Tag: pant

  • Fashion | ವೆರೈಟಿಯಾಗಿ ವೇರ್ ಮಾಡಿ ಬ್ಯಾಗಿ ಜೀನ್ಸ್

    Fashion | ವೆರೈಟಿಯಾಗಿ ವೇರ್ ಮಾಡಿ ಬ್ಯಾಗಿ ಜೀನ್ಸ್

    ರ್ಷ ಬದಲಾಗುತ್ತಾ ಹೋದಂತೆ ಬಟ್ಟೆಗಳ ಟ್ರೆಂಡ್ ಕೂಡಾ ಬದಲಾಗುತ್ತಾ ಹೋಗುತ್ತದೆ. ಹಾಗೆಯೇ ಜನರು ತಮ್ಮ ಉಡುಪಿನ ಅಭಿರುಚಿಯನ್ನೂ ಬದಲಾಯಿಸುತ್ತಾ ಹೋಗುತ್ತಾರೆ. ಹುಡ್ಗೀರಂತೂ ಸ್ಟೈಲಿಶ್‌ ಆಗಿ ಕಾಣಬೇಕು ಅಂತಾ ಡಿಫರೆಂಟ್ ಸ್ಟೈಲ್‌ನ ಡ್ರೆಸ್‌ಗಳನ್ನು ವೇರ್ ಮಾಡುತ್ತಾರೆ. ಇವಾಗಿನ ಹುಡ್ಗೀರು ಜೀನ್ಸ್ ಪ್ಯಾಂಟ್ ಬಿಟ್ಟು ಬೇರೆ ಡ್ರೆಸ್ ಧರಿಸಲು ಹಿಂದೆ ಮುಂದೆ ನೋಡ್ತಾರೆ. ಯಾಕಂದ್ರೆ ಜೀನ್ಸ್‌ನಲ್ಲೇ ಬೇರೆ ಬೇರೆ ತರಹದ ಪ್ಯಾಂಟ್‌ಗಳು ಈಗ ಟ್ರೆಂಡ್‌ನಲ್ಲಿದೆ. ಈಗಂತೂ ವಿಮೆನ್ಸ್ ಫೆವರೆಟ್ ಎಂದ್ರೆ ಅದು ಬ್ಯಾಗಿ ಜೀನ್ಸ್.

    ಹೌದು.. ಈ ಬ್ಯಾಗಿ ಜೀನ್ಸ್‌ನ(Baggy Jeans) ಧರಿಸಲು ಹೆಣ್ಣುಮಕ್ಕಳು ತುಂಬಾ ಇಷ್ಟಪಡ್ತಾರೆ. ಯಾಕಂದ್ರೆ ಇದು ತುಂಬಾ ಕಂಫರ್‌ಟೇಬಲ್ ಹಾಗೂ ಇದನ್ನು ನಮಗೆ ಬೇಕಾದ ರೀತಿಯಲ್ಲಿ ಸ್ಟೈಲ್‌ ಮಾಡಬಹುದು. ಈ ಬ್ಯಾಗಿ ಜೀನ್ಸ್ ಅನ್ನು ನಾವು ಸಾಂಪ್ರದಾಯಿಕ ಉಡುಗೆಯ ರೀತಿಯಲ್ಲೂ ಧರಿಸಬಹುದು. ಮಾಡರ್ನ್ ವೇರ್ ರೀತಿಯಲ್ಲೂ ಧರಿಸಬಹುದು. ಇದೊಂದು ರೀತಿ ಟೂ ಇನ್ ಒನ್ ಡ್ರೆಸ್ ಇದ್ದಂತೆ.

    ಈಗಂತೂ ಸ್ಕಿನ್ ಫಿಟ್ ಜೀನ್ಸ್ ಧರಿಸುವ ಫ್ಯಾಷನ್ ಎಲ್ಲನೂ ಮರೆಯಾಯ್ತು. ಇನ್ನೇನಿದ್ರೂ ಬ್ಯಾಗಿ ಜೀನ್ಸ್ನದ್ದೇ ಹವಾ. ಈ ಬ್ಯಾಗಿ ಪ್ಯಾಂಟ್ ಹುಡ್ಗೀರು ಮಾತ್ರ ಅಲ್ಲ. ಹುಡುಗರೂ ವೇರ್ ಮಾಡ್ತಾರೆ. ಬಾಯ್ಸ್ ಸೆಕ್ಷನ್‌ನಲ್ಲೂ ಈ ಬ್ಯಾಗಿ ಪ್ಯಾಂಟ್‌ಗೆ ಭಾರೀ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಈ ಬ್ಯಾಗಿನ ನೀವು ಕುರ್ತಾಗಳಿಗೆ, ಜೀನ್ಸ್ ಟಾಪ್, ಟ್ಯಾನ್ ಟಾಪ್, ಶರ್ಟ್ಸ್, ಟೀ-ಶರ್ಟ್‌ಗಳಿಗೂ ಧರಿಸಬಹುದು. ಇದು ಎಲ್ಲಾ ತರಹದ ಟಾಪ್‌ಗಳಿಗೆ ಒಪ್ಪುವ ಜೀನ್ಸ್ ಆಗಿದೆ.

    ಕುರ್ತಾಗಳಿಗೆ ವಿಥ್ ಬ್ಯಾಗಿ
    ಕುರ್ತಾ(Kurtha) ಟಾಪ್‌ಗಳಿಗೂ ಈ ಬ್ಯಾಗಿ ಜೀನ್ಸ್ ಅನ್ನು ಧರಿಸಬಹುದು. ಇದು ಸಾಂಪ್ರಾದಾಯಿಕ ಉಡುಪಿನ ವಿನ್ಯಾಸವನ್ನೂ ಹೋಲುತ್ತದೆ. ಅಲ್ಲದೇ ಇದು ಈಗಿನ ಟ್ರೆಂಡ್ ಸಖತ್ ಮ್ಯಾಚ್ ಕೂಡಾ ಆಗುತ್ತದೆ. ಬ್ಯಾಗಿ ಜೀನ್ಸ್ ಅಗಲವಾಗುರುವುದರಿಂದ ಇವುಗಳನ್ನು ಕುರ್ತಾಗಳಿಗೆ ಮ್ಯಾಚ್ ಮಾಡಬಹುದು. ಇನ್ನು ಕುರ್ತಾಗಳಲ್ಲೂ ಮಾಡರ್ನ್ ಟಾಪ್ ಹಾಗೂ ಟ್ರೆಡಿಷನಲ್ ಎರಡಕ್ಕೂ ಬ್ಯಾಗಿ ಜೀನ್ಸ್ ಅನ್ನು ಧರಿಸಬಹುದು.

    ಇನ್ನೂ ಈ ಕುರ್ತಾಗಳಲ್ಲೂ ನಾವು ಬ್ಯಾಗಿಯನ್ನು ಸ್ಟೈಲ್‌ ಮಾಡಬಹುದು. ಹೌದು.. ಕುರ್ತಾಗಳಲ್ಲೂ ಶಾರ್ಟ್ ಕುರ್ತಾಗಳು ಸದ್ಯ ಟ್ರೆಂಡಿಂಗ್‌ನಲ್ಲಿದೆ. ಈ ಶಾರ್ಟ್ ಕುರ್ತಾಗಳಿಗೆ ಬ್ಯಾಗಿ ಜೀನ್ಸ್, ವೈಡ್ ಲೆಗ್ ಜೀನ್ಸ್, ಬೂಟ್ ಕಟ್ ಜೀನ್ಸ್ ಸುಂದರವಾಗಿ ಕಾಣುತ್ತದೆ. ಲಾಂಗ್ ಟಾಪ್ ಕುರ್ತಾಗಳಿಗೂ ಬ್ಯಾಗಿ ಜೀನ್ಸ್‌ಗಳು ಮ್ಯಾಚ್ ಆಗುತ್ತದೆ. ಇದು ಬ್ಯಾಗಿ ಜೀನ್ಸ್ಗಳಿಗೆ ಟ್ರೆಡಿಷನಲ್ ಟಚ್ ಅನ್ನು ನೀಡುತ್ತದೆ.

    ಕ್ರಾಪ್ ಟಾಪ್ ಜೊತೆ ಬ್ಯಾಗಿ
    ಈ ಬ್ಯಾಗಿ ಜೀನ್ಸ್ ಅನ್ನು ಕ್ರಾಪ್ ಟಾಪ್‌ನೊಂದಿಗೆ ಧರಿಸಿದರೆ ಮಾಡರ್ನ್ ಹಾಗೂ ಕ್ಲಾಸಿ ಲುಕ್ ನೀಡುತ್ತದೆ. ಶಾಪಿಂಗ್, ಪಾರ್ಟಿ, ಲಂಚ್ ಹಾಗೂ ಟ್ರಾವೆಲ್ ಮಾಡುವಾಗ ಕ್ರಾಪ್ ಟಾಪ್ ಜೊತೆ ಬ್ಯಾಗಿ ಪ್ಯಾಂಟ್ ಧರಿಸಿದರೆ ಇದು ನಿಮಗೆ ಕಂಫರ್ಟ್ ಫೀಲ್ ನೀಡುತ್ತದೆ. ಈ ರೀತಿ ಧರಿಸುವುದರಿಂದ ನೀವು ಸ್ಟೈಲಿಶ್‌ ಆಗಿಯೂ ಕಾಣಬಹುದು. ಇದು ನಿಮಗೆ ಸಿಂಪಲ್ ಹಾಗೂ ಗುಡ್ ಲುಕ್ ನೀಡುತ್ತದೆ. ಈ ಬ್ಯಾಗಿ ಜೀನ್ಸ್ ಧರಿಸುವುದರಿಂದ ತೆಳ್ಳಗಿರುವವರು ಸ್ವಲ್ಪ ದಪ್ಪ ಕಾಣುತ್ತಾರೆ. ಅಲ್ಲದೇ ದಪ್ಪಗಿರುವವರು ಸಾಧಾರಣವಾಗಿ ಅಂದರೆ ಹೆಚ್ಚೇನೂ ದಪ್ಪ ಕಾಣುವುದಿಲ್ಲ.

    ಶಟ್ ಹಾಗೂ ಟೀ-ಶರ್ಟ್‌ಗಳಿಗೆ ಮ್ಯಾಚ್ ಮಾಡುವ ಬ್ಯಾಗಿ
    ಇನ್ನು ಬ್ಯಾಗಿ ಪ್ಯಾಂಟ್‌ಗೆ ಶರ್ಟ್ ಧರಿಸುವುದರಿಂದ ಇದು ನಿಮಗೆ ಪ್ರೊಫೆಶನಲ್ ಲುಕ್ ನೀಡುತ್ತದೆ. ಇದನ್ನೂ ಆಫೀಸ್ ವೇರ್ ಆಗಿಯೂ ಬಳಸಬಹುದು. ಇದು ನಿಮಗೆ ಸ್ಟ್ಯಾಂಡರ್ಡ್‌ ಲುಕ್ ಸಹ ನೀಡುತ್ತದೆ. ಇನ್ನೂ ಶರ್ಟ್ ಜೊತೆ ಟ್ಯಾನ್ ಟಾಪ್ ಧರಿಸಿದರೆ ಇದು ಕ್ಯಾಶ್ಯುವಲ್ ಲುಕ್ ನೀಡುತ್ತದೆ. ಈ ರೀತಿ ಸ್ಟೈಲ್‌ನಲ್ಲಿ ಹೆಚ್ಚಾಗಿ ಸೆಲೆಬ್ರಿಟಿಗಳು ಕಾಣಿಸಿಕೊಳ್ಳುತ್ತಾರೆ.

    ಟೀ-ಶರ್ಟ್ ಜೊತೆ ಬ್ಯಾಗಿಯನ್ನು ಮ್ಯಾಚ್ ಮಾಡುವುದರಿಂದ ಇದು ಸಿಂಪಲ್ ಹಾಗೂ ಈಸಿ ವೇರ್ ಆಗಿ ಕಾಣಿಸುತ್ತದೆ. ಇದನ್ನೂ ಆಫೀಸ್, ಶಾಪಿಂಗ್, ಔಟಿಂಗ್ ಹೋಗುವಾಗಲೂ ಧರಿಸಬಹುದು. ಹೆಚ್ಚಿನ ಹುಡುಗಿಯರು ಈ ಸ್ಟೈಲ್‌ನ್ನು ಅನುಸರಿಸುತ್ತಾರೆ.

    ಬ್ಯಾಗಿ ಧರಿಸುವಾಗ ಅನುಸರಿಸಬೇಕಾದ ಅಂಶಗಳು
    * ಬ್ಯಾಗಿ ಜೀನ್ಸ್ ಧರಿಸುವಾಗ ಶೂ ಅಥವಾ ಹೈ ಹೀಲ್ಸ್ ಅನ್ನು ವೇರ್ ಮಾಡಿ.
    * ಬ್ಯಾಗಿಗೆ ಲಾಂಗ್ ಟೀ-ಶರ್ಟ್ ಧರಿಸಿದರೆ ಇನ್ ಶರ್ಟ್ ಮಾಡಿ.
    * ಬ್ಯಾಗಿ ಪ್ಯಾಂಟ್ ಖರೀದಿಸುವಾಗ ವೈಡ್ ಲೆಗ್ ಪ್ಯಾಂಟ್ ತೆಗೆದುಕೊಳ್ಳಿ, ಇದು ಎಲ್ಲಾ ರೀತಿಯ ಟಾಪ್‌ಗಳಿಗೂ ಒಪ್ಪುತ್ತದೆ.
    * ಇನ್ನು ಬ್ಯಾಗಿ ಪ್ಯಾಂಟ್‌ಗೆ ಮ್ಯಾಚ್ ಆಗುವ ಹ್ಯಾಂಡ್ ಬ್ಯಾಗ್ ಅಂದರೆ ಸಿಂಪಲ್ ಆಗಿರುವ ಸೈಟ್ ಬ್ಯಾಗ್‌ಗಳನ್ನು ಧರಿಸಿ.
    * ವೈಡ್ ಲೆಗ್ ಜೀನ್ಸ್‌ಗಳಿಗೆ ಲಾಂಗ್ ಕುರ್ತಾಗಳನ್ನು ಪ್ರಿಫರ್ ಮಾಡಿ.
    * ಬ್ಯಾಗಿಗೆ ಕ್ರಾಪ್ ಟಾಪ್ ಮ್ಯಾಚ್ ಮಾಡುವಾಗ ಹೆವಿ ಮೇಕಪ್ ಧರಿಸಬೇಡಿ. ಅಲ್ಲದೇ ನ್ಯೂಡ್ ಲಿಪ್‌ಸ್ಟಿಕ್‌ಗಳನ್ನು ಹಾಕಿ.

    ಬ್ಯಾಗಿ ಜೀನ್ಸ್ ಇತ್ತೀಚೆಗೆ ಟ್ರೆಂಡ್‌ನಲ್ಲಿರುವ ಹಾಗೂ ಹುಡುಗಿಯರು ಹೆಚ್ಚು ಇಷ್ಟಪಡುವ ಪ್ಯಾಂಟ್ ಆಗಿದೆ. ಈ ಪ್ಯಾಂಟ್ ಅನ್ನು ಟ್ರೆಡಿಷನ್ ಹಾಗೂ ಮಾಡರ್ನ್ ವೇರ್ ಆಗಿಯೂ ಧರಿಸಬಹುದು. ಈಗಿನ ಜೀನ್ಸ್ ಯುಗದಲ್ಲಿ ದಿನ ಕಳೆದಂತೆ ಬಟ್ಟೆಗಳ ಟ್ರೆಂಡ್ ಸಹ ಬದಲಾಗುತ್ತಿರುತ್ತದೆ.

  • ಕಾರ್‌ ಟಚ್‌ ಆಗಿದ್ದಕ್ಕೆ ಗಲಾಟೆ- ಪ್ಯಾಂಟ್ ಬಿಚ್ಚಲು ಮುಂದಾದ ಕ್ಯಾಬ್ ಡ್ರೈವರ್!

    ಕಾರ್‌ ಟಚ್‌ ಆಗಿದ್ದಕ್ಕೆ ಗಲಾಟೆ- ಪ್ಯಾಂಟ್ ಬಿಚ್ಚಲು ಮುಂದಾದ ಕ್ಯಾಬ್ ಡ್ರೈವರ್!

    ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ರೋಡ್ ರೇಜ್ ಪ್ರಕರಣಗಳು ದಿನೇ ದಿನೇ ಹೆಚ್ಚಾಗ್ತನೇ ಇವೆ. ರೋಡ್ ರೇಜ್ ಪ್ರಕರಣಗಳಲ್ಲಿ ಭಾಗಿಯಾಗುವ ವ್ಯಕ್ತಿಗಳ ಮೇಲೆ ರೌಡಿಶೀಟರ್ ಓಪನ್ ಮಾಡುವ ವಾರ್ನಿಂಗ್ ಕೊಡುತ್ತಿದ್ದರು ಕೂಡ ಪ್ರಕರಣಗಳ ಸಂಖ್ಯೆ ಮಾತ್ರ ಕಡಿಮೆ ಆಗ್ತಿಲ್ಲ. ಇದಕ್ಕೆ ಶುಕ್ರವಾರ ನಡೆದ ಘಟನೆಯೂ ಒಂದು‌ ಸಾಕ್ಷಿ.

    ನಿನ್ನೆ ರಾತ್ರಿ ನಗರದ ಹೆಬ್ಬಾಳ ಸಿಗ್ನಲ್ ಬಳಿ ಎರಡು ಕಾರುಗಳ ನಡುವೆ ಟಚ್ ಆಗಿತ್ತು. ಈ ವೇಳೆ ಕಾರಿನಿಂದ ಕೆಳಗೆ ಇಳಿದ ಕ್ಯಾಬ್ ಡ್ರೈವರ್ (Cab Driver), ಮತ್ತೊಂದು ಕಾರಿನಲ್ಲಿದ್ದವರ ಅವಾಚ್ಯವಾಗಿ ನಿಂದಿಸಿ ಹಲ್ಲೆಗೆ ಮುಂದಾಗಿದ್ದಾನೆ. ಅಷ್ಟೇ ಅಲ್ಲದೇ ಕಾರಿನಲ್ಲಿದ್ದ ಫ್ಯಾಮಿಲಿ ಮುಂದೆಯೇ ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಲು ಮುಂದಾಗಿದ್ದಾನೆ.

    ಚಾಲಕನ ವರ್ತನೆ ವಿರುದ್ಧ ಇತರೆ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದು, ಅಸಭ್ಯ ವರ್ತನೆಯ ವೀಡಿಯೋಗಳನ್ನು ತೆಗೆದ ದೂರುದಾರ ನಗರ ಪೊಲೀಸ್ ಆಯುಕ್ತರಿಗೆ ಟ್ಯಾಗ್ ಮಾಡಿ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಕೊಡಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಜಿಮ್ಸ್ ಆಸ್ಪತ್ರೆಯಲ್ಲಿ ರೀಲ್ಸ್ ಮಾಡಿದ 38 ವಿದ್ಯಾರ್ಥಿಗಳು ಅಮಾನತು

  • ಪ್ಯಾಂಟ್ ಜಿಪ್ ತೆಗೆದು ಬಸ್‍ನಲ್ಲಿ ವೈದ್ಯೆ ಜೊತೆ ಅಸಭ್ಯ ದುರ್ವತನೆ – ಕ್ಲೀನರ್ ಅರೆಸ್ಟ್

    ಪ್ಯಾಂಟ್ ಜಿಪ್ ತೆಗೆದು ಬಸ್‍ನಲ್ಲಿ ವೈದ್ಯೆ ಜೊತೆ ಅಸಭ್ಯ ದುರ್ವತನೆ – ಕ್ಲೀನರ್ ಅರೆಸ್ಟ್

    ಮಂಗಳೂರು: ಖಾಸಗಿ ಬಸ್‍ನಲ್ಲಿ ಬೆಂಗಳೂರಿನಿಂದ (Bengaluru) ಮಂಗಳೂರಿಗೆ (Mangaluru) ಪ್ರಯಾಣಿಸುತ್ತಿದ್ದ ಮಹಿಳಾ ಪ್ರಯಾಣಿಕರೊಬ್ಬರ ಜೊತೆ ಅಸಭ್ಯವಾಗಿ ವರ್ತಿಸಿದ ಬಸ್‍ ಕ್ಲೀನರ್ ಅನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ಮಂಗಳೂರಿನ ಬಜ್ಪೆ ಕೆಂಜಾರು ನಿವಾಸಿ ಮಹಮ್ಮದ್ ಇಮ್ರಾನ್ (26) ಎಂದು ಗುರುತಿಸಲಾಗಿದೆ. ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಆಸ್ಪತ್ರೆಯೊಂದರ ವೈದ್ಯೆಗೆ, ತನ್ನ ಪ್ಯಾಂಟ್ ಜಿಪ್ ಓಪನ್ ಮಾಡಿ ಖಾಸಗಿ ಬಸ್ ಕ್ಲೀನರ್ ಅಸಭ್ಯವಾಗಿ ವರ್ತಿಸಿದ್ದಾನೆ. ಇದನ್ನೂ ಓದಿ: ವಿರೋಧದ ನಡುವೆಯೂ ಅಧಿಕೃತ ಅನುಮತಿಯೊಂದಿಗೆ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ

    ಮಂಗಳೂರಿನ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯ ವೈದ್ಯರಾಗಿರುವ ದೂರುದಾರರು, ಪ್ಯಾಂಟ್ ಜಿಪ್ ಓಪನ್ ಮಾಡಿ ಅಸಭ್ಯ ನಡವಳಿಕೆ ತೋರಿದ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೇ ಪೊಲೀಸರಿಗೆ ದೂರು ನೀಡುವ ವಿಚಾರ ತಿಳಿದ ಆರೋಪಿ ಮಹಿಳೆಗೆ ಬೆದರಿಕೆಯೊಡ್ಡಿದ್ದಾನೆ.

    ಇದೀಗ ಪೊಲೀಸರು ಆರೋಪಿ ಇಮ್ರಾನ್ ಅನ್ನು ಬಂಧಿಸಿದ್ದು, ಐಪಿಸಿ ಸೆಕ್ಷನ್ 151/2022 U/s 354ರಡಿ ಕೇಸ್ ದಾಖಲಿಸಿಕೊಂಡಿದ್ದಾರೆ. ಖಾಸಗಿ ಬಸ್ ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿತ್ತು. ಇದನ್ನೂ ಓದಿ: ಟಿಪ್ಪು ಜಯಂತಿ ವಿರೋಧಿಸಿ ಹೈಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸುತ್ತೇನೆ: ಮುತಾಲಿಕ್

    Live Tv
    [brid partner=56869869 player=32851 video=960834 autoplay=true]

  • ಪ್ಯಾಂಟ್ ಬೆಲ್ಟ್‌ನಲ್ಲಿ ಚಿನ್ನದ ಬಿಸ್ಕೆಟ್- ಸಿಸಿಬಿ ಬಲೆಗೆ ಬಿದ್ದ ಆರೋಪಿ

    ಪ್ಯಾಂಟ್ ಬೆಲ್ಟ್‌ನಲ್ಲಿ ಚಿನ್ನದ ಬಿಸ್ಕೆಟ್- ಸಿಸಿಬಿ ಬಲೆಗೆ ಬಿದ್ದ ಆರೋಪಿ

    ಹುಬ್ಬಳ್ಳಿ: ಬೆಲ್ಟ್‌ನಲ್ಲಿ ಚಿನ್ನದ ಬಿಸ್ಕೆಟ್ ಇಟ್ಟುಕೊಂಡು ಬಂದಿದ್ದವನಿಗೆ ಸಿಸಿಬಿ ಪೊಲೀಸ್ ಬಲೆ ಬೀಸಿ ಬಂಧಿಸಿರುವ ಘಟನೆ ಹುಬ್ಬಳ್ಳಿ ನಡೆದಿದೆ.

    ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಸಿಸಿಬಿ ಪೊಲೀಸರು ಅಕ್ರಮ ಚಿನ್ನದ ಬೇಟೆಯಾಡಿದ್ದಾರೆ. ಹುಬ್ಬಳ್ಳಿ ನಗರದ ಗಿರಣಿ ಚಾಳದ ಏಳು ಮಕ್ಕಳ ತಾಯಿ ದೇವಸ್ಥಾನದ ಬಳಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಬಳಿಯಿಂದ 38 ಲಕ್ಷ ಮೌಲ್ಯದ 804.1ಗ್ರಾಂ ಚಿನ್ನವನ್ನ ವಶಕ್ಕೆ ಪಡೆದಿದ್ದಾರೆ. ದನ್ನೂಓದಿ: ಬಿಜೆಪಿ ಬಿಟ್ಟು ಮತ್ತೆ ಕಾಂಗ್ರೆಸ್ ಸೇರ್ತಾರಾ ಬಾಬುರಾವ್ ಚಿಂಚನಸೂರ್..?

    ಚೇತನ ದೇವೆಂದ್ರಪ್ಪ ಬಂಧಿತ ಆರೋಪಿಯಾಗಿದ್ದಾನೆ. ಈತ ಹುಬ್ಬಳ್ಳಿ ಕೇಶ್ವಾಪುರ ಮಧುರಾ ಎಸ್ಟೇಟ್ ನಿವಾಸಿಯಾಗಿದ್ದಾನೆ. ತನ್ನ ಪ್ಯಾಂಟ್‍ನ ಬೆಲ್ಟ್‍ನಲ್ಲಿ ಈ ಚಿನ್ನ ಇಟ್ಟುಕೊಂಡಿದ್ದ. ಖಚಿತ ಮಾಹಿತಿ ಮೇರೆಗೆ ಆರೋಪಿಗೆ ಹಿಡಿದು ತಪಾಸಣೆ ಮಾಡಿದಾಗ ಪ್ಯಾಂಟಿನ ಬೆಲ್ಟ್‌ನಲ್ಲಿ ಚಿನ್ನದ ಬಿಸ್ಕೆಟ್ ಇರುವುದು ಪತ್ತೆಯಾಗಿದೆ. ದನ್ನೂ ಓದಿ:  ಯಶ್ ಜೊತೆ ಸೆಲ್ಫಿಗೆ ಮುಗಿಬಿದ್ದ ಮುಂಬೈ ಅಭಿಮಾನಿಗಳು

    38 ಲಕ್ಷ ಮೌಲ್ಯದ 804.1ಗ್ರಾಂ ಚಿನ್ನವನ್ನ ಆರೋಪಿಯಿಂದ ವಶಕ್ಕೆ ಬರೆದುಕೊಳ್ಳಲಾಗಿದೆ. ವಶಕ್ಕೆ ಪಡೆದ ಸಿಸಿಬಿ ಪೊಲೀಸರು, ಹುಬ್ಬಳ್ಳಿ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದಾರೆ. ದನ್ನೂ ಓದಿ:  ನಮ್ಮ ರಚನಾತ್ಮಕ ಸಲಹೆಗಳನ್ನು ಚೀನಾ ಒಪ್ಪಿಲ್ಲ: ಭಾರತೀಯ ಸೇನೆ

  • ಮಲಗಿದ್ದಾಗ ಪ್ಯಾಂಟ್ ಒಳಗೆ ಹೋದ ಹಾವು – 7 ಗಂಟೆ ಕಂಬ ಹಿಡಿದು ನಿಂತ ಯುವಕ

    ಮಲಗಿದ್ದಾಗ ಪ್ಯಾಂಟ್ ಒಳಗೆ ಹೋದ ಹಾವು – 7 ಗಂಟೆ ಕಂಬ ಹಿಡಿದು ನಿಂತ ಯುವಕ

    ಲಕ್ನೋ: ಮಲಗಿದ್ದ ಕಾರ್ಮಿಕನ ಪ್ಯಾಂಟ್ ಒಳಗೆ ನಾಗರಹಾವೊಂದು ಹೋಗಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ನಡೆದಿದೆ.

    ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಇರುವ ಸಿಕಂದರ್ ಪುರ ಎಂಬ ಗ್ರಾಮದಲ್ಲಿ ವಿದ್ಯುತ್ ಇಲಾಖೆಯ ಕಡೆಯಿಂದ ಕಂಬ ಹಾಕಿಸುವ ಕೆಲಸ ನಡೆಯುತಿತ್ತು. ಈ ಕೆಲಸಕ್ಕೆ ಖಾಸಗಿ ಕಾರ್ಮಿಕರನ್ನು ಕರೆದುಕೊಂಡು ಬರಲಾಗಿತ್ತು. ಈ ಕಾರ್ಮಿರಲ್ಲಿ ಒಬ್ಬನಾದ ಲವಕೇಶ್ ಕುಮಾರ್ ಮಲಗಿದ್ದಾಗ ನಾಗರಹಾವೊಂದು ಪ್ಯಾಂಟ್ ಒಳಗೆ ಹೋಗಿ ಸೇರಿಕೊಂಡಿದೆ.

    ಎಂದಿನಂತೆ ಕೆಲಸ ಮುಗಿಸಿದ ಲವಕೇಶ್ ಕುಮಾರ್ ಕಾರ್ಮಿಕರಿಗೆ ಮಲಗಲು ನೀಡಿದ್ದ ಸಿಕಂದರ್ ಪುರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಹೋಗಿ ಮಲಗಿದ್ದಾನೆ. ಈ ವೇಳೆ ಆತನಿಗೆ ತಿಳಿಯದೆ ಹಾವೊಂದು ಆತನ ಪ್ಯಾಂಟ್ ಒಳಗೆ ಬಂದು ಮಲಗಿದೆ. ಮಧ್ಯರಾತ್ರಿ ಪ್ಯಾಂಟ್ ಒಳಗೆ ಏನೋ ಉಸಿರು ಬಿಟ್ಟಂತೆ ಆತನಿಗೆ ಭಾಸವಾಗಿದೆ. ಆಗ ಆತ ಎದ್ದು ನೋಡಿದಾಗ ಪ್ಯಾಂಟ್ ಒಳಗೆ ಹಾವು ಇರುವುದು ಗೊತ್ತಾಗಿದೆ. ನಂತರ ಆತ ಅಲ್ಲಡದೇ ನಿಂತ ಜಾಗದಲ್ಲೇ ಕಂಬ ಹಿಡಿದು 7 ಗಂಟೆ ನಿಂತಿದ್ದಾನೆ.

    ಈ ಸಮಯದಲ್ಲಿ ಆತನ ಜೊತೆಗಿದ್ದ ಕಾರ್ಮಿಕರು ಹಾವು ಹಿಡಿಯುವರನ್ನು ಹುಡುಕಿ ಕರೆದುಕೊಂಡು ಬಂದಿದ್ದಾರೆ. ಆತ ಬಂದು ಹಾವನ್ನು ಪ್ಯಾಂಟ್‍ನಿಂದ ಹೊರತೆಗೆಯುವ ತನಕ ಲವಕೇಶ್ ಅಲ್ಲಡದೇ ಹಾವಿಗೆ ತೊಂದರೆಯಾಗದಂತೆ ನೋಡಿಕೊಂಡಿದ್ದಾನೆ. ನಂತರ ಸ್ಥಳಕ್ಕೆ ಬಂದ ಉರಗ ತಜ್ಞ ಪ್ಯಾಂಟ್ ಅನ್ನು ಹರಿದು ನಿಧಾನವಾಗಿ ಹಾವನ್ನು ಹೊರ ತೆಗೆದಿದ್ದಾರೆ.

    ಈ ಬಗ್ಗೆ ಮಾತನಾಡಿರುವ ಉರಗ ತಜ್ಞ, ಆತನ ಅದೃಷ್ಟ ಚೆನ್ನಾಗಿದೆ. ಏಳು ಗಂಟೆಗಳ ಕಾಲ ಆತನ ಪ್ಯಾಂಟ್‍ನಲ್ಲೇ ಮಲಗಿರುವ ಹಾವು ಆತನಿಗೆ ಕಚ್ಚಿಲ್ಲ. ಆತ ಪಿಲ್ಲರ್ ಹಿಡಿದು ಅಲ್ಲಡದೇ ನಿಂತ ಕಾರಣ ಹಾವಿಗೆ ನಾನು ಮಾನವನ ಪ್ಯಾಂಟ್‍ನಲ್ಲಿದ್ದೇನೆ ಎನ್ನುವುದು ಗೊತ್ತಾಗಿಲ್ಲ ಎಂದು ಹೇಳಿದ್ದಾರೆ. ಕಂಬ ಹಿಡಿದು ನಿಂತಿರುವ ಯುವಕನ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

  • ಒಂದರ ಮೇಲೊಂದ್ರಂತೆ 8 ಪ್ಯಾಂಟ್- ಜೀನ್ಸ್ ಕದ್ದು ಸಿಕ್ಕಿಬಿದ್ದ ಯುವತಿಯ ವಿಡಿಯೋ ವೈರಲ್

    ಒಂದರ ಮೇಲೊಂದ್ರಂತೆ 8 ಪ್ಯಾಂಟ್- ಜೀನ್ಸ್ ಕದ್ದು ಸಿಕ್ಕಿಬಿದ್ದ ಯುವತಿಯ ವಿಡಿಯೋ ವೈರಲ್

    ಕ್ಯಾರಕಾಸ್: ಟೈಟ್ ಜೀನ್ಸ್ ಒಂದನ್ನು ಹಾಕೋದೇ ಕಷ್ಟದ ಕೆಲಸ. ಆದರೆ ಇಲ್ಲೊಬ್ಬಳು ಯುವತಿ ಒಂದರಮೇಲೊಂದರಂತೆ ಬರೋಬ್ಬರಿ 8 ಜೀನ್ಸ್ ಗಳನ್ನು ಧರಿಸಿ ಸಿಕ್ಕಿಬಿದ್ದ ಘಟನೆ ವೆನೆಜುವೆಲಾ ದೇಶದಲ್ಲಿ ನಡೆದಿದೆ.

    ಹೌದು. ಅಪರಿಚಿತ ಯುವತಿಯೊಬ್ಬಳು ಬಾತ್ ರೂಮಿನಲ್ಲಿ ತಾನು ಧರಿಸಿದ್ದ ಎಲ್ಲಾ ಜೀನ್ಸ್ ಗಳನ್ನು ತೆಗೆದಿದ್ದಾಳೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

    ಯುವತಿ ಮಾಲ್ ನಲ್ಲಿ ಕದ್ದು ಒಂದರ ಮೇಲೊಂದರಂತೆ 8 ಜೀನ್ಸ್ ಗಳನ್ನು ಧರಿಸಿ ಎಸ್ಕೇಪ್ ಆಗಲು ಯತ್ನಿಸಿದ್ದಾಳೆ. ಈ ವೇಳೆ ಮಾಲ್ ಸಿಬ್ಬಂದಿ ಆಕೆಯನ್ನು ಗಮನಿಸಿ ಅನುಮಾನಗೊಂಡು ಬಾತ್ ರೂಮಿಗೆ ಕರೆದುಕೊಂಡು ಹೋಗಿದ್ದಾರೆ. ಆಗ ಯುವತಿಯ ಕಳ್ಳತನದ ಗುಟ್ಟು ರಟ್ಟಾಗಿದೆ. ಹೀಗಾಗಿ ಜೀನ್ಸ್ ಬಿಚ್ಚಲು ಹೇಳಿದ್ದು, ಯುವತಿ ಧರಿಸಿದ್ದ ಪ್ಯಾಂಟ್ ಗಳ ಲೆಕ್ಕ ನೋಡಿ ಸಿಬ್ಬಂದಿಯೇ ದಂಗಾಗಿ ಹೋಗಿದ್ದಾರೆ.

    ಈ ದೃಶ್ಯವನ್ನು ಸಿಬ್ಬಂದಿ ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಸಖತ್ತಾಗಿ ವೈರಲ್ ಆಗುತ್ತಿದೆ. ಅಲ್ಲದೆ ಸಾಕಷ್ಟು ಕಮೆಂಟ್ ಗಳು ಬರುತ್ತಿವೆ. ಕೆಲವರು ಯುವತಿಯ ಪ್ರತಿಭೆಗೆ ಬೆರಾಗಿದ್ದಾರೆ. ನಾನು ಆಕೆಯ ಪ್ರತಿಭೆಯಿಂದ ಪ್ರಭಾವಿತಳಾಗಿದ್ದೇನೆ. ಒಂದಲ್ಲ ಹಲವು ಜೀನ್ಸ್ ಗಳನ್ನು ಆಕೆ ಧರಿಸಿರುವುದನ್ನು ನೋಡಿದ್ರೆ ನಿಜಕ್ಕೂ ಅಚ್ಚರಿಯಾಗುತ್ತಿದೆ ಒಬ್ಬರು ಕಮೆಂಟ್ ಮಾಡಿದ್ರೆ, ಮತ್ತೆ ಕೆಲವರು ಅಷ್ಟು ಜೀನ್ಸ್ ಧರಿಸಿದ ಅವಳಿಗೆ ಏನೂ ಅನಿಸಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

    ಇನ್ನೂ ಕೆಲವರು ಆಕೆ ಜಾದುಗಾರ್ತಿಯಾಗಿರಬೇಕು. ಒಂದು ಪ್ಯಾಂಟ್ ಹಾಕೋಕೆ ಕಷ್ಟ ಆಗುತ್ತದೆ. ಅಂಥದ್ರಲ್ಲಿ ಇವಳು ಹೇಗೆ 8 ಪ್ಯಾಟ್ ಧರಿಸಿದ್ದಾಳೆ ಎಂದು ಶಾಕ್ ಆಗಿದ್ದಾರೆ.