Tag: panjurli

  • ‘ಕಾಂತಾರ 2’ ಚಿತ್ರದ ಕುರಿತು ಮತ್ತೊಂದು ಮೆಗಾ ಅಪ್ ಡೇಟ್

    ‘ಕಾಂತಾರ 2’ ಚಿತ್ರದ ಕುರಿತು ಮತ್ತೊಂದು ಮೆಗಾ ಅಪ್ ಡೇಟ್

    ರಿಷಬ್ ಶೆಟ್ಟಿ (Rishabh Shetty) ನಿರ್ದೇಶಿಸಿ, ನಟಿಸುತ್ತಿರುವ ಕಾಂತಾರ 2  ಸಿನಿಮಾದ ಬಗ್ಗೆ ದಿನಕ್ಕೊಂದು ಮಾಹಿತಿ ಹೊರ ಬೀಳುತ್ತಿವೆ.  ಸಿನಿಮಾ ಮಹೂರ್ತದ (Muhurta) ಕುರಿತಂತೆ ಪಂಜುರ್ಲಿ (Panjurl) ಮತ್ತು ಗುಳಿಗ ದೈವಕ್ಕೆ ಚಿತ್ರತಂಡ ಮೊರೆ ಹೋಗಿದ್ದು, ದೈವಗಳು ಅಸ್ತು ಎಂದಿವೆ ಎನ್ನುವ ಮಾಹಿತಿ ಸಿಕ್ಕಿದೆ. ಹೀಗಾಗಿ ಸಿನಿಮಾ ತಂಡ ಮುಹೂರ್ತಕ್ಕೆ ಸರ್ವ ಸಿದ್ಧತೆ ಮಾಡಿಕೊಂಡಿದೆ.

    ಮತ್ತೊಂದು ಸಮಾಚಾರವೆಂದರೆ, ಈ ಸಿನಿಮಾದಲ್ಲಿ 14ನೇ ಶತಮಾನದಿಂದ ಶುರುವಾಗುವ ಕಥೆ ಕೂಡ ಇರಲಿದೆಯಂತೆ. ಈ ಕುರಿತು ಚಿತ್ರತಂಡ ಮಾಹಿತಿ ನೀಡದೇ ಇದ್ದರೂ, ಗಾಂಧಿ ನಗರದ ಗಲ್ಲಿ ಗಲ್ಲಿಗಳಲ್ಲಿ ಕಾಂತರ ಕಥೆ ಹಾಟ್ ಕೇಕ್ ತರಹ ಮಾರಾಟವಾಗುತ್ತಿದೆ.

    ‘ಕಾಂತಾರ’ ಸಿನಿಮಾ ವರ್ಲ್ಡ್ ವೈಡ್ ರೀಚ್ ಸಕ್ಸಸ್‌ಫುಲ್ ಪ್ರದರ್ಶನ ಕಂಡಿತ್ತು. ‘ಕಾಂತಾರ’ ಪಾರ್ಟ್ 2 ಯಾವಾಗ ಎಂದು ಕಾದು ಕುಳಿತ ಫ್ಯಾನ್ಸ್‌ಗೆ ಸಿಹಿಸುದ್ದಿ ಸಿಕ್ಕಿದೆ. ಇದೇ ನವೆಂಬರ್‌ಗೆ ಮುಹೂರ್ತ ಫಿಕ್ಸ್ ಆಗಿದೆ. ಹೊಂಬಾಳೆ ಸಂಸ್ಥೆ ನಿರ್ಮಾಣದ, ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸುತ್ತಿರುವ ‘ಕಾಂತಾರ 2’ ಚಿತ್ರದ ಮುಹೂರ್ತ ಇದೇ ನವೆಂಬರ್ 27ರಂದು ಸೋಮವಾರ ಸರಳವಾಗಿ ಜರುಗಲಿದೆ.

    ಕಾಂತಾರ (Kantara) ಸೂಪರ್ ಡೂಪರ್ ಹಿಟ್ ಆದಂತೆಯೇ ‘ಕಾಂತಾರ 2’ ಅದಕ್ಕಿಂತ ಹೆಚ್ಚಿನ ಯಶಸ್ಸು ಪಡೆದು ಗೆದ್ದು ಬೀಗಲೇಬೇಕೆಂದು ರಿಷಬ್ ಶೆಟ್ಟಿ ಕೂಡ ತೆರೆಮರೆಯಲ್ಲಿ ಸಿಕ್ಕಾಪಟ್ಟೆ ತಯಾರಿ ಮಾಡಿಕೊಂಡೆ ಅಖಾಡಕ್ಕೆ ಕಾಲಿಡುತ್ತಿದ್ದಾರೆ.

     

    ಅದಕ್ಕಾಗಿ ತಮ್ಮ ಲುಕ್ ಕೂಡ ಜೇಂಜ್ ಮಾಡಿ, ಸಿನಿಮಾ ಕಥೆಯಲ್ಲಿ ಸಾಕಷ್ಟು ಕೆಲಸ ಮಾಡಿಯೇ ಕಾಂತಾರ 2ಗೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ. ಸದ್ಯದಲ್ಲೇ ಸಿನಿಮಾ ಶೂಟಿಂಗ್ ಕೂಡ ಶುರುವಾಗಲಿದೆ. ಈ ಬಗ್ಗೆ ಹೆಚ್ಚಿನ ಅಪ್‌ಡೇಟ್ ಸಿನಿಮಾ ಮುಹೂರ್ತ ಸಮಾರಂಭದ ದಿನ ಸಿಗಲಿದೆ.

  • ‘ಕಾಂತಾರ 2’ ಚಿತ್ರಕ್ಕೆ ಮುಹೂರ್ತ ದಿನಾಂಕ, ಸ್ಥಳ ಫಿಕ್ಸ್ : ಬದಲಾಗಲ್ಲ ರಿಷಬ್ ನಂಬಿಕೆ

    ‘ಕಾಂತಾರ 2’ ಚಿತ್ರಕ್ಕೆ ಮುಹೂರ್ತ ದಿನಾಂಕ, ಸ್ಥಳ ಫಿಕ್ಸ್ : ಬದಲಾಗಲ್ಲ ರಿಷಬ್ ನಂಬಿಕೆ

    ಟ, ನಿರ್ದೇಶಕ ರಿಷಬ್ ಶೆಟ್ಟಿ (Rishabh Shetty) ‘ಕಾಂತಾರ’  ಪ್ರೀಕ್ವೆಲ್ ಸ್ಕ್ರಿಪ್ಟ್ ಅನ್ನು ಬಹುತೇಕ ಮುಗಿಸಿದ್ದಾರಂತೆ. ಕಾಂತಾರ (Kantara) ಚಿತ್ರಕ್ಕೆ ಮಾತುಗಳನ್ನೂ ಹೆಣೆದಿರುವ ಅವರು ಸ್ಕ್ರಿಪ್ಟ್ ಗೆ ಅಂತಿಮ ಸ್ಪರ್ಷ ನೀಡುತ್ತಿದ್ದಾರೆ ಎನ್ನುವ ಮಾಹಿತಿ ಇದೆ. ಇದರ ಜೊತೆ ಜೊತೆಗೆ ಶೂಟಿಂಗ್ (Shooting) ಸ್ಥಳಗಳನ್ನೂ ಅವರು ಹುಡುಕುತ್ತಿದ್ದು, ಈ ಎಲ್ಲವನ್ನೂ ಮುಗಿಸಿಕೊಂಡು ಆಗಸ್ಟ್ ನಲ್ಲಿ ಚಿತ್ರಕ್ಕೆ ಮುಹೂರ್ತ ಮಾಡಲಿದ್ದಾರೆ ಎನ್ನುವುದು ಅವರ ತಂಡದಿಂದ ಸಿಕ್ಕಿರುವ ಮಾಹಿತಿ.

    ಕಾಂತಾರ ಸಿನಿಮಾದ ಮುಹೂರ್ತ ಕಳೆದ ಬಾರಿ ಯಾವ ದೇವಸ್ಥಾನದಲ್ಲಿ ಆಗಿತ್ತೋ, ಮತ್ತೆ ಅದೇ ದೇವಸ್ಥಾನದಲ್ಲೇ ಕಾಂತಾರ ಪ್ರಿಕ್ವೆಲ್ (Prequel) ಮುಹೂರ್ತ ಆಗಲಿದೆಯಂತೆ. ಆನೆಗುಡಿ (Anegudi) ಗಣಪತಿ ದೇವಸ್ಥಾನದಲ್ಲೇ ಮುಹೂರ್ತ ಮಾಡಲು ಸಿದ್ದತೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆಗಸ್ಟ್ 27ನೇ ತಾರೀಖು ಕಾಂತಾರ ಪ್ರಕ್ವೆಲ್ ಗೆ ಮಹೂರ್ತ ನಿಗದಿಯಾಗಿದೆ. ಕಾಂತಾರ ಮೊದಲ ಭಾಗ ಕೂಡ ಆಗಸ್ಟ್ ನಲ್ಲಿ ಮುಹೂರ್ತ ಕಂಡಿತ್ತು. ಇದನ್ನೂ ಓದಿ:ಕನಕದಾಸನಾಗಿ ಕಂಗೊಳಿಸಲಿದ್ದಾರೆ ರಿಯಲ್‌ ಸ್ಟಾರ್‌ ಉಪೇಂದ್ರ

    ಆಗಸ್ಟ್ ನಲ್ಲಿ ಕಾಂತಾರ ಪ್ರಿಕ್ವೆಲ್ ಗೆ ಮುಹೂರ್ತವಾದರೆ ಸೆಪ್ಟೆಂಬರ್ ತಿಂಗಳಿಂದ ಚಿತ್ರೀಕರಣ ಆರಂಭಿಸಲಿದ್ದಾರಂತೆ ರಿಷಬ್ ಶೆಟ್ಟಿ. ಪಂಜುರ್ಲಿ ದೈವದ ಸುತ್ತವೇ ಚಿತ್ರಕಥೆ ಇರುವುದರಿಂದ ಕೆರಾಡಿ ಸುತ್ತಮುತ್ತವೇ ಶೂಟಿಂಗ್ ಆಗಲಿದೆ ಎನ್ನುವ ಮಾತು ಹರಿದಾಡುತ್ತಿದೆ. ಜೊತೆಗೆ ‘ಕಾಂತಾರ’ 2 ನಲ್ಲಿ ಯಾರೆಲ್ಲಾ ಕಲಾವಿದರು ಇರುತ್ತಾರೆ ಎಂಬ ಕುತೂಹಲವಿದೆ.

    ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರು ಕಾಂತಾರ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚಿದ್ದಾರೆ. ಹೊಂಬಾಳೆ ಫಿಲ್ಮ್ಸ್(Hombale Films) ನಿರ್ಮಾಣದಲ್ಲಿ ಕಾಂತರ ಚಿತ್ರ ಮೂಡಿ ಬಂದಿತ್ತು. ರಿಷಬ್‌ಗೆ ಸಪ್ತಮಿ ಗೌಡ (Saptami Gowda) ನಾಯಕಿಯಾಗಿ ನಟಿಸಿದ್ದರು. ದೈವ ಕಥೆಯುಳ್ಳ ಈ ಚಿತ್ರ ಸಕ್ಸಸ್ ಕಂಡಿತ್ತು. ಹಾಗಾಗಿ ಕಾಂತಾರ 2 ಚಿತ್ರದ ಮೇಲೆ ಅತೀ ನಿರೀಕ್ಷೆ ಮೂಡಿದೆ.

  • ‘ಕಾಂತಾರ 2’ ಸಿನಿಮಾ ಮಾಡಲು ಪಂಜುರ್ಲಿ ದೈವದಿಂದ ಸಿಕ್ತು ಅನುಮತಿ

    ‘ಕಾಂತಾರ 2’ ಸಿನಿಮಾ ಮಾಡಲು ಪಂಜುರ್ಲಿ ದೈವದಿಂದ ಸಿಕ್ತು ಅನುಮತಿ

    ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ಕಾಂತಾರ 2 ಬರುತ್ತಾ ಎನ್ನುವ ಅನುಮಾನ ಎಲ್ಲರಲ್ಲಿತ್ತು. ದೈವಗಳ ಕುರಿತು ಸಿನಿಮಾ ಮಾಡಲು ಕೆಲವರು ಆಕ್ಷೇಪವನ್ನೂ ವ್ಯಕ್ತ ಪಡಿಸಿದ್ದರಿಂದ ‘ಕಾಂತಾರ 2’ ಬಗ್ಗೆ ಸಹಜವಾಗಿಯೇ ಕುತೂಹಲ ಕೂಡ ಮೂಡಿತ್ತು. ಹಾಗಾಗಿಯೇ ರಿಷಬ್ ಶೆಟ್ಟಿ ಪಂಜುರ್ಲಿ ದೈವದ ಮೊರೆ ಹೋಗಿದ್ದರು. ದೈವ ಹಲವು ಷರತ್ತುಗಳೊಂದಿಗೆ ಒಪ್ಪಿಗೆ ನೀಡಿದೆ ಎಂದು ತಿಳಿದು ಬಂದಿದೆ.

    ಮಂಗಳೂರು ನಗರ ಹೊರವಲಯದ ಬಂದಲೆಯ ಮನೆಯಲ್ಲಿ ನಡೆದ  ಪಂಜುರ್ಲಿ ಕೋಲದಲ್ಲಿ ಕಾಂತಾರ ಸಿನಿಮಾದ ನಿರ್ದೇಶಕ ರಿಷಬ್ ಶೆಟ್ಟಿ, ನಿರ್ಮಾಪಕ ವಿಜಯ್ ಕಿರಗಂದೂರ್, ನಾಯಕಿ ಗೌತಮಿ ಗೌಡ ಸೇರಿದಂತೆ ಬಹುತೇಕ ಸದಸ್ಯರು ಹಾಜರಿದ್ದರು. ಕದ್ರಿ ಮಂಜುನಾಥೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣ ಅಡಿಗ ಅವರ ನೇತೃತ್ವದಲ್ಲಿ ನಡೆದ ಅಣ್ಣಪ್ಪ ಪಂಜುರ್ಲಿ ಕೋಲಾದಲ್ಲಿ ಕಾಂತರ 2 ಸಿನಿಮಾ ಮಾಡುವ ಕುರಿತು ರಿಷಬ್ ಒಪ್ಪಿಗೆ ಕೇಳಿದ್ದರು. ಇದನ್ನೂ ಓದಿ: ಕರ್ನಾಟಕದ ಹುಡುಗಿಯ ಜೊತೆ ಸಲ್ಮಾನ್ ಖಾನ್‌ಗೆ ಪ್ಯಾರ್

    ಮಧ್ಯೆರಾತ್ರಿ ನಡೆದ ದೈವದ ಜೊತೆಗಿನ ಮಾತುಕತೆಯಲ್ಲಿ ದೈವ ಹಲವು ಸೂಚನೆಗಳ ಜೊತೆ ಸಿನಿಮಾ ಮಾಡಲು ಅನುಮತಿ ನೀಡಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಸಿನಿಮಾದ ಕಥೆ ಮಾಡಲು ರಿಷಬ್ ಶೆಟ್ಟಿ ಅಂಡ್ ಟೀಮ್ ಹುರುಪಿನಿಂದಲೇ ತಯಾರಾಗಿದೆ. ಈ ಕುರಿತು ಚಿತ್ರತಂಡ ಅಧಿಕೃತವಾಗಿ ಮಾಹಿತಿ ನೀಡಿದೇ ಇದ್ದರೂ, ಕೋಲದಲ್ಲಿ ಭಾಗವಹಿಸಿದ್ದ ಹಲವರು ಈ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

    ಪಂಜುರ್ಲಿ ದೈವವು ಕೂಡ `ಕಾಂತಾರ 2′ ಮಾಡಲು ಅನುಮತಿ ನೀಡಿದೆ. ಜೊತೆಗೆ ಕೆಲವು ಸಲಹೆ ಮತ್ತು ಎಚ್ಚರಿಕೆಗಳನ್ನ ಕೂಡ ನೀಡಿದೆ. ಪಾರ್ಟ್ 2ನಲ್ಲಿ ಈ ಹಿಂದಿನ ಕಲಾವಿದರೇ ಮುಂದುವರೆಯಲಿದ್ದಾರೆ. ಇನ್ನೂ ಕಾಂತಾರ ಸಿನಿಮಾ ತಂಡದ ಜೊತೆ ರಿಷಬ್ ಕುಟುಂಬ ಕೂಡ ಕೋಲ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ನಟ ಚೇತನ್ ವಿರುದ್ಧ ಪಂಜುರ್ಲಿ ದೈವಕ್ಕೆ ದೂರು

    ನಟ ಚೇತನ್ ವಿರುದ್ಧ ಪಂಜುರ್ಲಿ ದೈವಕ್ಕೆ ದೂರು

    ಉಡುಪಿ: ಭೂತಾರಾಧನೆಯ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ನಟ ಚೇತನ್ (Actor Chetan) ವಿರುದ್ಧ ಇದೀಗ ಪಂಜುರ್ಲಿ (Panjurli) ದೈವಕ್ಕೆ ದೂರು ನೀಡಲು ನಿರ್ಧರಿಸಲಾಗಿದೆ.

    ಈ ಸಂಬಂಧ ಉಡುಪಿಯಲ್ಲಿ ಹಿರಿಯ ದೈವರಾಧಕ ಕುಮಾರ ಪಂಪದ ಮಾತನಾಡಿ, ಸಂಸ್ಕೃತಿಯ ಅವಹೇಳನ ಆದಾಗೆಲ್ಲ ನಾವು ದೈವದ ಮುಂದೆ ಪ್ರಾರ್ಥನೆ ಮಾಡುತ್ತೇವೆ. ನಾವು ಸೇವೆ ಕೊಡುವ ದೈವಗಳ ಮುಂದೆಯೇ ನಾವು ಪ್ರಾರ್ಥನೆ ಮಾಡುತ್ತೇವೆ. ನಮ್ಮ ಮೂಲ ಆರಾಧನೆಯ ಪಂಜುರ್ಲಿ ದೈವದ ಮುಂದೆ ಈ ಬಗ್ಗೆ ಪ್ರಾರ್ಥನೆ ಸಲ್ಲಿಸುತ್ತೇವೆ ಎಂದರು.

    ನಟರಿಗೆ ನಟನೆ ಮಾಡಲು ಗೊತ್ತಿರಬಹುದು. ನಾವು ದೈವಾರಾಧಕರು ನಮಗೆ ನಟಿಸಲು ಗೊತ್ತಿಲ್ಲ. ನಾವು ತಲೆತಲಾಂತರಗಳಿಂದ ಸತ್ಯವನ್ನು ಪಾಲನೆ ಮಾಡಿಕೊಂಡು ಬಂದವರು. ಭೂತಾರಾಧನೆಗೆ ಇಂತಿಷ್ಟು ವರ್ಷದ ಹಿನ್ನೆಲೆ ಎಂಬ ದಾಖಲೆ ನಮ್ಮಲ್ಲಿ ಇಲ್ಲ. ಯಾವುದೋ ಒಂದು ಪುಸ್ತಕ ಹಿಡಿದುಕೊಂಡು ಮಾತನಾಡುವುದು ತಪ್ಪು ಎಂದು ಗರಂ ಆದರು. ಇದನ್ನೂ ಓದಿ: ದೈವಾರಾಧನೆ ಹಿಂದುತ್ವದ ಭಾಗವಲ್ಲವೆಂದ ಚೇತನ್ ವಿರುದ್ಧ ದೂರು ದಾಖಲು

    ಕರಾವಳಿಯಾದ್ಯಂತ ಪರವ, ಪಂಪದ ನಲಿಕೆಯವರು ಜೀವಿಸುತ್ತಿದ್ದೇವೆ. ನಾವು ಅಲೆಮಾರಿಗಳು ಎಂಬ ಮಾತನ್ನು ಒಪ್ಪಲು ಸಾಧ್ಯವಿಲ್ಲ. ನಮ್ಮ ಹಿರಿಯರ ಕಾಲದಿಂದ ನಾವು ಹಿಂದೂ ಸಂಪ್ರದಾಯವನ್ನು ಆರಾಧನೆ ಮಾಡಿಕೊಂಡು ಬರುತ್ತಿದ್ದೇವೆ. ನಮ್ಮ ದೈವಗಳಿಗೆ ಮೂಲ ಶಬ್ದವೇ ತುಳು. ನಾವು ನಂಬಿಕೊಂಡ ಸತ್ಯದ ಮೂಲಕ ಚೇತನ್ ಗೆ ಪ್ರತಿಕ್ರಿಯೆ ಕೊಡುತ್ತೇವೆ ಎಂದು ಹೇಳಿದರು.

    ನಟ ಚೇತನ್ ಬಹಳ ದೊಡ್ಡ ಜ್ಞಾನಿ ಆಗಿರಬಹುದು. ನಮ್ಮ ನೆಲ, ನಮ್ಮ ಕುಲ ನಮ್ಮ ಆಚರಣೆಯ ಬಗ್ಗೆ ಮಾತನಾಡುವ ಜ್ಞಾನ ಇವರಿಗೆ ಇಲ್ಲ. ವ್ಯಕ್ತಿಗತವಾಗಿ ಇವರಿಗೆ ನಾವು ಉತ್ತರ ಕೊಡುವುದಿಲ್ಲ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಶೂಟಿಂಗ್‍ಗೆ ಕೋಣ ಕೊಡಲು ಹಿಂದೇಟು ಹಾಕಿದ್ದ ಭಟ್ರು- ಇದು ಕಾಂತಾರ ದಂತಕಥೆಯ ಇನ್‍ಸೈಡ್ ಸ್ಟೋರಿ

    Live Tv
    [brid partner=56869869 player=32851 video=960834 autoplay=true]

  • ಗಣಪತಿ ಗುಡಿ , ಪಂಜುರ್ಲಿ ದೈವಸ್ಥಾನ ನಿರ್ಮಾಣವಾದ್ರೆ ಬ್ರಹ್ಮಾವರ ಶುಗರ್ ಫ್ಯಾಕ್ಟರಿ ಅಭಿವೃದ್ಧಿ

    ಗಣಪತಿ ಗುಡಿ , ಪಂಜುರ್ಲಿ ದೈವಸ್ಥಾನ ನಿರ್ಮಾಣವಾದ್ರೆ ಬ್ರಹ್ಮಾವರ ಶುಗರ್ ಫ್ಯಾಕ್ಟರಿ ಅಭಿವೃದ್ಧಿ

    – ಆರೂಢ ಪ್ರಶ್ನೆಯಲ್ಲಿ ಕಂಡು ಬಂದ ಸೂಚನೆ

    ಉಡುಪಿ: ಫ್ಯಾಕ್ಟರಿ ಒಳಗೊಂದು ಗಣಪತಿ ಗುಡಿಯಾಗಲಿ. ಜೀರ್ಣವಾದ ಪಂಜುರ್ಲಿ ದೈವಕ್ಕೆ ಸಾನಿಧ್ಯ ನಿರ್ಮಿಸಿ. ನಾಗ ಸನ್ನಿಧಾನಕ್ಕೆ ಸೇವೆ ನಿರಂತರ ಮಾಡಿ. ಏಪ್ರಿಲ್ 14ರ ಒಳಗೆ ಪೂಜೆ ದೇವರ ಸೇವೆ ಎಲ್ಲಾ ನೆರವೇರಬೇಕು. ಇದು ಬ್ರಹ್ಮಾವರ ಶುಗರ್ ಫ್ಯಾಕ್ಟರಿಯಲ್ಲಿ ನಡೆದ ಆರೂಢ ಪ್ರಶ್ನೆಯ ಪ್ರಮುಖಾಂಶಗಳು.

    ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ದಾರ ಸಂದರ್ಭ ಪ್ರಶ್ನಾ ಚಿಂತನೆಗಳು ನಡೆಯುತ್ತದೆ. ಉಡುಪಿಯಲ್ಲಿ 20 ವರ್ಷದಿಂದ ಉದ್ಧಾರವೇ ಕಾಣದ ಶುಗರ್ ಫ್ಯಾಕ್ಟರಿಯಲ್ಲಿ ಶುಭ ಶುಕ್ರವಾರ ಆರೂಢ ಪ್ರಶ್ನೆಯನ್ನು ಆಯೋಜಿಸಲಾಗಿತ್ತು.

    1985 ರಲ್ಲಿ ಆರಂಭವಾದ ಬ್ರಹ್ಮಾವರ ಶುಗರ್ ಫ್ಯಾಕ್ಟರಿ 2003ಕ್ಕೆ ಕೊನೆಯ ಲೋಡು ಕಬ್ಬನ್ನು ಅರೆದು ಬೀಗ ಜಡಿದುಕೊಂಡಿತು. ಫ್ಯಾಕ್ಟರಿ ಮುಚ್ಚಿ ಎರಡು ದಶಕವಾಗುತ್ತಾ ಬಂದರೂ, ಫ್ಯಾಕ್ಟರಿಗೆ ಮರುಜೀವ ಬರುವ ಲಕ್ಷಣ ಕಾಣುತ್ತಿಲ್ಲ. ಜಮೀನಿನಲ್ಲೇ ದೋಷ ಇದೆ ಎಂದು ಕಂಡುಕೊಂಡ ಆಡಳಿತ ಮಂಡಳಿ ಆರೂಢ ಪ್ರಶ್ನೆಯಿಟ್ಟು ಸಮಸ್ಯೆಗೆ ಪರಿಹಾರ ಕಂಡುಕೊಂಡಿದೆ.

    ಆಡಳಿತ ಮಂಡಳಿ ಅಧ್ಯಕ್ಷ ಸುಪ್ರಸಾದ್ ಶೆಟ್ಟಿ ಮಾತನಾಡಿ, ಆರೂಢ ಪ್ರಶ್ನೆಯಲ್ಲಿ ಶೇ.90 ನಿಜವಾಗಿದೆ. ಸಾನಿಧ್ಯ ಜೀರ್ಣವಾಗಿದ್ದು ಕಂಡುಬಂದಿದೆ. ಪಂಜುರ್ಲಿ ದೇವಸ್ಥಾನ ನಿರ್ಮಾಣ ಮಾಡಲು ಸೂಚಿಸಿದ್ದಾರೆ. ಹೋಮ ಪೂಜೆ ಸೂಚನೆಯಂತೆ ನಡೆಸುತ್ತೇವೆ ಎಂದರು.

    ಕೇರಳದ ಜ್ಯೋತಿಷ್ಯ ರತ್ನ ಸ್ವಾಮಿನಾಥನ್ ಪಣಿಕ್ಕರ್ ಮತ್ತು ಉಡುಪಿಯ ಧಾರ್ಮಿಕ ವಿದ್ವಾಂಸ ಸಂತೋಷ್ ಆಚಾರ್ಯ ನೇತೃತ್ವದಲ್ಲಿ ಅರೂಢ ಪ್ರಶ್ನೆ ಚಿಂತನೆ ನಡೆದಿದೆ. ಕಾರ್ಖಾನೆ ನಿರ್ಮಾಣ ಹಂತದಲ್ಲಿ ನಾಗ ಸಾನಿಧ್ಯ, ದೈವ ಸಾನಿಧ್ಯಕ್ಕೆ ಚ್ಯುತಿ ಬಂದಿದ್ದು ಫ್ಯಾಕ್ಟರಿಯ ಸುತ್ತಲ ಜಮೀನು ಪರಿಶೀಲಿಸಲಾಯ್ತು. ದೈವ ಸನ್ನಿಧಾನ, ಪೂಜಾ ವಿಧಾನ ನೆರವೇರಿಸುವ ಸೂಚನೆ ಕೊಡಲಾಯ್ತು. ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದದ್ದನ್ನು ನೆರವೇರಿಸಿದರೆ ವೃದ್ದಿ ಆಗಲಿದೆ ಎಂದು ಪುದುವಾಳರು ಹೇಳಿದರು.

    ಮೂವತ್ತು ವರ್ಷದಲ್ಲಿ ಬಂದ ಸರ್ಕಾರಗಳು ಕಾರ್ಖಾನೆ ಉದ್ಧಾರಕ್ಕೆ , ರೈತರ ಅಭಿವೃದ್ಧಿ ಗೆ ಮನಸ್ಸು ಮಾಡಿಲ್ಲ. ಹೊಸ ಮಂಡಳಿ ಆಲೆಮನೆ ಮೂಲಕ ದೇಸಿ ಬೆಲ್ಲ ತಯಾರು ಮಾಡುತ್ತಿದೆ. ಇದೀಗ ಬಹು ನಿರೀಕ್ಷಿತ ಪ್ರಶ್ನಾಚಿಂತನೆ ನಡೆದಿದೆ. ಇನ್ನಾದರೂ ಫ್ಯಾಕ್ಟರಿ ಚುರುಕಾಗಲಿ. ಕೃಷಿ ಚಟುವಟಿಕೆ ನಿರಂತರ ನಡೆಯಲಿ ಎಂಬೂದು ರೈತರ, ಕೃಷಿಕರ ಆಶಯ.