Tag: Para Shooting

  • ರಾಷ್ಟ್ರಮಟ್ಟದ 4ನೇ ಪ್ಯಾರಾ ಶೂಟಿಂಗ್ ಚಾಂಪಿಯನ್‌ಶಿಪ್ – ರಾಜ್ಯಕ್ಕೆ ನಾಲ್ಕು ಪದಕ

    ರಾಷ್ಟ್ರಮಟ್ಟದ 4ನೇ ಪ್ಯಾರಾ ಶೂಟಿಂಗ್ ಚಾಂಪಿಯನ್‌ಶಿಪ್ – ರಾಜ್ಯಕ್ಕೆ ನಾಲ್ಕು ಪದಕ

    ಹುಬ್ಬಳ್ಳಿ: ದೆಹಲಿಯಲ್ಲಿ (New Delhi) ಇತ್ತೀಚೆಗೆ ಆಯೋಜಿಸಿದ್ದ 4ನೇ ರಾಷ್ಟ್ರಮಟ್ಟದ ಪ್ಯಾರಾ ಶೂಟಿಂಗ್ ಚಾಂಪಿಯನ್‌ಶಿಪ್ (Para Shoorting Championship) 2023ರಲ್ಲಿ ಹುಬ್ಬಳ್ಳಿಯ (Hubballi) ಮೂವರು ಶೂಟರ್ಸ್‌ಗಳು 2 ಚಿನ್ನ ಹಾಗೂ 2 ಕಂಚಿನ ಪದಕ ಪಡೆದು ರಾಜ್ಯದ ಗರಿಮೆಯನ್ನು ಹೆಚ್ಚಿಸಿದ್ದಾರೆ.

    ಡಾಕ್ಟರ್ ಕರುಣಿಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ಕರ್ನಾಟಕದಿಂದ ಒಟ್ಟು ಎಂಟು ಜನ ಪ್ಯಾರಾ ಶೂಟರ್ಸ್‌ಗಳು ಭಾಗವಹಿಸಿದ್ದರು. ಪದಕ ವಿಜೇತ ಮೂವರೂ ಹುಬ್ಬಳ್ಳಿಯ ಆಟಗಾರರು ಎಂಬುದು ವಿಶೇಷ. ಶ್ರೀಹರ್ಷ ದೇವರೆಡ್ಡಿ ಅವರು 10 ಮೀಟರ್ ಏರ್ ರೈಫಲ್ ಸ್ಟ್ರಾಂಡಿಂಗ್ ಮಿಕ್ಸೆಡ್ ಎಸ್‌ಎಚ್-2ನಲ್ಲಿ ಚಿನ್ನದ ಪದಕ, 10 ಮೀಟರ್ ಏರ್ ರೈಫಲ್ ಪ್ರೋನ್ ಮಿಕ್ಸೆಡ್‌ನಲ್ಲಿ 1 ಚಿನ್ನದ ಪದಕ, 50 ಮೀಟರ್ ರೈಫಲ್ 3 ಪೊಸಿಷನ್‌ನಲ್ಲಿ ರಾಕೇಶ ನಿಡಗುಂದಿ ಅವರಿಗೆ ವೈಯಕ್ತಿಕ ವಿಭಾಗದಲ್ಲಿ 1 ಕಂಚಿನ ಪದಕ, 50 ಮೀಟರ್ ರೈಫಲ್ ಪ್ರೋನ್ ತಂಡದ ವಿಭಾಗದಲ್ಲಿ ಶಂಕರಲಿಂಗ ತವಳಿ ಹಾಗೂ ರಾಕೇಶ ನಿಡಗುಂದಿ ಅವರು 1 ಕಂಚಿನ ಪದಕ ಪಡೆದಿದ್ದಾರೆ. ಇದನ್ನೂ ಓದಿ: ಶಮಿಗೆ 7 ವಿಕೆಟ್ ಸಿಗುತ್ತೆ – ನ.14ಕ್ಕೆ ಬಿದ್ದ ಕನಸು ನನಸಾಯ್ತು

    ವಿಜೇತರಿಗೆ ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಜೆಪಿ ನೋಟಿಯಲ್, ಕರ್ನಲ್ ಅಮರಜೀತಸಿಂಗ್ ಪದಕ ವಿತರಿಸಿದರು. ರವಿಚಂದ್ರ ಬಾಲೇಹೊಸೂರ ತಂಡದ ವ್ಯವಸ್ಥಾಪಕ ಮತ್ತು ತರಬೇತುದಾರರಾಗಿ ಕಾರ್ಯನಿರ್ವಹಿಸಿದರು. ಇದನ್ನೂ ಓದಿ: ತುಮಕೂರಿನಲ್ಲೊಂದು ಕ್ರಿಕೆಟ್ ಪ್ರೇಮಿಗಳ ಮದುವೆ – ಮಂಟಪದಲ್ಲೇ ಇಂಡೋ-ಕಿವೀಸ್ ಸೆಮಿ ಫೈನಲ್ ವೀಕ್ಷಣೆ

  • ರಸ್ತೆ ಬದಿಯಲ್ಲಿ ಚಿಪ್ಸ್ ಮಾರಾಟ ಮಾಡಿ ಜೀವನ ಸಾಗಿಸ್ತಿದ್ದಾರೆ 28 ಬಾರಿ ಚಿನ್ನ ಗೆದ್ದ ಪ್ಯಾರಾಶೂಟರ್..!

    ರಸ್ತೆ ಬದಿಯಲ್ಲಿ ಚಿಪ್ಸ್ ಮಾರಾಟ ಮಾಡಿ ಜೀವನ ಸಾಗಿಸ್ತಿದ್ದಾರೆ 28 ಬಾರಿ ಚಿನ್ನ ಗೆದ್ದ ಪ್ಯಾರಾಶೂಟರ್..!

    ಡೆಹ್ರಾಡೂನ್: ಭಾರತ ಪರ 28 ಬಾರಿ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ ದೇಶದ ಮೊದಲ ಪ್ಯಾರಾಶೂಟರ್ ದಿಲ್ರಾಜ್ ಕೌರ್ ಇದೀಗ ತನ್ನ ಜೀವನ ನಿರ್ವಹಣೆಗಾಗಿ ರಸ್ತೆ ಬದಿಯಲ್ಲಿ ಬಿಸ್ಕತ್, ಚಿಪ್ಸ್ ಮಾರಾಟ ಮಾಡುವಂತಹ ಪರಿಸ್ಥಿತಿ ಬಂದಿದೆ.

    ದಿಲ್ರಾಚ್ ಕೌರ್ 2005ರಲ್ಲಿ ಪ್ರಾರಂಭಿಸಿದ ತನ್ನ ಕ್ರೀಡಾ ಜೀವನದಲ್ಲಿ 15 ವರ್ಷಗಳ ಕಾಲ ಭಾರತವನ್ನು ಪ್ರತಿನಿಧಿಸಿ ಹಲವು ರಾಷ್ಟ್ರೀಯ, ಅಂತರಾಷ್ಟ್ರೀಯ ಕ್ರೀಡಾ ಕೂಟಗಳಲ್ಲಿ ಭಾಗವಹಿಸಿದ್ದರು. ಬಳಿಕ ಇದೀಗ ಜೀವನ ನಿರ್ವಹಣೆಗಾಗಿ ಉತ್ತರಾಖಂಡದ ಡೆಹ್ರಾಡೂನ್, ಗಾಂಧಿ ಪಾರ್ಕ್ ಬಳಿ ಬಿಸ್ಕತ್ ಮತ್ತು ಚಿಪ್ಸ್ ಮಾರಾಟ ಮಾಡುತ್ತಿದ್ದಾರೆ. ಇದನ್ನೂ ಓದಿ: ಧೋನಿ ಮಾಸ್ ಮೀಸೆಗೆ ಅಭಿಮಾನಿಗಳು ಫಿದಾ

    ಈ ಕುರಿತು ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿದ ದಿಲ್ರಾಜ್ ಕೌರ್, ನಾನು ರಾಷ್ಟ್ರಮಟ್ಟ ಮತ್ತು ಅಂತರಾಷ್ಟ್ರೀಯ ಮಟ್ಟದ ಪ್ಯಾರಾಶೂಟರ್ ಆಗಿ ದೇಶಕ್ಕಾಗಿ ಈವರೆಗೆ 28 ಚಿನ್ನದ ಪದಕ, 8 ಬೆಳ್ಳಿ ಪದಕ, ಮತ್ತು 3 ಕಂಚಿನ ಪದಕ ಪಡೆದಿದ್ದೇನೆ. ಆದರೂ ನನಗೆ ಇದೀಗ ಜೀವನ ನಿರ್ವಹಣೆಗೆ ಕಷ್ಟಪಡುವಂತಹ ಪರಿಸ್ಥಿತಿ ಇದೆ. ಹಾಗಾಗಿ ಇಲ್ಲಿ ಬಿಸ್ಕತ್ ಚಿಪ್ಸ್ ಮಾರಾಟ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.

    https://twitter.com/shubham_jain999/status/1407302791429705728

    ಈ ಬಗ್ಗೆ ರಾಜ್ಯದ ಪ್ಯಾರಾಶೂಟಿಂಗ್ ಕ್ರೀಡಾ ಇಲಾಖೆಯೊಂದಿಗೆ ತಿಳಿಸಿದಾಗ ನನಗೆ ಯಾವುದೇ ನೆರವು ಸಿಕ್ಕಿಲ್ಲ. ನಾನು ನನ್ನ ಕ್ರೀಡಾ ಸಾಧನೆಯನ್ನು ಪರಿಗಣಿಸಿ ನನಗೆ ಸರ್ಕಾರಿ ಉದ್ಯೋಗ ಕೊಡಿ ಎಂದು ಮನವಿ ಮಾಡಿಕೊಂಡಿದ್ದೆ ಈವರೆಗೆ ಯಾವುದೇ ಕೆಲಸ ಸಿಕ್ಕಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.