Tag: para medical

  • ವೈದ್ಯಕೀಯ ಕಾಲೇಜಿನ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ನೇಣಿಗೆ ಶರಣು

    ವೈದ್ಯಕೀಯ ಕಾಲೇಜಿನ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ನೇಣಿಗೆ ಶರಣು

    ಮಡಿಕೇರಿ: ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿರುವ‌ ಘಟನೆ ಕೊಡಗು (Kodagu) ಜಿಲ್ಲೆಯ ಕುಶಾಲನಗರ ಪಟ್ಟಣದ ನೇತಾಜಿ ಬಡಾವಣೆಯಲ್ಲಿ ಮಂಗಳವಾರ ನಡೆದಿದೆ.

    ಬಡಾವಣೆ ನಿವಾಸಿ ಎಲ್ಐಸಿ ಏಜೆಂಟ್ ಸಂತೋಷ್ ಎಂಬವರ ಪುತ್ರಿ ಜಸ್ಮಿತಾ (19) ಆತ್ಮಹತ್ಯೆಗೆ ಶರಣಾಗಿರುವ ದುರ್ದೈವಿ. ಈಕೆ ಮಡಿಕೇರಿ ವೈದ್ಯಕೀಯ ಕಾಲೇಜಿನಲ್ಲಿ ಪ್ಯಾರಾ ಮೆಡಿಕಲ್ (Para Medical) ಕೋರ್ಸ್ ವ್ಯಾಸಂಗ ಮಾಡುತ್ತಿದ್ದಳು. ಇದನ್ನೂ ಓದಿ: ಮಂಡ್ಯದಲ್ಲಿ ಮಲಗಿದ್ದಲ್ಲೇ ಒಂಟಿ ಮಹಿಳೆ ಸುಟ್ಟು ಕರಕಲು

    ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸ್ಥಳಕ್ಕೆ ಕುಶಾಲನಗರ ಟೌನ್‌ ಪೊಲೀಸ್ ಪಿಎಸ್ಐ ಅಪ್ಪಾಜಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ವಿದ್ಯಾರ್ಥಿನಿಯ ಸಾವಿನ ನಿಖರ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ‌ ಕ್ರಮ ಕೈಗೊಂಡಿದ್ದಾರೆ. ಇದನ್ನೂ ಓದಿ: ಮೆಟ್ರೋ ಪಿಲ್ಲರ್ ಕುಸಿತ – ಮೃತರ ಕುಟುಂಬಕ್ಕೆ 20 ಲಕ್ಷ ಪರಿಹಾರ : BMRCL

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸರ್ಕಾರದ ಪ್ಯಾರಾ ಮೆಡಿಕಲ್ ಕೋರ್ಸ್ ಡೋಲಾಯಮಾನ..!

    ಸರ್ಕಾರದ ಪ್ಯಾರಾ ಮೆಡಿಕಲ್ ಕೋರ್ಸ್ ಡೋಲಾಯಮಾನ..!

    -ಖಾಸಗಿ ಲಾಬಿಗೆ ಮಣಿದು ಪ್ಯಾರಾ ಮೆಡಿಕಲ್ ಶಿಕ್ಷಣಕ್ಕೆ ತಣ್ಣೀರು!

    ಮಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಬಡ ಮಕ್ಕಳಿಗೆ ಪ್ಯಾರಾ ಮೆಡಿಕಲ್ ಕೋರ್ಸ್ ಸಿಗುವಂತಾಗಬೇಕೆಂದು ಸಿದ್ದರಾಮಯ್ಯ ಸರ್ಕಾರ ಯೋಜನೆ ಜಾರಿಗೆ ತಂದಿತ್ತು. ಕೌನ್ಸಿಲಿಂಗ್ ನಡೆಸಿ, ನೂರಾರು ವಿದ್ಯಾರ್ಥಿಗಳಿಗೆ ಮೆಡಿಕಲ್ ತಾಂತ್ರಿಕ ಶಿಕ್ಷಣವನ್ನು ಆರಂಭಿಸಲಾಗಿತ್ತು. ಆದರೆ ಮೊದಲ ವರ್ಷ ಪೂರೈಸಿದ ವಿದ್ಯಾರ್ಥಿಗಳು ಈಗ ಸಂಕಷ್ಟದಲ್ಲಿದ್ದಾರೆ.

    ಸಿದ್ದರಾಮಯ್ಯ ಸರ್ಕಾರದಲ್ಲಿ ಯು.ಟಿ.ಖಾದರ್ ಆರೋಗ್ಯ ಸಚಿವರಾಗಿದ್ದಾಗ, ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಪ್ಯಾರಾ ಮೆಡಿಕಲ್ ಕೋರ್ಸ್ ಜಾರಿಗೆ ತರಲಾಗಿತ್ತು. ಪ್ಯಾರಾ ಮೆಡಿಕಲ್ ಬೋರ್ಡ್ ಸ್ಥಾಪಿಸಿ, ಖಾಸಗಿ ಕಾಲೇಜುಗಳ ಲಾಬಿಯ ನಡುವೆ ಬಡ ಮಕ್ಕಳಿಗೂ ಮೆಡಿಕಲ್ ಶಿಕ್ಷಣ ದೊರಕಿಸೋ ಯತ್ನ ನಡೆದಿತ್ತು. ಮಂಗಳೂರಿನಲ್ಲಿ ಮೊದಲ ವರ್ಷಕ್ಕೆ ಸೇರ್ಪಡೆಯಾದ ವಿದ್ಯಾರ್ಥಿಗಳನ್ನು ಆಸ್ಪತ್ರೆಯಲ್ಲಿ ತರಗತಿ ಇನ್ನಿತರ ಮೂಲ ಸೌಕರ್ಯ ಇಲ್ಲವೆಂಬ ನೆಪ ಹೇಳಿ ಖಾಸಗಿ ಆಸ್ಪತ್ರೆ ಮಂಗಳಾ ಪ್ಯಾರಾ ಮೆಡಿಕಲ್ ಕಾಲೇಜಿಗೆ ಹೊರ ಗುತ್ತಿಗೆ ನೀಡಲಾಗಿತ್ತು. ಮಂಗಳಾ ಕಾಲೇಜಿನವರು 2ನೇ ವರ್ಷಕ್ಕೆ ಸೇರಿಸಿಕೊಂಡಿಲ್ಲ. ಹೀಗಾಗಿ ಮೊದಲ ವರ್ಷ ಪೂರೈಸಿದ ಲ್ಯಾಬ್, ಎಕ್ಸ್ ರೇ ಸೇರಿದಂತೆ ಏಳು ವಿಭಾಗಗಳ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗತಿ ಕಾಣದೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಬಾಗಿಲು ಕಾಯುವಂತಾಗಿದೆ.

    ಮೊದಲ ವರ್ಷದಲ್ಲಿ ಬಳ್ಳಾರಿ, ಶಿವಮೊಗ್ಗ, ಮಡಿಕೇರಿಯಿಂದ ಮಂಗಳೂರಿಗೆ 67 ವಿದ್ಯಾರ್ಥಿಗಳು ಕಾಲೇಜಿಗೆ ಬಂದಿದ್ರೂ ಅತ್ತ ಥಿಯರಿಯೂ ಇಲ್ಲದೇ ಇತ್ತ ಪ್ರಾಕ್ಟಿಕಲ್ ಇಲ್ಲದೇ ಡೋಲಾಯಮಾನ ಆಗಿದೆ. ಇತರೇ ಖಾಸಗಿ ಕಾಲೇಜುಗಳಲ್ಲಿ 3 ತಿಂಗಳ ತರಗತಿ ನಡೆದು ನವೆಂಬರ್ ನಲ್ಲಿ ಪ್ಯಾರಾ ಮೆಡಿಕಲ್ ಪರೀಕ್ಷೆ ಎದುರಿಸುತ್ತಿದ್ದಾರೆ.

    ಪ್ಯಾರಾ ಮೆಡಿಕಲ್ ಕೋರ್ಸ್ ನಡೆಸಲು 8 ಎಕರೆ ವ್ಯಾಪ್ತಿಯುಳ್ಳ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ವಿದ್ಯಾರ್ಥಿಗಳಿಗೆ ತರಗತಿ ನಡೆಸಲು ಜಾಗ ಇಲ್ಲ ಅನ್ನೋದೇ ಅಚ್ಚರಿಯ ಸಂಗತಿ. ಖಾಸಗಿ ಕಾಲೇಜುಗಳ ಲಾಬಿಗೆ ಮಣಿದು ಡಿಎಂಓ ಹೀಗೆ ವರ್ತಿಸುತ್ತಿದ್ದಾರೆಯೇ ಅನ್ನೋ ಪ್ರಶ್ನೆ ಎದ್ದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕ್ಷುಲ್ಲಕ ಕಾರಣಕ್ಕೆ ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳ ಮಾರಾಮಾರಿ- ಓರ್ವನಿಗೆ ಚಾಕು ಇರಿತ

    ಕ್ಷುಲ್ಲಕ ಕಾರಣಕ್ಕೆ ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳ ಮಾರಾಮಾರಿ- ಓರ್ವನಿಗೆ ಚಾಕು ಇರಿತ

    ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳ ನಡುವೆ ಮಾರಾಮಾರಿ ನಡೆದಿದ್ದು, ವಿದ್ಯಾರ್ಥಿಯೋರ್ವ ಇನ್ನೋರ್ವ ವಿದ್ಯಾರ್ಥಿಗೆ ಚಾಕುವಿನಿಂದ ಇರಿದು ಪರಾರಿಯಾಗಿರೋ ಘಟನೆ ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

    ರಾಮನಗರ ಇನ್ಸ್ ಟಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸೈನ್ಸ್ ವಿದ್ಯಾರ್ಥಿ ಸಿದ್ದರಾಜು ಎರಡನೇ ವರ್ಷದ ವಿಘ್ನೇಶ್ ಎಂಬಾತನಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ವಿಘ್ನೇಶ್ ನ ಬೆನ್ನು, ಹಣೆ, ಹೊಟ್ಟೆ ಭಾಗಕ್ಕೆ ಸಿದ್ದರಾಜು ಚಾಕುವಿನಿಂದ ಇರಿದಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡಿರೋ ವಿಘ್ನೇಶ್ ಚಿಕಿತ್ಸೆ ಪಡೆಯುತ್ತಿದ್ದಾನೆ.

    ರಾಮನಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.