Tag: Paramhans Acharya

  • ಚುನಾವಣೆಯಲ್ಲಿ ಸೋನಿಯಾ ಗಾಂಧಿ ವಿರುದ್ಧ ಸ್ಪರ್ಧಿಸುತ್ತೇನೆ: ಪರಮಹಂಸ ಆಚಾರ್ಯ ಘೋಷಣೆ

    ಚುನಾವಣೆಯಲ್ಲಿ ಸೋನಿಯಾ ಗಾಂಧಿ ವಿರುದ್ಧ ಸ್ಪರ್ಧಿಸುತ್ತೇನೆ: ಪರಮಹಂಸ ಆಚಾರ್ಯ ಘೋಷಣೆ

    – ಕಾಂಗ್ರೆಸ್‌ನ ಕೊನೆಯ ವಿಕೆಟ್‌ ಉರುಳಿಸ್ತೇನೆ

    ಲಕ್ನೋ: ಈ ಬಾರಿಯ ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ವಿರುದ್ಧ ಸ್ಪರ್ಧಿಸುವುದಾಗಿ ಯತಿ ಕಂಟೋನ್ಮೆಂಟ್ ಪೀಠಾಧೀಶ್ವರ ಜಗದ್ಗುರು ಪರಮಹಂಸ ಆಚಾರ್ಯ (Paramhans Acharya) ಘೋಷಿಸಿದ್ದಾರೆ.

    ಈ ಸಂಬಂಧ ವೀಡಿಯೋ ಬಿಡುಗಡೆ ಮಾಡಿರುವ ಅವರು, ರಾಯ್ ಬರೇಲಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ರಾಯ್ ಬರೇಲಿ ಕ್ಷೇತ್ರದಿಂದ ಸೋನಿಯಾ ಗಾಂಧಿ (Sonia Gandhi) ವಿರುದ್ಧ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್‌ನ (Congress) ಕೊನೆಯ ವಿಕೆಟ್ ಅನ್ನು ಉರುಳಿಸುವುದಾಗಿ ತಿಳಿಸಿದ್ದಾರೆ.

    1966ರ ನವೆಂಬರ್ 7ರಂದು ಕಾಂಗ್ರೆಸ್ ಅಧಿಕಾರದಲ್ಲಿತ್ತು. ಆಗ ಇಂದಿರಾ ಗಾಂಧಿ (Indira Gandhi) ಪ್ರಧಾನಿಯಾಗಿದ್ದರು. ಈ ಸಮಯದಲ್ಲಿ ನಾವು ಸಂತರು ಮತ್ತು ಋಷಿಮುನಿಗಳು ಕಾಂಗ್ರೆಸ್ ನಿಂದ ತುಂಬಾ ನೊಂದಿದ್ದೇವೆ ಎಂದಿದ್ದಾರೆ.

    ಧರ್ಮ ಸಾಮ್ರಾಟ್ ಸ್ವಾಮಿ ಕರ್ಪಾತ್ರಿ ಜೀ ಅವರ ನೇತೃತ್ವದಲ್ಲಿ ದೇಶದ ಮೂಲೆ ಮೂಲೆಯಿಂದ ಯುವಕರು, ರೈತರು, ತಾಯಂದಿರು, ಸಹೋದರಿಯರು ಮತ್ತು ಹಿರಿಯರು ಗೋಹತ್ಯೆ ತಡೆಯಲು ದೆಹಲಿ ಸಂಸತ್ ಭವನವನ್ನು ತಲುಪಿದ್ದರು ಆಗ ಅಲ್ಲಿ ಅವರ ಮೇಲೆ ಗುಂಡುಗಳನ್ನು ಹಾರಿಸಲಾಯಿತು. ಅದಕ್ಕಾಗಿಯೇ ನಾನು ಕಾಂಗ್ರೆಸ್ ಮುಕ್ತ ಭಾರತಕ್ಕಾಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದು ಆಚಾರ್ಯರು ತಿಳಿಸಿದ್ದಾರೆ.

    ಕೆಲ ದಿನಗಳ ಹಿಂದೆ ಪ್ರಧಾನಿ ಮೋದಿ ಕಾಂಗ್ರೆಸ್ ಮುಕ್ತ ಭಾರತ ಘೋಷಣೆ ಮಾಡುವುದಾಗಿ ಕರೆ ಕೊಟ್ಟಿದ್ದಾರೆ. ಹೀಗಾಗಿ ವೈಯಕ್ತಿಕವಾಗಿ ಕಾಂಗ್ರೆಸ್‌ನ ಕೊನೆಯ ವಿಕೆಟ್‌ ಉರುಳಿಸುತ್ತೇನೆ. ಈಗ ಭಾರತ ಕಾಂಗ್ರೆಸ್ ಮುಕ್ತವಾಗುವ ಸಮಯ ಬಂದಿದೆ ಎಂದು ಹೇಳಿದ್ದಾರೆ.

  • ಉದಯನಿಧಿ ಸ್ಟಾಲಿನ್‌ ತಲೆ ತಂದವರಿಗೆ 10 ಕೋಟಿ ಬಹುಮಾನ; ಅಯೋಧ್ಯೆಯ ಹಿಂದೂ ಧರ್ಮದರ್ಶಿ ಘೋಷಣೆ

    ಉದಯನಿಧಿ ಸ್ಟಾಲಿನ್‌ ತಲೆ ತಂದವರಿಗೆ 10 ಕೋಟಿ ಬಹುಮಾನ; ಅಯೋಧ್ಯೆಯ ಹಿಂದೂ ಧರ್ಮದರ್ಶಿ ಘೋಷಣೆ

    ಲಕ್ನೋ: ಅಯೋಧ್ಯೆಯ ಹಿಂದೂ ಧರ್ಮದರ್ಶಿಯೊಬ್ಬರು (Ayodhya Hindu Seer) ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್‌ ಅವರ ಪುತ್ರ ಉದಯನಿಧಿ (Udhayanidhi Stalin) ಸ್ಟಾಲಿನ್‌ ತಲೆ ಕಡಿದು ತರುವಂತೆ 10 ಕೋಟಿ ರೂ. ಬಹುಮಾನ ಘೋಷಿಸಿದ್ದಾರೆ. ಪ್ರಚೋದನಕಾರಿ ಹೇಳಿಕೆಗೆ ಆಕ್ರೋಶ ವ್ಯಕ್ತವಾಗಿದೆ.

    ಅಯೋಧ್ಯೆಯ ಧರ್ಮದರ್ಶಿ ಪರಮಹಂಸ ಆಚಾರ್ಯ, ಒಂದು ಕೈಯಲ್ಲಿ ಉದಯನಿಧಿಯ ಪೋಸ್ಟರ್, ಮತ್ತೊಂದು ಕೈಯಲ್ಲಿ ಕತ್ತಿ ಹಿಡಿದುಕೊಂಡು ಉದಯನಿಧಿ ಅವರ ಶಿರಚ್ಛೇದನವನ್ನು ಸಾಂಕೇತಿಕವಾಗಿ ಪ್ರದರ್ಶಿಸುವ ವೀಡಿಯೊವನ್ನ ಬಿಡುಗಡೆ ಮಾಡಿದ್ದಾರೆ. ಪೋಸ್ಟರ್‌ಗೆ ಬೆಂಕಿ ಹಚ್ಚುವ ದೃಶ್ಯವನ್ನೂ ವೀಡಿಯೋದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಡಿಎಂಕೆ ಸಚಿವರ ತಲೆ ಕಡಿದು ತಂದವರಿಗೆ 10 ಕೋಟಿ ರೂ. ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

    ಇದಕ್ಕೆ ಪ್ರತಿಕ್ರಿಯಿಸಿರುವ ಉದಯನಿಧಿ ಸ್ಟಾಲಿನ್‌, ಸ್ವಾಮೀಜಿಯೊಬ್ಬರು ನನ್ನ ತಲೆಗೆ 10 ಕೋಟಿ ರೂ. ಬೆಲೆ ಕಟ್ಟಿದ್ದಾರೆ. ಅವರು ನಿಜವಾದ ಸಂತನೋ ಅಥವಾ ನಕಲಿ ಸಂತನೋ? ನನ್ನ ತಲೆಯನ್ನ ಏಕೆ ಅಷ್ಟು ಇಷ್ಟಪಡುತ್ತೀರಿ? ನಿಮಗೆ ಇಷ್ಟು ಹಣ ಎಲ್ಲಿಂದ ಬರುತ್ತದೆ? ನನ್ನ ತಲೆ ಕೂದಲು ಬಾಚುವುದಕ್ಕೆ ಏಕೆ 10 ಕೋಟಿ ರೂ. ಘೋಷಣೆ ಮಾಡಿದ್ದೀರಿ? 10 ರೂಪಾತಿ ಬಾಚಣಿಗೆ ಕೊಟ್ಟರೆ ನಾನೇ ಬಾಚಿಕೊಳ್ಳುತ್ತೇನೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: G20 ಸಭೆ ದೆಹಲಿಯಲ್ಲಿ ಹೈ ಅಲರ್ಟ್ – ಆನ್‌ಲೈನ್ ಫುಡ್, ಅಮೆಜಾನ್, ಪ್ಲಿಪ್‌ಕಾರ್ಟ್ ಹೋಂ ಡೆಲಿವರಿ ಬಂದ್

    ಏನಿದು ವಿವಾದ?
    ಲೇಖಕರ ಸಮಾವೇಶವೊಂದರಲ್ಲಿ ಮಾತನಾಡಿದ್ದ ಉದಯನಿಧಿ ಸ್ಟಾಲಿನ್, ಸನಾತನ ಧರ್ಮವು (Sanatana Dharma) ಡೆಂಗ್ಯೂ, ಮಲೇರಿಯಾ ಇದ್ದಂತೆ. ಅದನ್ನು ನಿರ್ಮೂಲನೆ ಮಾಡಬೇಕೇ ಹೊರತು, ವಿರೋಧಿಸಬಾರದು. ಈ ಪರಿಕಲ್ಪನೆಯು ಅಂತರ್ಗತವಾಗಿ ಹಿಂದುಳಿದಿದೆ. ಇದು ಜಾತಿ ಮತ್ತು ಆಧಾರದ ಮೇಲೆ ಜನರನ್ನು ವಿಭಜಿಸುತ್ತದೆ. ಮೂಲಭೂತವಾಗಿ ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ವಿರೋಧಿಸುತ್ತದೆ ಎಂದು ಹೇಳಿದ್ದರು. ಈ ಹೇಳಿಕೆ ನಂತರ ವಿವಾದ ಭುಗಿಲೆದ್ದಿದೆ. ಇದನ್ನೂ ಓದಿ: ಚೆನ್ನೈ ಪೊಲೀಸರಿಗೆ ಲೀಗಲ್ ನೋಟಿಸ್ – ಉದಯ್‌ನಿಧಿ ವಿರುದ್ಧ ಎಫ್‌ಐಆರ್ ದಾಖಲಿಸಲು 7 ದಿನ ಕಾಲಾವಕಾಶ

    ಈ ನಡುವೆ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಕುರಿತಾಗಿ ದ್ವೇಷಪೂರಿತ ಭಾಷಣ ಮಾಡಿದ್ದಕ್ಕಾಗಿ ಕಾನೂನು ಹಕ್ಕುಗಳ ವೀಕ್ಷಣಾಲಯ ಸ್ವಯಂ ಪ್ರೇರಿತ ಎಫ್‌ಐಆರ್ ದಾಖಲಿಸಿಕೊಳ್ಳುವಂತೆ ಸೋಮವಾರ ಚೆನ್ನೈನ ಪೊಲೀಸ್ ಕಮಿಷನರ್‌ಗೆ ಲೀಗಲ್ ನೋಟಿಸ್ ಕಳುಹಿಸಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]