Tag: parappan agrahar

  • ಜೈಲಿಂದ ಹೊರಬಂದ ಮೇಲೆ ನಿಂಗೆ ಇದೆ ನೋಡು- ತಂದೆ ಹ್ಯಾರಿಸ್ ಗೆ ಫೋನ್ ಮಾಡಿ ನಲಪಾಡ್ ಕ್ಲಾಸ್

    ಜೈಲಿಂದ ಹೊರಬಂದ ಮೇಲೆ ನಿಂಗೆ ಇದೆ ನೋಡು- ತಂದೆ ಹ್ಯಾರಿಸ್ ಗೆ ಫೋನ್ ಮಾಡಿ ನಲಪಾಡ್ ಕ್ಲಾಸ್

    ಬೆಂಗಳೂರು: ವಿದ್ವತ್ ಮೇಲೆ ಹಲ್ಲೆ ಮಾಡಿ ಸದ್ಯ ಜೈಲು ಸೇರಿರೋ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ತನ್ನ ತಂದೆ ಹ್ಯಾರಿಸ್ ಅವರಿಗೆ ಕರೆ ಮಾಡಿ ಕ್ಲಾಸ್ ತೆಗೆದುಕೊಂಡಿದ್ದಾನೆ ಎಂಬುದಾಗಿ ಪರಪ್ಪನ ಅಗ್ರಹಾರದ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಇಂದು ರೌಡಿ ನಲಪಾಡ್ ಭವಿಷ್ಯ- ಜಾಮೀನು ಅರ್ಜಿ ಕುರಿತು ಆದೇಶ

    ಪ್ರಕರಣ ಸಂಬಂಧ ಈಗಾಗಲೇ ಜಾಮೀನು ಅರ್ಜಿ ವಿಚಾರವಾಗಿ ಜೈಲಿನಲ್ಲಿ ಫುಲ್ ಟೆನ್ಷನ್ ಆಗಿರುವ ನಲಪಾಡ್, ಜಾಮಿನು ಕೊಡಿಸಲು ನಿನ್ನಿಂದ ಆಗುತ್ತಾ ಇಲ್ವಾ ಹೇಳು ಎಂದು ತಂದೆಗೆ ಆವಾಜ್ ಹಾಕಿದ್ದಾನೆ. ಒಂದು ವೇಳೆ ಜಾಮೀನು ಕೊಡಿಸಲು ಆಗದಿದ್ದರೆ ಹೊರಗಡೆ ನನ್ನ ಹುಡುಗರಿದ್ದಾರೆ. ಅವರಿಂದ ನಾನು ಜಾಮೀನು ತರಿಸಿಕೊಳ್ಳುತ್ತೇನೆ ಎಂದು ತಂದೆಯನ್ನು ತರಾಟೆಗೆ ತಗೊಂಡಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿ: ನಲಪಾಡ್‍ಗೆ ಜೈಲೇ ಗತಿ: ಆರೋಪಿಯ ಪರ ವಕೀಲರ ವಾದ ಏನಿತ್ತು? ಕೋರ್ಟ್ ಕಲಾಪದ ಡಿಟೇಲ್ ಇಲ್ಲಿದೆ

    ಜೈಲಿಗೆ ಬಂದು ಇಷ್ಟು ದಿನ ಆಯ್ತು. ಒಂದು ದಿನವೂ ಕೂಡ ನನ್ನನ್ನು ನೋಡಲು ಬಂದಿಲ್ಲ. ನಾನು ಜೈಲಿನಿಂದ ಹೊರ ಬಂದ ಮೇಲೆ ನಿಂಗೆ ಇದೆ ನೋಡು. ಇವತ್ತು ಜೈಲಿಗೆ ಬಂದು ನನ್ನ ನೋಡ್ಲೆ ಬೇಕು ಎಂದು ತನ್ನ ತಂದೆಯೊಂದಿಗೆ ಉರ್ದು ಭಾಷೆಯಲ್ಲಿ ಹೇಳಿ ಹಠ ಹಿಡಿದಿದ್ದಾನೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಮೈಮೇಲೆ ಕುರ್ಚಿಗಳನ್ನು ಎಸೆದ್ರು, sorry ಎಂದರೂ ಬಿಯರ್ ಬಾಟಲಿಯಿಂದ ಬಾಯಿಗೆ ಹೊಡೆದ್ರು- ನಲಪಾಡ್ ದಾಳಿ ಬಗ್ಗೆ ವಿದ್ವತ್ Exclusive ಮಾತು

    https://www.youtube.com/watch?v=oHsWb25A2VM

     

  • ಬ್ಲೇಡ್ ನಿಂದ ಕತ್ತು ಕೊಯ್ದುಕೊಂಡು ಜೈಲಿನಲ್ಲೇ ಸೈಕೋ ಜೈಶಂಕರ್ ಆತ್ಮಹತ್ಯೆ

    ಬ್ಲೇಡ್ ನಿಂದ ಕತ್ತು ಕೊಯ್ದುಕೊಂಡು ಜೈಲಿನಲ್ಲೇ ಸೈಕೋ ಜೈಶಂಕರ್ ಆತ್ಮಹತ್ಯೆ

    ಬೆಂಗಳೂರು: ಅತ್ಯಾಚಾರಿ, ಸೈಕೋ ಕಿಲ್ಲರ್ ಜೈಶಂಕರ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬ್ಲೇಡ್ ನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

    24 ಅತ್ಯಾಚಾರ ಪ್ರಕರಣಗಳಲ್ಲಿ ಭಾಗಿಯಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಸೈಕೋ ಜೈಶಂಕರ್, 2013ರ ಸೆಪ್ಟೆಂಬರ್‍ನಲ್ಲಿ ಜೈಲಿನಿಂದ ಪರಾರಿಯಾಗಿದ್ದನು. ಕಾಲಿಗೆ ಗಾಯ ಮಾಡಿಕೊಂಡಿದ್ದ ಆತ, ನಂತರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ಜೈಲಿನಿಂದ ಸ್ವಲ್ಪ ದೂರದಲ್ಲೇ ನಡುಮುರಿದುಕೊಂಡು ಬಿದ್ದಿದ್ದ ಜೈಶಂಕರನನ್ನ ಬಂಧಿಸಲಾಗಿತ್ತು. ಬಳಿಕ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಶಂಕರನಿಗೆ ಪ್ರತ್ಯೇಕ ಸೆಲ್ ನೀಡಲಾಗಿದ್ದು, ಜೈಲಿನಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದನು.

    ಇದೀಗ ನಿನ್ನೆ ರಾತ್ರಿ 2 ಗಂಟೆ ಸುಮಾರಿಗೆ ಬ್ಲೆಡ್ ನಿಂದ ಕತ್ತು ಕೊಯ್ದುಕೊಂಡು ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಕೂಡಲೇ ವಿಕ್ಟೋರಿಯಾ ಅಸ್ಪತ್ರಗೆ ಕರೆತರಲಾಗುತಿತ್ತು. ಈ ವೇಳೆ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾನೆ.

    ಪ್ರಕರಣಗಳು: ತುಮಕೂರಿನ ಗಿರಿಯನಹಳ್ಳಿಯಲ್ಲಿ ದೊಡ್ಡಯ್ಯ, ಪುಟ್ಟಮ್ಮ ದಂಪತಿಗಳು ಹಾಗೂ ಅವರ ಪುತ್ರಿ ರಾಜಮ್ಮ ಕೊಲೆ ಮಾಡಿದ ಆರೋಪ ಸೈಕೋ ಜಯಶಂಕರ್ ಮೇಲಿತ್ತು. 2011ರ ಮಾರ್ಚ್ 29ರಂದು ಈ ತ್ರಿವಳಿ ಕೊಲೆ ಪ್ರಕರಣದಲ್ಲಿ ಜೈಶಂಕರ್ ಖುಲಾಸೆಗೊಂಡಿದ್ದನು. ಸೂಕ್ತ ಸಾಕ್ಷಿಗಳು ದೊರೆಯದ ಹಿನ್ನೆಲೆಯಲ್ಲಿ ಖುಲಾಸೆಗೊಳಿಸಲಾಗಿದೆ ಎಂದು ಹೇಳಲಾಗಿತ್ತು.

    2011ರ ಏಪ್ರಿಲ್ 27ರಂದು ಚಿತ್ರದುರ್ಗದ ಎಂ.ಕೆ.ಹಟ್ಟಿಯಲ್ಲಿ ಚಂದ್ರಮ್ಮ ಎಂಬವರ ಮೇಲೆ ಜೈಶಂಕರ್ ಅತ್ಯಾಚಾರ ನಡೆಸಿದ್ದನು. ಈ ವೇಳೆ ಅಲ್ಲಿಗೆ ಆಕೆಯ ಪತಿ ಹನುಮಂತಪ್ಪ ಬಂದಿದ್ದರು. ಇಬ್ಬರನ್ನು ಕೊಲೆ ಮಾಡಿದ ಆರೋಪ ಜೈಶಂಕರ್ ಮೇಲಿತ್ತು. ಈ ಜೋಡಿ ಕೊಲೆ ಪ್ರಕರಣವನ್ನೂ 2017ರ ಸೆಪ್ಟೆಂಬರ್‍ನಲ್ಲಿ ಬೆಂಗಳೂರು ಗ್ರಾಮಾಂತರ ಸೆಷನ್ಸ್ ನ್ಯಾಯಾಲಯ ಖುಲಾಸೆಗೊಳಿಸಿತ್ತು.


    ವಿಜಯಪುರದಲ್ಲಿ ಜೈ ಶಂಕರ್ ನನ್ನು ಪೊಲೀಸರು ಬಂಧಿಸಿದಾಗ ಹಲವು ಕೊಲೆ ಪ್ರಕರಣಗಳು ಹೊರಬಂದಿದ್ದವು. ಕರ್ನಾಟಕದ ಮೂರು ಪ್ರಕರಣಗಳಲ್ಲಿ ಜೈ ಶಂಕರ್ ಈಗಾಗಲೇ ಖುಲಾಸೆಗೊಂಡಿದ್ದು, ಇನ್ನೂ 2 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ತಮಿಳುನಾಡಿನಲ್ಲಿಯೂ ಜೈ ಶಂಕರ್ ಮೇಲೆ ಹಲವು ಕೇಸುಗಳಿವೆ ಎಂಬುದಾಗಿ ತಿಳಿದುಬಂದಿತ್ತು.

    ಸದ್ಯ ಶಂಕರ್ ಆತ್ಮಹತ್ಯೆ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಮಾಡಿಕೊಳ್ಳಲಾಗಿದೆ.

    https://www.youtube.com/watch?v=MdCVv0MV_Fc&feature=youtu.be

  • ಬೆಂಗ್ಳೂರು ಜೈಲಿನಲ್ಲಿ ಪಾಕ್ ಪ್ರಜೆಗೆ ಹೆಣ್ಮಗು-ಅಕ್ರಮವಾಗಿ ನೆಲೆಸಿದ್ದವಳಿಗೆ ತಾಯ್ತನದ ಖುಷಿ

    ಬೆಂಗ್ಳೂರು ಜೈಲಿನಲ್ಲಿ ಪಾಕ್ ಪ್ರಜೆಗೆ ಹೆಣ್ಮಗು-ಅಕ್ರಮವಾಗಿ ನೆಲೆಸಿದ್ದವಳಿಗೆ ತಾಯ್ತನದ ಖುಷಿ

    ಬೆಂಗಳೂರು: ನಗರದ ಪರಪ್ಪನ ಅಗ್ರಹಾರ ಜೈಲಿನಲ್ಲಿ ಪಾಕ್ ಪ್ರಜೆಯೊಬ್ಬಳು ಹೆಣ್ಣು ಮಗುವಿಗೆ ಜನ್ಮ ನೀಡಿರುವುದು ಬೆಳಕಿಗೆ ಬಂದಿದೆ.

    ಸಮೀರಾ ಮಗುವಿಗೆ ಜನ್ಮ ನೀಡಿದ ಪಾಕ್ ಪ್ರಜೆ. ಈಕೆ ಕೇರಳ ಮೂಲದ ಮೊಹಮದ್ ಸಿಹಾಬ್ ನನ್ನ ಪ್ರೀತಿಸಿ ಮದುವೆಯಾಗಿದ್ದಳು. ಪತಿ ಕೇರಳ ಮೂಲದವನಾಗಿದ್ದರಿಂದ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರೇಮಿಗಳು ನೇಪಾಳ ಮೂಲಕ ಭಾರತಕ್ಕೆ ಬಂದಿದ್ದರು. ಹೀಗೆ ಕತಾರ್ ನಿಂದ ನೇಪಾಳಕ್ಕೆ ಹೋಗಿ ಅಲ್ಲಿಂದ ಪಾಟ್ನಾಗೆ ಬಂದು ಬಳಿಕ ಬೆಂಗಳೂರಲ್ಲಿ ನೆಲೆಸಿದ್ದರು.

    ಬಳಿಕ ಇಲ್ಲಿ ಅಕ್ರಮ ವಲಸೆ, ನಕಲಿ ದಾಖಲೆ ಸೃಷ್ಟಿಸಿದ ಆರೋಪದಡಿ ಕುಮಾರಸ್ವಾಮಿ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಸಿಸಿಬಿ ಪೊಲೀಸರು ದಾಳಿ ಮಾಡಿದ್ರು. ಸಮೀರ ಸಂಬಂಧಿಕರಾದ ಕಾಸಿಫ್ ಶಂಶುದ್ದೀನ್ ಮತ್ತು ಪತ್ನಿ ಕಿರಣ್ ಗುಲಾಮ್ ಅಲಿ ಸಹ ಕಳೆದ ಮೇ ತಿಂಗಳಿನಲ್ಲಿ ಬಂಧನಕ್ಕೆ ಒಳಗಾಗಿದ್ದರು. ಈ ವೇಳೆ ಆರೋಪಿಗಳು ನಕಲಿ ಆಧಾರ್ ಪಡೆದಿದ್ದ ವಿಚಾರ ಬೆಳಕಿಗೆ ಬಂದಿತ್ತು. ಅಲ್ಲದೇ ಬಂಧನದ ವೇಳೆ ಸಮೀರಾ 4 ತಿಂಗಳ ಗರ್ಭಿಣಿಯಾಗಿದ್ದಳು. ಹೀಗಾಗಿ ಇತ್ತೀಚೆಗಷ್ಟೇ ಸಮೀರಾ ಜೈಲಿನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಸದ್ಯ ಹೆಣ್ಣು ಮಗು ತಾಯಿ ಜೊತೆ ಪರಪ್ಪನ ಅಗ್ರಹಾರ ಜೈಲಿನಲ್ಲಿದೆ.

    ಭಾರತೀಯ ಪೌರತ್ವ ಕಾಯ್ದೆ ಅಡಿ 2004ರ ಬಳಿಕ ಜನಿಸುವ ಮಗುವಿನ ತಂದೆ ತಾಯಿ ಭಾರತೀಯ ಪೌರರಾಗಿರಬೇಕು. ಒಬ್ಬರು ಹೊರ ದೇಶಕ್ಕೆ ಸೇರಿದ್ರೂ ಮಗುವಿಗೆ ಭಾರತೀಯ ಪೌರತ್ವ ಸಿಗಲ್ಲ. ಈಗಾಗಲೇ ಸಮೀರಾ ವಿರುದ್ಧ ಪೊಲೀಸರು 9 ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ಇತ್ಯರ್ಥ ಅಗುವವರೆಗೂ ಸಮೀರಾ ಜೈಲಿನಲ್ಲೇ ಇರಬೇಕು. ಇದರಿಂದ ಸಮೀರಾ ಹಾಗು ಸಿಹಾಬ್ ದಂಪತಿಗಳ ಮಗುವಿಗೆ ರಾಷ್ಟ್ರೀಯತೆ ಸಮಸ್ಯೆ ಎದುರಾಗಿದೆ.

    ಈ ಹಿಂದೆ ಕೆಲವರು ವಿದೇಶಿ ಮಹಿಳೆಯರನ್ನು, ಪುರುಷರನ್ನು ಮದುವೆಯಾದ ನಿದರ್ಶನಗಳಿವೆ. ಉದಾಹರಣೆಗೆ ರಾಜೀವ್ ಗಾಂಧಿ, ಇಟಲಿಯ ಸೋನಿಯಾರನ್ನ ಕಾನೂನು ಬದ್ಧವಾಗಿ ವರಿಸಿದ್ರು. ಹೀಗಾಗಿ ಅವರು ಕಾನೂನು ಬದ್ಧವಾಗಿ ಭಾರತೀಯ ಪೌರತ್ವ ಪಡೆದಿದ್ದರು. ಇನ್ನು ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಕೂಡ ಪಾಕಿಸ್ತಾನಿ ಕ್ರಿಕೆಟಿಗ ಶೋಯಬ್ ಮಲಿಕ್ ರನ್ನ ಮದುವೆಯಾಗಿದ್ರೂ ಸಹ ಭಾರತೀಯ ಪೌರತ್ವ ಉಳಿಸಿಕೊಂಡಿದ್ದಾರೆ. ಹೀಗಾಗಿ ಸಮೀರಾ ಭಾರತೀಯ ಪೌರತ್ವ ಹೊಂದಿಲ್ಲದ ಕಾರಣ ಆಕೆಗೆ ಜನಿಸಿದ ಮಗುವಿಗೆ ಪೌರತ್ವ ಸಿಗೋದಿಲ್ಲ ಅನ್ನೋ ವಾದಗಳು ಕೇಳಿ ಬರ್ತಿವೆ.

     

  • ಮಂಗ್ಳೂರು ಜೈಲಲ್ಲಿ ವಿಚಾರಣಾಧೀನ ಕೈದಿಗಳ ಭರ್ಜರಿ ಬಾಡೂಟ!

    ಮಂಗ್ಳೂರು ಜೈಲಲ್ಲಿ ವಿಚಾರಣಾಧೀನ ಕೈದಿಗಳ ಭರ್ಜರಿ ಬಾಡೂಟ!

    ಮಂಗಳೂರು: ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನ ಕರ್ಮಕಾಂಡ ಹೊರಬಿದ್ದ ಬೆನ್ನಲ್ಲೇ ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿಯೂ ವಿಚಾರಣಾಧೀನ ಕೈದಿಗಳು ಜೈಲಿನಲ್ಲೇ ಬಾಡೂಟ ನಡೆಸಿರುವುದು ಬೆಳಕಿಗೆ ಬಂದಿದೆ.

    ಕೈದಿಗಳ ಬಾಡೂಟದ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಜೈಲಿನ ವಾಸ್ತವ ಚಿತ್ರಣಕ್ಕೆ ಕನ್ನಡಿ ಹಿಡಿಯುತ್ತಿದೆ. ಫೋಟೋದಲ್ಲಿರುವ ಕೈದಿಗಳು ಆರು ತಿಂಗಳ ಹಿಂದೆ ನಡೆದ ನಟೋರಿಯಸ್ ರೌಡಿ ಕಾಲಿಯಾ ರಫೀಕ್ ಕೊಲೆ ಪ್ರಕರಣದ ಆರೋಪಿಗಳು.

    ಇದನ್ನೂ ಓದಿ: ಎಲ್‍ಇಡಿ ಟಿವಿ,ಕುಷನ್ ಬೆಡ್, ಮಿನರಲ್ ವಾಟರ್- ಪರಪ್ಪನ ಅಗ್ರಹಾರದಲ್ಲಿ ವಂಚಕ ತೆಲಗಿಗೆ ರಾಜಮರ್ಯಾದೆ

    ಹೊರಗಿನಿಂದ ಪಾರ್ಸೆಲ್ ತರಿಸಿ, ಜೈಲಿನ ಸೆಲ್ ಒಳಗೇ ಗುಂಡು-ತುಂಡಿನ ಪಾರ್ಟಿ ನಡೆಸಿದ್ದಾರೆ. ಗ್ಲಾಸ್, ಮದ್ಯದ ಬಾಟಲಿ ಎದುರಿಟ್ಟುಕೊಂಡು ಕೈದಿಗಳೇ ಫೋಟೋ ತೆಗೆದಿದ್ದಾರೆ. ಅಷ್ಟೇ ಅಲ್ಲ, ಸೆಲ್ ಒಳಗೆ ವಿಭಿನ್ನ ಭಂಗಿಯಲ್ಲಿ ನಿಂತು ಫೋಟೊ ತೆಗೆದು ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಹೀಗಾಗಿ ಕೈದಿಗಳು ಮೊಬೈಲ್ ಬಳಸುತ್ತಿರುವುದೂ ಇದರಿಂದ ಸಾಬೀತಾಗಿದೆ.

    ಇಷ್ಟೆಲ್ಲ ನಡೆದಿರಬೇಕಾದರೆ ಜೈಲು ಸಿಬಂದಿ ಕೈವಾಡ ಇಲ್ಲದೆ ಸಾಧ್ಯವಿಲ್ಲ. ಹಣ ಇದ್ದವರು ಜೈಲಿನಲ್ಲೂ ಐಷಾರಾಮಿ ಜೀವನ ನಡೆಸುತ್ತಾರೆ ಎಂಬುದಕ್ಕೆ ಇದು ಸಾಕ್ಷಿ ನೀಡುವಂತಿದೆ.

    ಇದನ್ನೂ ಓದಿ: ಬಗೆದಷ್ಟೂ ಪರಪ್ಪನ ಅಗ್ರಹಾರದ ಕರ್ಮಕಾಂಡ ಬಯಲು: ಇಲ್ಲಿ ಎಣ್ಣೆ ಪಾರ್ಟಿ ಖುಲ್ಲಂಖುಲ್ಲಾ, ಜೈಲು ವಾರ್ಡನ್ ಎದುರೇ ಇಸ್ಪೀಟ್ ಆಟ

    ಇದನ್ನೂ ಓದಿ: ಪರಪ್ಪನ ಅಗ್ರಹಾರದಲ್ಲಿ ತಿಂಗಳಿಗೆ 20 ಲಕ್ಷ ರೂ. ಕಲೆಕ್ಷನ್ – ಇಡೀ ಜೈಲನ್ನು ಮೇಂಟೇನ್ ಮಾಡೋದು ಪ್ರತಿಭಾ ಹಂತಕ

    ಇದನ್ನೂ ಓದಿ: ಪರಪ್ಪನ ಅಗ್ರಹಾರದಲ್ಲಿ ನಡೇತಿದೆ ಬಿಂದಾಸ್ ಹುಟ್ಟುಹಬ್ಬದ ಪಾರ್ಟಿ!

    ಇದನ್ನೂ ಓದಿ: ಶಶಿಕಲಾಗೆ ಸೆಂಟ್ರಲ್ ಜೈಲಲ್ಲಿ ಹೈಫೈ ಸೌಲಭ್ಯ: ರೂಪಾ ಆರೋಪಕ್ಕೆ ಇಲ್ಲಿದೆ ದೃಶ್ಯ `ರೂಪ’ಕ

    ಇದನ್ನೂ ಓದಿ: ಜೈಲು ರಹಸ್ಯ ಬೇಧಿಸಿದ ರೂಪಾಗೆ ಎತ್ತಂಗಡಿ ಭಾಗ್ಯ

  • ಜೈಲು ರಹಸ್ಯ ಬೇಧಿಸಿದ ರೂಪಾ ಶೀಘ್ರವೇ ಎತ್ತಂಗಡಿ?

    ಜೈಲು ರಹಸ್ಯ ಬೇಧಿಸಿದ ರೂಪಾ ಶೀಘ್ರವೇ ಎತ್ತಂಗಡಿ?

    -ತೆಲಗಿ ತಲೆ ಮೇಲಿದೆ 254 ಕೋಟಿ ರೂ. ತೆರಿಗೆ

    ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜಿ ಸತ್ಯನಾರಾಯಣರಾವ್ ಮತ್ತು ಡಿಐಜಿ ರೂಪಾ ವರ್ಗಾವಣೆ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

    ಮಾಧ್ಯಮದ ಮುಂದೆ ಅಧಿಕಾರಿಗಳು ಪದೇ ಪದೇ ಹೇಳಿಕೆ ನೀಡಬಾರದು ಅಂತ ಸಿಎಂ ಹೇಳಿದ್ದರು. ಪ್ರಕರಣದ ತನಿಖೆ ಪ್ರಾರಂಭಗೊಳ್ಳುವ ಮುನ್ನವೇ ಜೈಲಿಗೆ ಇಬ್ಬರು ಪ್ರವೇಶ ಪಡೆದಿದ್ದರು. ಈ ಎಲ್ಲಾ ಹಿನ್ನೆಲೆಯಲ್ಲಿ ವರ್ಗಾವಣೆ ಮಾಡಲು ಸರ್ಕಾರ ತೀರ್ಮಾನಿಸಿದೆ. ಇಬ್ಬರನ್ನೂ ವರ್ಗಾವಣೆ ಮಾಡಿದ ಬಳಿಕ ಆ ಜಾಗಕ್ಕೆ ಐಜಿಪಿ ಸಲೀಂ ನಿಯೋಜನೆ ಮಾಡುವ ಸಾಧ್ಯತೆಗಳಿವೆ. ಸಲೀಂ ಇಲ್ಲ ಚರಣ್ ರೆಡ್ಡಿ ಗೆ ವರ್ಗಾವಣೆ ಮಾಡಲು ಸರ್ಕಾರ ತೀರ್ಮಾನ ಮಾಡಿದೆ. ಇಬ್ಬರು ಅಧಿಕಾರಿಗಳು ಜನವರಿಗೆ ಎಡಿಜಿಪಿ ಆಗಿ ಬಡ್ತಿ ಹೊಂದುವುದರಿಂದ ಅವರನ್ನೇ ಮುಂದುವರೆಸಲು ಸಿದ್ಧತೆ ನಡೆಸಲಾಗಿದೆ ಎಂಬುವುದಾಗಿ ತಿಳಿದುಬಂದಿದೆ.

    ಇನ್ನು ಡಿಜಿ ಸತ್ಯನಾರಾಯಣ ರಾವ್ ಅವರು ಡಿಐಜಿ ರೂಪಾ ಬಗ್ಗೆ 16 ಪುಟಗಳ ವರದಿಯನ್ನು ಗೃಹಿಲಾಖೆಗೆ ಸಲ್ಲಿಸಿದ್ದಾರೆ. ಈ ವರದಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಡಿಐಜಿ ರೂಪಾ ಅವರು ಡಿಜಿ ಆದೇಶ ಮೀರಿ 3 ಬಾರಿ ನೋಟಿಸ್ ಪಡೆದಿದ್ದರು. ನನ್ನ ಮೇಲೆ ದ್ವೇಷ ಸಾಧಿಸಲು ಸುಳ್ಳು ಸುದ್ದಿ ಹಬ್ಬಿಸಿದ್ದಾರೆಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

    ವರದಿಯಲ್ಲೇನಿದೆ?: ಬೆಂಗಳೂರು, ತುಮಕೂರು ಜೈಲಿನ ಜೊತೆ ಹೆಚ್ಚುವರಿ ಜವಬ್ದಾರಿಗೆ ರೂಪಾ ಡಿಮ್ಯಾಂಡ್ ಇಟ್ಟಿದ್ದರು. ಅಲ್ಲದೇ ಬಳ್ಳಾರಿ, ಬೆಳಗಾವಿ, ಧಾರವಾಡ, ಕಲಬುರಗಿ ಜೈಲುಗಳ ಹೊಣೆಗಾಗಿ ರೂಪಾ ಪಟ್ಟು ಹಿಡಿದಿದ್ದರು. ಆದ್ರೆ ಗೃಹ ಇಲಾಖೆ ಅನುಮತಿ ಬೇಕು ಎಂದು ರೂಪಾಗೆ ನಾನು ಬುದ್ಧಿವಾದ ಹೇಳಿದ್ದೆ. ನನಗೆ ತಿಳಿಯದೇ ಗೃಹ ಇಲಾಖೆ ಜೊತೆ ರೂಪಾ ಹೆಚ್ಚಿನ ಅಧಿಕಾರಕ್ಕಾಗಿ ಚರ್ಚೆ ನಡೆಸಿದ್ದರು. ಆಗ ಡಿಜಿಪಿ ಅನುಮತಿ ಪಡೆಯಲು ಗೃಹ ಇಲಾಖೆ ರೂಪಾಗೆ ಸೂಚನೆ ನೀಡಿತ್ತು. ಬಳಿಕ ಡಿಜಿಯಾದ ನನ್ನ ಜೊತೆ ರೂಪಾ ಅವರು ವಾಗ್ವಾದ ನಡೆಸಿ ಹೋಗಿದ್ದರು. ತುಮಕೂರು ಜೈಲಲ್ಲಿ ರೂಪಾಂತರ ಕಾರ್ಯಕ್ರಮದ ವೇಳೆ ಕೆಲವೇ ಕೆಲವು ವರದಿಗಾರರನ್ನ ಕರೆಸಲು ನಾನು ಸೂಚಿಸಿದ್ದೆ. ಆದ್ರೆ ಸುಪ್ರೀಂಕೋರ್ಟ್ ಆದೇಶ ಮೀರಿ ಹೆಚ್ಚು ಪತ್ರಕರ್ತರನ್ನ ಕರೆಸಿ ಪ್ರಚಾರ ಪಡೆದಿದ್ದಕ್ಕೆ ಬುದ್ಧಿ ಹೇಳಿದ್ದೆ. ನೊಟೀಸ್ ನೀಡಿ ರೂಪಾಗೆ ಉತ್ತರಿಸಲು ಕೇಳಿದಾಗ ನನ್ನ ಮೇಲೆ ಜೋರು ಮಾಡಿದ್ರು. ಆಮೇಲೆ ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ತಮ್ಮಿಷ್ಟ ಬಂದಂತೆ ಜೈಲಿನ ಬಗ್ಗೆ ತಮ್ಮ ಬಗ್ಗೆ ಮಾತನಾಡಿದ್ರು. ಆ ಫೋಟೋಗಳನ್ನ ಫೇಸ್‍ಬುಕ್‍ನಲ್ಲಿ ಹಾಕಿಕೊಂಡು ನಿಯಮ ಮೀರಿದ್ದಕ್ಕೆ ಮೆಮೋ ನೀಡಿದ್ದೆ. ಜುಲೈ 10 ರಂದು ಮುಖ್ಯಮಂತ್ರಿಗಳು ಸಭೆ ಕರೆದ ದಿನವೇ ಪರಪ್ಪನ ಅಗ್ರಹಾರ ಭೇಟಿಗೆ ತೆರಳಿದ್ರು. ಹಿರಿಯ ಅಧಿಕಾರಿಯಾಗಿ ನಾನು ಸಭೆಗೆ ಯಾಕೆ ಬಂದಿಲ್ಲ ಎಂದು ಉತ್ತರ ಕೇಳಿ 3ನೇ ಬಾರಿ ನೋಟಿಸ್ ನೀಡಿದ್ದೆ. ಆದ್ರೂ ನಿಯಮ ಮೀರಿ ಜೈಲಿನೊಳಗೆ ಹೋಗಿದ್ದಾರೆ. ಜೈಲಧಿಕಾರಿಗಳಿಗೂ ತಿಳಿಸದೇ ವರದಿ ಸಿದ್ಧಪಡಿಸಿದ್ದಾರೆ. ಶಶಿಕಲಾ ಅವರಿಗೆ ಸೌಕರ್ಯ ನೀಡಿದ್ದೀವಿ, ತೆಲಗಿಗೆ ಸೇವಕರನ್ನ ನೀಡಲಾಗಿದೆ ಎಂದು ಸುಳ್ಳು ವರದಿ ಮಾಧ್ಯಮಗಳಿಗೆ ನೀಡಿದ್ದಾರೆ. ಜೈಲಿನಲ್ಲಿ ಶಶಿಕಲಾಗೆ ವಿಶೇಷ ಸವಲತ್ತು ನೀಡಿಲ್ಲ. ಆದ್ರೆ ಕೋರ್ಟ್ ಆದೇಶದಂತೆ ತೆಲಗಿಗೆ ಕೆಲವು ಸವಲತ್ತು ನೀಡಿದ್ದೇವೆ ಅಷ್ಟೇ ಅಂತ ವರದಿಯಲ್ಲಿ ಹೇಳಿದ್ದಾರೆ.

    ತೆಲಗಿ ಮೇಲೆ ತೆರಿಗೆ: ಬಹುಕೋಟಿ ರೂಪಾಯಿ ನಕಲಿ ಛಾಪಾಕಾಗದ ಹಗರಣ ರೂವಾರಿ ಕರೀಂ ಲಾಲ್ ತೆಲಗಿಗೆ ಕೇಂದ್ರ ಕಾರಾಗೃಹದಲ್ಲಿ ರಾಜಮರ್ಯಾದೆ ಸುದ್ದಿ ಬಿತ್ತರಗೊಳ್ಳುತಿದ್ದಂತೆ ಈತನ ಕರಾಳ ಕೃತ್ಯದ ಬಗ್ಗೆ ಇನ್ನೊಂದು ಸ್ಫೋಟಕ ಸುದ್ದಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ದೇಶದ ಅರ್ಥ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ ಕರೀಂ ಲಾಲ್ ತೆಲಗಿ ಸರ್ಕಾರಕ್ಕೆ ಕಟ್ಟಬೇಕಾಗಿರೋದು ಬರೊಬ್ಬರಿ 254 ಕೋಟಿ ರೂಪಾಯಿ. ತೆಲಗಿ ಸರ್ಕಾರಕ್ಕೆ ಕಟ್ಟಬೇಕಾದ ಹಣದ ದಾಖಲಾತಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.

  • ಪದೇ ಪದೇ ಮಾಧ್ಯಮಗಳ ಮುಂದೆ ಹೋಗುವ ಅಧಿಕಾರಿಗಳಿಗೆ ನೋಟಿಸ್: ಸಿಎಂ

    ಪದೇ ಪದೇ ಮಾಧ್ಯಮಗಳ ಮುಂದೆ ಹೋಗುವ ಅಧಿಕಾರಿಗಳಿಗೆ ನೋಟಿಸ್: ಸಿಎಂ

    ಮೈಸೂರು: ಪರಪ್ಪನ ಅಗ್ರಹಾರದಲ್ಲಿ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ತನಿಖೆಗೆ ಆದೇಶ ಮಾಡಲಾಗಿದೆ. ಆದ್ರೆ ಪದೇ ಪದೇ ಮಾಧ್ಯಮದ ಮುಂದೆ ಹೋಗಬಾರದು. ಈ ಸಂಬಂಧ ಡಿಐಜಿ ರೂಪ ಅವರಿಗೆ ನೋಟಿಸ್ ನೀಡಲಾಗಿದೆ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಪ್ಪನ ಅಗ್ರಹಾರದಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಅವರಲ್ಲೇನಾದ್ರೂ ವರದಿ, ದಾಖಲೆಗಳಿದ್ದರೆ ತಂದು ತೋರಿಸಲಿ. ಅದರ ಬದಲು ಪದೇ ಪದೇ ಮಾಧ್ಯಮಗಳ ಮುಂದೆ ಹೋಗುವ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುತ್ತದೆ. ಜೈಲಿನಲ್ಲಿ ಭ್ರಷ್ಟಾಚಾರದ ಬಗ್ಗೆ ಈಗಾಗಲೇ ತನಿಖೆಗೆ ಆದೇಶ ಮಾಡಲಾಗಿದೆ. ಅವರು ವರದಿ ನೀಡಿದ್ರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಇಲಾಖೆಯ ನಿಯಮದಲ್ಲಿ ಇರುವ ಕಾನೂನು ಪಾಲನೆ ಮಾಡಬೇಕು ಅಂತ ಹೇಳಿದ್ದಾರೆ.

    ಕೆಂಪಯ್ಯರನ್ನ ಮಂಗಳೂರು ಗಲಭೆ ನಿಯಂತ್ರಣದ ಉಸ್ತುವಾರಿಯನ್ನಾಗಿ ನೇಮಕ ಮಾಡಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ ಆರೋಪ ನಿರಾಧಾರವಾಗಿದೆ. ಮಂಗಳೂರಿನಲ್ಲಿ ಕೆಲಸ ಮಾಡಿದ ಅಧಿಕಾರಿಗಳನ್ನು ಸ್ಥಳದಲ್ಲಿದ್ದು ಪರಿಸ್ಥಿತಿ ನಿಯಂತ್ರಣ ಮಾಡಿ ಎಂದು ಹೇಳಿದ್ದೆ. ಆದ್ರೆ ಕೆಂಪಯ್ಯರಿಗೆ ಸರ್ಕಾರದಿಂದ ಯಾವುದೇ ಉಸ್ತುವಾರಿ ಇಲ್ಲ. ಮಂಗಳೂರಿನಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಬಿಜೆಪಿಯ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್‍ನದ್ದು ಬೆಂಕಿ ಆರಿಸುವ ಕೆಲಸವಾಗಿದೆ ಅಂತ ಸಿಎಂ ತಿಳಿಸಿದ್ದಾರೆ.

    ಬಿಜೆಪಿಯವರಿಗೆ ಯಾವುದೇ ಸಮಸ್ಯೆ ಇತ್ಯರ್ಥವಾಗುವುದು ಮುಖ್ಯವಲ್ಲ. ಅವರಿಗೆ ಗಲಭೆಗಳ ಜೀವಂತವಾಗಿಟ್ಟುಕೊಳ್ಳೊದೆ ಹಿಡನ್ ಅಜೆಂಡವಾಗಿದೆ. ರಾಮಮಂದಿರ ಕಟ್ಟುತ್ತೇವೆ ಅಂತ ಹೇಳಿದ್ರು ಈವರೆಗೂ ಕಟ್ಟಿಲ್ಲ. ಅದೇ ರೀತಿ ಜನರ ಭಾವನಾತ್ಮಕ ವಿಚಾರಗಳನ್ನ ವಿಷಯವಾಗಿಟ್ಟುಕೊಂಡು ರಾಜಕೀಯ ಮಾಡೋದು ಬಿಜೆಪಿ ಕೆಲಸವಾಗಿದೆ ಎಂದು ವಾಗ್ದಾಳಿ ನಡೆಸಿದರು.

    ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿಲ್ಲ. ಮಂಗಳೂರಿನಲ್ಲಿ ಬೆಂಕಿ ಹಚ್ಚಿದ್ದೆ ಬಿಜೆಪಿಯವರು. ನಿರ್ಮಲಾ ಸೀತಾರಾಮನ್ ಅವರು ಯುಪಿ, ಹರಿಯಾಣ, ಮಧ್ಯಪ್ರದೇಶದ ಬಗ್ಗೆ ಮಾತಾನಾಡಲಿ. ನಮ್ಮ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿಯೇ ಇದೆ. ಶಾಂತಿಗೆ ಭಂಗ ತರುವ ಯಾವುದೇ ಸಂಘಟನೆ ಇದ್ದರೂ ಕ್ರಮ ಗ್ಯಾರೆಂಟಿ. ಮುಂದಿನ ದಿನದಲ್ಲಿ ಪಿಎಫ್‍ಐ, ಎಎಸ್‍ಡಿಪಿಐ, ಕೆಎಸ್‍ಡಿ ಸೇರಿದಂತೆ ಆರ್‍ಎಸ್‍ಎಸ್, ವಿಹೆಚ್‍ಪಿ, ಭಜರಂಗದಳದ ಮೇಲೆ ನಿಗಾ ಇಡಲಾಗುವುದು. ಒಟ್ಟಿನಲ್ಲಿ ರಾಜ್ಯದ ಗೃಹ ಇಲಾಖೆಗೆ ಈ ಸಂಘಟನೆಗಳ ಚಟುವಟಿಕೆ ಮೇಲೆ ನಿಗಾ ಇಡುವಂತೆ ಸೂಚನೆ ನೀಡಲಾಗಿದೆ ಅಂತ ಸಿಎಂ ವಿವರಿಸಿದ್ದಾರೆ.

    ನನಗೆ ರಾಜಕೀಯ ಮರುಜೀವ ನೀಡಿದ್ದು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ. ನನ್ನನ್ನ 5 ಬಾರಿ ಶಾಸಕನ್ನನ್ನಾಗಿ ಮಾಡಿ ಕ್ಷೇತ್ರ ಇದು. ಮುಂದಿನ ಬಾರಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದೇನೆ. ಚಾಮುಂಡೇಶ್ವರಿ ಕ್ಷೇತ್ರ ಕೂಡ ನನ್ನ ಕ್ಷೇತ್ರ ಇದ್ದಂತೆ. ನನ್ನ ಕ್ಷೇತ್ರದಲ್ಲಿ ಶಿಕ್ಷಣ ಸಂಸ್ಥೆಗಳು ಹೆಚ್ಚಾಗುತ್ತಿರೋದು ಸಂತಸ ತಂದಿದೆ. ಮುಂದಿನ ದಿನದಲ್ಲಿ ಇನ್ನಷ್ಟು ಶಿಕ್ಷಣ ಸಂಸ್ಥೆ ತೆರೆಯಲಿ. ಸರ್ಕಾರದಿಂದ ಬೇಕಾದ ಎಲ್ಲ ಸಹಾಯ ಮಾಡುತ್ತೇನೆ ಅಂತಾ ಸಿದ್ದರಾಮಯ್ಯ ಹೇಳಿದರು.

    https://www.youtube.com/watch?v=VUvHqCfFg0E