Tag: Parag Agarwal

  • ಮಸ್ಕ್‌ ತೆಕ್ಕೆಗೆ ಟ್ವಿಟ್ಟರ್‌ – ಅಗರ್‌ವಾಲ್‌ಗೆ ಸಿಗಲಿದೆ 345 ಕೋಟಿ ರೂ. ಪ್ಯಾಕೇಜ್‌

    ಮಸ್ಕ್‌ ತೆಕ್ಕೆಗೆ ಟ್ವಿಟ್ಟರ್‌ – ಅಗರ್‌ವಾಲ್‌ಗೆ ಸಿಗಲಿದೆ 345 ಕೋಟಿ ರೂ. ಪ್ಯಾಕೇಜ್‌

    ವಾಷಿಂಗ್ಟನ್‌: ವಜಾಗೊಂಡಿರುವ ಸಿಇಒ ಪರಾಗ್‌ ಅಗರ್‌ವಾಲ್‌(Parag Agrawa) ಅವರಿಗೆ ಟ್ವಿಟ್ಟರ್‌(Twitter) ಕಂಪನಿ 345 ಕೋಟಿ ರೂ. ಪರಿಹಾರ ಪ್ಯಾಕೇಜ್‌ ನೀಡುವ ಸಾಧ್ಯತೆಯಿದೆ.

    ಎಲಾನ್‌ ಮಸ್ಕ್‌ ಟ್ವಿಟ್ಟರ್‌ ಕಂಪನಿಯನ್ನು ಖರೀದಿಸಲಿದ್ದಾರೆ ಎಂಬ ಸುದ್ದಿ ಪ್ರಕಟವಾದ ಬೆನ್ನಲ್ಲೇ ಪರಾಗ್‌ ಅಗರ್‌ವಾಲ್‌ ಅವರನ್ನೂ ವಜಾಗೊಳಿಸಬಹುದು ಎಂಬ ಸುದ್ದಿ ಏಪ್ರಿಲ್‌ನಲ್ಲೇ ಪ್ರಕಟವಾಗಿತ್ತು. ಈಗ ಆ ಸುದ್ದಿ ನಿಜವಾಗಿದ್ದು ಪರಾಗ್‌ ಜೊತೆ ಪ್ರಮುಖ ಹುದ್ದೆಯಲ್ಲಿದ್ದವರನ್ನು ವಜಾಗೊಳಿಸಲಾಗಿದೆ.

    ದಿಢೀರ್‌ ವಜಾಗೊಳಿಸಿದ ಹಿನ್ನೆಲೆಯಲ್ಲಿ ಟ್ವಿಟ್ಟರ್‌ ಕಂಪನಿ ಪರಾಗ್‌ ಅಗರ್‌ವಾಲ್‌ ಅವರಿಗೆ 42 ದಶಲಕ್ಷ ಡಾಲರ್‌(ಅಂದಾಜು 345,71,45,328 ರೂ.) ಪ್ಯಾಕೇಜ್‌ ನೀಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

    ಏಪ್ರಿಲ್ 14 ರಂದು ಸೆಕ್ಯುರಿಟೀಸ್ ಫೈಲಿಂಗ್‌ನಲ್ಲಿ ಪ್ರಸ್ತುತ ಇರುವ ಟ್ವಿಟ್ಟರ್‌ ಆಡಳಿತದ ಬಗ್ಗೆ ನನಗೆ ವಿಶ್ವಾಸವಿಲ್ಲ ಎಂದು ಮಸ್ಕ್‌ ತಿಳಿಸಿದ್ದರು. ಇದನ್ನೂ ಓದಿ: ಮಸ್ಕ್‌ ತೆಕ್ಕೆಗೆ ಟ್ವಿಟ್ಟರ್‌ – ಸಿಇಒ ಪರಾಗ್‌ ಅಗರ್‌ವಾಲ್‌ ಸೇರಿದಂತೆ ಪ್ರಮುಖರು ವಜಾ

    ಈ ಹಿಂದೆ ಮುಖ್ಯ ಟೆಕ್ನಾಲಜಿ ಅಧಿಕಾರಿಯಾಗಿದ್ದ ಪರಾಗ್‌ ಕಳೆದ ನವೆಂಬರ್‌ನಲ್ಲಿ ಸಿಇಒ ಆಗಿ ಅಧಿಕಾರ ಸ್ವೀಕರಿಸಿದ್ದರು. ಐಐಟಿ ಬಾಂಬೆ ಮತ್ತು ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಯಾಗಿರುವ ಅಗರ್‌ವಾಲ್‌ ದಶಕಗಳ ಹಿಂದೆ ಟ್ವಿಟ್ಟರ್‌ ಕಂಪನಿಯನ್ನು ಸೇರಿದ್ದರು.

    ಪರಾಗ್ ಅಗರ್‌ವಾಲ್‌(Parag Agarwal) ಜೊತೆ ಕಾನೂನು, ನೀತಿ ಮತ್ತು ಟ್ರಸ್ಟ್ ಮುಖ್ಯಸ್ಥರಾದ ವಿಜಯ ಗದ್ದೆ, ಮುಖ್ಯ ಹಣಕಾಸು ಅಧಿಕಾರಿ ನೆಡ್ ಸೆಗಲ್ ಸೇರಿದಂತೆ ಪ್ರಮುಖರನ್ನು ವಜಾ ಮಾಡಲಾಗಿದೆ ಎಂದು ವರದಿಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಮಸ್ಕ್‌ ತೆಕ್ಕೆಗೆ ಟ್ವಿಟ್ಟರ್‌ – ಸಿಇಒ ಪರಾಗ್‌ ಅಗರ್‌ವಾಲ್‌ ಸೇರಿದಂತೆ ಪ್ರಮುಖರು ವಜಾ

    ಮಸ್ಕ್‌ ತೆಕ್ಕೆಗೆ ಟ್ವಿಟ್ಟರ್‌ – ಸಿಇಒ ಪರಾಗ್‌ ಅಗರ್‌ವಾಲ್‌ ಸೇರಿದಂತೆ ಪ್ರಮುಖರು ವಜಾ

    ವಾಷಿಂಗ್ಟನ್‌: ಟೆಸ್ಲಾ ಕಂಪನಿಯ ಮುಖ್ಯಸ್ಥ ಎಲಾನ್‌ ಮಸ್ಕ್‌(Elon Musk) ಟ್ವಿಟ್ಟರ್‌ ಕಂಪನಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಬೆನ್ನಲ್ಲೇ ಸಿಇಒ ಪರಾಗ್‌ ಅಗರ್‌ವಾಲ್‌ ಮತ್ತು ಅದರ ಉನ್ನತ ಅಧಿಕಾರಿಗಳನ್ನು ವಜಾಗೊಳಿಸಿದ್ದಾರೆ.

    ಟ್ವಿಟರ್(Twitter) ಸಿಇಒ ಪರಾಗ್ ಅಗರ್‌ವಾಲ್‌(Parag Agarwal) ಜೊತೆ ಕಾನೂನು, ನೀತಿ ಮತ್ತು ಟ್ರಸ್ಟ್ ಮುಖ್ಯಸ್ಥರಾದ ವಿಜಯ ಗದ್ದೆ, ಮುಖ್ಯ ಹಣಕಾಸು ಅಧಿಕಾರಿ ನೆಡ್ ಸೆಗಲ್ ಸೇರಿದಂತೆ ಪ್ರಮುಖರನ್ನು ವಜಾ ಮಾಡಲಾಗಿದೆ ಎಂದು ವರದಿಯಾಗಿದೆ.

    ಕಂಪನಿಯ ಸಿಇಒ ಜಾಕ್‌ ಡೋರ್ಸೆ ರಾಜೀನಾಮೆ ನೀಡಿದ ಬೆನ್ನಲ್ಲೇ ಭಾರತೀಯ ಮೂಲದ ಪರಾಗ್‌ ಅಗರ್‌ವಾಲ್‌ ಕಂಪನಿಯ ಸಿಇಒ ಸ್ಥಾನವನ್ನು ಅಲಂಕರಿಸಿದ್ದರು. ಇದನ್ನೂ ಓದಿ: ಹೌದು, ನಾವು ಎಡಪಂಥೀಯ ಚಿಂತನೆಗಳನ್ನು ಬೆಂಬಲಿಸುತ್ತವೆ – ಟ್ವಿಟ್ಟರ್‌ ಉದ್ಯೋಗಿಯ ವೀಡಿಯೋ ವೈರಲ್‌

    ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌(Donald Trump) ಅವರನ್ನು ಟ್ವಿಟ್ಟರ್‌ನಿಂದ ಶಾಶ್ವತವಾಗಿ ಗೇಟ್‌ಪಾಸ್‌ ನೀಡುವ ಸಂಬಂಧ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಜಯ ಗದ್ದೆ ಪ್ರಮುಖ ಪಾತ್ರವನ್ನು ವಹಿಸಿದ್ದರು.

    ಟ್ವಿಟ್ಟರ್‌ ಕಂಪನಿ ತಮ್ಮ ತೆಕ್ಕೆ ಬಂದ ಬೆನ್ನಲ್ಲೇ ಮಸ್ಕ್‌ ಹಕ್ಕಿ ಈಗ ಮುಕ್ತವಾಗಿದೆ ಎಂದು ಟ್ವೀಟ್‌ ಮಾಡಿದ್ದಾರೆ.

    ಮಸ್ಕ್ ಅವರು ಕಳೆದ ಏಪ್ರಿಲ್‌ನಲ್ಲಿ ಟ್ವಿಟ್ಟರ್‌’ ಕಂಪನಿಯನ್ನು 44 ಬಿಲಿಯನ್ ಡಾಲರ್ (ಸುಮಾರು 3.36 ಲಕ್ಷ ಕೋಟಿ ರೂ.) ಮೊತ್ತಕ್ಕೆ ಖರೀದಿಸಲು ಮುಂದಾಗಿದ್ದರು. ಅದಕ್ಕೆ ಅಗತ್ಯವಿರುವ ಹಣ ಸಂಗ್ರಹಿಸಲು ಟೆಸ್ಲಾ ಕಂಪನಿಯ 52.3 ಲಕ್ಷ ಷೇರುಗಳನ್ನು ಮಾರಾಟ ಮಾಡಿದ್ದರು.  ಇದನ್ನೂ ಓದಿ: ಪತ್ರಿಕಾ ಅಂಕಣದಿಂದಾಗಿ ಟ್ವಿಟ್ಟರ್‌ ಕಂಪನಿ ಖರೀದಿಗೆ ಮುಂದಾದ್ರಾ ಮಸ್ಕ್‌?

    ನಿತ್ಯದ ಟ್ವಿಟ್ಟರ್ ಬಳಕೆದಾರರ ಪೈಕಿ ಶೇ.5 ಕ್ಕಿಂತ ಕಡಿಮೆ ನಕಲಿ ಅಥವಾ ಸ್ಪ್ಯಾಮ್ ಖಾತೆಗಳಿರುವುದಾಗಿ ಟ್ವಿಟ್ಟರ್ ಈ ಹಿಂದೆ ಹೇಳಿತ್ತು. ಮೊದಲ ತ್ರೈಮಾಸಿಕದಲ್ಲಿ ಕಂಪನಿಯು 22.9 ಕೋಟಿ ಬಳಕೆದಾರರಿಗೆ ಜಾಹೀರಾತು ಸೇವೆ ಒದಗಿಸಿತ್ತು. ಆದರೆ ಸ್ಪ್ಯಾಮ್ ಬಾಟ್ಸ್ (ನಕಲಿ ಖಾತೆಗಳ ಮೂಲಕ ಟ್ವೀಟ್‌ಗಳನ್ನು ಹಂಚುವ ತಾಂತ್ರಿಕ ವ್ಯವಸ್ಥೆ)ಯನ್ನು ಮೊದಲು ತೆರವುಗೊಳಿಸುವಂತೆ ಮಸ್ಕ್ ಬೇಡಿಕೆ ಇಟ್ಟಿದ್ದರು. ತನ್ನ ಬೇಡಿಕೆಗೆ ಸರಿಯಾದ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಮಸ್ಕ್‌ ಟ್ವಿಟ್ಟರ್‌ ಖರೀದಿ ಪ್ರಕ್ರಿಯೆಯನ್ನೇ ರದ್ದು ಮಾಡಿದ್ದರು.

    ಮಸ್ಕ್‌ ಖರೀದಿ ಪ್ರಕ್ರಿಯೆಯಿಂದ ಹಿಂದೆ ಸರಿದ ಬೆನ್ನಲ್ಲೇ ಟ್ವಿಟ್ಟರ್‌ ಷೇರು ಮೌಲ್ಯ ಭಾರೀ ಕುಸಿತ ಕಂಡಿತ್ತು. ಒಪ್ಪಂದದ ನಿಯಮಗಳ ಪ್ರಕಾರ ಎಲೋನ್ ಮಸ್ಕ್‌ ವಹಿವಾಟನ್ನು ಪೂರ್ಣಗೊಳಿಸದಿದ್ದರೆ 1 ಶತಕೋಟಿ ಡಾಲರ್‌ ಬ್ರೇಕಪ್ ಶುಲ್ಕವನ್ನು ಪಾವತಿಸಬೇಕಾಗಿತ್ತು. ಈ ಬ್ರೇಕಪ್‌ ಶುಲ್ಕ ಪಾವತಿಸುವ ಸಂಬಂಧ ಟ್ವಿಟ್ಟರ್‌ ಈಗ ಕೋರ್ಟ್‌ ಮೊರೆ ಹೋಗಿತ್ತು. ಅಷ್ಟೇ ಅಲ್ಲದೇ ಟ್ವಿಟ್ಟರ್‌ ಷೇರು ಮೌಲ್ಯ ಕಡಿಮೆಯಾಗಲು ಮಸ್ಕ್‌ ನಿರ್ಧಾರವೇ ಕಾರಣ ಎಂದು ಆರೋಪಿಸಿತ್ತು. ಈ ಎಲ್ಲಾ ಬೆಳವಣಿಗೆಯ ಮಧ್ಯೆ ಮಸ್ಕ್‌ ಅವರು ತಮ್ಮ ನಿರ್ಧಾರವನ್ನು ಬದಲಾಯಿಸಿ ಟ್ವಿಟ್ಟರ್‌ ಕಂಪನಿಯನ್ನು ಖರೀದಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಟ್ವಿಟ್ಟರ್‌ನಲ್ಲಿ ಯಾರು ದೀಪ ಬೆಳಗಿಸಲು ಕೆಲಸ ಮಾಡುತ್ತಿಲ್ಲ: ಟ್ವಿಟ್ಟರ್ ಸಿಇಒ

    ಟ್ವಿಟ್ಟರ್‌ನಲ್ಲಿ ಯಾರು ದೀಪ ಬೆಳಗಿಸಲು ಕೆಲಸ ಮಾಡುತ್ತಿಲ್ಲ: ಟ್ವಿಟ್ಟರ್ ಸಿಇಒ

    ವಾಷಿಂಗ್ಟನ್: ಟ್ವಿಟ್ಟರ್‌ನಲ್ಲಿ ಯಾರು ದೀಪ ಬೆಳಗಿಸಬೇಕು ಎಂದು ಕೆಲಸ ಮಾಡುತ್ತಿಲ್ಲ ಎಂದು ಟ್ವಿಟ್ಟರ್ ಸಿಇಒ ಪರಾಗ್ ಅಗರವಾಲ್ ಟ್ವೀಟ್ ಮಾಡುವ ಮೂಲಕ ಹೊಸ ಬದಲಾವಣೆ ಕುರಿತು ಹಂಚಿಕೊಂಡಿದ್ದಾರೆ.

    ಪರಾಗ್ ಅವರು ತಮ್ಮ ತಂಡದಲ್ಲಿ ಇತ್ತೀಚಿಗೆ ನಡೆಯುತ್ತಿರುವ ಬದಲಾವಣೆಗಳ ಕುರಿತು ವಿವರಗಳನ್ನು ಥ್ರೆಡ್ ಪೋಸ್ಟ್ ಮಾಡಿದ್ದಾರೆ. ಮೈಕ್ರೋ-ಬ್ಲಾಗಿಂಗ್ ಸೈಟ್ ಅನ್ನು ಟೆಸ್ಲಾ ಸಿಇಒ ಎಲೋನ್ ಮಸ್ಕ್ ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಿದಾಗಿನಿಂದ ಇಲ್ಲಿವರೆಗೂ ಅವರ ತಂಡದ ಮೇಲೆ ಬೀರಿರುವ ಪರಿಣಾಮವನ್ನು ವಿವರಿಸಿದ್ದಾರೆ. ಇದನ್ನೂ ಓದಿ: ಉಡುಪಿ ಪ್ರವಾಸ ಕೈಗೊಂಡಿರುವ ನಿರ್ಮಲಾ ಸೀತಾರಾಮನ್

    ಟ್ವೀಟ್‍ನಲ್ಲಿ ಏನಿದೆ?
    ಟ್ವಿಟ್ಟರ್‌ನಲ್ಲಿ ಕಾರ್ಯನಿರ್ವಾಹಿಸುತ್ತಿದ್ದ ಇಬ್ಬರು ಹಿರಿಯ ಕೆಲಸಗಾರರನ್ನು ವಜಾಗೊಳಿಸಿದ ಒಂದು ದಿನದ ನಂತರ ದೀರ್ಘ ಪೋಸ್ಟ್ ಮಾಡಿದ ಪರಾಗ್, 44 ಶತಕೋಟಿ ವ್ಯವಹಾರವನ್ನು ಪ್ರಸ್ತುತ ತಡೆಹಿಡಿಯಲಾಗಿದೆ ಎಂದು ಘೋಷಿಸಿದರು. ಈ ಕಂಪನಿಯನ್ನು ಸ್ವಾಧೀನ ಪಡೆದುಕೊಂಡರು ‘ಲೇಮ್-ಡಕ್’ ಸಿಇಒ ಬದಲಾವಣೆಗಳನ್ನು ಏಕೆ ಮಾಡುತ್ತಾರೆ ಎಂದು ಕೆಲವರು ನನ್ನನ್ನು ಪ್ರಶ್ನೆ ಮಾಡುತ್ತಿದ್ದಾರೆ.

    ಈ ಪ್ರಶ್ನೆಗೆ ನಾನು ತುಂಬಾ ಸರಳವಾಗಿ ಉತ್ತರಿಸುತ್ತೇನೆ. ನಾನು ಈ ಡೀಲ್ ಕ್ಲೋಸ್ ಮಾಡಲು ಯೋಚನೆ ಮಾಡುತ್ತಿರುವಾಗ ಎಲ್ಲ ರೀತಿಯ ಸನ್ನಿವೇಶಗಳಿಗೂ ನಾವು ಸಿದ್ಧನಾಗಿರಬೇಕು. ಯಾವಾಗಲೂ ಟ್ವಿಟ್ಟರ್‌ಗೆ ಸರಿಯಾದದ್ದನ್ನು ಮಾಡಬೇಕಾಗಿದೆ. ಟ್ವಿಟ್ಟರ್ ಮುನ್ನಡೆಸಲು ಮತ್ತು ನಿರ್ವಹಿಸಲು ನಾನು ಜವಾಬ್ದಾರನಾಗಿರುತ್ತೇನೆ. ನಮ್ಮ ಕೆಲಸವು ಪ್ರಬಲವಾಗಿದೆ. ಇದನ್ನೂ ಓದಿ: ಜನರು ಕಡಿಮೆ ನಾಟಕವನ್ನು ಬಯಸಿದ್ದರಿಂದ ಬೈಡನ್ ಆಯ್ಕೆಯಾದರು: ಟ್ರಂಪ್‌ ಕಾಲೆಳೆದ ಮಸ್ಕ್ 

    ಟ್ವಿಟ್ಟರ್‌ನಲ್ಲಿ ಯಾರೂ ದೀಪ ಬೆಳಗಿಸಲು ಕೆಲಸ ಮಾಡುತ್ತಿಲ್ಲ. ನಾವು ನಮ್ಮ ಕೆಲಸದ ಬಗ್ಗೆ ಹೆಮ್ಮೆ ಪಡುತ್ತೇವೆ. ಕಂಪನಿಯ ಭವಿಷ್ಯದ ಮಾಲೀಕತ್ವವನ್ನು ಲೆಕ್ಕಿಸದೆಯೇ, ನಾವು ಗ್ರಾಹಕರು, ಪಾಲುದಾರರು, ಷೇರುದಾರರು ಮತ್ತು ನಿಮ್ಮೆಲ್ಲರಿಗೂ ಉತ್ಪನ್ನ ಮತ್ತು ವ್ಯಾಪಾರಗಳ ಬಗ್ಗೆ ಹೆಚ್ಚು ಗಮನ ಕೊಡುತ್ತೇನೆ ಎಂದು ಬರೆದುಕೊಂಡಿದ್ದಾರೆ.

  • ಎಲೋನ್ ಮಸ್ಕ್ ಟ್ವಿಟ್ಟರ್ ಮಂಡಳಿಯ ಭಾಗವಲ್ಲ: ಪರಾಗ್ ಅಗರ್ವಾಲ್

    ಎಲೋನ್ ಮಸ್ಕ್ ಟ್ವಿಟ್ಟರ್ ಮಂಡಳಿಯ ಭಾಗವಲ್ಲ: ಪರಾಗ್ ಅಗರ್ವಾಲ್

    ವಾಷಿಂಗ್ಟನ್: ಕಳೆದ ವಾರ ಟ್ವಿಟ್ಟರ್ ಸಿಇಒ ಪರಾಗ್ ಅಗರ್ವಾಲ್ ಬಿಲಿಯನೇರ್ ಎಲೋನ್ ಮಸ್ಕ್ ಟ್ವಿಟ್ಟರ್ ಮಂಡಳಿಯ ಭಾಗವಾಗಲಿದ್ದಾರೆ ಎಂದು ಘೋಷಿಸಿದ್ದರು. ಆದರೆ ಇದೀಗ ಟ್ವಿಟ್ಟರ್ ಸಿಇಒ ತಮ್ಮ ಮಾತನ್ನು ಬದಲಿಸಿದ್ದಾರೆ.

    ಪರಾಗ್ ಅಗರ್ವಾಲ್ ಟೆಸ್ಲಾ ಮುಖ್ಯಸ್ಥ ಮಸ್ಕ್ ಟ್ವಿಟ್ಟರ್ ಮಂಡಳಿಯ ಭಾಗವಾಗಲು ಬಯಸುವುದಿಲ್ಲ. ಆದರೆ ಕಂಪನಿಯನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಹೇಳಿದ್ದಾರೆ.

    ಎಲೋನ್ ಟ್ವಿಟ್ಟರ್ ಮಂಡಳಿಯನ್ನು ಸೇರದಿರಲು ನಿರ್ಧರಿಸಿದ್ದಾರೆ. ಈ ಬಗ್ಗೆ ನಾನು ಎಲೋನ್ ಅವರೊಂದಿಗೆ ಅನೇಕ ಚರ್ಚೆಗಳನ್ನು ನಡೆಸಿದ್ದೇನೆ ಹಾಗೂ ಕಂಪನಿಗೆ ಮುಂದೆ ಆಗಬಹುದಾದ ಅಪಾಯಗಳನ್ನು ಸರಿಪಡಿಸಲು ಮುಂದಾಗಿದ್ದೇನೆ. ಮಂಡಳಿಯ ಎಲ್ಲಾ ಷೇರುದಾರರಂತೆಯೇ ಎಲೋನ್ ಕೂಡಾ ಸದಸ್ಯರಾಗಿಯೇ ಇರುವುದು ಉತ್ತಮ ಮಾರ್ಗವಾಗಿದೆ ಎಂದು ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಶೀಘ್ರವೇ ಸ್ವಯಂ ಚಾಲಿತ ಕಾರುಗಳನ್ನು ಬಿಡುಗಡೆ ಮಾಡಲಿದ್ದಾರೆ ಮಸ್ಕ್

    ಮಸ್ಕ್ ಆಡಳಿತ ಮಂಡಳಿಗೆ ಸೇರುವುದಿಲ್ಲ ಎಂದಿದ್ದಾರೆ. ಅವರ ನಿರ್ಧಾರ ಅತ್ಯುತ್ತಮವಾದುದು. ಷೇರುದಾರರು ನಮ್ಮ ಮಂಡಳಿಯಲ್ಲಿ ಇದ್ದರೂ, ಇಲ್ಲದಿದ್ದರೂ ಕೆಲಸಗಳು ಮೌಲ್ಯಯುತವಾಗಿಯೇ ನಡೆಯುತ್ತದೆ. ಎಲೋನ್ ಕಂಪನಿಯ ಅತೀ ದೊಡ್ಡ ಷೇರುದಾರರಾಗಿದ್ದಾರೆ. ಆದರೂ ಅವರ ಸಲಹೆಗಳಿಗೆ ನಮ್ಮ ಮಂಡಳಿ ಯಾವಾಗಲೂ ಮುಕ್ತವಾಗಿರುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಬಳಕೆದಾರರ ಡೇಟಾ ಸಂಗ್ರಹಿಸ್ತಿದ್ದ ಆ್ಯಪ್‌ಗಳನ್ನು ಬ್ಯಾನ್ ಮಾಡಿದ ಗೂಗಲ್

    ಕಳೆದವಾರ ಮಸ್ಕ್ ಟ್ವಿಟ್ಟರ್‌ನ ಶೇ.9.2 ರಷ್ಟು ಪಾಲನ್ನು ಖರೀದಿಸಿ ಕಂಪನಿಯ ಅತಿ ದೊಡ್ಡ ಷೇರುದಾರರೆನಿಸಿಕೊಂಡರು. ವಿಶ್ವದ ಶ್ರೀಮಂತ ಷೇರುದಾರನಾಗುತ್ತಿದ್ದಂತೆ ಅಪ್ಲಿಕೇಶನ್‌ನಲ್ಲಿ ಹಲವು ಬದಲಾವಣೆಗಳನ್ನು ತರಲು ಮುಂದಾಯಿತು. ಅದರಲ್ಲಿ ಮುಖ್ಯವಾಗಿ ಬಹು ನಿರೀಕ್ಷಿತ ಎಡಿಟ್ ಬಟನ್ ಇದ್ದು, ಇದು ಶೀಘ್ರವೇ ಎಲ್ಲಾ ಬಳಕೆದಾರರಿಗೂ ಲಭ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ. ಸದ್ಯ ಈ ಫೀಚರ್ ಅನ್ನು ಟ್ವಿಟ್ಟರ್ ಬ್ಲೂನಲ್ಲಿ ಪರೀಕ್ಷಿಸಲಾಗುತ್ತಿದೆ.

  • ಸ್ನೇಹಿತರು ಒಬ್ಬರಿಗೊಬ್ಬರು ಟ್ವೀಟ್ ಮಾಡಬಾರದೇ – ಅಭಿಮಾನಿಗಳಲ್ಲಿ ಶ್ರೇಯಾ ಪ್ರಶ್ನೆ

    ಸ್ನೇಹಿತರು ಒಬ್ಬರಿಗೊಬ್ಬರು ಟ್ವೀಟ್ ಮಾಡಬಾರದೇ – ಅಭಿಮಾನಿಗಳಲ್ಲಿ ಶ್ರೇಯಾ ಪ್ರಶ್ನೆ

    ನವದೆಹಲಿ: ಹತ್ತು ವರ್ಷಗಳ ಹಿಂದೆ ನಾವೆಲ್ಲಾ ಮಕ್ಕಳಾಗಿದ್ದೆವು. ಸ್ನೇಹಿತರು ಒಬ್ಬರಿಗೊಬ್ಬರು ಟ್ವೀಟ್ ಮಾಡಬಾರದಾ ಎಂದು ಶ್ರೇಯಾ ಘೋಷಾಲ್ ಅಭಿಮಾನಿಗಳಲ್ಲಿ ಪ್ರಶ್ನಿಸಿದ್ದಾರೆ.

    ಗಾಯಕಿ ಶ್ರೇಯಾ ಘೋಷಾಲ್ ಅವರ ಹಳೆಯ ಟ್ವೀಟ್ ಒಂದು ಇತ್ತೀಚೆಗೆ ವೈರಲ್ ಆದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಟ್ವಿಟ್ಟರ್ ಸಂಸ್ಥೆಯ ಹೊಸ ಸಿಇಒ ಪರಾಗ್ ಅಗರ್ವಾಲ್ ಅವರೊಂದಿಗೆ ಹಂಚಿಕೊಂಡಿದ್ದ ಪೋಸ್ಟ್ ಇತ್ತೀಚೆಗೆ ವೈರಲ್ ಆಗುತ್ತಿದ್ದು, ಶ್ರೆಯಾ ನಾವು ಆ ಸಮಯದಲ್ಲಿ ಮಕ್ಕಳಾಗಿದ್ದೆವು ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಉತ್ತರ ಪ್ರದೇಶದ ಸರ್ಕಾರಿ ನೌಕರರು, ವಕೀಲರಿಗೆ 1 ರೂ.ಗೆ ಸಿಗಲಿದೆ ಮನೆ

    ಹೊಸ ಟ್ವಿಟ್ಟರ್ ಸಿಇಒ ಪರಾಗ್ ಅಗರ್ವಾಲ್ ಅವರೊಂದಿಗೆ ಶ್ರೇಯಾ ಅವರ ಸಂಬಂಧವನ್ನು ನೆಟ್ಟಿಗರು ಅಗೆದು ಹಾಕುತ್ತಿರುವ ಹಿನ್ನೆಲೆಯಲ್ಲಿ ಗಾಯಕಿ ಸ್ಪಷ್ಟನೆ ನೀಡಿದ್ದಾರೆ. 2010ರಲ್ಲಿ ಮೈಕ್ರೋಬ್ಲಾಗಿಂಗ್ ಸೈಟ್ ಹುಟ್ಟಿಕೊಂಡಾಗ ನಾವು ಕೇವಲ ಮಕ್ಕಳು ಎಂದು ಟ್ವೀಟ್ ಮಾಡಿದ್ದಾರೆ.

    ಅರೇ.. ನೀವೆಲ್ಲಾ ಹಳೆಯ ಟ್ವೀಟ್‍ಗಳನ್ನು ತೆಗೆಯುತ್ತಿದ್ದೀರಾ! ಆಗಷ್ಟೇ ಟ್ವಿಟ್ಟರ್ ಹುಟ್ಟಿಕೊಂಡಿತ್ತು. ಹತ್ತು ವರ್ಷಗಳ ಹಿಂದೆ ನಾವೆಲ್ಲಾ ಮಕ್ಕಳಾಗಿದ್ದೆವು. ಸ್ನೇಹಿತರು ಒಬ್ಬರಿಗೊಬ್ಬರು ಟ್ವೀಟ್ ಮಾಡಬಾರದಾ? ಇದೆಂಥಾ ಟೈಂ ಪಾಸ್ ನಡೆಯುತ್ತಿದೆ (ಅರೆ ಯಾರ್ ತುಮ್ ಲೋಗ್ ಕಿತ್ನಾ ಬಚ್ಪನ್ ಕಾ ಟ್ವೀಟ್ಸ್ ನಿಕಾಲ್ ರಹೇ ಹೋ! ಟ್ವಿಟ್ಟರ್ ಹ್ಯಾಡ್ ಜಸ್ಟ್ ಲಾಂಚ್ಡ್. 10 ಇಯರ್ಸ್ ಪೆಹೆಲೆ! ವೀ ವೇರ್ ಕಿಡ್ಸ್! ದೋಸ್ತ್ ಏಕ್ ದೂಸ್ರೆ ಕೊ ಟ್ವೀಟ್ ನಹಿ ಕರ್‍ತೆ ಕ್ಯಾ? ಕ್ಯಾ ಟೈಮ್ ಪಾಸ್ ಚಲ್ ರಹಾ ಹೆ ಯಹಾ) ಎಂಬ ತಮಾಷೆಯಾಡಿದ್ದಾರೆ.

    ಸೋಮವಾರ ಟ್ವಿಟ್ಟರ್ ಸಿಇಒ ಆಗಿ ನೇಮಕವಾಗಿದ್ದಕ್ಕೆ ಸ್ನೇಹಿತ ಪರಾಗ್ ಅಗರ್ವಾಲ್ ಅವರನ್ನು ಶ್ರೇಯಾ ಅಭಿನಂದಿಸಿದ್ದರು. ಇದಾದ ಬಳಿಕ ಇವರಿಬ್ಬರು ಸ್ನೇಹಿತರು ಎಂಬ ವಿಚಾರದ ಜೊತೆ ಹಳೇಯ ಟ್ವೀಟ್‍ಗಳು ವೈರಲ್ ಆಗಿದ್ದವು.ಇದಾದ ಒಂದು ದಿನದ ಬಳಿಕ ಶ್ರೇಯಾ ಪ್ರತಿಕ್ರಿಯೆ ನೀಡಿದ್ದಾರೆ.

    ನೆಟ್ಟಿಗರು ಶ್ರೇಯಾ ಅವರ ಹಳೆಯ ಟ್ವೀಟ್‍ಗಳನ್ನು ಹುಡುಕುವ ಮೂಲಕ ಅವರಿಬ್ಬರ ನಡುವಿನ ಗೆಳೆತನವನ್ನು ಕಂಡುಕೊಂಡಿದ್ದಾರೆ. 2010ರ ಒಂದು ಟ್ವೀಟ್‍ನಲ್ಲಿ ಶ್ರೇಯಾ ಪರಾಗ್ ಅವರನ್ನು ಬಚ್ಪನ್ ಕಾ ದೋಸ್ತ್ (ಬಾಲ್ಯದ ಗೆಳೆಯ) ಎಂದು ಕರೆದಿದ್ದರು. ಇದನ್ನೂ ಓದಿ: ಫೇಮಸ್ ಆಯ್ತು ಅಗರವಾಲ್ ಮೀಮ್ಸ್

    ಪರಾಗ್ ಅಗರ್ವಾಲ್ ಸೋಮವಾರ ಟ್ವಿಟ್ಟರ್ ಸಿಇಒ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಶ್ರೇಯಾ, ಅವರ ಪತಿ ಶಿಲಾದಿತ್ಯ, ಪರಾಗ್ ಅಗರ್ವಾಲ್, ಅವರ ಪತ್ನಿ ವಿನೀತ ಒಟ್ಟಿಗೆ ಸುತ್ತಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿದೆ.