Tag: Paramesh Gundkal

  • ‘ಬಿಗ್ ಬಾಸ್’ ಮನೆಯಿಂದ ಹೊರ ಬಂತು ಹೊಸ ಫೋಟೋ: ನಾಳೆಯೇ ದೊಡ್ಮನೆ ಪ್ರವೇಶ

    ‘ಬಿಗ್ ಬಾಸ್’ ಮನೆಯಿಂದ ಹೊರ ಬಂತು ಹೊಸ ಫೋಟೋ: ನಾಳೆಯೇ ದೊಡ್ಮನೆ ಪ್ರವೇಶ

    ನಿರೀಕ್ಷಿತ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಮನೆಯಿಂದ ಫೋಟೋವೊಂದು ಹೊರ ಬಂದಿದೆ. ಒಂದು ಕೈ ಕಣ್ಣು ಮುಚ್ಚಿರುವ ಮತ್ತೊಂದು ಕೈ ಕತ್ತು ಹಿಡಿದಿರುವ ಈ ಫೋಟೋ ಏನನ್ನು ಸೂಚಿಸುತ್ತದೆ ಎಂದು ಹಲವರು ತಲೆ ಕೆಡಿಸಿಕೊಂಡು ಕೂತಿದ್ದಾರೆ. ಈ ಫೋಟೋವನ್ನು ಕನ್ನಡ ಕಲರ್ಸ್ ವಾಹಿನಿಯ ಬ್ಯುಸಿನೆಸ್ ಹೆಡ್ ಪರಮೇಶ್ ಗುಂಡ್ಕಲ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಫೋಸ್ಟ್ ಮಾಡಿದ್ದು, ಓವರ್ ದಿ ಟಾಪ್ ಎಂದು ಬರೆದು ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ.

    ಎಂದಿನಂತೆ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡುವವರನ್ನು ಗ್ರ್ಯಾಂಡ್ ಎಂಟ್ರಿ ಕಾರ್ಯಕ್ರಮದ ಮೂಲಕ ಬರಮಾಡಿಕೊಳ್ಳುವುದು ಸಂಪ್ರದಾಯ. ಇದರ ಚಿತ್ರೀಕರಣ ನಾಳೆಯೇ ನಡೆಯಲಿದೆ. ಆಗಸ್ಟ್ 6 ರಿಂದ ಬಿಗ್ ಬಾಸ್ ಪ್ರಾರಂಭವಾಗಬೇಕಿದ್ದರಿಂದ ನಾಳೆ ಬೆಳಗ್ಗೆಯಿಂದ ಗ್ರ್ಯಾಂಡ್ ಎಂಟ್ರಿ ಶೂಟಿಂಗ್ ಶುರುವಾಗಲಿದೆ. ಈಗಾಗಲೇ ಸುದೀಪ್ ಅವರು ಶೂಟಿಂಗ್ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ. ಅವರಿಗಾಗಿಯೇ ಒಂದು ಸ್ಪೆಷಲ್ ಮನೆಯನ್ನೂ ಕಟ್ಟಿಕೊಟ್ಟಿದೆ ವಾಹಿನಿ. ಇದನ್ನೂ ಓದಿ:ಪತಿ ಪಾದದ ಬಳಿ ಕೂತು ಪೂಜಿಸಿದಕ್ಕೆ ಟ್ರೋಲ್ ಆದ ನಟಿ ಪ್ರಣಿತಾ

    ಬಿಗ್ ಬಾಸ್ ಮನೆಯ ಅಂತಿಮ ಕೆಲಸಗಳು ಮುಗಿದಿದ್ದು, ನಾಳೆಯಿಂದ ಆ ಮನೆ ಲಾಕ್ ಆಗಲಿದೆ. ಈ ಬಾರಿ ಯಾರೆಲ್ಲ ಬಿಗ್ ಬಾಸ್ ಮನೆಯೊಳಗೆ ಇರಲಿದ್ದಾರೆ ಎನ್ನುವ ಕುತೂಹಲ ಶುರುವಾಗಿದೆ. ಈಗಾಗಲೇ ಕೆಲವು ಹೆಸರುಗಳು ಕೂಡ ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿದ್ದು, ಆ ಹೆಸರುಗಳಲ್ಲಿ ಯಾರೆಲ್ಲ ಮನೆಯೊಳಗೆ ಇರಲಿದ್ದಾರೆ ಎನ್ನುವುದು ಶುಕ್ರವಾರ ಗೊತ್ತಾಗಲಿದೆ.

    Live Tv
    [brid partner=56869869 player=32851 video=960834 autoplay=true]

  • ಆಗಸ್ಟ್ ನಲ್ಲಿ ಕನ್ನಡದ ಬಿಗ್ ಬಾಸ್ ಶುರು:  ಕಾಫಿನಾಡು ಚಂದುಗೆ ಅವಕಾಶ ನೀಡಿ ಎಂದ ನೆಟ್ಟಿಗರು

    ಆಗಸ್ಟ್ ನಲ್ಲಿ ಕನ್ನಡದ ಬಿಗ್ ಬಾಸ್ ಶುರು: ಕಾಫಿನಾಡು ಚಂದುಗೆ ಅವಕಾಶ ನೀಡಿ ಎಂದ ನೆಟ್ಟಿಗರು

    ನ್ನಡದ ಬಿಗ್ ಬಾಸ್ ಈ ಬಾರಿ ಎರಡು ವೇದಿಕೆಯಲ್ಲಿ ಮೂಡಿ ಬರಲಿದೆ. ಮೊದಲು ವೂಟ್ಸ್ ಓಟಿಟಿಯಲ್ಲಿ ಪ್ರಸಾರವಾದರೆ, ಟಿವಿಗಾಗಿಯೇ ಮತ್ತೊಂದು ಶೋ ಚಿತ್ರೀಕರಣ ಮಾಡಲಾಗುವುದು ಎಂದಿದೆ ಕಲರ್ಸ್ ಕನ್ನಡ ವಾಹಿನಿ. ಸೀಸನ್ 8 ಯಶಸ್ವಿಯಾಗಿ ಮುಗಿಸಿರುವ ವಾಹಿನಿಯು ಇದೀಗ ಸೀಸನ್ 9ಕ್ಕೆ ಕಾಲಿಟ್ಟಿದೆ. ಓಟಿಟಿಗಾಗಿ ಮತ್ತು ಟಿವಿಗಾಗಿ ಬೇರೆ ಬೇರೆ ಸೀಸನ್ ಗಳನ್ನು ಚಿತ್ರೀಕರಣ ಮಾಡುವುದಾಗಿ ವಾಹಿನಿ ಹೇಳಿಕೊಂಡಿದೆ.

    ಮೊದಲು ಓಟಿಟಿಯಲ್ಲಿ ಬಿಗ್ ಬಾಸ್ ಸೀಸನ್ 9 ಶುರುವಾಗಲಿದ್ದು, ಆಗಸ್ಟ್ ನಲ್ಲಿ ಪ್ರಸಾರವಾಗಲಿದೆ ಎನ್ನುವ ಮಾಹಿತಿ ಸಿಕ್ಕಿದೆ. ಈಗಾಗಲೇ ಬಿಗ್ ಬಾಸ್ ಮನೆ ಸಿಂಗಾರಗೊಳ್ಳುತ್ತಿದ್ದು, ಮೊನ್ನೆಯಷ್ಟೇ ಪ್ರೋಮೋ ಕೂಡ ಶೂಟ್ ಮಾಡಲಾಗಿದೆ. ಪ್ರೊಮೋ ಶೂಟ್ ನಲ್ಲಿ ಸುದೀಪ್ ಭಾಗಿಯಾಗಿದ್ದು, ಕೆಲವೇ ದಿನಗಳಲ್ಲೇ ಈ ಪ್ರೊಮೋ ನೋಡಬಹುದಾಗಿದೆಯಂತೆ. ಇದನ್ನೂ ಓದಿ:ಸುಶ್ಮಿತಾ ಸೇನ್ ಬಲೆಗೆ ಬಿದ್ದ ಲಲಿತ್ ಮೋದಿ : ನಾನು ಲಂಚ ತಗೆದುಕೊಂಡು ದೇಶ ಬಿಟ್ಟಿಲ್ಲ ಎಂದು ತಿರುಗೇಟು

    ಈಗಾಗೇ ದೊಡ್ಡಮನೆಗೆ ಯಾರೆಲ್ಲ ಹೋಗಬಹುದು ಎಂಬ ಚರ್ಚೆ ಶುರುವಾಗಿದ್ದು, ಕೆಲವು ಹೆಸರುಗಳು ಹರಿದಾಡುತ್ತಿವೆ. ನಿರ್ದೇಶಕ ನವೀನ್ ಕೃಷ್ಣ, ಪವಿತ್ರಾ ಲೋಕೇಶ್, ಗುರೂಜಿ ಸೇರಿದಂತೆ ಈ ಪಟ್ಟಿಯಲ್ಲಿದ್ದಾರೆ. ಈ ಯಾದಿಯಲ್ಲಿ ಕಾಫಿನಾಡು ಚಂದುಗೆ ಅವಕಾಶ ನೀಡುವಂತೆ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ವಾಹಿನಿಗೆ ಮನವಿ ಮಾಡಿಕೊಂಡಿದ್ದಾರೆ. ಆಟೋ ಡ್ರೈವರ್ ಆಗಿರುವ ಕಾಫಿನಾಡು ಚಂದು ವಿಶೇಷವಾಗಿ ಹುಟ್ಟು ಹಬ್ಬದ ಶುಭಾಶಯಗಳನ್ನು ತಮ್ಮದೇ ಆದ ರೀತಿಯಲ್ಲಿ ಹೇಳುತ್ತಾರೆ. ಇವರು ವಿಡಿಯೋಗಳು ಸಖತ್ ವೈರಲ್ ಆಗುತ್ತವೆ.

    Live Tv
    [brid partner=56869869 player=32851 video=960834 autoplay=true]

  • Breaking-ಬಿಗ್ ಬಾಸ್ ಸೀಸನ್ 9 ಶೂಟಿಂಗ್ ಶುರು: ಪ್ರೊಮೋ ಚಿತ್ರೀಕರಣದಲ್ಲಿ ಸುದೀಪ್ ಭಾಗಿ (Exclusive Photos)

    Breaking-ಬಿಗ್ ಬಾಸ್ ಸೀಸನ್ 9 ಶೂಟಿಂಗ್ ಶುರು: ಪ್ರೊಮೋ ಚಿತ್ರೀಕರಣದಲ್ಲಿ ಸುದೀಪ್ ಭಾಗಿ (Exclusive Photos)

    ಲರ್ಸ್ ಕನ್ನಡ ವಾಹಿನಿ ಮುಖ್ಯಸ್ಥ ಪರಮೇಶ್ವರ ಗುಂಡ್ಕಲ್ ಮೊನ್ನೆಯಷ್ಟೇ ಬಿಗ್ ಬಾಸ್ ತಯಾರಿ ಕುರಿತು ಸಣ್ಣದೊಂದು ಅಪ್ ಡೇಟ್ ಕೊಟ್ಟಿದ್ದರು. ಹೊಸ ಮನೆ ನಿರ್ಮಾಣ ಆಗುತ್ತಿರುವ ಮಸುಕಾದ ಫೋಟೋವೊಂದು ತಮ್ಮ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಹಾಕಿ ಕುತೂಹಲಕ್ಕೆ ಕಾರಣವಾಗಿದ್ದರು. ಇದೀಗ ಸದ್ದಿಲ್ಲದೇ ಪ್ರೊಮೋ ಶೂಟ್ ಕೂಡ ಮುಗಿಸಿದ್ದಾರೆ. ನಿನ್ನೆ ಬೆಂಗಳೂರಿನಲ್ಲಿ ಪ್ರೊಮೋ ಶೂಟ್ ಮುಗಿದಿದ್ದು, ಕಿಚ್ಚ ಸುದೀಪ್ ಭಾಗಿಯಾಗಿದ್ದಾರೆ.

    ವಿಕ್ರಾಂತ್ ರೋಣ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದರೂ, ಸುದೀಪ್ ನಿನ್ನೆ ಬೆಳಗ್ಗೆಯಿಂದ ಸಂಜೆವರೆಗೂ ನಡೆದ ಬಿಗ್ ಬಾಸ್ 9ರ ಪ್ರೋಮೋ ಶೂಟ್ ನಲ್ಲಿ ಭಾಗಿಯಾಗಿದ್ದಾರೆ. ಸ್ವತಃ ಪರಮೇಶ್ವರ ಗುಂಡ್ಕಲ್ ಅವರೇ ಈ ಪ್ರೊಮೋವನ್ನು ಚಿತ್ರೀಕರಿಸಿದ್ದು ವಿಶೇಷ. ಈ ಬಾರಿಯ ಬಿಗ್ ಬಾಸ್ ವಿಶೇಷ ಏನು? ಯಾವ ಯಾವ ಕ್ಷೇತ್ರದ ಜನರು ಭಾಗಿಯಾಗಲಿದ್ದಾರೆ? ಸೀಸನ್ 8ರಲ್ಲಿ ಏನೆಲ್ಲ ನೋಡಬಹುದು ಎನ್ನುವ ಕುರಿತಾದ ಸ್ಕ್ರಿಪ್ಟ್ ಗೆ ಕಿಚ್ಚ ಆಕ್ಟ್ ಮಾಡಿದ್ದಾರೆ. ಇದನ್ನೂ ಓದಿ:ಕೆ.ಎಲ್ ರಾಹುಲ್ ಜೊತೆ ಮದುವೆಯ ವದಂತಿಗೆ ಸ್ಪಷ್ಟನೆ ನೀಡಿದ ಅಥಿಯಾ ಶೆಟ್ಟಿ

    ಬಿಗ್ ಬಾಸ್ ಸೀಸನ್ 9ರ ಪ್ರೊಮೋಗಾಗಿ ಕಿಚ್ಚ ಸುದೀಪ್ ವಿಶೇಷ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದರು. ಬಿಳಿ ಅಂಗಿ, ಕರಿಪ್ಯಾಂಟು, ಮೇಲೊಂದು ಕೋಟು ಹಾಗೂ ವಿಶೇಷ ಹೇರ್ ಸ್ಟೈಲ್ ನಲ್ಲಿ ಈ ಬಾರಿ ಪ್ರೊಮೋ ಶೂಟ್ ಮಾಡಲಾಗಿದೆ. ಮೊದಲು ಓಟಿಟಿಯಲ್ಲಿ ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಈ ಬಾರಿಯ ಬಿಗ್ ಬಾಸ್ ಪ್ರಸಾರವಾಗಲಿದ್ದು, ಅದಕ್ಕೆ ತಕ್ಕಂತೆ ಪ್ರೊಮೋಗಳನ್ನು ಶೂಟ್ ಮಾಡಲಾಗಿದೆ ಎನ್ನುತ್ತಿವೆ ಮೂಲಗಳು. ಈ ಎರಡಲ್ಲೂ ಕಿಚ್ಚನ ನಿರೂಪಣೆಯೇ ಇರಲಿದೆಯಂತೆ.

    ಎರಡು ವೇದಿಕೆಯಲ್ಲಿ ಈ ಬಾರಿ ಬಿಗ್ ಬಾಸ್ ಮೂಡಿ ಬರಲಿದ್ದು, ಮೊದಲು ವೂಟ್ಸ್ ನಲ್ಲಿ ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ವೂಟ್ಸ್ ನಲ್ಲಿ ಗೆದ್ದವರಿಗೆ ಕಲರ್ಸ್ ವಾಹಿನಿಯಲ್ಲಿ ನಡೆಯುವ ಬಿಗ್ ಬಾಸ್ ನಲ್ಲಿ ಭಾಗಿಯಾಗಲು ಅವಕಾಶ ನೀಡಲಾಗುತ್ತಿದೆ ಎಂದು ಹೇಳಲಾಗಿದ್ದು, ವಾಹಿನಿಯು ಅದನ್ನು ಅಧಿಕೃತವಾಗಿ ಮುಂದಿನ ದಿನಗಳಲ್ಲಿ ಹೇಳಲಿದೆಯಂತೆ.

    Live Tv
    [brid partner=56869869 player=32851 video=960834 autoplay=true]