Tag: Pani Puri

  • ನೇಪಾಳದಲ್ಲಿ ಪಾನಿಪುರಿ ಮಾರಾಟ ನಿಷೇಧ

    ನೇಪಾಳದಲ್ಲಿ ಪಾನಿಪುರಿ ಮಾರಾಟ ನಿಷೇಧ

    ಕಠ್ಮಂಡು: ಲಲಿತ್‍ಪುರ ಮೆಟ್ರೋಪಾಲಿಟನ್ ಸಿಟಿಯಲ್ಲಿ ಕಾಲರಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ ನೇಪಾಳದ ಕಠ್ಮಂಡುವಿನಲ್ಲಿ ಪಾನಿಪುರಿ ಮಾರಾಟವನ್ನು ನಿಷೇಧಿಸಲಾಗಿದೆ.

    ಈ ಕುರಿತು ಅಲ್ಲಿನ ಎಲ್‍ಎಂಸಿ ಅಧಿಕಾರಿಗಳು ಮಾಹಿತಿ ನೀಡಿದ್ದು, ಪಾನಿಪುರಿಯಲ್ಲಿ ಬಳಸುವ ನೀರಿನಲ್ಲಿ ಕಾಲರಾ ಬ್ಯಾಕ್ಟೀರಿಯಾ ಕಂಡುಬಂದಿದೆ. ಇದರಿಂದಾಗಿ ಪಾನಿಪುರಿ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.

    ನೇಪಾಳದ ಆರೋಗ್ಯ ಮತ್ತು ಜನಸಂಖ್ಯೆ ಸಚಿವಾಲಯದ ಪ್ರಕಾರ, ದೇಶದಲ್ಲಿ ಒಟ್ಟು 17 ಕಾಲರಾ ರೋಗಿಗಳಿದ್ದಾರೆ. ಇದೀಗ ಕಠ್ಮಂಡುವಿನಲ್ಲಿ ಇನ್ನೂ 7 ಜನರಿಗೆ ಕಾಲರಾ ದೃಢವಾಗಿದೆ. ಈ 7 ಪ್ರಕರಣಗಳಲ್ಲಿ 5 ಪ್ರಕರಣಗಳು ಕಠ್ಮಂಡು ಮಹಾನಗರದಲ್ಲಿ ಮತ್ತು ಚಂದ್ರಗಿರಿ ಪುರಸಭೆ ಮತ್ತು ಬುಧಾನಿಲಕಂಠ ಪುರಸಭೆಯಲ್ಲಿ ತಲಾ ಒಂದು ಪ್ರಕರಣಗಳು ವರದಿ ಆಗಿದೆ. ಇದನ್ನೂ ಓದಿ:  ಕಾಶ್ಮೀರದಲ್ಲಿ ಸರಣಿ ಸ್ಫೋಟ- ಇಬ್ಬರು ಲಷ್ಕರ್ ಉಗ್ರರು ಅರೆಸ್ಟ್

    ಈ ಹಿನ್ನೆಲೆಯಲ್ಲಿ ಕಾಲರಾ ಹರಡುವುದನ್ನು ನಿಯಂತ್ರಿಸಲು ಪಾನಿಪುರಿ ಮಾರಾಟವನ್ನು ನಿಲ್ಲಿಸಲು ಮಹಾನಗರ ಪಾಲಿಕೆ ಸಿದ್ಧತೆಯನ್ನು ನಡೆಸಿದೆ. ಸೋಂಕಿತ ಜನರು ಪ್ರಸ್ತುತ ಟೇಕುನಲ್ಲಿರುವ ಸುಕ್ರರಾಜ್‍ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಪೈಥಾನ್ ಬಳಸಿ ಗುಂಡಿ ಮುಚ್ಚದ ಬಿಬಿಎಂಪಿಗೆ ಹೈಕೋರ್ಟ್ ಫುಲ್ ಕ್ಲಾಸ್

    Live Tv

  • ಪಾನಿಪುರಿ ತಿಂದು 97 ಮಕ್ಕಳು ಅಸ್ವಸ್ಥ

    ಪಾನಿಪುರಿ ತಿಂದು 97 ಮಕ್ಕಳು ಅಸ್ವಸ್ಥ

    ಭೂಪಾಲ್: ಜಾತ್ರೆಯೊಂದರಲ್ಲಿ ಪಾನಿಪುರಿ ತಿಂದ 97 ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ಮಧ್ಯಪ್ರದೇಶದ ಮಂಡ್ಲಾ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲಾ ಕೇಂದ್ರದಿಂದ 38 ಕಿ.ಮೀ ದೂರದಲ್ಲಿರುವ ಬುಡಕಟ್ಟು ಜನಾಂಗದ ಪ್ರಾಬಲ್ಯವಿರುವ ಸಿಂಗರಾಪುರ ಪ್ರದೇಶದಲ್ಲಿ ಆಯೋಜಿಸಿದ್ದ ಜಾತ್ರೆಯಲ್ಲಿ ಈ ಘಟನೆ ನಡೆದಿದೆ. ಅಸ್ವಸ್ಥಗೊಂಡವರೆಲ್ಲರೂ ಒಂದೇ ಅಂಗಡಿಯಲ್ಲಿ ಪಾನಿಪುರಿಯನ್ನು ತಿಂದಿದ್ದಾರೆ. ಅವರೆಲ್ಲರೂ ಸಮೀಪದ ವಿವಿಧ ಗ್ರಾಮಗಳಿಂದ ಖರೀದಿಗೆಂದು ಆಗಮಿಸಿದ್ದರು.

    POLICE JEEP

    ಜಿಲ್ಲಾ ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ.ಕೆ.ಆರ್.ಶಾಕ್ಯಾ ಮಾತನಾಡಿ, ಪಾನಿಪುರಿ ತಿಂದ ಮಕ್ಕಳಿಗೆಲ್ಲರಿಗೂ ವಾಂತಿ, ಹೊಟ್ಟೆನೋವು ಕಾಣಿಸಿಕೊಂಡಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಸ್- ಟ್ರಕ್ ಮುಖಾಮುಖಿ ಡಿಕ್ಕಿ- ಕರ್ನಾಟಕದಿಂದ ಅಯೋಧ್ಯೆಗೆ ತೆರಳುತ್ತಿದ್ದ 7 ಜನರ ದುರ್ಮರಣ

    ಅಸ್ವಸ್ತಗೊಂಡ 97 ಮಕ್ಕಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಘಟನೆಗೆ ಸಂಬಂಧಿಸಿ ಪಾನಿಪುರಿ ಮಾರಾಟಗಾರನನ್ನು ಬಂಧಿಸಲಾಗಿದೆ ಮತ್ತು ತಿಂಡಿಯ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಇದನ್ನೂ ಓದಿ: ಪ್ರತಿದಿನ ಸಾಯೋದಕ್ಕಿಂತ ಒಂದೇ ದಿನ ಸಾಯೋದು ಒಳಿತು – ಮೂವರು ಸಹೋದರಿಯರು ಮಕ್ಕಳೊಂದಿಗೆ ಆತ್ಮಹತ್ಯೆ

  • ಕೋರ್ಟ್ ಕಲಾಪವಿಲ್ಲ- ಬದುಕು ನಿರ್ವಹಣೆಗೆ ಪಾನಿಪುರಿ ಮಾರಲು ನಿಂತ ಹೈ ಕೋರ್ಟ್ ವಕೀಲ

    ಕೋರ್ಟ್ ಕಲಾಪವಿಲ್ಲ- ಬದುಕು ನಿರ್ವಹಣೆಗೆ ಪಾನಿಪುರಿ ಮಾರಲು ನಿಂತ ಹೈ ಕೋರ್ಟ್ ವಕೀಲ

    – ಕೊರೊನಾ ನಡುವೆ ಸ್ವಾವಲಂಬಿ ಬದುಕು ಕಟ್ಟಿಕೊಳ್ತಿರೋ ವಕೀಲ

    ಮಂಡ್ಯ: ಕೊರೊನಾ ಮಹಮಾರಿಗೆ ಇಡೀ ದೇಶವೇ ನಲುಗಿದೆ. ಬಡವ, ಶ್ರೀಮಂತ ಎನ್ನದೆ ಅದೆಷ್ಟೋ ಜನ ಲಾಕ್‍ಡೌನ್‍ನಿಂದಾಗಿ ಕೆಲಸ ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗೆ ಕೋರ್ಟ್ ಕಲಾಪ ನಡೆಯದ ಕಾರಣ ಸಂಕಷ್ಟಕ್ಕೆ ಸಿಲುಕಿರುವ ಮಂಡ್ಯದ ವಕೀಲರೊಬ್ಬರು ಪಾನಿಪುರಿ ವ್ಯಾಪಾರ ಶುರುಮಾಡಿದ್ದಾರೆ.

    ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ವಳಗೆರೆಹಳ್ಳಿ ಗ್ರಾಮದವರಾಗಿರುವ 30ವರ್ಷದ ಪ್ರತಾಪ್, ವೃತ್ತಿಯಲ್ಲಿ ಹೈಕೋರ್ಟ್ ವಕೀಲರು. ಕಳೆದ 6 ವರ್ಷಗಳಿಂದ ಹೈಕೋರ್ಟ್‍ನ ಹಿರಿಯ ವಕೀಲ ಉಮಾಕಾಂತ್ ಅವರ ಬಳಿ ಕಿರಿಯ ವಕೀಲರಾಗಿ ಕೆಲಸ ಮಾಡುತ್ತಿದ್ದರು. ಜೊತೆಗೆ ಸಿಟಿ ಸಿವಿಲ್ ಕೋರ್ಟ್‍ನಲ್ಲೂ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಕೊರೊನಾ ತಡೆಯಲು ಲಾಕ್‍ಡೌನ್ ಮಾಡಿದ್ದರಿಂದ ಕೋರ್ಟ್ ಕಾರ್ಯಕಲಾಪಗಳು ನಿಂತಿವೆ. ಹೀಗಾಗಿ ಪ್ರತಾಪ್ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು.

    ಲಾಕ್‍ಡೌನ್ ವೇಳೆ ಬೆಂಗಳೂರಿನಲ್ಲಿ ಜೀವನ ನಿರ್ವಹಣೆ ಕಷ್ಟವಾಗಿದ್ದರಿಂದ ಕಳೆದ 2-3 ತಿಂಗಳ ಹಿಂದೆ ಎಂಜಿನಿಯರಿಂಗ್ ಓದಿರುವ ಪತ್ನಿ ಹಾಗೂ ಒಂದುವರೆ ತಿಂಗಳ ಮಗುವಿನೊಂದಿಗೆ ಬೆಂಗಳೂರು ಬಿಟ್ಟು ಹುಟ್ಟೂರು ವಳಗೆರೆಹಳ್ಳಿಗೆ ವಾಪಾಸ್ಸಾಗಿದ್ದಾರೆ. ಈ ವೇಳೆ ಜೀವನ ಸಾಗಿಸಲು ಹೊಸದೊಂದು ಬ್ಯುಸಿನೆಸ್ ಶುರುಮಾಡುವ ಆಲೋಚನೆಯೂ ಮಾಡಿದ್ದಾರೆ. ಆಗ ಪ್ರತಾಪ್‍ಗೆ ಹೊಳೆದಿದ್ದು ಪಾನಿಪುರಿ ವ್ಯಾಪಾರ. ವೃತ್ತಿಯಲ್ಲಿ ವಕೀಲರಾದರೂ ಯಾವುದೇ ಮುಜುಗರಕ್ಕೊಳಗಾಗದೆ ತನ್ನೂರಿನ ಸಣ್ಣ ಅಂಗಡಿ ಮನೆಯೊಂದರಲ್ಲಿ ಚಾಟ್ ಸೆಂಟರ್ ಆರಂಭಿಸಿರುವ ಪ್ರತಾಪ್, ಪ್ರತಿನಿತ್ಯ ಗೋಬಿ, ಪಾನಿಪುರಿ, ಆಮ್ಲೇಟ್ ಸೇರಿದಂತೆ ರುಚಿಕರ ಚಾಟ್ಸ್ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.

    ಇದರಿಂದ ಬಂದ ಆದಾಯದಲ್ಲಿ ತಮ್ಮ ಕುಟುಂಬ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ. ವಕೀಲರಾಗಿದ್ದ ನಿಮಗೆ ಇದು ಹೇಗೆ ಸಾಧ್ಯವಾಯ್ತು ಎಂದು ಪ್ರಶ್ನಿಸಿದರೆ, ಲಾಕ್‍ಡೌನ್‍ನಿಂದ ಧೃತಿಗೆಡದೆ ಸ್ವಾಭಿಮಾನದ ಬದುಕು ನಡೆಸುತ್ತಿದ್ದೇನೆ ಎನ್ನುತ್ತಾರೆ ಪ್ರತಾಪ್.

    ಪ್ರತಾಪ್ ತಯಾರಿಸಿದ ರುಚಿಕರ ಚಾಟ್ಸ್ ಸವಿಯಲು ಬೇರೆ ಗ್ರಾಮಗಳಿಂದ ಸಹ ಗ್ರಾಹಕರು ಆಗಮಿಸುತ್ತಿದ್ದು, ಪ್ರತಾಪ್ ಕೆಲಸಕ್ಕೆ ವಳಗೆರೆಹಳ್ಳಿ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂತಹ ಕಷ್ಟದ ಕಾಲದಲ್ಲಿ ವಕೀಲ ಎಂಬ ಗರ್ವ ಪಡದೆ ಪಾನಿಪುರಿ ವ್ಯಾಪಾರ ಮಾಡುತ್ತಿರುವ ಪ್ರತಾಪ್, ಯುವಜನತೆಗೆ ಮಾದರಿ ಎಂದಿದ್ದಾರೆ.