Tag: Parachute

  • ಪ್ಯಾರಾಚೂಟ್ ಓಪನ್ ಆಗದೇ ಸ್ಕೈಡೈವಿಂಗ್ ಮಾಡುವಾಗ ಖ್ಯಾತ ಟಿಕ್ ಟಾಕ್ ತಾರೆ ತಾನ್ಯಾ ಸಾವು

    ಪ್ಯಾರಾಚೂಟ್ ಓಪನ್ ಆಗದೇ ಸ್ಕೈಡೈವಿಂಗ್ ಮಾಡುವಾಗ ಖ್ಯಾತ ಟಿಕ್ ಟಾಕ್ ತಾರೆ ತಾನ್ಯಾ ಸಾವು

    ಕೆನಡಾದ ಖ್ಯಾತ ಟಿಕ್ ಟಾಕ್ ತಾರೆ ಹಾಗೂ ಮಾಡೆಲ್ ತಾನ್ಯಾ ಪರ್ದಾಜಿ ಸಣ್ಣ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ್ದಾರೆ. ಸದ್ಯ ಅವರು ಸ್ಕೈಡೈವಿಂಗ್ ಕ್ಲಾಸಿಗೆ ಸೇರಿಕೊಂಡಿದ್ದು, ಸ್ಕೈಡೈವಿಂಗ್ ಅಭ್ಯಾಸದಲ್ಲಿ ನಿರತರಾಗಿದ್ದಾಗ ಅನಾಹುತ ಸಂಭವಿಸಿದೆ. ಆಕಾಶದಿಂದ ನೇರವಾಗಿ ನೆಲಕ್ಕೆ ಬಿದ್ದು 21ರ ವಯಸ್ಸಿನ ತಾನ್ಯ ದುರಂತ ಅಂತ್ಯ ಕಂಡಿದ್ದಾರೆ.

    ತಾನ್ಯಾ ಪರ್ದಾಜಿ ಒಬ್ಬರೇ ಸ್ಕೈಡೈವಿಂಗ್ ಅಭ್ಯಾಸ ಮಾಡುವಾಗ ತಡವಾಗಿ ಪ್ಯಾರಾಚೂಟ್ ಓಪನ್ ಮಾಡಿದ ಹಿನ್ನೆಲೆಯಲ್ಲಿ ಪ್ಯಾರಾಚೂಟ್ ಗೆ ಗಾಳಿ ತುಂಬಿಕೊಳ್ಳದೇ ಆಕಾಶದಿಂದ ಕೆಳಗೆ ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ, ಯಾವುದೇ ಪ್ರಯೋಜನವಾಗಿಲ್ಲ. ಆಗಸ್ಟ್ 27 ರಂದು ಕೆನಡಾದ ಒಂಟಾರಿಯೋದಲ್ಲಿ ಈ ದುರಂತ ನಡೆದಿದ್ದು, ಸ್ಕೈಡೈವಿಂಗ್ ತರಬೇತಿ ಸಂಸ್ಥೆಯ ಮೇಲೆ ದೂರು ದಾಖಲಾಗಿದೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಜಯಶ್ರೀ ಆರಾಧ್ಯ

    ತಾನ್ಯ ಪರ್ದಾಜಿ  ಕೇವಲ ಟಿಕ್ ಟಾಕ್ ತಾರೆ ಮಾತ್ರ ಆಗಿರಲಿಲ್ಲ. ಮಾಡೆಲಿಂಗ್ ನಲ್ಲೂ ಅವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅಲ್ಲದೇ, 2017ರಲ್ಲಿ ಮಿಸ್ ಕೆನಡಾ ಸೌಂದರ್ಯ ಸ್ಪರ್ಧೆಯಲ್ಲಿ ಭಾಗಿಯಾಗಿ ಸೆಮಿ ಫೈನಲಿಸ್ಟ್ ಕೂಡ ಆಗಿದ್ದವರು. ಸ್ಕೈಡೈವಿಂಗ್ ಮೇಲಿನ ಆಸಕ್ತಿಯಿಂದಾಗಿ ಇತ್ತೀಚೆಗಷ್ಟೇ ಅವರು ಕ್ಲಾಸಿಗೆ ಸೇರಿಕೊಂಡಿದ್ದರು ಎಂದಿದೆ ಸಂಸ್ಥೆ.

    Live Tv
    [brid partner=56869869 player=32851 video=960834 autoplay=true]

  • ವಿಡಿಯೋ ನೋಡಿ: ಆಗಸದಲ್ಲಿ ಹಾರಾಡುತ್ತಿದ್ದ ಪ್ಯಾರಾಚೂಟ್ ಗಳ ಮಧ್ಯೆ ಡಿಕ್ಕಿ-ಮಹಿಳೆ ಸಾವು

    ವಿಡಿಯೋ ನೋಡಿ: ಆಗಸದಲ್ಲಿ ಹಾರಾಡುತ್ತಿದ್ದ ಪ್ಯಾರಾಚೂಟ್ ಗಳ ಮಧ್ಯೆ ಡಿಕ್ಕಿ-ಮಹಿಳೆ ಸಾವು

    ಮೆಕ್ಸಿಕೊ ಸಿಟಿ: ವಾಹನಗಳು ಒಂದಕ್ಕೊಂದು ಡಿಕ್ಕಿಯಾಗುವುದನ್ನು ಮತ್ತು ರೈಲ್ವೆ ಅಪಘಾತಗಳನ್ನು ನೋಡಿದ್ದೇವೆ ಮತ್ತು ಕೇಳಿರುತ್ತವೆ. ಆದ್ರೆ ಆಕಾಶದಲ್ಲಿ ಪ್ಯಾರಾಚೂಟ್ ಬಳಸಿ ಹಾರಾಡುತ್ತಿರುವವರು ಒಬ್ಬರಿಗೊಬ್ಬರು ಡಿಕ್ಕಿ ಆಗಿರುವ ಘಟನೆಯೊಂದು ಮೆಕ್ಸಿಕೋ ನಗರದ ಬೀಚ್ ನಲ್ಲಿ ನಡೆದಿದೆ.

    ಶನಿವಾರ ಸಂಜೆ ಈ ಘಟನೆ ನಡೆದಿದ್ದು, ಘಟನೆಯಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಅಂತಾ ಹೇಳಲಾಗಿದೆ. ಎರಡು ಪ್ಯಾರಾಚೂಟ್‍ಗಳು ಒಂದಕ್ಕೊಂದು ಡಿಕ್ಕಿಯಾಗುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಸೀರೆಯಲ್ಲಿ ಸ್ಕೈ ಡೈವಿಂಗ್ ಮಾಡಿ ದಾಖಲೆ ಬರೆದ ಮಹಿಳೆ

    47 ವರ್ಷದ ಉರ್ಸುಲಾ ಹೆರ್ನಾಂಡೆಜ್ ಎಂಬ ಮಹಿಳೆ ಪ್ಯಾರಾಚೂಟ್ ನಲ್ಲಿ ಹಾರಾಡುತ್ತಾ ಬೀಚ್‍ನಲ್ಲಿ ಲ್ಯಾಂಡಿಂಗ್ ಆಗುತ್ತಿದ್ದರು. ಈ ವೇಳೆ ವಿರುದ್ಧ ದಿಕ್ಕಿನಲ್ಲಿ ಬಂದ ಮತ್ತೊಂದು ಪ್ಯಾರಾಚೂಟ್, ಲ್ಯಾಂಡ್ ಆಗ್ತಿದ್ದ ಉರ್ಸುಲಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಉರ್ಸುಲಾ ಸೇಫ್ ಆಗಿ ಲ್ಯಾಂಡ್ ಆಗದೇ ಬೀಚ್ ನಲ್ಲಿ ಬಿದ್ದಿದ್ದಾರೆ. ಕೂಡಲೇ ಉರ್ಸುಲಾರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ರೂ ಗಂಭೀರವಾಗಿ ಗಾಯಗೊಂಡಿದ್ದರಿಂದ ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಪ್ಯಾರಾಚೂಟ್ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿಲ್ಲ ಅಂತ ಸ್ಥಳೀಯ ಪತ್ರಿಕೆಗಳು ಪ್ರಕಟಿಸಿವೆ.

    ಪತ್ರಕರ್ತ ಜಾನ್ ಪೆರೆಜ್ ಎಂಬ ಮೆಕ್ಸಿಕೋದಲ್ಲಿ ರಜಾದಿನಗಳ ಪ್ರಾರಂಭಕ್ಕೂ ಮುನ್ನ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಬೀಚ್‍ಗಳಲ್ಲಿ ಪ್ಯಾರಾಚೂಟ್ ಬಳಸಿ ಹಾರಾಡುವುದು ಟ್ರೆಂಡಿಂಗ್ ಆಗಿದ್ದು, ಈ ಹಿನ್ನೆಲೆಯಲ್ಲಿ ಎಲ್ಲಾ ಸಾಹಸಿಗಳು ಎಚ್ಚರಿಕೆಯಿಂದಿರಬೇಕು ಅಂತಾ ಜಾನ್ ಬರೆದುಕೊಂಡಿದ್ದಾರೆ.

    https://youtu.be/pwyJbQO7TdU

  • ಪ್ಯಾರಾಚೂಟ್ ತೆರೆದುಕೊಳ್ಳದೆ 24ನೇ ಮಹಡಿಯಿಂದ ಬಿದ್ದ-ಮುಂದೇನಾಯ್ತು ಈ ವಿಡಿಯೋ ನೋಡಿ

    ಪ್ಯಾರಾಚೂಟ್ ತೆರೆದುಕೊಳ್ಳದೆ 24ನೇ ಮಹಡಿಯಿಂದ ಬಿದ್ದ-ಮುಂದೇನಾಯ್ತು ಈ ವಿಡಿಯೋ ನೋಡಿ

    ಸ್ಟಾಕ್ಹೋಮ್: ಸ್ವೀಡನ್ ದೇಶದ ರಾಜಧಾನಿಯಲ್ಲಿ ಸ್ಟಾಕ್ಹೋಮ್ ನಲ್ಲಿ ಸಾಹಸಿ ಯುವಕನೊಬ್ಬ ಪ್ಯಾರಾಚೂಟ್ ಹಾಕಿಕೊಂಡು 24ನೇ ಮಹಡಿಯಿಂದ ಜಿಗಿದಿದ್ದಾನೆ. ಯುವಕನ ದುರಾದೃಷ್ಟ ಎಂಬಂತೆ ಪ್ಯಾರಾಚೂಟ್ ತೆರೆಯದೇ ಇದ್ದಿದ್ದರಿಂದ ಕಾಂಕ್ರೀಟ್ ನೆಲದ ಮೇಲೆ ಬಿದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇದನ್ನೂ ಓದಿ: ವಿಡಿಯೋ: ರಸ್ತೆ ದಾಟುವಾಗ ಟ್ರಕ್ ಕೆಳಗೆ ಸಿಲುಕಿದ್ರೂ ಮಹಿಳೆ ಪಾರು!- ಡ್ರೈವರ್‍ಗೆ ಭೇಷ್ ಅಂದ್ರು ಜನ

    ಸಾಹಸಿ ಯುವಕನೋರ್ವ ನಗರದಲ್ಲಿ 24 ಮಹಡಿಯ 246 ಅಡಿ ಎತ್ತರವುಳ್ಳ ಕಟ್ಟಡದಿಂದ ಜಿಗಿಯುವ ಮೂಲಕ ಸಾಹಸ ಪ್ರದರ್ಶನಕ್ಕೆ ಮುಂದಾಗಿದ್ದಾನೆ. ಕಟ್ಟಡ ಕೆಳಗಡೆಯಿಂದ ಸ್ನೇಹಿತನೊಬ್ಬ ಆತನ ಸಾಹಸದ ದೃಶ್ಯಗಳನ್ನು ಮೊಬೈಲ್ ನಲ್ಲಿ ಸೆರೆಹಿಡಿಯಲು ನಿಂತಿದ್ದನು. ಯುವಕ ಕಟ್ಟಡದಿಂದ ಧುಮುಕಿದ ಕೂಡಲೇ ರಕ್ಷಣಾ ಕವಚ ಪ್ಯಾರಾಚೂಟ್ ಓಪನ್ ಆಗಿಲ್ಲ. ಬರೋಬ್ಬರಿ 246 ಅಡಿ ಎತ್ತರದಿಂದ ಕೆಳಗೆ ಬಿದ್ದಿದ್ದಾನೆ. ಈ ಎಲ್ಲ ದೃಶ್ಯಗಳು ಸ್ನೇಹಿತನ ಮೊಬೈಲ್ ನಲ್ಲಿ ಸೆರೆಯಾಗಿವೆ. ಇದನ್ನೂ ಓದಿ: ಡಂಪರ್ ಡಿಕ್ಕಿಯಾದ್ರೂ ಬಚಾವ್- ಡಿಕ್ಕಿಗೆ ನೆಲಕ್ಕೆ ಉರುಳಿ ಮೊಬೈಲ್ ಎತ್ತಿಕೊಂಡು ಹೋದ!

    ಕಟ್ಟಡದಿಂದ ಬಿದ್ದ ಕೂಡಲೇ ಗಂಭೀರವಾಗಿ ಗಾಯಗೊಂಡಿದ್ದ ಯವಕನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಯುವಕನಿಗೆ ಗಂಭೀರ ಗಾಯಗಳಾಗಿದ್ದು, ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ವರದಿಯಾಗಿದೆ. ಇದನ್ನೂ ಓದಿ: ಸ್ಕೂಟಿ ಸಮೇತ ಮಹಿಳೆಯನ್ನು 50 ಅಡಿ ದೂರದವರೆಗೆ ದೂಡಿಕೊಂಡೇ ಹೋದ!

    ಸ್ಥಳೀಯ ಪತ್ರಿಕೆಗಳ ಪ್ರಕಾರ, ಯುವಕ ಕಟ್ಟಡದಿಂದ ಬಿದ್ದ ನಂತರ ಆತನ ಸ್ನೇಹಿತನೊಬ್ಬ ಅದೇ ಕಟ್ಟಡದಿಂದ ಪ್ಯಾರಾಚೂಟ್ ಧರಿಸಿ, ಜಿಗಿದು ಯಶಸ್ವಿಯಾಗಿದ್ದಾನೆ ಎಂದು ಪ್ರಕಟಿಸಿವೆ. ಇದನ್ನೂ ಓದಿ: ವಿಡಿಯೋ: ಬೈಕ್ ಸ್ಕಿಡ್ ಆಗಿ ಟ್ರಕ್ ಕೆಳಗೆ ಹೋಯ್ತು- ಸವಾರ ಆರಾಮಾಗಿ ಎದ್ದು ಹೋದ!

    ಇದನ್ನೂ ಓದಿ: ಅಚ್ಚರಿ ವಿಡಿಯೋ: ಟ್ರಕ್ ಚಕ್ರದ ಕೆಳಗೆ ಸಿಲುಕಿದರೂ ಬದುಕಿ ಬಂದ ಬೈಕ್ ಸವಾರ

    https://www.youtube.com/watch?v=WM5yHBick8o