Tag: Paramahamsa Acharya

  • ಕಠಿಣ ಕ್ರಮ ಕೈಗೊಳ್ಳದಿದ್ರೆ ನಾನೇ NCP ನಾಯಕನ ಕೊಲೆ ಮಾಡ್ತೀನಿ: ಅಯೋಧ್ಯೆ ಅರ್ಚಕ ಕಿಡಿ

    ಕಠಿಣ ಕ್ರಮ ಕೈಗೊಳ್ಳದಿದ್ರೆ ನಾನೇ NCP ನಾಯಕನ ಕೊಲೆ ಮಾಡ್ತೀನಿ: ಅಯೋಧ್ಯೆ ಅರ್ಚಕ ಕಿಡಿ

    ಲಕ್ನೋ: ರಾಮನ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿಯ (NCP) ಶರದ್ ಪವಾರ್ ಬಣದ ನಾಯಕ ಜಿತೇಂದ್ರ ಅವ್ಹಾದ್ (Jitendra Awhad) ವಿರುದ್ಧ ಅಯೋಧ್ಯೆಯ (Ayodhya) ಅರ್ಚಕ ಪರಮಹಂಸ ಆಚಾರ್ಯ (Paramhansa Acharya) ಎಚ್ಚರಿಕೆ ನೀಡಿದ್ದಾರೆ.

    ಈ ಸಂಬಂಧ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಅವರು, ಇನ್ನೊಂದು ಧರ್ಮದ ಬಗ್ಗೆ ಇಂತಹ ಹೇಳಿಕೆ ನೀಡಿದ್ದರೆ ಬಹುಶಃ ಅವರು ಇಲ್ಲಿಯವರೆಗೆ ಬದುಕಿರುತ್ತಿರಲಿಲ್ಲ. ರಾಮನನ್ನು ಅವಮಾನಿಸುವುದನ್ನು ಸಹಿಸುವುದಿಲ್ಲ. ಶ್ರೀರಾಮನ ಟೀಕೆಗೆ ಕಿವಿಗೊಡದ ಭಾರತ ಇದು ಎಂದು ನಮ್ಮ ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಎನ್‌ಸಿಪಿ ನಾಯಕನ ವಿರುದ್ಧ ಮಹಾರಾಷ್ಟ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿದ್ದರೆ ಜಿತೇಂದ್ರ ಅವ್ಹಾದ್ ರನ್ನು ನಾನೇ ಹತ್ಯೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

    ಜಿತೇಂದ್ರ ಅವ್ಹಾದ್ ಅವರು ನೀಡಿದ ಹೇಳಿಕೆಯು ಅವಹೇಳನಕಾರಿಯಾಗಿದೆ. ಇದು ರಾಮ ಭಕ್ತರ ಭಾವನೆಗೆ ನೋವುಂಟುಮಾಡುತ್ತದೆ. ರಾಮನ ಬಗ್ಗೆ ಕೆಟ್ಟದಾಗಿ ಮಾತನಾಡುವ ಜನರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಾನು ಮಹಾರಾಷ್ಟ್ರ ಮತ್ತು ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದಾಗಿ ಆಚಾರ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಬಾಲರಾಮನ ಮೂರ್ತಿ ಹೇಗಿರಲಿದೆ – ಕುತೂಹಲದ ಪ್ರಶ್ನೆಗೆ ಜ.22 ರಂದು ಸಿಗಲಿದೆ ಉತ್ತರ

    ಇದಕ್ಕೂ ಮುನ್ನ ರಾಮಜನ್ಮಭೂಮಿಯ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರು ಎನ್‌ಸಿಪಿ ನಾಯಕನ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದರು. ಅವರ ಹೇಳಿಕೆ ಸರಿಯಲ್ಲ. ರಾಮನು ವನವಾಸಕ್ಕೆ ಹೋದಾಗ ಗಡ್ಡೆ, ಹಣ್ಣು ತಿನ್ನುತ್ತಿದ್ದರು ಎಂದು ಬರೆಯಲಾಗಿತ್ತೇ ಹೊರತು ಮಾಂಸ ತಿಂದ ಎಂದು ಯಾವುದೇ ಗ್ರಂಥದಲ್ಲಿ ಬರೆದಿಲ್ಲ ಎಂದರು.  ಇದನ್ನೂ ಓದಿ: ಶ್ರೀರಾಮ ಮಾಂಸಾಹಾರಿಯಾಗಿದ್ದ.. ಬೇಟೆಯಾಡಿ ತಿನ್ನುವ ರಾಮ ನಮ್ಮವ: ಎನ್‌ಸಿಪಿ ನಾಯಕ ವಿವಾದಾತ್ಮಕ ಹೇಳಿಕೆ

    ಜಿತೇಂದ್ರ ಅವ್ಹಾದ್ ಹೇಳಿದ್ದೇನು..?: ರಾಮ ನಮ್ಮವನು. ರಾಮ ಬಹುಜನರಿಗೆ ಸೇರಿದವನು. ಬೇಟೆಯಾಡಿ ತಿನ್ನುವ ರಾಮ ನಮ್ಮವನು, ನಾವು ಬಹುಜನರಿಗೆ ಸೇರಿದವರು. ನೀವು ನಮ್ಮೆಲ್ಲರನ್ನು ಸಸ್ಯಾಹಾರಿಯನ್ನಾಗಿ ಮಾಡಲು ಹೋದಾಗ, ನಾವು ರಾಮನ ಆದರ್ಶಗಳನ್ನು ಅನುಸರಿಸುತ್ತೇವೆ. ಇಂದು ನಾವು ಕುರಿ ಮಾಂಸವನ್ನು ತಿನ್ನುತ್ತೇವೆ. ಇದು ರಾಮನ ಆದರ್ಶ. ರಾಮ ಸಸ್ಯಾಹಾರಿಯಾಗಿರಲಿಲ್ಲ, ಮಾಂಸಾಹಾರಿಯಾಗಿದ್ದ ಎಂದು ತಿಳಿಸಿದ್ದಾರೆ.

  • ಶಾರುಖ್ ಖಾನ್ ಸಿಕ್ಕರೆ ಜೀವಂತ ಸುಡುವೆ: ಅಯೋಧ್ಯೆಯ ಸಾಧು ಕಿಡಿಕಿಡಿ

    ಶಾರುಖ್ ಖಾನ್ ಸಿಕ್ಕರೆ ಜೀವಂತ ಸುಡುವೆ: ಅಯೋಧ್ಯೆಯ ಸಾಧು ಕಿಡಿಕಿಡಿ

    ಬಾಲಿವುಡ್ ನಟ ಶಾರುಖ್ ಖಾನ್ (Shahrukh Khan) ನಟನೆಯ ಪಠಾಣ್ ಸಿನಿಮಾದ ‘ಬೇಷರಂ ರಂಗ್’ ಹಾಡನ್ನು ವಿರೋಧಿಸಿ ಮಂಗಳವಾರ ವಿಶ್ವ ಹಿಂದೂ ಪರಿಷತ್ ಅಯೋಧ್ಯೆಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಅಯೋಧ್ಯೆಯ (Ayodhya) ತಪಸ್ವಿ ಚಾವ್ನಿ ಮಠದ ಪರಮಹಂಸ ಆಚಾರ್ಯ (Paramahamsa Acharya) ಅವರು ಮಾತನಾಡಿ, ಶಾರುಖ್ ಖಾನ್ ನನ್ನ ಎದುರಿಗೆ ಸಿಕ್ಕರೆ ಜೀವಂತವಾಗಿ ಸುಟ್ಟು ಬಿಡುವೆ ಎಂದು ಗುಡುಗಿದ್ದಾರೆ. ಇಂತಹ ಹೇಳಿಕೆಯು ಆಘಾತಕಾರಿ ಆದಂಥದ್ದು ಎಂದು ಹಲವರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.

    ಪ್ರತಿಭಟನೆಯ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸಾಧು, ‘ಪಠಾಣ್ (Pathan) ಸಿನಿಮಾ ಸನಾತನ ಧರ್ಮಕ್ಕೆ ಅವಮಾನ ಮಾಡಿದೆ. ಸದ್ಯಕ್ಕೆ ಶಾರುಖ್ ಖಾನ್ ಅವರ ಪೋಸ್ಟರ್ ಗಳಿಗೆ ಬೆಂಕಿ ಹಚ್ಚಿದ್ದೇವೆ. ಒಂದು ವೇಳೆ ಅವರು ಏನಾದರೂ ನನ್ನ ಎದುರಿಗೆ ಬಂದರೆ ಜೀವಂತವಾಗಿ ಸುಡಲು ಹಿಂದುಮುಂದು ನೋಡುವುದಿಲ್ಲ. ಈ ಸಿನಿಮಾವನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡಲು ಬಿಡುವುದಿಲ್ಲ’ ಎಂದು ಅವರು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಇದನ್ನೂ ಓದಿ: ಡೇಂಜರ್ ಝೋನ್‌ನಲ್ಲಿ 8 ಸ್ಪರ್ಧಿಗಳು, ಯಾರ ಆಟಕ್ಕೆ ಬ್ರೇಕ್ ಹಾಕಲಿದ್ದಾರೆ ಬಿಗ್ ಬಾಸ್

    ಏನೇ ಪ್ರತಿಭಟನೆ ಮಾಡಿದರೂ, ಸಿನಿಮಾ ತಂಡವಂತೂ ಸುಮ್ಮನೆ ಕೂತಿಲ್ಲ. ಸಿನಿಮಾದ ಎರಡನೇ ಹಾಡು ನಾಳೆ ಬಿಡುಗಡೆ ಆಗುತ್ತಿದೆ. ಅದಕ್ಕೂ ಮುನ್ನ ಈ ಹಾಡಿನ ಒಂದೇ ಒಂದು ಫೋಟೋವನ್ನು ರಿಲೀಸ್ ಮಾಡಲಾಗಿದ್ದು, ದೀಪಿಕಾ ಪಡುಕೋಣೆ ಈ ಹಾಡಿನಲ್ಲೂ ಸಖತ್ ಹಾಟ್ ಹಾಟ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಈ ಹಾಡಿನಲ್ಲೂ ಅವರು ಗ್ಲಾಮರ್ ಗೆ ಯಾವುದೇ ಕೊರತೆಯನ್ನು ಮಾಡಿಲ್ಲ. ಹಾಗಾಗಿ ಈ ಹಾಡಿನ ಬಗ್ಗೆಯೂ ಅಷ್ಟೇ ನಿರೀಕ್ಷೆಯನ್ನು ಹೊಂದಲಾಗಿದೆ. ಈ ಹಾಡು ಯಾವ ರೀತಿಯಲ್ಲಿ ಮೂಡಿ ಬಂದಿದೆ ಎನ್ನುವುದು ಸದ್ಯಕ್ಕಿರುವ ಕುತೂಹಲ.

    ಪಠಾಣ್ ಸಿನಿಮಾದ ಎರಡನೇ ಹಾಡಾದ ‘ಜೂಮೇ ಜೋ ಪಠಾಣ್’ ನಾಳೆ ರಿಲೀಸ್ ಮಾಡುತ್ತಿರುವ ಕುರಿತು ನಿರ್ಮಾಣ ಸಂಸ್ಥೆಯು ವಿಷಯವನ್ನು ಹಂಚಿಕೊಂಡಿದ್ದು, ಈ ಹಾಡು ಕೂಡ ಸಖತ್ ಆಗಿಯೇ ಚರ್ಚೆ ಆಗಲಿದೆ ಎಂದು ಮೊದಲೇ ಹೇಳಿಕೊಂಡಿದೆ. ಹಾಗಾಗಿ ಮತ್ತೇನಾದರೂ ವಿವಾದಕ್ಕೆ ಕಾರಣವಾಗಿರುವ ಅಂಶಗಳು ಇರಬಹುದಾ ಎನ್ನುವ ಚರ್ಚೆ ಕೂಡ ನಡೆದಿದೆ. ಮೊದಲ ಹಾಡಿನಲ್ಲಿ ದೀಪಿಕಾ ಕೇಸರಿ ಬಿಕಿನಿ ಹಾಕಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಆದರೂ, ಚಿತ್ರತಂಡ ಈ ಕುರಿತು ತಲೆ ಕೆಡಿಸಿಕೊಂಡಿರಲಿಲ್ಲ.

    Live Tv
    [brid partner=56869869 player=32851 video=960834 autoplay=true]