Tag: Papaya

  • ಸರಳ, ಸ್ವಾದಿಷ್ಟವಾಗಿ ಮಾಡಿ ಪಪ್ಪಾಯ ಜ್ಯೂಸ್..

    ಸರಳ, ಸ್ವಾದಿಷ್ಟವಾಗಿ ಮಾಡಿ ಪಪ್ಪಾಯ ಜ್ಯೂಸ್..

    ಪ್ರತಿದಿನ ವಿಭಿನ್ನವಾದ ರುಚಿಕರವಾದ ಆಹಾರವನ್ನು ತಿನ್ನಲು ಬಯಸುತ್ತೇವೆ. ರುಚಿಕರವಾದ ಆಹಾರ ತಿನ್ನುವ ಚಿಂತೆಯಲ್ಲಿ ಆರೋಗ್ಯಕರವಾದದನ್ನು ತಿನ್ನುವುದೇ ಮರೆತುಬಿಡುತ್ತೇವೆ. ಕೆಲವೊಮ್ಮೆ ಆರೋಗ್ಯದ ಕಡೆ ಗಮನ ಕೊಡುವ ಸಮಯವು ನಮಗಿರುವುದಿಲ್ಲ. ಇಂಥ ಸಂದರ್ಭದಲ್ಲಿ ಕಡಿಮೆ ಸಮಯದಲ್ಲಿಯೇ ಆರೋಗ್ಯಕರವಾದದನ್ನು ಸೇವಿಸುವ ಪ್ರಯತ್ನ ಮಾಡುವುದು ಉತ್ತಮ. ಆ ಪೈಕಿ ಆರೋಗ್ಯಕರವಾದುವೆಂದರೆ ಹಣ್ಣುಗಳನ್ನು ತಿನ್ನುವುದು, ಜ್ಯೂಸ್ ಮಾಡಿಕೊಳ್ಳುವುದು ಅಥವಾ ಇನ್ನಿತರೆ ಸ್ಯಾಲಡ್ ತಿನ್ನುವುದು ಒಳ್ಳೆಯದು.

    ಹೀಗಿರುವಾಗ ಮನೆಯಲ್ಲಿ ಸುಲಭವಾಗಿ ಕಡಿಮೆ ಸಮಯದಲ್ಲಿ ಪಪ್ಪಾಯ ಜ್ಯೂಸ್ ಮಾಡಿ ಸೇವಿಸಿ.

    ಬೇಕಾಗುವ ಸಾಮಗ್ರಿಗಳು:
    ಪಪ್ಪಾಯ
    ಮಂಜುಗಡ್ಡೆ (Ice Cubes)
    ನಿಂಬೆಹಣ್ಣು
    ಪೆಪ್ಪರ್ ಪೌಡರ್

    ಮಾಡುವ ವಿಧಾನ:
    ಮೊದಲಿಗೆ ಪಪ್ಪಾಯವನ್ನು ಕತ್ತರಿಸಿ ಒಳಗಿನ ಬೀಜಗಳಿಂದ ಬೇರ್ಪಡಿಸಿಕೊಳ್ಳಬೇಕು. ನಂತರ ಸಿಪ್ಪೆ ತೆಗೆದು ಸಣ್ಣದಾಗಿ ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡಿಕೊಳ್ಳಬೇಕು. ಬಳಿಕ ಒಂದು ಮಿಕ್ಸರ್ ಜಾರಿಗೆ ಕತ್ತರಿಸಿದ ಪಪ್ಪಾಯ ತುಂಡುಗಳನ್ನು ಹಾಕಿಕೊಳ್ಳಬೇಕು. ಅದರ ಮೇಲೆ ಮಂಜುಗಡ್ಡೆ ಹಾಕಬೇಕು. ಅದರ ಮೇಲೆ ಸ್ವಲ್ಪ ಪೆಪ್ಪರ್ ಪೌಡರ್ ಹಾಕಿ, ನಿಂಬೆ ರಸವನ್ನು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು. ಆಗ ಸ್ವಾದಿಷ್ಟವಾದ ಪಪ್ಪಾಯ ಜ್ಯೂಸ್ ತಯಾರಾಗುತ್ತದೆ. ಒಂದು ವೇಳೆ ರುಚಿಯಲ್ಲಿ ನಿಮಗೆ ಸರಿ ಹೊಂದದಿದ್ದರೆ ನೀವು ಅದಕ್ಕೆ ಸಕ್ಕರೆ ಅಥವಾ ಉಪ್ಪನ್ನು ಸೇರಿಸಿಕೊಳ್ಳಬಹುದು.

  • ವಿಜಯನಗರ ಜಿಲ್ಲೆಯಾದ್ಯಂತ ಬಿರುಗಾಳಿ ಸಹಿತ ಮಳೆ – ವರುಣನ ಅಬ್ಬರಕ್ಕೆ ನೆಲಕಚ್ಚಿದ ಪಪ್ಪಾಯ

    ವಿಜಯನಗರ ಜಿಲ್ಲೆಯಾದ್ಯಂತ ಬಿರುಗಾಳಿ ಸಹಿತ ಮಳೆ – ವರುಣನ ಅಬ್ಬರಕ್ಕೆ ನೆಲಕಚ್ಚಿದ ಪಪ್ಪಾಯ

    ಬಳ್ಳಾರಿ: ಬಿರುಗಾಳಿ ಸಹಿತ ಮಳೆಯ ಹೊಡೆತಕ್ಕೆ 9 ಎಕರೆ ಪಪ್ಪಾಯ (Papaya) ತೋಟ ಸಂಪೂರ್ಣ ನಾಶವಾಗಿರುವ ಘಟನೆ ವಿಜಯನಗರ (Vijayanagar) ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಗುಡೇಕೋಟೆ ಹೋಬಳಿ ವ್ಯಾಪ್ತಿಯಲ್ಲಿ ನಡೆದಿದೆ.ಇದನ್ನೂ ಓದಿ: ಸಿದ್ದರಾಮಯ್ಯ ಜಾತಿ-ಜಾತಿಗಳು, ಧರ್ಮಗಳ ನಡುವೆ ಬಿರುಕು ಮೂಡಿಸೋ ಕೆಲಸ ಬಿಡಬೇಕು: ವಿಜಯೇಂದ್ರ

    ತಡರಾತ್ರಿ ಸುರಿದ ಬಿರುಗಾಳಿ ಸಹಿತ ಭಾರೀ ಮಳೆಯಿಂದಾಗಿ ಪಪ್ಪಾಯ ತೋಟ ಸಂಪೂರ್ಣ ಹಾಳಾಗಿದೆ. ಸಿದ್ದೇಶ ಎಂಬುವವರಿಗೆ ಸೇರಿದ್ದ 9 ಎಕರೆ ಜಮೀನಿನಲ್ಲಿ ಬೆಳೆದಿದ್ದ ಪಪ್ಪಾಯ ಸಂಪೂರ್ಣ ನೆಲಕಚ್ಚಿದ್ದು, ರೈತನಿಗೆ ದಿಕ್ಕು ತೋಚದಂತಾಗಿದೆ.

    ನೆಲಬೊಮ್ಮನಹಳ್ಳಿ, ಚಂದ್ರಶೇಖರಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು, ರೈತರಿಗೆ ಲಕ್ಷಾಂತರ ರೂ. ನಷ್ಟವಾಗಿದೆ.ಇದನ್ನೂ ಓದಿ: ರೀಲ್ಸ್ ಕೇಸ್: ‘ಬಿಗ್ ಬಾಸ್’ ರಜತ್ ಮತ್ತೆ ಅರೆಸ್ಟ್, ವಿನಯ್‌ಗೂ ಬಂಧನ ಭೀತಿ

  • ತಾನು ನೆಟ್ಟ ಗಿಡದಲ್ಲಿ ಹಣ್ಣು ಕೀಳಲು ಮುಂದಾದ ಅತ್ತೆಯತ್ತ ಚಾಕು ಬೀಸಿದ  ಸೊಸೆ

    ತಾನು ನೆಟ್ಟ ಗಿಡದಲ್ಲಿ ಹಣ್ಣು ಕೀಳಲು ಮುಂದಾದ ಅತ್ತೆಯತ್ತ ಚಾಕು ಬೀಸಿದ ಸೊಸೆ

    ತಿರುವನಂತಪುರಂ: ತಾನು ನೆಟ್ಟ ಗಿಡದಲ್ಲಿ ಹಣ್ಣು ಕೀಳುವುದು ಬೇಡ ಎಂದರೂ ಪಪ್ಪಾಯ ಕೀಳಲು ಮುಂದಾದ ಅತ್ತೆಯ ವರ್ತನೆಯಿಂದ ಕುಪಿತಗೊಂಡ ಸೊಸೆ ಆಕೆಯನ್ನು ಚಾಕುವಿನಿಂದ ಇರಿದಿರುವ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ.

    ಹಲ್ಲೆ ನಡೆಸಿದ ಸೊಸೆಯನ್ನು 33 ವರ್ಷದ ಸಿಂಧು ಎಂದು ಗುರುತಿಸಲಾಗಿದ್ದು, ಹಲ್ಲೆಗೊಳಗಾದ 67 ವರ್ಷದ ಸರೋಜಿನಿ ಸದ್ಯ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸೊಸೆ ಬೇಡವೆಂದರು ಹಣ್ಣು ಕೀಳಲು ಹೋಗಿ ಅತ್ತೆ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದಳು.

    ತೋಟದಲ್ಲಿ ಬೆಳೆದಿದ್ದ ಪಪ್ಪಾಯ ಕೀಳಲು ಹೋದ ಅತ್ತೆಗೆ ಸೊಸೆ ವಿರೋಧಿಸಿದ್ದಾಳೆ. ಆದರೂ ಕೂಡ ಆಕೆಯ ಮಾತನ್ನು ನಿರ್ಲಕ್ಷಿಸಿದ ಅತ್ತೆ ಪಪ್ಪಾಯ ಕೀಳಲು ಕೈ ಹಾಕಿದ್ದಾಳೆ. ಈ ವೇಳೆ ಸಿಟ್ಟಿಗೆದ್ದ ಸೊಸೆ ಜೋರಾಗಿ ಚಾಕುವಿನಿಂದ ಅತ್ತೆಯತ್ತ ಬೀಸಿದ್ದಾಳೆ. ಅತ್ತೆಯ ಬಲಗೈಗೆ ಬಿದ್ದಿದೆ. ಬಲಗೈ ಸೀಳಿದ್ದು, ಸದ್ಯ ಗಂಭೀರವಾದ ಗಾಯವಾಗಿಲ್ಲ. ಇದನ್ನೂ ಓದಿ: ನನಗೆ ಬರುವ ಸಂಬಳ ಸಾಕಾಗ್ತಿಲ್ಲ: ಮಾಯಣ್ಣ

    ಹೇಳಿಕೆ ನೀಡಿರುವ ಸೊಸೆ ನಾನು ನೆಟ್ಟು ಬೆಳೆಸಿದ ಗಿಡದಲ್ಲಿ ಹಣ್ಣು ಕೀಳಲು ಮುಂದಾದ ಕಾರಣ ಈ ಹಲ್ಲೆ ನಡೆಸಿರುವುದಾಗಿ ಹೇಳಿಕೆ ನೀಡಿದ್ದಾಳೆ. ಈ ಘಟನೆ ಸಂಬಂಧ ಕಣ್ಣೂರು  ಪೋಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ವೇಳೆ ಅತ್ತೆ ಮತ್ತು ಸೊಸೆ ನಡುವೆ ಸದಾ ವಾಗ್ವಾದ ನಡೆಯುತ್ತಿತ್ತು ಎಂಬುದು ತಿಳಿದು ಬಂದಿದ್ದು, ಸೊಸೆ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನಾನು ಪ್ರಾಮಾಣಿಕ ಅಧಿಕಾರಿ, ತೆರಿಗೆ ಕಟ್ಟುತ್ತಿದ್ದೇನೆ: ಎಲ್‌.ಸಿ.ನಾಗರಾಜ್‌

  • ರಾಯಚೂರಿನಲ್ಲಿ ಮಳೆ, ಬಿರುಗಾಳಿಗೆ ಧರೆಗುರುಳಿದ ಪಪ್ಪಾಯಿ ಗಿಡಗಳು – ಲಕ್ಷಾಂತರ ರೂಪಾಯಿ ಬೆಳೆ ಹಾನಿ

    ರಾಯಚೂರಿನಲ್ಲಿ ಮಳೆ, ಬಿರುಗಾಳಿಗೆ ಧರೆಗುರುಳಿದ ಪಪ್ಪಾಯಿ ಗಿಡಗಳು – ಲಕ್ಷಾಂತರ ರೂಪಾಯಿ ಬೆಳೆ ಹಾನಿ

    ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಪರಂಪುರ ಗ್ರಾಮದಲ್ಲಿ ಸುರಿದ ಆಲೆಕಲ್ಲು ಸಹಿತ ಮಳೆ, ಬಿರುಗಾಳಿಗೆ ಲಕ್ಷಾಂತರ ರೂಪಾಯಿ ಮೌಲ್ಯದ ಪಪ್ಪಾಯಿ ಬೆಳೆ ಸಂಪೂರ್ಣ ಹಾನಿಯಾಗಿದೆ.

    ಪರಂಪುರ ಗ್ರಾಮದ ರೈತರಾದ ನಿಂಗಪ್ಪ, ಗುರುನಾಥ್ ಗೌಡ ಅವರ ಜಮೀನಿನಲ್ಲಿದ್ದ ಬೆಳೆ ಹಾನಿಯಾಗಿದೆ. ಸುಮಾರು 10 ಎಕ್ರೆಯಲ್ಲಿ ಬೆಳೆದಿದ್ದ ಪಪ್ಪಾಯಿ ಬೆಳೆ ಸಂಪೂರ್ಣ ಹಾನಿಯಾಗಿದ್ದು, ರೈತರು ನಷ್ಟ ಅನುಭವಿಸಿದ್ದಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಬೆಳೆ ಕೈಗೆ ಬರುವ ಹೊತ್ತಲ್ಲೇ ಕೆಡಕಿನ ಮಳೆ ಬೆಳೆ ಹಾನಿ ಮಾಡಿದೆ.

    ಒಂದೆಡೆ ಸುಡು ಬಿಸಿಲು, ನೀರಿನ ಸಮಸ್ಯೆ ಇದ್ರೆ ಜಿಲ್ಲೆಯಲ್ಲಿ ಕೆಡಕಿನ ಮಳೆಯ ಅಬ್ಬರ ಜೋರಾಗಿದೆ. ನಿತ್ಯ ಸಂಜೆಯಾಗುತ್ತಿದ್ದಂತೆ ವಾತಾವರಣವೇ ಬದಲಾಗುತ್ತಿದ್ದು, ಗಾಳಿ-ಮಳೆ ಜೋರಾಗುತ್ತಿದೆ. ಹೀಗಾಗಿ ಜಿಲ್ಲೆಯ ಸಾವಿರಾರು ಎಕ್ರೆ ಬೆಳೆಗಳು ಹಾನಿಯಾಗಿದೆ. ಭತ್ತ ಹಾಗೂ ಪಪ್ಪಾಯಿ ಬೆಳೆ ಅತೀ ಹೆಚ್ಚು ಪ್ರಮಾಣದಲ್ಲಿ ಹಾನಿಯಾಗಿದೆ. ಬೆಳೆಹಾನಿ ಸಮೀಕ್ಷೆಯೂ ನಿರಂತರವಾಗಿ ನಡೆದಿದ್ದು, ಹಾನಿಯಾದ ಬೆಳೆಗೆ ಸೂಕ್ತ ಪರಿಹಾರ ನೀಡುವಂತೆ ರೈತರು ಒತ್ತಾಯಿಸಿದ್ದಾರೆ.

  • ಲಾಕ್‍ಡೌನ್‍ನಿಂದ ಜಮೀನಿನಲ್ಲಿಯೇ ಕೊಳೆಯುತ್ತಿದೆ ಪಪ್ಪಾಯಿ – ಮಾರುಕಟ್ಟೆ ಸೌಲಭ್ಯ ಕಲ್ಪಿಸಿಕೊಡಿ ಎಂದು ಕೈಮುಗಿದ ರೈತ

    ಲಾಕ್‍ಡೌನ್‍ನಿಂದ ಜಮೀನಿನಲ್ಲಿಯೇ ಕೊಳೆಯುತ್ತಿದೆ ಪಪ್ಪಾಯಿ – ಮಾರುಕಟ್ಟೆ ಸೌಲಭ್ಯ ಕಲ್ಪಿಸಿಕೊಡಿ ಎಂದು ಕೈಮುಗಿದ ರೈತ

    ಹಾವೇರಿ: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ದೇಶಾದ್ಯಂತ ಜಾರಿಮಾಡಿರುವ ಲಾಕ್‍ಡೌನ್‍ನಿಂದಾಗಿ ಕಷ್ಟಪಟ್ಟು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ತರಲಾಗದೇ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಪಪ್ಪಾಯಿ ಜಮೀನಿನಲ್ಲಿಯೇ ಹಾಳಾಗುತ್ತಿರೋದನ್ನ ಕಂಡು ರೈತ ಕಂಗಾಲಾಗಿದ್ದಾರೆ.

    ದೇವರಗುಡ್ಡ ಗ್ರಾಮದ ರೈತ ಹನುಮಂತಪ್ಪ ನಾಯರ್ ತಮ್ಮ ಮೂರು ಎಕ್ರೆ ಜಮೀನಿನಲ್ಲಿ ಪಪ್ಪಾಯಿ ಬೆಳೆ ಬೆಳೆದಿದ್ದರು. ಪಪ್ಪಾಯಿ ರೈತರ ನಿರೀಕ್ಷೆಗೂ ಮೀರಿ ಉತ್ತಮ ಫಸಲು ಬಂದಿತ್ತು. ಆದ್ರೆ ಲಾಕ್‍ಡೌನ್‍ನಿಂದ ಖರೀದಿಗೆ ವ್ಯಾಪಾರಸ್ಥರು ಬರದೆ ಪಪ್ಪಾಯಿ ಜಮೀನಿನಲ್ಲಿ ಹಾಳಾಗುತ್ತಿದೆ. ಲಕ್ಷ ಲಕ್ಷ ಖರ್ಚು ಮಾಡಿ ಬೆಳೆದ ಪಪ್ಪಾಯಿ ಹಾಳಾಗ್ತಿರೋದಕ್ಕೆ ರೈತ ಹನುಮಂತಪ್ಪ ಕಣ್ಣೀರಿಡುತ್ತಿದ್ದಾರೆ.

    ಜಿಲ್ಲಾಡಳಿತ ಜಮೀನಿನಲ್ಲಿ ಕೊಳೆಯುತ್ತಿರೋ ಪಪ್ಪಾಯಿಗೆ ಮಾರುಕಟ್ಟೆ ಸೌಲಭ್ಯ ಒದಗಿಸಿಕೊಡಬೇಕು. ಇಲ್ಲದಿದ್ದರೆ ಸೂಕ್ತ ಪರಿಹಾರ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಹೀಗೆ ರೈತರು ನಷ್ಟ ಅನುಭವಿಸುತ್ತಿದ್ದರೆ ಜೀವನ ಮಾಡೋದು ಹೇಗೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

  • ಲಾಕ್‍ಡೌನ್‍ನಿಂದ ಪಪ್ಪಾಯಿ ಬೆಳೆಗಾರ ಕಂಗಾಲು – ಗಿಡಗಳನ್ನೇ ಕಡಿದು ಹಾಕಿದ ರೈತ

    ಲಾಕ್‍ಡೌನ್‍ನಿಂದ ಪಪ್ಪಾಯಿ ಬೆಳೆಗಾರ ಕಂಗಾಲು – ಗಿಡಗಳನ್ನೇ ಕಡಿದು ಹಾಕಿದ ರೈತ

    ಹಾವೇರಿ: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಮಾಡಿರುವ ಲಾಕ್‍ಡೌನ್‍ನಿಂದಾಗಿ ರೈತರು ಕಂಗಾಲಾಗಿದ್ದಾರೆ. ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡಲಾಗದೇ ನಷ್ಟ ಅನುಭವಿಸುತ್ತಿದ್ದಾರೆ.

    ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ವೈ.ಟಿ ಹೊನ್ನತ್ತಿ ಗ್ರಾಮದ ರೈತ ಗುಡ್ಡಪ್ಪ ಕುಲಕರ್ಣಿ ಮೂರು ಎಕ್ರೆ ಜಮೀನಿನಲ್ಲಿ ಪಪ್ಪಾಯಿ ಗಿಡಗಳನ್ನ ಬೆಳೆಸಿದ್ದರು. ಒಳ್ಳೆಯ ಪಪ್ಪಾಯಿ ಹಣ್ಣುಗಳು ಕೂಡ ಚೆನ್ನಾಗಿ ಬೆಳೆದಿದ್ದವು. ಆದರೆ ಲಾಕ್‍ಡೌನ್ ಹಿನ್ನೆಲೆ ಪಪ್ಪಾಯಿ ಹಣ್ಣುಗಳನ್ನು ಮಾರಾಟ ಮಾಡಲಾಗದೆ, ಅವುಗಳು ಗಿಡದಲ್ಲೇ ಕೊಳೆಯುತ್ತಿರುವುದನ್ನು ಕಂಡು ಗುಡ್ಡಪ್ಪ ಅವರು ಕಂಗಾಲಾಗಿದ್ದರು.

    ಈ ನಷ್ಟದಿಂದ ಬೇಸತ್ತ ರೈತ ಗುಡ್ಡಪ್ಪ ಅವರು ಐದಾರು ಲಕ್ಷ ರೂಪಾಯಿ ಖರ್ಚು ಮಾಡಿ ಬೆಳೆಸಿದ್ದ ಪಪ್ಪಾಯಿ ಗಿಡಗಳನ್ನ ತಾವೇ ನಾಶ ಮಾಡಿದ್ದಾರೆ. ಕೊಡಲಿಯಿಂದ ಪಪ್ಪಾಯಿ ಗಿಡಗಳನ್ನು ಕಡಿದು ಹಾಕ್ತಿದ್ದಾರೆ.

  • ಸಮಗ್ರ ಸಾವಯವ ಕೃಷಿಯ ಕಮಾಲ್- ಬರದಲ್ಲೂ ಬಂಗಾರದ ಬೆಳೆ ಬೆಳೆದ ರೈತ

    ಸಮಗ್ರ ಸಾವಯವ ಕೃಷಿಯ ಕಮಾಲ್- ಬರದಲ್ಲೂ ಬಂಗಾರದ ಬೆಳೆ ಬೆಳೆದ ರೈತ

    ಗದಗ: ಸತತ ಭೀಕರ ಬರ ರೈತರನ್ನು ಹೈರಾಣ ಮಾಡಿದೆ. ಆದರೆ ಈ ಭೀಕರ ಬರವನ್ನು ಮೆಟ್ಟಿನಿಂತ ರೈತರೊಬ್ಬರು ಬಂಗಾರದಂತ ಪಪ್ಪಾಯಿ ಬೆಳೆದು ಕೈತುಂಬಾ ಝಣ ಝಣ ಕಾಂಚಾಣ ಎಣಿಸುತ್ತಿದ್ದಾರೆ. ಸಮಗ್ರ ಸಾವಯವ ಕೃಷಿ ಪದ್ಧತಿಯಲ್ಲಿ ಯಶಸ್ಸು ಕಂಡು ಇತರೆ ರೈತರಿಗೆ ಮಾದರಿಯಾಗಿದ್ದಾರೆ.

    ಕೈ ಕೆಸರಾದರೆ ಬಾಯಿ ಮೊಸರು ಅನ್ನೋ ಮಾತು ಈ ಅಕ್ಷರಶಃ ಈ ರೈತ ಸತ್ಯ ಮಾಡಿದ್ದಾರೆ. ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಜೀಗೇರಿ ಗ್ರಾಮದ ಪರಶುರಾಮ್ ಸಮಗ್ರ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಬೆಳೆ ಬೆಳೆದು ಮಾದರಿ ರೈತರಾಗಿದ್ದಾರೆ. ಇವರ ಜಮೀನಲ್ಲಿ 5 ಎಕ್ರೆ ಪಪ್ಪಾಯಿ, 10 ಎಕ್ರೆ ನಿಂಬೆಹಣ್ಣು, 3 ಎಕ್ರೆ ವಿಳ್ಳೆದೆಲೆ ತೋಟ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಇದರ ಜೊತೆ ಮೆಕ್ಕೆಜೋಳ, ಹತ್ತಿ, ತೊಗರಿ, ಶೇಂಗಾ ಸೇರಿದಂತೆ ವಾಣಿಜ್ಯ ಬೆಳೆಗಳನ್ನು ಕೂಡ ಬೆಳೆಯುತ್ತಿದ್ದಾರೆ. ಕಳೆದ 10 ವರ್ಷಗಳಿಂದ ರೈತ ಪರಶುರಾಮ ಕೃಷಿನಲ್ಲಿ ಸಾಧನೆ ಮಾಡಲು ಪಣತೊಟ್ಟು ಹಗಲಿರುಳು ದುಡಿಯುತ್ತಿದ್ದಾರೆ.

    ಸದ್ಯ ಸಾವಯವ ಕೃಷಿಯ ಪದ್ಧತಿ ಮೂಲಕ “ತೈವಾನ್ ರೆಡ್ ಲೇಡಿ” ಎಂಬ ಮಹಾರಾಷ್ಟ್ರ ಮೂಲದ ಪಪ್ಪಾಯಿ ತಳಿ ಬೆಳೆಯುತ್ತಿದ್ದಾರೆ. ಪರಶುರಾಮ್ ಬೆಳೆದ ಪಪ್ಪಾಯಿ ಬೆಳೆ ಕೇವಲ ಕರ್ನಾಟಕ ಮಾತ್ರವಲ್ಲ ನೆರೆಯ ಗೋವಾ, ಮಹಾರಾಷ್ಟ್ರ, ದೆಹಲಿ, ಆಂಧ್ರಪ್ರದೇಶ, ಕೇರಳ ಸೇರಿದಂತೆ ಅನೇಕ ರಾಜ್ಯಗಳಿಗೂ ಸರಬರಾಜು ಆಗುತ್ತವೆ. ಬರಗಾಲದಲ್ಲೂ ಅದ್ಭುತ ಬೆಳೆ ಬೆಳೆದು ಇತರರಿಗೆ ಮಾದರಿಯಾಗಿದ್ದಾರೆ.

    ಈ ಬಗ್ಗೆ ಮಾತಿನಾಡಿದ ಪರಶುರಾಮ್ ಅವರು, ಕೃಷಿಯಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಛಲದಿಂದ ಬೆಳೆ ಬೆಳೆಯುತ್ತಿದ್ದೇನೆ. 5 ಎಕ್ರೆ ಜಮೀನಿನಲ್ಲಿ ಬೆಳೆದ ಪಪ್ಪಾಯಿಯಲ್ಲಿ ಸದ್ಯ 5 ರಿಂದ 10 ಲಕ್ಷ ರೂಪಾಯಿ ಆದಾಯ ಬಂದಿದೆ ಎಂದು ತಿಳಿಸಿದ್ದಾರೆ. ಪರಶುರಾಮ ಅವರು ಕೆಲವು ವರ್ಷಗಳ ಹಿಂದೆ ವಾಣಿಜ್ಯ ಬೆಳೆಯಾದ ಮೆಕ್ಕೆಜೋಳ, ತೊಗರಿ, ಹತ್ತಿ, ಕಡಲೆ, ಜೋಳ ಸೇರಿದಂತೆ ಅನೇಕ ಬೆಳೆಗಳನ್ನು ಬೆಳೆದು ಲಾಭವಿಲ್ಲದೆ ಕೈ ಸುಟ್ಟುಕೊಂಡಿದ್ದರು. ಹನಿ ನೀರಾವರಿ ಪದ್ಧತಿಯ ಮೂಲಕ ತೋಟಗಾರಿಕೆ ಬೆಳೆ ಬೆಳೆಯುತ್ತಿದ್ದಾರೆ.

    ತೋಟದಲ್ಲಿ ಪಪ್ಪಾಯಿ, ನಿಂಬೆಹಣ್ಣು, ವಿಳ್ಳೆದೆಲೆ ತೋಟ, ಜೇನು ಸಾಗಾಣಿಕೆ ಮಾಡಿಕೊಂಡಿರುವುದಲ್ಲದೆ, ಹೈನುಗಾರಿಕೆಗೆ ಅತ್ತ ಕೂಡ ಮುಖ ಮಾಡಿದ್ದಾರೆ. ಈ ಎಲ್ಲಾ ಸಮಗ್ರ ಕೃಷಿಯಿಂದ ಸುಮಾರು ಒಂದು ವರ್ಷಕ್ಕೆ 8 ರಿಂದ 10 ಲಕ್ಷ ರೂಪಾಯಿವರಿಗೆ ಆದಾಯಗಳಿಸುವ ಕಾಯಕ ಯೋಗಿ ಆಗಿದ್ದಾರೆ. ಪರಶುರಾಮ ಅವರ ಸಮಗ್ರ ಕೃಷಿ ನೋಡಿದರೆ ನಮಗೂ ಖುಷಿ ತಂದಿದೆ. ನಾವು ಹೀಗೆ ಕೃಷಿಮಾಡಲು ಸ್ಪೂರ್ತಿಯಾಗಿದೆ ಎಂದು ಸ್ಥಳೀಯ ರೈತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಆರೋಗ್ಯದ ಜೊತೆ ಬ್ಯೂಟಿಗೂ ಪಪ್ಪಾಯವೇ ಮದ್ದು

    ಆರೋಗ್ಯದ ಜೊತೆ ಬ್ಯೂಟಿಗೂ ಪಪ್ಪಾಯವೇ ಮದ್ದು

    ಸಾಮಾನ್ಯವಾಗಿ ಮನೆಯಲ್ಲಿರುವ ತರಕಾರಿ, ಹಣ್ಣುಗಳಿಂದಲೇ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅದೇ ರೀತಿ ಪರಂಗಿ ಹಣ್ಣಿನಿಂದ ಹಲವಾರು ರೀತಿಯ ಪ್ರಯೋಜನಗಳಿವೆ. ಇದರಲ್ಲಿ ಅತೀ ಹೆಚ್ಚು ಔಷಧಿಯ ಸತ್ವಗಳಿವೆ. ಪಪ್ಪಾಯದಲ್ಲಿ ವಿಟಮಿನ್ ಎ ಸತ್ವ ಹೆಚ್ಚಾಗಿರುವುದರಿಂದ ಬಹುಮುಖ್ಯವಾಗಿ ನಮ್ಮ ಕಣ್ಣಿನ ಆರೋಗ್ಯ ಮತ್ತು ಜೀರ್ಣಕ್ರಿಯೆಗೆ ಬಹಳಷ್ಟು ಸಹಕಾರಿಯಾಗಿದೆ.

    ಪಪ್ಪಾಯ ಹಣ್ಣು, ಪಪ್ಪಾಯ ಎಲೆಗಳು ಹಾಗೂ ಪಪ್ಪಾಯ ಬೀಜಗಳು ಔಷಧಿಯ ಗುಣವನ್ನು ಹೊಂದಿವೆ. ಪಪ್ಪಾಯದಲ್ಲಿ ಪ್ರೊಟೀನ್, ಕೊಬ್ಬು, ವಿಟಮಿನ್ ಸಿ, ಫಾಸ್ಫರಸ್, ಕಬ್ಬಿಣ, ಕಾರ್ಬೋಹೈಡ್ರೇಟ್, ನಿಯಾಸಿನ್ ಹಾಗೂ ಖನಿಜಾಂಶಗಳು ಯಥೇಚ್ಛವಾಗಿರುತ್ತವೆ.

    ಪಪ್ಪಾಯ ಸೇವನೆಯ ಉಪಯೋಗಗಳು:
    * ಬಹುಮುಖ್ಯವಾಗಿ ಪಪ್ಪಾಯ ಸೇವನೆಯಿಂದ ಕರುಳಿನ ಯಾವುದೇ ಸಮಸ್ಯೆಗಳಿದ್ದರೂ ನಿವಾರಣೆಯಾಗುತ್ತದೆ.
    * ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ಕ್ರಮೇಣ ನಿವಾರಿಸುತ್ತದೆ.
    * ಬೊಜ್ಜು ಕರಗಿಸಲು ಪಪ್ಪಾಯ ದಿವ್ಯ ಔಷಧಿ. ಅಲ್ಲದೆ ದೇಹದ ಉತ್ತಮ ಬೆಳವಣಿಗೆಗೆ ಪೂರಕವಾದ ಮೆಗ್ನೀಷಿಯಂ, ಕಬ್ಬಿಣಾಂಶಗಳನ್ನು ಒದಗಿಸುತ್ತದೆ.
    * ತಿಂಗಳಿಗೆ ಅಥವಾ ಎರಡು ತಿಂಗಳಿಗೊಮ್ಮೆ ಹಣ್ಣಿನೊಂದಿಗೆ ಕೆಲವು ಬೀಜಗಳನ್ನು ಸೇವನೆ ಮಾಡಿದರೆ ಹೊಟ್ಟೆಯಲ್ಲಿನ ಜಂತು ಹುಳು ನಿವಾರಣೆಯಾಗುತ್ತದೆ.
    * ಚರ್ಮ ಬಣ್ಣ ಕಳೆದುಕೊಂಡಿದ್ದರೆ ಅಥವಾ ಅಂಗೈ ಹಳದಿ ಬಣ್ಣಕ್ಕೆ ತಿರುಗಿದ್ದರೆ ಇದನ್ನು ಸೇವಿಸಬಹುದು.
    * ಅರೆಪಕ್ವ ಹಣ್ಣನ್ನು ತುರಿದು ಗಾಯಗಳಿಗೆ ಹಚ್ಚಿದರೆ ಗಾಯಗಳು ಬೇಗನೆ ವಾಸಿಯಾಗುತ್ತದೆ.
    * ಪಪ್ಪಾಯ ಕಾಯಿಯ ರಸವನ್ನು ಕಜ್ಜಿ, ತುರಿಕೆಗಳಂತಹ ಚರ್ಮ ಸಮಸ್ಯೆಗಳಿಗೆ ಲೇಪಿಸಿದರೆ ಉಪಶಮನವಾಗುತ್ತದೆ.
    * ನಿಯಮಿತ ಸೇವನೆಯಿಂದ ಇರುಳು ಕುರುಡುತನ ಕಡಿಮೆಯಾಗುತ್ತದೆ.
    * ಪಪ್ಪಾಯ ಬೀಜವನ್ನು ಒಣಗಿಸಿ ಆ ಪುಡಿಯನ್ನು ಜೇನುತುಪ್ಪದಲ್ಲಿ ಸೇವಿಸಿದರೆ ಮಹಿಳೆಯರ ಮುಟ್ಟಿನ ಸಮಸ್ಯೆಗಳು ನಿವಾರಣೆಯಾಗುತ್ತವೆ.
    * ಪಪ್ಪಾಯದ ನಿಯಮಿತ ಸೇವನೆಯಿಂದ ಡಯಾಬಿಟಿಸ್ ಕಾಯಿಲೆಯನ್ನು ಕಡಿಮೆ ಮಾಡುತ್ತದೆ.


    * ಪಪ್ಪಾಯ ಕಾಯಿಯ ನಿರಂತರ ಸೇವನೆಯಿಂದ ಕ್ಯಾನ್ಸರ್ ನಿಂದ ಗುಣಮುಖರಾಗಬಹುದು.
    * ಪಪ್ಪಾಯದಲ್ಲಿನ ಫೈಬರ್ ಜೊತೆ ಪಪೇನ್ ಅಂಶ ಮಹಿಳೆಯರಿಗೆ ಋತುಸ್ರಾವದ ಸಮಯದಲ್ಲಿನ ನೋವನ್ನು ಶಮನಗೊಳಿಸುತ್ತದೆ.
    * ಇದರ ಎಲೆಗಳನ್ನು ಜ್ಯೂಸ್ ಮಾಡಿ ಕುಡಿಯುವುದರಿಂದ ದೇಹದಲ್ಲಿ ಕಾಯಿಲೆಗಳ ವಿರುದ್ಧ ಹೋರಾಡುವ ಪ್ರತಿರೋಧಕ ಅಂಶಗಳನ್ನು ಹೆಚ್ಚಿಸುತ್ತದೆ.
    * ಪಪ್ಪಾಯ ಎಲೆಗಳ ಜ್ಯೂಸ್ ಸೇವನೆಯಿಂದ ಡೆಂಗ್ಯೂ ಮತ್ತು ಮಲೇರಿಯಾ ಕಾಯಿಲೆಗಳು ನಿವಾರಣೆಯಾಗುತ್ತದೆ.

    ಪಪ್ಪಾಯ ಬ್ಯೂಟಿ ಟಿಪ್ಸ್:
    ಪಪ್ಪಾಯದಲ್ಲಿರುವ ಅಂಶಗಳು ಕೇವಲ ದೇಹದ ಆರೋಗ್ಯವನ್ನು ಕಾಪಾಡುವುದಲ್ಲದೇ ಚರ್ಮದ ಚೈತನ್ಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಹಲವಾರು ಸೌಂದರ್ಯವರ್ಧಕಗಳಲ್ಲಿ ಪಪ್ಪಾಯವನ್ನು ತಪ್ಪದೇ ಬಳಸುತ್ತಾರೆ.

    * ಪಪ್ಪಾಯ ಹಣ್ಣಿನ ರಸದೊಂದಿಗೆ ಮೊಸರು ಮಿಕ್ಸ್ ಮಾಡಿ ಹೇರ್ ಪ್ಯಾಕ್ ತಯಾರಿಸಿ ತಿಂಗಳಿಗೊಮ್ಮೆ ತಲೆಯ ಬುಡಕ್ಕೆ ಹಚ್ಚಿ ಕಡಲೆಹಿಟ್ಟಿನಿಂದ ತೊಳೆಯುವುದರಿಂದ ತಲೆಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ.
    * ಜೇನುತುಪ್ಪದೊಂದಿದೆ ಪಪ್ಪಾಯ ಹಣ್ಣನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ.
    * ಮುಖದಲ್ಲಿ ಎಣ್ಣೆಯ ಅಂಶ ಅಥವಾ ಜಿಡ್ಡಿನ ಅಂಶ ಹೆಚ್ಚಾಗಿದೆ ಎನ್ನುವವರು ಬ್ಲ್ಯಾಕ್ ಟೀ ಸೋಸಿ ಅದಕ್ಕೆ ಪಪ್ಪಾಯಿ ರಸ ಬೆರೆಸಿ ಮುಖಕ್ಕೆ ಹಚ್ಚಿಕೊಂಡು ತಣ್ಣೀರಿನಿಂದ ತೊಳೆಯುತ್ತಾ ಬಂದರೆ ಜಿಡ್ಡಿನ ಸಮಸ್ಯೆಗೆ ಪರಿಹಾರ ದೊರೆಯುತ್ತದೆ.
    * ಪ್ರತಿದಿನ ಪಪ್ಪಾಯವನ್ನು ಮುಖಕ್ಕೆ ಹಚ್ಚಿ ಮಸಾಜ್ ಮಾಡುವುದರಿಂದ ಚರ್ಮದ ಸತ್ತ ಜೀವಕೋಶಗಳನ್ನು ಹೋಗಲಾಡಿಸುತ್ತದೆ. ಅಲ್ಲದೆ ಸನ್‍ಬರ್ನ್ ಆಗುವುದನ್ನು ತಡೆಗಟ್ಟುತ್ತದೆ.
    * ಪಪ್ಪಾಯ ಸಿಪ್ಪೆಗಳಿಂದ ಕೈ ಮತ್ತು ಕಾಲುಗಳನ್ನು ಉಜ್ಜುವುದರಿಂದ ಚರ್ಮದ ಮೇಲಿರುವ ಕಪ್ಪು ಮಾಯವಾಗುತ್ತದೆ.

  • ಸೊಂಟಕ್ಕೆ ಏಟು ತಗುಲಿ ನರಳುತ್ತಿದ್ದ ಮುಸುವದ ರಕ್ಷಣೆ

    ಸೊಂಟಕ್ಕೆ ಏಟು ತಗುಲಿ ನರಳುತ್ತಿದ್ದ ಮುಸುವದ ರಕ್ಷಣೆ

    ಮಂಗಳೂರು: ಸೊಂಟಕ್ಕೆ ಏಟು ತಗುಲಿ ಮುಸುವ(ಲಂಗೂರ್ ಕೋತಿ)ವೊಂದು ಪರದಾಡಿದ ಘಟನೆ ದಕ್ಷಿಣ ಕನ್ನಡದಲ್ಲಿ ನಡೆದಿದೆ.

    ಬೆಳ್ತಂಗಡಿಯ ಪದ್ಮುಂಜ ಗ್ರಾಮದ ಮಲೆಂಗಲ್ಲು ರಕ್ಷಿತಾರಣ್ಯದಲ್ಲಿದ್ದ ಮುಸುವಗಳು ಆಹಾರ ಅರಸಿಕೊಂಡು ನಾಡಿಗೆ ಬಂದಿವೆ. ಬಾಳೆ, ಪಪ್ಪಾಯಿ ತಿನ್ನಲೆಂದು ಬಂದಿದ್ದಾಗ ಗುಂಡೇಟಿನ ಭಯದಿಂದ ಓಟ ಕಿತ್ತಾಗ ಈ ಮುಸಿಯ ಬಂಡೆ ಕಲ್ಲು ತಾಗಿ ಗಂಭೀರವಾಗಿ ಗಾಯಗೊಂಡು ನರಳಿದೆ.

    ಕೆಲ ಪ್ರಾಣಿಪ್ರಿಯರು ಮುಸುವಗೆ ನೀರು ಕೊಟ್ಟು ಆರೈಕೆ ಮಾಡಿದ್ದಾರೆ. ಜೊತೆಗೆ ಅರಣ್ಯಾಧಿಕಾರಿಗಳ ಮೂಲಕ ಮಂಗಳೂರಿನ ಪಿಲಿಕುಳ ನಿಸರ್ಗಧಾಮಕ್ಕೆ ಒಯ್ಯುವ ಕೆಲಸ ಮಾಡಿದ್ದಾರೆ.