Tag: Parashurama

  • ಪರಶುರಾಮ ಹೆಸರಲ್ಲಿ ಕಾಂಗ್ರೆಸ್, ಬಿಜೆಪಿ ಸಂಘರ್ಷ- ಎರಡೂ ಪಕ್ಷಗಳ ವಿರುದ್ಧ FIR

    ಪರಶುರಾಮ ಹೆಸರಲ್ಲಿ ಕಾಂಗ್ರೆಸ್, ಬಿಜೆಪಿ ಸಂಘರ್ಷ- ಎರಡೂ ಪಕ್ಷಗಳ ವಿರುದ್ಧ FIR

    ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಮತ್ತೊಂದು ರಾಜಕೀಯ ಫೈಟ್ ನಡೆಯುತ್ತಿದೆ. ಪರಶುರಾಮ ಮೂರ್ತಿಯ (Parashurama Statue) ಹೆಸರಿನಲ್ಲಿ ಕಾಂಗ್ರೆಸ್-ಬಿಜೆಪಿ ಜಟಾಪಟಿ ನಡೆಸುತ್ತಿದೆ.

    ಕಾರ್ಕಳ ತಾಲೂಕಿನ ಪರಶುರಾಮ ಥೀಂ ಪಾರ್ಕ್ ಒಟ್ಟು 14 ಕೋಟಿ ರೂಪಾಯಿಯ ಪ್ರಾಜೆಕ್ಟ್. ಸರ್ಕಾರದಿಂದ ಬಿಡುಗಡೆಯಾಗಿರುವುದು ಸುಮಾರು ಆರು ಕೋಟಿ ಚಿಲ್ಲರೆ. ಚುನಾವಣೆಯ ತರಾತುರಿಯಲ್ಲಿ ಬಿಜೆಪಿ (BJP) ಕಂಚು ಮತ್ತು ಫೈಬರ್ ಮಿಶ್ರಿತ ಮೂರ್ತಿಸ್ಥಾಪನೆ ಮಾಡಿ ಯೋಜನೆಯನ್ನು ಉದ್ಘಾಟಿಸಿತು. ಬಾಕಿ ಉಳಿದ ಕಾಮಗಾರಿಗೆ ಚಾಲನೆ ಸಿಗುತ್ತಿದ್ದಂತೆ ಕಾಂಗ್ರೆಸ್ (Congress) ಬಿಜೆಪಿ ನಡುವೆ ದೊಡ್ಡ ಜಟಾಪಟಿ ನಡೆಯುತ್ತಿದೆ.

    ಕಳೆದ ಎರಡು ತಿಂಗಳಿನಿಂದ ಈಚೆಗೆ ಈ ವಿಚಾರ ಸಾಮಾಜಿಕ ಜಾಲತಾಣ ಮತ್ತು ಬಹಿರಂಗವಾಗಿ ಚರ್ಚೆಯನ್ನು ಹುಟ್ಟು ಹಾಕಿದೆ. ಕಾಂಗ್ರೆಸ್ ಮೂರ್ತಿಯ ಸತ್ಯತೆಯ ಬಯಲಿಗೆ ಇಳಿದಿತ್ತು. ಇಷ್ಟಾಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಮೂರ್ತಿಯ ರಿಯಾಲಿಟಿ ಚೆಕ್ ಮಾಡಲು ಹೊರಟಿದ್ದಾರೆ. ಸುತ್ತಿಗೆಗಳ ಜೊತೆ ಬೆಟ್ಟ ಹತ್ತಿ ಕಂಚಿನ ಮೂರ್ತಿ ಎಂದು ಮನದಟ್ಟು ಮಾಡಲು ಸುತ್ತಿಗೆಯಿಂದ ಪರಶುರಾಮ ದೇವರ ಕಾಲಿಗೆ ಮನಬಂದಂತೆ ಬಡಿದಿದ್ದಾರೆ. ಕಾಂಗ್ರೆಸ್ ಮೇಲಿನ ಕೋಪವನ್ನು ಮೂರ್ತಿ ಮೇಲೆ ತೋರಿಸಿದ್ದಾರೆ.

    ಈ ಮೂಲಕ ಸರ್ಕಾರದ ಸ್ವತ್ತು ನಾಶದ ಜೊತೆ ಕೋಟ್ಯಂತರ ಹಿಂದೂಗಳ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆ ಎಂಬ ಹಿನ್ನೆಲೆಯಲ್ಲಿ ದಿವ್ಯಾ ನಾಯಕ್ ದೂರು ನೀಡಿದ್ದು, ಕಾರ್ಕಳ ನಗರ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಇದನ್ನೂ ಓದಿ: ಸಿಡಿಮದ್ದು ತಾಲೀಮು ವೇಳೆ ಅವಘಡ- ವ್ಯಕ್ತಿ ಆಸ್ಪತ್ರೆಗೆ ದಾಖಲು

    ಪರಶುರಾಮ ಮೂರ್ತಿಯ ವಿನ್ಯಾಸ ಬದಲಿಸುವ ಸ್ಪಷ್ಟನೆಯನ್ನು ಬಿಜೆಪಿ, ನಿರ್ಮಿತಿ ಕೇಂದ್ರ ನೀಡಿದೆ. ಸರ್ಕಾರದಿಂದ ಬರಬೇಕಾದ ಬಾಕಿ ಏಳು ಕೋಟಿ ರೂಪಾಯಿ ಬಿಡುಗಡೆಯಾದರೆ ಥೀಂ ಪಾರ್ಕ್ ಕೆಲಸ ಕಂಪ್ಲೀಟಾಗಿ ಬೈಲೂರು ಸುಂದರ ಪ್ರವಾಸೋಧ್ಯಮ ಕೇಂದ್ರವಾಗುತ್ತದೆ. ಕೆಟ್ಟ ರಾಜಕೀಯ ಮುಂದುವರೆದರೆ ಜನರ ತೆರಿಗೆ ದುಡ್ಡು ನೀರಲ್ಲಿಟ್ಟ ಹೋಮವಾಗುತ್ತದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಥೀಂ ಪಾರ್ಕ್‌ನಲ್ಲಿ ತಲೆ ಎತ್ತಿದ್ದ ಪರಶುರಾಮನ ಪ್ರತಿಮೆ ರಾತ್ರೋರಾತ್ರಿ ಮಾಯ!

    ಥೀಂ ಪಾರ್ಕ್‌ನಲ್ಲಿ ತಲೆ ಎತ್ತಿದ್ದ ಪರಶುರಾಮನ ಪ್ರತಿಮೆ ರಾತ್ರೋರಾತ್ರಿ ಮಾಯ!

    ಉಡುಪಿ: ಕಾರ್ಕಳ (Karkala) ತಾಲೂಕಿನ ಬೈಲೂರು ಉಮಿಕಲ್ ಬೆಟ್ಟದ ಮೇಲೆ ನಿರ್ಮಾಣವಾಗಿರುವ ಥೀಂ ಪಾರ್ಕ್‌ನಲ್ಲಿ (Shri Parashurama Theme Park) ತಲೆ ಎತ್ತಿದ್ದ ಪರಶುರಾಮನ ಪ್ರತಿಮೆ ರಾತ್ರೋರಾತ್ರಿ ಮಾಯವಾಗಿದೆ.

    ಹೌದು. ಬೆಟ್ಟದ ಮೇಲಿನಿಂದ ಪರಶುರಾಮನ ಪ್ರತಿಮೆ ಕಣ್ಮರೆಯಾಗಿದೆ. ಕಾರ್ಕಳ ಕಾಂಗ್ರೆಸ್ (Congress) ಪರಶುರಾಮನ ವಿಗ್ರಹ ನಕಲಿ ಎಂದಿದ್ದು, ಈ ಬಗ್ಗೆ ಮಾಜಿ ಸಚಿವ ಕಾರ್ಕಳ ಶಾಸಕ ಸುನಿಲ್ ಕುಮಾರ್ (Sunil Kumar) ಸ್ಪಷ್ಟನೆ ಕೊಡಬೇಕೆಂದು ಆಗ್ರಹಿಸಿದೆ.

    ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ನೂತನ ಥೀಂ ಪಾರ್ಕ್ ಲೋಕಾರ್ಪಣೆ ಮಾಡಿದ್ದರು. ವಿಧಾನ ಸಭಾ ಚುನಾವಣೆಗೆ ತಿಂಗಳು ಬಾಕಿ ಇರುವಾಗ ಥೀಂ ಪಾರ್ಕ್ ಉದ್ಘಾಟನೆ ಶಾಸಕರಿಗೆ ಭಾರೀ ಯಶಸ್ಸು ತಂದುಕೊಟ್ಟಿತ್ತು.  ಇದನ್ನೂ ಓದಿ: ತಮಿಳುನಾಡಿಗೆ ನಿತ್ಯ 3 ಸಾವಿರ ಕ್ಯೂಸೆಕ್ ನೀರು ಹರಿಸಿ: ಕರ್ನಾಟಕಕ್ಕೆ ಸೂಚನೆ

    ಉದ್ಘಾಟನೆಯಾದ ಬಳಿಕ ಸಿಡಿಲು ನಿರೋಧಕ ಅಳವಡಿಕೆ ಮತ್ತು ಇನ್ನಿತರ ಬಾಕಿ ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಥೀಂ ಪಾರ್ಕ್ ಬಂದ್ ಮಾಡಿರುವ ವಿಚಾರವಾಗಿ, ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದರು. ಪರಶುರಾಮನ ಮೂರ್ತಿ ನಕಲಿ ಎನ್ನುವ ಮೂಲಕ ಹೊಸ ವಿವಾದ ಆರಂಭವಾಗಿತ್ತು. ಇದೀಗ ಕಳೆದ ರಾತ್ರಿ ಬೆಟ್ಟದ ಮೇಲಿನ ಮೂರ್ತಿ ಮಾಯವಾಗಿದೆ.

    ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪರಿಶೀಲನೆ ಮಾಡಿದ್ದಾರೆ. ಅಧಿಕಾರಿಗಳು ಸ್ಪಷ್ಟವಾದ ಮಾಹಿತಿ ನೀಡದ ಹಿನ್ನಲೆಯಲ್ಲಿ ವಿಚಾರಣೆಗೆ ಆದೇಶ ನೀಡಿದ್ದರು. ಸದ್ಯ ಕೆಲವು ದಿನಗಳಿಂದ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಕಾಮಗಾರಿ ನಡೆಸುತ್ತಿರುವುದರಿಂದ ಅನುಮಾನ ಇನ್ನಷ್ಟು ಹೆಚ್ಚಾಗಿತ್ತು. ಮೂರ್ತಿಯನ್ನು ಪೂರ್ತಿಯಾಗಿ ತೆರವು ಮಾಡಿದ್ದು, ಅನುಮಾನಕ್ಕೆ ಕಾರಣವಾಗಿದೆ.

    ಇದೇ ವಿಚಾರವಾಗಿ ಕಾರ್ಕಳ ಕಾಂಗ್ರೆಸ್ ಸೋಮವಾರ ಪ್ರತಿಭಟನೆ ನಡೆಸಲಿದೆ. ನವೆಂಬರ್ ತಿಂಗಳ ಅಂತ್ಯಕ್ಕೆ ಕಂಚಿನ ಮೂರ್ತಿ ತಯಾರಿ ಪೂರ್ಣವಾಗಲಿದೆ. ಈ ನಡುವೆ ಪರಶುರಾಮ ಮೂರ್ತಿ ವಿಚಾರವಾಗಿ ಶಾಸಕರು ಸ್ಪಷ್ಟನೆ ನೀಡುವಂತೆ ಒತ್ತಾಯ ಕೇಳಿಬಂದಿದೆ.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]