Tag: Parag Agrawal

  • ಟ್ವಿಟ್ಟರ್ ಡೀಲ್ ರದ್ದು ಮಾಡುವ ಮೊದಲೇ ಪರಾಗ್‍ಗೆ ಮೆಸೇಜ್ ಮಾಡಿದ್ದ ಮಸ್ಕ್

    ಟ್ವಿಟ್ಟರ್ ಡೀಲ್ ರದ್ದು ಮಾಡುವ ಮೊದಲೇ ಪರಾಗ್‍ಗೆ ಮೆಸೇಜ್ ಮಾಡಿದ್ದ ಮಸ್ಕ್

    ವಾಷಿಂಗ್ಟನ್: ಟೆಸ್ಲಾ ಸಿಇಒ ಎಲಾನ್ ಮಸ್ಕ್ ಮತ್ತು ಟ್ವಿಟ್ಟರ್ ನಡುವಿನ ವಿವಾದ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ನಕಲಿ ಖಾತೆಗಳ ಬಗ್ಗೆ ಅಧಿಕೃತ ಮಾಹಿತಿ ನೀಡದ್ದಕ್ಕೆ ಮಸ್ಕ್ ಟ್ವಿಟ್ಟರ್ ಖರೀದಿ ಪ್ರಕ್ರಿಯೆಯನ್ನೇ ರದ್ದು ಮಾಡಿದ್ದಾರೆ.

    ಈಗ ಬಂದಿರುವ ಹೊಸ ಸುದ್ದಿಗಳ ಪ್ರಕಾರ ಈ ಡೀಲ್ ರದ್ದು ಮಾಡುವ ಮೊದಲೇ ಮಸ್ಕ್ ಟ್ವಿಟ್ಟರ್ ಸಿಇಒ ಪರಾಗ್ ಅಗರವಾಲ್ ಮಸ್ಕ್ ಸಂದೇಶ ಕಳುಹಿಸಿದ್ದರು. ಜೂನ್ 28 ರಂದೇ ಮಸ್ಕ್ ಪರಾಗ್ ಅಗರವಾಲ್ ಅವರಿಗೆ ಮೆಸೇಜ್ ಮಾಡಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಟ್ವಿಟ್ಟರ್‌ ಖರೀದಿ ಪ್ರಕ್ರಿಯೆಯನ್ನೇ ರದ್ದುಗೊಳಿಸಿದ ಮಸ್ಕ್‌

    _Elon Musk

    ಟ್ವಿಟ್ಟರ್ ಸಿಇಒ ಪರಾಗ್ ಅಗರವಾಲ್ ಅವರಿಗೆ ಟ್ವಿಟ್ಟರ್ ವಕೀಲರ ಬಗ್ಗೆ ಬರೆದು ಒಂದು ಪತ್ರವನ್ನು ಕಳುಹಿಸಿದ್ದಾರೆ. ಈ ಪತ್ರದಲ್ಲಿ ಮಸ್ಕ್, ಹಣಕಾಸಿನ ವಿವರಗಳ ಬಗ್ಗೆ ಮಾಹಿತಿ ಕೇಳಿದ ನಂತರ ಟ್ವಿಟ್ಟರ್ ವಕೀಲರು ನಮಗೆ ತೊಂದರೆ ಉಂಟುಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿಸಿದ್ದರು.

    ನಿಮ್ಮ ವಕೀಲರು ಕೆಲವು ಸಂಭಾಷಣೆಗಳನ್ನು ಇಟ್ಟುಕೊಂಡು ನಮಗೆ ತೊಂದರೆ ಉಂಟುಮಾಡಲು ಬಯಸುತ್ತಿದ್ದಾರೆ. ಅದನ್ನು ನಿಲ್ಲಿಸುವುದು ಅಗತ್ಯವಿದೆ ಎಂದು ಬರೆದು ಕಳುಹಿಸಿದ್ದಾರೆ. ಇದನ್ನೂ ಓದಿ: 100ಕ್ಕೂ ಹೆಚ್ಚು ಟ್ವಿಟ್ಟರ್ ಎಚ್‌ಆರ್ ಉದ್ಯೋಗಿಗಳು ವಜಾ

    ಮಸ್ಕ್ ಅವರು ಸಾಮಾಜಿಕ ಮಾಧ್ಯಮ `ಟ್ವಿಟ್ಟರ್’ ಕಂಪನಿಯನ್ನು 44 ಬಿಲಿಯನ್ ಡಾಲರ್(55,14,78,840) ಮೊತ್ತಕ್ಕೆ ಖರೀದಿಸಲು ಮುಂದಾಗಿದ್ದರು. ಆದರೆ ಅದರಿಂದ ಹಿಂದೆ ಸರಿಯಲು ನಿರ್ಧರಿಸಿದ ನಂತರ ಟ್ವಿಟ್ಟರ್, ಮಸ್ಕ್ ವಿರುದ್ಧ ಮೊಕದ್ದಮೆ ಹೂಡಿದೆ.

    Live Tv
    [brid partner=56869869 player=32851 video=960834 autoplay=true]

  • ನನ್ನ ಟ್ವಿಟ್ಟರ್ ರೀಚ್ ಇದ್ದಕ್ಕಿದ್ದಂತೆ ಕಡಿಮೆಯಾಗಿದೆ – ದಾಖಲೆ ಮುಂದಿಟ್ಟು ಪರಾಗ್‍ಗೆ ರಾಹುಲ್ ಪತ್ರ

    ನನ್ನ ಟ್ವಿಟ್ಟರ್ ರೀಚ್ ಇದ್ದಕ್ಕಿದ್ದಂತೆ ಕಡಿಮೆಯಾಗಿದೆ – ದಾಖಲೆ ಮುಂದಿಟ್ಟು ಪರಾಗ್‍ಗೆ ರಾಹುಲ್ ಪತ್ರ

    – ಸರ್ಕಾರದ ಸೂಚನೆ ಮೇರೆಗೆ ಟ್ವಿಟ್ಟರ್‌ನಿಂದ ಕ್ರಮ
    – ಕಳೆದ ಅಗಸ್ಟ್‌ನಿಂದ ಫಾಲೋವರ್ಸ್ ಸಂಖ್ಯೆ ಭಾರೀ ಇಳಿಕೆ

    ನವದೆಹಲಿ: ನನ್ನ ವಾಕ್ ಸ್ವಾಂತಂತ್ರ್ಯವನ್ನು ಹತ್ತಿಕ್ಕಲು ಸರ್ಕಾರದ ಒತ್ತಡದ ಮೇರೆಗೆ ಹಿಂಬಾಲಕರ ಸಂಖ್ಯೆ ಮೇಲೂ ಟ್ವಿಟ್ಟರ್ ನಿರ್ಬಂಧ ಹೇರಿದೆ ಎಂದು ಆರೋಪಿಸಿ ಟ್ವಿಟ್ಟರ್ ಸಿಇಒ ಪರಾಗ್ ಅಗರ್‍ವಾಲ್‍ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪತ್ರ ಬರೆದಿದ್ದಾರೆ.

    ಪತ್ರದಲ್ಲಿ ಡಿಸೆಂಬರ್ 27 ರಿಂದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಕಾಂಗ್ರೆಸ್ ನಾಯಕ ಶಶಿ ತರೂರ್ ಅವರೊಂದಿಗಿನ ತಮ್ಮ ಟ್ವಿಟ್ಟರ್ ಖಾತೆಯ ಡೇಟಾದ ವಿಶ್ಲೇಷಣೆಯನ್ನು ಹೋಲಿಕೆ ಮಾಡಿ ಪತ್ರದಲ್ಲಿ ದೂರು ನೀಡಿದ್ದಾರೆ.

    ಪತ್ರದಲ್ಲಿ ಏನಿದೆ?
    ನಾನು ಹತ್ತಿರ ಹತ್ತಿರ 2 ಕೋಟಿ ಹಿಂಬಾಲಕರನ್ನು ಹೊಂದಿದ್ದೇನೆ. ಆದರೆ ಹಿಂಬಾಲಕರ ಸಂಖ್ಯೆಯನ್ನು ಇದ್ದಕ್ಕಿದ್ದಂತೆ ನಿಬರ್ಂಧಿಸಲಾಗಿದೆ. ನನ್ನ ಟ್ವಿಟ್ಟರ್ ಖಾತೆಯು ಸಕ್ರಿಯವಾಗಿದೆ. ಪ್ರತಿದಿನ ಸುಮಾರು ಎಂಟರಿಂದ ಹತ್ತು ಸಾವಿರದವರೆಗೆ ಹೊಸ ಹಿಂಬಾಲಕರು ಸೇರ್ಪಡೆಗೊಳ್ಳುತ್ತಿದ್ದರು. ಕಳೆದ ಜುಲೈವರೆಗೆ ಈ ರೀತಿಯೇ ಇತ್ತು. ಆದರೆ ಅಗಸ್ಟ್‌ನಿಂದ ಸಂಖ್ಯೆ ಕಡಿಮೆಯಾಗುತ್ತಿದೆ.

    ಕಳೆದ ಅಗಸ್ಟ್ ತಿಂಗಳಿನಲ್ಲಿ ದೆಹಲಿಯ ಅತ್ಯಾಚಾರ ಸಂತ್ರಸ್ತೆಯ ಕುಟುಂಬದ ಪರ ಧ್ವನಿ ಎತ್ತಿದ್ದೆ. ರೈತರೊಂದಿಗೆ ಒಗ್ಗಟ್ಟಿನಿಂದ ನಿಂತಿದ್ದೇನೆ ಮತ್ತು ಹಲವು ಮಾನವ ಹಕ್ಕುಗಳ ವಿಷಯಗಳಲ್ಲಿ ಸರ್ಕಾರದ ವಿರುದ್ಧ ಹೋರಾಡಿದ್ದೆ. ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಲು ರೈತರು ಮಾಡುತ್ತಿದ್ದ ಪ್ರತಿಭಟನೆಯ ಪರ ನಾನು ಮಾಡಿದ್ದ ವೀಡಿಯೋ ಅತಿ ಹೆಚ್ಚು ವಿಕ್ಷಣೆಯಾಗಿತ್ತು.

    ಕಳೆದ ವರ್ಷ ಅಗಸ್ಟ್‌ನಲ್ಲಿ ಎಂಟು ದಿನಗಳ ಕಾಲ ಖಾತೆ ಅಮಾನತುಗೊಳಿಸಿದ ನಂತರ ಹಲವಾರು ತಿಂಗಳುಗಳವರೆಗೆ ಸ್ಥಗಿತಗೊಂಡಿತ್ತು. ಆ ನಂತರದಲ್ಲಿ ಟ್ವಿಟ್ಟರ್‌ನಲ್ಲಿ ಹೊಸ ಅನುಯಾಯಿಗಳನ್ನು ಪಡೆಯುವುದನ್ನು ನಿರ್ಬಂಧಿಸಿದೆ. ಆದರೆ ಅದೇ ಅವಧಿಯಲ್ಲಿ, ಇತರ ರಾಜಕಾರಣಿಗಳು ತಮ್ಮ ಹೊಸ ಅನುಯಾಯಿಗಳ ಸಂಖ್ಯೆಯನ್ನು ಪಡೆಯುತ್ತಿದ್ದಾರೆ. ಅಗಸ್ಟ್‌ನಿಂದ ತಮ್ಮ ಟ್ವಿಟ್ಟರ್ ಖಾತೆಯನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ಅವರು ಸಿದ್ದರಾಮಯ್ಯರ ಬಗ್ಗೆ ಮಾತನಾಡಬಾರದು: ಶಿವರಾಮೇಗೌಡ

    ನನ್ನ ವಾಕ್ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲು ಸರ್ಕಾರದಿಂದ ಒತ್ತಡವಿದೆ. ಯಾವುದೇ ಕಾನೂನುಬದ್ಧ ಕಾರಣವಿಲ್ಲದೆ ನನ್ನ ಖಾತೆಯನ್ನು ಕೆಲವು ದಿನಗಳವರೆಗೆ ನಿರ್ಬಂಧಿಸಲಾಗಿದೆ. ಇನ್ನೂ ಅನೇಕ ಟ್ವಿಟರ್ ಖಾತೆಗಳಿವೆ. ಅವು ಕಾನೂನಿನ ವಿರುದ್ಧ ಯಾವುದೇ ಫೋಟೋವನ್ನು ಪೋಸ್ಟ್ ಮಾಡಿದರೂ ಆ ಖಾತೆಗಳನ್ನು ನಿರ್ಬಂಧಿಸಲಾಗಿಲ್ಲ. ನನ್ನ ಖಾತೆಯ ಮೇಲೆ ಕ್ರಮ ಯಾಕೆ ಎಂದು ರಾಹುಲ್ ಗಾಂಧಿ ಪತ್ರದಲ್ಲಿ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಪಂಜಾಬ್ ಚುನಾವಣೆ: ನವಜೋತ್ ಸಿಂಗ್ ಸಿಧು ವಿರುದ್ಧ ಬಿಕ್ರಮ್ ಸಿಂಗ್ ಕಣಕ್ಕೆ

  • ಟ್ವಿಟ್ಟರ್‌ CEO ಜಾಕ್‌ ಡಾರ್ಸಿ ರಾಜೀನಾಮೆ – ಭಾರತೀಯ ಪರಾಗ್‌ ಅಗರ್‌ವಾಲ್‌ಗೆ ಒಲಿಯಿತು ಪಟ್ಟ

    ಟ್ವಿಟ್ಟರ್‌ CEO ಜಾಕ್‌ ಡಾರ್ಸಿ ರಾಜೀನಾಮೆ – ಭಾರತೀಯ ಪರಾಗ್‌ ಅಗರ್‌ವಾಲ್‌ಗೆ ಒಲಿಯಿತು ಪಟ್ಟ

    ಕ್ಯಾಲಿಫೋರ್ನಿಯಾ: ಟ್ವಿಟ್ಟರ್‌ ಸಹ-ಸಂಸ್ಥಾಪಕ ಜಾಕ್ ಡಾರ್ಸಿ ಅವರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ  ರಾಜೀನಾಮೆ ನೀಡಿದ್ದಾರೆ.

    “ನಾನು ಟ್ವಿಟರ್ ಅನ್ನು ಪ್ರೀತಿಸುತ್ತೇನೆ” ಎಂದು ಡಾರ್ಸಿ ಟ್ವೀಟ್ ಮಾಡಿ ರಾಜೀನಾಮೆ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಪ್ರಸ್ತುತ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿರುವ ಪರಾಗ್ ಅಗರ್‌ವಾಲ್ ಸಿಇಒ ಸ್ಥಾನ ವಹಿಸಿಕೊಳ್ಳಲಿದ್ದಾರೆ ಎಂದು ಜಾಕ್‌ ಡಾರ್ಸಿ ತಿಳಿಸಿದ್ದಾರೆ.

    2009ರಲ್ಲಿ ಡಾರ್ಸಿ ಹಣಕಾಸು ಪಾವತಿ ಸಂಸ್ಥೆ ʼಸ್ಕ್ವೇರ್‌ʼ ಸ್ಥಾಪಿಸಿದ್ದರು. ಈ ಕಂಪನಿಯಲ್ಲಿ ಡಾರ್ಸಿ ಮುಖ್ಯ ಕಾರ್ಯನಿರ್ವಹಕರಾಗಿದ್ದಾರೆ. ಕೆಲ ದಿನಗಳ ಹಿಂದೆ ದೊಡ್ಡ ಹೂಡಿಕೆದಾರರು ಡಾರ್ಸಿ ಅವರು ಎರಡು ಕಂಪನಿಗಳನ್ನು  ಪರಿಣಾಮಕಾರಿಯಾಗಿ ಮುನ್ನಡೆಸಬಹುದೇ ಎಂದು ಬಹಿರಂಗವಾಗಿ ಪ್ರಶ್ನಿಸಿದ್ದರು. ಇದನ್ನೂ ಓದಿ: ಮೂರು ಕೃಷಿ ಕಾನೂನು ವಾಪಸ್ – ಖುಷಿಯಾಗದ ಕಾಂಗ್ರೆಸ್ ನಾಯಕರು

    ಈ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಡಾರ್ಸಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆ ಎಂಬ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಹರಿಯತೊಡಗಿತ್ತು. ಈಗ ಡಾರ್ಸಿ ಅಧಿಕೃತವಾಗಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

    ಈ ವರ್ಷದ ಜನವರಿ 6ರ ಕ್ಯಾಪಿಟಲ್ ಹಿಲ್‌ ಗಲಭೆ ಮತ್ತು ಈ ಘಟನೆಯ ನಂತರ ಡೊನಾಲ್ಡ್‌ ಟ್ರಂಪ್ ಮಾಡಿದ ಟ್ವೀಟ್‌ಗಳು ಸಾರ್ವಜನಿಕ ಗಲಾಟೆಗೆ ಕಾರಣವಾಗಿದೆ ಎಂದು ಆರೋಪಿಸಿ ಟ್ವಿಟ್ಟರ್‌ ಕಂಪನಿ ಟ್ರಂಪ್‌ ಅವರ ಖಾತೆಯನ್ನು ಸಂಪೂರ್ಣವಾಗಿ ನಿಷೇಧಿಸಿತ್ತು. ಈ ನಿಷೇಧ ಕ್ರಮವನ್ನು ಡಾರ್ಸಿ ಸಮರ್ಥಿಸಿಕೊಂಡಿದ್ದರು. ಟ್ವಿಟ್ಟರ್‌ ಈ ಕ್ರಮ ವಿಶ್ವದೆಲ್ಲೆಡೆ ಭಾರೀ ಟೀಕೆಗೆ ಗುರಿಯಾಗಿತ್ತು.

    ಪರಾಗ್‌ ಅಗರ್‌ವಾಲ್‌ ಯಾರು?
    ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಬಾಂಬೆಯ ಹಳೆಯ ವಿದ್ಯಾರ್ಥಿ ಪರಾಗ್‌ ಅಗರವಾಲ್ ಅವರನ್ನು ಮಾರ್ಚ್ 8, 2018 ರಂದು ಟ್ವಿಟ್ಟರ್‌ ಕಂಪನಿಯ ಮುಖ್ಯ ತಂತ್ರಜ್ಞಾನ ಅಧಿಕಾರಿ(ಸಿಟಿಒ) ಆಗಿ ಆಗಿ ನೇಮಿಸಲಾಯಿತು. ಅವರು ಡಿಸೆಂಬರ್ 2016 ರಲ್ಲಿ ಕಂಪನಿಯನ್ನು ತೊರೆದ ಆಡಮ್ ಮೆಸಿಂಜರ್ ಅವರ ಉತ್ತರಾಧಿಕಾರಿಯಾಗಿ ನೇಮಕವಾಗಿದ್ದರು. ಇದನ್ನೂ ಓದಿ: ಕಾಂಗ್ರೆಸ್‍ಗೆ ತಾಕತ್ತಿದ್ದರೆ ಬಿಜೆಪಿ ಸರ್ಕಾರದ ವಿರುದ್ಧದ 40% ಆರೋಪ ಸಾಬೀತು ಪಡಿಸಲಿ: ಶ್ರೀರಾಮುಲು

    ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಪಿಎಚ್‌ಡಿ ಪೂರ್ಣಗೊಳಿಸಿದ ನಂತರ ಅಗರವಾಲ್ ಅಕ್ಟೋಬರ್ 2011 ರಲ್ಲಿ ಟ್ವಿಟ್ಟರ್‌ ಕಂಪನಿಯನ್ನು ಸೇರಿದ್ದರು. ಸ್ಟ್ಯಾನ್‌ಫೋರ್ಡ್‌ನಲ್ಲಿ ಓದುತ್ತಿದ್ದಾಗ, ಅವರು ಮೈಕ್ರೋಸಾಫ್ಟ್, ಯಾಹೂ ಮತ್ತು AT&T ಲ್ಯಾಬ್‌ಗಳಿಗೆ ಸಂಶೋಧನಾ ಇಂಟರ್ನಿ ಆಗಿ ಕೆಲಸ ಮಾಡಿದ್ದರು.