Tag: Parashuram wagmore

  • ಗೌರಿ ಕೊಂದವನು ಪರಶುರಾಮ್ ವಾಗ್ಮೋರೆ- ಪ್ರಕರಣದ ಭೇದಿಸಲು ನೆರವಾಗಿದ್ದು 6 ಸೆಕೆಂಡಿನ ಫೂಟೇಜ್

    ಗೌರಿ ಕೊಂದವನು ಪರಶುರಾಮ್ ವಾಗ್ಮೋರೆ- ಪ್ರಕರಣದ ಭೇದಿಸಲು ನೆರವಾಗಿದ್ದು 6 ಸೆಕೆಂಡಿನ ಫೂಟೇಜ್

    – ಫೊರೆನ್ಸಿಕ್ ಗೇಟ್ ಅನಾಲೀಸಿಸ್ ನಲ್ಲಿ ಸಾಬೀತು

    ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ ಬುಧವಾರಕ್ಕೆ(ಸೆ.5)ಕ್ಕೆ ಬರೋಬ್ಬರಿ ಒಂದು ವರ್ಷ ಭರ್ತಿಯಾಗುತ್ತಿದ್ದು, ಈ ಹಂತದಲ್ಲಿ ಹತ್ಯೆ ತನಿಖೆಯಲ್ಲಿ ಮಹತ್ವದ ಯಶಸ್ಸು ಸಾಧಿಸಿದೆ. ಗೌರಿಯನ್ನು ಗುಂಡಿಟ್ಟು ಕೊಂದಿದ್ದು ಪರಶುರಾಮ್ ವಾಗ್ಮೋರೆ ಅಂತ ಎಸ್‍ಐಟಿ ಸಾಬೀತುಪಡಿಸಿದೆ.

    ಕೇವಲ 6 ಸೆಕೆಂಡ್‍ನ ಫೂಟೇಜ್ ಹಿಡಿದು ಎಸ್‍ಐಟಿ ಈ ಆರೋಪವನ್ನು ಸಾಬೀತು ಮಾಡಿದೆ. `ಫೊರೆನ್ಸಿಕ್ ಗೇಟ್ ಅನಾಲೀಸಿಸ್’ ಟೆಕ್ನಿಕ್ ಮೂಲಕ ತಾಂತ್ರಿಕವಾಗಿ ಈ ಆರೋಪ ಸಾಬೀತಾಗಿದೆ. ಇದರಲ್ಲಿ ಸಿಸಿಟಿವಿ ದೃಶ್ಯಾವಳಿ ಮತ್ತು ಕ್ರೈಮ್ ಸೀನ್ ಮರುಚಿತ್ರೀಕರಣದ ವಿಡಿಯೋ ಮ್ಯಾಚಾಗುತ್ತಿತ್ತು. ಹೆಲ್ಮೆಟ್ ಧರಿಸಿದ್ದರೂ ಬೈಕ್‍ನಲ್ಲಿ ಇದ್ದಿದ್ದು ಪರಶುರಾಮ್ ವಾಗ್ಮೋರೆ ಎಂಬುದು ಸ್ಪಷ್ಟವಾಗಿದ್ದು, ಗುಜರಾತ್‍ನ ವಿಧಿವಿಜ್ಞಾನ ಪ್ರಯೋಗಾಲಯ ಈ ವರದಿ ನೀಡಿದೆ. ಇದನ್ನೂ ಓದಿ: ಗೌರಿ ಹತ್ಯೆ ಪ್ರಕರಣದ ತನಿಖೆ ವೇಳೆ ಎಸ್‍ಐಟಿ ಪೊಲೀಸರಿಗೇ ಫುಲ್ ಶಾಕ್

    ಭಾರತದಲ್ಲಿ ಇದೇ ಮೊದಲ ಬಾರಿಗೆ ಫೊರೆನ್ಸಿಕ್ ಗೇಟ್ ಅನಾಲೀಸಿಸ್ ಟೆಕ್ನಿಕ್ ಬಳಕೆ ಮಾಡಲಾಗಿದೆ. ಈ ಟೆಕ್ನಿಕ್ ಮೂಲಕ ಆರೋಪಿ ಪರಶುರಾಮ್ ವಾಗ್ಮೋರೆ ಶೂಟ್ ಮಾಡಿರುವುದು ಸ್ಪಷ್ಟವಾಗಿದೆ. ದೇಶದಲ್ಲೇ ಮೊದಲ ಬಾರಿಗೆ ತಾಂತ್ರಿಕವಾಗಿ ಸಾಬೀತಾದ ಮೊದಲ ಪ್ರಕರಣ ಇದಾಗಿದ್ದು, ಲಂಡನ್‍ನಲ್ಲಿ 18 ವರ್ಷಗಳ ಹಿಂದೆ ಮೊದಲ ಬಾರಿಗೆ ಈ ಟೆಕ್ನಿಕ್ ಬಳಸಲಾಗಿತ್ತು. ಇದ್ರೊಂದಿಗೆ ಎಸ್‍ಐಟಿ ಇದೀಗ ಗೌರಿ ಹತ್ಯೆ ಪ್ರಕರಣದ ತನಿಖೆಯಲ್ಲಿ ಮಹತ್ವದ ಯಶಸ್ಸು ಸಾಧಿಸಿದೆ. ಇದನ್ನೂ ಓದಿ: ನೀನ್ ಹುಟ್ಟಿದ್ದೇ ಗೌರಿ ಹತ್ಯೆ ಮಾಡಲು, ನಿನ್ನ ಹೆಸರಲ್ಲಿದೆ ಧರ್ಮರಕ್ಷಣೆಯ ಸಂಕೇತ- ಪರಶುರಾಮ್ ವಾಗ್ಮೋರೆಗೆ ಮಾಡಿದ್ರಂತೆ ಬ್ರೈನ್‍ವಾಶ್..!

    ಫೊರೆನ್ಸಿಕ್ ಗೇಟ್ ಅನಾಲೀಸಿಸ್ ಎಂದರೇನು? ಪತ್ತೆ ಹಚ್ಚುವುದು ಹೇಗೆ?
    ಪರಶುರಾಮ್ ವಾಗ್ಮೋರೆ ಬಂಧನಕ್ಕೂ ಮೊದಲು ಸಿಸಿಟಿವಿ ಆಧರಿಸಿ ಆರೋಪಿ ಎತ್ತರದ ನಕಲಿ ವ್ಯಕ್ತಿಯೊಬ್ಬನನ್ನು ಕರೆದುಕೊಂಡು ಹೋಗಿ ಗೌರಿ ಹತ್ಯೆಯ ಅನಾಲಿಸಿಸ್ ಮಾಡಲಾಗಿತ್ತು. ಈ ವೇಳೆ ಆರೋಪಿಯ ಎತ್ತರ 5.2 ಅಡಿ ಎಂಬ ಸುಳಿವು ದೊರಕಿತ್ತು. ನಂತರ ಆತನ ಶೂ ಮತ್ತು ಹೆಲ್ಮೆಟನ್ನು ಹಾಕಿಕೊಂಡ್ರೆ 5.3ರಿಂದ 5.4ರಷ್ಟು ಆರೋಪಿಯ ಎತ್ತರ ಬರುತ್ತೆ ಅಂತ ಅನಾಲಿಸಿಸ್ ಮಾಡಲಾಗಿತ್ತು. ಇದನ್ನೂ ಓದಿ: ಗೌರಿ ಹತ್ಯೆ ನಡೆದಿದ್ದು ಹೇಗೆ? – ‘ಆ’ ಆರು ಗುಂಡುಗಳ ಕಥೆ ಇಲ್ಲಿದೆ

    ಬಳಿಕ ಬೇರೆ ಬೇರೆ ಸುಳಿವುಗಳ ಮೂಲಕ ಅಮೊಲ್ ಕಾಳೆ, ಸಜಿತ್ ಹಾಗೂ ಅಮಿತ್ ಮೊದಲಾದವರ ಹೇಳಿಕೆಗಳನ್ನು ಆಧರಿಸಿ ಪರಶುರಾಮ್ ವಾಗ್ಮೋರೆಯನ್ನು ಬಂಧಿಸುತ್ತಾರೆ. ಬಂಧನದ ಬಳಿಕ ಘಟನಾ ಸ್ಥಳಕ್ಕೆ ವಾಗ್ಮೊರೆಯನ್ನು ಕರೆದುಕೊಂಡು ಹೋಗಿ ಆತನಿಗೆ ಶೂ ಹಾಗೂ ಹೆಲ್ಮೆಟ್ ಹಾಕಿ, ಬೈಕ್ ಓಡಿಸುವ ಮೂಲಕ ಪ್ರಕರಣವನ್ನು ಮರುಸೃಷ್ಟಿ ಮಾಡಲಾಗಿತ್ತು. ಈ ಘಟನೆಯನ್ನು ಗೌರಿ ಮನೆಯಲ್ಲಿರುವ ಕೇವಲ ಎರಡು ಸಿಸಿಟಿವಿಯಲ್ಲಿ ಮಾತ್ರ ಸೆರೆಹಿಡಿಯಲಾಗಿತ್ತು. ಅದರಲ್ಲಿ ಆತ ಶೂ, ಹೆಲ್ಮೆಟ್ ತೆಗೆಯುವತಂಹ ರೀತಿಯನ್ನೂ ಸೆರೆಹಿಡಿಯಲಾಗಿತ್ತು. ಹೀಗಾಗಿ ಹೆಲ್ಮೆಟ್ ಇಲ್ಲದೆ, ಶೂ ಇಲ್ಲದೇ ಮರು ಸೃಷ್ಟಿ ಮಾಡಿದಾಗಲೂ ವಿಡಿಯೋ ಹೊಂದಾಣಿಕೆ ಕಂಡಿತ್ತು.

    ಈ ಮೂಲಕ ಪ್ರಕರಣದ ಘಟನೆಯನ್ನು ಮರುಸೃಷ್ಟಿ ಮಾಡಿ ಫೋರೆನ್ಸಿಕ್ ಪ್ರಯೋಗಾಲಯಕ್ಕೆ ಕೊಡಲಾಗಿತ್ತು. ಇಲ್ಲಿ ಪ್ರತಿಯೊಂದು ಚಲನವಲನವನ್ನು ಗಮನಿಸಲಾಯಿತು. ಈ ವೇಳೆ ವಾಗ್ಮೋರೆಯೇ ಹಂತಕ ಅನ್ನೋ ಸ್ಪಷ್ಟ ಚಿತ್ರಿಕರಣವನ್ನು ಗುಜರಾತಿನ ವಿಧಿವಿಜ್ಞಾಲಯ ವರದಿ ನೀಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=enMwHOKcDts

  • ವಿಜಯಪುರ ಜಿಲ್ಲಾ ನ್ಯಾಯಾಲಯಕ್ಕೆ ಪರಶುರಾಮ್ ವಾಗ್ಮೋರೆ ಹಾಜರು

    ವಿಜಯಪುರ ಜಿಲ್ಲಾ ನ್ಯಾಯಾಲಯಕ್ಕೆ ಪರಶುರಾಮ್ ವಾಗ್ಮೋರೆ ಹಾಜರು

    ವಿಜಯಪುರ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಪ್ರಮುಖ ಆರೋಪಿ ಪರಶುರಾಮ್ ವಾಗ್ಮೋರೆಯನ್ನು ವಿಜಯಪುರ ಜಿಲ್ಲಾ ನ್ಯಾಯಾಲಯಕ್ಕೆ ಇಂದು ಪೊಲೀಸ್ ಬಿಗಿ ಭದ್ರತೆಯಲ್ಲಿ ಹಾಜರು ಪಡಿಸಲಾಯಿತು.

    ಜಿಲ್ಲೆಯ ಸಿಂಧಗಿ ಪಟ್ಟಣದಲ್ಲಿ 1 ಜನವರಿ, 2012 ರಂದು ಪಾಕಿಸ್ತಾನ ಧ್ವಜ ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಶುರಾಮನನ್ನು ಜಿಲ್ಲಾ ನ್ಯಾಯಾಲಯಕ್ಕೆ ಕರೆತರಲಾಗಿತ್ತು. ಪರಶುರಾಮನನ್ನು ವಿಜಯಪುರ ಜಿಲ್ಲಾ ಒಂದನೇ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ಗೀತಾ ಕೆ ಬಿ ಅವರ ಮುಂದೆ ಹಾಜರು ಪಡಿಸಲಾಗಿತ್ತು. ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು ವಿಚಾರಣೆಯನ್ನ ಇದೇ ತಿಂಗಳ 16ಕ್ಕೆ ಮುಂದೂಡಿದರು.

    ಪಾಕಿಸ್ತಾನ ಧ್ವಜ ಹಾರಿಸಿದ ಪ್ರಕರಣದಲ್ಲಿ ಪರಶುರಾಮ್ ವಾಗ್ಮೋರೆ ಐದನೇ ಆರೋಪಿಯಾಗಿದ್ದು, ಸದ್ಯಕ್ಕೆ ಆತನನ್ನು ದರ್ಗಾ ಜೈಲಿಗೆ ರವಾನಿಸಲಾಗಿದೆ. ಪರಶುರಾಮ್ ವಾಗ್ಮೋರೆಯನ್ನು ಎಸ್‍ಐಟಿ ತಂಡ ಕರೆ ತಂದಿದ್ದು, ಇಂದು ಮತ್ತೆ ಬೆಂಗಳೂರಿಗೆ ಕರೆದೊಯ್ಯುವ ಸಾಧ್ಯತೆಗಳಿವೆ.

  • ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಮಾಜಿ ಸೇನಾಧಿಕಾರಿ ಕೈವಾಡ ಶಂಕೆ?

    ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಮಾಜಿ ಸೇನಾಧಿಕಾರಿ ಕೈವಾಡ ಶಂಕೆ?

    ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಐಟಿ ಅಧಿಕಾರಿಗಳು ಬಂಧಿತ ಆರೋಪಿಗಳ ವಿಚಾರಣೆ ಮತ್ತು ಹೆಚ್ಚಿನ ತನಿಖೆ ನಡೆಸುತ್ತದ್ದಾರೆ. ಗೌರಿ ಲಂಕೇಶ್ ಹತ್ಯೆಮಪ್ರಕರಣದಲ್ಲಿ ಮಾಜಿ ಸೇನಾಧಿಕಾರಿಯ ಕೈವಾಡ ಇರೋ ಬಗ್ಗೆ ವಿಶೇಷ ತನಿಖಾ ತಂಡ ಅನುಮಾನ ವ್ಯಕ್ತಪಡಿಸಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ.

    ಬಲಪಂಥೀಯ ಸಂಘಟನೆಯೊಂದರಲ್ಲಿ ಪ್ರಮುಖ ಹುದ್ದೆಯಲ್ಲಿರುವ ನಾಲ್ವರಲ್ಲಿ ಒಬ್ಬರು ನಿವೃತ್ತ ಕರ್ನಲ್. ಇವರೇ ಪ್ರಮುಖ ಆರೋಪಿಯಾಗಿರುವ ಅಮಿತ್ ಕಾಳೆಗೆ ಗೌರಿ ಹತ್ಯೆ ಮಾಡುವಂತೆ ಸೂಚನೆ ನೀಡಿದ್ದರು ಬಗ್ಗೆ ಶಂಕೆಗಳು ವ್ಯಕ್ತವಾಗಿವೆ ಎಂದು ಪಬ್ಲಿಕ್ ಟಿವಿಗೆ ಮೂಲಗಳು ತಿಳಿಸಿವೆ.

    ಸಂಚು ರೂಪಿಸಿದ ಬಳಿಕ ಹತ್ಯೆಗೆ ಬೇಕಾದ ತಯಾರಿಗಾಗಿ ಪ್ರತಿ ತಿಂಗಳು ಆ ಬಲಪಂಥೀಯ ಸಂಘಟನೆ ಕಾಳೆಗೆ 1 ಲಕ್ಷದ 25 ಸಾವಿರ ರೂಪಾಯಿಯನ್ನು ನೀಡಿದೆಯಂತೆ. ಇನ್ನು ಪ್ರಕರಣದಲ್ಲಿ ಇನ್ನೂ ಮೂರು ಮಂದಿಗಾಗಿ ಹುಡುಕಾಟ ನಡೆಯುತ್ತಿದ್ದು ಅವರು ತಪ್ಪಿಸಿಕೊಂಡು ಓಡಾಡಲು ಆ ಸಂಘಟನೆಯೇ ನೆರವು ನೀಡ್ತಿದೆ ಅಂತ ಎಸ್‍ಐಟಿ ಮೂಲಗಳು ತಿಳಿಸಿವೆ.

  • ನೀನ್ ಹುಟ್ಟಿದ್ದೇ ಗೌರಿ ಹತ್ಯೆ ಮಾಡಲು, ನಿನ್ನ ಹೆಸರಲ್ಲಿದೆ ಧರ್ಮರಕ್ಷಣೆಯ ಸಂಕೇತ- ಪರಶುರಾಮ್ ವಾಗ್ಮೋರೆಗೆ ಮಾಡಿದ್ರಂತೆ ಬ್ರೈನ್‍ವಾಶ್..!

    ನೀನ್ ಹುಟ್ಟಿದ್ದೇ ಗೌರಿ ಹತ್ಯೆ ಮಾಡಲು, ನಿನ್ನ ಹೆಸರಲ್ಲಿದೆ ಧರ್ಮರಕ್ಷಣೆಯ ಸಂಕೇತ- ಪರಶುರಾಮ್ ವಾಗ್ಮೋರೆಗೆ ಮಾಡಿದ್ರಂತೆ ಬ್ರೈನ್‍ವಾಶ್..!

    ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹಂತಕ ಆರೋಪಿ ಪರುಶುರಾಮ್ ವಾಗ್ಮೋರೆಯನ್ನ ತನಿಖಾಧಿಕಾರಿಗಳು ಹತ್ಯೆಯಾದ ಸ್ಥಳದಲ್ಲಿ ಮರುಸೃಷ್ಠಿ ಮಾಡಿಸಿದ್ದಾರೆ. ಗೌರಿ ಹತ್ಯೆ ಮಾಡಿದ ಸ್ಥಳದ ಮೃರುಸೃಷ್ಠಿಯ ವೇಳೆ ಹಂತಕ ವಾಗ್ಮೋರೆ ಹತ್ಯೆಯ ರಹಸ್ಯವನ್ನ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ. ಆರೋಪಿ ವಾಗ್ಮೋರೆ ಮರು ಸೃಷ್ಠಿಯ ವೇಳೆ ತನಿಖಾಧಿಕಾರಿಗಳ ಮುಂದೆ ಹೇಳಿರುವ ಸ್ಫೋಟಕ ಸತ್ಯವನ್ನ ಬಾಯ್ಬಿಟ್ಟಿದ್ದಾನೆ.

    ನೀನು ಕೃಷ್ಣನ ವಂಶಸ್ಥ, ಭಗವಂತನ ವಂಶಸ್ಥ, ನೀನು ಹುಟ್ಟಿರುವುದೇ ಧರ್ಮದ ವಿರುದ್ಧ ಮಾತನಾಡುವ ಗೌರಿ ಲಂಕೇಶ್ ಅಂತವರನ್ನ ಹತ್ಯೆ ಮಾಡಲು. ನಿನ್ನ ಹೆಸರಲ್ಲೇ ಧರ್ಮ ರಕ್ಷಣೆಯ ಸಂಕೇತವಿದೆ ಅಂತೆಲ್ಲಾ ಪರಶುರಾಮ್ ವಾಗ್ಮೋರೆಯನ್ನ ಆರೋಪಿ ಸುಜೀತ್ ಹಾಗೂ ಕಾಳೆ ವಾಗ್ಮೋರೆಯನ್ನ ಪ್ರೇರೇಪಿಸಿದ್ದರಂತೆ. ಅಷ್ಟೇ ಅಲ್ಲ ಗೌರಿ ಲಂಕೇಶ್ ಧರ್ಮದ ವಿರುದ್ಧ ಮಾತನಾಡಿರುವ ವಿಡಿಯೋಗಳನ್ನ ಯುಟ್ಯೂಬ್‍ಗಳಲ್ಲಿ ಪದೇ ಪೇದೆ ತೋರಿಸ್ತಿದ್ದರಂತೆ. ಇದೆನೆಲ್ಲ ನೋಡಿದ ಮೇಲೆ ಸ್ನೇಹಿತರು ಹೇಳುತ್ತಿರುವುದೇ ಸರಿ ಎನಿಸಿತು. ಹೀಗಾಗಿ ಗೌರಿಯನ್ನ ಹತ್ಯೆ ಮಾಡಿದ್ದಾಗಿ ಎಸ್‍ಐಟಿ ತನಿಖಾಧಿಕಾರಿಗಳ ಮುಂದೆ ಆರೋಪಿ ಪರಶುರಾಮ್ ವಾಗ್ಮೋರೆ ತಪ್ಪೊಪ್ಪಿಕೊಂಡಿದ್ದಾನೆಂದು ತಿಳಿದುಬಂದಿದೆ.

    ಇನ್ನು ಪ್ರಕರಣದ ಮರುಸೃಷ್ಠಿಯ ವೇಳೆ ಗೌರಿ ಹತ್ಯೆ ಹೇಗೆ ಮಾಡಿದ್ದು ಅನ್ನೋದರ ಬಗ್ಗೆ ಪರಶುರವಾಮ್ ವಾಗ್ಮೋರೆ ತನಿಖಾಧಿಕಾರಿಗಳ ಮುಂದೆ ಇಂಚಿಂಚು ಬಾಯ್ಬಿಟ್ಟಿದ್ದಾನೆ ಎಂಬ ಮಾಹಿತಿಗಳು ಲಭ್ಯವಾಗಿವೆ. ಗೌರಿ ಲಂಕೇಶ್ ಮನೆ ಗೇಟ್ ಓಪನ್ ಮಾಡುತ್ತಿದ್ದಂತೆ ಹಣೆಗೆ ಗುರಿ ಇಟ್ಟು ಶೂಟ್ ಮಾಡಿದೆ ಅದು ಯಶಸ್ವಿಯಾಗಲಿಲ್ಲ. ಆಗ ಗೇಟಿನಿಂದ ಒಳಗಡೆ ನುಗ್ಗಿ ಮನಸೋ ಇಚ್ಚೆ ಗುಂಡು ಹಾರಿಸಿದ್ದಾಗಿ ತನಿಖಾಧಿಕಾರಿಗಳ ಮುಂದೆ ಪರಶುರಾಮ್ ವಾಗ್ಮೋರೆ ತಪ್ಪೊಪ್ಪಿಕೊಂಡಿದ್ದಾನೆಂದು ಹೇಳಲಾಗ್ತಿದೆ.

  • ಪರಶುರಾಮ್ ವಾಗ್ಮೋರೆಯ ಆಸೆಯನ್ನು ಈಡೇರಿಸಿದ ಎಸ್‍ಐಟಿ ಅಧಿಕಾರಿಗಳು

    ಪರಶುರಾಮ್ ವಾಗ್ಮೋರೆಯ ಆಸೆಯನ್ನು ಈಡೇರಿಸಿದ ಎಸ್‍ಐಟಿ ಅಧಿಕಾರಿಗಳು

    ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಕೇಸ್‍ನಲ್ಲಿ ಆರೋಪಿಯಾಗಿರುವ ಪರುಶುರಾಮ್ ವಾಗ್ಮೋರೆಯ ಆಸೆಯನ್ನು ಎಸ್‍ಐಟಿ ಪೊಲೀಸರು ಈಡೇರಿಸಿದ್ದಾರೆ. ಇದರಿಂದ ವಾಗ್ಮೋರೆ ಫುಲ್ ಖುಷ್ ಆಗಿದ್ದಾನೆ. ಇದನ್ನೂ ಓದಿ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಮೇಜರ್ ಟ್ವಿಸ್ಟ್!

    ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಪೊಲೀಸ್ ವಶದಲ್ಲಿರುವ ಪರುಶುರಾಮ್ ವಾಗ್ಮೋರೆ, ಎಸ್‍ಐಟಿ ಪೊಲೀಸರ ತನಿಖೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸ್ತಿರೋದು ಎಸ್‍ಐಟಿ ಪೊಲೀಸರಿಗೆ ಖುಷಿ ತಂದಿದೆ ಅಂತೆ. ಇದರ ಬೆನ್ನಲ್ಲೆ ಪರುಶುರಾಮ್ ತನ್ನ ತಾಯಿಯನ್ನು ಒಮ್ಮೆ ನೋಡಬೇಕು ಅನ್ನೋ ಆಸೆಯನ್ನು ಎಸ್‍ಐಟಿ ಪೊಲೀಸರ ಮುಂದೆ ಹೇಳಿಕೊಂಡಿದ್ದನು. ಈ ಬೇಡಿಕೆಗೆ ಸ್ಪಂದಿಸಿದ ಎಸ್‍ಐಟಿ ಅಧಿಕಾರಿಗಳು ಭಾನುವಾರ ಬೆಂಗಳೂರಿನ ಸಿಐಡಿ ಕಚೇರಿಯಲ್ಲಿರುವ ಎಸ್‍ಐಟಿಯಲ್ಲಿ ಪರುಶುರಾಮ್ ತಾಯಿ ಮತ್ತು ತಂದೆಯನ್ನು ಭೇಟಿಗೆ ಅವಕಾಶ ಮಾಡಿಕೊಟ್ಟಿದ್ರು. ಇದನ್ನೂ ಓದಿ:  ಫೋಟೋ ತೆಗಿಸಿಕೊಂಡವರೆಲ್ಲಾ ಸಂಘಟನೆ ಕಾರ್ಯಕರ್ತರಲ್ಲ – ಗೌರಿ ಲಂಕೇಶ್ ಹತ್ಯೆಗೂ ಸಂಘಟನೆಗೂ ಸಂಬಂಧವಿಲ್ಲ: ಪ್ರಮೋದ್ ಮುತಾಲಿಕ್

    ತನ್ನ ತಾಯಿಯನ್ನು ನೋಡಿದ ಮಗ ಪರುಶುರಾಮ್, ನಾನು ತಪ್ಪು ಮಾಡಿಬಿಟ್ಟೆ ಅಂತಾ ತಾಯಿಯನ್ನು ತಬ್ಬಿ ಕಣ್ಣೀರು ಹಾಕಿದ್ದಾನೆ. ತಾಯಿ ಜಾನಕಿಬಾಯಿ ಕೂಡ ಮಗನನ್ನು ನೋಡಿ ಅಪ್ಪಿ ಮುದ್ದಾಡಿ ಖುಷಿಯಾದ್ರು. ಇದೇ ವೇಳೆ ಮಾತಾನಾಡಿದ ಪರುಶುರಾಮ್ ಪೋಷಕರು, ನನ್ನ ಮಗನನ್ನು ಪೊಲೀಸರು ತುಂಬಾ ಚನ್ನಾಗಿ ನೋಡಿಕೊಂಡಿದ್ದಾರೆ. ಅವನಿಗೆ ಹೊಡೆದಿಲ್ಲ. ನನ್ನ ಮಗ ನಿರ್ದೋಷಿಯಾಗಿ ಹೊರ ಬರ್ತಾನೆ ಅಂತಾ ಭರವಸೆ ವ್ಯಕ್ತಪಡಿಸಿದ್ರು. ಇದನ್ನೂ ಓದಿ: ಗೌರಿ ಲಂಕೇಶ್ ಹತ್ಯೆಗೆ ಹಂತಕರು ಇಟ್ಟಿದ್ದ ಹೆಸರು `ಅಮ್ಮ’ – ಇನ್ನಿಬ್ಬರು ಹತ್ಯೆಗೂ ಎರಡಕ್ಷರದ ಕೋಡ್‍ವರ್ಡ್

    ಸದ್ಯ ತಾಯಿ ತಂದೆಯನ್ನು ಭೇಟಿಯಾದ ಖುಷಿಯಲ್ಲಿರುವ ವಾಗ್ಮೋರೆ, ಎಸ್‍ಐಟಿ ಪೊಲೀಸರಿಗೆ ಇನ್ನಷ್ಟು ಮಹತ್ವದ ಮಾಹಿತಿಗಳನ್ನು ಹಂಚಿಕೊಳ್ಳಲಿದ್ದಾನೆ ಅನ್ನೋ ಭರವಸೆ ಎಸ್‍ಐಟಿ ಅಧಿಕಾರಿಗಳಲ್ಲಿ ಮೂಡಿದೆ. ಇದನ್ನೂ ಓದಿ: ಗೌರಿ ಲಂಕೇಶ್ ಹತ್ಯೆಯ ಆರೋಪಿಗಳನ್ನು ಹಿಡಿಯಲು ಸುಳಿವು ನೀಡಿತ್ತು ಕಾಯಿನ್ ಬಾಕ್ಸ್!

     

  • ವಾಗ್ಮೋರೆ ಓರ್ವ ಧರ್ಮ ರಕ್ಷಕ – ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕೊಂಡ ಶ್ರೀರಾಮ ಸೇನೆ ಸಂಚಾಲಕ

    ವಾಗ್ಮೋರೆ ಓರ್ವ ಧರ್ಮ ರಕ್ಷಕ – ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕೊಂಡ ಶ್ರೀರಾಮ ಸೇನೆ ಸಂಚಾಲಕ

    ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಸಿಂಧಗಿ ಪರಶುರಾಮ್ ವಾಗ್ಮೋರೆ ಓರ್ವ ಧರ್ಮ ರಕ್ಷಕ ಅಂತಾ ವಿಜಯಪುರ ಜಿಲ್ಲಾ ಶ್ರೀರಾಮ ಸೇನೆ ಸಂಚಾಲಕ ನೀಲಕಂಠ ಕಂದಗಲ್ ಫೇಸ್‍ಬುಕ್ ಪೇಜಿನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಗೌರಿ ಲಂಕೇಶ್ ಹತ್ಯೆಯ ಆರೋಪಿಗಳನ್ನು ಹಿಡಿಯಲು ಸುಳಿವು ನೀಡಿತ್ತು ಕಾಯಿನ್ ಬಾಕ್ಸ್!

    ಫೇಸ್‍ಬುಕ್ ನಲ್ಲಿ ವಾಗ್ಮೋರೆ ಓರ್ವ ಧರ್ಮ ರಕ್ಷಕ ಅಂತಾ ಬರೆದಿರು ಫೋಟೋವನ್ನು ಶ್ರೀರಾಮ ಸೇನೆಯ ಸಂಚಾಲಕ ಹಾಕಿಕೊಂಡಿದ್ದಾರೆ. ಮಾತೃ ಭೂಮಿಯ ರಕ್ಷಣೆಗಾಗಿ ಮುಡುಪಾಗಿದೆ ನನ್ನ ಪ್ರಾಣ. ಧರ್ಮಕ್ಕಾಗಿ ಪ್ರಾಣ ತ್ಯಾಗಕ್ಕೂ ಸಿದ್ಧ. ದೇಶದ್ರೋಹಿಗಳಿಗೆ ಹಾಗು ನಕ್ಸಲರಿಗೆ ಬೆಂಬಲಿಸುವವರನ್ನು ಕೊಲ್ಲುವುದು ತಪ್ಪೇ ಅಂತಾ ಬರೆಯಲಾಗಿದೆ. ಇದನ್ನೂ ಓದಿ: ವಾಗ್ಮೋರೆ ಮೇಲೆ ಎಸ್‍ಐಟಿಗೆ ಅನುಮಾನ ಮೂಡಿದ್ದು ಹೇಗೆ?

    ಪರಶುರಾಮ್ ಬಂಧನವಾದಾಗ ಆತನಿಗೂ ಸೇನೆಗೂ ಯಾವುದೇ ಸಂಬಂಧವಿಲ್ಲ ಎಂದು ಶ್ರೀರಾಮ ಸೇನಾ ಸಂಚಾಲಕ ಪ್ರಮೋದ ಮುತಾಲಿಕ್ ಹೇಳಿದ್ದರು. ಈ ಎಲ್ಲ ಬೆಳವಣಿಗೆ ನಡುವೆ ನೀಲಕಂಠರ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ಗೌರಿ ಹತ್ಯೆ ನಡೆದಿದ್ದು ಹೇಗೆ? – ‘ಆ’ ಆರು ಗುಂಡುಗಳ ಕಥೆ ಇಲ್ಲಿದೆ

     ಇದನ್ನೂ ಓದಿ: ಗೌರಿ ಹತ್ಯೆ ಕೇಸ್: ಆರೋಪಿ ವಾಗ್ಮೋರೆಯಿಂದ ಎಸ್‍ಐಟಿ ತನಿಖೆ ದಾರಿ ತಪ್ಪಿಸೋ ಯತ್ನ!

    https://www.youtube.com/watch?v=AIwNtdKGVGs

    https://www.youtube.com/watch?v=Muzh1bCrCp8

  • ಗೌರಿ ಲಂಕೇಶ್ ಹತ್ಯೆಯ ಆರೋಪಿಗಳನ್ನು ಹಿಡಿಯಲು ಸುಳಿವು ನೀಡಿತ್ತು ಕಾಯಿನ್ ಬಾಕ್ಸ್!

    ಗೌರಿ ಲಂಕೇಶ್ ಹತ್ಯೆಯ ಆರೋಪಿಗಳನ್ನು ಹಿಡಿಯಲು ಸುಳಿವು ನೀಡಿತ್ತು ಕಾಯಿನ್ ಬಾಕ್ಸ್!

    ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಎರಡು ತಿಂಗಳ ಹಿಂದೆ ನವೀನ್ ಅಲಿಯಾಸ್ ಹೊಟ್ಟೆ ಮಂಜ ಎಂಬಾತನ್ನು ಬಂಧಿಸಲು ಸುಳಿವು ನೀಡಿದ್ದು ಒಂದು ಕಾಯಿನ್ ಬಾಕ್ಸ್. ನವೀನ್ ಗೆ ಪದೇ ಪದೇ ಕಾಯಿನ್ ಬೂತ್ ನಿಂದ ಕಾಲ್ ಬರುತ್ತಿದ್ದ ಆಧಾರದ ಮೇಲೆ ಕಾಯಿನ್ ಬೂತ್ ಟ್ರ್ಯಾಕ್ ಮಾಡಿ, ಆರೋಪಿಗಳ ಬಗ್ಗೆ ಎಸ್‍ಐಟಿ ಅಧಿಕಾರಿಗಳು ಸುಳಿವು ಪಡೆದುಕೊಂಡಿದ್ದಾರೆ.

    ನವೀನ್ ಗೆ ಗನ್ ನೀಡಿದ್ದಾನೆ ಆರೋಪದ ಮೇಲೆ ಎಸ್‍ಐಟಿ ಅಧಿಕಾರಿಗಳು ಕಾಯಿನ್ ಬೂತ್ ಟ್ರ್ಯಾಕ್ ಮಾಡಿದ್ದಾರೆ. ಇದರಿಂದ ನವೀನ್ ಗೆ ಕರೆ ಮಾಡುತ್ತಿದ್ದ ಪ್ರವೀಣ್, ಅಮೋಲ್, ಅಮಿತ್, ಹಾಗೂ ಮನೋಹರ್ ಎಂಬ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಇದನ್ನೂ ಓದಿ: ವಾಗ್ಮೋರೆ ಮೇಲೆ ಎಸ್‍ಐಟಿಗೆ ಅನುಮಾನ ಮೂಡಿದ್ದು ಹೇಗೆ?

    ವಿಜಯಪುರ, ಬೆಳಗಾವಿ, ಸೇರಿದಂತೆ ಹಲವು ಕಡೆಗಳಿಂದ ಆರೋಪಿಗಳು ಕಾಯಿನ್ ಬೂತ್ ಗಳಿಂದ ನವೀನ್‍ಗೆ ಕರೆ ಮಾಡುತ್ತಿದ್ದರು. ಹಲವು ಬಾರಿ ನವೀನ್ ಕೂಡ ಕಾಯಿನ್ ಬೂತ್ ಗೆ ವಾಪಸ್ ಕರೆ ಮಾಡುತ್ತಿದ್ದನು. ಈ ವೇಳೆ ಕೇವಲ ಕೊಡ್ ವರ್ಡ್ ನಲ್ಲಿ ಸಂಜೆ ಸಿಗು, ನಾಳೆ ಸಿಗು, ಇಂತಹ ಜಾಗದಲ್ಲಿ ಸಿಗು ಎಂದು ಮಾತನಾಡುತ್ತಿದ್ದರು ಎನ್ನುವ ಮಾಹಿತಿಯನ್ನು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಗೌರಿ ಹತ್ಯೆ ನಡೆದಿದ್ದು ಹೇಗೆ? – ‘ಆ’ ಆರು ಗುಂಡುಗಳ ಕಥೆ ಇಲ್ಲಿದೆ

    ಎಸ್‍ಐಟಿ ಅಧಿಕಾರಿಗಳು ವಿಚಾರಣೆಯ ಬಳಿಕ ಬಂಧಿತ ಆರೋಪಿಗಳು ಸ್ಫೋಟಕ ಮಾಹಿತಿಯನ್ನು ಹೊರ ಹಾಕಿದ್ದಾರೆ. ಗೌರಿ ಹತ್ಯೆ ಬಳಿಕ ಮೂರು ತಿಂಗಳಲ್ಲಿ ಅಂದ್ರೆ ವಿಧಾನ ಸಭೆ ಚುನಾವಣೆಗೂ ಮುನ್ನವೇ ವಿಚಾರವಾದಿ ಕೆ.ಎಸ್ ಭಗವಾನ್ ಅವರ ಹತ್ಯೆಗೆ ಸಂಚು ರೂಪಿಸಿದ್ದರು. ಆದರೆ ನವೀನ್ ಬಂಧನದ ನಂತರ ಸಂಪರ್ಕ ಸಾಧ್ಯವಾಗದೇ ಪ್ಲಾನ್ ಕೈಬಿಟ್ಟಿರುವುದಾಗಿ ತಿಳಿದು ಬಂದಿದೆ. ಇದನ್ನೂ ಓದಿ: ಗೌರಿ ಹತ್ಯೆ ಕೇಸ್: ಆರೋಪಿ ವಾಗ್ಮೋರೆಯಿಂದ ಎಸ್‍ಐಟಿ ತನಿಖೆ ದಾರಿ ತಪ್ಪಿಸೋ ಯತ್ನ!

    https://www.youtube.com/watch?v=Ov8Gc1Ih8tw

  • ವಾಗ್ಮೋರೆ ಮೇಲೆ ಎಸ್‍ಐಟಿಗೆ ಅನುಮಾನ ಮೂಡಿದ್ದು ಹೇಗೆ?

    ವಾಗ್ಮೋರೆ ಮೇಲೆ ಎಸ್‍ಐಟಿಗೆ ಅನುಮಾನ ಮೂಡಿದ್ದು ಹೇಗೆ?

    ಬೆಂಗಳೂರು: ಸತತ 9 ತಿಂಗಳ ಸುದೀರ್ಘ ತನಿಖೆಯ ಬಳಿಕ ಎಸ್‍ಐಟಿ ಗೌರಿ ಲಂಕೇಶ್‍ವರ ಹತ್ಯೆಯ ಶಂಕಿತ ಆರೋಪಿ ಪರಶುರಾಮ್ ವಾಗ್ಮೋರೆಯನ್ನು ಬಂಧಿಸಿದ್ದಾರೆ. ಆದ್ರೆ ಪರಶುರಾಮ್ ಸಿಕ್ಕಿದ್ದು ಹೇಗೆ ಎಂಬುದರ ಬಗ್ಗೆ ಮಾಹಿತಿಗಳು ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭಿಸಿವೆ.

    ಮಹಾರಾಷ್ಟ್ರದಲ್ಲಿ ಅಮೋಲ್ ಕಾಳೆಯ ಬಂಧನವಾದಾಗ ಆತನ ಬಳಿ ಡೈರಿಯೊಂದು ಸಿಕ್ಕಿತ್ತು. ಆ ಡೈರಿಯಲ್ಲಿ ನೂರಕ್ಕೂ ಹೆಚ್ಚು ಜನರ ಹೆಸರುಗಳನ್ನು ಬರೆಯಲಾಗಿತ್ತು. ಎಸ್‍ಐಟಿ ಪ್ರತಿಯೊಂದು ಹೆಸರಿನ ಹಿಂದೆ ಬಿದ್ದು ಎಲ್ಲಿಯೂ ಮಾಹಿತಿ ಸೋರಿಕೆಯಾಗದಂತೆ ರಹಸ್ಯವಾಗಿ ತನಿಖೆ ನಡೆಸಿತ್ತು. ಆ ನೂರು ಹೆಸರುಗಳಲ್ಲಿ ಪರಶುರಾಮ್ ವಾಗ್ಮೋರೆ ಹೆಸರು ಎಸ್‍ಐಟಿ ಅಧಿಕಾರಿಗಳನ್ನು ಸೆಳೆದಿತ್ತು.

    ವಾಗ್ಮೋರೆಯ ಕಾಲ್ ಡಿಟೇಲ್ಸ್ ಪರಶೀಲಿಸಿದಾಗ ಗೌರಿ ಹತ್ಯೆಗೂ ಮುನ್ನ ಮತ್ತು ನಂತರದ ಒಂದು ತಿಂಗಳ ಆತನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಈ ಹಿಂದೆ ಸಿಂಧಗಿಯಲ್ಲಿ ನಡೆದ ಪಾಕಿಸ್ತಾನ ಧ್ವಜಕ್ಕೆ ಸಂಬಂಧಪಟ್ಟ ವಿಚಾರದಲ್ಲಿ ಇದೇ ಪರಶುರಾಮ್ ಹೈ ಡ್ರಾಮಾ ನಡೆಸಿದ್ದನು. ಈ ಎಲ್ಲ ವಿಚಾರಗಳನ್ನು ಗಮನದಲ್ಲಿಟ್ಟಕೊಂಡು ಭಾನುವಾರ ಪರಶುರಾಮ್ ವಾಗ್ಮೋರೆಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಗೌರಿ ಹತ್ಯೆಯ ವೃತ್ತಾಂತವನ್ನು ಇಂಚಿಂಚಾಗಿ ಹೊರ ಹಾಕಿದ್ದಾನೆ ಎಂದು ಎಸ್‍ಐಟಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಗೌರಿ ಹತ್ಯೆ ನಡೆದಿದ್ದು ಹೇಗೆ? – ‘ಆ’ ಆರು ಗುಂಡುಗಳ ಕಥೆ ಇಲ್ಲಿದೆ

    ಯಾರು ಈ ಪರಶುರಾಮ್ ವಾಗ್ಮೋರೆ?: ವಿಜಯಪುರ ಜಿಲ್ಲೆಯ ಸಿಂಧಗಿ ಪಟ್ಟಣದ ನಿವಾಸಿ ಪರಶುರಾಮ್ ವಾಗ್ಮೋರೆ. ವಯಸ್ಸು 26, ಕಟ್ಟಾ ಹಿಂದೂವಾದಿಯಾಗಿದ್ದು, ಶ್ರೀರಾಮಸೇನೆ, ಹಿಂದೂ ಜಾಗೃತಿ ವೇದಿಕೆಯಲ್ಲೂ ಗುರುತಿಸಿಕೊಂಡಿದ್ದನು. ಈ ಹಿಂದೆ ಸಿಂಧಗಿ ತಹಶೀಲ್ದಾರ್ ಕಚೇರಿ ಬಳಿ ಪಾಕ್ ಧ್ವಜ ಹಾರಿಸಿದ ಪ್ರಕರಣದಲ್ಲಿ ಪರಶುರಾಮ್ ಹೆಸರು ಕೇಳಿ ಬಂದಿತ್ತು. ಪರಶುರಾಮ್ ಒಬ್ಬ ಶಾರ್ಪ್ ಶೂಟರ್ ಆಗಿದ್ದು, ಅಮೋಲ್ ಕಾಳೆ, ಮನೋಹರ್ ಯವಡೆಗೆ ಎಂಬವರಿಗೆ ತರಬೇತಿ ನೀಡಿದ್ದ ಎನ್ನುವ ಮಾಹಿತಿ ಈಗ ಲಭ್ಯವಾಗಿದೆ. ಸಂಬಂಧಿಕರ ಅಂಗಡಿಯಲ್ಲಿ ಪರಶುರಾಮ್ ಕೆಲಸ ಮಾಡಿಕೊಂಡಿದ್ದನು.

    ನನ್ನ ಮಗ ಯಾವುದೇ ತಪ್ಪು ಮಾಡಲಿಲ್ಲ. ವಿನಾಕಾರಣ ನನ್ನ ಮಗನನ್ನು ಬಂಧಿಸಿದ್ದಾರೆ. ಶ್ರೀರಾಮ ಸೇನೆ ಮತ್ತು ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡಿದಕ್ಕೆ ಈ ರೀತಿ ಮಾಡಿದ್ದಾರೆ. ನಾವು ಕೂಲಿ ನಾಲಿ ಮಾಡಿ ಬದುಕು ಜನ. ನನ್ನ ಮಗ ಕೊಲೆ ಮಾಡುವಂತಹ ವ್ಯಕ್ತಿಯಲ್ಲ. ಭಾನುವಾರ ಬೆಳಿಗ್ಗೆ 9 ಗಂಟೆಗೆ ಎಸ್ ಐಟಿ ತಂಡ ಹಾಗೂ ಕೆಲ ಸ್ಥಳೀಯ ಪೊಲೀಸ್ ಮನೆಗೆ ಬಂದು ಪಾಕಿಸ್ತಾನ ಧ್ವಜ ಹಾರಿಸಿದ ಬಗ್ಗೆ ವಿಚಾರಣೆಗೆ ಕರೆದೊಯ್ಯುವುದಾಗಿ ತಮ್ಮ ಮಗನನ್ನು ಕರೆದುಕೊಂಡು ಹೋದರು. ಒಂದು ವೇಳೆ ಬಿಡುಗಡೆ ಮಾಡದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅರೋಪಿ ಪರಶುರಾಮ ವಾಗ್ಮೋರೆ ಪೋಷಕರು ಹೇಳಿದ್ದಾರೆ. ಇದನ್ನೂ ಓದಿ: ಗೌರಿ ಹತ್ಯೆ ಕೇಸ್: ಆರೋಪಿ ವಾಗ್ಮೋರೆಯಿಂದ ಎಸ್‍ಐಟಿ ತನಿಖೆ ದಾರಿ ತಪ್ಪಿಸೋ ಯತ್ನ!

    https://www.youtube.com/watch?v=Ov8Gc1Ih8tw

  • ಗೌರಿ ಹತ್ಯೆ ನಡೆದಿದ್ದು ಹೇಗೆ? – ‘ಆ’ ಆರು ಗುಂಡುಗಳ ಕಥೆ ಇಲ್ಲಿದೆ

    ಗೌರಿ ಹತ್ಯೆ ನಡೆದಿದ್ದು ಹೇಗೆ? – ‘ಆ’ ಆರು ಗುಂಡುಗಳ ಕಥೆ ಇಲ್ಲಿದೆ

    ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಪ್ರಕರಣಕ್ಕೆ 9 ತಿಂಗಳ ಬಳಿಕ ರೋಚತೆ ಸಿಕ್ಕಿದ್ದು, ಹಂತಕ ಆರೋಪಿ ಪರಶುರಾಮ್ ವಾಗ್ಮೋರೆ ಎಂಬಾತನನ್ನು ಬಂಧಿಸುವಲ್ಲಿ ಎಸ್‍ಐಟಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಹಾಗಾದ್ರೆ ಸೆಪ್ಟಂಬರ್ 5ರ ರಾತ್ರಿ ಗೌರಿ ಲಂಕೇಶ್ ಹತ್ಯೆ ನಡೆದಿದ್ದು ಹೇಗೆ ಎಂಬುದರ ಬಗ್ಗೆ ರೋಚಕ ಮಾಹಿತಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭಿಸಿದೆ. ಅಂದು ಹತ್ಯೆಯ ದಿನ ಹಂತಕ ಬರೋಬ್ಬರಿ ಆರು ಗುಂಡುಗಳನ್ನು ಹಾರಿಸಿದ್ದ. ಅವುಗಳಲ್ಲಿ ನಾಲ್ಕು ಗೌರಿ ದೇಹ ಸೇರಿದ್ದು, ಎರಡು ಮಿಸ್ ಆಗಿ ಗೋಡೆಗೆ ತಗುಲಿದ್ದವು.

    ಹತ್ಯೆಗೆ ಪಾತಕಿಗಳ ಪ್ಲಾನ್ ಹೇಗಿತ್ತು?
    ಗೌರಿ ಲಂಕೇಶ್ ಅವರ ಮೇಲೆ ಗುಂಡು ಹಾರಿಸೋದು ಕನ್ಫರ್ಮ್ ಆದರೆ ನೇರವಾಗಿ ತಲೆಗೆ ಶೂಟ್ ಮಾಡಬೇಕು. ಅರ್ಧ ಜೀವ ಮಾಡಿ ಹಿಂದಕ್ಕೆ ಮರಳಿ ಬರಬಾರದು. ಗುಂಡು ಹಾರಿಸಿದ ಬಳಿಕ ಜೀವ ಹೋಗಿದೆಯೋ ಅಥವಾ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಂಡು ಬರಬೇಕೆಂದು ಪರಶುರಾಮ್ ಗೆ ಸೂಚಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ.

     

    ಹತ್ಯೆಯ ಕ್ಷಣದಲ್ಲಿ ಏನೇನಾಯ್ತು?
    ಸೆಪ್ಟಂಬರ್ 5ರಂದು ಕಚೇರಿಯಿಂದ ಮನೆಗೆ ಬಂದ ಗೌರಿ ಅವರು ಕಾರ್ ನಿಲ್ಲಿಸಿ ಗೇಟ್ ತೆಗೆದು ಒಳಗಡೆ ಹೊರಟ್ಟಿದ್ದರು. ಈ ವೇಳೆ ಗೌರಿ ತಲೆಗೆ ಹಿಂಬದಿಯಿಂದ ಫೈರ್ ಮಾಡಲು ಹಂತಕ ರೆಡಿಯಾಗಿದ್ದನು. ಹಿಂದೆ ಯಾರೋ ಬಂದಿದ್ದಾರೆಂದು ಗೊತ್ತಾದ ಕೂಡಲೇ ಗೌರಿ ಹಿಂದಿರುಗಿ ನೋಡಿದಾಗ ಹಂತಕನನ್ನು ನೋಡಿದ್ದಾರೆ. ಕೂಡಲೇ ಯಾರು? ಯಾರು ನೀನು? ಅಂತ ಗಾಬರಿಯಿಂದ ಗೌರಿ ಅವರು ಪ್ರಶ್ನೆ ಮಾಡಿದ್ದಾರೆ. ಪ್ರಶ್ನೆಗೆ ತಬ್ಬಿಬ್ಬಾದ ಹಂತಕ ತಕ್ಷಣ ಕೈಯಲ್ಲಿದ್ದ ರಿವಾಲ್ವರ್ ಮೂಲಕ ತಲೆಗೆ ಗುಂಡು ಹೊಡೆಯಲು ಫೈರ್ ಮಾಡಿದ್ದ, ಆದ್ರೆ ಅದು ಗುರಿ ತಪ್ಪಿ ಗೋಡೆಗೆ ಸಿಡಿದಿತ್ತು.

    ಗೌರಿ ತಪ್ಪಿಸಿಕೊಳ್ತಾರೆ ಅಂತ ಗೊತ್ತಾದಾಗ ಹಂತಕ, ಕ್ಷಣಾರ್ಧದಲ್ಲಿ ಟಾರ್ಗೆಟ್ ಚೇಂಜ್ ಮಾಡಿ, ತಲೆಗೆ ಗುಂಡು ಹೊಡೆಯುವ ಬದಲು, ಹೊಟ್ಟೆ ಮತ್ತು ಎದೆಯ ಭಾಗಕ್ಕೆ ನಾಲ್ಕು ಗುಂಡು ಹೊಡೆದಿದ್ದಾನೆ. ಕೊನೆಯ ಗುಂಡು ಮತ್ತೆ ಗುರಿ ತಪ್ಪಿತ್ತು. ಅಷ್ಟರಲ್ಲಿ ಪತ್ರಕರ್ತೆ ಗೌರಿಯವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಹಂತಕ ಸಿಡಿಸಿದ ಮೂರನೇ ಗುಂಡು ನೇರವಾಗಿ ಎದೆಗೆ ನುಗ್ಗಿ ಹೃದಯವನ್ನೇ ಹೊಕ್ಕಿತ್ತು.

    ಪ್ಲಾನ್ ಹೇಗಿತ್ತು?: ಪರಶುರಾಮ್ ಕೊಲೆ ಮಾಡೋದಕ್ಕೆ ಎರಡು ತಿಂಗಳು ಮೊದಲು ಹತ್ಯೆ ನಡೆಸುವ ಬಗ್ಗೆ ಅಭ್ಯಾಸ ಮಾಡಿದ್ದನು. ಯಾವ ರೀತಿ ಕೊಲೆ ಮಾಡ್ಬೇಕು ಅನ್ನೋ ಬಗ್ಗೆ ಅಮೋಲ್ ಕಾಳೆ ತರಬೇತಿ ನೀಡಿದ್ದ. ಬೆಳಗಾವಿ, ಪುಣೆಯಲ್ಲಿ ಎರಡು ತಿಂಗಳ ಟ್ರೈನಿಂಗ್ ಪಡೆದ ಬಳಿಕ ಗೌರಿ ಹತ್ಯೆಯ ದಿನ ಹತ್ತಿರವಾಗಿತ್ತು. ಪರಶುರಾಮ್ ಸೆಪ್ಟೆಂಬರ್ 4 ರಂದೇ ಕೊಲ್ಲುವ ನಿರ್ಧಾರದಿಂದ ಬೆಂಗಳೂರಿಗೆ ಬಂದಿದ್ದನು. ಮೊದಲ ಬಾರಿಗೆ ಬೆಂಗಳೂರಿಗೆ ಬಂದವನೇ ನವೀನ್ ಜೊತೆ ಸೇರಿ ಗೌರಿ ಮನೆಯ ಸುತ್ತ ಸುಳಿದಾಡಿದ್ದಾನೆ.

    ಹಂತಕರು ಸೆಪ್ಟಂಬರ್ 4ರಂದೇ ಗೌರಿಯವರನ್ನು ಕೊಲ್ಲಲು ಡೇಟ್ ಫಿಕ್ಸ್ ಮಾಡಿದ್ದರು. ಆದರೆ, ಸರಿಯಾದ ಸಮಯ, ಅವಕಾಶ ಸಿಗದೆ ಅವತ್ತು ಹತ್ಯೆಯ ಪ್ಲಾನ್ ಪ್ಲಾಪ್ ಆಗಿತ್ತು. ಮರು ದಿನ ಅಂದ್ರೆ ಸೆಪ್ಟೆಂಬರ್ 5ರಂದು ಸಮಯ ಸಾಧಿಸಿ ಗೌರಿಯವರನ್ನ ಮುಗಿಸಿಯೇ ಬಿಟ್ಟಿದ್ದರು.

    https://www.youtube.com/watch?v=ASRV3IF-5Cg

    https://www.youtube.com/watch?v=Ov8Gc1Ih8tw