Tag: pannagabharana

  • ಮೇಘನಾ ರಾಜ್ ಕೊಟ್ಟರು ಗುಡ್ ನ್ಯೂಸ್ : ಇಂದು ತತ್ಸಮ ತದ್ಭವ ಟ್ರೈಲರ್ ರಿಲೀಸ್

    ಮೇಘನಾ ರಾಜ್ ಕೊಟ್ಟರು ಗುಡ್ ನ್ಯೂಸ್ : ಇಂದು ತತ್ಸಮ ತದ್ಭವ ಟ್ರೈಲರ್ ರಿಲೀಸ್

    ಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ ನಟಿ ಮೇಘನಾ ರಾಜ್ ಸರ್ಜಾ. ಇಂದು ಮೇಘನಾ ನಟನೆಯ ತತ್ಸಮ ತದ್ಭವ ಸಿನಿಮಾ ಟ್ರೈಲರ್ (Trailer) ಬಿಡುಗಡೆ ಆಗುತ್ತಿದ್ದು, ಅದನ್ನು ನೋಡಿ ಹಾರೈಸಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಮದುವೆ ನಂತರ ಮೇಘನಾ ನಟಿಸಿದ ಮೊದಲ ಸಿನಿಮಾ ಇದಾಗಿದೆ. ಹಾಗಾಗಿ ಈ ಸಿನಿಮಾಗಾಗಿ ಕಾದಿದ್ದೇವೆ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ.

    ಮದುವೆ ನಂತರ ಸಿನಿಮಾ ರಂಗದಿಂದ ದೂರ ಉಳಿದಿದ್ದ ನಟಿ ಮೇಘನಾ ರಾಜ್ (Meghana Raj) ‘ತತ್ಸಮ ತದ್ಬವ’ (Tatsama Tadbhava)  ಸಿನಿಮಾ ಮೂಲಕ ಮತ್ತೆ ಕಮ್ ಬ್ಯಾಕ್ ಮಾಡಿದ್ದರು. ಮೊನ್ನೆಯಷ್ಟೇ ಈ ಸಿನಿಮಾದ ಸಂಪೂರ್ಣ ಚಿತ್ರೀಕರಣ ಕೂಡ ಮುಗಿಸಿದ್ದರು. ಮೇಘನಾ ರಾಜ್ ಹುಟ್ಟುಹಬ್ಬಕ್ಕಾಗಿ ಮೊನ್ನೆಯಷ್ಟೇ ಚಿತ್ರತಂಡ ಅವರ ಪೋಸ್ಟರ್ (Poster)ರಿಲೀಸ್ ಮಾಡಿತ್ತು.

    ‘ನಿಜವಾದ ಸ್ನೇಹಿತರು ಯಾವಾಗಲೂ ಜೊತೆಗಿರುತ್ತಾರೆ. ಅಂತಹ ಸ್ನೇಹಿತರು ನನಗಿದ್ದಾರೆ. ನನಗಾಗಿ ಈ ಸಿನಿಮಾ ಮಾಡಿದ್ದಾರೆ. ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮರು ಪ್ರವೇಶ ಮಾಡಿದ್ದೇನೆ. ಪನ್ನಗ ಭರಣ ಹಾಗೂ ಸ್ಪೂರ್ತಿ ಅನಿಲ್ ನಿರ್ಮಾಣ ಮಾಡಿದ್ದಾರೆ. ವಿಶಾಲ್ ಆತ್ರೇಯ ಒಳ್ಳೆಯ ಕಥೆ ಮಾಡಿಕೊಂಡು ನಿರ್ದೇಶನ ಮಾಡಿದ್ದಾರೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಈವರೆಗೂ ನಾನು ಇಂತಹ ಪಾತ್ರ ಮಾಡಿಲ್ಲ. ಮುಂದೆ ಮಾಡುತ್ತೀನೊ, ಇಲ್ಲವೊ? ಗೊತ್ತಿಲ್ಲ ಎಂದು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು  ಮೇಘನಾ ರಾಜ್.

    ನನಗೆ ನಿರ್ದೇಶಕರು ಕಥೆ ಹೇಳಿದಾಗ ಬಹಳ ಇಷ್ಟವಾಯಿತು. ಕಥೆಯಲ್ಲಿ  ಒಂದು ಮುಖ್ಯಪಾತ್ರ ಬರುತ್ತದೆ. ಈ ಪಾತ್ರ ಯಾರು ಮಾಡುತ್ತಿದ್ದಾರೆ ಎಂದು ಕೇಳಿದೆ. ಅವರು ನೀವೇ ಮಾಡುತ್ತಿದ್ದೀರ ಎಂದರು. ಸ್ನೇಹಿತರ ಸಿನಿಮಾ‌ದಲ್ಲಿ ಅಭಿನಯಿಸಿದ ಖುಷಿಯಿದೆ  ಎಂದು ಪ್ರಜ್ವಲ್ ದೇವರಾಜ್ (Prajwal Devaraj) ಮಾತನಾಡಿ ಮೇಘನಾ ಚಿತ್ರಕ್ಕೆ ಸಾಥ್ ನೀಡಿದ್ದಾರೆ. ಇದನ್ನೂ ಓದಿ:ಪಿಎಂ ನರೇಂದ್ರ ಮೋದಿ- ಫ್ರೆಂಚ್ ಪ್ರೆಸಿಡೆಂಟ್ ಜೊತೆ ಮ್ಯಾಡಿ ಊಟ

    ಇದೊಂದು ಇನ್ವೆಸ್ಟಿಕೇಶನ್ ಕ್ರೈಮ್ ಥ್ರಿಲ್ಲರ್. ಕನ್ನಡದಲ್ಲಿ ಇಂತಹ ಕಥೆ ಬಂದಿರುವುದು ಅಪರೂಪ. ನೋಡುಗರಿಗೂ ಇಷ್ಟವಾಗಬಹುದೆಂಬ ನಂಬಿಕೆಯಿದೆ ಎಂದಿರುವ ನಿರ್ದೇಶಕ ವಿಶಾಲ್ ಆತ್ರೇಯ,  ಸಂಪೂರ್ಣ ಚಿತ್ರೀಕರಣ ಮುಗಿಸಿ, ರೀರೆಕಾರ್ಡಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಚುನಾವಣೆ ಮುಗಿದ ನಂತರ ಸಿನಿಮಾ ಬಿಡುಗಡೆ ಮಾಡುವುದಾಗಿ ನಿರ್ಮಾಪಕ ಪನ್ನಗ ಭರಣ (Pannagabharana)ತಿಳಿಸಿದ್ದಾರೆ.

     

    ನಟಿ ಶ್ರುತಿ ಕೂಡ ಈ ಸಿನಿಮಾದಲ್ಲಿ ಮಹತ್ವದ ಪಾತ್ರ ಮಾಡಿದ್ದು, ‘ಸಮಾಜದಲ್ಲಿ ಯಾವುದೇ ಹೆಣ್ಣಿಗಾದರೂ ಅನುಕಂಪಕ್ಕಿಂತ, ಅವಕಾಶ ಕೊಡುವುದು ಮುಖ್ಯ. ಮೇಘನಾ ರಾಜ್ ವಿಷಯದಲ್ಲಿ, ಅವರ ಸ್ನೇಹಿತರೆಲ್ಲರೂ ಸೇರಿ ಅವರ ರೀ ಎಂಟ್ರಿಗೆ ಒಳ್ಳೆಯ ಅವಕಾಶ ಕಲ್ಪಿಸಿದ್ದಾರೆ. ನಾನು ಈ ಚಿತ್ರದಲ್ಲಿ ಮನಶಾಸ್ತ್ರಜ್ಞೆಯಾಗಿ ಕಾಣಿಸಿಕೊಂಡಿದ್ದೇನೆ’ ಎಂದಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಫ್ರೆಂಡ್ಸ್‌-ಫ್ಯಾಮಿಲಿ ಜೊತೆ‌ ಊಟಿಯಲ್ಲಿ ಎಂಜಾಯ್‌ ಮಾಡ್ತಿದ್ದಾರೆ ಮೇಘನಾ ರಾಜ್

    ಫ್ರೆಂಡ್ಸ್‌-ಫ್ಯಾಮಿಲಿ ಜೊತೆ‌ ಊಟಿಯಲ್ಲಿ ಎಂಜಾಯ್‌ ಮಾಡ್ತಿದ್ದಾರೆ ಮೇಘನಾ ರಾಜ್

    ಟಿ ಮೇಘನಾ ರಾಜ್ (Meghana Raj), ನಿರ್ಮಾಪಕ ಪನ್ನಗಭರಣ, ಪ್ರಜ್ವಲ್ ದೇವರಾಜ್ (Prajwal Devraj) ಫ್ಯಾಮಿಲಿ ಸೇರಿದಂತೆ ಊಟಿಯಲ್ಲಿ (Ooty) ಮಸ್ತ್ ಎಂಜಾಯ್ ಮಾಡ್ತಿದ್ದಾರೆ. ಫ್ರೆಂಡ್- ಫ್ಯಾಮಿಲಿ ಜೊತೆ ಮಸ್ತ್ ಮಜಾ ಮಾಡ್ತಿದ್ದಾರೆ ಮೇಘನಾ ರಾಜ್. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ‘ತತ್ಸಮ ತದ್ಭವ’ (Tatsama Tadbava) ಚಿತ್ರದ ಮೂಲಕ ಮತ್ತೆ ಚಿತ್ರರಂಗದಲ್ಲಿ ಆಕ್ಟೀವ್ ಆಗಿರುವ ಮೇಘನಾ ರಾಜ್ ಅವರು ಇತ್ತೀಚಿಗೆ ಈ ಸಿನಿಮಾದ ಚಿತ್ರೀಕರಣ ಮುಗಿಸಿಕೊಟ್ಟರು. ಈ ಬೆನ್ನಲ್ಲೇ ಮೇಘನಾ & ಟೀಂ ಊಟಿಗೆ ಹಾರಿದ್ದಾರೆ.

     

    View this post on Instagram

     

    A post shared by Meghana Raj Sarja (@megsraj)

    ಮೇಘನಾ- ರಾಯನ್, ಪ್ರಜ್ವಲ್ ದಂಪತಿ, ಪನ್ನಗಭರಣ ದಂಪತಿ, ಕುಟುಂಬದವರೆಲ್ಲರೂ ಊಟಿಯಲ್ಲಿ ಬೀಡು ಬಿಟ್ಟಿದ್ದಾರೆ. ಊಟಿಯ ಸುಂದರ ತಾಣಗಳಿಗೆ ಭೇಟಿ ನೀಡುತ್ತಾ ಒಂದೊಳ್ಳೆಯ ಸಮಯ ಕಳೆಯುತ್ತಿದ್ದಾರೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಇದನ್ನೂ ಓದಿ:ನಟನೆಗೆ ಗುಡ್ ಬೈ ಹೇಳ್ತಾರಾ ರಜನಿಕಾಂತ್?

     

    View this post on Instagram

     

    A post shared by Prajwal Devaraj (@prajwaldevaraj)

    ಇನ್ನೂ ಮೇಘನಾ ನಟನೆಯ ‘ತತ್ಸಮ ತದ್ಭವ’ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ. ಫೀಮೇಲ್ ಓರಿಯೇಟೆಡ್ ಚಿತ್ರದಲ್ಲಿ ಮೇಘನಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಜ್ವಲ್ ದೇವರಾಜ್ ಕೂಡ ಪೊಲೀಸ್ (Police) ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  • ನಟಿ ಮೇಘನಾ ರಾಜ್ ಹುಟ್ಟು ಹಬ್ಬಕ್ಕೆ ತತ್ಸಮ ತದ್ಭವ ಪೋಸ್ಟರ್ ರಿಲೀಸ್

    ನಟಿ ಮೇಘನಾ ರಾಜ್ ಹುಟ್ಟು ಹಬ್ಬಕ್ಕೆ ತತ್ಸಮ ತದ್ಭವ ಪೋಸ್ಟರ್ ರಿಲೀಸ್

    ದುವೆ ನಂತರ ಸಿನಿಮಾ ರಂಗದಿಂದ ದೂರ ಉಳಿದಿದ್ದ ನಟಿ ಮೇಘನಾ ರಾಜ್ (Meghana Raj) ‘ತತ್ಸಮ ತದ್ಬವ’ (Tatsama Tadbhava)  ಸಿನಿಮಾ ಮೂಲಕ ಮತ್ತೆ ಕಮ್ ಬ್ಯಾಕ್ ಮಾಡಿದ್ದರು. ಮೊನ್ನೆಯಷ್ಟೇ ಈ ಸಿನಿಮಾದ ಸಂಪೂರ್ಣ ಚಿತ್ರೀಕರಣ ಕೂಡ ಮುಗಿಸಿದ್ದರು. ಇಂದು ಮೇಘನಾ ರಾಜ್ ಹುಟ್ಟುಹಬ್ಬ (Birthday). ಹಾಗಾಗಿ ತತ್ಸಮ ತದ್ಭವ ಚಿತ್ರತಂಡ ಹುಟ್ಟುಹಬ್ಬಕ್ಕಾಗಿ ಅವರ ಪೋಸ್ಟರ್ (Poster)ರಿಲೀಸ್ ಮಾಡಿದೆ.

    ‘ನಿಜವಾದ ಸ್ನೇಹಿತರು ಯಾವಾಗಲೂ ಜೊತೆಗಿರುತ್ತಾರೆ. ಅಂತಹ ಸ್ನೇಹಿತರು ನನಗಿದ್ದಾರೆ. ನನಗಾಗಿ ಈ ಸಿನಿಮಾ ಮಾಡಿದ್ದಾರೆ. ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮರು ಪ್ರವೇಶ ಮಾಡಿದ್ದೇನೆ. ಪನ್ನಗ ಭರಣ ಹಾಗೂ ಸ್ಪೂರ್ತಿ ಅನಿಲ್ ನಿರ್ಮಾಣ ಮಾಡಿದ್ದಾರೆ. ವಿಶಾಲ್ ಆತ್ರೇಯ ಒಳ್ಳೆಯ ಕಥೆ ಮಾಡಿಕೊಂಡು ನಿರ್ದೇಶನ ಮಾಡಿದ್ದಾರೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಈವರೆಗೂ ನಾನು ಇಂತಹ ಪಾತ್ರ ಮಾಡಿಲ್ಲ. ಮುಂದೆ ಮಾಡುತ್ತೀನೊ, ಇಲ್ಲವೊ? ಗೊತ್ತಿಲ್ಲ ಎಂದು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು  ಮೇಘನಾ ರಾಜ್.

    ನನಗೆ ನಿರ್ದೇಶಕರು ಕಥೆ ಹೇಳಿದಾಗ ಬಹಳ ಇಷ್ಟವಾಯಿತು. ಕಥೆಯಲ್ಲಿ  ಒಂದು ಮುಖ್ಯಪಾತ್ರ ಬರುತ್ತದೆ. ಈ ಪಾತ್ರ ಯಾರು ಮಾಡುತ್ತಿದ್ದಾರೆ ಎಂದು ಕೇಳಿದೆ. ಅವರು ನೀವೇ ಮಾಡುತ್ತಿದ್ದೀರ ಎಂದರು. ಸ್ನೇಹಿತರ ಸಿನಿಮಾ‌ದಲ್ಲಿ ಅಭಿನಯಿಸಿದ ಖುಷಿಯಿದೆ  ಎಂದು ಪ್ರಜ್ವಲ್ ದೇವರಾಜ್ (Prajwal Devaraj) ಮಾತನಾಡಿ ಮೇಘನಾ ಚಿತ್ರಕ್ಕೆ ಸಾಥ್ ನೀಡಿದ್ದಾರೆ. ಇದನ್ನೂ ಓದಿ:ಪ್ರೀತಿಯಿಂದ ಪ್ರಭಾಸ್‌ಗೆ ಅನುಷ್ಕಾ ಶೆಟ್ಟಿ ಏನೆಂದು ಕರೀತಾರೆ ಗೊತ್ತಾ?

    ಇದೊಂದು ಇನ್ವೆಸ್ಟಿಕೇಶನ್ ಕ್ರೈಮ್ ಥ್ರಿಲ್ಲರ್. ಕನ್ನಡದಲ್ಲಿ ಇಂತಹ ಕಥೆ ಬಂದಿರುವುದು ಅಪರೂಪ. ನೋಡುಗರಿಗೂ ಇಷ್ಟವಾಗಬಹುದೆಂಬ ನಂಬಿಕೆಯಿದೆ ಎಂದಿರುವ ನಿರ್ದೇಶಕ ವಿಶಾಲ್ ಆತ್ರೇಯ,  ಸಂಪೂರ್ಣ ಚಿತ್ರೀಕರಣ ಮುಗಿಸಿ, ರೀರೆಕಾರ್ಡಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಚುನಾವಣೆ ಮುಗಿದ ನಂತರ ಸಿನಿಮಾ ಬಿಡುಗಡೆ ಮಾಡುವುದಾಗಿ ನಿರ್ಮಾಪಕ ಪನ್ನಗ ಭರಣ (Pannagabharana)ತಿಳಿಸಿದ್ದಾರೆ.

    ನಟಿ ಶ್ರುತಿ ಕೂಡ ಈ ಸಿನಿಮಾದಲ್ಲಿ ಮಹತ್ವದ ಪಾತ್ರ ಮಾಡಿದ್ದು, ‘ಸಮಾಜದಲ್ಲಿ ಯಾವುದೇ ಹೆಣ್ಣಿಗಾದರೂ ಅನುಕಂಪಕ್ಕಿಂತ, ಅವಕಾಶ ಕೊಡುವುದು ಮುಖ್ಯ. ಮೇಘನಾ ರಾಜ್ ವಿಷಯದಲ್ಲಿ, ಅವರ ಸ್ನೇಹಿತರೆಲ್ಲರೂ ಸೇರಿ ಅವರ ರೀ ಎಂಟ್ರಿಗೆ ಒಳ್ಳೆಯ ಅವಕಾಶ ಕಲ್ಪಿಸಿದ್ದಾರೆ. ನಾನು ಈ ಚಿತ್ರದಲ್ಲಿ ಮನಶಾಸ್ತ್ರಜ್ಞೆಯಾಗಿ ಕಾಣಿಸಿಕೊಂಡಿದ್ದೇನೆ’ ಎಂದಿದ್ದಾರೆ.

  • ಮೇಘನಾ ರಾಜ್ ಸಿನಿಮಾದಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿ ಪ್ರಜ್ವಲ್ ದೇವರಾಜ್

    ಮೇಘನಾ ರಾಜ್ ಸಿನಿಮಾದಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿ ಪ್ರಜ್ವಲ್ ದೇವರಾಜ್

    ತಿ ಚಿರಂಜೀವಿ ಸರ್ಜಾ(Chiranjeevi Sarja) ನಿಧನದ ನೋವಿನಲ್ಲಿದ್ದ ಮೇಘನಾ ರಾಜ್(Meghana Raj) ಮತ್ತೆ ಬಣ್ಣದ ಲೋಕಕ್ಕೆ ಕಂಬ್ಯಾಕ್ ಆಗಿದ್ದಾರೆ. ಜ್ಯೂನಿಯರ್ ಚಿರು ಪೋಷಣೆಯಲ್ಲಿ ಬ್ಯುಸಿಯಿದ್ದ ನಟಿ ಸ್ನೇಹಿತರ ಬೆಂಬಲದ ಮೇರೆಗೆ ಮತ್ತೆ ನಟನೆಯತ್ತ ವಾಲಿದ್ದಾರೆ. ಮೇಘನಾ ರಾಜ್ ನಟಿಸುವ ಹೊಸ ಚಿತ್ರದಲ್ಲಿ ಸ್ಟಾರ್ ನಟರೊಬ್ಬರು ಸಾಥ್ ನೀಡುತ್ತಿದ್ದಾರೆ.

    `ರಾಜಹುಲಿ’ ನಟಿ ಮೇಘನಾ ರಾಜ್ (Meghana Raj) ಕನ್ನಡ ಮಾತ್ರವಲ್ಲದೇ ಬಹುಭಾಷೆಗಳಲ್ಲಿ ಗುರುತಿಸಿಕೊಂಡಿರುವ ನಟಿ ಪತಿ ಚಿರಂಜೀವ ಸರ್ಜಾ ಅಗಲಿಕೆಯ ನಂತರ ಪುತ್ರ ರಾಯನ್ ಪಾಲನೆಯಲ್ಲಿ ಬ್ಯುಸಿಯಿದ್ದ ನಟಿ, ಸ್ನೇಹಿತರ ಒತ್ತಾಯ ಮತ್ತು ಬೆಂಬಲದ ಮೇರೆಗೆ ಮತ್ತೆ ಬಣ್ಣ ಹಚ್ಚಲು ರೆಡಿಯಾಗಿದ್ದಾರೆ. ನಿರ್ದೇಶಕ ಪನ್ನಗಭರಣ ಡೈರೆಕ್ಷನ್‌ನಲ್ಲಿ ಮೇಘನಾ ಕಾಣಿಸಿಕೊಳ್ಳುತ್ತಿದ್ದಾರೆ. ಸ್ನೇಹಿತ ಪನ್ನಗ ಕೂಡ ಮೇಘನಾಗೆ ಹೋಲುವ ಕಥೆಯನ್ನೇ ರೆಡಿ ಮಾಡಿದ್ದಾರೆ. ಇದೀಗ ಈ ಇಬ್ಬರ ಕಾಂಬಿನೇಷನ್‌ನ ಚಿತ್ರಕ್ಕೆ ಪ್ರಜ್ವಲ್ ದೇವರಾಜ್ ಕೂಡ ಸಾಥ್ ನೀಡುತ್ತಿದ್ದಾರೆ. ಇದನ್ನೂ ಓದಿ:ಕಾವ್ಯಶ್ರೀ ರೂಪೇಶ್‌ಗೆ ಪ್ರಪೋಸ್ ಮಾಡಿದ್ರೆ ಸಾನ್ಯಗ್ಯಾಕೆ ಸಿಟ್ಟು?

    ನಟ ಪ್ರಜ್ವಲ್ ದೇವರಾಜ್ ಖಡಕ್ ಆಫೀಸರ್ ಆಗಿ ಮೇಘನಾ ಮತ್ತು ಪನ್ನಗ ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ. ಪವರ್‌ಫುಲ್ ಪಾತ್ರದ ಮೂಲಕ ರಂಜಿಸಲು ಪ್ರಜ್ವಲ್ ಸಜ್ಜಾಗಿದ್ದಾರೆ.

    ಅಂದ್ಹಾಗೆ ಮೇಘನಾ ರಾಜ್ ನಟನೆಯ ಈ ಚಿತ್ರದ ಟೈಟಲ್ ಅನ್ನ ಚಿರು ಹುಟ್ಟುಹಬ್ಬದಂದು ರಿವೀಲ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಚಿತ್ರ ನಿರ್ಮಾಣಕ್ಕಿಳಿದ ನಟಿ ಮೇಘನಾ ರಾಜ್

    ಚಿತ್ರ ನಿರ್ಮಾಣಕ್ಕಿಳಿದ ನಟಿ ಮೇಘನಾ ರಾಜ್

    ಸ್ಯಾಂಡಲ್ ವುಡ್ ನಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದ ಮೇಘನಾ ರಾಜ್, ಇದೀಗ ನಿರ್ಮಾಪಕಿಯಾಗಿಯೂ ಎಂಟ್ರಿ ಕೊಟ್ಟಿದ್ದಾರೆ. ತಾವೇ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಹಾಗಂತ ಇವರೊಬ್ಬರೇ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿಲ್ಲ, ಬದಲಿಗೆ ಪನ್ನಗಾಭರಣ ಕೂಡ ಇವರೊಂದಿಗೆ ಕೈ ಜೋಡಿಸಿದ್ದಾರೆ.

    ಕಳೆದ ವರ್ಷ ಪನ್ನಗಾಭರಣ, ವಿಶಾಲ್ ಮತ್ತು ವಾಸುಕಿ ವೈಭವ್ ಜೊತೆಗಿರುವ ಫೋಟೋವೊಂದನ್ನು ಶೇರ್ ಮಾಡಿದ್ದ ಮೇಘನಾ ರಾಜ್, ಹೊಸದೊಂದು ಸುದ್ದಿ ಕೊಡಲಿದ್ದೇನೆ ಎಂದು ಹೇಳಿದ್ದರು. ಆನಂತರ ಒಟ್ಟಿಗೆ ಸಿನಿಮಾ ಮಾಡುತ್ತಿರುವುದಾಗಿ ಘೋಷಣೆ ಮಾಡಿದ್ದರು. ಮೊನ್ನೆ ಮೊನ್ನೆಯಷ್ಟೇ ಮತ್ತೊಂದು ಫೋಟೋ ಹಂಚಿಕೊಂಡಿದ್ದ ಮೇಘನಾ, ಈ ಸಿನಿಮಾವನ್ನು ವಿಶಾಲ್ ನಿರ್ದೇಶನ ಮಾಡುತ್ತಿದ್ದು, ಪನ್ನಗಾಭರಣ ನಿರ್ಮಾಪಕರು ಎಂದು ಹೇಳಿದ್ದರು. ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ ಮೇಘನಾ ಕೂಡ ನಿರ್ಮಾಪಕಿಯಾಗುತ್ತಿದ್ದಾರೆ. ಇದನ್ನೂ ಓದಿ: ಆಮೀರ್ ಖಾನ್ ಮನೆಯ ಔತಣ ಕೂಟದಲ್ಲಿ ಧನುಷ್‌ ನಟನೆಯ ಹಾಲಿವುಡ್ ಚಿತ್ರತಂಡ

    ಇದೊಂದು ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಪ್ರಮುಖ ಪಾತ್ರವನ್ನು ಮೇಘನಾ ರಾಜ್ ಅವರೇ ನಿರ್ವಹಿಸುತ್ತಿದ್ದಾರೆ. ವಾಸುಕಿ ವೈಭ‍ವ್ ಸಂಗೀತ ಸಂಯೋಜನೆಯಲ್ಲಿ ಈ ಸಿನಿಮಾ ಮೂಡಿ ಬರಲಿದೆ. ಸದ್ಯ ಕಾಂತ ಕನ್ನಲ್ಲಿ ನಿರ್ದೇಶನದ ಸಿನಿಮಾದಲ್ಲಿ ಮೇಘನಾ ರಾಜ್ ನಟಿಸುತ್ತಿದ್ದು, ಈ ಸಿನಿಮಾದ ಬಹುತೇಕ ಶೂಟಿಂಗ್ ಮುಗಿಸಿದ್ದಾರಂತೆ. ಸದ್ಯದಲ್ಲೇ ತಮ್ಮ ಹೊಸ ಸಿನಿಮಾದ ಚಿತ್ರೀಕರಣದಲ್ಲಿ ಅವರು ಭಾಗಿಯಾಗಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಿನಿಮಾ ನಟನೆಯತ್ತ ಮತ್ತೆ ಮರಳಿದ ಮೇಘನಾ ರಾಜ್ : ಮೇಘನಾಗಾಗಿ ಪನ್ನಗಾಭರಣ ನಿರ್ಮಾಣ

    ಸಿನಿಮಾ ನಟನೆಯತ್ತ ಮತ್ತೆ ಮರಳಿದ ಮೇಘನಾ ರಾಜ್ : ಮೇಘನಾಗಾಗಿ ಪನ್ನಗಾಭರಣ ನಿರ್ಮಾಣ

    ಟ ಚಿರಂಜೀವಿ ಸರ್ಜಾರನ್ನು ಕಳೆದುಕೊಂಡ ನಂತರ ಅಕ್ಷರಶಃ ನಲುಗಿ ಹೋಗಿದ್ದ ನಟಿ ಮೇಘನಾ ರಾಜ್, ಆ ನೋವಿನ ಜೊತೆ ಜೊತೆಗೆ ಬದುಕುವುದನ್ನು ಅಭ್ಯಾಸ ಮಾಡಿಕೊಳ್ಳುತ್ತಿದ್ದಾರೆ. ಮದುವೆ ನಂತರವೂ ಮೇಘನಾ ನಟಿಸಬೇಕು ಅನ್ನುವುದು ಚಿರು ಆಸೆಯಾಗಿತ್ತು. ಹಾಗಾಗಿಯೇ ಮತ್ತೆ ಅವರು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಈವರೆಗೂ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದ ಮೇಘನಾ, ಇದೀಗ ಮತ್ತೆ ಸಿನಿಮಾದಲ್ಲಿ ನಟಿಸಲು ಆಸಕ್ತಿ ತೋರಿದ್ದಾರೆ.

    ಈ ಹಿಂದೆ ಕಾಂತ ಕನ್ನಳ್ಳಿ ಸಿನಿಮಾದಲ್ಲಿ ಮೇಘನಾ ಪಾತ್ರ ಮಾಡಿದ್ದರು. ಹಲವು ಕಂತುಗಳ ಶೂಟಿಂಗ್ ನಲ್ಲೂ ಭಾಗಿಯಾಗಿದ್ದರು. ಇದೀಗ ಮತ್ತೊಂದು ಸಿನಿಮಾಗಾಗಿ ಸಿದ್ಧತೆ ನಡೆಸಿದ್ದಾರೆ. ಈ ಸಿನಿಮಾವನ್ನು ಚಿರು ಆತ್ಮೀಯ ಗೆಳೆಯ ಪನ್ನಗಾಭರಣ ನಿರ್ಮಾಣ ಮಾಡುತ್ತಿದ್ದಾರೆ. ವಿಶಾಲ್ ಈ ಚಿತ್ರದ ನಿರ್ದೇಶಕರು. ವಾಸುಕಿ ವೈಭವ್ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಇದೊಂದು ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಮೇಘನಾ ಯಾವ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಸದ್ಯಕ್ಕಿರುವ ಕುತೂಹಲ. ಇದನ್ನೂ ಓದಿ : ‘ಮದುವೆನೂ ಇಲ್ಲ, ರಿಂಗೂ ಇಲ್ಲ’ ಲಲಿತ್ ಮೋದಿಗೆ ತಿವಿದ ಸುಶ್ಮಿತಾ ಸೇನ್

    ತಮ್ಮ ಟೀಮ್ ಜೊತೆಗಿನ ಫೊಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಮೇಘನಾ, ಒಂದು ಸಣ್ಣ ಆಲೋಚನೆ ಜುಲೈ 7ಕ್ಕೆ ನಿಜವಾಯಿತು. ಅಕ್ಟೋಬರ್ 2021ರಂದು ನಾವು ಈ ಪ್ರಾಜೆಕ್ಟ್ ಘೋಷಿಸಿದ್ದೇವೆ. ಇದೀಗ ಆ ಯೋಚನೆ ಲುಕ್ ಟೆಸ್ಟ್ ವರೆಗೂ ಬಂದಿದೆ ಎಂದೂ, ಸ್ಕ್ರಿಪ್ಟ್ ಕೆಲಸ ಮತ್ತೆ ಶುರುವಾಗಿದೆ ಎಂದೂ ಬರೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಶೂಟಿಂಗ್‍ನಲ್ಲಿ ಪಾಲ್ಗೊಂಡ ಮೇಘನಾ ರಾಜ್

    ಶೂಟಿಂಗ್‍ನಲ್ಲಿ ಪಾಲ್ಗೊಂಡ ಮೇಘನಾ ರಾಜ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ಜಾಹೀರಾತುವೊಂದರ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.

    ಹಲವು ವರ್ಷಗಳ ನಂತರ ಮೇಘನಾ ರಾಜ್ ಜಾಹೀರಾತುವೊಂದರ ಶೂಟಿಂಗ್‍ನಲ್ಲಿ ಭಾಗಿಯಾಗಿದ್ದು, ಈ ಜಾಹೀರಾತುವನ್ನು ಪನ್ನಾಗಭರಣ ನಿರ್ದೇಶಿಸಿದ್ದಾರೆ. ಈ ಜಾಹೀರಾತುವಿನ ಚಿತ್ರೀಕರಣದ ಚಿಕ್ಕ ವೀಡಿಯೋವೊಂದನ್ನು ಪನ್ನಾಗಭರಣ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ಮೇಘನಾ ಪಿಂಕ್ ಕಲರ್ ಗೌನ್ ತೊಟ್ಟು ವಾಕ್ ಮಾಡುತ್ತಾ ಆ್ಯಕ್ಟಿಂಗ್ ಮಾಡಿರುವುದನ್ನು ಕಾಣಬಹುದಾಗಿದೆ. ಜೊತೆಗೆ ಪನ್ನಾಗಭರಣ ಸಹ ಹೇಗೆ ಆ್ಯಕ್ಟ್ ಮಾಡಬೇಕೆಂದು ಮೇಘನಾಗೆ ಸಲಹೆ ನೀಡುತ್ತಿರುವುದನ್ನು ನೋಡಬಹುದಾಗಿದೆ. ಇದನ್ನೂ ಓದಿ: ಚಿರು ಹುಟ್ಟುಹಬ್ಬದ ನೆನಪಿನಲ್ಲಿ ಮೇಘನಾ ಹೊಸ ಸಿನಿಮಾ ಘೋಷಣೆ

     

    View this post on Instagram

     

    A post shared by Meghana Raj Sarja (@megsraj)

    ವಿಶೇಷವೆಂದರೆ ಈ ವೀಡಿಯೋ ಹಿನ್ನೆಲೆಯಲ್ಲಿ ಕೇಳಿ ಬರುವ ಮ್ಯೂಸಿಕ್ ಸಸ್ಪೆನ್ಸ್ ಥ್ರಿಲರ್ ಫೀಲ್ ನೀಡುತ್ತಿದ್ದು, ಇದೊಂದು ಮರ್ಡರ್ ಮಿಸ್ಟ್ರಿ? ಕ್ರೈಂ ಥ್ರಿಲ್ಲರ್? ಸೈಕೋ ಸ್ಟೋರಿ ಜಾಹೀರಾತು ಇರಬಹುದಾ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

    ಗುರುವಾರ ಮೇಘನಾ ರಾಜ್ ಕೂಡ ಮೊದಲ ದಿನದ ಶೂಟಿಂಗ್‍ನಲ್ಲಿ ಪಾಲ್ಗೊಂಡಿರುವುದಾಗಿ ಗುರುವಾರ ತಮ್ಮ ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದರು. ಆದರೆ ಯಾವ ಶೂಟಿಂಗ್‍ನಲ್ಲಿ ಪಾಲ್ಗೊಂಡಿದ್ದರು ಎಂಬುವುದರ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ.

     

    View this post on Instagram

     

    A post shared by Pannaga Bharana (@pannagabharana)

    ಮತ್ತೊಂದೆಡೆ ನಿರ್ದೇಶಕ ಪನ್ನಾಗಭರಣ ಅವರು ಆ್ಯಕ್ಷನ್ ಕಟ್ ಹೇಳಿರುವ ಹೊಸ ಸಿನಿಮಾದಲ್ಲಿ ಬಣ್ಣ ಹಚ್ಚುವ ಮೂಲಕ ಸ್ಯಾಂಡಲ್‍ವುಡ್‍ಗೆ ಕಮ್‍ಬ್ಯಾಕ್ ಮಾಡುತ್ತಿರುವ ವಿಚಾರವನ್ನು ಕಳೆದ ವರ್ಷ ಪತಿ ಚಿರಂಜೀವಿ ಸರ್ಜಾ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಮೇಘನಾ ರಾಜ್ ಸಿಹಿ ಸುದ್ದಿ ನೀಡಿದ್ದರು.