Tag: parents

  • ಲವ್ವರ್‌ ಜೊತೆ ಪೋಷಕರಿಗೆ ಸಿಕ್ಕಿಬಿದ್ದ ಯುವಕ – ಪಬ್ಲಿಕ್‌ನಲ್ಲೇ ಜೋಡಿಗೆ ಬಿತ್ತು ಗೂಸಾ

    ಲವ್ವರ್‌ ಜೊತೆ ಪೋಷಕರಿಗೆ ಸಿಕ್ಕಿಬಿದ್ದ ಯುವಕ – ಪಬ್ಲಿಕ್‌ನಲ್ಲೇ ಜೋಡಿಗೆ ಬಿತ್ತು ಗೂಸಾ

    – ಮಗನಿಗೆ ಚಪ್ಪಲಿಯಿಂದ ಹೊಡೆದ ತಂದೆ
    – ಯುವತಿಯ ಜಡೆ ಹಿಡಿದು ಎಳೆದಾಡಿದ ತಾಯಿ

    ಲಕ್ನೋ: ಪ್ರೇಯಸಿಯೊಂದಿಗೆ ಚೌಮಿನ್ ಸವಿಯುತ್ತಿದ್ದ ವೇಳೆ ಪೋಷಕರಿಗೆ ಸಿಕ್ಕಿಬಿದ್ದ ಯುವಕ ಹಾಗೂ ಯುವತಿಯ ಪೋಷಕರು ಸಾರ್ವಜನಿಕವಾಗಿ ಥಳಿಸಿದ ಘಟನೆ ಉತ್ತರಪ್ರದೇಶದ (Uttar Pradesh) ಕಾನ್ಪುರದಲ್ಲಿ (Kanpur) ನಡೆದಿದೆ.

    ಗುಜೈನಿ ಪೊಲೀಸ್ ಠಾಣೆ ವ್ಯಾಪ್ತಿಯ ರಾಮ್‌ಗೋಪಾಲ್ ಛೇದಕದಲ್ಲಿ ಈ ಘಟನೆ ನಡೆದಿದ್ದು, ಸಾರ್ವಜನಿಕವಾಗಿ ಥಳಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರೋಹಿತ್ (21) ಆತನ 19 ವರ್ಷದ ಪ್ರೇಯಸಿಯೊಂದಿಗೆ ಚೌಮಿನ್ ತಿನ್ನತ್ತಿದ್ದ ವೇಳೆ ಯುವಕನ ಪೋಷಕರಾದ ಶಿವಕರನ್ ಹಾಗೂ ಸುಶೀಲಾ ಸ್ಥಳಕ್ಕೆ ಆಗಮಿಸಿದ್ದಾರೆ. ಈ ವೇಳೆ ಅವರಿಬ್ಬರ ಪ್ರೀತಿ ಬೆಳಕಿಗೆ ಬಂದಿದ್ದು, ಪ್ರೀತಿಯನ್ನು ನಿರಾಕರಿಸಿದ ಪೋಷಕರು ಸಾರ್ವಜನಿಕವಾಗಿ ಥಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಅಶ್ರಫ್‌ ಹತ್ಯೆ ವಿಚಾರ ಪ್ರಸ್ತಾಪಿಸಿ ಸಚಿವರಿಗೆ ಮುಸ್ಲಿಂ ಮುಖಂಡರಿಂದ ಕ್ಲಾಸ್‌ – ಟೇಬಲ್‌ ಬಡಿದು ಆಕ್ರೋಶ

    ಘಟನೆ ಬಳಿಕ ಕೌನ್ಸಿಲಿಂಗ್ ಮಾಡಿ ಪೊಲೀಸರು ಜೋಡಿಯನ್ನು ಬೇರ್ಪಡಿಸಿದ್ದಾರೆ. ದ್ವಿಚಕ್ರ ವಾಹನದಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ ಜೋಡಿಗೆ ತಾಯಿ ಸುಶೀಲಾ ಹೊಡೆದಿದ್ದಾರೆ. ಸ್ಥಳೀಯ ನಿವಾಸಿಗಳು ಮತ್ತು ದಾರಿಹೋಕರು ಇಬ್ಬರನ್ನೂ ಬೇರ್ಪಡಿಸಲು ಪ್ರಯತ್ನಿಸಿದ ವೇಳೆ ಯುವತಿಯ ಕೂದಲನ್ನು ಹಿಡಿದು ಹಲ್ಲೆ ನಡೆಸಿದ್ದಾರೆ. ಅಲ್ಲದೇ ರೋಹಿತ್‌ನ ತಂದೆ ಕೂಡ ಆತನಿಗೆ ಚಪ್ಪಲಿಯಿಂದ ಹೊಡೆದಿರುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಯುರೋಪಿಯನ್ ದೇಶಗಳಿಂದ ಪಾಕ್‌ಗೆ ಶಾಕ್ – ಪಾಕಿಸ್ತಾನ ವಾಯು ಪ್ರದೇಶದಲ್ಲಿ ವಿಮಾನ ಹಾರಾಟಕ್ಕೆ ಹಿಂದೇಟು

  • ಜಾಮೀನು ಸಿಕ್ಕರೂ ಇಲ್ಲ ಬಿಡುಗಡೆ ಭಾಗ್ಯ – ಮಕ್ಕಳನ್ನು ಬಿಡಿಸಿಕೊಳ್ಳಲು ಹಣವಿಲ್ಲದೇ ಪೋಷಕರ ಪರದಾಟ

    ಜಾಮೀನು ಸಿಕ್ಕರೂ ಇಲ್ಲ ಬಿಡುಗಡೆ ಭಾಗ್ಯ – ಮಕ್ಕಳನ್ನು ಬಿಡಿಸಿಕೊಳ್ಳಲು ಹಣವಿಲ್ಲದೇ ಪೋಷಕರ ಪರದಾಟ

    – 2 ಲಕ್ಷ, ಇಬ್ಬರು ಶೂರಿಟಿದಾರರನ್ನು ಒಪ್ಪಿಸುವಂತೆ ತಿಳಿಸಿದ್ದ ಕೋರ್ಟ್
    – ಜೈಲಲ್ಲೇ ಇರೋ ರೇಣುಕಾಸ್ವಾಮಿ ಕೊಲೆ ಆರೋಪಿಗಳು

    ತುಮಕೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder Case) ಹಿನ್ನೆಲೆ ಮೂವರು ಆರೋಪಿಗಳಿಗೆ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿತ್ತು. ಆದರೆ ಕೋರ್ಟ್ ಜಾಮೀನು (Bail) ನೀಡಿದ್ದರೂ ಬೆಲ್ ಶೂರಿಟಿಗೂ ಹಣವಿಲ್ಲದೇ ಆರೋಪಿಗಳ ಕುಟುಂಬಸ್ಥರು ಪರದಾಡುವಂತಾಗಿದೆ.

    ಕಳೆದ ಸೋಮವಾರ ರೇಣುಕಾಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆ ಮೂವರು ಆರೋಪಿಗಳಾದ ಕೇಶವಮೂರ್ತಿ, ಕಾರ್ತಿಕ್, ಹಾಗೂ ನಿಖಿಲ್‌ಗೆ ಷರತ್ತುಬದ್ಧ ಜಾಮೀನು ದೊರೆತಿತ್ತು. ಎ-16 ಆರೋಪಿ ಕೇಶವಮೂರ್ತಿಗೆ ಹೈಕೋಟ್‌ನಿಂದ ಹಾಗೂ ಎ-15 ಆರೋಪಿ ಕಾರ್ತಿಕ್, ಎ-17 ಆರೋಪಿ ನಿಖಿಲ್‌ಗೆ 57ನೇ ಸಿಸಿಹೆಚ್ ಕೋರ್ಟ್‌ನಿಂದ ಷರತ್ತುಬದ್ಧ ಜಾಮೀನು ಸಿಕ್ಕಿತ್ತು.ಇದನ್ನೂ ಓದಿ: ನಂಬಿಕೆಗೆ ಧಕ್ಕೆಯಾಗದಂತೆ ಮಹಿಷ ದಸರಾ ಆಚರಿಸಿದ್ರೆ ನಮಗೂ ಸಂತೋಷ: ಯದುವೀರ್

    ಜಾಮೀನು ಸಿಕ್ಕಿ 5 ದಿನ ಕಳೆದರೂ ಆರೋಪಿಗಳಿಗೆ ಜೈಲಿನಿಂದ ಬಿಡುಗಡೆಯಾಗುವ ಭಾಗ್ಯ ದೊರೆತಿಲ್ಲ. 2 ಲಕ್ಷ ರೂ. ಹಣ ಹಾಗೂ ಇಬ್ಬರು ಶೂರಿಟಿದಾರರನ್ನು ಒಪ್ಪಿಸುವಂತೆ ಕೋರ್ಟ್ ತಿಳಿಸಿದೆ. ಜಾಮೀನು ನೀಡಲು ಶೂರಿಟಿದಾರರು ಸಿಗದೇ ಆರೋಪಿಗಳ ಕುಟುಂಬಸ್ಥರು ಪರದಾಡುವಂತಾಗಿದೆ. ಹೀಗಾಗಿ ಆರೋಪಿಗಳು ಇನ್ನೂ ತುಮಕೂರು ಜಿಲ್ಲಾ (Tumakuru Jail) ಕಾರಾಗೃಹದಲ್ಲಿದ್ದಾರೆ.

    ಕಳೆದ 6 ದಿನಗಳಿಂದ 2 ಲಕ್ಷ ರೂ. ಹಣ ಹಾಗೂ ಇಬ್ಬರು ಶೂರಿಟಿದಾರರನ್ನ ಹೊಂದಿಸಲು ಆರೋಪಿಗಳ ಕುಟುಂಬಸ್ಥರು ಪರದಾಡುತ್ತಿದ್ದಾರೆ. ಇನ್ನು ಜಾಮೀನಿನ ಕಾನೂನು ಪ್ರಕ್ರಿಯೆ ಮುಗಿಯದ ಹಿನ್ನೆಲೆ ಇಂದು ಕೂಡಾ ಆರೋಪಿಗಳು ಜೈಲಿನಿಂದ ಬಿಡುಗಡೆಯಾಗುವುದು ಅನುಮಾನವಾಗಿದೆ. ಶೂರಿಟಿದಾರರನ್ನ ಹೊಂದಿಸಲು ಸಾಧ್ಯವಾಗದ ಕಾರಣ ಆರೋಪಿಗಳ ಕುಟುಂಬಸ್ಥರು ಇಲ್ಲಿಯ ತನಕ ತುಮಕೂರು ಜಿಲ್ಲಾ ಕಾರಾಗೃಹಕ್ಕೆ ಬಂದಿಲ್ಲ ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ: ಈ ಬ್ಲ್ಯಾಕ್‌ಮೇಲರ್ ಹೇಗೆ ಲೂಟಿ ಮಾಡಿದ್ದಾನೆ ಅಂತಾ ಹೇಳಿದ್ದೀನಿ: ಎಡಿಜಿಪಿ ಚಂದ್ರಶೇಖರ್ ವಿರುದ್ಧ ಹೆಚ್‌ಡಿಕೆ ಕಿಡಿ

  • ಸಿಎಂ ಭೇಟಿಯಾಗಿ ರೇಣುಕಾಸ್ವಾಮಿ ಪತ್ನಿಗೆ ಸರ್ಕಾರಿ ಉದ್ಯೋಗ ಕೊಡಿಸುವಂತೆ ಪೋಷಕರು ಮನವಿ

    ಸಿಎಂ ಭೇಟಿಯಾಗಿ ರೇಣುಕಾಸ್ವಾಮಿ ಪತ್ನಿಗೆ ಸರ್ಕಾರಿ ಉದ್ಯೋಗ ಕೊಡಿಸುವಂತೆ ಪೋಷಕರು ಮನವಿ

    ಬೆಂಗಳೂರು: ನಟ ದರ್ಶನ್ (Challenging Star Darshan) ಟೀಂನಿಂದ ಕೊಲೆಯಾದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ತಂದೆ-ತಾಯಿ ಇಂದು ಸಿಎಂ ಸಿದ್ದರಾಮಯ್ಯ ಭೇಟಿಯಾಗಿದ್ದಾರೆ.

    ಮಾಜಿ ಸಚಿವ ಆಂಜನೇಯ ನೇತೃತ್ವದಲ್ಲಿ ಕಾವೇರಿ ನಿವಾಸದಲ್ಲಿ ಭೇಟಿಯಾದ ಪೋಷಕರು ಸಿಎಂ ಮುಂದೆ ಅಳಲು ತೋಡಿಕೊಂಡರು. ಸಿಎಂ ಭೇಟಿ ವೇಳೆ ತಮ್ಮ ಮನೆಯ ಪರಿಸ್ಥಿತಿಯ ಬಗ್ಗೆ ಹೇಳಿಕೊಂಡು ರೇಣುಕಾಸ್ವಾಮಿ ತಂದೆ-ತಾಯಿ ಕಣ್ಣೀರು ಹಾಕಿದರು.

    ಸದ್ಯ ಪೊಲೀಸರ ತನಿಖೆ ಬಗ್ಗೆ ಸಮಾಧಾನ ವ್ಯಕ್ತಪಡಿಸಿದ ರೇಣುಕಾಸ್ವಾಮಿ ತಂದೆ-ತಾಯಿ, ಸ್ವಾಮಿ ಪತ್ನಿಗೆ ಸರ್ಕಾರಿ ಉದ್ಯೋಗ ನೀಡುವಂತೆ ಮನವಿ ಮಾಡಿದ್ರು. ಪೋಷಕರ ಮನವಿಗೆ ಸಿಎಂ ಸಕಾರಾತ್ಮಕವಾಗಿ ಸ್ಪಂದನೆ ನೀಡಿದ್ರು. ಇದನ್ನೂ ಓದಿ: ಪವಿತ್ರಾಗೌಡ ಬಂಧನವಾದಾಗ ವಿಚಾರಣೆ ತಂಡದಲ್ಲಿದ್ದ ಮಹಿಳಾ ಪಿಎಸ್‌ಐಗೆ ನೋಟಿಸ್

    ಜೂನ್ 8 ರಂದು ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕಿಡ್ನಾಪ್ ಮಾಡಿ ಬೆಂಗಳೂರಿಗೆ ಕರೆತರಲಾಗಿತ್ತು. ಅಲ್ಲಿಂದ ಪಟ್ಟಣಗೆರೆ ಶೆಡ್‍ಗೆ ಕರೆದೊಯ್ದು ಚಿತ್ರಹಿಸೆ ನೀಡಿ ದರ್ಶನ್ & ಗ್ಯಾಂಗ್ ಬರ್ಬರವಾಗಿ ಕೊಲೆ ಮಾಡಿತ್ತು. ಕೊಲೆ ಬಳಿಕ ಮೃತದೇಹವನ್ನು ಸುಮ್ಮನಹಳ್ಳಿ ಮೊರಿ ಬಳಿ ಎಸೆಯಲಾಗಿತ್ತು.

    ಇತ್ತ ನಾಲ್ವರು ಕಾಮಾಕ್ಷಿಪಾಳ್ಯ ಠಾಣೆಗೆ ತೆರಳಿ ಹಣದ ವಿಚಾರಕ್ಕೆ ಕೊಲೆ ಮಾಡಲಾಗಿದೆ ಎಂದು ನಾಲ್ವರು ಶರಣಾಗಿದ್ದರು. ಇದರಿಂದ ಸಂಶಯಗೊಂಡ ಪೊಲೀಸರು ತನಿಖೆ ಚುರುಕುಗೊಳಿಸಿದಾಗ ನಿಜ ಬಣ್ಣ ಬಯಲಾಗಿದೆ. ಪ್ರಕರಣ ಸಂಬಂಧ 17 ಆರೋಪಿಗಳನ್ನು ಬಂಧಿಸಲಾಗಿದ್ದು, ಜೈಲಿಗಟ್ಟಲಾಗಿದೆ.

  • ಮಗಳಿಗೆ ರಕ್ಷಣೆ ಕೊಟ್ಟಿದ್ದಕ್ಕೆ ಯುವತಿ ತಾಯಿಯ ಸೀರೆ ಎಳೆದಾಡಿ ದುರ್ವರ್ತನೆ ತೋರಿದ ಪುಂಡ!

    ಮಗಳಿಗೆ ರಕ್ಷಣೆ ಕೊಟ್ಟಿದ್ದಕ್ಕೆ ಯುವತಿ ತಾಯಿಯ ಸೀರೆ ಎಳೆದಾಡಿ ದುರ್ವರ್ತನೆ ತೋರಿದ ಪುಂಡ!

    – ಯುವತಿ ತಂದೆಯ ಕಣ್ಣಿಗೆ ಗಾಯ, ಕಾಲು ಮುರಿತ

    ರಾಯಚೂರು: ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣದ ಬೆನ್ನಲ್ಲೇ ರಾಯಚೂರಿನಲ್ಲೊಂದು ಅಮಾನವೀಯ ಘಟನೆ ನಡೆದಿದೆ. ನಿತ್ಯ ಪೀಡಿಸುತ್ತಿದ್ದ ಯುವಕನಿಂದ ಮಗಳಿಗೆ ರಕ್ಷಣೆ ಕೊಟ್ಟಿದ್ದಕ್ಕೆ ಹೆತ್ತವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ.

    ರಾಯಚೂರಿನ (Raichur) ಸಿಂಧನೂರು ತಾಲೂಕಿನ ಆರ್ ಎಚ್ ಕ್ಯಾಂಪ್ 3 ರಲ್ಲಿ ಘಟನೆ ನಡೆದಿದೆ. ಯುವಕನ ಕಾಟ ತಪ್ಪಿಸಲು ಮಗಳನ್ನ ಊರು ಬಿಡಿಸಿ ಸಂಬಂಧಿಕರ ಮನೆಯಲ್ಲಿರಿಸಿದ್ದಕ್ಕೆ, ಆರೋಪಿ ಪ್ರಣವ್ ಹಾಗೂ ಆತನ ಕಡೆಯವರು ಯುವತಿ ತಂದೆ ಹೀರಾ ಮಹಾನ್, ತಾಯಿ ಶೃತಿ ಮಂಡಲ್, ಸಹೋದರ ಹೀಮಂತು ಸಂಬಂಧಿ ಶುಬ್ರತೋ ಮೇಲೆ ಹಲ್ಲೆ ಮಾಡಿದ್ದಾರೆ. ಇದನ್ನೂ ಓದಿ: ಪ್ರಕರಣ ದಿಕ್ಕು ತಪ್ಪಿಸುತ್ತಿದ್ದಾರೆ, ಸಿಎಂಗೆ ಪತ್ರ ಬರೆದು ನಾವೂ ಆತ್ಮಹತ್ಯೆ ಮಾಡಿಕೊಳ್ತೇವೆ: ನೇಹಾ ತಂದೆ ಭಾವುಕ

    ಯುವತಿ ಸಂಪರ್ಕಕ್ಕೆ ಸಿಗದೇ ಇದ್ದಾಗ ರೊಚ್ಚಿಗೆದ್ದು, ಆಕೆಯನ್ನ ಯಾಕೆ ಬೇರೆಡೆ ಕಳುಹಿಸಿದ್ರಿ ಆಕೆಯನ್ನ ಮತ್ತೆ ಕರೆತನ್ನಿ ಅಂತ ಕಿರುಕುಳ ನೀಡಿ ಹಲ್ಲೆ ಮಾಡಿದ್ದಾರೆ. ಯುವತಿ ತಂದೆ ಕಾಲು ಮುರಿದಿದ್ದು, ಕಣ್ಣಿಗೆ ಗಂಭೀರ ಗಾಯವಾಗಿದೆ. ಯುವತಿ ತಾಯಿ ಸೀರೆ ಎಳೆದಾಡಿ ಅಮಾನವೀಯವಾಗಿ ವರ್ತನೆ ಮಾಡಿದ್ದಾರೆ ಅಂತ ಆರೋಪಿಸಲಾಗಿದೆ. ಆರೋಪಿ ಪ್ರಣವ್ ಪ್ರೀತಿ-ಪ್ರೇಮ ಅಂತ ಟಾರ್ಚರ್ ಕೊಡ್ತಿದ್ದ ಎನ್ನಲಾಗಿದೆ.

    ಆರೋಪಿಗಳಾದ ಪ್ರಣವ್ ಬಿಸ್ವಾಸ್, ಪಿಯೂಸ್ ಬಿಸ್ವಾಸ್, ಮಧು ಬಿಸ್ವಾಸ್ ವಿರುದ್ದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವತಿ ತಂದೆ ಸಿಂಧನೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

  • ಸೋನು ಗೌಡ ಕೇಸ್ – ಬಾಲಕಿ ಪೋಷಕರಿಗೆ ಕೌನ್ಸಿಲಿಂಗ್‌ಗೆ ಮುಂದಾದ ರಕ್ಷಣಾ ಆಯೋಗ

    ಸೋನು ಗೌಡ ಕೇಸ್ – ಬಾಲಕಿ ಪೋಷಕರಿಗೆ ಕೌನ್ಸಿಲಿಂಗ್‌ಗೆ ಮುಂದಾದ ರಕ್ಷಣಾ ಆಯೋಗ

    ಬೆಂಗಳೂರು: ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಅಕ್ರಮವಾಗಿ ಮಗು ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವಿನ ತಂದೆ ತಾಯಿಯನ್ನು (Parents) ಕೌನ್ಸಿಲಿಂಗ್ (Counselling) ಮಾಡಲು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (NCPCR) ಮುಂದಾಗಿದೆ. ಕೌನ್ಸಿಲಿಂಗ್‌ನಲ್ಲಿ ಹಲವು ಅಂಶಗಳನ್ನು ಚರ್ಚಿಸಲಿದೆ. ತಂದೆ ತಾಯಿ ತಪ್ಪು ಮಾಡಿದ್ದರೆ ಕ್ರಮ, ಇಲ್ಲವಾದಲ್ಲಿ ತಂದೆ ತಾಯಿಗೆ ಮಗುವನ್ನ ವಾಪಸ್ ಕೊಡಿಸಲು ರಕ್ಷಣಾ ಆಯೋಗ ಮುಂದಾಗಿದೆ.

    ಮಗುವನ್ನು ಅಕ್ರಮವಾಗಿ ದತ್ತು ಪಡೆದ ಪ್ರಕರಣದಲ್ಲಿ ಸೋನು ಶ್ರೀನಿವಾಸ್ ಗೌಡ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಮಧ್ಯೆ ಮಗುವಿನ ತಂದೆ ತಾಯಿಯನ್ನು ಕೌನ್ಸಿಲಿಂಗ್ ಮಾಡಲು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗ ಮುಂದಾಗಿದೆ. ಮಗುವನ್ನು ಸೋನು ಶ್ರೀನಿವಾಸ್ ಗೌಡ ಕರೆದುಕೊಂಡು ಹೋದ ಮೇಲೆ ಪೋಷಕರು ಯಾಕೆ ದೂರು ಕೊಡಲಿಲ್ಲ? ಅವರಿಂದ ಆಮಿಷಕ್ಕೆ ಒಳಗಾಗಿದ್ರಾ ಎಂಬ ಆಯಾಮದಲ್ಲಿ ಕೌನ್ಸಿಲಿಂಗ್ ಮಾಡಿ ಮಗುವನ್ನು ರಕ್ಷಣೆ ಮಾಡೋಕೆ ಮುಂದಾಗಿದೆ. ಇದನ್ನೂ ಓದಿ: ಬಿಟ್‌ ಕಾಯಿನ್‌ ಹಗರಣದ ಆರೋಪಿ ಶ್ರೀಕಿಗೆ ಗನ್‌ಮ್ಯಾನ್‌!

    ಸದ್ಯ ಮಗು ಬಾಲಿಕ ಆಶ್ರಮದಲ್ಲಿ ಮಕ್ಕಳ ಕಲ್ಯಾಣ ಸಮಿತಿ ನಿಗಾದಲ್ಲಿದೆ. ದತ್ತು ಪಡೆಯುವಾಗ ಅನುಸರಿಸಬೇಕಾದ ನಿಯಮಗಳನ್ನು ಅನುಸರಿಸಿಲ್ಲ. ತಂದೆ ತಾಯಿಯನ್ನು ಕೌನ್ಸಿಲಿಂಗ್ ಮಾಡಿ ಅವರದ್ದು ತಪ್ಪು ಇದ್ದರೆ ಕ್ರಮಕ್ಕೆ ಮುಂದಾಗುತ್ತಾರೆ. ತಂದೆ ತಾಯಿ ತಪ್ಪು ಇಲ್ಲದಿದ್ದರೆ ಮಗುವನ್ನು ತಂದೆ ತಾಯಿಗೆ ವಾಪಸ್ ಒಪ್ಪಿಸಲು ತಯಾರಿ ಮಾಡುತ್ತೇವೆ ಎನ್ನುತ್ತಿದ್ದಾರೆ. ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ಒಂದೇ ದೇಹದ ಎರಡು ಕಣ್ಣುಗಳು: ಹೆಚ್‍ಡಿಕೆ

    ಅತ್ತ ಸೋನು ಜೈಲಿನಲ್ಲಿದ್ದರೆ ಇತ್ತ ಮಕ್ಕಳ ಆಯೋಗ ತಂದೆ ತಾಯಿಯನ್ನು ಕೌನ್ಸಿಲಿಂಗ್ ಮಾಡೋದಕ್ಕೆ ಮುಂದಾಗಿದೆ. ಕೌನ್ಸಿಲಿಂಗ್ ಬಳಿಕ ಏನೆಲ್ಲ ಬೆಳವಣಿಗೆಗಳು ಆಗಲಿವೆ ಎಂದು ಕಾದು ನೋಡಬೇಕಿದೆ. ಇದನ್ನೂ ಓದಿ: ಮಹುವಾ ಮೊಯಿತ್ರಾ ವಿರುದ್ಧ ಅಕ್ರಮ ಹಣ ವರ್ಗಾವಣೆ ಕೇಸ್‌ ದಾಖಲಿಸಿದ ಇ.ಡಿ

  • ಓದಿನ ಕಡೆ ಗಮನಕೊಡುವಂತೆ ಹೇಳಿದ್ದಕ್ಕೆ ಫುಟ್ಬಾಲ್ ಪ್ಲೇಯರ್ ಸೂಸೈಡ್

    ಓದಿನ ಕಡೆ ಗಮನಕೊಡುವಂತೆ ಹೇಳಿದ್ದಕ್ಕೆ ಫುಟ್ಬಾಲ್ ಪ್ಲೇಯರ್ ಸೂಸೈಡ್

    ಧಾರವಾಡ: ಓದಿನ ಕಡೆ ಗಮನ ಕೊಡು ಎಂದು ಪೋಷಕರು ಹೇಳಿದ್ದಕ್ಕೆ ಯುವಕನೋರ್ವ ತನ್ನ ಪ್ರಾಣವನ್ನೇ ಕಳೆದುಕೊಂಡ ಘಟನೆ ಧಾರವಾಡದಲ್ಲಿ (Dharwad) ನಡೆದಿದೆ.

    ಮೃತನನ್ನು ಚೇತನ್ ತೊಂಡಿಹಾಳ ಎಂದು ಗುರುತಿಸಲಾಗಿದೆ. ಈತ ಧಾರವಾಡದ ಸಾಧನಕೇರಿಯ ನಿವಾಸಿಯೇ ನಗರದ ಕಲಗೇರಿ ಕೆರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಒಳ್ಳೆಯ ಫುಟ್ಬಾಲ್ ಪ್ಲೇಯರ್ (FootBall Player) ಆಗಿದ್ದ ಈತನಿಗೆ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದನು. ಇದನ್ನೂ ಓದಿ: ಮಲೆನಾಡಲ್ಲಿ ಮತ್ತೆ ನಕ್ಸಲರ ಹೆಜ್ಜೆ – ಹೈ ಅಲರ್ಟ್ ಘೋಷಣೆ

    ನಾಲ್ಕು ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಚೇತನ್, ಅದರಿಂದ ಹೊರ ಬರಲಾಗದೇ ಒದ್ದಾಡುತ್ತಿದ್ದನು. ಆತನ ಕುಟುಂಬಸ್ಥರು ಆತನಿಗೆ ಬೆಂಗಳೂರಿನ ಮಾನಸಿಕ ಆಸ್ಪತ್ರೆಯಲ್ಲೂ ಚಿಕಿತ್ಸೆ ಕೊಡಿಸಿದ್ದರು. ಆದರೆ ಖಿನ್ನತೆಯಿಂದ ಹೊರಬರಲಾಗದೇ ಚೇತನ್ ಕೊನೆಗೆ ಕೆಲಗೇರಿ ಕೆರೆಗೆ ಹಾರಿ ತನ್ನ ಪ್ರಾಣ ಕಳೆದುಕೊಂಡಿದ್ದಾನೆ.

    ಚೇತನ್ ತನಗಿಷ್ಟ ಬಂದಂತೆ ಇರಲಿ ಎಂದು ನಾವು ಒತ್ತಡ ಹಾಕಿರಲಿಲ್ಲ. ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಆತನಿಗೆ ಚಿಕಿತ್ಸೆ ಸಹ ಕೊಡಿಸಿದ್ದೆವು. ಆದರೆ ಆತ ಮನೆ ಬಿಟ್ಟು ಹೊರಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಚೇತನ್ ಪೋಷಕರು ಇದೀಗ ಕಣ್ಣೀರು ಹಾಕುತ್ತಿದ್ದಾರೆ.

    ಈ ಸಂಬಂಧ ಉಪನಗರ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

  • ಮಕ್ಕಳನ್ನು ಬದುಕಿಸಲು ಉಪ್ಪಿನ ರಾಶಿಯೊಳಗೆ ಮೃತದೇಹ ಇಟ್ಟ ಪೋಷಕರು

    ಮಕ್ಕಳನ್ನು ಬದುಕಿಸಲು ಉಪ್ಪಿನ ರಾಶಿಯೊಳಗೆ ಮೃತದೇಹ ಇಟ್ಟ ಪೋಷಕರು

    ಹಾವೇರಿ: ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದ್ದ ವಿಡಿಯೋ ನೋಡಿ ಮೃತ ಮಕ್ಕಳನ್ನು ಬದುಕಿಸಲು ಪೋಷಕರು (Parents) ಹೆಣಗಾಟ ಮಾಡಿದ ಘಟನೆ ಹಾವೇರಿ (Haveri) ಜಿಲ್ಲೆ ಬ್ಯಾಡಗಿ (Byadagi) ತಾಲೂಕಿನ ಗಾಳಪೂಜಿ ಗ್ರಾಮದಲ್ಲಿ ನಡೆದಿದೆ.

    ಕಳೆದ ಎರಡು ದಿನಗಳ ಹಿಂದೆ ಕೆರೆಯಲ್ಲಿ ಮುಳುಗಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದರು. ಮೃತ ಮಕ್ಕಳನ್ನು ಹೇಮಂತ್ (12) ಹಾಗೂ ನಾಗರಾಜ್ (11) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ನೆಲಮಂಗಲದಲ್ಲಿ ಧಗಧಗನೇ ಹೊತ್ತಿ ಉರಿದ ಕಾರು – ಓರ್ವ ಸಜೀವ ದಹನ

    ಮೃತ ಮಕ್ಕಳ ಪೋಷಕರು ಉಪ್ಪಿನ ರಾಶಿಯಲ್ಲಿ (Pile of Salt) ಅವರ ಮೃತದೇಹ (Dead Body) ಮುಚ್ಚಿಟ್ಟು ಬದುಕಿಸಲು ಹೋರಾಟ ನಡೆಸಿದ್ದರು. ಸತತ 6 ಗಂಟೆಗಳ ಕಾಲ ಉಪ್ಪಿನ ಗುಡ್ಡೆಯಲ್ಲಿ ಮೃತದೇಹ ಇಟ್ಟು ಬದುಕಿಸುವ ಪ್ರಯತ್ನ ಮಾಡಿದ್ದರು. ಇದನ್ನೂ ಓದಿ: ಊಟದ ಮೆನುವಿನಲ್ಲಿ ಮಟನ್ ಕರ್ರಿ ಇಲ್ಲವೆಂದು ಮದುವೆ ಕ್ಯಾನ್ಸಲ್ ಮಾಡಿದ ವರ!

    ಮೃತದೇಹ ಪತ್ತೆಯಾಗುತ್ತಿದ್ದಂತೆ ಮನೆಗೆ ತಂದು ಉಪ್ಪುರಾಶಿಯನ್ನು ಹಾಕಿ ಪೋಷಕರು ಬದುಕಿಸಲು ಹೆಣಗಾಟ ಮಾಡಿದ್ದಾರೆ. ಇತ್ತೀಚಿಗಷ್ಟೇ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದ ಸುಳ್ಳು ವೈರಲ್ ವಿಡಿಯೋ ನೋಡಿ ಪೋಷಕರು ಹೀಗೆ ಮಾಡಿದ್ದರು. ಕಾಗಿನೆಲೆಯ ಪೊಲೀಸರು ಪೋಷಕರ ಮನವೊಲಿಸಿದ ನಂತರ ಅಂತ್ಯಕ್ರಿಯೆ ಮಾಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಕಾಗಿನಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿತ್ತು. ಇದನ್ನೂ ಓದಿ: ಗ್ಯಾಸ್ ಗೀಸರ್‌ಗೆ ಮತ್ತೊಂದು ಬಲಿ – ವಿಷಾನಿಲ ಸೋರಿಕೆಯಾಗಿ ಸ್ನಾನ ಮಾಡಲು ಹೋಗಿದ್ದ ಯುವತಿ ಸಾವು

  • ಅಪ್ಪ-ಅಮ್ಮ ನನಗಿಂತ ಹೆಚ್ಚು ಪ್ರೀತಿಸ್ತಾರೆಂದು ತಮ್ಮನನ್ನೇ ಮುಗಿಸಿದ ಅಪ್ರಾಪ್ತೆ!

    ಅಪ್ಪ-ಅಮ್ಮ ನನಗಿಂತ ಹೆಚ್ಚು ಪ್ರೀತಿಸ್ತಾರೆಂದು ತಮ್ಮನನ್ನೇ ಮುಗಿಸಿದ ಅಪ್ರಾಪ್ತೆ!

    ಚಂಡೀಗಢ: 15 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ತನ್ನ 12 ವರ್ಷದ ಸಹೋದರನ್ನೇ ಕೊಲೆಗೈದ ಅಚ್ಚರಿಯ ಘಟನೆಯೊಂದು ಹರಿಯಾಣ (Hariyana) ದಲ್ಲಿ ನಡೆದಿರುವುದಾಗಿ ಬೆಳಕಿಗೆ ಬಂದಿದೆ.

    ಅಪ್ಪ- ಅಮ್ಮ ತನಗಿಂತ ತನ್ನ ತಮ್ಮನನ್ನೇ ಹೆಚ್ಚು ಪ್ರೀತಿಸುತ್ತಾರೆ ಎಂದು ನೊಂದು ಈ ಕೊಲೆ ಮಾಡಿದ್ದಾಳೆ. ಈ ಘಟನೆ ಹರಿಯಾಣದ ಬಲ್ಲಭಗಡ ಎಂಬಲ್ಲಿ ಮಂಗಳವಾರ ನಡೆದಿದೆ.

    ಇತ್ತ ಕೆಲಸ ಮುಗಿಸಿಕೊಂಡು ಹೆತ್ತವರು ಮನೆಗೆ ವಾಪಸ್ ಆದಾಗ ಮಗ ಕಾಣಲಿಲ್ಲ. ಹೀಗಾಗಿ ಮನೆಯೆಲ್ಲಾ ಹುಡುಕಾಡಿದ್ದಾರೆ. ಈ ವೇಳೆ ಬಾಲಕ ಕೋಣೆಯಲ್ಲಿ ಕಂಬಳಿ ಹೊದ್ದು ಮಲಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದಾನೆ. ಕೂಡಲೇ ಆತನ ಬಳಿ ತೆರಳಿ ಎಬ್ಬಿಸಿದಾಗ ಆತ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಈ ವೇಳೆ ಕಂಬಳಿ ತೆರೆದು ನೋಡಿದಾಗ ಕತ್ತು ಹಿಸುಕಿ ಕೊಲೆ ಮಾಡಿರುವುದು ಬಯಲಾಗಿದೆ. ಘಟನೆ ವೇಳೆ ಬಾಲಕಿ ಮಾತ್ರ ಮನೆಯಲ್ಲಿದ್ದಳು. ಇದನ್ನೂ ಓದಿ: 2ನೇ ಬ್ಯಾಚ್ – ಮತ್ತೆ 200 ಭಾರತದ ಮೀನುಗಾರರು ಪಾಕ್ ಜೈಲಿನಿಂದ ಬಿಡುಗಡೆ

    ಪೋಷಕರು ಕೂಡಲೇ ಪೊಲೀಸರಿಗೆ ಮಾಹಿತಿ ನಿಡಿದ್ದು, ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿದರು. ಈ ಇಬ್ಬರು ಮಕ್ಕಳು ಉತ್ತಪ್ರದೇಶದಲ್ಲಿರುವ ತನ್ನ ಅಜ್ಜಿ ಮನೆಯಲ್ಲಿ ವಾಸವಾಗಿದ್ದಾರೆ. ಆದರೆ ಶಾಲೆಗೆ ರಜೆ ಇದ್ದ ಕಾರಣ ಇತ್ತೀಚೆಗೆ ಇಬ್ಬರು ಕೂಡ ಅಪ್ಪ-ಅಮ್ಮನ ಜೊತೆ ಇರಲು ಬಂದಿದ್ದಾರೆ. ಬಾಲಕಿ ತನಗಿಂತ ತನ್ನ ತಮ್ಮನನ್ನು ಹೆತ್ತವರು ಹೆಚ್ಚು ಪ್ರೀತಿಸುತ್ತಾರೆ ಎಂದು ನಂಬಿದ್ದಾಳೆ. ಹೀಗಾಗಿ ಆಕೆ ಬಾಲಕನನ್ನು ಕೊಲೆ ಮಾಡಿದ್ದಾಳೆ ಅಂತ ಪೊಲೀಸರು ತಿಳಿಸಿದ್ದಾರೆ.

    ಹೆತ್ತವರು ಬಾಲಕನಿಗೆ ಇತ್ತೀಚೆಗೆ ಮೊಬೈಲ್ ಫೋನ್ (Mobile Phone) ಕೊಡಿಸಿದ್ದರು. ಅಂತೆಯೇ ಮಂಗಳವಾರ ಅಪ್ಪ-ಮ್ಮ ಕೆಲಸಕ್ಕೆ ಹೋದ ಬಳಿಕ ಆತ ತನ್ನ ಮೊಬೈಲ್ ನಲ್ಲಿ ಗೇನ್ಸ್ ಆಡ್ತಾ ಇದ್ದ. ಈ ವೇಳೆ ಬಾಲಕಿ ತನಗೊಮ್ಮೆ ಮೊಬೈಲ್ ಕೊಡುವಂತೆ ಕೇಳಿದ್ದಾಳೆ. ಈ ವೇಳೆ ಆತ ಮೊಬೈಲ್ ಕೊಡಲು ನಿರಾಕರಿಸಿದ್ದಾನೆ. ಇದರಿಂದ ಕೋಪಗೊಂಡ ಬಾಲಕಿ ಆತನನನು ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ವಿವರಿಸಿದ್ದಾರೆ. ಸದ್ಯ ಬಾಲಕಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

  • ರೇಪ್‍ನಿಂದ ರಕ್ಷಿಸಲು ಮೃತ ಹೆಣ್ಣು ಮಕ್ಕಳ ಸಮಾಧಿಗೆ ಬೀಗ ಹಾಕಿದ ಪಾಕ್‌ ಪಾಲಕರು

    ರೇಪ್‍ನಿಂದ ರಕ್ಷಿಸಲು ಮೃತ ಹೆಣ್ಣು ಮಕ್ಕಳ ಸಮಾಧಿಗೆ ಬೀಗ ಹಾಕಿದ ಪಾಕ್‌ ಪಾಲಕರು

    ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಪೋಷಕರು (Parents) ತಮ್ಮ ಮೃತ ಹೆಣ್ಣುಮಕ್ಕಳ (Daughters) ಸಮಾಧಿಗೆ ಬೀಗ ಹಾಕುವ ಮೂಲಕ ಅತ್ಯಾಚಾರದಿಂದ ರಕ್ಷಿಸುತ್ತಿರುವ ಆಘಾತಕಾರಿ ವಿಷಯವೊಂದು ಬಹಿರಂಗವಾಗಿದೆ.

    ಪಾಕಿಸ್ತಾನದಲ್ಲಿ ಇತ್ತೀಚಿನ ದಿನಗಳಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲೂ ಸಮಾಧಿಗಳಲ್ಲಿರುವ ಮೃತ ಹೆಣ್ಣು ಮಕ್ಕಳ ದೇಹವನ್ನು ಹೊರತೆಗೆದು ಅತ್ಯಾಚಾರ ಎಸಗುತ್ತಿರುವ ವಿಷಯ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಪಾಲಕರು ತಮ್ಮ ಮೃತ ಹೆಣ್ಣು ಮಕ್ಕಳು ಅತ್ಯಾಚಾರಕ್ಕೊಳಗಾಗುವುದನ್ನು ತಡೆಯಲು ಅವರ ಸಮಾಧಿಗಳಿಗೆ ಬೀಗ ಹಾಕುತ್ತಿದ್ದಾರೆ.

    ಈ ಹಿಂದೆ ಅನೇಕ ಮೃತ ಮಹಿಳೆಯರ ದೇಹಗಳನ್ನು ಹಲವಾರು ಸಂದರ್ಭಗಳಲ್ಲಿ ಹೊರತೆಗೆಯಲಾಗಿದೆ. ಅಷ್ಟೇ ಅಲ್ಲದೇ ಅತ್ಯಾಚಾರವಾಗಿಸಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ತಿಳಿಸಿತ್ತು. ಅದಕ್ಕೆ ಪುಷ್ಠಿ ಎನ್ನುವಂತೆ 2011ರಲ್ಲಿ ಕರಾಚಿಯ ಉತ್ತರ ನಾಜಿಮಾಬಾದ್‍ನ ಮುಹಮ್ಮದ್ ರಿಜ್ವಾನ್ ಎಂಬಾತ ಸ್ತ್ರೀ ಶವಗಳ ಮೇಲೆ ಅತ್ಯಾಚಾರವೆಸಗಿರುವುದಾಗಿ ಒಪ್ಪಿಕೊಂಡಿದ್ದ. ಅದಾದ ಬಳಿಕ ಆತನನ್ನು ಬಂಧಿಸಲಾಯಿತು. ಇದನ್ನೂ ಓದಿ: ಧರ್ಮ, ಜಾತಿ ವಿಭಜನೆ ಬಿಜೆಪಿಗೆ ಲಾಭ, ಜನರಿಗಲ್ಲ: ಪ್ರಿಯಾಂಕಾ ಗಾಂಧಿ

    ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಪ್ರಕಾರ, ಶೇಕಡಾ 40ಕ್ಕಿಂತ ಹೆಚ್ಚು ಪಾಕಿಸ್ತಾನಿ ಮಹಿಳೆಯರು ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಲೈಂಗಿಕ ದೌರ್ಜನ್ಯವನ್ನು ಅನುಭವಿಸಿದ್ದಾರೆ. ಇದನ್ನೂ ಓದಿ: ನಾನು ಅಭಿಮನ್ಯು ಅಲ್ಲ, ಅರ್ಜುನ : ಸಿ.ಟಿ.ರವಿ

  • ತಂದೆ-ತಾಯಿ ಪರಸ್ಪರ ಬೇರಾಗಿದ್ದನ್ನು ಹೇಳಿಕೊಳ್ಳೋಕೆ ನನಗೆ 40 ವರ್ಷ ಬೇಕಾಯ್ತು: ಸ್ಮೃತಿ ಇರಾನಿ

    ತಂದೆ-ತಾಯಿ ಪರಸ್ಪರ ಬೇರಾಗಿದ್ದನ್ನು ಹೇಳಿಕೊಳ್ಳೋಕೆ ನನಗೆ 40 ವರ್ಷ ಬೇಕಾಯ್ತು: ಸ್ಮೃತಿ ಇರಾನಿ

    ನವದೆಹಲಿ: ಕೇಂದ್ರ ಸಚಿವೆ ಹಾಗೂ ನಟಿ ಸ್ಮೃತಿ ಇರಾನಿ (Smriti Irani) ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ಚಿಕ್ಕ ವಯಸ್ಸಿನಲ್ಲಿ ಅನುಭವಿಸಿದ ಕಷ್ಟ ಹಾಗೂ ತಂದೆ-ತಾಯಿ ಪರಸ್ಪರ ಬೇರ್ಪಟ್ಟ ಬಗ್ಗೆ ಮಾತನಾಡಿದ್ದಾರೆ.

    ಕೇಂದ್ರ ಸಚಿವೆ ಸ್ಮೃತಿ ಇರಾನಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ವೃತ್ತಿಪರ ಹಾಗೂ ವೈಯಕ್ತಿಕ ಜೀವನದ ಬಗ್ಗೆಯ ಹಲವು ಕಷ್ಟದ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಅದರಲ್ಲಿ ತಂದೆ- ತಾಯಿಯ ಪರಸ್ಪರ ಬೇರಾಗಿದ್ದನ್ನು ಕುರಿತು ಮಾತನಾಡಲು ನನಗೆ 40 ವರ್ಷಗಳು ಬೇಕಾಯಿತು ಎಂದು ಹೇಳಿಕೊಂಡಿದ್ದಾರೆ.

    ಸ್ಮೃತಿ ಇರಾನಿಯವರ ತಂದೆ ಪಂಜಾಬಿ ಖಾತ್ರಿಯಾಗಿದ್ದರೆ, ತಾಯಿ ಬಂಗಾಳಿ-ಬ್ರಾಹ್ಮಣರಾಗಿದ್ದರು. ಇಬ್ಬರೂ ತಮ್ಮ ಪೋಷಕರ ವಿರೋಧದ ನಡುವೆ ಮದುವೆ ಆಗಿದ್ದರು. ಅವರು ಮದುವೆಯಾದಾಗ ಅವರ ಬಳಿ ಕೇವಲ 150 ರೂ. ಇತ್ತು. ಅದಕ್ಕಾಗಿ ಅವರು ದನದ ಕೊಟ್ಟಿಗೆಯಲ್ಲಿನ ಅಟ್ಟದ ಮೇಲೆ ವಾಸಿಸುತ್ತಿದ್ದರು. ಆ ವೇಳೆ ನಾನು ಲೇಡಿ ಹಾರ್ಡಿಂಜ್ ಆಸ್ಪತ್ರೆಯಲ್ಲಿ ಜನಿಸಿದೆ. ನಂತರ ಅವರು ಆರ್ಥಿಕ ಸಮಸ್ಯೆಯಿಂದಾಗಿ ಗುರುಗ್ರಾಮಕ್ಕೆ ಸ್ಥಳಾಂತರಗೊಂಡರು. ಆದರೆ ಅಲ್ಲಿ ಕೆಲವೇ ಕೆಲವು ದಂಪತಿ ಆರ್ಥಿಕ ಮತ್ತು ಸಾಮಾಜಿಕ ಘರ್ಷಣೆಯ ನಿರ್ಬಂಧಗಳನ್ನು ಬದುಕಬಲ್ಲರು ಎಂದು ನೆನಪಿಸಿಕೊಂಡರು.

    ನನ್ನ ತಂದೆ-ತಾಯಿ ಬೇರ್ಪಟ್ಟಿದ್ದಾರೆ ಎಂದು ಹೇಳಲು ನನಗೆ 40 ವರ್ಷಗಳು ಬೇಕಾಯಿತು. ಆ ದಿನಗಳಲ್ಲಿ ನಮ್ಮನ್ನು ಕೀಳಾಗಿ ನೋಡಲಾಗುತ್ತಿತ್ತು. ಆದರೆ ಈಗ ಅವರು ಜೀವನವನ್ನು ಲೆಕ್ಕಾಚಾರ ಮಾಡುವುದು ಎಷ್ಟು ಕಠಿಣವಾಗಿದೆ ಎಂದು ನನಗೆ ತಿಳಿದಿದೆ ಎಂದರು. ಇದನ್ನೂ ಓದಿ: ಬೇಲೂರಿನ ರಥೋತ್ಸವದ ವೇಳೆ ಕುರಾನ್ ಪಠಣ ಮಾಡಬೇಕೆಂದು ಎಲ್ಲೂ ಇಲ್ಲ: ರಾಜ್ಯ ಪುರಾತತ್ವ ಇಲಾಖೆ

    ತಂದೆ ಜೇಬಿನಲ್ಲಿ ಕೇವಲ 100 ರೂ. ಇಟ್ಟುಕೊಂಡು ನಮ್ಮೆಲ್ಲರನ್ನೂ ನೋಡಿಕೊಂಡಿದ್ದರು. ನನ್ನ ತಂದೆ ಆರ್ಮಿ ಕ್ಲಬ್‍ನ ಹೊರಗೆ ಪುಸ್ತಕಗಳನ್ನು ಮಾರುತ್ತಿದ್ದರು. ನಾನು ಅವರೊಂದಿಗೆ ಕುಳಿತುಕೊಳ್ಳುತ್ತಿದ್ದೆ. ನನ್ನ ತಾಯಿ ಮನೆ ಮನೆಗೆ ಹೋಗಿ ಮಸಾಲೆಗಳನ್ನು ಮಾರಾಟ ಮಾಡುತ್ತಿದ್ದರು ಎಂದು ತಮ್ಮ ಕಷ್ಟದ ಬದುಕಿನ ಕುರಿತು ಮಾತನಾಡಿದರು. ಇದನ್ನೂ ಓದಿ: ನಮಗೇ ಬಹುಮತ, ನಮ್ಮದೇ ಸರ್ಕಾರ; ಕಾಂಗ್ರೆಸ್ ಸಾಮರ್ಥ್ಯ 60-70 ಸೀಟ್‌ಗಳಷ್ಟೇ – ಬಿಎಸ್‌ವೈ ವಿಶ್ವಾಸ