Tag: parashuram vagmore

  • ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಮೇಜರ್ ಟ್ವಿಸ್ಟ್!

    ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಮೇಜರ್ ಟ್ವಿಸ್ಟ್!

    ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಇದೀಗ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಎಸ್‍ಐಟಿ ತನಿಖೆ ವೇಳೆ ಒಂದಾದಮೇಲೊಂದರಂತೆ ಸ್ಫೋಟಕ ಸತ್ಯಗಳು ಹೊರಬರುತ್ತಿವೆ.

    ಗೌರಿ ಹತ್ಯೆಗೆ ಪರಶುರಾಮ್ ವಾಗ್ಮೋರೆ ಪಡೆದಿದ್ದು ಕೇವಲ 13 ಸಾವಿರ ರೂ. ಅಂತೆ. ಸಂಚುಕೋರರು ಪರಶುರಾಮ್ ಗೆ ಮೊದಲು 3 ಸಾವಿರ ಬಳಿಕ 10 ಸಾವಿರ ನೀಡಿದ್ದಾರೆ. ಹಾಗಿದ್ರೆ ಕೇವಲ 13 ಸಾವಿರಕ್ಕೆ ಹತ್ಯೆ ಮಾಡಲು ವಾಗ್ಮೊರೆ ಒಪ್ಪಿಕೊಂಡಿದ್ಯಾಕೆ ಎಂಬ ಪ್ರಶ್ನೆ ಮೂಡುತ್ತದೆ. ಇದನ್ನೂ ಓದಿ: ಗೌರಿ ಹಂತಕರ ಹಿಟ್‍ಲಿಸ್ಟಲ್ಲಿ ಇದ್ದದ್ದು ಐವರಲ್ಲ- 4 ಜನರಿಂದ 10 ಮಂದಿಯ ಟಾರ್ಗೆಟ್!

    ಪರಶುರಾಮ್ ವಾಗ್ಮೊರೆ ಗೌರಿಯನ್ನು ಕೊಂದಿದ್ದು ಹಣಕ್ಕಲ್ಲ ಬದಲಾಗಿ ಸೈದ್ಧಾಂತಿಕ ವಿರೋಧದಿಂದ ಗೌರಿಯನ್ನು ಹತ್ಯೆ ಮಾಡಿರುವುದಾಗಿ ಆತ ಬಾಯ್ಬಿಟ್ಟಿದ್ದಾನೆ ಎಂಬುದಾಗಿ ತಿಳಿದುಬಂದಿದೆ. ಇದನ್ನೂ ಓದಿ:  ಗೌರಿ ಲಂಕೇಶ್ ಹತ್ಯೆಯ ಮಾಸ್ಟರ್ ಮೈಂಡ್ ಅಮೋಲ್ ಕಾಳೆ

    ಹಣಕ್ಕಾಗಿ ಕೊಲ್ಲೊದಾದರೆ ಆಗಲ್ಲ ಅಂತ ಹೇಳಿದ್ದೆ. ಆದ್ರೆ ಗೌರಿಯ ಸೈದ್ಧಾಂತಿಕ ವಿರೋಧಕ್ಕಾಗಿ ಕೊಂದೆ ಅಂತ ಹೇಳಿದ್ದಾನೆ. ಊಟ, ವಸತಿ, ಪ್ರಯಾಣಕ್ಕಾಗಿ ವಾಗ್ಮೋರೆಗೆ ಸಂಚುಕೋರರು ಮೊದಲ ಹಂತದಲ್ಲಿ 3 ಸಾವಿರ ಸೆಟ್ಲ್‍ಮೆಂಟ್ ಮಾಡಿದ್ದು, ಇನ್ನು ಕೊಲೆಯಾದ ಬಳಿಕ ವಾಗ್ಮೋರೆಗೆ ಎರಡನೇ ಹಂತದಲ್ಲಿ 10 ಸಾವಿರ ನೀಡಿರುವುದಾಗಿ ತನಿಖೆ ವೇಳೆ ತಿಳಿಸಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿ: ಗೌರಿ ಹತ್ಯೆ ನಡೆದಿದ್ದು ಹೇಗೆ? – ‘ಆ’ ಆರು ಗುಂಡುಗಳ ಕಥೆ ಇಲ್ಲಿದೆ

    ಘಟನೆ ವಿವರ:
    ಸೆಪ್ಟಂಬರ್ 5ರಂದು ಕಚೇರಿಯಿಂದ ಮನೆಗೆ ಬಂದ ಗೌರಿ ಅವರು ಕಾರ್ ನಿಲ್ಲಿಸಿ ಗೇಟ್ ತೆಗೆದು ಒಳಗಡೆ ಹೊರಟ್ಟಿದ್ದರು. ಈ ವೇಳೆ ಗೌರಿ ತಲೆಗೆ ಹಿಂಬದಿಯಿಂದ ಫೈರ್ ಮಾಡಲು ಹಂತಕ ರೆಡಿಯಾಗಿದ್ದನು. ಹಿಂದೆ ಯಾರೋ ಬಂದಿದ್ದಾರೆಂದು ಗೊತ್ತಾದ ಕೂಡಲೇ ಗೌರಿ ಹಿಂದಿರುಗಿ ನೋಡಿದಾಗ ಹಂತಕನನ್ನು ನೋಡಿದ್ದಾರೆ. ಕೂಡಲೇ ಯಾರು? ಯಾರು ನೀನು? ಅಂತ ಗಾಬರಿಯಿಂದ ಗೌರಿ ಅವರು ಪ್ರಶ್ನೆ ಮಾಡಿದ್ದಾರೆ. ಪ್ರಶ್ನೆಗೆ ತಬ್ಬಿಬ್ಬಾದ ಹಂತಕ ತಕ್ಷಣ ಕೈಯಲ್ಲಿದ್ದ ರಿವಾಲ್ವರ್ ಮೂಲಕ ತಲೆಗೆ ಗುಂಡು ಹೊಡೆಯಲು ಫೈರ್ ಮಾಡಿದ್ದ, ಆದ್ರೆ ಅದು ಗುರಿ ತಪ್ಪಿ ಗೋಡೆಗೆ ಸಿಡಿದಿತ್ತು.  ಇದನ್ನೂ ಓದಿ:  ಗೌರಿ ಲಂಕೇಶ್ ಹತ್ಯೆ ಕೇಸ್ – ಎಸ್‍ಐಟಿ ಮುಂದೆ ತಪ್ಪೊಪ್ಪಿಕೊಂಡು ಕಣ್ಣೀರಿಟ್ಟ ವಾಗ್ಮೋರೆ!

    ಗೌರಿ ತಪ್ಪಿಸಿಕೊಳ್ತಾರೆ ಅಂತ ಗೊತ್ತಾದಾಗ ಹಂತಕ, ಕ್ಷಣಾರ್ಧದಲ್ಲಿ ಟಾರ್ಗೆಟ್ ಚೇಂಜ್ ಮಾಡಿ, ತಲೆಗೆ ಗುಂಡು ಹೊಡೆಯುವ ಬದಲು, ಹೊಟ್ಟೆ ಮತ್ತು ಎದೆಯ ಭಾಗಕ್ಕೆ ನಾಲ್ಕು ಗುಂಡು ಹೊಡೆದಿದ್ದಾನೆ. ಕೊನೆಯ ಗುಂಡು ಮತ್ತೆ ಗುರಿ ತಪ್ಪಿತ್ತು. ಅಷ್ಟರಲ್ಲಿ ಪತ್ರಕರ್ತೆ ಗೌರಿಯವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಹಂತಕ ಸಿಡಿಸಿದ ಮೂರನೇ ಗುಂಡು ನೇರವಾಗಿ ಎದೆಗೆ ನುಗ್ಗಿ ಹೃದಯವನ್ನೇ ಹೊಕ್ಕಿತ್ತು. ಇದನ್ನೂ ಓದಿ: ಗೌರಿ ಲಂಕೇಶ್ ಹತ್ಯೆಗೆ ಹಂತಕರು ಇಟ್ಟಿದ್ದ ಹೆಸರು `ಅಮ್ಮ’ – ಇನ್ನಿಬ್ಬರು ಹತ್ಯೆಗೂ ಎರಡಕ್ಷರದ ಕೋಡ್‍ವರ್ಡ್

  • ಗೌರಿ ಕೇಸ್ ಸಂಬಂಧ ಎಸ್‍ಐಟಿಯಿಂದ ವಿಚಾರಣೆ ತೀವ್ರ- ರಾಮಸೇನೆ ಜಿಲ್ಲಾಧ್ಯಕ್ಷ ರಾಕೇಶ್ ಮಠಗೆ ಬುಲಾವ್

    ಗೌರಿ ಕೇಸ್ ಸಂಬಂಧ ಎಸ್‍ಐಟಿಯಿಂದ ವಿಚಾರಣೆ ತೀವ್ರ- ರಾಮಸೇನೆ ಜಿಲ್ಲಾಧ್ಯಕ್ಷ ರಾಕೇಶ್ ಮಠಗೆ ಬುಲಾವ್

    ವಿಜಯಪುರ: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರಾಕೇಶ್ ಮಠಗೆ ಎಸ್‍ಐಟಿ ಬುಲಾವ್ ನೀಡಿದೆ.

    ಬೆಂಗಳೂರಿಗೆ ತೆರಳುವ ಮೊದಲು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಎಸ್ ಐಟಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಯಾವ ವಿಚಾರಣೆಗೆ ಎಂಬುದು ಗೊತ್ತಿಲ್ಲ, ಅಲ್ಲಿ ಹೋದ ಬಳಿಕವೇ ಗೊತ್ತಾಗಲಿದೆ. ಪರಶುರಾಮ ನನ್ನ ಜೊತೆ ಬಹಳ ಹತ್ತಿರದಿಂದ ಇದ್ದ, ಅವನು ಇಂತಹ ಕೇಸ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದು ನನಗೆ ಶಾಕ್ ಆಗಿದೆ. ಪರಶುರಾಮ ಈ ಕೇಸ್ ನಿಂದ ನಿರ್ದೋಷಿ ಆಗಿ ಬರಲಿ ಎಂದು ಆಶಿಸುತ್ತೇನೆ. ಅಲ್ಲದೆ ಅವನು ಬಹಳ ಮುಗ್ಧ ವ್ಯಕ್ತಿಯಾಗಿದ್ದಾನೆ. ಪರಶುರಾಮ ವಾಗ್ಮೋರೆ ಕುಟುಂಬದವರು ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದಾರೆ. ಹಾಗಾಗಿ ಅವರಿಗೆ ಸಹಾಯ ಆಗಲಿ ಎಂದು ಫೇಸ್ ಬುಕ್ ನಲ್ಲಿ ಮನವಿ ಮಾಡಿದ್ದೇನೆ ಎಂದು ಸ್ಪಷ್ಟ ಪಡಿಸಿದ್ದಾರೆ. ಇದನ್ನೂ ಓದಿ: ಗೌರಿ ಕೇಸ್: ಪರಶುರಾಮ್ ವಾಗ್ಮೋರೆ ಕುರಿತಂತೆ ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ

    ಪೊಲೀಸ್ ನೋಟಿಸ್ ಮೂಲಕ ರಾಕೇಶ್ ಗೆ ಬೆಂಗಳೂರಿಗೆ ಬರಲು ಬುಲಾವ್ ನೀಡಿದ್ದು, ಬೆಂಗಳೂರಿನ ರಾಜರಾಜೇಶ್ವರಿ ಪೊಲೀಸ್ ಠಾಣೆಯ ಕಲಂ 302, 120(B), 114, 118, 35 ಐಪಿಸಿ 3, 25 ಆರ್ಮ್ಸ್ ಆಕ್ಟ್ ಪ್ರಕರಣದಲ್ಲಿ ತನಿಖೆ ನಡೆಸಲು ವಿಚಾರಣೆಗಾಗಿ ಬುಲಾವ್ ಮಾಡಲಾಗಿದೆಯಂತೆ. ಇಂದು ಬೆಳಗ್ಗೆ ಸಿಐಡಿ ಕಚೇರಿಗೆ ಹಾಜರಾಗುವಂತೆ ಸಿಐಡಿ ಮುಖ್ಯ ವಿಚಾರಣಾ ಅಧಿಕಾರಿ ಎಮ್ ಎನ್ ಅನುಚೇತನ್ ರಿಂದ ನೋಟಿಸ್ ನೀಡಲಾಗಿದ್ದು, ಅದರಂತೆ ಹಾಜರಾಗಲು ಶ್ರೀರಾಮಸೇನೆ ವಿಜಯಪುರ ಜಿಲ್ಲಾಧ್ಯಕ್ಷ ರಾಕೇಶ್ ಬೆಂಗಳೂರಿಗೆ ಆಗಮಿಸಿದ್ದಾರೆ. ಇನ್ನು ಇವರ ಜೊತೆ ವಾಗ್ಮೋರೆ ತಂದೆ ಕೂಡ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಇದನ್ನೂ ಓದಿ: ಗೌರಿ ಲಂಕೇಶ್ ಹತ್ಯೆಯ ಮಾಸ್ಟರ್ ಮೈಂಡ್ ಅಮೋಲ್ ಕಾಳೆ

    ಸುನೀಲ್

    ಇನ್ನು ಪ್ರಕರಣ ಸಂಬಂಧ ಎಸ್‍ಐಟಿ ವಶದಲ್ಲಿದ್ದ ಸುನಿಲ್ ಅಗಸರ್ ನ್ನು ಬಿಡುಗಡೆ ಮಾಡಲಾಗಿದೆ. ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ನಿವಾಸಿ ಸುನಿಲ್ ಅಗಸರ್ ಎಸ್‍ಐಟಿ ಪೊಲೀಸರು ಕಳೆದ ರವಿವಾರ ವಶಕ್ಕೆ ತೆಗೆದುಕೊಂಡಿದ್ದರು. ಇನ್ನು ವಿಚಾರಣೆ ಬಳಿಕ ಎಸ್‍ಐಟಿ ಪೊಲೀಸರು ಕ್ಲೀನ್‍ಚಿಟ್ ನೀಡಿ ಬಿಡುಗಡೆ ಮಾಡಿದ್ದಾರೆ. ಇದನ್ನೂ ಓದಿ: ಗೌರಿ ಲಂಕೇಶ್ ಹತ್ಯೆಯ ಆರೋಪಿಗಳನ್ನು ಹಿಡಿಯಲು ಸುಳಿವು ನೀಡಿತ್ತು ಕಾಯಿನ್ ಬಾಕ್ಸ್!