Tag: paratha

  • ಆರೋಗ್ಯಕರ ತುಂಬಾ ರುಚಿಯಾದ ಬೇಳೆ ಪರೋಟ ಮಾಡಿ ಸವಿಯಿರಿ

    ಆರೋಗ್ಯಕರ ತುಂಬಾ ರುಚಿಯಾದ ಬೇಳೆ ಪರೋಟ ಮಾಡಿ ಸವಿಯಿರಿ

    ರೋಗ್ಯಕರ, ರುಚಿಕರ ಮಾತ್ರವಲ್ಲದೇ ಪ್ರೋಟೀನ್‌ಯುಕ್ತ ಬೇಳೆಯ ಪರೋಟ ಪ್ರತಿಯೊಬ್ಬರೂ ಒಮ್ಮೆ ಟ್ರೈ ಮಾಡಲೇ ಬೇಕು. ಆಲೂ ಪರೋಟದಂತೆಯೇ ಮಾಡಲಾಗುವ ಈ ವಿಧಾನವನ್ನು ಕಲಿತುಕೊಂಡರೆ, ನಿಮ್ಮ ಹೆಲ್ದಿ ರೆಸಿಪಿ ಲಿಸ್ಟ್‌ಗಳ ಪಟ್ಟಿಯಲ್ಲಿ ಇದು ಕೂಡಾ ಉಳಿದುಕೊಳ್ಳುತ್ತದೆ. ರುಚಿಕರ ಪರೋಟವನ್ನು ಊಟಕ್ಕೆ ಬಡಿಸಲು ಪರ್ಫೆಕ್ಟ್ ಆಗಿದ್ದು, ಚಟ್ನಿ, ಮೊಸರಿನೊಂದಿಗೂ ಸವಿಯಬಹುದು.

    ಬೇಕಾಗುವ ಪದಾರ್ಥಗಳು:
    ಕಡಲೆ ಬೇಳೆ – 1 ಕಪ್(3 ಗಂಟೆ ನೆನೆಸಿರಬೇಕು)
    ಅರಿಶಿನ – ಕಾಲು ಟೀಸ್ಪೂನ್
    ಕಾಶ್ಮೀರಿ ಕೆಂಪು ಮೆಣಸಿನ ಪುಡಿ – ಅರ್ಧ ಟೀಸ್ಪೂನ್
    ಆಮ್ಚೂರ್/ಒಣ ಮಾವಿನ ಪುಡಿ – ಅರ್ಧ ಟೀಸ್ಪೂನ್
    ಗರಂ ಮಸಾಲಾ – ಅರ್ಧ ಟೀಸ್ಪೂನ್
    ಜೀರಿಗೆ ಪುಡಿ – ಅರ್ಧ ಟೀಸ್ಪೂನ್
    ಓಂಕಾಳು – ಕಾಲು ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
    ಗೋಧಿ ಹಿಟ್ಟು – 10 ಚಪಾತಿ ಗಾತ್ರದ ಉಂಡೆಗಳು
    ಎಣ್ಣೆ – ಹುರಿಯಲು

    ಮಾಡುವ ವಿಧಾನ:
    * ಮೊದಲಿಗೆ ದೊಡ್ಡ ಪಾತ್ರೆಯಲ್ಲಿ 3 ಗಂಟೆ ನೆನೆಸಿಟ್ಟ ಕಡಲೆ ಬೇಳೆಯನ್ನು ತೆಗೆದುಕೊಳ್ಳಿ.
    * ಅದನ್ನು 15 ನಿಮಿಷಗಳ ಕಾಲ ಕುದಿಸಿ ಬೇಯಿಸಿ. ಅಥವಾ ಪರ್ಯಾಯವಾಗಿ 2 ಕಪ್ ನೀರನ್ನು ಸೇರಿಸಿ 2 ಸೀಟಿಗಳಿಗೆ ಪ್ರೆಶರ್ ಕುಕರ್‌ನಲ್ಲಿ ಬೇಯಿಸಬಹುದು.
    * ಬಳಿಕ ನೀರನ್ನು ಸಂಪೂರ್ಣವಾಗಿ ಬಸಿಯಬೇಕು. ಇದಕ್ಕೆ 30 ನಿಮಿಷ ಬಸಿಯಲು ಬದಿಗಿರಿಸಿ.
    * ಈಗ ಬೇಯಿಸಿ, ಬಸಿದ ಕಡಲೆ ಬೆಳೆಯನ್ನು ಬ್ಲೆಂಡರ್‌ಗೆ ಹಾಕಿ, ನೀರನ್ನು ಸೇರಿಸದೇ ನುಣ್ಣಗೆ ಪುಡಿ ಮಾಡಿ.
    * ಈಗ ಕಡಲೆ ಬೇಳೆ ಪುಡಿಯನ್ನು ದೊಡ್ಡ ಪಾತ್ರೆಗೆ ವರ್ಗಾಯಿಸಿ, ಅದಕ್ಕೆ ಅರಿಶಿನ, ಮೆಣಸಿನ ಪುಡಿ, ಆಮ್ಚೂರ್ ಅಥವಾ ಒಣ ಮಾವಿನ ಪುಡಿ, ಗರಂ ಮಸಾಲಾ, ಜೀರಿಗೆ ಪುಡಿ, ಓಂಕಾಳು, ಉಪ್ಪು ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಮಿಕ್ಸ್ ಮಾಡಿ.
    * ಈಗ ಚಪಾತಿ ಮಾಡುವ ಗಾತ್ರದ ಗೋಧಿ ಹಿಟ್ಟಿನ ಉಂಡೆಯನ್ನು ತೆಗೆದುಕೊಂಡು, ಸ್ವಲ್ಪ ಲಟ್ಟಿಸಿ, ಅದರ ಮಧ್ಯ 2 ಟೀಸ್ಪೂನ್ ಕಡಲೆ ಬೇಳೆಯ ಮಿಶ್ರಣವನ್ನು ಹಾಕಿ, ಪರೋಟಾದಂತೆ ಸುತ್ತಿಕೊಳ್ಳಿ.
    * ಈಗ ಆ ಹಿಟ್ಟನ್ನು ಲಟ್ಟಿಸಿ, ಬಿಸಿ ತವಾದಲ್ಲಿ ಹಾಕಿ, ಬೇಯಿಸಿ.
    * ಅದಕ್ಕೆ 1 ಟೀಸ್ಪೂನ್ ಎಣ್ಣೆ ಸವರಿ, ಮತ್ತೆ ಮಗುಚಿ ಹಾಕಿ, ಎರಡೂ ಬದಿ ಕಾಯಿಸಿ.
    * ಈಗ ಆರೋಗ್ಯಕರ ಬೇಳೆ ಪರೋಟ ಸವಿಯಲು ಸಿದ್ಧವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ರುಚಿಯಾದ ಮೂಲಂಗಿ ಪರೋಟ ಮಾಡುವ ವಿಧಾನ ನಿಮಗಾಗಿ

    ರುಚಿಯಾದ ಮೂಲಂಗಿ ಪರೋಟ ಮಾಡುವ ವಿಧಾನ ನಿಮಗಾಗಿ

    ರೋಟ ಎಂದರೆ ಕೆಲವರು ಇಷ್ಟ ಪಟ್ಟು ಸವಿಯುತ್ತಾರೆ. ನಾವು ಇಂದು ಪರೋಟ ಪ್ರಿಯರಿಗಾಗಿ ಮೂಲಂಗಿ ಪರೋಟವನ್ನು ಮಾಡುವ ವಿಧಾನವನ್ನು ನಾವು ಹೇಳಲಿದ್ದೇವೆ. ಮೂಲಂಗಿಯೊಂದಿಗೆ ಮಿಶ್ರ ಮಾಡುವ ಮಸಾಲೆ ಪದಾರ್ಥಗಳು ಈ ಪರೋಟದ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಸತ್ವಪೂರ್ಣ ತಿಂಡಿಯನ್ನು ನಿಮಗೆ ಒದಗಿಸುತ್ತದೆ. ಹಾಗಿದ್ದರೆ ಅತಿ ಸುಲಭವಾಗಿ ತಯಾರಿಸಬಹುದಾದ ಈ ಪರೋಟ ರೆಸಿಪಿಯ ತಯಾರಿ ವಿಧಾನವನ್ನು ಕೆಳಗೆ ನಾವು ನೀಡಿದ್ದೇವೆ. ಇಂದೆ ಮಾಡಿ ಸವಿಯಿರಿ.

    ಬೇಕಾಗುವ ಸಾಮಗ್ರಿಗಳು:
    * ಮೂಲಂಗಿ – 2 ಕಪ್
    * ಈರುಳ್ಳಿ – 1
    * ಬೆಳ್ಳುಳ್ಳಿ ಪೇಸ್ಟ್ – 3 ಚಮಚ
    * ಜೀರಿಗೆ ಪುಡಿ – 1 ಚಮಚ
    * ಗರಮ್ ಮಸಾಲಾ -1 ಚಮಚ
    * ಕಾಳುಮೆಣಸು ಪುಡಿ- 1 ಚಮಚ
    * ದನಿಯಾ ಪುಡಿ – 3 ಚಮಚ
    * ರುಚಿಗೆ ತಕ್ಕಷ್ಟು ಉಪ್ಪು
    * ಗೋಧಿ ಹಿಟ್ಟು- 1 ಕಪ್
    * ಅಡುಗೆ ಎಣ್ಣೆ ಅಥವಾ ತುಪ್ಪ – ಸ್ವಲ್ಪ

    ಮಾಡುವ ವಿಧಾನ:
    * ಮೊದಲಿಗೆ ತುರಿದ ಮೂಲಂಗಿಯನ್ನು ನೀರಿನಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಿ.
    * ಈರುಳ್ಳಿ, ಬೆಳ್ಳುಳ್ಳಿ ಪೇಸ್ಟ್, ಜೀರಿಗೆ ಪುಡಿ, ಗರಮ್ ಮಸಾಲಾ, ಕಾಳುಮೆಣಸು ಪುಡಿ, ದಿನಿಯಾ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಅನ್ನು ಸೇರಿಸಿ ಬೇಯಿಸಿದ ಮೂಲಂಗಿಗೆ ಒಗ್ಗರಣೆ ಮಾಡಿ ಬೇಯಿಸಿಕೊಳ್ಳಿ. ಇದನ್ನೂ ಓದಿ:  ಕೆಲವೇ ಸಾಮಗ್ರಿಗಳಲ್ಲಿ ಮಾಡಿ ರುಚಿಯಾದ ಮೊಟ್ಟೆ ಪಲ್ಯ

    * ಗೋಧಿ ಹಿಟ್ಟನ್ನು ಸಾಕಷ್ಟು ನೀರು, ರುಚಿಗೆ ಬೇಕಾದಷ್ಟು ಉಪ್ಪು ಹಾಕಿ ಕಲಸಿ. ಅಗಲವಾಗಿ ಇದನ್ನು ಲಟ್ಟಿಸಿಕೊಳ್ಳಿ.
    * ಮಧ್ಯಕ್ಕೆ ಬೇಯಿಸಿದ ಮೂಲಂಗಿಯ ಮಿಶ್ರಣವನ್ನು ಇಡಿ.
    * ತದನಂತರ ಇದನ್ನು ಅರ್ಧಕ್ಕೆ ಮಡಚಿ. ಇದನ್ನು ತ್ರಿಭುಜಾಕಾರದಲ್ಲಿ ಮಡಚಿ ಚಪಾತಿಯನ್ನು ಪುನಃ ಲಟ್ಟಿಸಿಕೊಳ್ಳಿ.

    * ಬಾಣಲೆಗೆ ಒಂದು ಚಮಚದಷ್ಟು ಎಣ್ಣೆ ಅಥವಾ ತುಪ್ಪವನ್ನು ಹಾಕಿ. 10. ಪರೋಟಾವನ್ನು ಬಿಸಿಯಾಗಿರುವ ಪ್ಯಾನ್‍ಗೆ ಹಾಕಿ ಬೇಯಿಸಿ. ಬೇಕಾದಲ್ಲಿ ಪರೋಟಾದ ಸುತ್ತಲೂ ಎಣ್ಣೆಯನ್ನು ಹಾಕಿ ಚೆನ್ನಾಗಿ ಬೇಯುವವರೆಗೆ ಎರಡೂ ಬದಿ ಬಿಸಿ ಮಾಡಿಕೊಳ್ಳಿ.