Tag: Pankaj Narayan

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ಎಸ್.ನಾರಾಯಣ್ ಪುತ್ರ ಪಂಕಜ್

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ಎಸ್.ನಾರಾಯಣ್ ಪುತ್ರ ಪಂಕಜ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟ, ಖ್ಯಾತ ನಿರ್ದೇಶಕ ಎಸ್. ನಾರಾಯಣ್ ಅವರ ಕುಟುಂಬದಲ್ಲಿ ಶುಭ ಸಮಾರಂಭ ನೆರವೇರಿದೆ. ಇತ್ತೀಚೆಗೆ ಎರಡನೇ ಮಗ ಪವನ್ ಅವರ ಮದುವೆ ನಡೆದಿತ್ತು, ಈಗ ಪಂಕಜ್ ಅವರ ಮದುವೆ ನಡೆದಿದೆ.

    ಮೈಸೂರಿನಲ್ಲಿರುವ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್‍ನಲ್ಲಿ ಪಂಕಜ್ ಅವರ ಮದುವೆ ನಡೆದಿದೆ. ಪಂಕಜ್ ಅವರನ್ನು ಮದುವೆ ಆಗಿರುವ ಹುಡುಗಿಯ ಹೆಸರು ರಕ್ಷಿತಾ ಸುರೇಂದರ್. ಕಳೆದ ತಿಂಗಳು ಪಂಕಜ್ ಮತ್ತು ರಕ್ಷಿತಾ ನಿಶ್ಚಿತಾರ್ಥ ನಡೆದಿತ್ತು. ಇದೀಗ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದನ್ನೂ ಓದಿ: ಅಪ್ಪು ಪುತ್ಥಳಿಗೆ ಮುತ್ತಿಟ್ಟು ರಾಘವೇಂದ್ರ ರಾಜ್‍ಕುಮಾರ್ ಭಾವುಕ

    ಗುರುಹಿರಿಯರು ಮತ್ತು ಕುಟುಂಬದವರ ಸಮ್ಮುಖದಲ್ಲಿ ಈ ಮದುವೆ ನಡೆದಿದೆ. ಸ್ಯಾಂಡಲ್‍ವುಡ್ ಸೆಲೆಬ್ರಿಟಿಗಳು ಮದುವೆಯಲ್ಲಿ ಭಾಗಿಯಾಗಿ ನವ ವಧು, ವರರನ್ನು ಆಶಿರ್ವದಿಸಿದ್ದಾರೆ. ಪಂಕಜ್ ಮತ್ತು ರಕ್ಷಿತಾ ದಂಪತಿಗೆ ಶುಭ ಕೋರಿ, ಆಶೀರ್ವಾದ ಮಾಡಲು ಕನ್ನಡ ಚಿತ್ರರಂಗದ ಗಣ್ಯರು ಮತ್ತು ಇಬ್ಬರ ಸ್ನೇಹಿತರು ಮತ್ತು ಕುಟುಂಬದವರು ಮದುವೆಗೆ ಬಂದು ಶುಭ ಕೋರಿದ್ದಾರೆ. ಇದನ್ನೂ ಓದಿ: ನಿಕ್ ಜೊತೆಗಿನ ವಿಚ್ಛೇದನ ಗಾಸಿಪ್​ಗೆ ಬ್ರೇಕ್ ಹಾಕಿದ ಪ್ರಿಯಾಂಕ ಚೋಪ್ರಾ

    ಪಂಕಜ್ ಅವರು ಚಂದನವನದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದಾರೆ. ಪಂಕಜ್ ಮದುವೆಯ ಸುಂದರ ಕ್ಷಣದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

  • ‘ಒಡೆಯ’ ದರ್ಶನ್ ತಮ್ಮನಾಗಲಿದ್ದಾರಾ ಪಂಕಜ್?

    ‘ಒಡೆಯ’ ದರ್ಶನ್ ತಮ್ಮನಾಗಲಿದ್ದಾರಾ ಪಂಕಜ್?

    ಬೆಂಗಳೂರು: ತಂದೆ ಎಸ್ ನಾರಾಯಣ್ ಗರಡಿಯಲ್ಲಿ ನಟನಾಗಿ, ನಿರ್ದೇಶಕ ವಿಭಾಗದಲ್ಲಿಯೂ ಪಳಗಿಕೊಂಡಿರುವವರು ಪಂಕಜ್ ನಾರಾಯಣ್. ಇದೀಗ ಶ್ರೀಧರ್ ನಿರ್ದೇಶನದ ಒಡೆಯ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮನಾಗಿ ನಟಿಸಲು ಪಂಕಜ್ ತಯಾರಾಗಿದ್ದಾರೆ!

    ಚಿತ್ರತಂಡದ ಅಧಿಕೃತ ಮೂಲಗಳೇ ಈ ಸುದ್ದಿಯನ್ನು ಹೊರ ಹಾಕಿವೆ. ಅದರನ್ವಯ ದರ್ಶನ್ ಅವರ ತಮ್ಮನಾಗಿ ಪಂಕಜ್ ನಟಿಸಲಿರೋದು ಪಕ್ಕಾ. ಈ ಚಿತ್ರದಲ್ಲಿ ದರ್ಶನ್ ಅವರಿಗೆ ಇಬ್ಬರು ಸಹೋದರರಿರಲಿದ್ದಾರಂತೆ. ಅದರಲ್ಲೊಬ್ಬರಾಗಿ ಪಂಕಜ್ ನಟಿಸಿದರೆ, ಮತ್ತೋರ್ವ ಸಹೋದರನಾಗಿ ಯಶಸ್ ಸೂರ್ಯ ಅಭಿನಯಿಸಲಿದ್ದಾರೆ.

    ಚೆಲುವಿನ ಚಿಲಿಪಿಲಿ ಸೇರಿದಂತೆ ಒಂದಷ್ಟು ಚಿತ್ರಗಳಲ್ಲಿ ನಾಯಕನಾಗಿಯೂ ನಟಿಸಿದ್ದ ಪಂಕಜ್ ಒಂದು ಚಿತ್ರದಲ್ಲಿ ನಾರಾಯಣ್ ಅವರಿಗೆ ನಿರ್ದೇಶನ ವಿಭಾಗದಲ್ಲಿಯೂ ಸಾಥ್ ನೀಡಿದ್ದರು. ಇದೀಗ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹು ನಿರೀಕ್ಷಿತ ಒಡೆಯ ಚಿತ್ರದಲ್ಲಿ ನಟಿಸುವ ಸುವರ್ಣಾವಕಾಶವನ್ನೇ ಗಿಟ್ಟಿಸಿಕೊಂಡಿದ್ದಾರೆ.

    ಒಡೆಯ ಚಿತ್ರ ಇದೇ ತಿಂಗಳ ಹತ್ತನೇ ತಾರೀಕಿನಿಂದ ಮೈಸೂರಿನಲ್ಲಿ ಚಿತ್ರೀಕರಣ ಆರಂಭಿಸಲಿದೆ. ಈ ಚಿತ್ರದಲ್ಲಿ ದರ್ಶನ್ ತಮ್ಮಂದಿರ ಪಾತ್ರಗಳಿಗೂ ಮಹತ್ವ ಇದೆಯಂತೆ. ಅಂಥಾ ಪಾತ್ರದಲ್ಲಿ ಮಿಂಚಲು ಪಂಕಜ್ ರೆಡಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv