Tag: Panjurli Daiva

  • ದೈವಕ್ಕೆ ಅಪಚಾರ ಮಾಡಿದ ಕಡೆಯೆಲ್ಲ ದುರಂತಗಳಾಗಿವೆ: ಸಂಶೋಧಕಿ ಡಾ. ಲಕ್ಷ್ಮಿ ಪ್ರಸಾದ್

    ದೈವಕ್ಕೆ ಅಪಚಾರ ಮಾಡಿದ ಕಡೆಯೆಲ್ಲ ದುರಂತಗಳಾಗಿವೆ: ಸಂಶೋಧಕಿ ಡಾ. ಲಕ್ಷ್ಮಿ ಪ್ರಸಾದ್

    – ಅಪಚಾರ ಮಾಡಿದ್ದರೆ, ಹರಕೆ ಬಾಕಿಯಿದ್ದರೆ ತೀರಿಸಿಕೊಳ್ಳಬೇಕು; ಸಲಹೆ
    – ರಿಷಬ್‌ಗೆ ಮೊದಲೇ ಕೇಡಿನ ಮುನ್ಸೂಚನೆ ಕೊಟ್ಟಿದ್ದ ಪಂಜುರ್ಲಿ ದೈವ

    ರಾಷ್ಟ್ರ ಪ್ರಶಸ್ತಿ ವಿಜೇತ ರಿಷಬ್ ಶೆಟ್ಟಿ (Rishab Shetty) ನಿರ್ದೇಶಿಸಿ ನಟಿಸುತ್ತಿರುವ ಬಹುನಿರೀಕ್ಷಿತ ಚಿತ್ರ ʻಕಾಂತಾರ ಚಾಪ್ಟರ್ 1ʼಗೆ (Kantara Chapter 1) ಸಾಲು ಸಾಲು ವಿಘ್ನ ಎದುರಾಗುತ್ತಲೇ ಇದೆ. ಶನಿವಾರ ಶಿವಮೊಗ್ಗದ ಮಾಸ್ತಿಕಟ್ಟೆಯ ಮಾಣಿ ಜಲಾಶಯದಲ್ಲಿ ಶೂಟಿಂಗ್‌ ದೋಣಿಯೇ ಮುಗಿಚಿಹೋಗಿದೆ. ನಟ ರಿಷಬ್ ಶೆಟ್ಟಿ ಸೇರಿ ಹಲವರು ಪಾರಾಗಿದ್ದಾರೆ. ಆದ್ರೆ ಇದು ಕಾಕತಾಳಿಯೂ ಅಥವಾ ದೈವಗಳಿಗೆ ಮಾಡಿದ ಅಪಚಾರದಿಂದ ಆದ ಘಟನೆಯೋ ಅನ್ನೋ ಮಾತುಕತೆ ನಡೆಯುತ್ತಿದೆ. ಈ ನಡುವೆ ಪಂಜುರ್ಲಿ ದೈವ (Panjurli Daiva) ರಿಷಬ್‌ಗೆ ಕೊಟ್ಟಿದ ಕೇಡಿನ ಮುನ್ಸೂಚನೆ ಬಗ್ಗೆ ಸಂಶೋಧಕಿ ಡಾ. ಲಕ್ಷ್ಮಿ ಪ್ರಸಾದ್ (ತುಳು ದೈವಗಳ ಬಗ್ಗೆ ಪುಸ್ತಕ ಬರೆದವರು) ಮಾತನಾಡಿದ್ದಾರೆ.

    ʻಪಬ್ಲಿಕ್ ಟಿವಿʼ ಜೊತೆಗೆ ಮಾತನಾಡಿರುವ ಅವರು, ದೈವಗಳು ಯಾರಿಗೂ ತೊಂದರೆ ಕೊಡಲ್ಲ. ಆದ್ರೆ ಹರಕೆ ಬಾಕಿಯಿದ್ದಾಗ ಅಥವಾ ದೈವಗಳಿಗೆ ಅಪಚಾರವಾದಾಗ ದೈವ (Daiva) ಮುನಿಸುಗೊಳ್ಳುತ್ತದೆ. ಕಾಂತಾರ ಸಿನಿಮಾ-2 ನಡೆಯುವ ಸಂದರ್ಭದಲ್ಲಿ ಈ ಘಟನೆ ಕಾಕತಾಳೀಯವೂ ಆಗಿರಬಹುದು ಅಥವಾ ದೈವದ ಸೂಚನೆಯೂ ಆಗಿರಬಹುದು ಅಂತಾ ಹೇಳಿದ್ದಾರೆ. ಇದನ್ನೂ ಓದಿ: ʻಕಾಂತಾರ ಚಾಪ್ಟರ್-1ʼಗೆ ಸಾಲು ಸಾಲು ವಿಘ್ನ – ಒಂದೇ ತಿಂಗಳಲ್ಲಿ ಮೂರು ಸಾವು!

    ದೈವಗಳು ಶಿಷ್ಟರನ್ನ ರಕ್ಷಣೆ ಮಾಡಿ ದುಷ್ಟರನ್ನ ಶಿಕ್ಷಿಸುತ್ತವೆ. ಯಾವುದೇ ಕಾಲದಲ್ಲೂ ತೊಂದರೆ ಮಾಡುವುದಿಲ್ಲ. ಇಲ್ಲಿ ನಡೆದಿದ್ದೆಲ್ಲ ಕಾಕತಾಳೀಯೂ ಆಗಿರಬಹುದು, ಆಕಸ್ಮಿಕವೂ ಆಗಿರಬಹುದು. ರಾಕೇಶ್ ಪೂಜಾರಿ, ವಿಜುಗೆ ಹೃದಯಾಘಾತ ಆಗಿದೆ. ಅವರಿಬ್ಬರಿಗೇ ಅಲ್ಲ ಕಳೆದ ಒಂದು ವರ್ಷದಲ್ಲಿ ಸಾವಿರಾರು ಯುವಜನರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕಾಂತಾರ ಚಾಪ್ಟರ್‌-1 ಚಿತ್ರದಲ್ಲಿ ಸಾವಿರಾರು ಜನ ಕೆಲಸ ಮಾಡ್ತಿದ್ದಾರೆ. ಆದ್ದರಿಂದ ಈ ಘಟನೆ ನಡೆದಿದ್ದು ಆಕಸ್ಮಿಕವೂ ಇರಬಹುದು ಎಂದು ಹೇಳಿದ್ದಾರೆ.

    ದೈವಕ್ಕೆ ಅನ್ಯಾಯವಾದಾಗ ಶಿಕ್ಷಿಸಿವೆ
    ಮುಂದುವರಿದು… ಅಲೌಕಿಕ ನೆಲೆಗಟ್ಟಿನಲ್ಲಿ ಹೇಳೋದಾದ್ರೆ ದೈವಕ್ಕೆ ಅಪಚಾರ ಮಾಡಿದ ಕಡೆಯೆಲ್ಲ ದುರಂತಗಳು ಆಗಿವೆ. ದೈವಕ್ಕೆ ಹರಕೆ ತೀರಿಸದಿದ್ರೆ, ಅನ್ಯಾಯ ಮಾಡಿದ್ರೆ ದೈವಗಳು ಶಿಕ್ಷಿಸಿರುವ ಉದಾಹರಣೆಗಳಿವೆ. ಕಾಂತಾರ ಸಿನಿಮಾ ಮಾತ್ರವಲ್ಲದೇ ಈ ಹಿಂದೆಯೂ ದೈವದ ಬಗ್ಗೆ ಹಲವು ಸಿನಿಮಾಗಳಲ್ಲಿ ತೋರಿಸಿದ್ದಾರೆ. ರಿಷಬ್‌ ಅವರ ಚಿತ್ರದಲ್ಲಿ ತೆರೆಯ ಮೇಲೆ ದೈವಕ್ಕೆ ಎಲ್ಲಿಯೂ ಅಪಚಾರವಾಗಿಲ್ಲ. ತೆರೆಯ ಹಿಂದೆ ಏನಾಗಿದೆಯೋ ನಮಗೆ ಗೊತ್ತಿಲ್ಲ. ಅಲ್ಲದೇ ದೈವವು ಸಹ ಮುಂದಿನ ದಿನಗಳಲ್ಲಿ ತೊಂದ್ರೆ ಬರಬಹುದು ಅಂತಾ ಹೇಳಿದೆ, ದೈವಗಳು ಹೇಳಿದ ನುಡಿಗಟ್ಟಗಳು ನಿಜವಾಗಿದೆ ಅನ್ನೋದು ಜನರ ನಂಬಿಕೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಾಂತಾರ ಚಾಪ್ಟರ್-1 ಚಿತ್ರದ ಸಹ ಕಲಾವಿದ ವಿಜು ಹೃದಯಾಘಾತದಿಂದ ಸಾವು

    Kantara 3

    ದೈವ ಕಟ್ಟಿದವರು ಹೇಳಿದ ಮಾತು ನಿಜವಾಗಿದೆ
    ರಿಷಬ್‌ ಶೆಟ್ಟಿ ದೈವದ ಆಜ್ಞೆ ಪಡೆದೇ ಸಿನಿಮಾ ಶೂಟಿಂಗ್‌ ಶುರು ಮಾಡಿದ್ದಾರೆ. ದೈವ ಕೂಡ ಅಪಾಯ ಬರಬಹುದು ನಾನು ರಕ್ಷಣೆ ಕೊಡ್ತೀನಿ ಎಂದು ಹೇಳಿತ್ತು. ಸಾಮಾನ್ಯವಾಗಿ ಕಷ್ಟ ಬಂದಾಗ ಜನ ದೈವದ ಬಳಿ ಹೋಗ್ತಾರೆ, ದೈವ ನುಡಿಗಟ್ಟು ಕೊಡುತ್ತೆ. ಆ ಕ್ಷಣಕ್ಕೆ ದೈವ ಕಟ್ಟಿದಾಗ ಅಲೌಕಿಕ ಶಕ್ತಿ ಜಾಗೃತಿಯಾಗಿರುತ್ತೆ, ಹಾಗಾಗಿ ದೈವ ಕಟ್ಟಿದವರು ಹೇಳಿದ ಮಾತುಗಳು ನಿಜವಾಗಿವೆ ಎನ್ನುತ್ತಾರೆ ಡಾ. ಲಕ್ಷ್ಮಿ ಪ್ರಸಾದ್. ಇದನ್ನೂ ಓದಿ: ಕಾಂತಾರ ಚಾಪ್ಟರ್-1 | ದೈವದ ನೇಮೋತ್ಸವ ಚಿತ್ರೀಕರಣಕ್ಕೂ ಮುನ್ನವೇ ಸಹ ಕಲಾವಿದ ಸಾವು

    ಕೊನೆಯಲ್ಲಿ ಶಿವನನ್ನ ಮಾಯ ಮಾಡಿದ್ದು ಸರಿಯಲ್ಲ
    ಇದೆಲ್ಲದರ ಹೊರತಾಗಿ ಬೇಜವಾಬ್ದಾರಿಯಿಂದ ಏನಾದ್ರೂ ಮಾಡಿದ್ದರೆ ಅದು ಅವರ ತಪ್ಪು. ದೈವಕ್ಕೆ ಅಪಪ್ರಚಾರ ಆದ್ರೆ ಇಂತಹದ್ದೆಲ್ಲ ಆಗಬಹುದು. ಜೊತೆಗೆ ದುರಂತ ಕಥಾನಕಗಳನ್ನ ತೋರಿಸಬಾರದು ಅನ್ನೋ ನಂಬಿಕೆಯೂ ಇದೆ. ಆದ್ರೆ ಕಾಂತಾರ ಚಿತ್ರದ ಕೊನೆಯಲ್ಲಿ ಶಿವನನ್ನು ಮಾಯ ಮಾಡಿದ್ದು ಸರಿ ಹೋಗಲಿಲ್ಲ ಅಂತ ನನ್ನ ಮನಸ್ಸು ಹೇಳ್ತಿತ್ತು. ಒಂದು ವೇಳೆ ದೈವಕ್ಕೆ ಅಪಚಾರ ಮಾಡಿದ್ದರೆ, ಹರಕೆ ಬಾಕಿಯಿದ್ದರೆ ತೀರಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಬರ್ತ್‌ಡೇ ಪಾರ್ಟಿಯಲ್ಲಿ ಇದ್ದಿದ್ದು ಬರೀ ಲೋಕಲ್‌ ಡ್ರಿಂಕ್ಸ್‌ ಮಾತ್ರ – ಮಂಗ್ಲಿ ಸ್ಪಷ್ಟನೆ

  • ವಿದ್ಯಾರ್ಥಿ ಮೇಲೆ ಆವಾಹನೆಯಾಯ್ತು ಪಂಜುರ್ಲಿ ದೈವ!

    ವಿದ್ಯಾರ್ಥಿ ಮೇಲೆ ಆವಾಹನೆಯಾಯ್ತು ಪಂಜುರ್ಲಿ ದೈವ!

    ಬೆಂಗಳೂರು: ಕಾಲೇಜು ವಾರ್ಷಿಕೋತ್ಸವ ಕಾರ್ಯಕ್ರಮದ ವೇಳೆ ವಿದ್ಯಾರ್ಥಿಯೋರ್ವನ (College Student) ಮೇಲೆ ಪಂಜುರ್ಲಿ ದೈವ (Panjurli Daiva) ಆವಾಹನೆಯಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.

    ಕಾಲೇಜು ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿ (PUC Student) ಕಾಂತಾರ ಸಿನಿಮಾ ಹಾಡಿಗೆ ನೃತ್ಯ ಮಾಡುತ್ತಿದ್ದಾಗ ದೈವ ಆವಾಹನೆಯಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಮತ್ತೆ ಕರೆಂಟ್ ಶಾಕ್‍ಗೆ ಸಜ್ಜು- ಹೋಟೆಲ್ ಉದ್ಯಮದಿಂದ ವ್ಯಾಪಕ ಆಕ್ರೋಶ

    ಬೆಂಗಳೂರಿನ ಹೊಂಬೇಗೌಡ ಪಿಯು ಕಾಲೇಜು (Hombegowda PU College) ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವಿಶಾಲ್ ಕಾಂತಾರ ಸಿನಿಮಾದ (Kantara Cinema) `ವರಾಹ ರೂಪಂ’ ಹಾಡಿಗೆ ನೃತ್ಯ ಮಾಡುತ್ತಿದ್ದನು. ಈ ವೇಳೆ ವಿದ್ಯಾರ್ಥಿ ಪಂಜುರ್ಲಿ ದೈವದ ವೇಷ ಧರಿಸಿದ್ದ. ಕೆಲ ನಿಮಿಷಗಳ ಬಳಿಕ ವೇದಿಕೆಯಿಂದ ಕೆಳಗೆ ಬಂದು ನರ್ತಿಸುತ್ತಿದ್ದಂತೆ ದೈವ ಆವಾಹನೆಯಾಗಿದೆ. ಬಳಿಕ ಸಹಪಾಠಿಗಳು ಹಾಗೂ ಶಿಕ್ಷಕರು ವಿದ್ಯಾರ್ಥಿಯನ್ನು ಸಮಾಧಾನಪಡಿಸಿದ್ದಾರೆ. ಕಾರ್ಯಕ್ರಮ ಆಯೋಜಕರು ತಕ್ಷಣವೇ ಹಾಡು ನಿಲ್ಲಿಸಿದ್ದಾರೆ.

    ಸದ್ಯ ಈ ದೃಶ್ಯಕಂಡು ವಿದ್ಯಾರ್ಥಿ ಪೋಷಕರು ಶಾಖ್ ಆಗಿದ್ದಾರೆ. ಇದನ್ನೂ ಓದಿ: ಪತಿಯನ್ನ ಅರೆಸ್ಟ್ ಮಾಡ್ತಾರೆ ಅಂತಾ ಹೆದರಿ ನವ ವಿವಾಹಿತೆ ಆತ್ಮಹತ್ಯೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k