಭೀರ ಆರೋಪ

    ಮಂಡ್ಯ: ಮಗಳನ್ನು ಪ್ರೀತಿಸಿದ ಪ್ರಿಯಕರನನ್ನು ತಂದೆ ಮಧ್ಯರಾತ್ರಿ ಮನೆಗೆ ಕರೆಸಿಕೊಂಡು ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ ಎಂದು ಹುಡುಗನ ಸಂಬಂಧಿಕರು ಆರೋಪ ಮಾಡುತ್ತಿರುವ ಘಟನೆ ಮಂಡ್ಯ ನಗರದ ಕಲ್ಲಹಳ್ಳಿಯಲ್ಲಿ ನಡೆದಿದೆ.

    ವಯಸ್ಸಲ್ಲದ ವಯಸ್ಸಿನಲ್ಲಿ ಪ್ರೀತಿಗೆ ಬಿದ್ದಿದ್ದ 17 ವರ್ಷದ ಬಾಲಕ ಮೃತಪಟ್ಟಿದ್ದು, ಬಾಲಕಿಯ ತಂದೆ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಲಿಂಗು ಹಾಗೂ ಕುಟುಂಬಸ್ಥರ ಮೇಲೆ ಕೊಲೆ ಆರೋಪ ಕೇಳಿಬಂದಿದೆ.

    ಅಂದಹಾಗೇ ಒಂದೇ ಏರಿಯಾದವರಾಗಿದ್ದ ಇಬ್ಬರು ಅಪ್ರಾಪ್ತರು, ಕಳೆದ 2 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಬಾಲಕನ ತಂದೆ ಗಾರೆ ಕೆಲಸ ಮಾಡಿ ಸಂಸಾರದೂಗಿಸಿದರೆ, ತಾಯಿ ಪವಿತ್ರ ಚಿಲ್ಲರೆ ಅಂಗಡಿ ವ್ಯಾಪಾರ ಮಾಡುತ್ತಿದ್ದರು. ಬಾಲಕನ ಕುಟುಂಬಸ್ಥರು ಆರ್ಥಿಕವಾಗಿ ಹಿಂದುಳಿದಿದ್ದರಿಂದ ಹಾಗೂ ಜಾತಿ ಬೇರೆಯಾಗಿದ್ದರಿಂದ ಅಪ್ರಾಪ್ತರ ಪ್ರೀತಿ ಒಪ್ಪದ ಹುಡುಗಿ ತಂದೆ ಶಿವಲಿಂಗೂ ಒಂದೆರೆಡು ಬಾರಿ ಮಗಳ ಸಹವಾಸಕ್ಕೆ ಬರದಂತೆ ಎಚ್ಚರಿಕೆ ನೀಡಿದ್ದರಂತೆ. ಆದರೆ ಇಬ್ಬರೂ ಕೂಡ ಪ್ರೀತಿ ಮುಂದುವರಿಸಿದ್ದರು. ಜೆಡಿಎಸ್‍ನಿಂದ ನಗರಸಭೆ ಸದಸ್ಯರಾಗಿದ್ದ ಶಿವಲಿಂಗೂ ಮಗಳ ಪ್ರೀತಿಯಿಂದ ತನ್ನ ಮರ್ಯಾದೆಗೆ ಧಕ್ಕೆ ಆಗುಬಹುದೆಂದು ಭಾವಿಸಿ ಬಾಲಕನ್ನ ಹತ್ಯೆ ಮಾಡಲು ಸ್ಕೆಚ್ ಹಾಕಿದ್ದರು ಅಂತ ಹೇಳಲಾಗುತ್ತಿದೆ.

    ಮರ್ಡರ್ ಮಾಡಲು ಪ್ರೀ ಪ್ಲಾನ್ ಮಾಡಿದ್ದ ಹುಡುಗಿ ಕುಟುಂಬಸ್ಥರು ಮಗಳ ಮೂಲಕ ಆತನಿಗೆ ಮನೆಬರುವಂತೆ ಮೆಸೆಜ್ ಕಳುಹಿಸಿದ್ದಾರೆ. ಪ್ರೇಯಸಿ ಮಾತು ನಂಬಿ ಮಧ್ಯರಾತ್ರಿ ಮನೆಗೆ ಬಂದಿದ್ದ ಪ್ರಿಯಕರನಿಗೆ ಚಪ್ಪಲಿ ಹೊರಗೆ ಬಿಟ್ಟು ಶಬ್ಧ ಮಾಡದಂತೆ ಒಳಗೆ ಬರಲು ಆಕೆ ತಿಳಿಸಿದ್ದಳು. ಬಳಿಕ ಕುಟುಂಬಸ್ಥರೆಲ್ಲಾ ಸೇರಿ ಬಾಲಕನ ಮೇಲೆ ಹಲ್ಲೆ ನಡೆಸಿದ್ದು. ಗಲಾಟೆ ಸೌಂಡ್ ಕೇಳಿದ ಸ್ಥಳೀಯರು ಬಾಲಕನ ಸ್ನೇಹಿತರು ಹಾಗೂ ಕುಟುಂಬಸ್ಥರಿಗೆ ವಿಷಯ ಮುಟ್ಟಿಸಿದ್ದಾರೆ.

    ತೀವ್ರವಾಗಿ ಗಾಯಗೊಂಡಿದ್ದ ಆತನನ್ನ ಸ್ನೇಹಿತರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೀಗ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಯಲ್ಲಿ ಬಾಲಕ ಕೊನೆಯುಸಿರೆಳೆದಿದ್ದಾನೆ. ಆತನ ಸಾವಿನಿಂದ ಪೋಷಕರು ಹಾಗೂ ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿದ್ದು, ಪ್ರಿ ಪ್ಲಾನ್ ಮಾಡಿ ಈ ಕೊಲೆ ಮಾಡಲಾಗಿದೆ. ಬುದ್ದಿ ಮಾತು ಹೇಳಿದರೆ ಆತ ಕೇಳುತ್ತಿದ್ದ. ತಪ್ಪಿತಸ್ಥರನ್ನ ಬಂಧಿಸಿ ಅಂತ ಸ್ನೇಹಿತರು ಆಗ್ರಹಿಸಿದ್ದಾರೆ.

    ಮೀಸೆ ಚಿಗುರದ ವಯಸ್ಸಿನಲ್ಲಿ ಆರಂಭವಾದ ಮೂರು ವರ್ಷದ ಪ್ರೀತಿ ಬೆಳೆದು ಹೆಮ್ಮರವಾಗುವ ಮೊದಲೇ ಪ್ರಿಯಕರನ ಸಾವಿನ ಮೂಲಕ ಅಂತ್ಯವಾಗಿದೆ. ಈ ಪ್ರಕರಣ ಸತ್ಯಾಸತ್ಯತೆಯನ್ನು ಪೊಲೀಸರು ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.

  • ಪಬ್ ಜೀ ಆಟಕ್ಕಾಗಿ 12ರ ಬಾಲಕನನ್ನು ಕೊಲೆ ಮಾಡಿದ 17ರ ಸ್ನೇಹಿತ

    ಪಬ್ ಜೀ ಆಟಕ್ಕಾಗಿ 12ರ ಬಾಲಕನನ್ನು ಕೊಲೆ ಮಾಡಿದ 17ರ ಸ್ನೇಹಿತ

    ಮಂಗಳೂರು: ಪಬ್ ಜೀ ಮೊಬೈಲ್ ಆಟ ನಿಷೇಧವಾಗಿದರೂ ಆಟಕ್ಕೆ ಅಡಿಕ್ಟ್ ಆದವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಪಬ್ ಜೀ ಆಟ ಮತ್ತೊಂದು ರೂಪದಲ್ಲಿ ಮೊಬೈಲ್‍ಗೆ ಬಂದಿದೆ. ಆ ಆಟ ಈಗ ಜೀವ ತೆಗೆಯುವ ಹಂತಕ್ಕೆ ತಲುಪಿದ್ದು ಮಂಗಳೂರಿನಲ್ಲಿ ಬಾಲಕನ ಜೀವ ಪಬ್ ಜೀ ಆಟದಲ್ಲಿ ಅಂತ್ಯವಾಗಿದೆ.

    ಆಕೀಫ್(12) ಬರ್ಬರವಾಗಿ ಹತ್ಯೇಗೀಡಾದ ಬಾಲಕ. ಈತ ಮಂಗಳೂರು ನಗರ ಹೊರವಲಯದ ಕೆ.ಸಿ ರೋಡ್ ನಿವಾಸಿಯಾಗಿದ್ದು, ಪ್ರಸ್ತುತ ಕೆ.ಸಿ.ರೋಡ್‍ನ ಫಲಹಾ ಇಂಗ್ಲಿಷ್ ಮೀಡಿಯಾಂ ಶಾಲೆಯ 7 ತರಗತಿ ವಿದ್ಯಾರ್ಥಿಯಾಗಿದ್ದನು. ನಿನ್ನೆ ರಾತ್ರಿ 9 ಗಂಟೆಗೆ ಮನೆಯಿಂದ ಹೊರಟವನು ಇಂದು ಬೆಳಗ್ಗೆ ಕೊಲೆಯಾದ ಸ್ಥಿತಿಯಲ್ಲಿ ಮೈದಾನದಲ್ಲಿ ಪತ್ತೆಯಾಗಿದ್ದಾನೆ.

    ಆಕೀಫ್‍ಗೆ ಕಳೆದ ಮೂರು ತಿಂಗಳ ಹಿಂದೆ ಮೊಬೈಲ್ ಅಂಗಡಿಯಲ್ಲಿದ್ದ 17 ವರ್ಷದ ಬಾಲಕನ ಪರಿಚಯವಾಗಿದ್ದಾನೆ. ಬಳಿಕ ಇಬ್ಬರೂ ಪಬ್ ಜೀ ಗೇಮ್ ಆಟವಾಡಲು ಆರಂಭಿಸಿದ್ದಾರೆ. ಆಟದಲ್ಲಿ ಪ್ರತಿ ಬಾರಿಯೂ ಆಕೀಫ್ ಗೆಲುವು ಸಾಧಿಸಿದ್ದನು. ಇದರಿಂದ ಕೋಪಗೊಂಡ ಬಾಲಕ ಆಟದಲ್ಲಿ ಮೋಸ ಮಾಡ್ತಿದ್ದೀಯಾ, ಮುಖಾಮುಖಿ ಆಡೋಣ ಅಂತಾ ನಿನ್ನೆ ಸ್ಥಳೀಯ ಮೈದಾನಕ್ಕೆ ಕರೆದಿದ್ದಾನೆ.

    ಬಳಿಕ ರಾತ್ರಿ 9 ಗಂಟೆಗೆ ಇಬ್ಬರೂ ಮೈದಾನದಲ್ಲಿ ಪಬ್ ಜೀ ಆಡಿದ್ದಾರೆ. ಈ ವೇಳೆ ಆಟದಲ್ಲಿ ಬಾಲಕ ಸೋತಿದ್ದಾನೆ. ಇದರಿಂದ ಇಬ್ಬರ ನಡುವೆಯೂ ಗಲಾಟೆಯಾಗಿದೆ. ಗಲಾಟೆ ಮಧ್ಯೆ ಬಾಲಕ ಆಕೀಫ್‍ಗೆ ದೊಡ್ಡ ಕಲ್ಲಿನಲ್ಲಿ ಹೊಡೆದಿದ್ದು, ಆಕೀಫ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇದರಿಂದ ಗಾಬರಿಗೊಂಡ ಬಾಲಕ, ಆಕೀಫ್ ಶವವನ್ನು ಮೈದಾನದ ಪೊದೆಯಲ್ಲಿ ಬಚ್ಚಿಟ್ಟು ಪರಾರಿಯಾಗಿದ್ದಾನೆ. ಬೆಳಗ್ಗಿನ ವೇಳೆ ಆಕೀಫ್ ಮೃತದೇಹ ಮೈದಾನದ ಪೊದೆಯಲ್ಲಿ ಕಂಡುಬಂದಿದ್ದು, ಬಾಲಕ ವಿಚಾರಣೆ ವೇಳೆ ಎಲ್ಲವನ್ನೂ ಬಾಯಿಬಿಟ್ಟಿದ್ದಾನೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಆಕೀಫ್‍ಗೆ ಪೋಷಕರು ಆನ್ ಲೈನ್ ಕ್ಲಾಸ್ ಉದ್ದೇಶದಿಂದ ಮೊಬೈಲ್ ತೆಗೆದುಕೊಟ್ಟಿದ್ದರು. ಮೊಬೈಲ್‍ನಲ್ಲಿ ವಿವಿಧ ಆ್ಯಪ್‍ಗಳನ್ನು ಡೌನ್ ಲೋಡ್ ಮಾಡಿಕೊಂಡಿದ್ದ. ಮೊಬೈಲ್ ಆಟದಲ್ಲೂ ಬಹಳ ಚೂಟಿಯಾಗಿದ್ದ. ಸದಾ ಮೊಬೈಲ್‍ನಲ್ಲೇ ಕಾಲ ಕಳೆಯುತ್ತಿದ್ದ ಆಕೀಫ್ ಪಬ್ ಜೀ ಆಟದ ವಿಚಾರಕ್ಕೆ ಭೀಕರ ಹತ್ಯೆಯಾಗಿದ್ದು, ಇದೀಗ ಮನೆಯವರನ್ನೂ ದಂಗುಬಡಿಸಿದೆ.

    ಒಟ್ಟಿನಲ್ಲಿ ಮಾರಕ ಪಬ್ ಜೀ ಆಟ ಬಾಳಿ ಬದುಕಬೇಕಾಗಿದ್ದ ಬಾಲಕನ ಜೀವವನ್ನು ಬಲಿಪಡೆದಿದೆ. ಮಕ್ಕಳಿಗೆ ಅನಿವಾರ್ಯವಾಗಿ ಮೊಬೈಲ್ ಕೊಟ್ಟ ಪೋಷಕರೂ ಮಕ್ಕಳ ಬಗ್ಗೆ ಜಾಗೃತವಾಗಿರಬೇಕಾಗಿದೆ.

  • ಖಾಸಗಿ ಶಾಲೆಯಿಂದ ದುಬಾರಿ ಫೀಸ್‍ಗೆ ಒತ್ತಾಯ- ಪೋಷಕರ ಆಕ್ರೋಶ

    ಖಾಸಗಿ ಶಾಲೆಯಿಂದ ದುಬಾರಿ ಫೀಸ್‍ಗೆ ಒತ್ತಾಯ- ಪೋಷಕರ ಆಕ್ರೋಶ

    ಕೋಲಾರ: ಕೊರೊನಾ ಸಂಕಷ್ಟದ ಮಧ್ಯೆ ಖಾಸಗಿ ಶಾಲೆ ಪೋಷಕರನ್ನು ಸುಲಿಗೆ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಪೋಷಕರು ಇಂದು ನಗರದ ಚಿನ್ಮಯ ಶಾಲೆಗೆ ತೆರೆಳಿ ಆಡಳಿತ ಮಂಡಳಿ ವಿರುದ್ಧ ಆಕ್ರೊಶ ವ್ಯಕ್ತಪಡಿಸಿದ್ದಾರೆ.

    ಆನ್‍ಲೈನ್ ಕ್ಲಾಸ್, ಹೋಮ್ ವರ್ಕ್ ಕೊಟ್ಟು ಶುಲ್ಕ ಪಾವತಿ ಮಾಡುವಂತೆ ಖಾಸಗಿ ಶಾಲೆಯ ಆಡಳಿತ ಮಂಡಳಿ ಪೋಷಕರಿಗೆ ಒತ್ತಾಯ ಮಾಡುತ್ತಿದೆ. ಸರ್ಕಾರ ಶೇ.70 ರಷ್ಟು ಶುಲ್ಕ ಮಾತ್ರ ಪಾವತಿ ಮಾಡುವಂತೆ ಸೂಚನೆ ನೀಡಿದೆ. ಆದರೂ ಖಾಸಗಿ ಶಾಲೆಯವರು ಪೂರ್ಣ ಪ್ರಮಾಣದಲ್ಲಿ ಶುಲ್ಕ ಕಟ್ಟುವಂತೆ ಪೀಡಿಸುತ್ತಿದ್ದಾರೆ ಎಂದು ಪೋಷಕರು ಆರೋಪಿಸಿದರು.

    ಶುಲ್ಕ ಪಾವತಿ ಮಾಡಿದರೆ ಮಾತ್ರ 1 ರಿಂದ 6ನೇ ತರಗತಿ ವಿದ್ಯಾರ್ಥಿಗಳಿಗೆ ಆನ್‍ಲೈನ್ ಕ್ಲಾಸ್ ಮಾಡುತ್ತೇವೆ. ಇಲ್ಲವಾದಲ್ಲಿ ಪರೀಕ್ಷೆಯ ಪ್ರವೇಶ ಪತ್ರವನ್ನೂ ನೀಡುವುದಿಲ್ಲವೆಂದು ಆಡಳಿತ ಮಂಡಳಿ ಪೋಷಕರಿಗೆ ಬೆದರಿಸಿದೆ. ಈ ಹಿನ್ನಲೆಯಲ್ಲಿ ಪೋಷಕರು ಇಂದು ಚಿನ್ಮಯ ಸೇರಿದಂತೆ ಖಾಸಗಿ ಶಾಲೆಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಕೊರೊನಾದಿಂದ ಮಧ್ಯಮ ವರ್ಗದ ಕುಟುಂಬಗಳು ಜೀವನ ನಡೆಸುವುದೇ ಕಷ್ಟವಾಗುತ್ತಿದೆ. ಹೀಗಿರುವಾಗ ಶಾಲೆಗಳು ಶುಲ್ಕ ಪಾವತಿ ಮಾಡುವಂತೆ ಒತ್ತಾಯ ಮಾಡುತ್ತಿರುವುದು ಮತ್ತಷ್ಟು ಹೊರೆಯಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

  • ಸದ್ಯಕ್ಕೆ ಯಾರನ್ನೂ ಭೇಟಿಯಾಗಲ್ಲ- ವಕೀಲರ ಮೂಲಕ ಪೋಷಕರಿಗೆ ಯುವತಿ ಮಾಹಿತಿ

    ಸದ್ಯಕ್ಕೆ ಯಾರನ್ನೂ ಭೇಟಿಯಾಗಲ್ಲ- ವಕೀಲರ ಮೂಲಕ ಪೋಷಕರಿಗೆ ಯುವತಿ ಮಾಹಿತಿ

    – ಪೋಷಕರಿಗೆ ಫೋನ್ ಮಾಡುವಂತೆ ಯುವತಿಗೆ ಪೊಲೀಸರಿಂದ ಒತ್ತಡ

    ಬೆಂಗಳೂರು: ಸಿಡಿ ಪ್ರಕರಣ ಒಂದು ಹಂತಕ್ಕೆ ಬಂದ ನಂತರವೇ ಯುವತಿ ಪೋಷಕರ ಬಳಿ ಹೋಗುವದಾಗಿ ಹೇಳಿದ್ದಾರೆ. ಸಂತ್ರಸ್ತೆ ಪೋಷಕರು ಆರೋಪಿಗಳ ಪರ ಇರೋದರಿಂದ ಯುವತಿ ಹೋಗುತ್ತಿಲ್ಲ ಎಂದು ವಕೀಲ ಜಗದೀಶ್ ಹೇಳಿದ್ದಾರೆ.

    ಸಂತ್ರಸ್ತೆ ಪೋಷಕರ ಬಳಿ ಹೋಗಲು ಒಪ್ಪುತ್ತಿಲ್ಲ. ಅಲ್ಲಿಗೆ ಹೋದ್ರೆ ನಾನು ಎಮೋಷನಲ್ ಆಗುತ್ತೆ ಅಂತ ಹೇಳುತ್ತಿದ್ದಾರೆ. ಅದು ಅವರ ಕೂಸು. ನಮ್ಮ ಆಶ್ರಯ ಕೇಳಿದಷ್ಟು ದಿನ ನಾವು ನೀಡುತ್ತೇವೆ. ಯಾಕೆ ಸ್ವಾವಲಂಬಿಯಾಗಿದ್ದು, ತನ್ನ ನಿರ್ಧಾರ ತೆಗೆದುಕೊಳ್ಳಲು ಶಕ್ತಳಿದ್ದಾಳೆ. ಪೋಷಕರು ಬಳಿ ಹೋಗುವುದು ಸಂತ್ರಸ್ತೆಯ ಇಚ್ಛೆ. ಆ ವಿಷಯದಲ್ಲಿ ನಾವು ತಲೆ ಹಾಕಲ್ಲ ಎಂದು ತಿಳಿಸಿದರು.

    ಸದ್ಯ ಯುವತಿ ಎಸ್‍ಐಟಿ ತನಿಖೆ ಎದುರಿಸುತ್ತಿದ್ದಾರೆ. ವಿಚಾರಣೆ ವೇಳೆ ಅಲ್ಲಿಯ ಕೆಲ ಪೊಲೀಸರು ಪೋಷಕರಿಗೆ ಫೋನ್ ಮಾಡುವಂತೆ ಒತ್ತಡ ಹಾಕುತ್ತಿರುವ ವಿಷಯವನ್ನ ಸಂತ್ರಸ್ತೆ ನಮ್ಮ ಬಳಿ ಹೇಳಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಪೋಷಕರ ಜೊತೆ ಮಾತನಾಡಲು ಮತ್ತು ಭೇಟಿಯಾಗಲು ಇಷ್ಟವಿಲ್ಲ ಎಂದು ಯುವತಿ ನಮ್ಮ ಮುಂದೆ ಹೇಳಿದ್ದಾರೆ ಎಂಬ ಮಾಹಿತಿ ನೀಡಿದರು.