‘ಕೆಜಿಎಫ್ 2′ (KGF 2) ನಟ ಯಶ್ (Yash) ಇದೀಗ ಸೆಲೆಬ್ರಿಟಿ ಟ್ರೈನರ್ ಕಿಟ್ಟಿ ಅವರ ಹೊಸ ಜಿಮ್ ಉದ್ಘಾಟಿಸಿದ್ದಾರೆ. ಪ್ರೇಮಿಗಳ ದಿನಾಚರಣೆಯಂದು ಪಾನಿಪುರಿ ಕಿಟ್ಟಿ ಅವರ ಹೊಸ ಜಿಮ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಯಶ್ ಭಾಗಿಯಾಗಿ ಹಾರೈಸಿದ್ದಾರೆ. ಇದನ್ನೂ ಓದಿ:ವ್ಯಾಲೆಂಟೈನ್ ದಿನದ ವಿಶೇಷ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್
ಜಿಮ್ ಟ್ರೈನರ್ ಕಿಟ್ಟಿ ಮತ್ತು ಯಶ್ ಹಲವು ವರ್ಷಗಳಿಂದ ಸ್ನೇಹಿತರು. ಯಶ್‌ಗೆ ಕಿಟ್ಟಿ ಫಿಟ್‌ನೆಸ್ ಟ್ರೈನರ್ ಆಗಿದ್ದಾರೆ. ಈ ಹಿಂದೆ ಕಿಟ್ಟಿ ಅವರ ಹಳೆಯ ಜಿಮ್ ಬ್ರ್ಯಾಂಚ್‌ಗಳನ್ನು ಯಶ್ ಚಾಲನೆ ನೀಡಿದ್ದರು. ಈ ಬಾರಿ ಕತ್ರಿಗುಪ್ಪೆ ಮುಖ್ಯ ರಸ್ತೆಯಲ್ಲಿ ‘ಕಿಟ್ಟೀಸ್ ಮಸಲ್ ಪ್ಲಾನೆಟ್’ ಎಂಬ ಜಿಮ್‌ಗೆ ಯಶ್ ಚಾಲನೆ ನೀಡಿದ್ದಾರೆ.
ಹೊಸ ಬ್ರ್ಯಾಂಚ್ ಉದ್ಘಾಟನೆ ಕಾರ್ಯಕ್ರಮಕ್ಕೆ ಕರೆದಾಗ ವ್ಯಾಲೆಂಟೈನ್ ದಿನ ಎಂಬುದು ಅವರ ಅರಿವಿಗೆ ಇರಲಿಲ್ಲ. ನನಗೂ ಇದರ ಬಗ್ಗೆ ಐಡಿಯಾ ಇರಲಿಲ್ಲ. ಆದರೆ ಯಶ್ ಖಾಸಗಿ ಕೆಲಸ ಮುಗಿಸಿ ಉದ್ಘಾಟನೆಯಲ್ಲಿ ಭಾಗಿಯಾಗಿರೋದಾಗಿ ತಿಳಿಸಿದರು. ಬಳಿಕ ಸ್ನೇಹಿತ ಕಿಟ್ಟಿ ಹೊಸ ಹೆಜ್ಜೆಗೆ ಯಶ್ ಶುಭಕೋರಿದ್ದರು.
ಯಶ್ ಜೊತೆ ಅಜಯ್ ರಾವ್, ನೆನಪಿರಲಿ ಪ್ರೇಮ್, ಅಮೃತಾ ಪ್ರೇಮ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಜಿಮ್ ಟ್ರೈನರ್ ಕಿಟ್ಟಿಗೆ ಶುಭಹಾರೈಸಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಇಂದು ಮಲೇಷ್ಯಾಗೆ ಹಾರಿದ್ದಾರೆ. ನಾಲ್ಕೈದು ಗೆಳೆಯರೊಂದಿಗೆ ವಿಶೇಷ ವಿಮಾನದಲ್ಲಿ ಪ್ರಯಾಣ ಬೆಳೆಸಿರುವ ಅವರು, ಇಂದು ಮಲೇಷ್ಯಾದಲ್ಲಿ (Malaysia) ಚಿನ್ನದ ಅಂಗಡಿಯೊಂದರ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲಿದ್ದಾರಂತೆ. ಅಲ್ಲದೇ, ಮಲೇಷ್ಯಾದಲ್ಲಿ ವಾಸವಿರುವ ಅವರ ಅಭಿಮಾನಿಗಳನ್ನು ಇಂದು ಅವರು ಭೇಟಿ ಮಾಡಲಿದ್ದಾರೆ. ಬೆಂಗಳೂರಿನಿಂದ ಹೊರಟಿರುವ ವಿಶೇಷ ವಿಮಾನದಲ್ಲಿ ಪಾನಿಪುರಿ ಕಿಟ್ಟಿ (Panipuri Kitty) ಸೇರಿದಂತೆ ಹಲವರು ಇದ್ದಾರೆ.
ಕೆಜಿಎಫ್ ಸಿನಿಮಾದ ನಂತರ ಯಶ್ (Yash) ಅಭಿಮಾನಿಗಳು ರಾಜ್ಯ, ದೇಶದ ಗಡಿಯನ್ನೂ ದಾಟಿದ್ದಾರೆ. ಅನೇಕ ದೇಶಗಳಲ್ಲಿ ಯಶ್ ಅಭಿಮಾನಿಗಳ (Fans) ಸಂಘಗಳಿವೆ. ಆಯಾ ರಾಜ್ಯಕ್ಕೆ ಯಶ್ ಭೇಟಿ ನೀಡಿದಾಗೆಲ್ಲ ಅವರ ಅಭಿಮಾನಿಗಳಿಗಾಗಿ ಒಂದಷ್ಟು ಸಮಯವನ್ನು ಮೀಸಲಿಡುತ್ತಾರೆ. ಅಲ್ಲದೇ, ಮನೆ ಮುಂದೆ ಬಂದ ಅಭಿಮಾನಿಗಳಿಗೂ ಟೈಮ್ ನೀಡುತ್ತಾರೆ. ಇದೀಗ ಮಲೇಷ್ಯಾ ಫ್ಯಾನ್ಸ್ ಮೀಟ್ ಮಾಡಲು ಮುಂದಾಗಿದ್ದಾರೆ.
ಇಂದು ಮಲೇಷ್ಯಾಗೆ ಬಂದಿಳಿದಿರುವ ತಮ್ಮ ನೆಚ್ಚಿನ ನಟನನ್ನು ನೋಡುವುದಕ್ಕಾಗಿ ಅಲ್ಲಿನ ಅಭಿಮಾನಿಗಳು ಕಾಯುತ್ತಿದ್ದಾರೆ ಎನ್ನುತ್ತಾರೆ ಯಶ್ ಆಪ್ತರು. ಚಿನ್ನದ ಅಂಗಡಿ ಉದ್ಘಾಟನೆಯ ನಂತರ ಮುಂದಿನ ಕಾರ್ಯಕ್ರಮದ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡದೇ ಇದ್ದರೂ, ಕಾರ್ಯಕ್ರಮದ ನಂತರ ಫ್ಯಾನ್ಸ್ ಭೇಟಿ ಮಾಡುವುದು ಖಚಿತ ಎನ್ನುತ್ತಾರೆ. ಇದನ್ನೂ ಓದಿ:‘ಟೋಬಿ’ ಶೆಟ್ಟರ ಕೆನ್ನೆಗೆ ಮುತ್ತಿಟ್ಟ ಚೈತ್ರಾ- ರಾಜ್ ಬಿ ಶೆಟ್ಟಿ ಸ್ಪಷನೆ
ಕೆಜಿಎಫ್ 2 ಸಿನಿಮಾದ ನಂತರ ಮುಂದಿನ ಚಿತ್ರದ ಬಗ್ಗೆ ಫ್ಯಾನ್ಸ್ ಕಾಯುತ್ತಿದ್ದಾರೆ. ಹೊಸ ಸಿನಿಮಾ ಯಾವಾಗ ಶುರು ಎಂದು ಕಳೆದ ಒಂದು ವರ್ಷದಿಂದಲೂ ಪ್ರಶ್ನೆ ಮಾಡುತ್ತಿದ್ದಾರೆ. ಆದರೆ, ಯಶ್ ಮಾತ್ರ ಯಾವುದೇ ಅಪ್ ಡೇಟ್ ನೀಡದೇ ಮೌನವಹಿಸಿದ್ದಾರೆ. ಹಾಗಂತ ಅವರು ಸುಮ್ಮನೆ ಕುಳಿತಿಯಲ್ಲ ಎನ್ನುವುದನ್ನೂ ಸ್ಪಷ್ಟ ಪಡಿಸಿದ್ದಾರೆ. ಹೊಸ ಸಿನಿಮಾದ ಕೆಲಸದಲ್ಲೇ ಬ್ಯುಸಿಯಾಗಿದ್ದೇನೆ ಎಂದೂ ಸ್ಪಷ್ಟನೆ ನೀಡಿದ್ದಾರೆ.
ಮೊನ್ನೆಯಷ್ಟೇ ನಂಜನಗೂಡಿಗೆ ಆಗಮಿಸಿದ್ದ ಯಶ್, ‘ನಾನು ದುಡ್ಡಿಗಾಗಿ ಸಿನಿಮಾ ಮಾಡುವುದಿಲ್ಲ. ಸಿನಿಮಾವನ್ನು ಯಾರೂ ಫ್ರಿಯಾಗಿ ನೋಡುವುದಿಲ್ಲ. ಹಾಗಾಗಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಿದೆ. ಒಂದು ನಿಮಿಷವನ್ನೂ ಹಾಳು ಮಾಡಿಕೊಳ್ಳದೇ ಹೊಸ ಸಿನಿಮಾದ ಕೆಲಸವನ್ನು ಮಾಡುತ್ತಿದ್ದೇನೆ. ಅತೀ ಶೀಘ್ರದಲ್ಲೇ ಅಪ್ ಡೇಟ್ ನೀಡುತ್ತೇನೆ ಎಂದಿದ್ದಾರೆ.
ಪಾನಿಪುರಿ ಕಿಟ್ಟಿ ಗಲಾಟೆಗೆ ಸಂಬಂಧಿಸಿದಂತೆ ನಟ ದುನಿಯಾ ವಿಜಯ್ ಅವರಿಗೆ ಪೊಲೀಸರು ನೋಟಿಸ್ ನೀಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಸ್ಟೇಶನ್ ಗೆ ಬರುವಂತೆ ತಿಳಿಸಲಾಗಿತ್ತು. ಆದರೆ, ಈ ವಾರ ನಿಗಧಿತ ಚಿತ್ರೀಕರಣ ಇರುವುದರಿಂದ ಮುಂದಿನ ವಾರ ವಿಚಾರಣೆಗೆ ಬರುವುದಾಗಿ ವಿಜಯ್ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಭೀಮ ಸೇರಿದಂತೆ ಹಲವು ಸಿನಿಮಾಗಳ ಚಿತ್ರೀಕರಣದಲ್ಲಿ ವಿಜಯ್ ಭಾಗಿಯಾಗಿದ್ದಾರೆ. ಹಾಗಾಗಿ ಮುಂದಿನ ವಾರ ವಿಚಾರಣೆಗೆ ಹಾಜರಾಗುವುದಾಗಿ ಅವರು ತಿಳಿಸಿದ್ದಾರೆ.
ಪಾನಿಪುರಿ ಕಿಟ್ಟಿ ಜೊತೆಗಿನ ಗಲಾಟೆಗೆ ಸಂಬಂಧಿಸಿದಂತೆ ಮೊನ್ನೆಯಷ್ಟೇ ಕಿಟ್ಟಿ ಮೇಲೆ ಎಫ್.ಐ.ಆರ್ ದಾಖಲಾಗಿತ್ತು. ಎಫ್.ಐ.ಆರ್ ದಾಖಲಾಗುತ್ತಿದ್ದಂತೆಯೇ ಕಿಟ್ಟಿ ಪೊಲೀಸ್ ಅಧಿಕಾರಿಯ ಮುಂದೆ ಹಾಜರು ಕೂಡ ಆಗಿದ್ದರು. ಇದೀಗ ಅದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ದುನಿಯಾ ವಿಜಯ್ ಅವರಿಗೆ ಪೊಲೀಸರು ನೋಟಿಸ್ ನೀಡಿದ್ದರು. ವಿಚಾರಣೆಗೆ ಹಾಜರಾಗುವಂತೆ ಹೈಗ್ರೌಂಡ್ ಪೊಲೀಸರಿಂದ ನೋಟಿಸ್ ನಲ್ಲಿ ತಿಳಿಸಲಾಗಿದೆ.
ಪಾನಿಪುರಿ ಕಿಟ್ಟಿ ವಿರುದ್ಧ ದುನಿಯಾ ವಿಜಯ್ ದೂರು ನೀಡಿದ್ದರು. ದೂರುದಾರ ಆಗಿರುವ ಹಿನ್ನೆಲೆಯಲ್ಲಿ ಈ ನೋಟಿಸ್ ನೀಡಲಾಗಿದೆ. ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡುವಂತೆ ಸೂಚಿಸಲಾಗಿದೆ. ಕಿಟ್ಟಿ ಮತ್ತು ದುನಿಯಾ ವಿಜಯ್ ಆಪ್ತ ಸ್ನೇಹಿತರು ಪ್ರಕರಣವೊಂದರಲ್ಲಿ ಇಬ್ಬರೂ ಬಡಿದಾಡಿಕೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಸ್ಪರ ಇಬ್ಬರೂ ದೂರು ದಾಖಲಿಸಿದ್ದರು. ಇದನ್ನೂ ಓದಿ: ಪುತ್ರಿ ಐಶ್ವರ್ಯ ಜೊತೆ ತಿರುಪತಿ ದೇವಸ್ಥಾನಕ್ಕೆ ರಜನಿಕಾಂತ್ ಭೇಟಿ
2018ರಲ್ಲಿ ಬೆಂಗಳೂರಿನ ವಸಂತ ನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ದೇಹದಾರ್ಢ್ಯ ಸ್ಪರ್ಧೆ ನಡೆದಿತ್ತು. ಈ ಸಂದರ್ಭದಲ್ಲಿ ಪಾನಿಪುರಿ ಕಿಟ್ಟಿ ಟೀಂಗೂ ಹಾಗೂ ದುನಿಯಾ ವಿಜಯ್ ಟೀಂ ಗೂ ಗಲಾಟೆ ನಡೆದಿತ್ತು. ಅಂದು ಸ್ಪರ್ಧೆ ಮಾಡಿದ್ದ ಪಾನಿಪುರಿ ಕಿಟ್ಟಿಯ ಸಹೋದರ ಮಾರುತಿ ಗೌಡನನ್ನು ಗಲಾಟೆ ನಂತರ ದುನಿಯಾ ವಿಜಯ್ ಕಾರಿನಲ್ಲಿ ಕರೆದುಕೊಂಡು ಹೋಗಿ, ಹಿಗ್ಗಾ ಮುಗ್ಗ ಥಳಿಸಿದ್ದರು ಎಂದು ಆರೋಪಿಸಲಾಗಿತ್ತು. ನಂತರ ಮಧ್ಯರಾತ್ರಿ ಪೊಲೀಸರ ಕರೆ ಮೇರೆಗೆ ವಾಪಸ್ ಕರೆತಂದಿದ್ದೂ ಬಿಟ್ಟಿದ್ದರು ಎಂದು ಹೇಳಲಾಗಿತ್ತು. ತೀವ್ರ ಥಳಿತಕ್ಕೊಳಗಾಗಿದ್ದ ಮಾರುತಿ ತಿಂಗಳುಗಟ್ಟಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೂಡ ಪಡೆದಿದ್ದರು.
Live Tv
[brid partner=56869869 player=32851 video=960834 autoplay=true]
ಪಾನಿಪುರಿ ಕಿಟ್ಟಿ ಜೊತೆಗಿನ ಗಲಾಟೆಗೆ ಸಂಬಂಧಿಸಿದಂತೆ ಮೊನ್ನೆಯಷ್ಟೇ ಕಿಟ್ಟಿ ಮೇಲೆ ಎಫ್.ಐ.ಆರ್ ದಾಖಲಾಗಿತ್ತು. ಎಫ್.ಐ.ಆರ್ ದಾಖಲಾಗುತ್ತಿದ್ದಂತೆಯೇ ಕಿಟ್ಟಿ ಪೊಲೀಸ್ ಅಧಿಕಾರಿಯ ಮುಂದೆ ಹಾಜರು ಕೂಡ ಆಗಿದ್ದರು. ಇದೀಗ ಅದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ದುನಿಯಾ ವಿಜಯ್ ಅವರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ಹೈಗ್ರೌಂಡ್ ಪೊಲೀಸರಿಂದ ನೋಟಿಸ್ ನಲ್ಲಿ ತಿಳಿಸಲಾಗಿದೆ.
ಪಾನಿಪುರಿ ಕಿಟ್ಟಿ ವಿರುದ್ಧ ದುನಿಯಾ ವಿಜಯ್ ದೂರು ನೀಡಿದ್ದರು. ದೂರುದಾರ ಆಗಿರುವ ಹಿನ್ನೆಲೆಯಲ್ಲಿ ಈ ನೋಟಿಸ್ ನೀಡಲಾಗಿದೆ. ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡುವಂತೆ ಸೂಚಿಸಲಾಗಿದೆ. ಕಿಟ್ಟಿ ಮತ್ತು ದುನಿಯಾ ವಿಜಯ್ ಆಪ್ತ ಸ್ನೇಹಿತರು ಪ್ರಕರಣವೊಂದರಲ್ಲಿ ಇಬ್ಬರೂ ಬಡಿದಾಡಿಕೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಸ್ಪರ ಇಬ್ಬರೂ ದೂರು ದಾಖಲಿಸಿದ್ದರು.
ಏನಿದು ಪ್ರಕರಣ? : 2018ರಲ್ಲಿ ಬೆಂಗಳೂರಿನ ವಸಂತ ನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ದೇಹದಾರ್ಢ್ಯ ಸ್ಪರ್ಧೆ ನಡೆದಿತ್ತು. ಈ ಸಂದರ್ಭದಲ್ಲಿ ಪಾನಿಪುರಿ ಕಿಟ್ಟಿ ಟೀಂಗೂ ಹಾಗೂ ದುನಿಯಾ ವಿಜಯ್ ಟೀಂ ಗೂ ಗಲಾಟೆ ನಡೆದಿತ್ತು. ಅಂದು ಸ್ಪರ್ಧೆ ಮಾಡಿದ್ದ ಪಾನಿಪುರಿ ಕಿಟ್ಟಿಯ ಸಹೋದರ ಮಾರುತಿ ಗೌಡನನ್ನು ಗಲಾಟೆ ನಂತರ ದುನಿಯಾ ವಿಜಯ್ ಕಾರಿನಲ್ಲಿ ಕರೆದುಕೊಂಡು ಹೋಗಿ, ಹಿಗ್ಗಾ ಮುಗ್ಗ ಥಳಿಸಿದ್ದರು ಎಂದು ಆರೋಪಿಸಲಾಗಿತ್ತು. ನಂತರ ಮಧ್ಯರಾತ್ರಿ ಪೊಲೀಸರ ಕರೆ ಮೇರೆಗೆ ವಾಪಸ್ ಕರೆತಂದಿದ್ದೂ ಬಿಟ್ಟಿದ್ದರು ಎಂದು ಹೇಳಲಾಗಿತ್ತು. ತೀವ್ರ ಥಳಿತಕ್ಕೊಳಗಾಗಿದ್ದ ಮಾರುತಿ ತಿಂಗಳುಗಟ್ಟಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೂಡ ಪಡೆದಿದ್ದರು. ಇದನ್ನೂ ಓದಿ: ಪುತ್ರಿ ಐಶ್ವರ್ಯ ಜೊತೆ ತಿರುಪತಿ ದೇವಸ್ಥಾನಕ್ಕೆ ರಜನಿಕಾಂತ್ ಭೇಟಿ
ಈ ಗಲಾಟೆ ನಂತರ ಎರಡೂ ಕಡೆ ಕೌಂಟರ್ ಕಂಪ್ಲೆಂಟ್ ದಾಖಲಾಗಿತ್ತು. ನನ್ನ ಮಗ ಸಾಮ್ರಾಟ್ ನಿಗೆ ಬೈದು ಬೆದರಿಕೆ ಹಾಕಿದ್ರು ಎಂದು ವಿಜಯ್ ದೂರು ನೀಡಿದ್ರು. ವಿಜಯ್ ಮೇಲೆ ಪಾನಿಪುರಿ ಕಿಟ್ಟಿ ಕೂಡ ದೂರು ದಾಖಲಿಸಿದ್ದರು. ಸದ್ಯ ವಿಜಯ್ ಮೇಲಿರುವ ಕೇಸ್ ನಡೀತಾ ಇದೆ. ಪಾನಿಪುರಿ ಕಿಟ್ಟಿಮೇಲೆ ನೀಡಿದ್ದ ದೂರು ಸಾಕ್ಷ್ಯಗಳ ಕೊರೆಯಿಂದಾಗಿ ಕ್ಲೋಸ್ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ವಿಜಯ್ ಹೈಕೋರ್ಟ್ ಮೆಟ್ಟಿಲು ಹತ್ತಿದ್ದರು. ಸದರಿ ಕೇಸ್ ಅನ್ನು ಗಮನಿಸಿದ ನ್ಯಾಯಾಲಯವು ಪಾನಿಪುರಿ ಕಿಟ್ಟಿ ಮತ್ತು ಮಾರುತಿ ಗೌಡ ಮೇಲೆ ಎಫ್.ಐ.ಆರ್ ಮಾಡುವಂತೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಸೂಚನೆ ನೀಡಿತ್ತು. ಇದೀಗ ಕೇಸ್ ದಾಖಲಾಗಿದೆ. ಮತ್ತು ಕಿಟ್ಟಿ ಹಾಜರ್ ಕೂಡ ಆಗಿದ್ದಾರೆ.
Live Tv
[brid partner=56869869 player=32851 video=960834 autoplay=true]
ದುನಿಯಾ ವಿಜಯ್ ಪುತ್ರನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಮ್ ತರಬೇತುದಾರ ಪಾನಿಪುರಿ ಕಿಟ್ಟಿ ಮೇಲೆ ಎಫ್.ಐ.ಆರ್ ದಾಖಲಿಸುವಂತೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ಹೈಕೋರ್ಟ್ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಪಾನಿಪುರಿ ಕಿಟ್ಟಿ ಮೇಲೆ ಎಫ್.ಐ.ಆರ್ ದಾಖಲಿಸಿದ್ದಾರೆ. ಹಾಗಾಗಿ ಸ್ವತಃ ಕಿಟ್ಟಿಯವರೇ ಸದಾಶಿವನಗರದ ಎಸಿಪಿ ಕಚೇರಿಗೆ ಬಂದು ಎಸಿಪಿ ಚಂದನ್ ಕುಮಾರ್ ಮುಂದೆ ಹಾಜರಾಗಿದ್ದಾರೆ. ಸದಾಶಿವನಗರದ ಎಸಿಪಿ ಕಚೇರಿಯಲ್ಲಿ ಕಿಟ್ಟಿ ವಿಚಾರಣೆ ನಡೆಸಲಾಗಿದೆ.
ನಟ ದುನಿಯಾ ವಿಜಯ್ ಮತ್ತು ಜಿಮ್ ತರಬೇತಿದಾರು ಪಾನಿಪುರಿ ಕಿಟ್ಟಿ ನಡುವೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಇದೀಗ ಮತ್ತೆ ಮರುಜೀವ ಪಡೆದಿದೆ. ಹೈಕೋರ್ಟ್ ಸೂಚನೆಯ ಮೇರೆಗೆ ದುನಿಯಾ ವಿಜಯ್ ಮಗನ ಮೇಲೆ ಹಲ್ಲೆ ಮಾಡಿದ್ದ ಪಾನಿಪುರಿ ಕಿಟ್ಟಿ ಮೇಲೆ ಎಫ್.ಐ.ಆರ್ ದಾಖಲಾಗಿದೆ. ಈ ಮೂಲಕ 2018 ರಲ್ಲಿ ನಡೆದ ಪ್ರಕರಣವನ್ನು ಮತ್ತೆ ರೀ ಓಪನ್ ಮಾಡಲಾಗಿದೆ. ಹೈಕೋರ್ಟ್ ಸೂಚನೆ ಮೇರೆಗೆ ಪಾನಿಪುರಿ ಕಿಟ್ಟಿ ಮತ್ತು ಮಾರುತಿ ಗೌಡ ಮೇಲೆ ಪೊಲೀಸರು ಎಫ್.ಐ.ಆರ್ ದಾಖಲಿಸಿದ್ದಾರೆ.
2018ರಲ್ಲಿ ಬೆಂಗಳೂರಿನ ವಸಂತ ನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ದೇಹದಾರ್ಢ್ಯ ಸ್ಪರ್ಧೆ ನಡೆದಿತ್ತು. ಈ ಸಂದರ್ಭದಲ್ಲಿ ಪಾನಿಪುರಿ ಕಿಟ್ಟಿ ಟೀಂಗೂ ಹಾಗೂ ದುನಿಯಾ ವಿಜಯ್ ಟೀಂ ಗೂ ಗಲಾಟೆ ನಡೆದಿತ್ತು. ಅಂದು ಸ್ಪರ್ಧೆ ಮಾಡಿದ್ದ ಪಾನಿಪುರಿ ಕಿಟ್ಟಿಯ ಸಹೋದರ ಮಾರುತಿ ಗೌಡನನ್ನು ಗಲಾಟೆ ನಂತರ ದುನಿಯಾ ವಿಜಯ್ ಕಾರಿನಲ್ಲಿ ಕರೆದುಕೊಂಡು ಹೋಗಿ, ಹಿಗ್ಗಾ ಮುಗ್ಗ ಥಳಿಸಿದ್ದರು ಎಂದು ಆರೋಪಿಸಲಾಗಿತ್ತು. ನಂತರ ಮಧ್ಯರಾತ್ರಿ ಪೊಲೀಸರ ಕರೆ ಮೇರೆಗೆ ವಾಪಸ್ ಕರೆತಂದಿದ್ದೂ ಬಿಟ್ಟಿದ್ದರು ಎಂದು ಹೇಳಲಾಗಿತ್ತು. ತೀವ್ರ ಥಳಿತಕ್ಕೊಳಗಾಗಿದ್ದ ಮಾರುತಿ ತಿಂಗಳುಗಟ್ಟಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೂಡ ಪಡೆದಿದ್ದರು. ಇದನ್ನೂ ಓದಿ: `ಕಾಂತಾರ’ ನೋಡಿ ತುಂಬಾ ಕಲಿತೆ: ರಿಷಬ್ ಚಿತ್ರಕ್ಕೆ ಹೃತಿಕ್ ರೋಷನ್ ಮೆಚ್ಚುಗೆ
ಈ ಗಲಾಟೆ ನಂತರ ಎರಡೂ ಕಡೆ ಕೌಂಟರ್ ಕಂಪ್ಲೆಂಟ್ ದಾಖಲಾಗಿತ್ತು. ನನ್ನ ಮಗ ಸಾಮ್ರಾಟ್ ನಿಗೆ ಬೈದು ಬೆದರಿಕೆ ಹಾಕಿದ್ರು ಎಂದು ವಿಜಯ್ ದೂರು ನೀಡಿದ್ರು. ವಿಜಯ್ ಮೇಲೆ ಪಾನಿಪುರಿ ಕಿಟ್ಟಿ ಕೂಡ ದೂರು ದಾಖಲಿಸಿದ್ದರು. ಸದ್ಯ ವಿಜಯ್ ಮೇಲಿರುವ ಕೇಸ್ ನಡೀತಾ ಇದೆ. ಪಾನಿಪುರಿ ಕಿಟ್ಟಿಮೇಲೆ ನೀಡಿದ್ದ ದೂರು ಸಾಕ್ಷ್ಯಗಳ ಕೊರೆಯಿಂದಾಗಿ ಕ್ಲೋಸ್ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ವಿಜಯ್ ಹೈಕೋರ್ಟ್ ಮೆಟ್ಟಿಲು ಹತ್ತಿದ್ದರು. ಸದರಿ ಕೇಸ್ ಅನ್ನು ಗಮನಿಸಿದ ನ್ಯಾಯಾಲಯವು ಪಾನಿಪುರಿ ಕಿಟ್ಟಿ ಮತ್ತು ಮಾರುತಿ ಗೌಡ ಮೇಲೆ ಎಫ್.ಐ.ಆರ್ ಮಾಡುವಂತೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಸೂಚನೆ ನೀಡಿತ್ತು. ಇದೀಗ ಕೇಸ್ ದಾಖಲಾಗಿದೆ. ಮತ್ತು ಕಿಟ್ಟಿ ಹಾಜರ್ ಕೂಡ ಆಗಿದ್ದಾರೆ.
Live Tv
[brid partner=56869869 player=32851 video=960834 autoplay=true]
ನಟ ದುನಿಯಾ ವಿಜಯ್ ಮತ್ತು ಜಿಮ್ ತರಬೇತಿದಾರು ಪಾನಿಪುರಿ ಕಿಟ್ಟಿ ನಡುವೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಇದೀಗ ಮತ್ತೆ ಮರುಜೀವ ಬಂದಿದೆ. ಹೈಕೋರ್ಟ್ ಸೂಚನೆಯ ಮೇರೆಗೆ ದುನಿಯಾ ವಿಜಯ್ ಮಗನ ಮೇಲೆ ಹಲ್ಲೆ ಮಾಡಿದ್ದ ಪಾನಿಪುರಿ ಕಿಟ್ಟಿ ಮೇಲೆ ಎಫ್.ಐ.ಆರ್ ದಾಖಲಾಗಿದೆ. ಈ ಮೂಲಕ 2018 ರಲ್ಲಿ ನಡೆದ ಪ್ರಕರಣವನ್ನು ಮತ್ತೆ ರೀ ಓಪನ್ ಮಾಡಲಾಗಿದೆ. ಹೈಕೋರ್ಟ್ ಸೂಚನೆ ಮೇರೆಗೆ ಪಾನಿಪುರಿ ಕಿಟ್ಟಿ ಮತ್ತು ಮಾರುತಿ ಗೌಡ ಮೇಲೆ ಪೊಲೀಸರು ಎಫ್.ಐ.ಆರ್ ದಾಖಲಿಸಿದ್ದಾರೆ.
2018ರಲ್ಲಿ ಬೆಂಗಳೂರಿನ ವಸಂತ ನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ದೇಹದಾರ್ಢ್ಯ ಸ್ಪರ್ಧೆ ನಡೆದಿತ್ತು. ಈ ಸಂದರ್ಭದಲ್ಲಿ ಪಾನಿಪುರಿ ಕಿಟ್ಟಿ ಟೀಂಗೂ ಹಾಗೂ ದುನಿಯಾ ವಿಜಯ್ ಟೀಂ ಗೂ ಗಲಾಟೆ ನಡೆದಿತ್ತು. ಅಂದು ಸ್ಪರ್ಧೆ ಮಾಡಿದ್ದ ಪಾನಿಪುರಿ ಕಿಟ್ಟಿಯ ಸಹೋದರ ಮಾರುತಿ ಗೌಡನನ್ನು ಗಲಾಟೆ ನಂತರ ದುನಿಯಾ ವಿಜಯ್ ಕಾರಿನಲ್ಲಿ ಕರೆದುಕೊಂಡು ಹೋಗಿ, ಹಿಗ್ಗಮುಗ್ಗ ಥಳಿಸಿದ್ದರು ಎಂದು ಆರೋಪಿಸಲಾಗಿತ್ತು. ನಂತರ ಮಧ್ಯರಾತ್ರಿ ಪೊಲೀಸರ ಕರೆ ಮೇರೆಗೆ ವಾಪಸ್ ಕರೆತಂದಿದ್ದೂ ಬಿಟ್ಟಿದ್ದರು ಎಂದು ಹೇಳಲಾಗಿತ್ತು. ತೀವ್ರ ಥಳಿತಕ್ಕೊಳಗಾಗಿದ್ದ ಮಾರುತಿ ತಿಂಗಳುಗಟ್ಟಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೂಡ ಪಡೆದಿದ್ದರು. ಇದನ್ನೂ ಓದಿ: ಮೊದಲ ಬಾರಿಗೆ ಮಗಳ ಮುಖ ಪರಿಚಯಿಸಿದ `ಯುವರತ್ನ’ ನಟಿ
ಈ ಗಲಾಟೆ ನಂತರ ಎರಡೂ ಕಡೆ ಕೌಂಟರ್ ಕಂಪ್ಲೆಂಟ್ ದಾಖಲಾಗಿತ್ತು. ನನ್ನ ಮಗ ಸಾಮ್ರಾಟ್ ನಿಗೆ ಬೈದು ಬೆದರಿಕೆ ಹಾಕಿದ್ರು ಎಂದು ವಿಜಯ್ ದೂರು ನೀಡಿದ್ರು. ವಿಜಯ್ ಮೇಲೆ ಪಾನಿಪುರಿ ಕಿಟ್ಟಿ ಕೂಡ ದೂರು ದಾಖಲಿಸಿದ್ದರು. ಸದ್ಯ ವಿಜಯ್ ಮೇಲಿರುವ ಕೇಸ್ ನಡೀತಾ ಇದೆ. ಪಾನಿಪುರಿ ಕಿಟ್ಟಿಮೇಲೆ ನೀಡಿದ್ದ ದೂರು ಸಾಕ್ಷ್ಯಗಳ ಕೊರೆತೆಯಿಂದಾಗಿ ಕ್ಲೋಸ್ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ವಿಜಯ್ ಹೈಕೋರ್ಟ್ ಮೆಟ್ಟಿಲು ಹತ್ತಿದ್ದರು. ಸದರಿ ಕೇಸ್ ಅನ್ನು ಗಮನಿಸಿದ ನ್ಯಾಯಾಲಯವು ಪಾನಿಪುರಿ ಕಿಟ್ಟಿ ಮತ್ತು ಮಾರುತಿ ಗೌಡ ಮೇಲೆ ಎಫ್.ಐ.ಆರ್ ಮಾಡುವಂತೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಸೂಚನೆ ನೀಡಿತ್ತು. ಇದೀಗ ಕೇಸ್ ದಾಖಲಾಗಿದೆ.
Live Tv
[brid partner=56869869 player=32851 video=960834 autoplay=true]
ಕೆಜಿಎಫ್ 2 ಸಿನಿಮಾದ ನಂತರ ಯಶ್ ಯಾರ ಜೊತೆ ಸಿನಿಮಾ ಮಾಡುತ್ತಿದ್ದಾರೆ ಎನ್ನುವುದು ಕೆಲವರಿಗೂ ಇನ್ನೂ ಸಸ್ಪೆನ್ಸ್ ಆಗಿಯೇ ಉಳಿದಿದೆ. ಈಗಾಗಲೇ ಯಶ್ ಅವರು ನರ್ತನ್ ಜೊತೆ ಸಿನಿಮಾ ಮಾಡಲಿದ್ದಾರೆ ಎಂದು ಪಬ್ಲಿಕ್ ಟಿವಿ ಡಿಜಿಟಲ್ ಈ ಹಿಂದೆಯೇ ಸುದ್ದಿ ಮಾಡಿದೆ. ಅಧಿಕೃತವಾಗಿ ಸಿನಿಮಾ ಟೀಮ್ ಆಗಲಿ ಅಥವಾ ಯಶ್ ಆಗಲಿ ಹೇಳಿಕೆ ನೀಡದೇ ಇದ್ದರೂ, ಆ ಸುದ್ದಿಯೇ ನಿಜ ಎನ್ನುವಂತೆ ಯಶ್ ಅವರ ಜಿಮ್ ಕೋಚ್ ಕೂಡ ಅಧಿಕೃತ ಮುದ್ರೆ ಎನ್ನುವಂತೆ ಖಚಿತ ಪಡಿಸಿದ್ದಾರೆ.
ಯಶ್ ಅವರಿಗೆ ಜಿಮ್ ಕೋಚ್ ಆಗಿರುವವರು ಪಾನಿಪುರಿ ಕಿಟ್ಟಿ ಅವರು. ಅವರು ಮಾಧ್ಯಮಗಳ ಜೊತೆ ಮಾತನಾಡುತ್ತಾ, ಯಶ್ ಅವರು ಇದೀಗ ತೂಕ ಇಳಿಸಿಕೊಳ್ಳುತ್ತಿದ್ದಾರೆ. ನರ್ತನ್ ಅವರ ಚಿತ್ರದಲ್ಲಿ ಅವರು ಬೇರೆ ರೀತಿಯಲ್ಲೇ ಕಾಣಿಸಿಕೊಳ್ಳಬೇಕಾಗಿದ್ದರಿಂದ ತೂಕ ಇಳಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. ಹಾಗಾಗಿ ಯಶ್ ಮತ್ತು ನರ್ತನ್ ಕಾಂಬಿನೇಷನ್ ನಲ್ಲೇ ಮುಂದಿನ ಸಿನಿಮಾ ಬರುವುದು ಬಹುತೇಕ ಪಕ್ಕಾ ಆಗಿದೆ. ಅಧಿಕೃತವಾಗಿ ಮಾಹಿತಿ ಹಂಚಿಕೊಳ್ಳುವುದು ಮಾತ್ರ ಬಾಕಿ ಇದೆ. ಇದನ್ನೂ ಓದಿ: ಜೈ ಶ್ರೀರಾಮ್ ಎನ್ನುತ್ತಾ ಮುಸ್ಲಿಮರನ್ನು ಹತ್ಯೆ ಮಾಡುವುದು, ಕಾಶ್ಮೀರ ಪಂಡಿತರ ಹತ್ಯೆಗೆ ಸಮ: ಸಾಯಿ ಪಲ್ಲವಿ ವೀಡಿಯೋ ವೈರಲ್
ತೂಕ ಏನೋ ಇಳಿಸಿಕೊಳ್ಳುತ್ತಿದ್ದಾರೆ. ಆದರೆ, ಗಡ್ಡಕ್ಕೆ ಏನು ಮಾಡುತ್ತಾರೆ ಎನ್ನುವ ಕುತೂಹಲ ಹಲವರದ್ದು. ಒಂದು ರೀತಿಯಲ್ಲಿ ಯಶ್ ಗಡ್ಡಕ್ಕೆ ಹೊಂದಿಕೊಂಡು ಹೋಗಿದ್ದಾರೆ. ಗಡ್ಡ ಬಿಟ್ಟು ಅವರನ್ನು ಊಹಿಸಿಕೊಳ್ಳಲು ಸಾಧ್ಯವಾ ಅನ್ನುವಂತೆ ಅದರೊಂದಿಗೆ ಬೆರೆತು ಹೋಗಿದ್ದಾರೆ. ಹಾಗಾಗಿ ಮುಂದಿನ ಸಿನಿಮಾದಲ್ಲಿ ಗಡ್ಡ ಇರತ್ತಾ? ಅಥವಾ ಇಲ್ಲವಾ? ಎನ್ನುವುದು ಕೂಡ ಚರ್ಚೆಗೆ ಆಹಾರವಾಗಿದೆ. ಬಲ್ಲ ಮೂಲಗಳ ಪ್ರಕಾರ, ಗಡ್ಡವನ್ನು ಇಟ್ಟುಕೊಂಡೇ ಕಥೆ ಹೆಣೆದಿದ್ದಾರೆ ಎನ್ನಲಾಗುತ್ತದೆ. ಅದೇ ರಗಡ್ ಲುಕ್ ನಲ್ಲೇ ಈ ಸಿನಿಮಾ ಬರಲಿದೆಯಂತೆ. ಗಡ್ಡ ಉಳಿಸಿಕೊಂಡು, ಒಂದಷ್ಟು ತೂಕ ಮಾತ್ರ ಕಳೆದುಕೊಳ್ಳುತ್ತಿದ್ದಾರಂತೆ ಯಶ್.
– ಪಾನಿಪುರಿ ಕಿಟ್ಟಿ ಹೊಸ ಪ್ರಯತ್ನಕ್ಕೆ ಶುಭ ಹಾರೈಸಿದ ರಾಕಿಂಗ್ ಸ್ಟಾರ್
– ‘ರಾಕಿ’ ಸಿನಿಮಾ ಆದಾಗಿನಿಂದ ಜೊತೆಲಿದ್ದಾರೆ
ಬೆಂಗಳೂರು: ನಮಗೆ ನಷ್ಟ ಮಾಡಿಕೊಂಡು, ಇನ್ನೊಬ್ಬರ ಮೇಲೆ ಪ್ರತಿಭಟನೆ ಮಾಡಬಾರದು ಎಂಬುದು ನನ್ನ ಅಭಿಪ್ರಾಯ ಎಂದು ರಾಕಿಂಗ್ ಸ್ಟಾರ್ ಯಶ್ ಹೇಳಿದರು.
ಯಶ್ ಸಿನಿಜರ್ನಿಯ ಆರಂಭದಿಂದ ಜೊತೆ ಇರೋ ಸ್ನೇಹಿತ ಮತ್ತು ಜಿಮ್‍ಟ್ರೈನರ್ ಪಾನಿಪುರಿ ಅವರು ಇಂದು ಮಹಾಲಕ್ಷ್ಮಿ ಲೇಔಟ್ ನಲ್ಲಿ ‘ರಿಚ್ಚಿ ಗ್ರಿಲ್ಸ್ ರೆಸ್ಟೋರೆಂಟ್’ ಪ್ರಾರಂಭಿಸಿದ್ದು, ಈ ಪ್ರಯತ್ನಕ್ಕೆ ಯಶ್ ಆಗಮಿಸಿ ಶುಭ ಹಾರೈಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಡಿ.31 ಬಂದ್ ಕುರಿತು ಮಾತನಾಡಿದರು. ಇದನ್ನೂ ಓದಿ: ನಮ್ಮ ಭೂಮಿ ಹೋದರೂ ಪರವಾಗಿಲ್ಲ, ಮೇಕೆದಾಟು ಯೋಜನೆ ಬೇಗ ಆರಂಭವಾಗಬೇಕು: ಡಿಕೆಶಿ
ಎಂಇಎಸ್ ಪುಂಡಾಟ ವಿಚಾರ ಕುರಿತು ಮಾತನಾಡಿದ ಅವರು, ಕನ್ನಡಿಗರಾಗಿ ಎಲ್ಲರ ಅಭಿಪ್ರಾಯ ಒಂದೇ ರೀತಿ ಇರುತ್ತೆ. ನೋವಾಗುತ್ತೆ, ಕೋಪ ಬರುತ್ತೆ. ಇನ್ನೊಂದು ಸಾಂಸ್ಕøತಿಗೆ ನೋವು ಮಾಡಬಾರದು. ಇಂತಹ ಘಟನೆ ನಡೆಯಬಾರದು. ತಪ್ಪು, ಇದು ಖಂಡನೀಯ. ನಮ್ಮ ವೃತ್ತಿಯಲ್ಲಿ ನಾಡು, ನುಡಿ ರಕ್ಷಣೆ ಮಾಡುತ್ತೇವೆ. ಬಂದ್ ವಿಚಾರವಾಗಿ ದೊಡ್ಡವರು ಏನ್ ನಿರ್ಧಾರ ಮಾಡ್ತಾರೆ ಮಾಡಲಿ. ನಮಗೆ ನಷ್ಟ ಮಾಡಿಕೊಂಡು, ಇನ್ನೊಬ್ಬರ ಮೇಲೆ ಪ್ರತಿಭಟನೆ ಮಾಡಬಾರದು ಅನ್ನೋದು ನನ್ನ ಅಭಿಪ್ರಾಯ ಎಂದರು.
ಗೆಳೆಯನ ಬಗ್ಗೆ ಮಾತನಾಡಿದ ಅವರು, ನಮ್ಮ ಈ ಲುಕ್‍ಗೆಲ್ಲಾ ಪಾನಿಪುರಿ ಕಿಟ್ಟಿನೇ ಕಾರಣ. ಪಾನಿಪುರಿ ಬ್ಯುಸಿನೆಸ್ ನಿಂದ ಕಿಟ್ಟಿ ಅವರ ಕೆರಿಯರ್ ಶುರುವಾಗಿತ್ತು. ಇವತ್ತು ಸಾಧನೆ ಮಾಡಿ ಒಂದು ರೆಸ್ಟೋರೆಂಟ್ ಮಾಡಿದ್ದಾರೆ. ಕಿಟ್ಟಿ ‘ರಾಕಿ’ ಸಿನಿಮಾ ಆದಾಗಿನಿಂದ ಜೊತೆಯಲ್ಲಿದ್ದಾರೆ ಎಂದು ಹಿಂದಿನ ದಿನಗಳನ್ನು ಮೆಲುಕು ಹಾಕಿದರು.
ಬೆಂಗಳೂರು: ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ಮತ್ತು ಜಿಮ್ ಟ್ರೈನರ್ ಪಾನಿಪುರಿ ಕಿಟ್ಟಿ ಜಗಳದ ಅಸಲಿ ಕತೆ ಈಗ ಬಹಿರಂಗವಾಗಿದೆ.
ದುನಿಯಾ ವಿಜಯ್ ನಟನೆಯ ಮಾಸ್ತಿಗುಡಿ ಚಿತ್ರಕ್ಕೆ ಪಾನಿಪುರಿ ಕಿಟ್ಟಿ, 40 ಲಕ್ಷ ಫೈನಾನ್ಸ್ ಮಾಡಿದ್ದರು. ಮಾಸ್ತಿಗುಡಿ ಚಿತ್ರದ ಇಬ್ಬರು ಖಳನಟರಾದ ಉದಯ್ ಮತ್ತು ಅನಿಲ್ ಮೂಲಕ ಕಿಟ್ಟಿ 40 ಲಕ್ಷ ಹಣ ಫೈನಾನ್ಸ್ ಮಾಡಿದ್ದರು. ನಂತರ ಚಿತ್ರ ಬಿಡುಗಡೆಯಾದ ಬಳಿಕ ಪಾನೀಪುರಿ ಕಿಟ್ಟಿ 40 ಲಕ್ಷ ಹಣ ವಾಪಸ್ ಕೇಳಿದರು. ಕಿಟ್ಟಿ ಫೈನಾನ್ಸ್ ಮಾಡಿದ್ದ ಹಣ ನೀಡಲು ಚಿತ್ರ ನಿರ್ಮಾಪಕ ಸುಂದರ್ ಗೌಡ ಮತ್ತು ವಿಜಯ್ ಮೀನಾ ಮೇಷ ಎಣಿಸಿದ್ದು ಕಿಟ್ಟಿ ಬೇಸರಕ್ಕೆ ಕಾರಣವಾಗಿದೆ.
ಮಾಸ್ತಿಗುಡಿ ಚಿತ್ರದ ಖಳನಟ ಅನಿಲ್ ಮೂಲಕ 40 ಲಕ್ಷ ಫೈನಾನ್ಸ್ ಕೊಟ್ಟಿದ್ದ ಕಿಟ್ಟಿ ಬಳಿಕ ಹಣ ವಾಪಸ್ ಕೇಳಿದ್ದರು. ಈ ವೇಳೆ ಸದ್ಯಕ್ಕೆ ಹಣ ಇಲ್ಲ, ಫಿಲಂ ಲಾಸ್ ಆಗೋಯ್ತು ಅಂತಾ ವಿಜಯ್ ಮತ್ತು ನಿರ್ಮಾಪಕ ಸುಂದರ್ ಪಿ ಗೌಡ ಹೇಳಿದ್ದರು. ಅಲ್ಲದೇ ಇಂದು ಕೊಡ್ತೀವಿ, ನಾಳೆ ಕೊಡ್ತೀವಿ ಅಂತ ಹೇಳಿ ದಿನ ಕಳೆದಂತೆ ಮಾತಿನ ವರಸೆ ಬದಲಾಯಿಸಿದ್ದರು. ಹೀಗೆ ಘಟನೆ ಹಿಂದಿನ ಹಲವು ಸತ್ಯ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಫೈನಾನ್ಸ್ ವಿಚಾರ ತಾರಕ್ಕೇರುತ್ತಿದ್ದಂತೆ ಅನಿಲ್‍ಗೆ ತಾನೇ ಹಣ ಕೊಟ್ಟಿದ್ದು ಅವರ ಬಳಿ ತೆಗೆದುಕೋ ಎಂದು ದುನಿಯಾ ವಿಜಿ ಹಾಗೂ ಸುಂದರ್ ಗೌಡ ಹೇಳಿದ್ದಾರೆ. ಇದೇ ವಿಚಾರದಿಂದ ಇಬ್ಬರ ನಡುವೆ ಸಣ್ಣ ಮನಸ್ತಾಪ ಹುಟ್ಟಿದ್ದು, ಆಪ್ತ ಸ್ನೇಹಿತರ ನಡುವೆ ದ್ವೇಷದ ಕಿಡಿ ಹೊತ್ತಿಸಿತ್ತು. ಅಂದಿನಿಂದ ವಿಜಯ್ ಮತ್ತು ಕಿಟ್ಟಿ ಹಾವು ಮುಂಗುಸಿಯಂತಾಗಿದ್ದು, ಕಳೆದ ಶನಿವಾರ ಅಂಬೇಡ್ಕರ್ ಭವನದಲ್ಲಿ ನಡೆದ ಬಾಡಿ ಬೀಲ್ಡಿಂಗ್ ಕಾಂಪಿಟೇಷನ್ ವೇಳೆ ಸ್ಫೋಟಗೊಂಡಿದೆ ಎನ್ನಲಾಗಿದೆ.
ಸದ್ಯ ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿರುವ ಕಿಟ್ಟಿ, ನಾನು ಯಾವುದೇ ಫೈನಾನ್ಸ್ ಮಾಡಿಲ್ಲ. ಮಾಸ್ತಿಗುಡಿಗೆ 40 ಲಕ್ಷ ಕೊಟ್ಟಿದ್ದೆ ಎನ್ನುವುದು ಸುಳ್ಳು. ಅನಿಲ್ ಹಣ ಹೂಡಿದ್ದರು ಎಂದು ಹೇಳಿದ್ದಾರೆ. ಸದ್ಯ ಪ್ರಕರಣದ ವಿಚಾರಣೆ ನಡೆಯುತ್ತಿದೆ.
ಬೆಂಗಳೂರು: ನಟ ದುನಿಯಾ ವಿಜಿ ಜಾಮೀನು ಅರ್ಜಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ. ಈ ನಡುವೆ ರಾಜಿ ಸಂಧಾನದ ಊಹಾಪೋಹ ಕೇಳಿ ಬಂದಿದ್ದು, ಈ ಬಗ್ಗೆ ಸ್ವತಃ ಪಾನಿಪುರಿ ಕಿಟ್ಟಿ ಸ್ಪಷ್ಟನೆ ಕೊಟ್ಟಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಕಿಟ್ಟಿ, ನಾವು ದೇವರನ್ನು ನಂಬಿದ್ದೇವೆ. ನ್ಯಾಯ ಸಿಗಲಿ, ಸಿಗದಿರಲಿ. ಆದರೆ ಕಾನೂನು ಏನು ಹೇಳುತ್ತದೋ ಅದಕ್ಕೆ ನಾವು ಬದ್ಧರಾಗಿರುತ್ತೇವೆ. ನಾನು ಕಾನೂನು ಹೋರಾಟ ಮಾಡುತ್ತೇನೆ. ಕಾನೂನು ಚೌಕಟ್ಟಿನೊಳಗೆ ಇರುತ್ತೀನಿ. ಯಾವ ರಾಜಿ ಸಂಧನಾನೂ ಮಾಡಿಕೊಳ್ಳಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವಿಜಿ ಮಗನನ್ನ ಕಾಡಿಸಿಲ್ಲ, ಅವರೇ ಕಿಟ್ಟಿ ಎಲ್ಲಿದ್ದಾನೆ ಅಂತಾ ಹಲ್ಲೆ ಮಾಡಿದ್ರು: ಮಾರುತಿ ಗೌಡ
ದುನಿಯಾ ವಿಜಿ ಪತ್ನಿ ನಾಗರತ್ನ ಅವರು ಬಂದರೂ ಸಂಧಾನಕ್ಕೆ ನಾನು ಬಗ್ಗಲ್ಲ. ತನ್ನ ಪತಿಯನ್ನ ಹೇಗೆ ಉಳಿಸಿಕೊಳ್ಳಬೇಕು ಅನ್ನೋ ಆಸೆ ನಾಗರತ್ನ ಅವರಿಗೆ ಇದೆಯೋ ಹಾಗೇ ನನ್ನ ಮಗನನ್ನ ಕಾಪಾಡಿಕೊಳ್ಳಬೇಕು ಅನ್ನೋ ಆಸೆ ನನಗೂ ಇದೆ. ನನ್ನ ಮಗನಿಗೆ ತುಂಬಾ ನೋವಾಗಿದೆ ನಾನು ಯಾವ ಸಂಧಾನವನ್ನು ಮಾಡಿಕೊಳ್ಳಲ್ಲ. ಜಾಮೀನು ಸಿಗಲಿ ಬಿಡಲಿ ಕಾನೂನು ಚೌಕಟ್ಟಿನೊಳಗೆ ಇರುತ್ತೀನಿ. ಹೋರಾಟ ಮಾಡುತ್ತೇನೆ ಎಂದು ಪಾನಿಪುರಿ ಕಿಟ್ಟಿ ಅವರು ಸ್ಪಷ್ಟಪಡಿಸಿದ್ದಾರೆ.
ವಿಜಯ್ ಅವರ ಜಾಮೀನು ಅರ್ಜಿಯನ್ನು ಈ ಹಿಂದೆ ಮ್ಯಾಜಿಸ್ಟ್ರೇಟ್ ಕೋರ್ಟ್ ವಜಾಗೊಳಿಸಿತ್ತು. ಹೀಗಾಗಿ ಜಾಮೀನಿಗಾಗಿ ವಿಜಿ ಸೆಷನ್ಸ್ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಸೆಷನ್ಸ್ ಕೋರ್ಟ್ ನಲ್ಲಿ ಶನಿವಾರ ಅರ್ಜಿ ವಿಚಾರಣೆ ನಡೆದಿದೆ. ಎರಡೂ ಕಡೆಯ ವಾದವನ್ನು ಆಲಿಸಿದ ಕೋರ್ಟ್ ಆದೇಶವನ್ನು ಅಕ್ಟೋಬರ್ 1ಕ್ಕೆ ಕಾಯ್ದಿರಿಸಿದೆ.