ಬೆಂಗಳೂರು: ಪಾನಿಪೂರಿ (Panipuri) ತಿನ್ನೋಕೆ ಹೋದ ವೇಳೆ ಯುವಕರ ನಡುವೆ ಗಲಾಟೆ ನಡೆದು ಒಂದೇ ಪಂಚ್‌ಗೆ ಯುವಕ ಪ್ರಾಣ ಕಳೆದುಕೊಂಡಿರುವ ಘಟನೆ ಬೆಂಗಳೂರಿನ ಪುಟ್ಟೇನಹಳ್ಳಿಯ (Puttenahalli) ಬಳಿಯ ಅರಕೆರೆಯಲ್ಲಿ ನಡೆದಿದೆ.
ಬಿಹಾರದ (Bihar) ಮೂಲದ ಭೀಮಕುಮಾರ್ (25) ಮೃತ ದುರ್ದೈವಿ. ಸ್ನೇಹಿತರೊಂದಿಗೆ ಪಾನಿಪೂರಿ ತಿನ್ನಲು ಹೋದ ವೇಳೆ ಭೀಮಕುಮಾರ್ ಮತ್ತು ಸಲ್ಮಾನ್ ನಡುವೆ ಗಲಾಟೆ ಆಗಿತ್ತು. ಭೀಮಕುಮಾರ್‌ನ ಕತ್ತಿನ ಭಾಗಕ್ಕೆ ಸಲ್ಮಾನ್ ಬಲವಾಗಿ ಒಂದು ಪಂಚ್ ಕೊಟ್ಟಿದ್ದ. ಪರಿಣಾಮ ಭೀಮಕುಮಾರ್ ಪ್ರಜ್ಞೆ ಕಳೆದುಕೊಂಡು ಕೆಳಗೆ ಬಿದ್ದಿದ್ದ. ಇದನ್ನೂ ಓದಿ: ಸಾಲಬಾಧೆ – ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನ, ಮೂವರು ಸಾವು
ಬಳಿಕ ಜೊತೆಗಿದ್ದ ಯುವಕರು, ಭೀಮಕುಮಾರ್‌ನನ್ನ ಮನೆಗೆ ಕರೆದುಕೊಂಡು ಹೋಗಿ ಹಾರೈಕೆ ಮಾಡಿದ್ದರು. ಆದರೆ ಮೂರು ದಿನದ ಬಳಿ ಮನೆಯಲ್ಲೇ ಆತ ಸಾವನ್ನಪ್ಪಿದ್ದಾನೆ. ಈ ಘಟನಾ ಸಂಬಂಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಪಾನಿಪುರಿಗೆ (Panipuri) ಬಳಸುವ ರಾಸಾಯನಿಕಗಳ ಬ್ಯಾನ್ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಸುಳಿವು ನೀಡಿದ್ದಾರೆ.
ಪಾನಿಪುರಿ ಸ್ಯಾಂಪಲ್ ಟೆಸ್ಟ್ ವರದಿ ಆರೋಗ್ಯ ಇಲಾಖೆ (Health dept) ಕೈ ಸೇರಿದ ಬೆನ್ನಲ್ಲೆ ಈ ಮಾಹಿತಿಯನ್ನು ಅವರು ಹಂಚಿಕೊಂಡಿದ್ದಾರೆ. ಪಾನಿಪುರಿ ತಯಾರಿಸಲು ಬಳಸುವ ಕೃತಕ ಬಣ್ಣದಲ್ಲಿ ಸನ್ ಸೆಟ್ ಯೆಲ್ಲೊ, ರೋಡೋಮೈನ್ ಸೇರಿದಂತೆ ಐದು ರಾಸಾಯನಿಕ ಅಂಶಗಳು ಪತ್ತೆಯಾಗಿವೆ. ಸೋಮವಾರ ಈ ಬಗ್ಗೆ ಅಧಿಕೃತವಾಗಿ ಅವರು ಆದೇಶ ಪ್ರಕಟವಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಲಿಂಗಾಯತರನ್ನು ಸಿಎಂ ಮಾಡಿ, ಆಗದೇ ಇದ್ದರೆ ಡಿಸಿಎಂ ಮಾಡಿ: ರಂಭಾಪುರಿ ಶ್ರೀ
ಗೋಬಿ, ಕಬಾಬ್, ಕಾಟನ್ ಕ್ಯಾಂಡಿ ಬಗ್ಗೆ ಈಗಾಗಲೇ ಕ್ರಮಕೈಗೊಳ್ಳಲಾಗಿದೆ. ಪಾನಿಪೂರಿಗೆ ಬಳಸುವ ಕೆಮಿಕಲ್ ಬ್ಯಾನ್‍ಗೆ ಆದೇಶ ಮಾಡಲಾಗುತ್ತದೆ. ತಯಾರಕರು ಬ್ಯಾನ್ ಮಾಡಿದ ಮೇಲೂ ಬಳಕೆ ಮಾಡಬಾರದು. ಈ ಬಗ್ಗೆ ಜನರು ಕೂಡ ಎಚ್ಚರಿಕೆವಹಿಸಬೇಕು. ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಡಿಕೆಶಿಗೆ ಸಿಎಂ ಸ್ಥಾನದ ಬಗ್ಗೆ ಚಂದ್ರಶೇಖರನಾಥ ಸ್ವಾಮೀಜಿ ಹೇಳಿಕೆ ವಿಚಾರವಾಗಿ, ಯಾವ ಕಾರಣಕ್ಕೋ ಅವರು ಹೇಳಿಕೆ ಕೊಟ್ಟಿದ್ದಾರೆ. ಇದೆಲ್ಲ ಅಪ್ರಸ್ತುತ. ಸಿಎಂ ಅವರು ಇದ್ದಾಗ ಇಥರದ್ದೆಲ್ಲ ಚರ್ಚೆ ಅವಶ್ಯಕತೆ ಇಲ್ಲ ಎಂದಿದ್ದಾರೆ.
ಹಾಲಿನ ದರದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ, ಹಾಲಿನ ಪ್ರಮಾಣ ಹೆಚ್ಚಳದಿಂದ ದರ ಹೆಚ್ಚಳ ಮಾಡಿದ್ದೇವೆ. ಹಾಲು ಚೆಲ್ಲುವ ಬದಲು ಜನರಿಗೆ ಕೊಡಲು, ರೈತರಿಗೆ ಅನುಕೂಲ ಆಗುವಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ವಿಚಾರವನ್ನು ಬಿಜೆಪಿಯವರು ತಿಳಿದುಕೊಳ್ಳಬೇಕು. ಹೈನುಗಾರಿಕೆ ಬೆಳೆಯಬಾರದು, ರೈತರಿಗೆ ಒಳ್ಳೆಯದಾಗಬಾರದು ಎಂಬುದನ್ನು ಬಿಜೆಪಿಯವರ ಉದ್ದೇಶ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಗೋಬಿ, ಕಾಟನ್ ಕ್ಯಾಂಡಿ ಆಯ್ತು.. ಈಗ ಚಿಕನ್, ಫಿಶ್ ಕಬಾಬ್‌ಗೆ ಕರ್ನಾಟಕ ಶಾಕ್!
ಬೆಂಗಳೂರು: ಗೋಬಿ, ಕಬಾಬ್ ಬಳಿಕ ಪಾನಿಪುರಿಯಲ್ಲಿ (Panipuri) ಕ್ಯಾನ್ಸರ್‌ಕಾರಕ (Cancer) ಅಂಶಗಳು ಪತ್ತೆಯಾಗಿದೆ. ಬೆಂಗಳೂರಿನ 49 ಪ್ರದೇಶಗಳಿಂದ ಸಂಗ್ರಹಿಸಿದ ಪಾನಿಪುರಿ ತಯಾರಿಕೆ ಪದಾರ್ಥಗಳಲ್ಲಿ ಕ್ಯಾನ್ಸರ್‌ಕಾರಕ ಇರೋದು ಪತ್ತೆಯಾಗಿದೆ.
ವಿದ್ಯಾರ್ಥಿಗಳು, ಯುವತಿಯರು ಪಾನಿಪುರಿ ಅಂದರೆ ಬಾಯಿ ಬಾಯಿ ಬಿಡುತ್ತಾರೆ. ಪಾನಿಪುರಿ ತಿನ್ನೋಕೆ ಸಾಲು ಗಟ್ಟಿ ನಿಲ್ಲುತ್ತಾರೆ. ಅಂತಹ ಪಾನಿಪುರಿ ಪ್ರಿಯರಿಗೆ ಇದು ಶಾಕಿಂಗ್ ನ್ಯೂಸ್. ಪಾನಿಪುರಿಗೆ ಬಳಸುವ ಸಾಸ್ ಮತ್ತು ಮೀಟಾ ಖಾರದ ಪುಡಿಯಲ್ಲಿ ಕ್ಯಾನ್ಸರ್‌ಕಾರಕ ಇರೋದು ಪತ್ತೆಯಾಗಿದೆ. ಜೊತೆಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ (Department of Food Safety and Quality) ಬೆಂಗಳೂರು ಸೇರಿದಂತೆ ರಾಜ್ಯದ 79 ಕಡೆ ಪಾನಿಪುರಿ ಮಾದರಿಗಳನ್ನು ಸಂಗ್ರಹ ಮಾಡಿ ಪರೀಕ್ಷೆಗೆ ಒಳಪಡಿಸಿದಾಗ ಅದರಲ್ಲಿ ಹಾನಿಕಾರಕ ಅಂಶ ಇರೋದು ಪತ್ತೆಯಾಗಿದೆ. ಇನ್ನು ಬೆಂಗಳೂರಿನ 19 ಕಡೆಗಳಲ್ಲಿ ಕ್ಯಾನ್ಸರ್‌ಕಾರಕವಿರುವ ಸಾಸ್, ಮೀಟಾ ಖಾರದ ಪುಡಿ ಬಳಸುತ್ತಿರೋದು ವರದಿಯಾಗಿದೆ. ಇದನ್ನೂ ಓದಿ: ಆಗುಂಬೆ ಘಾಟಿಯಲ್ಲಿ ನಾಳೆಯಿಂದ ಭಾರಿ ವಾಹನಗಳ ಸಂಚಾರ ನಿಷೇಧ
ಆಹಾರ ಮತ್ತು ಸುರಕ್ಷತಾ ಇಲಾಖೆ ಟೆಸ್ಟ್‌ನಲ್ಲಿ ಸನ್‌ಸೆಟ್ ಯಲ್ಲೋ 1, ಸನ್‌ಸೆಟ್ ಯಲ್ಲೋ 2 ಜೊತೆಗೆ ಬ್ರಿಲಿಯಂಟ್ ಬ್ರೂ ಮತ್ತು ಕಾರ್ಮೋಸಿಯಸ್ ರಾಸಾಯನಿಕ ಅಂಶ ಬೆರಕೆ ಆಗಿರೋದು ಪತ್ತೆಯಾಗಿದೆ. ಈ ಹಾನಿಕಾರಕ ಅಂಶಗಳು ಮನುಷ್ಯನ ದೇಹ ಸೇರಿದರೆ ಆರೋಗ್ಯ ಕ್ಷೀಣಿಸುತ್ತಾ ಹೋಗಲಿದೆ. ಹಾಗಾಗಿ ಕ್ಯಾನ್ಸರ್‌ಕಾರಕ ಆಗಿರೋ ಕಲಬೆರಕೆ ಬೆರೆಸಬಾರದು ಎನ್ನುತ್ತಿದ್ದಾರೆ. ಈ ವಾರದಲ್ಲಿ ಪಾನಿಪುರಿಗೆ ಹಾಕೋ ಸಾಸ್ ಮತ್ತು ಮಿಟಾ ಬ್ಯಾನ್ ಮಾಡೋಕೆ ನಿರ್ಧರಿಸಿದ್ದು, ಅಧಿಕೃತ ಘೋಷಣೆ ಮಾಡಲಿದ್ದಾರೆ. ಇದನ್ನೂ ಓದಿ: ಜುಲೈ 3 ರಿಂದ ಜಿಯೋದಿಂದ ಹೊಸ ಅನ್‌ಲಿಮಿಟೆಡ್ ಪ್ಲಾನ್
ಒಟ್ಟಾರೆ ಕಾಟನ್ ಕ್ಯಾಂಡಿ, ಗೋಬಿ, ಕಬಾಬ್ ಬಳಿಕ ಪಾನಿಪುರಿ ತಯಾರಿಕೆಯಲ್ಲಿ ಬಳಸುವ ಸಾಸ್‌ನಲ್ಲೂ ಹಾನಿಕಾರಕ ಇರೋದು ಪತ್ತೆಯಾಗಿದೆ. ಈ ವಾರದಲ್ಲಿ ಹಾನಿಕಾರಕ ರಾಸಾಯನಿಕ ಅಂಶಗಳನ್ನು ಬ್ಯಾನ್ ಮಾಡುವ ಸಾಧ್ಯತೆ ಇದೆ. ಇದನ್ನೂ ಓದಿ: ಕೊಡಗಿನಲ್ಲಿ ಭಾರೀ ಮಳೆ- ದುಬಾರೆ ಆನೆ ಶಿಬಿರಕ್ಕೆ ಪ್ರವಾಸಿಗರಿಗೆ ನಿಷೇಧ
ಬೆಂಗಳೂರು: ಪಾನಿಪುರಿ (Panipuri) ಕೊಡಿಸುತ್ತೇನೆ ಎಂದು ಕರೆದುಕೊಂಡು ಹೋಗಿ 7 ವರ್ಷದ ಬಾಲಕಿ ಮೇಲೆ ನೀಚ ವ್ಯಕ್ತಿಯೋರ್ವ ಅತ್ಯಾಚಾರ (Rape) ಎಸಗಿದ ಘಟನೆ ಅಶೋಕನಗರ (Ashok Nagar) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಾಲಕಿಯ ತಾಯಿ ಮೂಕರಾಗಿದ್ದು, ತಾಯಿ ಹಾಗೂ ಮಗು ಪ್ರತಿಷ್ಠಿತ ಮಾಲ್‌ವೊಂದರ ಬಳಿ ಭಿಕ್ಷೆ ಬೇಡುತ್ತಿದ್ದರು. ಈ ವೇಳೆ ಬಾಲಕಿ ಮೇಲೆ 54 ವರ್ಷದ ವ್ಯಕ್ತಿ ಅತ್ಯಾಚಾರ ಎಸಗಿದ್ದಾನೆ. ಮೆಗ್ರತ್ ರೋಡ್ ಮುಖ್ಯರಸ್ತೆ ಕಾಮಗಾರಿ ಹಿನ್ನೆಲೆ ರಸ್ತೆಯಲ್ಲಿ ಹಿಟಾಚಿಯೊಂದು ನಿಂತಿತ್ತು. ಆ ಹಿಟಾಚಿ ಕೆಳಭಾಗದಲ್ಲಿ ಮಗುವಿನ ಮೇಲೆ ನೀಚ ವ್ಯಕ್ತಿ ಅತ್ಯಾಚಾರವೆಸಗಿದ್ದಾನೆ. ಇದನ್ನೂ ಓದಿ: ಮಂಗಳೂರು ಮತಗಟ್ಟೆಯಲ್ಲಿ ಬಿಜೆಪಿ ಕಾರ್ಯಕರ್ತನ ಗೂಂಡಾಗಿರಿ
ದಾವಣಗೆರೆ: ಪಾನಿಪುರಿ (Panipuri) ತಿಂದು 19 ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆ ಸೇರಿರುವ ಘಟನೆ ದಾವಣಗೆರೆ (Davanagere) ಜಿಲ್ಲೆಯ ಹರಿಹರ (Harihara) ತಾಲೂಕಿನ ಮಲೆಬೆನ್ನೂರು ಗ್ರಾಮದಲ್ಲಿ ನಡೆದಿದೆ.
ಮಲೆಬೆನ್ನೂರಿನ ಜಾಮಿಯಾ ಮಸೀದಿ ಬಳಿ ಘಟನೆ ನಡೆದಿದ್ದು, ಉಪವಾಸ (Fasting) ಅಂತ್ಯ ಮಾಡಿದ ನಂತರ ಮಸೀದಿ (Mosque) ಮುಂಭಾಗ ಮಾರಾಟ ಮಾಡುತ್ತಿದ್ದ ಪಾನಿಪುರಿ ತಿಂದು 19 ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಪಾನಿಪುರಿ ತಿಂದು ಕೆಲವೇ ಹೊತ್ತಿನಲ್ಲಿ ವಾಂತಿಯಾಗಿ ಮಕ್ಕಳು ಅಸ್ವಸ್ಥರಾಗಿದ್ದಾರೆ. ಕೂಡಲೇ ಪೋಷಕರು ಮಕ್ಕಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ದೆಹಲಿ ಮದ್ಯ ನೀತಿ ಹಗರಣ – ತೆಲಂಗಾಣ ಮಾಜಿ ಸಿಎಂ ಕೆಸಿಆರ್ ಪುತ್ರಿ ಕವಿತಾ ಅರೆಸ್ಟ್
19 ಮಕ್ಕಳ ಪೈಕಿ 4 ಮಕ್ಕಳ ಆರೋಗ್ಯ ಚಿಂತಾಜನಕವಾಗಿದೆ. ಇವರನ್ನು ದಾವಣಗೆರೆಯ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ರವಾನಿಸಲಾಗಿದೆ. ಸ್ಥಳಕ್ಕೆ ಹರಿಹರ ತಹಶೀಲ್ದಾರ್ ಗುರುಬಸವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಭಾನುವಾರವೂ ತೆರೆಯಲಿದೆ ಉಪನೋಂದಣಿ ಕಚೇರಿ
ಕೋಲ್ಕತ್ತಾ: ಬೀದಿ ಬದಿ ಮಾರುವ ಪಾನಿಪುರಿ ತಿಂದು 100ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿರುವ ಘಟನೆ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಸುಗಂಧ ಗ್ರಾಮ ಪಂಚಾಯತ್‌ನ ಡೋಗಾಚಿಯಾ ಪ್ರದೇಶದಲ್ಲಿ ನಡೆದಿದೆ. ಅತಿಸಾರದಿಂದ ಅಸ್ವಸ್ಥಗೊಂಡಿರುವುದಾಗಿ ಶಂಕಿಸಲಾಗಿದೆ.
ಮಾಹಿತಿ ಪಡೆದ ಆರೋಗ್ಯ ಇಲಾಖೆಯ ವಿಶೇಷ ತಂಡ ಸ್ಥಳಕ್ಕೆ ಆಗಮಿಸಿ ರೋಗಿಗಳಿಗೆ ಔಷಧ ವಿತರಣೆ ಮಾಡಿದ್ದಾರೆ. ಗಂಭೀರ ಅನಾರೋಗ್ಯ ಪರಿಣಾಮ ಕಂಡುಬಂದಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸುವಂತೆ ತಂಡವು ಸೂಚಿಸಿದೆ.
ಅನಾರೋಗ್ಯಕ್ಕೆ ಒಳಗಾದವರಲ್ಲಿ ಡೊಗಾಚಿಯಾ, ಬಹಿರ್ ರಣಗಾಚಾ ಹಾಗೂ ಮಕಲ್ತಲಾ ನಿವಾಸಿಗಳು ಸೇರಿದ್ದಾರೆ ಎಂದು ವರದಿಯಾಗಿದೆ.
Live Tv
[brid partner=56869869 player=32851 video=960834 autoplay=true]
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ವಿರೋಧ ಪಕ್ಷಗಳ ನಾಯಕರುಗಳನ್ನು ತರಾಟೆಗೆ ತೆಗೆದುಕೊಳ್ಳುವುದರಿಂದ ಹಿಡಿದು, ಸ್ಫೋಟಕ ಹೇಳಿಕೆ ನೀಡುವವರೆಗೆ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಆದರೆ ಮಮತಾ ಇಂದು ವಿಶೇಷ ಕಾರಣಕ್ಕೆ ಸುದ್ದಿಯಾಗಿದ್ದಾರೆ.
ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಲ್ಲಿ 3 ದಿನಗಳ ಭೇಟಿಯಲ್ಲಿರುವ ಮಮತಾ ಬ್ಯಾನರ್ಜಿ, ರುಚಿಕರವಾದ ಫುಚ್ಕಾ(ಪಾನಿಪುರಿ)ಯನ್ನು ಜನರಿಗೆ ಉಣಬಡಿಸಿದ್ದಾರೆ. ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರವರೆಗೂ ಸ್ವತಃ ಬ್ಯಾನರ್ಜಿ ಪಾನಿಪುರಿಯನ್ನು ಬಡಿಸಿದ್ದಾರೆ. ಮಮತಾ ಕೈಯಾರೇ ಬಡಿಸಿದ ಪಾನಿಪುರಿಯನ್ನು ಸವಿಯಲು ಜನರು ಸ್ಥಳದಲ್ಲಿ ಮುಗಿಬಿದ್ದಿದ್ದಾರೆ. ಇದನ್ನೂ ಓದಿ: 24 ದಿನಗಳಲ್ಲಿ 9ನೇ ಕೇಸ್ – ಮಂಗಳೂರಿನಿಂದ ದುಬೈಗೆ ತೆರಳಿದ್ದ ಸ್ಪೈಸ್‌ಜೆಟ್ ವಿಮಾನದಲ್ಲಿ ತಾಂತ್ರಿಕ ದೋಷ
ಗೂರ್ಖಾಲ್ಯಾಂಡ್ ಪ್ರಾದೇಶಿಕ ಆಡಳಿತದ(ಜಿಟಿಎ) ಹೊಸದಾಗಿ ಚುನಾಯಿತರಾದ 45 ಸದಸ್ಯರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲು ಮಮತಾ ಬ್ಯಾನರ್ಜಿ 3 ದಿನಗಳ ಡಾರ್ಜಿಲಿಂಗ್ ಭೇಟಿಯಲ್ಲಿದ್ದಾರೆ. ಅವರ ಪ್ರವಾಸ ಸೋಮವಾರ ಪ್ರಾರಂಭವಾಗಿದ್ದು, ಗುರುವಾರ ಕೋಲ್ಕತ್ತಾಗೆ ಮರಳಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಟೋಲ್ ಸಿಬ್ಬಂದಿ ಜೊತೆ WWE ಖ್ಯಾತಿಯ ಗ್ರೇಟ್ ಖಲಿ ಗಲಾಟೆ – ವೀಡಿಯೋ ವೈರಲ್
ಮಮತಾ ಇಂದು ಡಾರ್ಜಿಲಿಂಗ್ ಚೌರಸ್ತಾದಲ್ಲಿ ನಡೆದ ಪ್ರಮಾಣವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
Live Tv
[brid partner=56869869 player=32851 video=960834 autoplay=true]
ದಿಸ್ಪುರ್: ಪಾನಿಪುರಿ, ಗೋಲ್‍ಗಪ್ಪಾ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ರಸ್ತೆ ಬದಿಯಲ್ಲಿ ಸಿಗುವ ಪಾನಿಪುರಿಯನ್ನಂತೂ ಯುವಕ- ಯುವತಿಯರು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಇದೀಗ ಇಂತಹ ಪಾನಿಪುರಿ, ಗೋಲ್‍ಗಪ್ಪಾ ಪ್ರಿಯರಿಗೆ ಶಾಕಿಂಗ್ ಸುದ್ದಿಯೊಂದು ವರದಿಯಾಗಿದೆ.
ವೀಡಿಯೋದಲ್ಲಿ ವ್ಯಕ್ತಿಯೊಬ್ಬ ಕೈ ಗಾಡಿಯಲ್ಲಿ ಪಾನಿಪುರಿ ಮಾರಾಟ ಮಾಡುತ್ತಿದ್ದಾನೆ. ಈ ವ್ಯಕ್ತಿ ಮಗ್ ಗೆ ಮೂತ್ರ ಮಾಡಿ ಅದನ್ನು ಪಾನಿಗೆ ಮಿಕ್ಸ್ ಮಾಡುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಸದ್ಯ 20 ಸೆಕೆಂಡ್ ವೀಡಿಯೋ ನೋಡಿದ ನೆಟ್ಟಿಗರು ವ್ಯಾಪಾರಿ ವಿರುದ್ಧ ಕಿಡಿಕಾರುತ್ತಿದ್ದಾರೆ. ಅಲ್ಲದೆ ಕೂಡಲೇ ಆತನನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ನಮ್ಮ ಪಕ್ಷದಲ್ಲಿ ಕಾರ್ಯಕರ್ತರು ಸರಿಯಿಲ್ಲ: ಹೆಚ್.ಡಿ. ಕುಮಾರಸ್ವಾಮಿ
ಒಟ್ಟಿನಲ್ಲಿ ಗೋಲ್‍ಗಪ್ಪಾ ನೀರಿಗೆ ವ್ಯಕ್ತಿ ಮೂತ್ರ ಬೆರೆಸುವುದು ಕ್ಲೀಯರ್ ಆಗಿ ಕಾಣುತ್ತಿದೆ. ಹೀಗಾಗಿ ನೆಟ್ಟಿಗರು ವ್ಯಾಪಾರಿಯ ನಡತೆಯನ್ನು ಖಂಡಿಸಿದ್ದಾರೆ. ಸದ್ಯ ಈ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು ವ್ಯಾಪಾರಿ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಅಲ್ಲದೆ ಆತನನ್ನು ಬಂಧಿಸಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: ತಾನು ಸೆಲೆಕ್ಟ್ ಮಾಡಿದ ಹಾಡು ಹಾಕೋವರೆಗೂ ಮದುವೆ ಹಾಲ್‍ಗೆ ತೆರಳಲು ನಿರಾಕರಿಸಿದ ವಧು!
ಬೆಂಗಳೂರು: ಚಪ್ಪರಿಸಿ ತಿನ್ನುವ ಗೋಲ್ಗಪ್ಪ, ಕಲರ್‌ಫುಲ್ ಆಗಿ ಕಾಣುವ ಮಸಾಲೆ ಪಾನಿಪೂರಿ, ನೋಡಿದ ತಕ್ಷಣ ಬಾಯಲ್ಲಿ ನೀರು ತರಿಸೋ ಸಮೋಸ ತಿನ್ನೋಕು ಮುಂಚೆ ಹುಷಾರಾಗಿರಿ. ನೀವು ಚಪ್ಪರಿಸಿ ತಿನ್ನುವ ಪಾನಿಪೂರಿ ಅಸಲಿಯತ್ತನ್ನ ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆ ಬಟಾಬಯಲು ಮಾಡಿದೆ.
ಬೇಸಿಗೆ ಶುರು ಆಯ್ತು ಬಾಯಿ ಸುಮ್ಮನಿರಲ್ಲ ಹಣ್ಣು, ಹಂಪಲು ತಿನ್ನಲು ಹೋದರೆ ಸ್ವಲ್ಪ ದುಬಾರಿ. ಅದಕ್ಕೆ ಸಂಜೆ ಆದ ಕೂಡಲೇ ಸ್ನಾಕ್ಸ್ ನೆನಪಿಗೆ ಬರತ್ತೆ. ಆಗ ತಿಂಡಿ ಪ್ರಿಯರು ಗೋಲ್ಗಪ್ಪ, ಪಾನಿಪುರಿ, ಸಮೋಸಾ ಅಂತ ಹುಡುಕಿಕೊಂಡು ಹೋಗುತ್ತಾರೆ. ಆದರೆ ಗೋಲ್ಗಪ್ಪ ಅದೇ ಮಡಿಕೆ ಪಾನಿ, ವಿಧವಿಧವಾಗಿ ಎಣ್ಣೆಯಲ್ಲಿ ಕರಿದ ಪೂರಿ ಜೊತೆಗೆ ನೋಡೋಕು ಸಖತ್ ಕಲರ್‌ಫುಲ್ ಆಗಿರುತ್ತೆ. ಆದರೆ ಅದೆಲ್ಲಿ ತಯಾರಾಗುತ್ತೆ? ಹೇಗೆ ತಯಾರಾಗುತ್ತೆ? ಯಾರು ತಯಾರು ಮಾಡ್ತಾರೆ? ಎನ್ನೋದನ್ನ ನೋಡಿದರೆ ಮತ್ತೆ ಬೇಡಪ್ಪ ಎನ್ನುತ್ತಿರ.
ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆ ಮಾಡಿ ಪಾನಿಪೂರಿಗೆ ಬಳಸುವ ಪೂರಿ ಎಲ್ಲಿ ತಯಾರು ಮಾಡುತ್ತಾರೆ? ಹೇಗೆ ಮಾಡುತ್ತಾರೆ ಅನ್ನೋದನ್ನ ಬಿಚ್ಚಿಟ್ಟಿದೆ. ಪಬ್ಲಿಕ್ ಟಿವಿ ತಂಡ ಪೂರಿ ತಯಾರು ಮಾಡುವ ವ್ಯಾಪಾರಿ ಬಳಿ ಹೋಗಿ ಇದನ್ನು ಎಲ್ಲಿ ತಯಾರಿಸುತ್ತೀರಾ? ಯಾವ ಎಣ್ಣೆ ಹಾಕುತ್ತೀರಾ? ಬಿಳಿ ಪೂರಿಗಳು ಬೇಕಿತ್ತು ಎಂದು ಗ್ರಾಹಕರ ಸೋಗಿನಲ್ಲಿ ಹೋಗಿ ವಿಚಾರಿಸಿದರು. ಈ ವೇಳೆ ವ್ಯಾಪಾರಿ ನಾವು ಇಲ್ಲಿಯೇ ಪೂರಿ ತಯಾರಿಸುತ್ತೇವೆ. ಒಳ್ಳೆ ಎಣ್ಣೆ ಹಾಕಿ ಪೂರಿ ತಯಾರಿಸಲಾಗುತ್ತೆ ಎಂದಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ನಾವು ತಿನ್ನುವ ಪೂರಿಯನ್ನು ಕರಿಯುವ ಎಣ್ಣೆ ಮತ್ತು ಎಣ್ಣೆ ತುಂಬಿಸೋ ಡ್ರಮ್‍ಗಳು, ಆ ಪೂರಿ ತುಂಬಿರೊ ಬ್ಯಾಗ್‍ಗಳನ್ನು ನೋಡಿದರೆ ಇನ್ನೊಂದು ಸಲ ತಿನ್ನಬೇಕು ಅನಿಸಲ್ಲ. ಆದರೆ ವ್ಯಾಪಾರಿ ಮಾತ್ರ ಇದು ಬ್ರಾಂಡೆಡ್ ಎಣ್ಣೆ ಎಂದು ವಾದಿಸುತ್ತಾನೆ. ಆ ಪೂರಿಯನ್ನ ಲಟ್ಟಿಸಿ ರೋಲ್ ಮಾಡೋ ಮಷಿನ್‍ಗೆ ಎಣ್ಣೆ ಸುರಿಯೋದನ್ನ ನೋಡಿಬಿಟ್ಟರೆ ಅಯ್ಯೋ ಶಿವನೆ ಇದನ್ನ ಇಷ್ಟು ದಿನ ತಿನ್ನುತ್ತಿದ್ದಿದ್ದು ಅನ್ನಿಸಿಬಿಡುತ್ತೆ.
ಅಯ್ಯೋ ಅದು ಬಿಡಿ ನಮಗೆ ಕೊಡ್ಬೇಕಾದ್ರೆ ಸ್ವಚ್ಛ ಜಾಗದಲ್ಲಿ, ಸ್ಚಚ್ಛ ಕೈ ಇದ್ದರೆ ಸಾಕು ಅನ್ನೋರು ಮಡಿಕೆ ಪಾನಿ ಮಾರಾಟ ಮಾಡೋ ಜಾಗ ನೋಡಿದರೆ ಸುಸ್ತಾಗುತ್ತೀರಿ.
ಬೆಂಗಳೂರಿನ ಹೃದಯಭಾಗ ಅಂತ ಕರೆಸಿಕೊಳ್ಳೊ ಮೆಜೆಸ್ಟಿಕ್‍ನಲ್ಲಿ ಈ ತರದ ಸ್ನಾಕ್ಸ್ ಮಾರುವವರೂ ಕಡಿಮೆ ಇಲ್ಲ, ತಿನ್ನೋರಿಗೂ ಬರ ಇಲ್ಲ. ಏನ್ರೀ ಇಷ್ಟೊಂದು ಕೊಳಕು ಅಂತ ಪ್ರಶ್ನಿಸಿದರೆ ವ್ಯಾಪಾರಿ ಸುಳ್ಳಿನ ಕಂತೆಯನ್ನೆ ಕಟ್ಟುತ್ತಾರೆ. ತಿಂಡಿ ಪ್ಲೇಟ್‍ಗಳನ್ನು ತೊಳೆಯಲು ಬೇರೆ ಕಡೆ ವ್ಯವಸ್ಥೆ ಇದೆ. ನಾವು ಗ್ರಾಹಕರಿಗೆ ಕುಡಿಯಲು ಬಿಸ್ಲೆರಿ ನೀರು ಕೊಡ್ತೀವಿ. ಕುಡಿಯೋ ನೀರಲ್ಲಿ ಪ್ಲೇಟ್ ತೊಳೆಯೊಲ್ಲ. ಹಾಗೆ ಮಾಡಿದರೆ ಬರುವವರು ಬರಲ್ಲ. ನಮ್ಮ ಅಂಗಡಿ ಇದೆ ಅಲ್ಲೇ ನಾವು ಪ್ಲೇಟ್ ತೊಳೆಯುತ್ತೇವೆ, ಒಮ್ಮೊಮ್ಮೆ ಪ್ಲೇಟ್ ತೊಳಿಯೋಕೆ ಮಿನರಲ್‍ವಾಟರ್ ಬಳಸ್ತೀವಿ ಎಂದು ಕಥೆ ಬಿಡುತ್ತಾರೆ.
ಇತ್ತ ಮಲ್ಲೇಶ್ವರಂ ಹೈಟೆಕ್ ಏರಿಯಾ, ಆದರೆ ಅಲ್ಲಿಯೂ ಅಷ್ಟೇ ಕೈಗೆ ಗ್ಲೌಸ್ ಹಾಕಲ್ಲ, ಅಂಗಡಿ ಹಾಕಿರುವ ಸ್ಥಳ ಸ್ವಚ್ಛ ಇರಲ್ಲ. ಪಾನಿಗೆ ಕೈ ಹಾಕಿ ಹಾಕಿ ಕೊಳೆಯಾಗಿಯೇ ಕಾಯಿಲೆ ತರೋ ಪೂರಿ ಕೊಡ್ತಾರೆ. ಕಸದ ರಾಶಿ ಪಕ್ಕನೇ ಪಾನಿಪೂರಿಯನ್ನ ಗ್ರಾಹಕರಿ ಸವಿಯಬೇಕಿದೆ.
ಪಾನಿ ಮೊದಲೇ ಬಿಸಿ ಇರಲ್ಲ. ಹಾಗಾಗಿ ರೋಗಾಣುಗಳು ಬೇಗ ಸೇರಿಕೊಂಡು ಬಿಡುತ್ತವೆ. ಅಲ್ಲದೇ ಗೋಲ್ಗಪ್ಪ ತಿನ್ನುವಾಗ ಗಮನಿಸಿ, ಸರಿಯಾಗಿ ಪೂರಿಗಳನ್ನ ಮುಚ್ಚಿರಲ್ಲ, ಪಾನಿ ಡಬ್ಬ ಓಪನ್ ಆಗಿ ಧೂಳು ಬಂದು ಸೇರಿ ಬಿಟ್ಟಿರುತ್ತದೆ. ಸ್ವಚ್ಛತೆ ಇಲ್ಲದಿದ್ದರೂ ಇದನ್ನ ತಿನ್ನೊರ ಸಂಖ್ಯೆಯನ್ನು ಕಡಿಮೆ ಆಗಿಲ್ಲ. ಇನ್ನೂ ನಾವೇ ತಿಂದಿರೋ ಸ್ನಾಕ್ಸ್ ಪ್ಲೇಟನ್ನು ಎಲ್ಲಿ ತೊಳೆಯುತ್ತಾರೆ ಅನ್ನೋದನ್ನ ನೋಡಿದರೆ ಬೆಚ್ಚಿ ಬೀಳ್ತೀರಿ. ಒಂದು ಬಕೆಟ್‍ನಲ್ಲಿ ನೀರಿಟ್ಟು ಅದರಲ್ಲೇ ಮತ್ತೆ ಮತ್ತೆ ಪ್ಲೇಟ್‍ಗಳನ್ನು ತೊಳೆಯುತ್ತಾರೆ.
ನೀರು, ಸ್ವಚ್ಛತೆ ಕೊರತೆಯೇ ಮನುಷ್ಯರ ಕಾಯಿಲೆಗಳಿಗೆ ಕಾರಣವಾಗಿದೆ. ಈ ರೀತಿ ಸ್ವಚ್ಛವಿಲ್ಲದ ಪೂರಿ ರುಚಿ ನಿಮಗೆ ಹಲವು ಕಾಯಿಲೆಗಳನ್ನ ತರುತ್ತೆ ಎಂದು ವೈದ್ಯರು ಹೇಳಿದ್ದಾರೆ. ಜಾಂಡೀಸ್, ಟೈಫಾಯ್ಡ್, ಕಾಲರಾ, ಹೊಟ್ಟೆ ನೋವು, ಗ್ಯಾಸ್‍ಸ್ಟ್ರಿಕ್ ಸಮಸ್ಯೆ, ಅಲರ್ಜಿ, ಸೋಂಕುಗಳು ಬೇಗ ಹರಡುತ್ತೆ. ವಾಂತಿ, ಬೇಧಿ, ದೊಡ್ಡ – ಸಣ್ಣ ಕರುಳು ತೊಂದರೆ ಉಂಟಾಗುತ್ತೆ.
ಗದಗ: ಗೋಬಿಮಂಚೂರಿ ಹಾಗೂ ಪಾನಿಪುರಿ ಐಟಮ್ಸ್, ಈ ಹೆಸರು ಕೇಳಿದರೆ ಎಲ್ಲರಿಗೂ ತಿನ್ನಬೇಕು ಅನ್ನಿಸುತ್ತದೆ. ಆದರೆ ಜಂಕ್ ಫುಡ್ ಹೇಗೆ, ಎಲ್ಲಿ ತಯಾರಾಗುತ್ತೆ ಅನ್ನೋ ಹಿಂದಿನ ಅಸಲಿ ಸತ್ಯ ಬಯಲಾಗಿದೆ.
ಇತ್ತೀಚೆಗೆ ಎಲ್ಲೆಂದರಲ್ಲಿ ಚೈನಿಸ್ ಫುಡ್‍ಗಳದ್ದೇ ಹಾವಳಿವಾಗಿದ್ದು, ಅದರಲ್ಲೂ ಗೋಬಿಮಂಚುರಿ, ಪಾನಿಪುರಿ ಐಟಮ್ಸ್ ಅಂದರೆ ಸಾಕು ಜನ ಮುಗಿಬೀಳುತ್ತಾರೆ. ಆದರೆ ಮುದ್ರಣಾ ಕಾಶಿ ಗದಗನಲ್ಲಿ ಲಾಭದಾಸೆಗಾಗಿ ಜಂಕ್‍ಫುಡ್ ಮಾಡುವ ವ್ಯಾಪರಿಗಳು ಅವುಗಳನ್ನ ಅನೇಕ ಕೊಳೆತ ವಸ್ತುಗಳಿಂದ ತಯಾರಿಸುತ್ತಾರೆ. ಬೆಟಗೇರಿಯ ಬಸ್ ನಿಲ್ದಾಣದ ಹಿಂಭಾಗ, ತೆಂಗಿನಕಾಯಿ ಬಜಾರ, ತೋಂಟದಾರ್ಯ ಮಠದ ಮುಂದಿನ ರಸ್ತೆ, ಹಾತಲಗೇರಿ ನಾಕಾ, ಮುಳಗುಂದ ನಾಕಾ ಸೇರಿದಂತೆ ಅನೇಕ ಕಡೆಗಳಲ್ಲಿ ಜಂಕ್ ಫುಡ್ ಹೇಗೆಲ್ಲಾ ತಯಾರುತ್ತವೆ ಎಂಬುದನ್ನು ಪಬ್ಲಿಕ್ ಟಿವಿತಂಡ ರಹಸ್ಯ ಕಾರ್ಯಾಚರಣೆ ಮೂಲಕ ಬಯಲು ಮಾಡಿದೆ.
ಜಂಕ್‍ಫುಡ್‍ಗೆ ಕೆಟ್ಟಿರುವ ಹೂ ಕೋಸು, ಕ್ಯಾಬೇಜ್, ಸ್ಟಾಕ್ ಮೈದಾಹಿಟ್ಟು, ಟೆಸ್ಟಿಂಗ್ ಪೌಡರ್, ಐಸ್ ಹೀಗೆ ಅನೇಕ ವಸ್ತುಗಳನ್ನ ಬಳಸಿ ತಯಾರಿಸಲಾಗುತ್ತದೆ. ಇದನ್ನು ಸೇವಿಸುವುದರಿಂದ ಮನುಷ್ಯ ಮಾರಕ ಕಾಯಿಲೆ ಒಳಗಾಗುತ್ತಾನೆ. ಕೊಬ್ಬಿನಾಂಶ, ಹೆಪಟೈಟಿಸ್-ಬಿ, ಕಾಮಾಲೆ, ಕ್ಯಾನ್ಸರ್, ಟೈಫಾಯಿಡ್ ಸೇರಿದಂತೆ ಗ್ಯಾಸ್ಟ್ರಿಕ್ ನಂತಹ ಮಾರಕ ರೋಗಗಳು ನಿಮಗೆ ಗೊತ್ತಿಲ್ಲದೇ ನಿಮ್ಮನ್ನ ಆವರಿಸಿಕೊಳ್ಳುತ್ತವೆ ಎಂಬುದು ವೈದ್ಯರ ಸಲಹೆಯಾಗಿದೆ.
ಗಬ್ಬೆದ್ದು ನಾರುವ ಜಾಗದಲ್ಲಿ, ಶೌಚಾಲಯ ಪಕ್ಕದಲ್ಲಿ ಇದನ್ನೆಲ್ಲಾ ತಯಾರಿಸುತ್ತಾರೆ. ಜೊತೆಗೆ ಪೇಂಟಿಂಗ್ ಪ್ಲಾಸ್ಟಿಕ್ ಡಬ್ಬಗಳಲ್ಲಿ ಸಾಸ್ ತಯಾರಿಸುತ್ತಾರೆ. ಕೆಟ್ಟು, ಹುಳುಹತ್ತಿದ ಕ್ಯಾಬೇಜ್ ಹಾಗೂ ಹೂ ಕೋಸು ಬಳಸಿ ಗೋಬಿ ತಯಾರಿಸುತ್ತಾರೆ. ಹೋಟೆಲ್‍ಗಳಲ್ಲಿ ಪುರಿ, ಮಿರ್ಚಿ-ಬಜ್ಜಿ, ಕಾಂದಾ ಬಜ್ಜಿ, ಸೇವ್ ತಯಾರಿಸಿ ಉಳಿದ ವೆಸ್ಟ್ ಆಗಿರುವ ಎಣ್ಣೆ ತಂದು ಪಾನಿಪುರಿ ತೆಗೆಯುತ್ತಾರೆ. ಅಷ್ಟೇ ಅಲ್ಲದೇ ಬೇರೆ ಬೇರೆ ಎಣ್ಣೆ, ಬಹಳ ದಿನದ ಸ್ಟಾಕ್ ಮೈದಾಹಿಟ್ಟು, ಟೆಸ್ಟಿಂಗ್ ಪೌಡರ್, ಹೀಗೆ ಅನುಪಯುಕ್ತ ವಸ್ತುಗಳು, ಕಲುಷಿತ ನೀರಲ್ಲಿ ಕೆಟ್ಟುಹೋದ ಐಸ್ ಹಾಕುತ್ತಾರೆ ಎಂದು ತಿಳಿದು ಬಂದಿದೆ.
ಇವತ್ತು ನಾಯಿ ಕೊಡೆಗಳ ರೀತಿ ಪಾನಿಪೂರಿ ಸ್ಟಾಲ್‍ಗಳು, ಗೋಬಿ ಮಂಚೂರಿ ಸ್ಟಾಲ್‍ಗಳು ತಲೆ ಎತ್ತಿವೆ. ದಾರಿಲೀ ಹೋಗುತ್ತಿದ್ದರೆ ಘಮ ಘಮ ಅನ್ನೋ ವಾಸನೆ ಮೂಗಿಗೆ ರಪ್ ಅಂತಾ ಹೊಡೆಯುತ್ತದೆ. ಇವುಗಳ ನಡುವೆ ಗೋಲ್‍ಗಪ್ಪಾ ಮಾರೋರ ಹಾವಳಿ ಬೇರೆ ಹೆಚ್ಚಾಗಿದೆ ಎಂದು ಪಾನಿಪುರಿ ಪ್ರಿಯರಾದ ಕವಿತಾ ಹೇಳಿದ್ದಾರೆ.
ಇಷ್ಟೆಲ್ಲಾ ಅಕ್ರಮ ನಡೆಯುತ್ತಿದ್ದರೂ ಆಹಾರ ಮತ್ತು ನಾಗರಿಕ ಅಧಿಕಾರಿಗಳು, ಆರೋಗ್ಯ ಅಧಿಕಾರಿಗಳು ಸುಮ್ಮನ್ನಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಅಧಿಕಾರಿಗಳು ಈ ವಿಚಾರದಲ್ಲಿ ಎಚ್ಚೆತ್ತುಕೊಳ್ಳದೇ ಹೋದರೆ ಆರೋಗ್ಯ ಇಲಾಖೆ ಹಾಗೂ ಆಹಾರ ಇಲಾಖೆ ಇದ್ದೂ ಇಲ್ಲದಂತಾಗುತ್ತವೆ. ಹೀಗಾಗಿ ಈ ಬಗ್ಗೆ ಗದಗನ ಜಿಲ್ಲಾ ಮಟ್ಟದ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ. ಕಳಪೆಮಟ್ಟದ ಪದಾರ್ಥಗಳನ್ನ ಬಳಸಿ ಸಿದ್ಧಗೊಳ್ಳುವ ಆಹಾರಕ್ಕೆ ಕಡಿವಾಣ ಹಾಕಬೇಕಿದೆ. ಈ ಮೂಲಕ ಅಮಾಯಕ ಜನರ ಆರೋಗ್ಯವನ್ನ ಉಳಿಸಬೇಕು ಎಂಬುದು ಜನರ ಉತ್ತಾಯವಾಗಿದೆ.