Tag: pappu

  • ಬಾಲಿವುಡ್ ಅನ್ನು ರಾಹುಲ್ ಗಾಂಧಿಗೆ ಹೋಲಿಸಿದ ವಿವಾದಿತ ನಟಿ ಸ್ವರ ಭಾಸ್ಕರ್

    ಬಾಲಿವುಡ್ ಅನ್ನು ರಾಹುಲ್ ಗಾಂಧಿಗೆ ಹೋಲಿಸಿದ ವಿವಾದಿತ ನಟಿ ಸ್ವರ ಭಾಸ್ಕರ್

    ಡಕ್ ಹಾಗೂ ನಿಷ್ಠುರ ಮಾತುಗಳಿಂದಲೇ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವ ನಟಿ ಸ್ವರ ಭಾಸ್ಕರ್, ಯಾವತ್ತೂ ತಮ್ಮ ಮಾತಿನಿಂದ ಹಿಂದೆ ಸರಿದವರು ಅಲ್ಲ. ಎಷ್ಟೇ ಕಷ್ಟಗಳು ಎದುರಾದರು ಮಾತಿಗೆ ಬದ್ಧರಾಗಿಯೇ ನಿಲ್ಲುವಂತವರು. ಹಾಗಾಗಿ ಬಾಲಿವುಡ್ ನಲ್ಲಿ ಸ್ವರ ಭಾಸ್ಕರ್ ಅಂದರೆ, ಅಲ್ಲೊಂದು ವಿವಾದ ಇದ್ದೇ ಇರುತ್ತದೆ ಎನ್ನುವಂತಾಗಿದೆ. ಮೀಟೂ ನಿಂದ ಹಿಡಿದು, ಬಾಲಿವುಡ್ ನಲ್ಲಿ ನಡೆಯುತ್ತಿರುವ ಪ್ರತಿಯೊಂದು ಅನ್ಯಾಯವನ್ನೂ ಎದುರಿಸುತ್ತಾ ಬಂದಿರುವ ಈ ನಟಿ ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ವಿಚಿತ್ರ ಹೇಳಿಕೆಯೊಂದನ್ನು ನೀಡಿದ್ದಾರೆ.

    ವಾಹಿನಿಯೊಂದರ ಸಂದರ್ಶನದಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಸ್ವರ ಭಾಸ್ಕರ್, ಸುಖಾಸುಮ್ಮನೆ ರಾಹುಲ್ ಗಾಂಧಿಯನ್ನು ಉತ್ತರವಾಗಿ ಎಳೆದು ತಂದಿದ್ದಾರೆ. ಸದ್ಯ ಆ ವಿಡಿಯೋ ವೈರಲ್ ಆಗಿದೆ. ಬಾಲಿವುಡ್ ಸಿನಿಮಾಗಳು ಸೋಲುತ್ತಿವೆಯಲ್ಲ, ಅದಕ್ಕೆ ಕಾರಣ ಏನಿರಬಹುದು ಎಂದು ಕೇಳಲಾದ ಪ್ರಶ್ನೆಗೆ ಮಾರ್ಮಿಕವಾಗಿಯೇ ಉತ್ತರ ನೀಡಿರುವ ಸ್ವರಾ, ಈ ಹಿಂದೆ ಆರ್ಥಿಕ ಹಿಂಜರಿತವೇ ಬಾಕ್ಸ್ ಆಫೀಸ್ ತುಂಬದೇ ಇರಲಿ ಕಾರಣ ಎನ್ನುತ್ತಿದ್ದರು. ಈಗ ಮತ್ತೊಂದು ರೂಪ ಪಡೆದುಕೊಂಡಿದೆ ಎಂದಿದ್ದಾರೆ. ಇದನ್ನೂ ಓದಿ:ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣನ ಹುಡುಕಿಕೊಂಡು ಬಂತು ಮತ್ತೊಂದು ಬಾಲಿವುಡ್ ಸಿನಿಮಾ

    ಬಾಲಿವುಡ್ ಸಿನಿಮಾಗಳು ಸೋಲಿಗೆ ಕಾರಣವನ್ನು ಹೇಳಿದ ಅವರು, ಓಟಿಟಿಯು ಜನರನ್ನು ಥಿಯೇಟರ್ ಗೆ ಬಾರದಂತೆ ಮಾಡುತ್ತಿದೆ ಎಂದು ನೇರವಾಗಿಯೇ ಆರೋಪಿಸಿದರು. ಅಲ್ಲದೇ, ಬಾಲಿವುಡ್ ಅನ್ನು ರಾಹುಲ್ ಗಾಂಧಿಗೆ ಹೋಲಿಸಿದ ಸ್ವರ, ‘ರಾಹುಲ್ ಗಾಂಧಿ ಅವರನ್ನು ಪಪ್ಪು ಎಂದು ಕರೆಯುತ್ತಿದ್ದಾರೆ. ನಾನು ಅವರನ್ನು ನೇರವಾಗಿ ಭೇಟಿ ಮಾಡಿದ್ದೇನೆ. ಅವರಷ್ಟು ಬುದ್ಧಿವಂಥರು, ಸ್ಪಷತೆ ಇರುವಂಥವರು ಇಲ್ಲ. ಆದರೂ, ಪಪ್ಪು ಪಪ್ಪು ಎಂದು ಗೇಲಿ ಮಾಡಲಾಗುತ್ತಿದೆ. ಹಾಗೆಯೇ ಬಿಟೌನ್ ಪಪ್ಪುಫಿಕೇಶನ್ ನಲ್ಲಿ ನರಳುತ್ತಿದೆ ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • `ಪಪ್ಪು’ ಬದಲಾಗಿ ಈ ಪದವನ್ನು ಬಳಸಲಿದೆ ಬಿಜೆಪಿ

    `ಪಪ್ಪು’ ಬದಲಾಗಿ ಈ ಪದವನ್ನು ಬಳಸಲಿದೆ ಬಿಜೆಪಿ

    ಗಾಂಧಿನಗರ: ಗುಜರಾತ್ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆಯಲ್ಲಿ `ಪಪ್ಪು’ ಎಂಬ ಪದವನ್ನು ಬಳಸದಂತೆ ಚುನಾವಣಾ ಆಯೋಗ ನಿರ್ಬಂಧಿಸಿದ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಜಾಹೀರಾತಿನಲ್ಲಿ ‘ಯುವರಾಜ್’ ಎಂಬ ಪದವನ್ನು ಬಳಸಿಕೊಳ್ಳಲು ನಿರ್ಧರಿಸಿದೆ.

    ಯುವರಾಜ್ ಎಂಬ ಪದ ಬಳಕೆ ಮಾಡಲು ಚುನಾವಣಾ ಆಯೋಗದಿಂದ ಅನುಮತಿ ದೊರಕ್ಕಿದ್ದು, ಗುಜರಾತ್ ಬಿಜೆಪಿ ತನ್ನ ಅಧಿಕೃತ ಟ್ವಿಟರ್ ಮತ್ತು ಫೇಸ್ ಬುಕ್ ಪೇಜಿನಲ್ಲಿ ಈಗಾಗಲೇ ವಿಡಿಯೋವನ್ನು ಸಹ ಅಪ್ಲೋಡ್ ಮಾಡಿಕೊಂಡಿದೆ. ಈ ಮೊದಲು ಗುಜರಾತ್ ಬಿಜೆಪಿ ತನ್ನ ಸಾಮಾಜಿಕ ಜಾಲತಾಣಗಳ ಜಾಹೀರಾತಿನಲ್ಲಿ ಪಪ್ಪು ಎಂಬ ಪದದ ಬಳಕೆ ಮಾಡಿಕೊಂಡಿತ್ತು. ಆದರೆ ಚುನಾವಣಾ ಆಯೋಗದ ಮಾಧ್ಯಮ ಕಮಿಟಿ, ಪಪ್ಪು ಎಂಬ ಪದ ಅಗೌರವವನ್ನು ತೋರಿಸುತ್ತದೆ ಎಂದು ತಿಳಿಸಿತ್ತು.

    ಬಿಜೆಪಿ ಸ್ಪಷ್ಟನೆ: ಪಪ್ಪು ಎಂಬ ಪದ ಯಾವುದೇ ವ್ಯಕ್ತಿ ಅಥವಾ ಸಮುದಾಯಕ್ಕೆ ಅಗೌರವವನ್ನು ಉಂಟು ಮಾಡುವುದಿಲ್ಲ ಎಂದು ತನ್ನ ವಾದವನ್ನು ಮಂಡಿಸಿತ್ತು. ಆದರೂ ಚುನಾವಣೆ ಆಯೋಗ ಪಪ್ಪು ಪದ ಬಳಕೆಯನ್ನು ನಿರ್ಬಂಧಿಸಿತ್ತು.

    ಚುನಾವಣೆಗೆ ಜಾಹೀರಾತಿನಲ್ಲಿ ಬಳಸುವ ಸ್ಕ್ರಿಪ್ಟ್ ನ್ನು ಒಂದು ತಿಂಗಳ ಮುಂಚೆಯೇ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕಾಗುತ್ತದೆ. ಆಯೋಗದ ಪರಿಶೀಲನೆ ಬಳಿಕವಷ್ಟೇ ಸ್ಕ್ರಿಪ್ಟ್ ನ್ನು ಬಳಸಬೇಕು ಎಂಬ ನಿಯಮವಿದೆ.

     

  • ಬಿಜೆಪಿ ಇನ್ನ್ಮುಂದೆ `ಪಪ್ಪು’ ಎಂಬ ಪದವನ್ನು ಬಳಸುವಂತಿಲ್ಲ!

    ಬಿಜೆಪಿ ಇನ್ನ್ಮುಂದೆ `ಪಪ್ಪು’ ಎಂಬ ಪದವನ್ನು ಬಳಸುವಂತಿಲ್ಲ!

    ಗಾಂಧಿನಗರ: ಗುಜರಾತ್ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಬಿಜೆಪಿ ತನ್ನ ಜಾಹೀರಾತುಗಳಲ್ಲಿ `ಪಪ್ಪು’ ಎಂಬ ಪದವನ್ನು ಬಳಸದಂತೆ ಚುನಾವಣಾ ಆಯೋಗ ತಿಳಿಸಿದೆ.

    ಚುನಾವಣೆಯಲ್ಲಿ ಬಳಸುವ ಎಲ್ಲ ಜಾಹೀರಾತುಗಳ ಸ್ಕ್ರಿಪ್ಟ್ ನ್ನು ಒಂದ ತಿಂಗಳ ಮುಂಚಿತವಾಗಿಯೇ ಚುನಾವಣಾ ಆಯೋಗದ ಮಾಧ್ಯಮ ಕಮೀಟಿಗೆ ಕಳುಹಿಸಲಾಗಿತ್ತು. ಆದರೆ ಮಾಧ್ಯಮ ಕಮೀಟಿ `ಪಪ್ಪು’ ಎಂಬ ಪದದ ಬಳಕೆಗೆ ಆಕ್ಷೇಪ ವ್ಯಕ್ತಪಡಿಸಿದೆ. ಪಪ್ಪು ಪದದ ಬಳಕೆ ಅಗೌರವ ತೋರಿಸುತ್ತದೆ. ಹಾಗಾಗಿ ನಮ್ಮ ಜಾಹೀರಾತಿನ ಸ್ಕ್ರಿಪ್ಟ್ ನಲ್ಲಿಯ ಪಪ್ಪು ಪದವನ್ನು ತೆಗೆಯುವಂತೆ ಎಂದು ಚುನಾವಣಾ ಆಯೋಗ ತಿಳಿಸಿದೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

    ಜಾಹೀರಾತಿನ ಸ್ಕ್ರಿಪ್ಟ್ ನಲ್ಲಿಯ ಪಪ್ಪು ಪದವನ್ನು ತೆಗೆದು ಮತ್ತೊಮ್ಮೆ ಹಾಜರುಪಡಿಸಲು ಚುನಾವಣಾ ಆಯೋಗ ಹೇಳಿದೆ. ಸ್ಕ್ರಿಪ್ಟ್ ನಲ್ಲಿಯ ಪಪ್ಪು ಎಂಬ ಪದ ಯಾವುದೇ ವ್ಯಕ್ತಿಗೆ ಸಂಬಂಧಿಸಿಲ್ಲ ಹಾಗೂ ಈ ಪದದ ಮೂಲಕ ಯಾವುದೇ ವ್ಯಕ್ತಿಯ ಹೆಸರನ್ನು ಹೇಳಲಾಗುತ್ತಿಲ್ಲ. ಚುನಾವಣಾ ಆಯೋಗದ ಮನವಿಯಂತೆ ಪದದ ಬಳಕೆಗೆ ಇನ್ನೊಂದು ಸಾರಿ ಚರ್ಚೆ ನಡೆಸೋಣ ಅಂದ್ರು ಅದನ್ನು ಆಯೋಗ ರದ್ದುಪಡಿಸಿದೆ ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ.

    ಪಪ್ಪು ಪದದ ಬಳಕೆ ಬಗೆಗಿನ ಬೆಳವಣಿಗೆಗೆ ಬಗ್ಗೆ ನನಗೆ ಯಾವುದೇ ಮಾಹಿತಿ ಬಂದಿಲ್ಲ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ, ಮಾಹಿತಿಯನ್ನು ಪಡೆದುಕೊಳ್ಳುತ್ತೇನೆ. ಅಲ್ಲಿವರೆಗೂ ನಾನು ಹೇಳಲಾರೆ ಎಂದು ಗುಜರಾತ್ ಚುನಾವಣಾ ಆಯೋಗದ ಮುಖ್ಯ ಆಯುಕ್ತೆ ಬೀಬೀ ಸ್ವೈನ್ ಸ್ಪಷ್ಟನೆ ನೀಡಿದ್ದಾರೆ.

    ಸಾಮಾಜಿಕ ಜಾಲತಾಣಗಳಲ್ಲಿ ಪಪ್ಪು ಪದವನ್ನು ಬಳಸಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಟಾರ್ಗೆಟ್ ಮಾಡಿ ಲೇವಡಿ ಮಾಡಲಾಗುತಿತ್ತು.

  • ರಾಹುಲ್ ಗಾಂಧಿಯನ್ನು ‘ಪಪ್ಪು’ ಎಂದು ಕರೆದ ಕಾಂಗ್ರೆಸ್ ಮುಖಂಡ ಪಕ್ಷದಿಂದ ವಜಾ

    ರಾಹುಲ್ ಗಾಂಧಿಯನ್ನು ‘ಪಪ್ಪು’ ಎಂದು ಕರೆದ ಕಾಂಗ್ರೆಸ್ ಮುಖಂಡ ಪಕ್ಷದಿಂದ ವಜಾ

    ಲಕ್ನೋ: ಉತ್ತರಪ್ರದೇಶದ ಕಾಂಗ್ರೆಸ್ ಮುಖಂಡರೊಬ್ಬರು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನ ಸಾಮಾಜಿಕ ಜಾಲತಾಣದಲ್ಲಿ ಹೊಗಳುವ ಸಂದರ್ಭದಲ್ಲಿ ಪಪ್ಪು ಎಂದು ಸಂಭೋದಿಸಿದ್ದಕ್ಕೆ ಪಕ್ಷದಿಂದ ವಜಾಗೊಂಡಿದ್ದಾರೆ.

    ಮೀರತ್‍ನ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ್ ಪ್ರಧಾನ್, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಎಂಬ ವಾಟ್ಸಪ್ ಗ್ರೂಪ್‍ಗೆ ಸಂದೇಶವೊಂದನ್ನ ಕಳಿಸಿದ್ರು. ಮಧ್ಯಪ್ರದೇಶದಲ್ಲಿ ಪೊಲೀಸರ ಗುಂಡೇಟಿಗೆ 5 ಪ್ರತಿಭಟನಾನಿರತ ರೈತರು ಬಲಿಯಾದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಇತ್ತೀಚೆಗೆ ಮಧ್ಯಪ್ರದೇಶದ ಮಂಡಸೌರ್ ಗ್ರಾಮಕ್ಕೆ ಭೇಟಿ ನೀಡಿದ್ದನ್ನು ವಿನಯ್ ಪ್ರಧಾನ ತಮ್ಮ ಸಂದೇಶದಲ್ಲಿ ಹೊಗಳಿದ್ದರು.

    ಪಪ್ಪು ಬೇಕಿದ್ರೆ ಅದಾನಿ, ಅಂಬಾನಿ ಹಾಗೂ ಮಲ್ಯ ಜೊತೆ ಕೈಜೋಡಿಸಬಹುದಿತ್ತು. ಆದ್ರೆ ಅವರು ಹಾಗೆ ಮಾಡಲಿಲ್ಲ. ಪಪ್ಪು ಬೇಕಿದ್ರೆ ಮುಖ್ಯಮಂತ್ರಿ ಅಥವಾ ಪ್ರಧಾನ ಮಂತ್ರಿಯೂ ಆಗಬಹುದಿತ್ತು. ಆದ್ರೆ ಅವರು ಆ ಮಾರ್ಗದಲ್ಲಿ ಹೋಗಲಿಲ್ಲ. ಬದಲಾಗಿ ಅವರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಮಂಡಸೌರ್‍ಗೆ ಹೋದ್ರು ಎಂದು ಪ್ರಧಾನ್ ಸಂದೇಶ ಕಳಿಸಿದ್ದರು.

    ಈ ಸಂದೇಶಕ್ಕೆ ಪ್ರತಿಕ್ರಿಯಿಸಿರೋ ಕಾಂಗ್ರೆಸ್ ಶಿಸ್ತು ಸಮಿತಿ ಅಧ್ಯಕ್ಷರಾದ ರಾಮಕೃಷ್ಣ ದ್ವಿವೇದಿ ಮಂಗಳವಾರದಂದು ಪತ್ರವೊಂದನ್ನ ನೀಡಿದ್ದು, ಪ್ರಚೋದನಕಾರಿ ಹೇಳಿಕೆ ಹಿನ್ನೆಲೆಯಲ್ಲಿ ಪ್ರಧಾನ್ ಅವರನ್ನು ಪಕ್ಷದ ಎಲ್ಲಾ ಸ್ಥಾನಗಳಿಂದ ವಜಾ ಮಾಡಲಾಗಿದೆ ಎಂದು ಹೇಳಿದ್ದಾರೆ.

    ಪಕ್ಷದ ನಾಯಕತ್ವವನ್ನು ದುರ್ಬಳಕೆ ಮಾಡಿಕೊಳ್ಳೋ ಪ್ರಯತ್ನವಿದು. ಬೇರೆ ಪಕ್ಷದವರು ಇದರಲ್ಲಿ ಭಾಗಿಯಾಗಿರುವಂತಿದೆ. ಮಧ್ಯಪ್ರದೇಶದಲ್ಲಿ ರೈತರ ಸಂಕಷ್ಟದಂತಹ ಮುಖ್ಯವಾದ ಸಮಸ್ಯೆಗಳಿಂದ ಗಮನ ಬೇರೆಡೆ ಹೋಗುವಂತೆ ಮಾಡಲು ಈ ರೀತಿ ಮಾಡಿದ್ದಾರೆ. ವಿನಯ್ ಪ್ರಧಾನ್ ಕಾಂಗ್ರೆಸ್ ಪಕ್ಷದ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ರಾಮಕೃಷ್ಣ ದ್ವಿವೇದಿ ಪತ್ರದಲ್ಲಿ ಹೇಳಿದ್ದಾರೆ.

    ಈ ಬಗ್ಗೆ ಸಮರ್ಥನೆ ನೀಡಿರೋ ವಿನಯ್ ಪ್ರಧಾನ್, ಈ ಸಂದೇಶವನ್ನು ನಾನು ಕಳಿಸಿಲ್ಲ. ಈ ಬಗ್ಗೆ ವಿವರಿಸಲು ನನಗೆ ಅವಕಾಶವೇ ನೀಡಿಲ್ಲ. ಹಂಚಿಕೆ ಆಗುತ್ತಿರೋ ಸ್ಕ್ರೀನ್‍ಶಾಟ್‍ಗಳನ್ನ ಫೋಟೋಶಾಪ್ ಮಾಡಲಾಗಿದೆ. ನಾನು ರಾಹುಲ್ ಗಾಂಧಿ ಅವರನ್ನ ಗೌರವಿಸುತ್ತೇನೆ. ಅವರ ಬಗ್ಗೆ ಮಾತನಾಡಲು ಅಂತಹ ಭಾಷೆಯನ್ನ ಬಳಸಲ್ಲ. ನನ್ನನ್ನು ಪಕ್ಷದಿಂದ ತೆಗೆಯುವ ಮುನ್ನ ನನ್ನ ಮಾತನ್ನು ಕೇಳಬೇಕಿತ್ತು. ನಾನು ಅವರನ್ನು ಭೇಟಿಯಾಗಲು ಅವಕಾಶ ಕೋರಿದ್ದೇನೆ. ಎಲ್ಲವನ್ನೂ ಅವರಿಗೆ ವಿವರಿಸುತ್ತೇನೆ ಎಂದಿದ್ದಾರೆ.

    ಸಾಮಾಜಿಕ ಜಾಲತಾಣಗಳಲ್ಲಿ ಸಾಮಾನ್ಯವಾಗಿ ರಾಹುಲ್ ಗಾಂಧಿಯನ್ನು ಟೀಕಿಸಲು ಪಪ್ಪು ಎಂದು ಸಂಬೋಧಿಸುದುವುದನ್ನು ಇಲ್ಲಿ ಗಮನಿಸಬಹುದು.