Tag: pannaga bharana

  • ಸಿಹಿಸುದ್ದಿ ಹಂಚಿಕೊಂಡ ಮೇಘನಾ ರಾಜ್‌: ಅಭಿಮಾನಿಗಳ ಪ್ರಶ್ನೆಗೆ ಇಲ್ಲಿದೆ ಉತ್ತರ

    ಸಿಹಿಸುದ್ದಿ ಹಂಚಿಕೊಂಡ ಮೇಘನಾ ರಾಜ್‌: ಅಭಿಮಾನಿಗಳ ಪ್ರಶ್ನೆಗೆ ಇಲ್ಲಿದೆ ಉತ್ತರ

    ಸ್ಯಾಂಡಲ್‌ವುಡ್ (Sandalwood) ನಟಿ ಮೇಘನಾ ರಾಜ್ ಸರ್ಜಾ (Meghana Raj Sarja) ಕೊನೆಗೂ ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ನೀವೆಲ್ಲರೂ ಕೇಳುವ ಪ್ರಶ್ನೆಗೆ ಉತ್ತರ ನೀಡುವ ಸಮಯ ಬಂದಿದೆ ಎಂದು ಪೋಸ್ಟ್ ಮಾಡುವ ಮೂಲಕ ನಟಿ ಅಭಿಮಾನಿಗಳಿಗೆ ಕುತೂಹಲ ಕೆರಳಿಸಿದ್ದರು. ಈಗ ಹೊಸ ಸಿನಿಮಾ ಅನೌನ್ಸ್ ಮಾಡುವ ಮೂಲಕ ಆ ಕುತೂಹಲಕ್ಕೆ ತೆರೆಬಿದ್ದಿದೆ.

    ಕನ್ನಡದ ಪ್ರತಿಭಾನ್ವಿತ ನಟಿ ಮೇಘನಾ ರಾಜ್ ಅವರು ಪತಿ ಚಿರು (Chiranjeevi Sarja) ನಿಧನದ ನಂತರ ಸಾಕಷ್ಟು ನೋವು, ಸಂಕಷ್ಟಗಳನ್ನ ಎದುರಿಸಿದ್ದರು. ನಟಿಯ ಎರಡನೇ ಮದುವೆ ಬಗ್ಗೆ, ಸಿನಿಮಾಗೆ ಕಮ್‌ಬ್ಯಾಕ್ ಆಗುವ ಬಗ್ಗೆ ಹಲವು ಪ್ರಶ್ನೆಗಳನ್ನ ಮೇಘನಾಗೆ ಕೇಳುತ್ತಿದ್ದರು. (ಫೆ.18)ರಂದು ಶನಿವಾರ ಮೇಘನಾ ಸೋಷಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಹಂಚಿಕೊಂಡಿದ್ದರು. 2020, ಭಾನುವಾರವಾಗಿತ್ತು ನನ್ನ ವಿಚಾರದಲ್ಲಿ ತೀವ್ರವಾದ ಬದಲಾವಣೆಯಾದವು. ಆಗಿನಿಂದಲೂ ನನಗೆ ಒಂದು ಪ್ರಶ್ನೆಯನ್ನು ಕೇಳಲಾಗುತ್ತಿದೆ. ಫೆಬ್ರವರಿ 19ರ ಭಾನುವಾರ ನಾನು ಆ ಪ್ರಶ್ನೆಗೆ ಉತ್ತರ ಕೊಡ್ತೀನಿ. 2023ರ ಫೆಬ್ರವರಿ 19ರ ಬೆಳಗ್ಗೆ 10:35ಕ್ಕೆ ಎಂದು ಅಪ್‌ಡೇಟ್‌ ನೀಡಿದ್ದರು. ಆ ಕುತೂಹಲಕ್ಕೆ ಈಗ ತೆರೆಬಿದ್ದಿದೆ.

    ಬಹುಭಾಷಾ ನಟಿ ಮೇಘನಾ ರಾಜ್ ಅವರು `ತತ್ಸಮ ತದ್ಭವ’ (Tatsama Tadbhava) ಸಿನಿಮಾ ಮೂಲಕ ಮತ್ತೆ ನಟನೆಗೆ ಕಮ್ ಬ್ಯಾಕ್ ಆಗಿದ್ದಾರೆ. ಸ್ತ್ರೀ ಪ್ರಧಾನ ಪಾತ್ರದ ಮೂಲಕ ಬೆಳ್ಳಿಪರದೆಯಲ್ಲಿ ಮಿಂಚಲಿದ್ದಾರೆ. ಸದ್ಯ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನ ರಿಲೀಸ್ ಮಾಡುವ ಮೂಲಕ ಮೋಹಕತಾರೆ ರಮ್ಯಾ ಅವರು ಮೇಘನಾಗೆ ಸಾಥ್‌ ನೀಡಿದ್ದಾರೆ. ಜೊತೆಗೆ ಕಮ್ ಬ್ಯಾಕ್‌ಗೆ ಶುಭಹಾರೈಸಿದ್ದಾರೆ.

     

    View this post on Instagram

     

    A post shared by Meghana Raj Sarja (@megsraj)

    ವಿಶಾಲ್ ಅತ್ರೇಯಾ ನಿರ್ದೇಶನದ `ತತ್ಸಮ ತದ್ಭವ’ ಚಿತ್ರದಲ್ಲಿ ಮೇಘನಾ (Meghana Raj) ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೇಘನಾ ರಾಜ್ ಅವರ ಬಾಯಿಯನ್ನು ಬಲವಂತವಾಗಿ ಮುಚ್ಚಲಾಗಿದೆ. ಪೋಸ್ಟರ್ ಲುಕ್ ಕುತೂಹಲ ಕೆರಳಿಸಿದೆ. ಕನ್ನಡ ಮತ್ತು ಮಲಯಾಳಂನಲ್ಲಿ ಮೂಡಿ ಬಂದಿರುವ ಈ ಚಿತ್ರಕ್ಕೆ ಪನ್ನಗ ಭರಣ (Pannaga Bharana) ಅವರು ಸಿನಿಮಾ ನಿರ್ಮಾಣ ಮಾಡಿದ್ದಾರೆ. ʻಕೆಆರ್‌ಜಿʼ (KRG Studio) ಸಂಸ್ಥೆ ಈ ಚಿತ್ರವನ್ನು ವರ್ಲ್ಡ್ ವೈಡ್ ರಿಲೀಸ್ ಮಾಡಲಿದ್ದಾರೆ. ಇದನ್ನೂ ಓದಿ: ಖ್ಯಾತ ತಮಿಳು ಹಾಸ್ಯ ನಟ ಮಯಿಲ್‌ಸಾಮಿ ಹಠಾತ್ ನಿಧನ

    ನಿಮ್ಮನ್ನು ಮತ್ತೆ ಬೆಳ್ಳಿತೆರೆಯಲ್ಲಿ ನೋಡುವುದು ಯಾವಾಗ? ಎಂದು ಹೆಚ್ಚು ಕೇಳಲಾದ ಪ್ರಶ್ನೆಗೆ ಅಂತಿಮವಾಗಿ ಉತ್ತರ ಇಲ್ಲಿದೆ ಎಂದು ಹೇಳಿದ್ದಾರೆ.ಭಯದಿಂದ ಸಿಕ್ಕಿಹಾಕಿಕೊಂಡಾಗ ನಿರ್ಭಯವಾಗಿರುವುದು ಅವಳ ಏಕೈಕ ಮಾರ್ಗವಾಗಿದೆ ಎಂದು ಕ್ಯಾಪ್ಷನ್ ನೀಡಿ ಪೋಸ್ಟರ್ ಶೇರ್ ಮಾಡಿದ್ದಾರೆ. ನಟಿಯ ಹೊಸ ಹೆಜ್ಜೆಗೆ ಅಭಿಮಾನಿಗಳು ಶುಭಕೋರಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮತ್ತೆ ಸಿನಿಮಾ ಮಾಡುತ್ತಿರುವುದು ದೊಡ್ಡ ಸವಾಲಾಗಿದೆ: ಮೇಘನಾ ರಾಜ್

    ಮತ್ತೆ ಸಿನಿಮಾ ಮಾಡುತ್ತಿರುವುದು ದೊಡ್ಡ ಸವಾಲಾಗಿದೆ: ಮೇಘನಾ ರಾಜ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಪತಿ ಚಿರಂಜೀವಿ ಸರ್ಜಾ ಹುಟ್ಟುಹಬ್ಬದ ದಿನದಂದೇ ಈ ವಿಚಾರವನ್ನು ಬಹಿರಂಗ ಪಡಿಸುವ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.

    ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಯನ್ ಜನಿಸಿದ ನಂತರ ನಾನು ಅಭಿನಯಿಸುತ್ತಿರುವ ಮೊದಲನೇ ಸಿನಿಮಾ ಇದಾಗಿದ್ದು, ಸಿನಿಮಾ ಮಾಡುವುದು ನನಗೆ ಖುಷಿ ನೀಡುತ್ತದೆ. ಇದು ಎಲ್ಲೋ ಒಂದು ಕಡೆ ನನ್ನ ತನವನ್ನು ನಾನು ಎಂಜಾಯ್ ಮಾಡುವಂತಹ ಕ್ಷೇತ್ರವಾಗಿದೆ. ಕ್ಯಾಮೆರಾ ಮುಂದೆ ನಿಂತುಕೊಳ್ಳುವುದು ನನಗೆ ಹೊಸದೇನಲ್ಲ.ಬಾಲ್ಯದಿಂದಲೂ ನನಗೆ ಸಿನಿಮಾ ಎಂದರೆ ಖುಷಿ ಇದೆ. ಆದರೀಗ ಮತ್ತೆ ಸಿನಿಮಾ ಮಡುವುದು ಒಂದು ದೊಡ್ಡ ಸವಾಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಚಿರು ಹುಟ್ಟುಹಬ್ಬದ ನೆನಪಿನಲ್ಲಿ ಮೇಘನಾ ಹೊಸ ಸಿನಿಮಾ ಘೋಷಣೆ

    ಇದೇ ವೇಳೆ, ನನ್ನ ತಂದೆ ನನ್ನ ಪ್ರತಿಯೊಂದು ಕನಸ್ಸು ಹಾಗೂ ಹೆಜ್ಜೆಗೆ ಯಾವ ರೀತಿ ಬೆಂಬಲವಾಗಿ ನಿಂತಿದ್ದಾರೋ, ಅದೇ ರೀತಿ ಇಂದು ಚಿರು ಅವರ ತಂದೆ ವಿಜಯ್ ಕುಮಾರ್ ಕೂಡ ನನಗೆ ಬಹಳಷ್ಟು ಬೆನ್ನುಲುಬಾಗಿ ನಿಂತಿದ್ದಾರೆ. ನನ್ನ ಜೀವನದಲ್ಲಿ ಅಹಿತಕರ ಘಟನೆ ನಡೆದ ಬಳಿಕ ಸಿನಿಮಾ ಮಾಡುತ್ತೀಯಾ ಎಂದು ನನ್ನ ತಂದೆ ಕೇಳಿದ್ದರು. ಅದೇ ರೀತಿ ಚಿರು ಅವರ ತಂದೆ ಕೂಡ ನೀನು ಸುಮ್ಮನೆ ಕುಳಿತುಕೊಳ್ಳಬಾರದು. ನೀನು ಸಿನಿಮಾ ಮಾಡಬೇಕು. ಏಕೆಂದರೆ ಅದು ನಿನ್ನ ಪ್ಯಾಷೆನ್ ಎಂದು ಹೇಳಿ ಒಂದು ಪಾಸಿಟಿವ್ ಎನರ್ಜಿ ತುಂಬುತ್ತಿದ್ದರು. ಅವರ ಆಶೀರ್ವಾದ ನನ್ನ ಮೇಲಿದೆ ಎಂದು ನಂಬುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಚಿರಂಜೀವಿ ಸರ್ಜಾ ಸವಿ ನೆನಪು

    ಚಿರು ಸ್ನೇಹಜೀವಿ ಎಂಬುವುದು ಎಲ್ಲರಿಗೂ ಗೊತ್ತಿದೆ. ಸುಖದಲ್ಲಿ ಎಲ್ಲರೂ ಇರುತ್ತಾರೆ. ಆದರೆ ದುಃಖದಲ್ಲಿ ನಿಮ್ಮ ಜೊತೆ ಯಾರು ಬೆನ್ನೆಲುಬಾಗಿ ನಿಂತಿರುತ್ತಾರೆ ಎಂದು ತಿರುಗಿ ನೋಡಿದಾಗ, ನಮಗೆ ನಿಜವಾದ ಸ್ನೇಹಿತರ್ಯಾರು? ನಿಜವಾಗಿಯೂ ನಮ್ಮ ಬಗ್ಗೆ ಕಾಳಜಿ ಇರುವುದು ಯಾರಿಗೆ ಎಂಬ ವಿಚಾರ ನಮಗೆ ಬಹಳ ಚೆನ್ನಾಗಿ ತಿಳಿಯುತ್ತದೆ. ಆ ಒಂದು ಗುಂಪಿನಲ್ಲಿ ನಾನು ನೋಡಿದಾಗ ನನ್ನ ಫ್ರೆಂಡ್ಸ್ ನನ್ನ ಕುಟುಂಬದವರಂತೆ ಇದ್ದಾರೆ. ಇದನ್ನೂ ಓದಿ: ಚಿರು ನನ್ನ ಜೀವನ, ನನ್ನ ಬೆಳಕು: ಮೇಘನಾ ರಾಜ್

    ಚಿರು ಹುಟ್ಟು ಹಬ್ಬದಂದು ಈ ಸಿನಿಮಾವನ್ನು ಲಾಂಚ್ ಮಾಡುತ್ತಿರುವುದು, ಚಿರು ಹಾಗೂ ಪನ್ನಾಗಭರಣ, ನನ್ನ ಸ್ನೇಹವನ್ನು ಗುರುತಿಸುತ್ತದೆ. ನನಗೆ ಸಿನಿಮಾ ಮಾಡಬೇಕೆಂಬ ಯೋಚನೆ ಬರುವ ಮುಂಚೆಯೇ ನನ್ನ ಪರವಾಗಿ ಪನ್ನಾಗಭರಣ ಮಾಡಿದ್ದಾರೆ. ಇದು ನಮ್ಮ ಸ್ನೇಹಕ್ಕೆ ಸಾಕ್ಷಿ ಎಂದು ಹೇಳಬಹುದು  ಎಂದಿದ್ದಾರೆ. ಇದನ್ನೂ ಓದಿ: ಮಹಾರಾಣಿ ಧಿರಿಸಿನಲ್ಲಿ ಮೇಘನಾ ಫುಲ್ ಮಿಂಚಿಂಗ್

    ಒಟ್ಟಾರೆ ಚಿರು ಹುಟ್ಟುಹಬ್ಬದಂದು ಪಿಬಿ ಸ್ಟುಡಿಯೋಸ್‍ನಲ್ಲಿ ನನ್ನ ಸಿನಿಮಾ ಬರುತ್ತಿರುವುದು ಬಹಳ ಹೆಮ್ಮೆ ಹಾಗೂ ಖುಷಿ ಆಗುತ್ತಿದೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.

  • ಚಿರು ಫೋಟೋ ಇರುವ ಜಾಕೆಟ್ ತೊಟ್ಟ ಪನ್ನಗಾಭರಣ – ಅಭಿಮಾನಿಗಳಿಂದ ಮೆಚ್ಚುಗೆ

    ಚಿರು ಫೋಟೋ ಇರುವ ಜಾಕೆಟ್ ತೊಟ್ಟ ಪನ್ನಗಾಭರಣ – ಅಭಿಮಾನಿಗಳಿಂದ ಮೆಚ್ಚುಗೆ

    ಬೆಂಗಳೂರು: ಪನ್ನಗಾಭರಣ ಚಿರು ಸರ್ಜಾ ಫೋಟೋ ಇರುವ ಜಾಕೆಟ್ ಧರಿಸಿ ಸೈಮಾ ಅವಾರ್ಡ್‍ನಲ್ಲಿ ಕಾಣಿಸಿಕೊಂಡಿರುವುದು ಸ್ಯಾಂಡಲ್‍ವುಡ್‍ನಲ್ಲಿ ಸಖತ್ ಸುದ್ದಿಯಾಗಿದೆ.

    ಇಂದು ನನ್ನ ಪ್ರೀತಿಯ ಗೆಳೆಯನ ಫೋಟೋ ಇರುವ ಬಟ್ಟೆಯನ್ನು ಧರಿಸಿದ್ದೇನೆ, ಸ್ನೇಹಿತ ನನ್ನ ಅದೃಷ್ಟ ಎಂದು ಬರೆದುಕೊಂಡ ಪನ್ನಗಭರಣ ಸೈಮಾ ಅವಾರ್ಡ್‍ನಲ್ಲಿ ತೆಗೆದಿರುವ ಕೆಲವು ಫೋಟೋವನ್ನು ಹಂಚಿಕೊಂಡಿದ್ದರು. ಈ ಪೋಸ್ಟ್ ನೋಡಿದ ಅಭಿಮಾನಿಗಳು ಮೆಚ್ಚುಗೆಯನ್ನು ಸೂಚಿಸಿ ನೀವು ನಿಜವಾದ ಸ್ನೇಹಿತರು, ಉತ್ತಮ ಗೆಳೆಯರು, ನಿಮ್ಮ ಅಂತಹ ಸ್ನೇಹಿತರು ಇರಲು ಸಾಧ್ಯವೇ ಇಲ್ಲ ಎಂದು ಕಮೆಂಟ್ ಮಾಡುತ್ತಾ ಇಬ್ಬರ ನಡುವೆ ಇರುವ ಸ್ನೇಹವನ್ನು ಹಾಡಿಹೊಗಳಿದ್ದಾರೆ. ಇದನ್ನೂ ಓದಿ:  ಕುಡಿಯುವ ನೀರಿಗಾಗಿ ಮಸೀದಿಗೆ ಹೋಗಿದ್ದಕ್ಕೆ ಒತ್ತೆಯಾಳು

     

    View this post on Instagram

     

    A post shared by Pannaga Bharana (@pannagabharana)

    ಅಂತಿಮವಾಗಿ ಅದೃಷ್ಟ ಮತ್ತು ಶಕ್ತಿ ನಮ್ಮ ಕಡೆ ಇತ್ತು. ಫ್ರೆಂಚ್ ಬಿರಿಯಾನಿ ಸಿನಿಮಾಗೆ ಅತ್ಯುತ್ತಮ ನಿರ್ದೇಶಕ 2020 ಅವಾರ್ಡ್ ಸಿಕ್ಕಿದೆ. ಕನಸು ನನಸಾಯಿತು. ನನ್ನ ಇಡೀ ಚಿತ್ರತಂಡ, ಸಿಬ್ಬಂದಿಗೆ ಧನ್ಯವಾದಗಳು. ನನ್ನ ತಂಡದ ಬಗ್ಗೆ ತುಂಬಾ ಹೆಮ್ಮೆ ಇದೆ ಎಂದು ಬರೆದುಕೊಂಡು ಅವಾರ್ಡ್ ಬಂದಿರುವ ಸಂತೋಷವನ್ನು ಪನ್ನಗಾಭರಣ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ದಸರಾ ತಾಲೀಮು ವೇಳೆ ಅರಮನೆ ಬಳಿ ಆನೆ ರಂಪಾಟ

     

    View this post on Instagram

     

    A post shared by Pannaga Bharana (@pannagabharana)

    ಚಿರಂಜೀವಿ ಸರ್ಜಾ ಹಾಗೂ ನಿರ್ದೇಶಕ ಪನ್ನಗಾಭರಣ ತುಂಬಾನೇ ಆಪ್ತರಾಗಿದ್ದರು. ಅವರ ನಡುವೆ ಒಳ್ಳೆಯ ಗೆಳೆತನ ಬೆಳೆದಿತ್ತು. ಚಿರು ಅಕಾಲಿಕ ಮರಣ ಹೊಂದಿದರು. ಇದು ಅನೇಕರಿಗೆ ಬೇಸರ ಮೂಡಿಸಿತ್ತು. ಪನ್ನಗಾಭರಣ ಅವರು ತುಂಬಾನೇ ನೊಂದುಕೊಂಡರು. ಈಗ ಸೈಮಾ ಅವಾರ್ಡ್ ಕಾರ್ಯಕ್ರಮದಲ್ಲಿ ಪನ್ನಗಾಭರಣ ಅವರು ಚಿರು ಸರ್ಜಾ ಫೋಟೋ ಇರುವ ಜಾಕೆಟ್ ಧರಿಸಿ ಕಾಣಿಸಿಕೊಂಡಿದ್ದಾರೆ.

     

    View this post on Instagram

     

    A post shared by Pannaga Bharana (@pannagabharana)

    ದಕ್ಷಿಣ ಭಾರತದ ಸಿನಿಮಾ ಚಿತ್ರರಂಗದಲ್ಲಿನ ಸಿನಿಮಾಗಳಿಗೆ ಸೈಮಾ  ಅವಾರ್ಡ್ಸ್ ನೀಡಲಾಗುತ್ತದೆ. ಇತ್ತೀಚೆಗೆ ಈ ಕಾರ್ಯಕ್ರಮ ನಡೆದಿದೆ. ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್ ಸೇರಿ ಸಾಕಷ್ಟು ಸ್ಯಾಂಡಲ್‍ವುಡ್‍ನ ನಟ, ನಟಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಪನ್ನಗಾಭರಣ ಅವರು ತೊಟ್ಟಿರುವ ಬಟ್ಟೆ ಮೇಲೆ  ಇರುವ ಚಿರು ಫೋಟೋ ಎಲ್ಲರ ಗಮನ ಸೆಳೆದಿದೆ.