Tag: Paramvah Studios

  • `777 ಚಾರ್ಲಿ’ ಸಕ್ಸಸ್ ನಂತರ ಹೊಸ ಸಿನಿಮಾ ನಿರ್ಮಾಣಕ್ಕೆ ಮುಂದಾದ ರಕ್ಷಿತ್ ಶೆಟ್ಟಿ

    `777 ಚಾರ್ಲಿ’ ಸಕ್ಸಸ್ ನಂತರ ಹೊಸ ಸಿನಿಮಾ ನಿರ್ಮಾಣಕ್ಕೆ ಮುಂದಾದ ರಕ್ಷಿತ್ ಶೆಟ್ಟಿ

    ಹೊಸ ಪ್ರತಿಭೆಗಳಿಗೆ ಅವಕಾಶ ಕೊಟ್ಟು ನಿರ್ಮಾಣ ಮಾಡುವುದಕ್ಕೆ ರಕ್ಷಿತ್ ಶೆಟ್ಟಿ ಯಾವಾಗಲೂ ಮುಂದು. ಈಗ ರಕ್ಷಿತ್ ನೇತೃತ್ವದ ಪರಂವಃ ಸ್ಟುಡಿಯೋಸ್ ಕಡೆಯಿಂದ ಹೊಸ ಸಿನಿಮಾ ನಿರ್ಮಾಣ ಮಾಡುವುದಕ್ಕೆ ಮುಂದಾಗಿದ್ದಾರೆ. ಭಿನ್ನ ಕಥೆ `ಮಿಥ್ಯ’ ಚಿತ್ರಕ್ಕೆ ರಕ್ಷಿತ್ ಬಂಡವಾಳ ಹೂಡಿದ್ದಾರೆ.

    `777 ಚಾರ್ಲಿ’ ಚಿತ್ರದ ಸಕ್ಸಸ್ ನಂತರ ರಕ್ಷಿತ್ ಶೆಟ್ಟಿ ಮತ್ತೆ ಹೊಸ ಸಿನಿಮಾ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. ಸುಮಂತ್ ಭಟ್ ನಿರ್ದೇಶನದ `ಮಿಥ್ಯ’ ಸಿನಿಮಾ ಪ್ರಯತ್ನದಲ್ಲೇ ಅವರು 11 ವರ್ಷದ ಬಾಲಕನ ಕಥೆಯನ್ನು ಹೇಳ ಹೊರಟಿದ್ದಾರೆ. ಬಾಲಕನ ನೋವಿನ ಕಥೆಯನ್ನು ಹೇಳುವ ಪ್ರಯತ್ನ ಮಾಡುತ್ತಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಬಾಲನಟ ಆತಿಶ್ ಶೆಟ್ಟಿ ನಟಿಸಿದ್ದಾರೆ. ಇದನ್ನೂ ಓದಿ:ಶೂಟಿಂಗ್ ವೇಳೆ ಶಿಲ್ಪಾ ಶೆಟ್ಟಿ ಕಾಲಿಗೆ ಗಂಭೀರ ಪೆಟ್ಟು

     

    View this post on Instagram

     

    A post shared by Rakshit Shetty (@rakshitshetty)

    ಪುಟ್ಟ ಬಾಲಕನ ತಂದೆ ತಾಯಿ ನಿಧನ ಹೊಂದುತ್ತಾರೆ. ಅವರ ನೆನಪುಗಳಿಂದ ಹೊರಬರಲಾರದ ಈ ಬಾಲಕ ಹೊಸ ಪ್ರಪಂಚವನ್ನು ಹುಡುಕಿಕೊಂಡು ಹೊರಡುತ್ತಾನೆ. ಹಳೆಯ ಸಂಬಂಧಗಳಲ್ಲಿ ಹೊಸತನ ಕಾಣುವುದರ ಜತೆಗೆ ಹೊಸ ಸ್ನೇಹಿತರಲ್ಲಿ ಹಳೆಯ ಗೆಳೆತನ ಹುಡುಕುವ ಪಯಣವೇ ಈ ಮಿಥ್ಯ. ಸದ್ಯ ಚಿತ್ರದ ಪೋಸ್ಟರ್ ಮೂಲಕ ಅಭಿಮಾನಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ರಕ್ಷಿತ್ ಶೆಟ್ಟಿ ಅಭಿಮಾನಿಗಳಿಗೆ ಜೂನ್ 6ಕ್ಕೆ ಸಿಗಲಿದೆ ಗುಡ್‍ನ್ಯೂಸ್

    ರಕ್ಷಿತ್ ಶೆಟ್ಟಿ ಅಭಿಮಾನಿಗಳಿಗೆ ಜೂನ್ 6ಕ್ಕೆ ಸಿಗಲಿದೆ ಗುಡ್‍ನ್ಯೂಸ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ಬಹು ನಿರೀಕ್ಷಿತ 777 ಚಾರ್ಲಿ ಸಿನಿಮಾದ ಟೀಸರ್ ಇದೇ ಜೂನ್ 6ರಂದು ರಿಲೀಸ್ ಆಗಲಿದೆ.

    ಈ ಕುರಿತಂತೆ ಪರಮ್ವಾ ಸ್ಟೂಡಿಯೋಸ್ ನಟ ರಕ್ಷಿತ್ ಶೆಟ್ಟಿ ಟ್ವಿಟ್ಟರ್ ಖಾತೆಯಲ್ಲಿ ವೀಡಿಯೋವೊಂದನ್ನು ಟ್ಯಾಗ್ ಮಾಡಿದ್ದು, ವೀಡಿಯೋವನ್ನು ರಕ್ಷಿತ್ ಶೆಟ್ಟಿ ರೀ ಟ್ವೀಟ್ ಮಾಡಿದ್ದಾರೆ. ದಿ ಲೈಫ್ ಆಫ್ ಚಾರ್ಲಿ ಎಂದು ಆರಂಭವಾಗುವ ಈ ವೀಡಿಯೋದಲ್ಲಿ ಸಿನಿಮಾ ಚಿತ್ರೀಕರಣದ ಸಣ್ಣ ಸಣ್ಣ ದೃಶ್ಯದ ತುಣುಕುಗಳಿದ್ದು, ಶ್ವಾನಕ್ಕೆ ಟ್ರೈನ್ ಅಪ್ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಇದೇ ಜೂನ್ 6 ರಂದು ಬೆಳಗ್ಗೆ 11:04 ಕ್ಕೆ ಚಿತ್ರತಂಡ 777 ಚಾರ್ಲಿ ಸಿನಿಮಾದ ಟೀಸರ್‍ನನ್ನು ಕನ್ನಡ, ತೆಲುಗು, ಹಿಂದಿ, ತಮಿಳು ಹಾಗೂ ಮಲೆಯಾಳಂನಲ್ಲಿ ಬಿಡುಗಡೆ ಮಾಡಲಿದೆ.

    ಪ್ರತಿಯೊಂದು ಸಿನಿಮಾದಲ್ಲಿಯೂ ವಿಭಿನ್ನ ಪಾತ್ರದಲ್ಲಿ ನಟಿಸುತ್ತಿರುವ ನಟ ರಕ್ಷಿತ್ ಶೆಟ್ಟಿ ಅವನೇ ಶ್ರೀಮನ್ನಾರಾಯಣ ಸಿನಿಮಾದ ಸಕ್ಸಸ್ ನಂತರ 777 ಚಾರ್ಲಿ ಸಿನಿಮಾದಲ್ಲಿ ಕೂಡ ಹೊಸ ಗೆಟಪ್‍ನಲ್ಲಿ ಮಿಂಚಲಿದ್ದಾರೆ. ಈಗಾಗಲೇ ಸಿನಿಮಾದ ಪೋಸ್ಟರ್‍ನಲ್ಲಿ ರಕ್ಷಿತ್ ಶ್ವಾನವನ್ನು ನೋಡುತ್ತಿರುವ ಫೋಟೋ ವೈರಲ್ ಆಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.

    ಸದ್ಯ ಹಲವು ತಿಂಗಳ ಬಳಿಕ ರಕ್ಷಿತ್ ಅಭಿಮಾನಿಗಳಿಗೆ 777 ಚಾರ್ಲಿ ಸಿನಿಮಾದ ಟೀಸರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಸಿಹಿ ಸುದ್ದಿ ನೀಡಿದೆ. ಒಟ್ಟಾರೆ ಪೋಸ್ಟರ್ ಮೂಲಕ ಸಿನಿಪ್ರಿಯರಲ್ಲಿ ಕೂತೂಹಲ ಮೂಡಿಸಿದ ಚಾರ್ಲಿ ಸಿನಿಮಾದ ಟೀಸರ್ ಬಿಡುಗಡೆಯಾಗುತ್ತಿದ್ದು, ಟೀಸರ್ ಹೇಗೆ ಇದೆ ಎಂಬುವುದನ್ನು ಕಾದು ನೋಡಬೇಕಾದೆ. ಇದನ್ನು ಓದಿ: ಹಾಲಿವುಡ್ ಸಿನಿಮಾ ಮಾಡಲಿದ್ದಾರೆ ರಾಜಮೌಳಿ : ವಿಜಯೇಂದ್ರ ಪ್ರಸಾದ್