Tag: Paramilitary

  • ಸುಡಾನ್ ಸಂಘರ್ಷ – ಭಾರತೀಯರ ಭದ್ರತೆ ಕುರಿತು ಪರಿಶೀಲನೆಗೆ ಮೋದಿ ಸಭೆ

    ಸುಡಾನ್ ಸಂಘರ್ಷ – ಭಾರತೀಯರ ಭದ್ರತೆ ಕುರಿತು ಪರಿಶೀಲನೆಗೆ ಮೋದಿ ಸಭೆ

    ನವದೆಹಲಿ: ಸೈನಿಕರ ಸಂಘರ್ಷಕ್ಕೆ ಸಿಲುಕಿರುವ ಸುಡಾನ್‌ನಲ್ಲಿ (Sudan) ಭಾರತೀಯರ (Indians) ಪರಿಸ್ಥಿತಿಯನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ (Narendra Modi) ಶುಕ್ರವಾರ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.

    ಶುಕ್ರವಾರ ಬೆಳಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರಸ್ ಅವರೊಂದಿಗೆ ಸುಡಾನ್‌ನಲ್ಲಿ ಹದಗೆಡುತ್ತಿರುವ ಪರಿಸ್ಥಿತಿಯ ಕುರಿತು ಚರ್ಚಿಸಿದ್ದಾರೆ. ಸುಡಾನ್‌ನಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ. ಇದು ಆಕಸ್ಮಿಕ ಯೋಜನೆಗಳು ಹಾಗೂ ಜನರನ್ನು ಸ್ಥಳಾಂತರಗೊಳಿಸುವುದು ಅಗತ್ಯವಾಗಿದೆ. ಜೊತೆಗೆ ಸುಡಾನ್‌ನಲ್ಲಿರುವ ಭಾರತೀಯ ಸಮುದಾಯದ ಸುರಕ್ಷತೆ ಹಾಗೂ ಯೋಗಕ್ಷೇಮವನ್ನು ಖಾತ್ರಿಪಡಿಸುವತ್ತ ಗಮನಹರಿಸಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ.

    ಸುಡಾನ್‌ನಲ್ಲಿ ಕಳೆದ ಶನಿವಾರ ಸೇನೆ (Army) ಹಾಗೂ ಅರೆಸೇನಾಪಡೆಗಳ (Paramilitary) ನಡುವೆ ಸಂಘರ್ಷ ಪ್ರಾರಂಭವಾಗಿದ್ದು, ಇದೀಗ ಪರಿಸ್ಥಿತಿ ಇನ್ನಷ್ಟು ತಾರಕಕ್ಕೇರಿದೆ. ಕದನ ವಿರಾಮವನ್ನು ಒಪ್ಪದ ಮಿಲಿಟರಿ ಪಡೆಗಳ ಘರ್ಷಣೆಗೆ 300ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಖ್ಯಾತ ಗಾಯಕ ಹನಿ ಸಿಂಗ್ ವಿರುದ್ಧ ಹಲ್ಲೆ, ಅಪಹರಣ ಕೇಸ್ ದಾಖಲು

    ಸುಡಾನ್ ರಾಜಧಾನಿ ಖಾರ್ಟೂಮ್ ಸೇರಿದಂತೆ ಹಲವು ನಗರಗಳಲ್ಲಿ ಗುಂಡಿನ ದಾಳಿ ಸೇರಿದಂತೆ ಭೀಕರ ಯುದ್ಧವೇ ನಡೆದಿದೆ. ದೇಶಾದ್ಯಂತ ಹಲವೆಡೆ ವಿದ್ಯುತ್ ಕಡಿತವಾಗಿದ್ದರೆ, ಆಹಾರ, ನೀರು ಸಿಗದೆ ಜನರು ನರಳಾಡಿದ್ದಾರೆ. ಸ್ಥಳೀಯ ಜನರ ಸಂಪರ್ಕವೂ ಅಸ್ತವ್ಯಸ್ತಗೊಂಡಿರುವುದಾಗಿ ವರದಿಗಳು ತಿಳಿಸಿವೆ.

    ಖಾರ್ಟೂಮ್ ಹಾಗೂ ನೆರೆಯ ರಾಜ್ಯಗಳಲ್ಲಿನ ಸುಮಾರು 70% ರಷ್ಟು ಆಸ್ಪತ್ರೆಗಳು ಹಾನಿಗೊಳಗಾಗಿದ್ದು, ಜನರಿಗೆ ಸೇವೆಯನ್ನು ನೀಡುವುದನ್ನು ಸ್ಥಗಿತಗೊಳಿಸಿವೆ. ಸಾವಿನ ಸಂಖ್ಯೆ ಅಧಿಕೃತವಾಗಿ ಘೋಷಿಸಿರುವುದಕ್ಕಿಂತಲೂ ಹೆಚ್ಚಿರಬಹುದು ಎಂದು ಎಚ್ಚರಿಸಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸಾಧ್ಯವಾಗುತ್ತಿಲ್ಲ ಎನ್ನಲಾಗುತ್ತಿದೆ. ಇದನ್ನೂ ಓದಿ: ಶನಿವಾರದ ಒಳಗಡೆ ಸರ್ಕಾರಿ ಬಂಗಲೆ ತೊರೆಯಲಿದ್ದಾರೆ ರಾಹುಲ್ ಗಾಂಧಿ

  • ಸುಡಾನ್ ಸೈನಿಕರ ಸಂಘರ್ಷ – 200ಕ್ಕೆ ಏರಿದ ಸಾವಿನ ಸಂಖ್ಯೆ, ಸಾವಿರಾರು ಜನರಿಗೆ ಗಾಯ

    ಸುಡಾನ್ ಸೈನಿಕರ ಸಂಘರ್ಷ – 200ಕ್ಕೆ ಏರಿದ ಸಾವಿನ ಸಂಖ್ಯೆ, ಸಾವಿರಾರು ಜನರಿಗೆ ಗಾಯ

    – ಯುದ್ಧ ಪರಿಸ್ಥಿತಿ ನಿರ್ಮಾಣ

    ಖಾರ್ಟೂಮ್: ಸುಡಾನ್‌ನಲ್ಲಿ (Sudan) ಸೇನೆ (Army) ಮತ್ತು ಅರೆಸೇನಾಪಡೆಗಳ (Paramilitary) ನಡುವಿನ ಸಂಘರ್ಷ ಕಳೆದ 3 ದಿನಗಳಿಂದ ನಡೆಯುತ್ತಿದ್ದು, ಪರಿಸ್ಥಿತಿ ತೀವ್ರಗೊಂಡಿದೆ. ಘರ್ಷಣೆಯಲ್ಲಿ (Conflict) ಸುಮಾರು 200 ಜನರು ಸಾವನ್ನಪ್ಪಿದ್ದಾರೆ. 1,800ಕ್ಕೂ ಅಧಿಕ ಜನರು ಘಟನೆಯಲ್ಲಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

    ಸುಡಾನ್‌ನ ರಾಜಧಾನಿ ಖಾರ್ಟೂಮ್‌ನಲ್ಲಿ (Khartoum) ಸೇನೆ ಹಾಗೂ ಅರೆಸೈನಿಕ ಪಡೆಯ ನಡುವೆ ಅಧಿಕಾರಕ್ಕೆ ಸಂಬಂಧಪಟ್ಟಂತೆ ಶನಿವಾರ ಸಂಘರ್ಷ ಉಂಟಾಗಿದೆ. ಮಿಲಿಟರಿ ಆಡಳಿತದ ವಿರುದ್ಧ ಅರೆಸೇನಾಪಡೆ ದಂಗೆ ಎದ್ದಿದ್ದು, ಖಾರ್ಟೂಮ್‌ನಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಅಧ್ಯಕ್ಷರ ನಿವಾಸವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿತ್ತು. ಈ ಹಿನ್ನೆಲೆ ಎರಡೂ ಕಡೆಗಳಿಂದ ಗುಂಡಿನ ಚಕಮಕಿ ನಡೆದಿದೆ. ಇದೀಗ ಸಂಘರ್ಷ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ.

    3 ದಿನಗಳಿಂದ ನಡೆಯುತ್ತಿರುವ ಘರ್ಷಣೆಯಿಂದಾಗಿ ಒಂಡರ್ಮನ್ ನಗರ, ದಕ್ಷಿಣ ಡಾರ್ಫರ್, ನ್ಯಾಲಾ, ರಾಜಧಾನಿ ಖಾರ್ಟೂಮ್ ಸೇರಿದಂತೆ ವಿವಿಧ ನಗರಗಳು ನಲುಗಿ ಹೋಗಿವೆ. ಅಲ್ಲಲ್ಲಿ ಸೇನೆ ಹಾಗೂ ಅರೆಸೇನಾ ಪಡೆ ನಡುವೆ ಗುಂಡಿನ ಚಕಮಕಿ ನಡೆಯುತ್ತಿದ್ದು ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಇದನ್ನೂ ಓದಿ: ರೈಸ್ ಮಿಲ್ ಕಟ್ಟಡ ಕುಸಿತ – ನಾಲ್ವರು ಸಾವು, 20 ಮಂದಿಗೆ ಗಾಯ

    ಸೇನೆ ಹಾಗೂ ಅರೆಸೇನಾಪಡೆ ನಡುವೆ ಅಧಿಕಾರಕ್ಕೆ ಸಂಬಂಧಪಟ್ಟಂತೆ ಉಂಟಾಗಿರುವ ಬಿಕ್ಕಟ್ಟು ಉಲ್ಬಣಗೊಂಡಿದೆ. ಸೇನೆಗಿಂತಲೂ ಅರೆಸೇನಾಪಡೆ ಪ್ರಬಲವಾಗಿದೆ ಎಂದು ಮೂಲಗಳು ತಿಳಿಸಿದೆ. ಘರ್ಷಣೆಯಲ್ಲಿ ಭಾನುವಾರ ಭಾರತ ಮೂಲದ ವ್ಯಕ್ತಿಯೊಬ್ಬರು ಗುಂಡಿನ ದಾಳಿಗೆ ತುತ್ತಾಗಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಬಿಸಿಲಿನ ಎಫೆಕ್ಟ್‌ನಿಂದ ಹಳಿಯ ರಬ್ಬರ್‌ಗೆ ಬೆಂಕಿ – 20 ನಿಮಿಷ ಮೆಟ್ರೋ ಸಂಚಾರ ಬಂದ್