Tag: paper boy

  • ಸೈಕಲ್‍ಗೆ ಲಾರಿ ಡಿಕ್ಕಿ- ದಿನಪತ್ರಿಕೆ ಹಾಕಲು ಹೋಗ್ತಿದ್ದ ಹುಡುಗ ಸ್ಥಳದಲ್ಲೇ ಸಾವು

    ಸೈಕಲ್‍ಗೆ ಲಾರಿ ಡಿಕ್ಕಿ- ದಿನಪತ್ರಿಕೆ ಹಾಕಲು ಹೋಗ್ತಿದ್ದ ಹುಡುಗ ಸ್ಥಳದಲ್ಲೇ ಸಾವು

    ರಾಯಚೂರು: ದಿನಪತ್ರಿಕೆ ಹಾಕಲು ತೆರಳುತ್ತಿದ್ದ ಹುಡುಗನಿಗೆ ಲಾರಿ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ರಾಯಚೂರಿನ ಗೋಶಾಲಾ ರಸ್ತೆಯಲ್ಲಿ ಇಂದು ಬೆಳಗ್ಗೆ ನಡೆದಿದೆ.

    ಜಲಾಲನಗರದ ನಿವಾಸಿಯಾದ 16 ವರ್ಷದ ಉಪೇಂದ್ರ ಮೃತ ದುರ್ದೈವಿ. ಉಪೇಂದ್ರ ಪ್ರತಿದನದಂತೆ ಇಂದು ಕೂಡ ಬೆಳಗ್ಗೆ ತನ್ನ ಸೈಕಲಿನಲ್ಲಿ ಪೇಪರ್ ಹಾಕಲು ತೆರಳುತ್ತಿದ್ದ. ಈ ವೇಳೆ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಉಪೇಂದ್ರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆ ಬಳಿಕ ಚಾಲಕ ಪರಾರಿಯಾಗಿದ್ದು, ಲಾರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಘಟನೆ ಸಂಬಂಧ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳಗಿನ ಜಾವವಾಗಿದ್ದರಿಂದ ಖಾಲಿ ರಸ್ತೆಯಲ್ಲಿ ಚಾಲಕ ಅತಿ ವೇಗವಾಗಿ ಲಾರಿ ಚಲಾಯಿಸಿದ್ದೇ ಘಟನೆಗೆ ಕಾರಣ ಎನ್ನಲಾಗಿದೆ.